ಲೇಖಕ: admin

ಮಡಿಕೇರಿ ಮೇ.18 : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ‘ಅಂತರರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ’ ಪ್ರಯುಕ್ತ ‘ವಸ್ತು ಸಂಗ್ರಹಾಲಯಗಳು ಮತ್ತು ಸುಸ್ಥಿರತೆ ಮತ್ತು ಯೋಗಕ್ಷೇಮ’ ಎಂಬ ಘೋಷವಾಕ್ಯದಡಿ ಕೊಡಗು ಜಿಲ್ಲೆಯ ಪಾರಂಪರಿಕ ಪರಿಕರಗಳ ವಿಶೇಷ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಚಾಲನೆ ನೀಡಿದರು. ನಗರದ ಕೋಟೆ ಆವರಣದಲ್ಲಿರುವ ಸರ್ಕಾರಿ ಸಂಗ್ರಹಾಲಯ ಬಳಿ ಪಾರಂಪರಿಕ ಪರಿಕರಗಳ ವಿಶೇಷ ಪ್ರದರ್ಶನ ಉದ್ಘಾಟಿಸಿದರು. ವೈದ್ಯರು ಹಾಗೂ ಪ್ರಾಚೀನ ವಸ್ತುಗಳ ಸಂಗ್ರಹಕಾರರಾದ ಡಾ.ಎಂ.ಜಿ.ಪಾಟ್ಕರ್, ಪ್ರಾಚೀನ ವಸ್ತುಗಳ ಸಂಗ್ರಹಕಾರರಾದ ಪಿ.ಕೆ.ಕೇಶವ ಮೂರ್ತಿ, ಪೊನ್ನಚ್ಚನ ಮಧು ಸೋಮಣ್ಣ ಇತರರು ಪಾಲ್ಗೊಂಡಿದ್ದರು. 50 ವರ್ಷಗಳ ಹಿಂದೆ ಬಳಸುತ್ತಿದ್ದ ಕಂಚಿನ ಪದಾರ್ಥಗಳಾದ ತಟ್ಟೆ, ಲೋಟ, ಕಡಾಯಿ, ಪಾವು, ಸೇರು, ಕಂಚಿನ ತಪ್ಲ, ಕಂಚಿನ ಚೆಂಬು, ಪೆಟ್ಟಿಗೆ, ಊಟದ ಬಾಕ್ಸ್, ಹಾಗೆಯೇ ಮರದ ವಸ್ತುಗಳಾದ ಸೇವಿಗೆ ಮಣೆ, ಬುಟ್ಟಿ, ತಂಬಿಗೆ, ಕಳಸ, ನೀರಿನ ಫಿಲ್ಟರ್, ಮರದ ದುಡಿ, ಕಂಜಿಕಲ, ಕಳಿಕೋಲ್, ಎಲ್‍ತಟ್ಟೆ, ಪಲಿಯ, ಪೋಂದಾಯ ಚಂದುಕ, ಕುರಿ ಕುಟ್ಟ್, ಚೇಕಲ, ಉದಿ, ಪರೆ,…

Read More

ಮಡಿಕೇರಿ ಮೇ 18 :  ಜಿಲ್ಲೆಯ ಹಲವೆಡೆ ಇಂದು ಸಂಜೆ ಭಾರೀ ಗಾಳಿ ಮಳೆಯಾಗಿದ್ದು, ಸುಂಟಿಕೊಪ್ಪದಲ್ಲಿ ಬೃಹತ್ ಮರವೊಂದು ಮನೆಯ ಮೇಲಕ್ಕೆ ಬಿದ್ದ ಘಟನೆ ನಡೆದಿದೆ. ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಂಟಿಕೊಪ್ಪ ನಾಡಕಚೇರಿ ಹಿಂಭಾಗದಲ್ಲಿನ ಲೋಕೋಪಯೋಗಿ ಇಲಾಖಾ ವಸತಿ ಗೃಹದಲ್ಲಿ ಮುಕ್ತಾರ್ ಎಂಬವರು ವಾಸವಿದ್ದು, ಗಾಳಿ ಮಳೆಯ ಸಂದರ್ಭ ಮಾವಿನ ಮರ ಮನೆಯ ಮೇಲೆ ಉರುಳಿ ಬಿದ್ದಿದೆ.  ಮನೆಯಲ್ಲಿದ್ದ ನಾಲ್ವರು ಮಕ್ಕಳು ಸೇರಿದಂತೆ ಆರು ಮಂದಿ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಗ್ರಾಮ ಪಂಚಾಯ್ತಿ ಸಿಬ್ಬಂದಿಗಳು ಹಾಗೂ ಸುಂಟಿಕೊಪ್ಪ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ, ಮರ ತೆರವಿಗೆ ಅಗತ್ಯ ಕ್ರಮ ಕೈಗೊಂಡಿದ್ದಾರೆ.

Read More

ಮಡಿಕೇರಿ ಮೇ 18 : ಪರದಂಡ ಚಂಗಪ್ಪ ಅವರ ಕೃತಿಯಲ್ಲಿ ಕಂಡು ಬರುವ ಗ್ರಾಮ ವ್ಯವಸ್ಥೆಯ ಆದರ್ಶಗಳು ಮತ್ತೊಮ್ಮೆ ಪುನರ್ ನಿರ್ಮಾಣವಾಗಬೇಕೆಂದು ಬೆಂಗಳೂರಿನ ಓಶಿಯಾನಿಕ್ ಕಾಲೇಜ್ ಆಫ್ ಹೈಯರ್ ಎಜುಕೇಶನ್ ಚೇರ್‍ಮೆನ್ ಡಾ.ತೇಜ್ ಪೂವಯ್ಯ ನಡಿಕೇರಿಯಂಡ ಆಶಯ ವ್ಯಕ್ತಪಡಿಸಿದರು. ಅಲ್ಲಾರಂಡ ರಂಗಚಾವಡಿ ಹಾಗೂ ಪರದಂಡ ಚಂಗಪ್ಪ ಕುಟುಂಬಸ್ಥರ ಸಹಯೋಗದಲ್ಲಿ ನಗರದ ಭಾರತೀಯ ವಿದ್ಯಾಭವನದಲ್ಲಿ ನಡೆದ ಪರದಂಡ ಚಂಗಪ್ಪ ಅವರ 105ನೇ ಸಂಸ್ಮರಣಾ ದಿನವನ್ನು ಉದ್ಘಾಟಿಸಿ ಮಾತನಾಡಿದರು. ಪರದಂಡ ಚಂಗಪ್ಪ ಅವರ ಕೃತಿಯಲ್ಲಿ ಕೊಡಗಿನ ಎಲ್ಲಾ ಸಮುದಾಯಗಳು ಕೊಡವ ಭಾಷಿಕ ಸಮುದಾಯದ ಪುರಾತನ ಗ್ರಾಮ ವ್ಯವಸ್ಥೆಯಲ್ಲಿ ಒಟ್ಟಾಗಿ ಬಾಳುತ್ತಿದ್ದರು. ಒಂದು ಸಮುದಾಯ ಮತ್ತೊಂದು ಸಮುದಾಯದೊಂದಿಗೆ ಹೊಂದಿಕೊಂಡು ಬದುಕುತ್ತಿದ್ದ ಆದರ್ಶ ಸಮುದಾಯ ಇತ್ತು ಎಂಬುದನ್ನು ಪರದಂಡ ಚಂಗಪ್ಪ ಅವರ ಕೃತಿಯಲ್ಲಿ ನಿರೂಪಿಸಿದ್ದಾರೆ ಎಂದರು. ಆದರೆ ಜಾಗತೀಕರಣ ಸಂದರ್ಭದಲ್ಲಿ ಹಣಗಳಿಕೆ ಉಂಟಾದ ಕಾರಣ ಹಳೆಯ ಗ್ರಾಮ ವ್ಯವಸ್ಥೆ ಕುಸಿದು ಹೋಗಿ ಹೊಸ ಆರ್ಥಿಕ ವ್ಯವಸ್ಥೆ ಬಂದ ಕಾರಣ ಸಣ್ಣ ಸಮುದಾಯ ಮೂಲೆ ಗುಂಪಾದವು. ಇದರಿಂದ ಕೊಡಗಿನ…

Read More

ನಾಪೋಕ್ಲು ಮೇ 18 :  ಕುಂಜಿಲದ ಪಯ್ಯಡಿ ಕುಟುಂಬಸ್ಥರು ವರ್ಷಂಪ್ರತೀ ನಡೆಸಿಕೊಂಡು ಬರುತ್ತಿರುವ ಮೂರನೇ ವರ್ಷದ ಗ್ರಾಂಡ್ ರಾತೀಬ್ ಮಜ್ಲಿಸ್ ಹಾಗೂ ಖತಮ್ ದುವಾ ಪಯ್ಯಡಿ ಮೂಸಾರವರ ಮನೆಯಲ್ಲಿ  ಸಂಭ್ರಮದಿಂದ ನಡೆಯಿತು. ಕುಂಜಿಲ ಖುತುಬುಲ್ ಆರಿಫೀನ್ ರಾತೀಬ್ ಸಂಘ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕುಟುಂಬಸ್ಥರು ಹಾಗೂ ಸಮಾಜ ಬಾಂಧವರು ದುವಾ ಮಜ್ಲಿಸ್ ನಲ್ಲಿ ಪಾಲ್ಗೂಂಡರು. ಈ ಸಂದರ್ಭ ಮಾತನಾಡಿದ ಪಯ್ಯಡಿ ಹಂಸ ಹಸನ್  ಮುಂದಿನ ವರ್ಷ   ರಾತೀಬ್  ಅನ್ನು ಅತ್ಯಂತ ವಿಜ್ರಂಭಣೆಯಿಂದ ನಡೆಸುವುದಾಗಿ ತಿಳಿಸಿದರು. ವರದಿ:ಸಾಜಿದ್ ಪಯ್ಯಡಿ  

Read More

ಮಡಿಕೇರಿ ಮೇ 18 :   ಬಾಳೆಯಡ ಕುಟುಂಬಸ್ಥರಿಂದ ನಾಪೋಕ್ಲುವಿನಲ್ಲಿ ಆಯೋಜಿತ 21ನೇ ವರ್ಷದ ‘ಬಾಳೆಯಡ ಕಪ್ ಕ್ರಿಕೆಟ್ ನಮ್ಮೆ’ಯ ಫೈನಲ್ ಹಾಗೂ ಸಮಾರೋಪ ಸಮಾರಂಭ ಮೇ 21 ರಂದು ನಡೆಯಲಿದೆ ಎಂದು ಕ್ರೀಡಾಕೂಟದ ಅಧ್ಯಕ್ಷ ¯ಫ್ಟಿನೆಂಟ್ ಕರ್ನಲ್ ಬಾಳೆಯಡ ಸುಬ್ರಮಣಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಪೋಕ್ಲು ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಬಳಿಕ ಫೈನಲ್ ಪಂದ್ಯ ನಡೆಯಲಿದೆಯೆಂದು ತಿಳಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ 1975ರ ಹಾಕಿ ವಲ್ರ್ಡ್ ಕಪ್ ವಿಜೇತ ಭಾರತ ತಂಡದ ಆಗಿನ ಕ್ಯಾಪ್ಟನ್ ಪದ್ಮಶ್ರೀ ಅಜಿತ್ ಪಾಲ್ ಸಿಂಗ್, ಅಂದಿನ ಭಾರತ ತಂಡದ ಸದಸ್ಯ ಅರ್ಜುನ ಪ್ರಶಸ್ತಿ ಪುರಸ್ಕೃತ ಬಿ.ಪಿ.ಗೋವಿಂದ, ಒಲಂಪಿಯನ್ ವಿ.ಜೆ. ಫಿಲಿಪ್ಸ್, ಒಲಂಪಿಯನ್ ಅಸ್ಲಾಂ ಶೇರ್ ಖಾನ್, ವಿಶ್ವ ಕಪ್ ಹಾಕಿ ವಿಜೇತ 1975ರ ಭಾರತ ತಂಡದ ಸದಸ್ಯ ಪೈಕೆರ ಕಾಳಯ್ಯ, ಬ್ರಿಗೇಡಿಯಾರ್ ಹರಿ ಚರಣ್ ಸಿಂಗ್, ಟ್ರಿಪಲ್ ಒಲಂಪಿಯನ್ ಮನೆಯಪಂಡ ಎಂ.ಸೊಮಯ್ಯ, ವಿರಾಜಪೇಟೆ ಕ್ಷೇತ್ರದ…

Read More

ಮಡಿಕೇರಿ ಮೇ 18 : ಎಸ್‌ವೈಎಸ್ ಕೊಡಗು ಜಿಲ್ಲಾ ಸಮಿತಿಯಿಂದ ಸುಸಜ್ಜಿತವಾಗಿ ನವೀಕರಿಸಲ್ಪಟ್ಟ ಸಿದ್ದಾಪುರದ ವರಕ್ಕಲ್ ಸಮಸ್ತ ಭವನ, ಖಾಝಿ ಹೌಸ್ ಹಾಗೂ ಸಂಸ್ಥೆಯ ಕೇಂದ್ರ ಸಮಿತಿಯ ಅಮೃತ ಮಹೋತ್ಸವದ ಪ್ರಯುಕ್ತ ಆಯೋಜಿತ ಜಾಗೃತಿ ಯಾತ್ರೆಯ ಉದ್ಘಾಟನಾ ಸಮಾವೇಶ ಮೇ 21 ರಂದು ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಎಸ್‌ವೈಎಸ್ ಕೊಡಗು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ವೈ.ಅಶ್ರಫ್ ಫೈಝಿ ಮಾತನಾಡಿ, ಅಂದು ಸಂಜೆ ಸಿದ್ದಾಪುರದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಸಮಸ್ತ ಕೇಂದ್ರ ಮುಶಾವರ ಸದಸ್ಯ ಎಂ.ಎಂ.ಅಬ್ದುಲ್ಲಾ ಫೈಝಿ ಧಜ್ವಾರೋಹಣದ ಮೂಲಕ ಚಾಲನೆ ನೀಡಲಿದ್ದಾರೆ. ವರಕ್ಕಲ್ ಭವನ ಹಾಗೂ ಖಾಝಿ ಹೌಸ್‌ನ್ನು ಸಮಸ್ತ ಕೇಂದ್ರ ಜಂ-ಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕ್ಕೋಯ ತಂಙಳ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಎಸ್.ವೈ.ಎಸ್ ಜಿಲ್ಲಾಧ್ಯಕ್ಷ ಜನಾಬ್ ಸಿ.ಪಿ.ಎಂ.ಬಶೀರ್ ಹಾಜಿ ವಹಿಸಲಿದ್ದಾರೆಂದರು. ಕಾರ್ಯಕ್ರಮದಲ್ಲಿ ಹಲವಾರು ಉಲಮಾ ಉಮರಾ ನಾಯಕರು ಪಾಲ್ಗೊಳ್ಳಲಿದ್ದು, ಸಮಸ್ತ ಕೇಂದ್ರ ಮುಶಾವರ ಸದಸ್ಯ ಎಂ.ಎ.ಅಬ್ದುಲ್ಲಾ ಫೈಝಿ ಉಸ್ತಾದ್, ಎಸ್‌ಕೆಜೆಎಂಸಿಸಿ ಕೇಂದ್ರ ಸಮಿತಿ ಕಾರ್ಯದರ್ಶಿ ಅಬ್ದುಲ್…

Read More

ಬೆಂಗಳೂರು: ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಸಿಎಂ ಆಯ್ಕೆ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಆಯ್ಕೆಯಾಗಿದ್ದು, ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಎ.ಎನ್.ಐ ಮೂಲಗಳು ತಿಳಿಸಿದೆ. ಆ ಮೂಲಕ ಸಿದ್ದರಾಮಯ್ಯ ಅವರಿಗೆ 2ನೇ ಬಾರಿಗೆ ಮುಖ್ಯಮಂತ್ರಿ ಪಟ್ಟ ಲಭಿಸಿದೆ.

Read More

ನಾಪೋಕ್ಲು ಮೇ 17 : ನಾಪೋಕ್ಲು ವಿನಲ್ಲಿ ಬುಧವಾರ ಮಧ್ಯಾಹ್ನ ಭಾರೀ ಗಾಳಿಯೊಂದಿಗೆ ಒಂದು ಇಂಚಿಗೂ ಅಧಿಕ ಮಳೆ ಸುರಿದ ಪರಿಣಾಮ ರಸ್ತೆಯಲ್ಲಿ ಮರಗಳು, ವಿದ್ಯುತ್ ಕಂಬಗಳು ಬಿದ್ದು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ನಡೆದಿದೆ.  ನಾಪೋಕ್ಲು ಪಟ್ಟಣದ ಮಾರುಕಟ್ಟೆ ಬಳಿಯ ಪೊಲೀಸ್ ಠಾಣೆಯ ಮುಂಭಾಗದ ರಸ್ತೆಯಲ್ಲಿ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಅದರಂತೆ ನಾಪೋಕ್ಲು ಭಾಗಮಂಡಲ ಮುಖ್ಯರಸ್ತೆಯ ಹಳೇತಾಲ್ಲೂಕುವಿನಲ್ಲಿ ತೆಂಗಿನ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ಸ್ಥಳೀಯ ನಿವಾಸಿ ಅಜ್ಜೇಟ್ಟಿರ ರಾಜ ಎಂಬುವವರ ಟಯರ್ ಅಂಗಡಿ ಮಳಿಗೆಯ ಮೇಲೆ ಬಿದ್ದುನಷ್ಟ ಸಂಭವಿಸಿದೆ. ಇದೇ ಮಳಿಗೆಯ ಮುಂಭಾಗದಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ಮಂಗಳೂರಿನಿಂದ ಭಾಗಮಂಡಳಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಕುಟುಂಬವೊಂದು ನಿಂತಿದ್ದ ಸಂದರ್ಭ ಟಯರ್ ಮಳಿಗೆಯ ಮೇಲೆ ತೆಂಗಿನ ಮರ ಬಿದ್ದಿದ್ದು ಕುಟುಂಬವು ಅದೃಷ್ಟವವಶಾತ್ ಅಪಾಯದಿಂದ ಪಾರಾಗಿದೆ. ಗಾಳಿ ಮಳೆಯಿಂದ ವಿವಿಧೆಡೆ ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ನಾಪೋಕ್ಲು ವ್ಯಾಪ್ತಿಯಲ್ಲಿ ವಿದ್ಯುತ್ ವ್ಯಥೆಯ ಉಂಟಾಗಿದೆ. ಎರಡು ಕಡೆಗಳಲ್ಲಿ…

Read More

ಸೋಮವಾರಪೇಟೆ ಮೇ 17 : ಸೋಮವಾರಪೇಟೆ ತಾಲ್ಲೂಕು ಕಚೇರಿ ಹಾಗೂ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ಅವರು ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಕಚೇರಿಯಲ್ಲಿದ್ದ ಸಾರ್ವಜನಿಕರನ್ನು ಮಾತನಾಡಿಸಿ, ಸಮಸ್ಯೆಗಳ ಬಗ್ಗೆ ವಿಚಾರಿಸಿದರು. ನಂತರ ಸಿಬ್ಬಂದಿಗಳಿಗೆ ಸಲಹೆ ನೀಡಿದರು. ಗ್ರಾಮೀಣ ಭಾಗದಿಂದ ಬಂದ ರೈತರು, ವಯಸ್ಕರು, ಮಹಿಳೆಯರು, ಕೂಲಿಕಾರ್ಮಿಕರ ಕೆಲಸಗಳನ್ನು ವಿಳಂಬ ಮಾಡದೆ ಮಾಡಿಕೊಡಬೇಕು ಎಂದು ಸಲಹೆ ನೀಡಿದರು. ಯುವ ನೌಕರರು ಪ್ರತಿಫಲಾಪೇಕ್ಷೆಯಿಲ್ಲದೆ ಕೆಲಸ ಮಾಡಿದರೆ, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ನಿರೀಕ್ಷಿಸಬಹುದು ಎಂದರು. ಸರ್ಕಾರಿ ಆಸ್ಪತ್ರೆಯ ಪ್ರತಿವಿಭಾಗವನ್ನು ಪರಿಶೀಲಿಸಿದರು. ರೋಗಿಗಳಿಗೆ ಹಣ್ಣುಹಂಪಲು ವಿತರಿಸಿ, ಯೋಗಕ್ಷೇಮ ವಿಚಾರಿಸಿದರು. ವೈದ್ಯರೊಂದಿಗೆ ಸಭೆ ಚರ್ಚಿಸಿದ ಶಾಸಕರು, ಆಸ್ಪತ್ರೆಗೆ ಬೇಕಾದ ಸವಲತ್ತುಗಳ ಪಟ್ಟಿಯನ್ನು ನೀಡಬೇಕೆಂದು ಆಡಳಿತ ವೈದ್ಯಾಧಿಕಾರಿಗೆ ತಿಳಿಸಿದರು. ನೂತನ ಸರ್ಕಾರ ರಚನೆಯಾದ ನಂತರ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗಳು ಇಲ್ಲಿಯೇ ಸಿಗುವಂತಾಗಬೇಕು. ಖಾಲಿಯಿರುವ ವೈದ್ಯರ ಹುದ್ದೆಗಳನ್ನು ಭರ್ತಿಗೆ ಅಧ್ಯತೆ ನೀಡಲಾಗುವುದು ಎಂದು ಹೇಳಿದರು. ಈ ಸಂದರ್ಭ ತಾಲ್ಲೂಕು ತಹಸೀಲ್ದಾರ್ ಎಸ್.ಎನ್.ನರಗುಂದ,…

Read More

ಕುಶಾಲನಗರ ಮೇ 17 : ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನಿವೃತ್ತ ಸರ್ಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆಯು ಕುಶಾಲನಗರದಲ್ಲಿ  ನಡೆಯಿತು. ಸಂಘದ ಅಧ್ಯಕ್ಷ ಸಿದ್ದಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭ ಮಾತನಾಡಿದ, ಸಿದ್ದಪ್ಪ ನಿವೃತ್ತ ನೌಕರರ ಶ್ರೇಯೋಭಿವೃದ್ಧಿಯೇ ಸಂಘದ ಉದ್ದೇಶವಾಗಿದೆ. ನಿವೃತ್ತ ನೌಕರರ ಸಂಘವು ವರ್ಷಪೂರ್ತಿ ಹಲವಾರು ರಚನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಂಡು ಕ್ರಿಯಾಶೀಲವಾಗಿ ಕೆಲಸ ಮಾಡುವ ಮೂಲಕ ಜಿಲ್ಲೆಗೆ ಮಾದರಿ ಸಂಘವಾಗಿದೆ.ಸಂಘದ ಎಲ್ಲ ಚಟುವಟಿಕೆಗಳು ಪಾರದರ್ಶಕವಾಗಿದ್ದು, ಪದಾಧಿಕಾರಿಗಳು ಪ್ರಾಮಾಣಿಕವಾಗಿ ಹಾಗೂ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿ ಸಂಘದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಆದ್ದರಿಂದ ಎಲ್ಲ ನಿವೃತ್ತ ನೌಕರರು ಸಂಘದ ಸದಸ್ಯತ್ವ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಸಂಘದ ಉಪಾಧ್ಯಕ್ಷ ಬಿ.ಸಿ.ರಾಜು ಮಾತನಾಡಿ, ಸಮಾಜಕ್ಕೆ ಹಾಗೂ ಯುವಜನತೆಗೆ ಸೂಕ್ತ ಮಾರ್ಗದರ್ಶನ ನೀಡುವುದರ ಜತೆಗೆ ತಮ್ಮ ಅನುಭವಗಳನ್ನು ಸಮಾಜದ ಅಭಿವೃದ್ಧಿಗಾಗಿ ಬಳಸಬೇಕಾಗಿದೆ ಎಂದರು. ಸಂಘದ ಕಾರ್ಯದರ್ಶಿ…

Read More