ಲೇಖಕ: admin

ಮಡಿಕೇರಿ ಜು.1 : ಭೀಕರ ರಸ್ತೆ ಅಪಘಾತದಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ ಬಳಿಯ ಹಿರಿಕರ ಗ್ರಾಮದ ದಂಪತಿ ಸಾವನ್ನಪ್ಪಿರುವ ಘಟನೆ ಬಿಳಿಕೆರೆ ಬಳಿಯ ರಂಗನಕೊಪ್ಪಲು ಹೆದ್ದಾರಿಯಲ್ಲಿ ನಡೆದಿದೆ. ಕೆಎಸ್‍ಆರ್‍ಟಿಸಿ ಬಸ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿ ಮೈಸೂರು ಕಡೆಗೆ ಕಾರಿನಲ್ಲಿ ಸಂಚರಿಸುತ್ತಿದ್ದ ನಿವೃತ್ತ ಪ್ರಾಂಶುಪಾಲ ಹಿರಿಕರ ಗ್ರಾಮದ ನಿವಾಸಿ ಹೆಚ್.ಬಿ.ಬೆಳ್ಳಿಯಪ್ಪ (66)ಸ್ಥಳದಲ್ಲೇ ಮೃತಪಟ್ಟರು. ಬೆಳ್ಳಿಯಪ್ಪ ಅವರ ಪತ್ನಿ ವೀಣಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭ ಸಾವನ್ನಪ್ಪಿದ್ದಾರೆ. ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಡಿಕೇರಿ ಜು.1 : ಕ್ರೈಸ್ತ ಸಮುದಾಯದವರು ಕಾಂಗ್ರೆಸ್ ಪಕ್ಷದ ಪ್ರಬಲ ಬೆಂಬಲಿಗರಾಗಿದ್ದು, ಈ ಬಾರಿ ಪಕ್ಷದಲ್ಲಿ ಕ್ರೈಸ್ತ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕೆಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕ್ರಿಶ್ಚಿಯನ್ ಘಟಕ ಒತ್ತಾಯಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸದಸ್ಯ ವಿ.ಎ.ಲಾರೆನ್ಸ್ ಜಿಲ್ಲೆಯಲ್ಲಿ ಕ್ರೈಸ್ತರಿಗೆ ಕಾಂಗ್ರೆಸ್ ಪಕ್ಷದಲ್ಲಿ ಸ್ಥಾನಮಾನದ ಕೊರತೆ ಇದೆ ಎಂದರು. ಕ್ರೈಸ್ತ ಧರ್ಮೀಯರ ಶೇ.98 ರಷ್ಟು ಮತಗಳು ಕಾಂಗ್ರೆಸ್ ಪಕ್ಷಕ್ಕೆ ಚಲಾವಣೆಯಾಗುತ್ತಿದೆ. ಆದರೆ ಪಕ್ಷದಲ್ಲಿ ಸೂಕ್ತ ಪ್ರಾತಿನಿಧ್ಯ ಮಾತ್ರ ದೊರೆಯುತ್ತಿಲ್ಲ. ಈ ಕೊರತೆಯನ್ನು ನೀಗಿಸಲು ಪಕ್ಷದ ರಾಜ್ಯಾಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಶಾಸಕರುಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಸ್ವಾತಂತ್ರ್ಯ ಬಂದ ನಂತರ ಶಿಕ್ಷಣ, ಸಮಾಜ ಸೇವೆ, ವೈದ್ಯಕೀಯ, ಮಾಧ್ಯಮ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಕ್ರೈಸ್ತರು ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ಲದೆ ಕಾಂಗ್ರೆಸ್ ಪಕ್ಷದ ಬಲವರ್ಧನೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಕ್ರೈಸ್ತ ಬಾಂಧವರ ಎಲ್ಲಾ ಕೊಡುಗೆಗಳನ್ನು…

Read More

ಮಡಿಕೇರಿ ಜು.1 : ಕೊಡಗಿನಲ್ಲಿ ಶೇ.33 ರಷ್ಟು ಇರಬೇಕಾಗಿದ್ದ ಅರಣ್ಯ ವ್ಯಾಪ್ತಿಯು ಈಗ ಶೇ.21 ರಷ್ಟು ನಷ್ಟವಾಗಿರುವ ಅರಣ್ಯವನ್ನು ಪುನರ್ ಭರಿಸುವುದು ನಮ್ಮ ಹೊಣೆಯಾಗಿರುತ್ತದೆ. ಯುವಕರು, ಸಾರ್ವಜನಿಕರು ಗಿಡ ನೆಟ್ಟು, ಆ ಗಿಡಕ್ಕೆ ಯಾವುದೇ ಹಾನಿಯಾಗದಂತೆ ರಕ್ಷಿಸಬೇಕು ಎಂದು ಕೊಡಗು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಬಿ ಎನ್.ಎನ್.ಮೂರ್ತಿ ಅಭಿಪ್ರಾಯಪಟ್ಟರು. ಕೊಡಗು ಜಿಲ್ಲಾ ಅರಣ್ಯ ಇಲಾಖೆ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಎನ್‍ಸಿಸಿ ಸಂಯುಕ್ತ ಆಶ್ರಯದಲ್ಲಿ “ನನ್ನ ಗಿಡ ನನ್ನ ಹೆಮ್ಮೆ ” ಎಂಬ ಘೋಷ ವಾಕ್ಯದ ಮೂಲಕ ಕಾಲೇಜಿನ ಮೈದಾನದಲ್ಲಿ ಅರಣ್ಯ ಮಹೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದ ಮೊದಲಿಗೆ ಅತಿಥಿ ಗಣ್ಯರು ಹಾಗೂ ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಮಳೆಯ ನಡುವೆಯೂ ವಿದ್ಯಾರ್ಥಿಗಳು ತಮ್ಮ ಹೆಸರಿನಲ್ಲಿ ಒಂದೊಂದು ಗಿಡ ನೆಡುವ ಮೂಲಕ ಸಂಭ್ರಮಿಸಿದರು. ತಾವು ಇನ್ನೆಂದೂ ಮರಗಿಡಗಳನ್ನು ಹಾನಿಗೊಳಿಸುವುದಿಲ್ಲವೆಂದು ಪ್ರತಿಜ್ಞಾ ವಿಧಿಯಂತೆ ಮುನ್ನೆಡೆಯೂದಾಗಿಯೂ ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆಕಾಶ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುಂಡೇಗೌಡ, ಪದ್ಮಶ್ರೀ ಪುರಸ್ಕೃತರಾದ…

Read More

ಮಡಿಕೇರಿ ಜು.1 : ನಾಪೋಕ್ಲು ಪೊಲೀಸ್ ಠಾಣೆ ಸರಹದ್ದಿನಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡುತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಖಚಿತ ಮಾಹಿತಿಯ ಹಿನ್ನೆಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ನಿವಾಸಿ ಯೂಸುಫ್ (52) ಹಾಗೂ ಕೇರಳ ಮೂಲದ ರಜಾಕ್ (42) ಎಂಬುವವರನ್ನು 305 ಗ್ರಾಂ ಗಾಂಜಾ ಸಹಿತ ವಶಕ್ಕೆ ಪಡೆದಿದ್ದಾರೆ. ಮಡಿಕೇರಿ ಉಪ ವಿಭಾಗದ ಡಿವೈಎಸ್‍ಪಿ ಎಂ.ಜಗದೀಶ್, ಮಡಿಕೇರಿ ಗ್ರಾಮಾಂತರ ವೃತ್ತದ ಸಿಪಿಐ ಅನೂಪ್ ಮಾದಪ್ಪ, ನಾಪೋಕ್ಲು ಪೊಲೀಸ್ ಠಾಣೆಯ ಪಿಎಸ್‍ಐ ಮಂಜುನಾಥ್ ಹಾಗೂ ಸಿಬ್ಬಂದಿಗಳ ವಿಶೇಷ ತಂಡ ಕೊಳಕೇರಿ ಬಸ್ ನಿಲ್ದಾಣದ ಬಳಿ ಕಾರ್ಯಾಚರಣೆ ನಡೆಸಿತು. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯದಕ್ಷತೆಯನ್ನು ಕೆ.ರಾಮರಾಜನ್ ಶ್ಲಾಘಿಸಿದ್ದಾರೆ. ಮಾದಕ ವಸ್ತುಗಳನ್ನು ಬಳಸುವ ಹಾಗೂ ಮಾರಾಟ ಮಾಡುವ ವ್ಯಕ್ತಿಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಹಾಗೂ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

Read More

ಮಡಿಕೇರಿ ಜು.1 : ಕುಶಾಲನಗರದ ಶ್ರೀ ಶಿರಡಿ ಸಾಯಿ ಟ್ರಸ್ಟ್ ವತಿಯಿಂದ ಜು.3 ರಂದು ಶ್ರೀ ಶಿರಡಿ ಸಾಯಿ ಮಂದಿರದಲ್ಲಿ ಗುರು ಪೂರ್ಣಿಮೆ ವಿಶೇಷ ಪೂಜೆ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಿಗ್ಗೆ 6.30 ಗಂಟೆಗೆ ಕಾಕಡ ಆರತಿ, 7 ಗಂಟೆಗೆ ಗಣಪತಿ ಹೋಮ, 7.30ಕ್ಕೆ ಸಾಯಿ ಹೋಮ, 8 ಗಂಟೆಗೆ ಪಂಚಾಮೃತ ಅಭಿಷೇಕ ಜರುಗಲಿದೆ. ಬೆಳಿಗ್ಗೆ 8.30 ರಿಂದ ಸಾರ್ವಜನಿಕರಿಂದ ಹಾಲು ಅಭಿಷೇಕ ಜರುಗಲಿದ್ದು,  10 ಗಂಟೆಗೆ ಸಾಮೂಹಿಕ ಸತ್ಯನಾರಾಯಣ ಪೂಜೆ, 12.30ಕ್ಕೆ ಮಹಾಮಂಗಳಾರತಿ  ನೆರವೇರಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಶ್ರೀ ಶಿರಡಿ ಸಾಯಿ ಟ್ರಸ್ಟ್ ನ ಪ್ರಮುಖರು ಹಾಗೂ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

Read More

ಸೋಮವಾರಪೇಟೆ ಜು.1 :  ತಾಲೂಕು ಕಚೇರಿಯಲ್ಲಿ ಶಿರಸ್ತೇದಾರ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎಸ್.ವೆಂಕಟೇಶ್  ಅವರನ್ನು ಸೋಮವಾರಪೇಟೆ ತಾಲೂಕು ಕಚೇರಿ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ತಾಲೂಕು ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್ ಎಸ್.ಎನ್.ನರಗುಂದ್  ಅಧ್ಯಕ್ಷೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕಳೆದ 35 ವರ್ಷಗಳ ಸೇವೆಯಿಂದ ನಿವೃತ್ತಿ ಹೊಂದಿದ ವೆಂಕಟೇಶ್ ಅವರನ್ನು ತಾಲೂಕು ಕಚೇರಿಯ ಎಲ್ಲಾ ಸಿಬ್ಬಂದಿಗಳು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು. ಈ ಸಂದರ್ಭ ಮಾತನಾಡಿದ ತಹಶೀಲ್ದಾರ್ ವೆಂಕಟೇಶ್ ವೃತ್ತಿಯಲ್ಲಿ ಅನುಭವಸ್ಥರು ಅವರಿಗೆ ವಹಿಸಿದ ಕೆಲಸಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು.  ಖಚೇರಿಗೆ ಬರುವ ಜನಸಾಮಾನ್ಯ ರೊಂದಿಗೆ ಸೌಜನ್ಯ ದಿಂದ ವರ್ತಿಸುತ್ತಿದ್ದರು,ಸರಳ ವ್ಯಕ್ತಿತ್ವ ಹೊಂದಿರುವ ಪ್ರಾಮಾಣಿಕ ವ್ಯಕ್ತಿ ಎಂದರು. ಶಿರಸ್ತೇದಾರ್ ಗಳಾದ ಲೋಹಿತ್, ಸುಶೀಲ ಪಳಂಗಪ್ಪ , ರಾಜಸ್ವ, ನಿರೀಕ್ಷಕ ಪ್ರಹ್ಲಾದ್ , ತಾಲೂಕು ಕಚೇರಿ ಹಾಗೂ ನಾಡಕಚೇರಿ  ಸಿಬ್ಬಂದಿಗಳು  ಹಾಜರಿದ್ದರು.  

Read More

ಮಡಿಕೇರಿ ಜು.1 : ಪತ್ರಿಕೆಗಳು ಸಮಾಜದ ಮುಖವಾಣಿಯಾಗಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಬೇಕೆಂದು ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ ಟಿ.ಕೆ. ಸಾಯಿ ಕುಮಾರ್ ಸಲಹೆ ನೀಡಿದ್ದಾರೆ. ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದ ವತಿಯಿಂದ ಸುಂಟಿಕೊಪ್ಪದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ  ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡಿದರು. ಪತ್ರಿಕೆಗಳಿಂದ ದೈನಂದಿನ ಆಗುಹೋಗುಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ. ಸಂಕ್ಷಿಪ್ತವಾಗಿ ಪತ್ರಿಕಾ ದಿನಾಚರಣೆಯ ಇತಿಹಾಸವನ್ನು ಸ್ಮರಿಸಿದ ಅವರು ಪತ್ರಿಕೆಗಳು ಸದಾ ಕಾಲವೂ ಸಮಾಜಕ್ಕೆ ಪ್ರತಿಸ್ಪಂದಿಸುವ ಕೆಲಸವನ್ನು ಮಾಡುತ್ತಲೇ ಬಂದಿರುವುದನ್ನು ಕಾರಣಬಹುದಾಗಿದೆ. ಇಂದಿನ ಮಕ್ಕಳು ಪತ್ರಿಕೆಗಳನ್ನು ಓದುವ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಬೇಕೆಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ತಮ್ಮ ತಂದೆ ಮತ್ತು ತಾಯಿ ಹೆಸರಿನಲ್ಲಿ ಕುಶಾಲನಗರ ತಾಲೂಕು ಪತ್ರಕರ್ತರ ಸಂಘಕ್ಕೆ ದತ್ತಿನಿಧಿ ಘೋಷಣೆ ಮಾಡಿದರು. ಮುಖ್ಯ ಭಾಷಣಕಾರಾಗಿ ಕೊಡಗು ಪತ್ರಕರ್ತರ ಸಂಘದ ಗೌರವ ಸಲಹೆಗಾರರಾದ ಶ್ರೀಧರ್ ನೆಲ್ಲಿತ್ತಾಯ ಮಾತನಾಡಿ ಪತ್ರಿಕೋದ್ಯಮ ಇಂದು ಪತ್ರಿಕಾ ವಾಣಿಜ್ಯೋದ್ಯಮವಾಗಿ ಬದಲಾಗಿದೆ.…

Read More

ಸುಂಟಿಕೊಪ್ಪ ಜು.1 : ವೃಕ್ಷೋದ್ಭವ ಶ್ರೀ ಶಕ್ತಿ ಮಹಾಗಣಪತಿ ದೇವಾಲಯದ 19ನೇ ವರ್ಷದ ವಾರ್ಷಿಕೋತ್ಸವವ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನೆರವೇರಿತು. ಮುಂಜಾನೆಯಿಂದಲೇ ಪಂಚಾಮೃತ ಅಭಿಷೇಕ, ಸರ್ವ ಕಲಶಾಭಿಷೇಕ, ಕಳಶ ಜಲನಯನ, ಗಣಪತಿಹೋಮ, ಪೂರ್ಣಾಹುತಿ, ಪುಣ್ಯಾಹ ವಾಚನ, ಪೂರ್ಣಾಹುತಿ, ಪಂಚಾಮೃತ ಮಹಾ ಮಂಗಳಾರತಿ ಹಾಗೂ ಅನ್ನದಾನ ನಡೆಯಿತು. ನಂತರ ಭಕ್ತಾಧಿಗಳ ಭಜನಾ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭ ಟ್ರಸ್ಟ್ ಅಧ್ಯಕ್ಷ ಎ.ಲೋಕೇಶ್ ಕುಮಾರ್, ಸಮಿತಿ ಅಧ್ಯಕ್ಷ ಬಿ.ರಮೇಶ್, ಕಾರ್ಯದರ್ಶಿ ಎಂ.ಮಂಜುನಾಥ್, ಉಪಾಧ್ಯಕ್ಷ ಬಿ.ದಿವಾಕರ್ ಪೂಜಾರಿ, ಪುಳಂಜನ ಕುಶಾಲಪ್ಪ, ಬಿ.ಎಸ್.ರಮೇಶ್, ಜಂಟಿ ಕಾರ್ಯದರ್ಶಿ ದಿವಾಕರ್ ರೈ, ಸಮಿತಿ ಸದಸ್ಯರಾದ ಬಿ.ಎಸ್.ಸದಾಶಿವ ರೈ, ಸುರೇಶ್, ಮನೀಷ್ ಚೌದರಿ, ಮಾಂಗಿಲಾಲ್ ಚೌದರಿ, ಎ.ಶ್ರೀಧರ್ ಕುಮಾರ್, ಸಾಗತ್, ಸುರೇಶ್ ಚಂದು, ಮನುಅಚ್ಚಮ್ಮಯ್ಯ, ಪವಿ, ಯಶೋದರ್, ಬಿ.ಆರ್.ಅರುಣ್ ಕುಮಾರ್, ಶಿವರಾಮನ್, (ಶಿವಮಣಿ) ನಿಖಿಲ್, ಹರೀಶ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ವಾರ್ಷಿಕೋತ್ಸವದ ಪ್ರಯುಕ್ತ ದೇವಾಲಯವನ್ನು ತಳಿರುತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

Read More

ಸುಂಟಿಕೊಪ್ಪ ಜು.1 : ಚಾಲಕ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿರುವ ಘಟನೆ ಮಾದಾಪುರ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಸುಂಟಿಕೊಪ್ಪದಿಂದ ಮಾದಾಪುರದ ಕಡೆಗೆ ತೆರಳುತ್ತಿದ್ದ ಕಾರು ಸ್ವಸ್ಥ ಪುನರ್ವಸತಿ ಕೇಂದ್ರದ ಸಮೀಪ ಚಾಲಕನ ನಿಯಂತ್ರಣ ಕಳೆದು ಕೊಂಡು ಪಲ್ಟಿಯಾಗಿ ರಸ್ತೆ ಬದಿಯ ಹಳ್ಳಕ್ಕೆ ಬಿದ್ದಿದೆ. ಕಾರಿನ ಚಾಲಕ ಹಾಗೂ ಸಹ ಪ್ರಯಾಣಿಕ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದು, ಪಲ್ಟಿಯಾ ರಬ್ಬಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ.

Read More

 ಮಡಿಕೇರಿ ಜು.1 : ಟಿ.ಶೆಟ್ಟಿಗೇರಿಯ ಗ್ರಾಮ ಪಂಚಾಯಿತಿ ಕಾರ್ಯಾಲಯದ ಸಭಾಂಗಣವನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿ, ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವಂತೆ ಸಲಹೆ ನೀಡಿದರು. ಈ ಸಂದರ್ಭ ಗ್ರಾ.ಪಂ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.

Read More