ಲೇಖಕ: admin

ಮಡಿಕೇರಿ ಮೇ.15 :  ತೋಟಗಾರಿಕೆ ಇಲಾಖೆ ಅಧೀನದ ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ ರೈತ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಯು 2023 ಜೂನ್, 01 ರಿಂದ 2024 ರ ಮಾರ್ಚ್, 30 ರವರೆಗೆ ಹಾಸನ ಜಿಲ್ಲೆಯ ಸೋಮನಹಳ್ಳಿ ಕಾವಲ್ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ನಡೆಯಲಿದ್ದು, ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಭರ್ತಿ ಮಾಡಿದ ಅರ್ಜಿಯನ್ನು ಮೇ, 22 ರ ಸಂಜೆ 5.30 ಗಂಟೆಯೊಳಗೆ ಸಲ್ಲಿಸಬೇಕು. ಅರ್ಜಿಯನ್ನು ಈ ಕಚೇರಿಯಿಂದ ಪಡೆಯಬಹುದು. ಹೆಚ್ಚಿನ ವಿವರವನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ(ರಾ.ವ), ಮಡಿಕೇರಿ ಕೊಡಗು ಜಿಲ್ಲೆ ಕಚೇರಿಯನ್ನು ಬೆಳಗ್ಗೆ 10 ರಿಂದ ಸಂಜೆ 5.30 ರೊಳಗೆ ಅಥವಾ ದೂ.ಸಂ. 8310687707/ ಅಂತರ್ಜಾಲ www.horticulture.kar.nic.in ನಲ್ಲಿ ಪಡೆಯಬಹುದು. ಮೂಲ ಅಗತ್ಯ ದಾಖಲಾತಿಗಳೊಡನೆ(ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ಛಾಪಾಕಾಗದ, ತಂದೆ/ತಾಯಿ/ಪೋಷಕರ ಹೆಸರಿನಲ್ಲಿರುವ ಜಮೀನಿನ ಆರ್‍ಟಿಸಿ, ಜಾತಿ ಪ್ರಮಾಣ ಪತ್ರ, ಫೋಟೋ, ತಂದೆ/ ತಾಯಿಯವರ ಒಪ್ಪಿಗೆ ಪತ್ರ ಮತ್ತಿತರ) ಅರ್ಹ ಅಭ್ಯರ್ಥಿಗಳು ನಿಗಧಿತ ಸಮಯದೊಳಗೆ ಅರ್ಜಿಯನ್ನು ಮಡಿಕೇರಿಯ…

Read More

ಮಡಿಕೇರಿ ಮೇ 15 : ಕೊಡಗು ಜಿಲ್ಲೆಯಿಂದ ಬೆಂಗಳೂರಿಗೆ ವರ್ಗಾವಣೆಗೊಂಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಭೃಂಗೇಶ್ ಅವರಿಗೆ ಮಡಿಕೇರಿ ವಕೀಲರ ಸಂಘದ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಕೆ.ಡಿ.ದಯಾನಂದ ನ್ಯಾಯಾಧೀಶರ ಸೇವೆಯನ್ನು ಸ್ಮರಿಸಿ ಶುಭ ಹಾರೈಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಭೃಂಗೇಶ್, ಕೋರ್ಟ್ ಕಲಾಪ ನಡೆಸುವಲ್ಲಿ ವಕೀಲರ ಪಾತ್ರ ಮಹತ್ವದು. ಮಡಿಕೇರಿಯ ವಕೀಲರು ಕಕ್ಷಿದಾರರಿಗೆ ನ್ಯಾಯ ಒದಗಿಸುವಲ್ಲಿ ಸಹಕಾರ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು. ಸಮಾರಂಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್, ಅಪರ ಸಿವಿಲ್ ನ್ಯಾಯಾಧೀಶ ಎನ್.ಎ.ನಾಗೇಶ್, ಸಂಘದ ಖಜಾಂಚಿ ಬಿ.ಸಿ.ದೇವಿಪ್ರಸಾದ್, ಜಂಟಿ ಕಾರ್ಯದರ್ಶಿ ಎಂ.ವಿ.ಸಂಜಯ್ ರಾಜ್, ಪದಾಧಿಕಾರಿಗಳಾದ ಭಾನುಪ್ರಕಾಶ್, ಡಿ.ಕೆ.ರಾಜೇಶ್, ಡಿ.ಎನ್.ಡೊಮಿನಿಕ್, ದಿವ್ಯಾ ನಂಜಪ್ಪ, ತಾಹ ಯಾಸೀನ್, ಪಿ.ಆರ್.ಚಂದನ್, ಲತಾಕುಮಾರಿ ಹಾಗೂ ಸಂಘದ ಸದಸ್ಯರು ಹಾಜರಿದ್ದರು. ಸಂಘದ ಕಾರ್ಯದರ್ಶಿ ಎಂ.ಕೆ.ಅರುಣ ಕುಮಾರ್…

Read More

ವಿರಾಜಪೇಟೆ ಮೇ 15 : ವಿರಾಜಪೇಟೆಯ ಮೀನುಪೇಟೆಯ ಕಂಚಿ ಕಾಮಾಕ್ಷಿ ಅಮ್ಮನವರ ದೇವಾಲಯದ ವತಿಯಿಂದ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಕಂಚಿ ಕಾಮಾಕ್ಷಿ ಅಮ್ಮನವರ ಕರಗೋತ್ಸವ ಹಾಗೂ ಮಹಾಪೂಜೆ ಮೆ 16 ರಿಂದ 19 ರವರೆಗೆ ನಡೆಯಲಿದೆ. ಕರಗೋತ್ಸವದ ಪ್ರಯುಕ್ತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

Read More

ಮಡಿಕೇರಿ ಮೇ 15 : ಕರ್ನಾಟಕ ರಾಜ್ಯ ವಿಧಾನಸಭಾ ಸದಸ್ಯರಾಗಿ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಡಾ.ಮಂಥರ್ ಗೌಡ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಎ.ಎಸ್.ಪೊನ್ನಣ್ಣ ಅವರಿಗೆ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ ಅಭಿನಂದನೆ ಸಲ್ಲಿಸಿದರು. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಬಾರಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಕೊಡಗು ಜಿಲ್ಲೆಯ ಜನರಿಗೆ ವಿಶ್ವಾಸ ಮೂಡಿಸಿದ್ದು, ಅದರಂತೆ ಗೆಲುವು ಸಾಧಿಸಿದ್ದು, ಇಬ್ಬರು ಶಾಸಕರು ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುವಂತೆ ಮನವಿ ಮಾಡಿದರು. ಕೊಡಗು ಜಿಲ್ಲೆಯಲ್ಲಿ ಪ್ರಾಮಾಣಿಕ ರಾಜಕೀಯಕ್ಕೆ ಎಎಪಿ ಅಭ್ಯರ್ಥಿಗಳಿಗೆ ಬೆಂಬಲಿಸಿದ ಎಲ್ಲಾ ಮತದಾರರು, ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಎಎಪಿ ಪಕ್ಷಕ್ಕೆ ನೂರು ಪಟ್ಟು ಬೆಂಬಲ ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಪಕ್ಷದ ಜಿಲ್ಲೆಯಲ್ಲಿ ಸಂಘಟನಾ ಕೆಲಸವನ್ನು ಮುಂದುವರಿಯಲಿದೆ ಎಂದರು.

Read More

ಮಡಿಕೇರಿ ಮೇ 15 :  ಸಾಮಾಜಿಕ ಜಾಲತಾಣಗಳಲ್ಲಿ ಆಧಾರ ರಹಿತ ಸುದ್ಧಿಗಳನ್ನು ಹರಡಿ ಸಾರ್ವಜನಿಕರಲ್ಲಿ ದ್ವೇಷ ಭಾವನೆಯನ್ನುಂಟುಮಾಡಿ ಸಮಾಜದ ಸ್ವಾಸ್ಥ್ಯವನ್ನು ಕದಡುವಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಕೆ.ರಾಮರಾಜನ್ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಈ ಸಂಬಂಧ ಜಿಲ್ಲೆಯಲ್ಲಿ ಒಟ್ಟು 13 ಪ್ರಕರಣಗಳನ್ನು ದಾಖಲಿಸಿ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಆದ್ದರಿಂದ ಸಾರ್ವಜನಿಕರು ಇಂತಹ ಘಟನೆಗಳಿಗೆ ಆಸ್ಪದ ನೀಡದಂತೆ ಮನವಿ ಮಾಡಿದ್ದಾರೆ.

Read More

ನಾಪೋಕ್ಲು ಮೇ 15 : ಬಲ್ಲಮಾವಟಿ ಗ್ರಾಮದ ಬಜರಂಗಿ ಯೂತ್ ಕ್ಲಬ್ ವತಿಯಿಂದ ಗ್ರಾಮದ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಗ್ರಾ.ಪಂ ಸದಸ್ಯ ಚೋಕಿರ ಬಾಬಿ ಭೀಮಯ್ಯ ಚಾಲನೆ ನೀಡಿದರು. ಪಂದ್ಯಗಳಲ್ಲಿ ಕೆ-12 ವಾರಿಯರ್ಸ್ ಕೊಡಗು ಹಾಗೂ ಶರತ್ ಫ್ರೆಂಡ್ಸ್ ದೊಡ್ಡಪುಲಿಕೋಟು ತಂಡಗಳು ಸೆಮಿಫೈನಲ್ ಪ್ರವೇಶಿಸಿದವು. ಉಳಿದಂತೆ ಶ್ರೀ ಕೃಷ್ಣ ಫ್ರೆಂಡ್ಸ್ ತಂಡದ ವಿರುದ್ಧ ಮಾರುತಿ ಯೂಥ್ ಕ್ಲಬ್, ಗ್ರೀನ್ ಪೋರ್ಟ್ ತಂಡದ ವಿರುದ್ಧ ಅಪೊಲೊ ಯೂಥ್ ಕ್ಲಬ್ ಬಲ್ಲಮಾವಟಿ, ಅಫಿಶಿಯಲ್ಸ್ ನಾಲ್ಕುನಾಡು ತಂಡದ ವಿರುದ್ಧ ಟೀಮ್ ಪಾಲೂರು, ಹಬೀಬ ಕ್ರಿಕೆಟರ್ಸ್ ವಿರುದ್ಧ ದೊಡ್ಡ ಪುಲಿಕೋಟಿವಿನ ಶರತ್ ಫ್ರೆಂಡ್ಸ್, ಕೀರ್ತಾಜೆ ವಾರಿಯರ್ಸ್ ವಿರುದ್ಧ ಟೀಮ್ ನೆಲಜಿ ಮಕ್ಕ, ಟೀಂ ಫೇಮಸ್ ವಿರುದ್ಧ ಕೆ-12 ವಾರಿಯರ್ಸ್ ಕೊಡಗು, ವೀಕೆಂಡ್ ವಾರಿಯರ್ಸ್ ವಿರುದ್ಧ ಬ್ಯಾಕ್ ಮಾಂಬಾ ಹಾಗೂ ಬ್ಲಾಕ್ ಕ್ಯಾಪ್ಸ್ ವಿರುದ್ಧ ಎಮ್ಮೆಮಾಡು ತಂಡಗಳು ಗೆಲುವು ಸಾಧಿಸಿದವು. ಟೂರ್ನಿಯಲ್ಲಿ 36 ತಂಡಗಳು ಪಾಲ್ಗೊಂಡಿವೆ. ಈ ಸಂದರ್ಭ ಗ್ರಾ.ಪಂ…

Read More

ಮಡಿಕೇರಿ ಮೇ 15 : ಅಲ್ಲಾರಂಡ ರಂಗಚಾವಡಿ ವತಿಯಿಂದ ಮೇ 17 ರಂದು ಪರದಂಡ ಚಂಗಪ್ಪ ಅವರ 105ನೇ ಸಂಸ್ಮರಣಾ ದಿನವನ್ನು ಆಚರಿಸಲಾಗುವುದೆಂದು ರಂಗಚಾವಡಿ ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ನಗರದ ಭಾರತೀಯ ವಿದ್ಯಾಭವನದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಬೆಂಗಳೂರಿನ ಓಶಿಯಾನಿಕ್ ಕಾಲೇಜ್ ಆಫ್ ಹೈಯರ್ ಎಜುಕೇಶನ್‍ನ ಚೇರ್‍ಮೆನ್ ಡಾ.ತೇಜ್ ಪೂವಯ್ಯ ನಡಿಕೇರಿಯಂಡ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸುಳ್ಯ ಕೆವಿಜಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಮೋಹನ್ ಅಪ್ಪಾಜಿ ಕೋಲೆಯಂಡ ವಹಿಸಲಿದ್ದಾರೆ. ಅತಿಥಿಗಳಾಗಿ ಬೆಂಗಳೂರಿನ ಸಂತ ಜೋಸೆಫರ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರು ಡಾ.ಪರದಂಡ ಸುನಿಲ್ ಸೋಮಯ್ಯ, ಮೈಸೂರು ವಿಶ್ವವಿದ್ಯಾಲಯ ಚರಿತ್ರೆ ವಿಭಾಗದ ಡಾ.ರಾಧಿಕ ಕುಟ್ಟಪ್ಪ ಬೋಡ್‍ಕುಟ್ಟಡ, ಪರದಂಡ ಕುಟುಂಬಸ್ಥರಾದ ಪರದಂಡ ಅಪ್ಪಸ್ವಾಮಿ ಪಾಲ್ಗೊಳ್ಳಲಿದ್ದು, ಜಾನಪದ ಕಲಾವಿದ ಕುಡಿಯರ ಮುತ್ತಪ್ಪ ಮುತ್ತ್‍ನಾಡ್‍ಮಲೆ “ನಾಕಂಡಂತೆ ಪರದಂಡ ಚಂಗಪ್ಪ” ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಜನಪದ ರಾಜ್ಯ ಪ್ರಶಸ್ತಿ ಪುರಸ್ಕೃತರಾದ  ಕಬ್ಬೆಮಲೆ ಶಾರದ ಸೋಮಯ್ಯ…

Read More

ಮಡಿಕೇರಿ ಮೇ 15 : ಅಂಭಾಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘ ಹಾಗೂ ಕೊಡಗು ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಆಯೋಜಿಸಿದ್ದ ಎಂಪಿಎಲ್ (ಮರಾಠಿ ಪ್ರೀಮಿಯರ್ ಲೀಗ್) ಪ್ರಥಮ ಆವೃತಿಯ ಚಾಂಪಿಯನ್ ತಂಡವಾಗಿ ಮರಾಠಿ ರಾಯಲ್ಸ್ ಕೊಡಗು ತಂಡ ಹೊರಹೊಮ್ಮಿತ್ತು. ಫೈನಲ್ ಪಂದ್ಯದಲ್ಲಿ ಟಾಸ್ ಸೋತ ರಾಯಲ್ಸ್ ಫ್ರೆಂಡ್ಸ್ ಕರಿಕೆ ತಂಡ ನಿಗದಿತ 4 ಓವರ್‍ನಲ್ಲಿ 4 ವಿಕೆಟ್ ಕಳೆದುಕೊಂಡು 32 ರನ್‍ಕಲೆ ಹಾಕಿತ್ತು. ಗುರಿ ಬೆನ್ನಟ್ಟಿದ ಮರಾಠಿ ರಾಯಲ್ಸ್ ಕೊಡಗು ತಂಡ 2.5 ಓವರ್‍ನಲ್ಲಿ 1 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ಪರಿಣಾಮ ರಾಯಲ್ಸ್ ಫ್ರೆಂಡ್ಸ್ ಕರಿಕೆ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದಕ್ಕೂ ಮೊದಲು ನಡೆದ ಮೊದಲ ಕ್ವಾಲಿಫೈಯರ್‍ನಲ್ಲಿ ಟಾಸ್ ಸೋತ ರಾಯಲ್ ಫ್ರೆಂಡ್ಸ್ ಕರಿಕೆ ತಂಡ ನಿಗದಿತ 4 ಓವರ್‍ನಲ್ಲಿ 7 ವಿಕೆಟ್ ಕಳೆದುಕೊಂಡು 20 ರನ್ ಕಲೆ ಹಾಕಿತು. ಅಲ್ಪಮೊತ್ತವನ್ನು ಬೆನ್ನಟ್ಟಿದ ಮರಾಠಿ…

Read More

ನಾಪೋಕ್ಲು ಮೇ 15 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್.ಪೊನ್ನಣ್ಣ ಗೆಲುವಿನ ಹಿನ್ನಲೆ ನಾಪೋಕ್ಲು ಪಟ್ಟಣ ಸೇರಿದಂತೆ ವಿವಿಧೆಡೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ನಾಪೋಕ್ಲು ಪಟ್ಟಣದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ ಕಾಂಗ್ರೆಸ್ ಕಾರ್ಯಕರ್ತರು ಪೊನ್ನಣ್ಣಪರ ಜಯ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಅದರಂತೆ ನಾಪೋಕ್ಲು ವ್ಯಾಪ್ತಿಯ ಎಮ್ಮೆಮಾಡು, ಕೊಳಕೇರಿ ಸೇರಿದಂತೆ ವಿವಿಧೆಡೆಗಳಲ್ಲಿ ಪೊನ್ನಣ್ಣ ಅವರ ಗೆಲುವನ್ನು ಕಾರ್ಯಕರ್ತರು ಸಂಭ್ರಮಿಸಿದರು. ಈ ಸಂದರ್ಭ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಡಿಸಿಸಿ ಉಪಾಧ್ಯಕ್ಷ ಎಂ.ಎಚ್. ಅಬ್ದುಲ್ ರೆಹಮಾನ್ , ಕಳೆದ 20 ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾಗಿದ್ದ ಕೊಡಗಿನ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಎರಡು ವಿದ್ಯಾವಂತ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಆಯ್ಕೆಯಾಗಿದ್ದಾರೆ. ಇವರು ಎಲ್ಲಾ ಜನಾಂಗದವರನ್ನು ಸಮಾನತೆಯಿಂದ ಕಾಣುವ ವ್ಯಕ್ತಿಗಳಾಗಿದ್ದು. ಮುಂದೆ ಇವರು ಕ್ಷೇತ್ರದ ಸರ್ವತ್ತೋಮುಖ ಅಭಿವೃದ್ಧಿಗೆ ಶ್ರಮಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲಾ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಸಣ್ಣುವಂಡ ಡಾ.ಕಾವೇರಪ್ಪ ಮಾತನಾಡಿ, ರಾಜ್ಯ ವಿಧಾನ…

Read More

ಸಿದ್ದಾಪುರ  ಮೇ 15 :   ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ಡಾ. ಮಂತರ್ ಗೌಡ ಪರವಾಗಿ ನೆಲ್ಯಹುದಿಕೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಮೆರವಣಿಗೆ ನಡೆಸುವುದರ ಮೂಲಕ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ನೆಲ್ಯಹುದಿಕೇರಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮಂತರ್ ಗೌಡ ಪರ ಜಯ ಘೋಷಗಳನ್ನು ಕೂಗಿ ಮತದಾರರಿಗೆ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ವಲಯ ಕಾಂಗ್ರೆಸ್ ಅಧ್ಯಕ್ಷ ಸಾಬು ವರ್ಗೀಸ್ ನೇತೃತ್ವದಲ್ಲಿ ನಡೆದ ವಿಜಯೋತ್ಸವದಲ್ಲಿ ಗ್ರಾ.ಪಂ ಅಧ್ಯಕ್ಷ ಎ.ಕೆ ಹಕೀಂ, ಜಿ.ಪಂ  ಮಾಜಿ ಸದಸ್ಯ ಸುನಿತಾ ಮಂಜುನಾಥ್, ಕಾಂಗ್ರೆಸ್ ಜಿಲ್ಲಾ ಸಮಿತಿ ಮುಖಂಡರುಗಳಾದ ಜೋಸೆಫ್ ಶ್ಯಾಮ್, ಕೆ ಎಂ ಬಶೀರ್, ಕೆ.ಎಂ.ಬಾವ, ವಲಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹನೀಫ, ಯುವ ಕಾಂಗ್ರೆಸ್ ಅಧ್ಯಕ್ಷ ಶಿಹಾಬ್ ಸೇರಿದಂತೆ ಗ್ರಾ.ಪಂ ಸದಸ್ಯರುಗಳು, ಕಾಂಗ್ರೆಸ್ ಬೂತ್ ಮಟ್ಟದ ಕಾರ್ಯಕರ್ತರು, ವಲಯ ಸಮಿತಿ ಸದಸ್ಯರು ಹಾಗೂ ಸ್ಥಳೀಯರು ಹಾಜರಿದ್ದರು.

Read More