ಮಡಿಕೇರಿ ಜೂ.23 : ಗೋಣಿಕೊಪ್ಪಲು ಗ್ರಾ.ಪಂ ವ್ಯಾಪ್ತಿಯಲ್ಲಿ ಸುಗಮ ಸಂಚಾರ ವ್ಯವಸ್ಥೆ ಸಲುವಾಗಿ ಪಂಚಾಯಿತಿ ಸದಸ್ಯರ, ಗೋಣಿಕೊಪ್ಪಲು ಚೇಂಬರ್ ಆಫ್ ಕಾಮರ್ಸ್ ಸದಸ್ಯರ ಹಾಗೂ ಪೊಲೀಸ್ ಇಲಾಖೆಯ ಜಂಟಿ ಸಭೆ ನಡೆಯಿತು. ಗೋಣಿಕೊಪ್ಪಲು ಗ್ರಾ.ಪಂ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷೆ ಮನ್ನಕ್ಕಮನೆ ಸೌಮ್ಯ ಬಾಲು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವು ವಿಷಯಗಳನ್ನು ಚರ್ಚಿಸಲಾಯಿತು. ಈ ಸಂದರ್ಭ ಗೋಣಿಕೊಪ್ಪಲು ಸಬ್ ಇನ್ಸ್ ಪೆಕ್ಟರ್ ದೀಕ್ಷಿತ್ ಪ್ರಾಸ್ತಾವಿಕವಾಗಿ ಮಾತನಾಡಿ, ಗೋಣಿಕೊಪ್ಪಲು ನಗರವನ್ನು ಸುಗಮ ಸಂಚಾರ ತರಲು ಬೇಕಾದ ವ್ಯವಸ್ಥೆಗಳ ಕುರಿತು ಮಾಹಿತಿ ನೀಡಿದರು. ಪ್ರಕರಣ ದಾಖಲಿಸುವುದು ನಮ್ಮ ಉದ್ದೇಶವಲ್ಲ. ಸಂಚಾರ ನಿಯಮ ಪಾಲನೆಯಾಗಬೇಕು. ಚಾಲನೆ ಮಾಡುವಾಗ ಎಚ್ಚರಿಕೆ ವಹಿಸಬೇಕು. ಗೋಣಿಕೊಪ್ಪಲು ನಗರದಲ್ಲಿ ವಾಹನ ನಿಲುಗಡೆ ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ಹಲವಾರು ಫಲಕಗಳನ್ನು ಅಳವಡಿಸಬೇಕು. ವಾಹನವನ್ನು ಸರಿಯಾಗಿ ನಿಲುಗಡೆ ಮಾಡುವ ಸಲುವಾಗಿ ರಸ್ತೆಯಲ್ಲಿ ನಿಲುಗಡೆಗಾಗಿ ಬಣ್ಣ ಬಳಿಯುವ ಕೆಲಸವಾಗಬೇಕು ಎಂದು ಸಭೆಯ ಗಮನಕ್ಕೆ ತಂದರು. ಅಧ್ಯಕ್ಷೆ ಸೌಮ್ಯ ಬಾಲು ಪಾರ್ಕಿಂಗ್ ವ್ಯವಸ್ಥೆಯಲ್ಲಿ ನಾಲ್ಕು ಚಕ್ರಗಳ ವಾಹನಗಳು ನಿಲ್ಲುವ ಕಡೆಗಳಲ್ಲಿ ತ್ರಿಚಕ್ರ…
ಲೇಖಕ: admin
ಮಡಿಕೇರಿ ಜೂ.23 : ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಎನ್.ರಾವುಫ್ ಹಾಗೂ ಉಪಾಧ್ಯಕ್ಷ ವಿ.ಜಿ.ಮೋಹನ್ ತಮಗೆ ಅಧ್ಯಕ್ಷ ಸ್ಥಾನ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಎಂ.ಎನ್.ರಾವುಫ್ ಈ ಬಾರಿ ಕಾಂಗ್ರೆಸ್ ಆಡಳಿತ ಅಧಿಕಾರ ಹಂಚಿಕೆಯ ಸಂದರ್ಭ ಯುವ ಸಮೂಹಕ್ಕೆ ಆದ್ಯತೆ ನೀಡಲಿದೆ ಎಂದು ತಿಳಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಪಕ್ಷಕ್ಕೆ ಅತ್ಯಧಿಕ ಮತ ದೊರೆಯಲು ಸಾಕಷ್ಟು ಶ್ರಮಿಸಿದ್ದೇನೆ. ಬಿ.ಕಾಂ ಪದವೀಧರನಾಗಿರುವ ನಾನು ನಗರ ಯುವ ಕಾಂಗ್ರೆಸ್ ಸದಸ್ಯನಾಗಿ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಮತ್ತು ಸಾಮಾಜಿಕ ಜಾಲತಾಣದ ಜಿಲ್ಲಾ ಕಾರ್ಯದರ್ಶಿಯಾಗಿಯೂ ಪಕ್ಷಕ್ಕಾಗಿ ದುಡಿದಿದ್ದೇನೆ. ಬೂತ್ ಸಂಖ್ಯೆ 210ರಲ್ಲಿ ಬೂತ್ ಅಧ್ಯಕ್ಷನಾಗಿ ಅತಿ ಹೆಚ್ಚು ಮತಗಳು ಕಾಂಗ್ರೆಸ್ ಗೆ ಬರುವಂತೆ ನೋಡಿಕೊಂಡಿದ್ದೇನೆ. ಪ್ರಸ್ತುತ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ನಿಷ್ಠೆಯನ್ನು ಪ್ರದರ್ಶಿಸಿದ್ದೇನೆ. ಮಡಿಕೇರಿ ಕ್ಷೇತ್ರದ ಶಾಸಕರು ಯುವ ಸಮೂಹಕ್ಕೆ ಅಧಿಕಾರ…
ಮಡಿಕೇರಿ ಜೂ.23 : ಮಣಿಪುರ ರಾಜ್ಯದಲ್ಲಿ ಕ್ರೈಸ್ತ ಸಮುದಾಯದ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕ್ರಿಶ್ಚಿಯನ್ ಘಟಕ, ಕೇಂದ್ರ ಸರ್ಕಾರದ ವಿರುದ್ಧ ಜೂ.28 ರಂದು ಶಾಂತಿಯುತ ಪ್ರತಿಭಟನೆಯನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ರಿಶ್ಚಿಯನ್ ಘಟಕದ ಪ್ರಮುಖರು ಕೇಂದ್ರ ಸರ್ಕಾರದ ನಿಷ್ಕ್ರೀಯ ಧೋರಣೆಯಿಂದ ಮಣಿಪುರದಲ್ಲಿ ಚರ್ಚ್‍ಗಳ ಮೇಲೆ ದಾಳಿಯಾಗುತ್ತಿದೆ ಮತ್ತು ಕ್ರೈಸ್ತರನ್ನು ಹಿಂಸಿಸಲಾಗುತ್ತಿದೆ ಎಂದು ಆರೋಪಿಸಿದರು. ಕೇಂದ್ರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಮತ್ತು ದೌರ್ಜನ್ಯ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಕ್ರೈಸ್ತರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ಕಪ್ಪು ಪಟ್ಟಿ ಧರಿಸಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಬುಧವಾರ ಬೆಳಗ್ಗೆ 10.30 ಗಂಟೆಗೆ ನಗರದ ಸಂತ ಮೈಕಲರ ಚರ್ಚ್ ಬಳಿಯಿಂದ ಜನರಲ್ ತಿಮ್ಮಯ್ಯ ವೃತ್ತ ಮತ್ತು ಮಂಗೇರಿರ ಮುತ್ತಣ್ಣ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಧರ್ಮಗುರುಗಳು, ಧಾರ್ಮಿಕ ಮುಖಂಡರು ಹಾಗೂ ಸರ್ವ ಕ್ರೈಸ್ತ ಬಾಂಧವರು…
ಮಡಿಕೇರಿ ಜೂ.23 : ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಪ್ರೊ ಡಿ.ಜೆ.ಜವರಪ್ಪ ವಿದ್ಯಾರ್ಥಿಗಳಿಗೆ ಯೋಗದ ಮಹತ್ವದ ಕುರಿತು ತಿಳಿಸಿದರು. ದೈಹಿಕ ಉಪನ್ಯಾಸಕರಾದ ಟಿಶೋನಿ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಆಯೋಗ ಆಸನಗಳನ್ನು ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಬೋಧಕ, ಬೋಧಕೇತರರು ಹಾಜರಿದ್ದರು.
ಮಡಿಕೇರಿ ಜೂ.23 : ಮಾದಾಪುರದ ಶ್ರೀಮತಿ ಡಿ ಚೆನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಚೆಟ್ಟಳ್ಳಿ ಕೇಂದ್ರೀಯ ಕೃಷಿ ಸಂಶೋಧನಾ ತೋಟಗಾರಿಕಾ ಇಲಾಖೆಯ ನಿರ್ದೇಶಕ ಮುರಳೀಧರ್ ಪಾಲ್ಗೊಂಡು ಸಂಸ್ಥೆಗೆ ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ನೀಡಿದರಲ್ಲದೇ, ಶಾಲಾ ಪರಿಸರದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟು ಅವುಗಳ ಪಾಲನೆ ಪೋಷಣೆಯ ಕುರಿತು ತಿಳಿಸಿದರು. ಸೋಮವಾರಪೇಟೆ ವಲಯ ಅರಣ್ಯ ಸಂರಕ್ಷಣಾಧಿಕಾರಿ ಚೇತನ್ ಕಾಯ೯ಕ್ರಮದಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರದ ಕಾಂಡ್ಲಾ ವನ ಬೆಳೆಸುವ ಯೋಜನೆಯನ್ನು ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ತೀರ ಪ್ರದೇಶದ ಕಡಲ ಕೊರೆತ ವನ್ನು ತಡೆಗಟ್ಟುವಲ್ಲಿ ಸಸ್ಯಸಂಕುಲದ ಪ್ರಾಮುಖ್ಯತೆಯನ್ನು ತಿಳಿಸಿದರು. ಅಪ್ಪಂಗಳದ ಕೇಂದ್ರೀಯ ಸಂಬಾರ ಮಂಡಳಿಯ ವಿಜ್ಞಾನಿ ಅಕ್ಷತಾ ಹಾಗೂ ಸ್ಥಳೀಯ ಗ್ರಾ.ಪಂ ಸದಸ್ಯೆ ಉಷಾ ಕಾಯ೯ಕ್ರಮದಲ್ಲಿ ಪಾಲ್ಗೊಂಡಿದ್ದರು. ಶ್ರೀಮತಿ ಡಿ.ಚೆನ್ನಮ್ಮ ಪದವಿಪೂರ್ವ ಸಂಸ್ಥೆಯ ಆವರಣದಲ್ಲಿ ಗಿಡಗಳನ್ನು ನೀಡುವುದರ ಮೂಲಕ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪರಿಸರ ದಿನಾಚರಣೆಯ ಅಂಗವಾಗಿ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲರು…
ಚೆಯ್ಯಂಡಾಣೆ ಜೂ.23 : ಕರಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಶಿಕ್ಷಕಿ ಡಿ.ಕೆ.ಲೀಲಾವತಿ ಹಾಗೂ ಸಹ ಶಿಕ್ಷಕರ ನೇತೃತ್ವದಲ್ಲಿ ಯೋಗಭ್ಯಾಸ ನಡೆಯಿತು.
ಚೆಯ್ಯಂಡಾಣೆ ಜೂ 23 : ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ನರಿಯಂದಡ ಕೇಂದ್ರ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳು ಯೋಗ ಪ್ರದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಚೇನಂಡ ಗಿರೀಶ್ ಪೂಣಚ್ಚ ಯೋಗಾ ಪ್ರದರ್ಶನದಲ್ಲಿ ಭಾಗಿಯಾಗಿ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸದ ಪ್ರಯೋಜನವನ್ನು ತಿಳಿಸಿದರು. ಈ ಸಂದರ್ಭ ದೈಹಿಕ ಶಿಕ್ಷಕ ಪಿ.ಬಿ. ಪೊನ್ನಪ್ಪ, ಮುಖ್ಯ ಶಿಕ್ಷಕಿ ಭವ್ಯ, ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ವರದಿ : ಅಶ್ರಫ್
ಕಡಂಗ ಜೂ.23 : ಕಡಂಗ ಸ.ಹಿ.ಪ್ರಾ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಯುಷ್ ಇಲಾಖೆ ಸಹಯೋಗದಲ್ಲಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಡಾ.ಶೈಲಜಾ ಉದ್ಘಾಟಿಸಿದರು. ಮುಖ್ಯ ಶಿಕ್ಷಕರಾದ ಶಾಂತಕುಮಾರಿ , ಕೆ.ಜೆ.ಪ್ರಕಾಶ್ , ಕೊಡಿರ ಪ್ರಸನ್ನ ಹಾಜರಿದ್ದರು. ಯೋಗ ತರಬೇತುದಾರರಾದ ಸಿಂದು ನೇತೃತ್ವದಲ್ಲಿ ಯೋಗಾಸನ ಮಾಡಲಾಯಿತು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಯೋಗಾಸನದಲ್ಲಿ ಪಾಲ್ಗೊಂಡರು. ವರದಿ : ನೌಫಲ್ ಕಡಂಗ
ಚೆಯ್ಯಂಡಾಣೆ ಜೂ.23 : ತಝ್ಕಿಯತ್ತು ತ್ವಲಬಾ ದರ್ಸ್ ಇದರ 2023-24 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಸುಂಟಿಕೊಪ್ಪ ದರ್ಸ್ ನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯ ನೇತೃತ್ವವನ್ನು ಶೈಖುನಾ ಉಸ್ಮಾನ್ ಫೈಝಿ ವಹಿಸಿದರು. ಗೌರವ ಅದ್ಯಕ್ಷರಾಗಿ ಶೈಖುನಾ ಉಸ್ಮಾನ್ ಫೈಝಿ ಉಸ್ತಾದ್, ಅದ್ಯಕ್ಷರಾಗಿ ಸುಹೈಬ್ ಎಡಪಾಲ, ಉಪಾಧ್ಯಕ್ಷರುಗಳಾಗಿ ಸಾಬಿತ್ ಸುಂಡಕ್ಕೆರೆ, ರಝಾಕ್ ಗೋಣಿಕೊಪ್ಪ, ಪ್ರಧಾನ ಕಾರ್ಯ ದರ್ಶಿ ಖಾಲಿದ್ ಗೋಣಿಕೊಪ್ಪ, ವ.ಕಾರ್ಯದರ್ಶಿ ಸುಹೈಲ್ ಕಿಕ್ಕರೆ, ಸಹ ಕಾರ್ಯ ದರ್ಶಿ ಶಿಹಾಬುದ್ದೀನ್ ಶನಿವಾರಸಂತೆ, ಕೋಶಾಧಿಕಾರಿ ಆಶಿಕ್ ಸಿದ್ದಾಪುರ ಆಯ್ಕೆಯಾದರು. ವರದಿ : ಅಶ್ರಫ್
ಸುಂಟಿಕೊಪ್ಪಜೂ.23 : ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಪರಿಹಾರ ಕಾಣದ ಡೆಂಗ್ಯೂ ಜ್ವರ ನಿವಾರಣೆಗಾಗಿ ಟೊಂಕ ಕಟ್ಟಿ ನಿಂತಿರುವ ಆರೋಗ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಸುಂಟಿಕೊಪ್ಪ ವ್ಯಾಪ್ತಿಯಲ್ಲಿನ ಸೊಳ್ಳೆಗಳನ್ನು ಹಿಡಿದು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿ ಫಲಿತಾಂಶ ತಿಳಿಯಲು ಮುಂದಾಗಿದ್ದಾರೆ. ಹಾಸನ ಮತ್ತು ಮೈಸೂರಿನಿಂದ ಕೀಟಾಣು ಶಸ್ತ್ರಜ್ಞನರ ತಂಡ ಡಾ.ರಾಜೇಶ್ ಕುಲಕರ್ಣಿಯವರ ನೇತೃತ್ವದದಲ್ಲಿ ಬಂದಿದ್ದು, ಸುಂಟಿಕೊಪ್ಪದ ಮೊದಲನೇ 1ನೇ ವಿಭಾಗ, 2ನೇ ವಿಭಾಗದ ಅಪ್ಪಾರಂಡ ಬಡಾವಣೆ ಮತ್ತಿತರ ಭಾಗಗಳಲ್ಲಿ ಮುಂದಿನ ನಾಲ್ಕೈದು ದಿನಗಳಕಾಲ ಸೊಳ್ಳೆಗಳನ್ನು ಹಿಡಿದು ಪ್ರಯೋಗಾಲಯಕ್ಕೆ ಕಳುಹಿಸುವ ಮೂಲಕ ಯಾವ ರೀತಿಯ ಸೊಳ್ಳೆ ಮತ್ತು ಇದು ಹರಡುವ ಖಾಯಿಲೆ ಯಾವುದು ಈ ಸೊಳ್ಳೆಗಳ ಕಡಿತದಿಂದಲೇ ಜ್ವರ ಬಾಧಿಸುತ್ತಿರುವುದು ನಿಜವೇ ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಸುಂಟಿಕೊಪ್ಪ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಆರೋಗ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಿನಂಪ್ರತಿ ಭೇಟಿ ನೀಡುತ್ತಿದ್ದು, ಪ್ರತಿನಿತ್ಯದ ರೋಗಿಗಳ ವಿವರವನ್ನು ಸೂಕ್ತ ಚಿಕಿತ್ಸೆಯ ವ್ಯವಸ್ಥೆಯನ್ನು ಪರಿಶೀಲಿಸುತ್ತಿದ್ದಾರೆ.…






