ಮಡಿಕೇರಿ ಏ.12 : ವಿಧಾನಸಭಾ ಚುನಾವಣೆ ಸಂಬಂಧ ಏಪ್ರಿಲ್ 13 ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತಿದ್ದು, ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ. ವಿಧಾನಸಭಾ ಚುನಾವಣೆ ಸಂಬಂಧ ಏಪ್ರಿಲ್ 13 ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತಿದ್ದು, ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 542 ಮತಗಟ್ಟೆಗಳಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 269 ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 273 ಮತಗಟ್ಟೆಗಳು ಇವೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. ಕೊಡಗು ಜಿಲ್ಲೆಯಲ್ಲಿ ಒಟ್ಟು 4,52,642 ಮತದಾರರಿದ್ದು, 4,51,216 ಸಾಮಾನ್ಯ ಮತದಾರರು ಮತ್ತು 1,426 ಸೇವಾ ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಅವರು ವಿವರಿಸಿದರು. ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2,30,359 ಮತದಾರರು ಇದ್ದಾರೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 2,22,283 ಮಂದಿ ಮತದಾರರಿದ್ದಾರೆ ಎಂದರು. ನಾಮಪತ್ರ ಸಲ್ಲಿಸಲು ಏಪ್ರಿಲ್, 20 ಕೊನೆಯ ದಿನವಾಗಿದೆ.…
ಲೇಖಕ: admin
ಮಡಿಕೇರಿ ಏ.12 : ಕಾಂಗ್ರೆಸ್ ಪಕ್ಷದಿಂದ ಕೊಡಗು ಜಿಲ್ಲೆಯ ವಿರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸಿರುವ ಎ.ಎಸ್.ಪೊನ್ನಣ್ಣ ಹಾಗೂ ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಡಾ.ಮಂಥರ್ ಗೌಡ ಅವರುಗಳ ಗೆಲುವಿಗಾಗಿ ಅವಿರತ ಶ್ರಮ ವಹಿಸುವುದಾಗಿ ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಇಬ್ಬರ ಗೆಲುವು ಅನಿವಾರ್ಯವಾಗಿದ್ದು, ಮತದಾರರ ಒಲವು ಈ ಉತ್ಸಾಹಿ ಅಭ್ಯರ್ಥಿಗಳ ಪರ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಯುವ ಮುಖಂಡರುಗಳ ಯೋಜನೆ ಮತ್ತು ಯೋಚನೆಗಳು ಕೊಡಗಿನ ಅಭಿವೃದ್ಧಿಗೆ ಪೂರಕವಾಗಿದೆ. ಡಾ.ಮಂತರ್ ಗೌಡ ಅವರು ಅಭಿವೃದ್ಧಿ ಪರ ಚಿಂತನೆಯ ಮೂಲಕವೇ ಜನ ಮಾನಸದಲ್ಲಿ ಹೆಸರು ಮಾಡಿದ್ದಾರೆ. ಕೊಡಗಿನಲ್ಲಿ ಪುಷ್ಪ ಹರಾಜು ಕೇಂದ್ರ ಹಾಗೂ ಪುಷ್ಪ ಸಂಸ್ಕರಣಾ ಕೇಂದ್ರ ಆರಂಭಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಇದರಿಂದ ಸ್ಥಳೀಯ ಮಹಿಳೆಯರ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ ಎಂದರು. ಸಣ್ಣ ಉದ್ಯಮಗಳ ಪ್ರೋತ್ಸಾಹಕ್ಕೆ ಕುಶಾಲನಗರದಲ್ಲಿ ಇನ್‍ಕ್ಯುಬೇಟರ್ ಸೆಂಟರ್, ಕೃಷಿ ಆಧಾರಿತ ಉದ್ಯಮ, ಆಹಾರ ಉತ್ಪನ್ನಗಳ ಕೈಗಾರಿಕೆ, ಉದ್ಯೋಗ…
ಮಡಿಕೇರಿ ಏ.12 : ಸಾಹಿತಿ ಪರದಂಡ ಚಂಗಪ್ಪ ಅವರ ಜನ್ಮದಿನಾಚರಣೆ ಪ್ರಯುಕ್ತ ಅಲ್ಲಾರಂಡ ರಂಗಚಾವಡಿ ವತಿಯಿಂದ ಸ್ಪರ್ಧಾತ್ಮಕ ಲೇಖನವನ್ನು ಆಹ್ವಾನಿಸಲಾಗಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಂಗಚಾವಡಿಯ ಸಂಸ್ಥಾಪಕ ಅಲ್ಲಾರಂಡ ವಿಠಲ ನಂಜಪ್ಪ, ಪರಂದಡ ಚಂಗಪ್ಪ ಅವರ ಸಾಧನೆಯ ನೆನಪಿಗಾಗಿ ಪ್ರತೀ ಹುಟ್ಟುಹಬ್ಬದ ದಿನದಂದು ಕೊಡಗು ಮತ್ತು ಕೊಡವ ಚರಿತ್ರೆ ಪರಂಪರೆಗಳ ಬಗ್ಗೆ ಯುವರಲ್ಲಿ ಮತ್ತು ಅಧ್ಯಕ್ಷಯಶೀಲರಿಗೆ ಉತ್ಸಾಹ ಮತ್ತು ಪ್ರೋತ್ಸಾಹ ತುಂಬುವ ನಿಟ್ಟಿನಲ್ಲಿ ಪ್ರತೀ ವರ್ಷ ಚಾರಿತ್ರಿಕ ಹಿನ್ನೆಲೆಯ ಕಾರ್ಯಕ್ರಮ, ಶಾಲಾ, ಕಾಲೇಜಿ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಹಾಗೂ ಅವರ ಪುಸ್ತಕಗಳ ವಿಮರ್ಶಾತ್ಮಕ ಬರಹಗಳು ಇತ್ಯಾದಿ ಕಾರ್ಯಕ್ರಮಗಳನ್ನು ಅಲ್ಲಾರಂಡ ರಂಗಚಾವಡಿ ಕೈಗೆತ್ತಿಕೊಂಡು ಕಾರ್ಯಪ್ರವೃತ್ತವಾಗಿದೆ ಎಂದು ಮಾಹಿತಿ ನೀಡಿದರು. ಸಾಹಿತಿ ಪರದಂಡ ಚಂಗಪ್ಪ ಅವರ ಪುಸ್ತಕಗಳ ಬಗ್ಗೆ ಕೊಡಗಿನ ಸಾಹಿತಿಗಳಿಂದ ವಿಮರ್ಶನಾ ಲೇಖನಗಳು, ನಾ ಬಲ್ಲಂತೆ ಪರದಂಡ ಚಂಗಪ್ಪ ಎಂಬ ವಿಷಯದ ಕುರಿತು ಲೇಖನ ಆಹ್ವಾನಿಸಲಾಗಿದ್ದು, ಆಸಕ್ತರು ಏ.30ರ ಒಳಗೆ vtl.coorg@gmail.com ಗೆ ಕಳುಹಿಸುವಂತೆ ತಿಳಿಸಿದರು. ಆಯ್ಕೆಯಾದ ಪ್ರತೀ ಮೂರು ಲೇಖನಗಳಿಗೆ ಪ್ರಥಮ,…
ಮಡಿಕೇರಿ ಏ.12 : ಪ್ರಾದೇಶಿಕ ಭಾಷಾ ಚಲನಚಿತ್ರಗಳಿಗೆ ಸರ್ಕಾರದಿಂದ ಕೊಡಮಾಡುವ ಸಹಾಯಧನ ಮತ್ತು ಪ್ರಶಸ್ತಿಗಳನ್ನು ಪಡೆಯುವ ಏಕಮಾತ್ರ ಉದ್ದೇಶದಿಂದ ಕೊಡವ ಭಾಷಾ ಚಲನಚಿತ್ರಗಳನ್ನು ನಿರ್ಮಿಸುವ ಕ್ರಮವನ್ನು ತೀವ್ರವಾಗಿ ಖಂಡಿಸುವುದಾಗಿ ಕೊಡವ ಭಾಷಾ ಚಲನಚಿತ್ರ ನಿರ್ದೇಶಕ ಮುಲ್ಲೇಂಗಡ ಮಧೋಶ್ ಪೂವಯ್ಯ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡವ ಭಾಷಾ ಬೆಳವಣಿಗೆಗೆ ಪೂರಕವಾಗಿ ಕೊಡವ ಭಾಷೆಯ ಚಲನಚಿತ್ರಗಳನ್ನು ನಿರ್ಮಿಸಬೇಡಿ ಎನ್ನುವುದಿಲ್ಲ. ಆದರೆ, ಇಲ್ಲಿನ ಮೂಲ ಸಂಸ್ಕೃತಿಗಳ ಅರಿವಿಲ್ಲದೆ, ಕೇವಲ ಕೊಡವ ಭಾಷೆ ಆಧರಿಸಿ ನಿರ್ಮಿಸುವ ಚಲನಚಿತ್ರಗಳು ಹೊರ ಜಗತ್ತಿಗೆ ಕೊಡವ ಸಮುದಾಯದ ಬಗ್ಗೆ ತಪ್ಪು ಭಾವನೆಗಳನ್ನು ಮೂಡಿಸುತ್ತದೆ ಎಂದು ಹೇಳಿದರು. ಪ್ರಾದೇಶಿಕ ಭಾಷಾ ಎರಡು ಚಲನಚಿತ್ರಗಳಿಗೆ ವಾರ್ಷಿಕ 18 ರಿಂದ 20 ಲಕ್ಷ ರೂ. ಸಹಾಯಧನವನ್ನು ಸರ್ಕಾರ ಒದಗಿಸುತ್ತದೆ. ಇದನ್ನು ಪಡೆಯುವ ಏಕಮಾತ್ರ ಉದ್ದೇಶದಿಂದ ಚಲನಚಿತ್ರಗಳನ್ನು ನಿರ್ಮಿಸುವುದು ಮತ್ತು ಪ್ರಶಸ್ತಿಗಾಗಿ ಲಾಬಿ ನಡೆಸುವ ಪಕ್ರಿಯೆಗಳು ಇಂದು ನಡೆಯುತ್ತಿದೆ. ಇಂತಹ ಚಿತ್ರಗಳು ಸೆನ್ಸಾರ್ ಮಂಡಳಿಯ ಮುಂದೆ ಬಂದಾಗ ಅದು ಯೋಗ್ಯವೇ ಅಲ್ಲವೇ ಎಂದಬುದನ್ನು ನಿರ್ಧರಿಸಲು ಕೊಡವ…
ಸುಂಟಿಕೊಪ್ಪ ಏ.12 : ರಕ್ತಕ್ಕೆ ಪರ್ಯಯವಾಗಿ ಯಾವುದು ಇಲ್ಲ. ರಕ್ತದಾನದಿಂದ ಆರೋಗ್ಯ ಮತ್ತು ಜೀವನವನ್ನು ಉಳಿಸಿಕೊಳ್ಳಬಹುದು. ಆದ್ದರಿಂದ ಪ್ರತಿಯೊಬ್ಬರು ಮೂರು ತಿಂಗಳಿಗೊಮ್ಮೆ ರಕ್ತದಾನದಂತ ಪವಿತ್ರ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಇಂಡಿಯನ್ ರೆಡ್ ಕ್ರಾಸ್ ಸಭಾಪತಿ ರವೀಂದ್ರ ರೈ ಮನವಿ ಮಾಡಿದರು. ಸುಂಟಿಕೊಪ್ಪ ಗುಂಡುಗುಟ್ಟಿ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಕೊಡಗು ಯೂತ್ ರೆಡ್ ಕ್ರಾಸ್, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆ, ಮಡಿಕೇರಿ ರಕ್ತ ನಿಧಿ ಸಂಯುಕ್ತಾಶ್ರಯದಲ್ಲಿ ಮಡಿಕೇರಿ ವಿವೇಕ ಜಾಗೃತ ಬಳಗ, ಉಡುಪಿ (ಡಿವೈನ್ ಪಾರ್ಕ್ ಟ್ರಸ್ಟ್) ನ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದು, ರಕ್ತಕ್ಕೆ ಹೆಚ್ಚು ಬೇಡಿಕೆ ಇದೆ. ಕೆಲವು ಸಂದರ್ಭಗಳಲ್ಲಿ ಓರ್ವ ರೋಗಿಗೆ 8 ರಿಂದ 10 ಲೀಟರ್ ರಕ್ತ ಬೇಕಾಗುತ್ತದೆ. ಇದು ರಕ್ತದಾನದ ಅವಶ್ಯಕತೆಯನ್ನು ಎತ್ತಿ ತೋರಿಸಿದೆ ಎಂದು ಹೇಳಿದರು. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು…
ಮಡಿಕೇರಿ ಏ.12 : ಕುದುಕುಳಿ ಐನ್ ಮನೆ ಕ್ರಿಕೆಟ್ ಕಪ್ ನ ಮೊದಲನೇ ಸುತ್ತಿನ ಪಂದ್ಯದಲ್ಲಿ ಕಟ್ಟೆಕೋಡಿ ತಂಡದ ವಿರುದ್ಧ ತೊತ್ತಿಯನ ತಂಡ 6 ವಿಕೆಟ್‍ಗಳ ಗೆಲುವು ಸಾಧಿಸಿದರೆ, ಎರಡನೇ ಪಂದ್ಯದಲ್ಲಿ ನೇಯ್ಯಣಿರ ತಂಡ ಆಗಮಿಸಿದ ಕಾರಣದಿಂದ ಕುಲ್ಲಚೆಟ್ಟಿ ತಂಡ ಗೆಲುವು ಸಾಧಿಸಿತು. ಮೂರನೇ ಪಂದ್ಯದಲ್ಲಿ ಕೇಕಡ ತಂಡ ಆಗಮಿಸಿದ ಕಾರಣ ವಾಡಿಯಪ್ಪನ ತಂಡ ಜಯ ಸಾಧಿಸಿದರೆ ನಾಲ್ಕನೇ ಪಂದ್ಯದಲ್ಲಿ ಕೆದಂಬಾಡಿ ತಂಡ ಪೋಡೋನೊಳನ ತಂಡದ ವಿರುದ್ಧ 7 ವಿಕೆಟ್ ಗಳ ಜಯ ಸಾಧಿಸಿತು. ಎರಡನೇ ಸುತ್ತಿನ ಮೊದಲ ಪಂದ್ಯದಲ್ಲಿ ಪರ್ಲಕೋಟಿ ತಂಡ ವಾಡಿಯಪ್ಪನ ತಂಡದ ವಿರುದ್ಧ 31 ರನ್ ಗಳ ಜಯ ಸಾಧಿಸಿದರೆ ಎರಡನೇ ಪಂದ್ಯದಲ್ಲಿ ಕೆದಂಬಾಡಿ ತಂಡ ತೊತ್ತಿಯನ ತಂಡದ ವಿರುದ್ಧ 14 ರನ್ ಗಳ ಜಯ ಸಾಧಿಸಿ ಕ್ವಾಟರ್ ಫೈನಲ್ ಹಂತಕ್ಕೆ ಲಗ್ಗೆ ಇಟ್ಟಿತು. ಕುಲ್ಲಚೆಟ್ಟಿ ತಂಡದ ವಿರುದ್ಧ ಪರ್ಲಕೋಟಿ ತಂಡ 43 ರನ್ ಗಳ ಗೆಲುವು ಸಾಧಿಸಿ ಕ್ವಾಟರ್ ಫೈನಲ್ ಗೆ ಲಗ್ಗೆ ಇಟ್ಟಿತು. ಕೆದಂಬಾಡಿ…
ಮಡಿಕೇರಿ ಏ.12 : ವಿಧಾನಸಭಾ ಚುನಾವಣೆ ಹಿನ್ನೆಲೆ ಕೊಡಗು ಜಿಲ್ಲಾ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಚುನಾವಣಾ ಸಂಘಟನೆಯ ಮಹಿಳಾ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಅಖಿಲ ಭಾರತ ಮಹಿಳಾ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷರಾದ ನೆಟ್ಟಾ ಡಿಸೋಜಾ ಅವರ ಆದೇಶದ ಮೇರೆಗೆ ಮಡಿಕೇರಿ ಕ್ಷೇತ್ರದ ಚುನಾವಣಾ ಸಂಘಟನೆಯ ಉಸ್ತುವಾರಿಗಳಾಗಿ ಎಂ.ಬಿ.ಸುನೀತಾ ಹಾಗೂ ಫಿಲೋಮಿನಾ ಅವರನ್ನು ನೇಮಕಗೊಳಿಸಲಾಗಿದೆ. ವಿರಾಜಪೇಟೆ ಕ್ಷೇತ್ರಕ್ಕೆ ಕಾರ್ತಂಡ ಶೈಲಾ ಕುಟ್ಟಪ್ಪ ಹಾಗೂ ಬಿದ್ದಾಂಡ ಸುಮಿತ ಮಾದಪ್ಪ ಅವರನ್ನು ನೇಮಕಗೊಳಿಸಿ, ಪಕ್ಷದ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುವಂತೆ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್‍ನ ರಾಜ್ಯಾಧ್ಯಕ್ಷೆ ಡಾ.ಬಿ.ಪುಷ್ಪ ಅಮರನಾಥ್ ತಿಳಿಸಿದ್ದಾರೆ ಎಂದು ಸುರಯ್ಯ ಅಬ್ರಾರ್ ತಿಳಿಸಿದ್ದಾರೆ.
ಮಡಿಕೇರಿ ಏ.12 : ಪವಿತ್ರ ರಂಝಾನ್ (ರಮಳಾನ್) ತಿಂಗಳ ಅಂಗವಾಗಿ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್ ಹಾಗೂ ಎಸ್ ಎಸ್ ಎಫ್ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್ ಝಿಕ್ರ್ ಮಜ್ಲಿಸ್ ಮತ್ತು ಇಫ್ತಾರ್ ಸಂಗಮ ನಡೆಯಿತು. ಕುಂಜಿಲ ಪೈನರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮುಖರಾದ ಅಬ್ದುಲ್ ರಶೀದ್ ದಾರಿಮಿ, ಮುನೀರ್ ಮಳ್ಹರಿ, ಮಹಮದ್ ಹಾಜಿ, ಮುಂತಾದ ಗಣ್ಯರು ಸೇರಿದಂತೆ, ಸಾರ್ವಜನಿಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ 2021-22ರ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಕುಂಜಿಲ ರೌಲತುಲ್ ಉಲೂಮ್ ಮದ್ರಸ ವಿದ್ಯಾರ್ಥಿನಿ ಫರೀದ ಎಮ್ ಎಸ್ ಹಾಗೂ ಮದ್ರಸ ಸದರ್ ಹಾಗೂ ಶಿಕ್ಷಕಿ ಅಬ್ದುಲ್ಲ ಸಖಾಫಿ ಉಸ್ತಾದರನ್ನು ಗೌರವಿಸಲಾಯಿತು.
ಮಡಿಕೇರಿ ಏ.12 : ಪ್ರಾದೇಶಿಕ ಭಾಷಾ ಚಲನಚಿತ್ರಗಳಿಗೆ ಸರ್ಕಾರದಿಂದ ಕೊಡಮಾಡುವ ಸಹಾಯಧನ ಮತ್ತು ಪ್ರಶಸ್ತಿಗಳನ್ನು ಪಡೆಯುವ ಏಕಮಾತ್ರ ಉದ್ದೇಶದಿಂದ ಕೊಡವ ಭಾಷಾ ಚಲನಚಿತ್ರಗಳನ್ನು ನಿರ್ಮಿಸುವ ಕ್ರಮವನ್ನು ತೀವ್ರವಾಗಿ ಖಂಡಿಸುವುದಾಗಿ ಕೊಡವ ಭಾಷಾ ಚಲನಚಿತ್ರ ನಿರ್ದೇಶಕ ಮುಲ್ಲೇಂಗಡ ಮಧೋಶ್ ಪೂವಯ್ಯ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡವ ಭಾಷಾ ಬೆಳವಣಿಗೆಗೆ ಪೂರಕವಾಗಿ ಕೊಡವ ಭಾಷೆಯ ಚಲನಚಿತ್ರಗಳನ್ನು ನಿರ್ಮಿಸಬೇಡಿ ಎನ್ನುವುದಿಲ್ಲ. ಆದರೆ, ಇಲ್ಲಿನ ಮೂಲ ಸಂಸ್ಕೃತಿಗಳ ಅರಿವಿಲ್ಲದೆ, ಕೇವಲ ಕೊಡವ ಭಾಷೆ ಆಧರಿಸಿ ನಿರ್ಮಿಸುವ ಚಲನ ಚಿತ್ರಗಳು ಹೊರ ಜಗತ್ತಿಗೆ ಕೊಡವ ಸಮುದಾಯದ ಬಗ್ಗೆ ತಪ್ಪು ಭಾವನೆಗಳನ್ನು ಮೂಡಿಸುತ್ತದೆಂದು ತೀಕ್ಷ್ಣವಾಗಿ ನುಡಿದರು. ಪ್ರದೇಶಿಕ ಭಾಷಾ ಎರಡು ಚಲನಚಿತ್ರಗಳಿಗೆ ವಾರ್ಷಿಕ 18 ರಿಂದ 20 ಲಕ್ಷ ರೂ. ಸಹಾಯಧನವನ್ನು ಸರ್ಕಾರ ಒದಗಿಸುತ್ತದೆ. ಇದನ್ನು ಪಡೆಯುವ ಏಕಮಾತ್ರ ಉದ್ದೇಶದಿಂದ ಚಲನಚಿತ್ರಗಳನ್ನು ನಿರ್ಮಿಸುವುದು ಮತ್ತು ಪ್ರಶಸ್ತಿಗಾಗಿ ಲಾಬಿ ನಡೆಸುವ ಪಕ್ರಿಯೆಗಳು ಇಂದು ನಡೆಯುತ್ತಿದೆ. ಇಂತಹ ಚಿತ್ರಗಳು ಸೆನ್ಸಾರ್ ಮಂಡಳಿಯ ಮುಂದೆ ಬಂದಾಗ ಅದು ಯೋಗ್ಯವೇ ಅಲ್ಲವೇ ಎಂದಬುದನ್ನು ನಿರ್ಧರಿಸಲು…
ಮಡಿಕೇರಿ ಏ.12 : ಚೆಟ್ಟಳ್ಳಿಯ ಶ್ರೀಮಂಗಲ (ಪೊವ್ವೊದಿ ) ಭಗವತಿ ಉತ್ಸವವು ಏ.14 ಮತ್ತು 15 ರಂದು ನಡೆಯಲಿದೆ. ಏ. 11 ರಂದು ರಾತ್ರಿ ತಕ್ಕಮುಖ್ಯಸ್ಥರ ಸಮ್ಮುಖದಲ್ಲಿ ಶುದ್ದಕಳಸ ಪೂಜೆ ಸಲ್ಲಿಸಿ ಬೊಳಕ್ ಮರವನ್ನಿಟ್ಟು ಹಬ್ಬಕಟ್ಟು ಹಾಕಲಾಯಿತು. ಏ.14 ರಂದು ಪಟ್ಟಣಿಹಬ್ಬ, ಮಧ್ಯಾಹ್ನ 2 ಗಂಟೆಗೆ ದೇವಾಲಯ ತಕ್ಕರಾದ ಮುಳ್ಳಂಡ ಐನ್ ಮನೆಯಿಂದ ಎತ್ತು ಪೋರಾಟದೊಂದಿಗೆ ದೇವರ ಭಂಡಾರವನ್ನು ತರುವುದು. ಏ.15 ರಂದು ದೊಡ್ದಹಬ್ಬವಾಗಿದ್ದು ದೇವರ ಭಂಡಾರವನ್ನು ದೇವಾಲಯಕ್ಕೆ ತರಲಾಗುವುದು. ನಂತರ ವಿಶೇಷ ಪೂಜೆ, ತೆಂಗಿಕಾಯಿ ಎಳೆಯುವುದು, ತೆಂಗಿನ ಕಾಯಿಗೆ ಗುಂಡು ಹೊಡೆಯುವುದು, ಬೊಳಕ್ ಮರವನ್ನು ದೇವಾಲಯಕ್ಕೆ ಇಡಲಾಗುವುದು. ನಂತರ ಪ್ರಸಾದ ವಿತರಣೆ ನೆರವೇರಲಿದೆ. ಏ.16 ರಂದು ಪೂರ್ವಾಹ್ನ 7 ಗಂಟೆಗೆ ಶುದ್ದ ಕಳಸ ಪೂಜೆ ನೆವೇರಿಸಿ, ದೇವರ ಭಂಡಾರವನ್ನು ತಕ್ಕರಾದ ಮುಳ್ಳಂಡ ಐನ್ ಮನೆಯಲ್ಲಿ ಒಪ್ಪಿಸಲಾಗುವುದು.






