ಮಡಿಕೇರಿ ಏ.12 : ಕಳೆದ ಹಲವಾರು ವರ್ಷಗಳಲ್ಲಿ ಬಾಹ್ಯಾಕಾಶದಲ್ಲಿ ದೇಶ ಮಾಡಿದ ಸಾಧನೆಗಳನ್ನು ಪ್ರದರ್ಶಿಸಲು ಮತ್ತು ಮಕ್ಕಳಲ್ಲಿ ಬಾಹ್ಯಾಕಾಶದ ಹೆಚ್ಚಿನ ಆಸಕ್ತಿ ಬೆಳೆಸಲು ಏ.18 ರಂದು ಪೊನ್ನಂಪೇಟೆಯಲ್ಲಿ ಉಡಾವಣಾ ವಾಹನಗಳು, ಉಪಗ್ರಹಗಳು ಇತ್ಯಾದಿಗಳ ಮಾದರಿಗಳನ್ನು ಸಾಗಿಸುವ ’ಸ್ಪೇಸ್ ಆನ್ವೀಲ್ಸ್’ ಪ್ರದರ್ಶನ ನಡೆಯಲಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಪ್ರಾಶುಂಪಾಲ ಡಾ.ಎಂ.ಬಸವರಾಜು ಹಾಗೂ ಪಿಯು ಕಾಲೇಜಿನ ಪ್ರಾಂಶುಪಾಲೆ ಡಾ.ರೋಹಿಣಿ, ಭಾರತೀಯ ಬಾಹ್ಯಾಕಾಶಸಂಸ್ಥೆ, ಕೂರ್ಗ್‌ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಕೂರ್ಗ್‌ಇನ್ಸ್ಟಿಟ್ಯೂಟ್ ಆಫ್ ಯೂನಿವರ್ಸಿಟಿಯ ಸಹಯೋಗದೊಂದಿಗೆ ಕೂರ್ಗ್‌ಇನ್ಸ್ಟಿಟ್ಯೂಟ್ ಆಫ್ಟೆಕ್ನಾಲಜಿ ಕಾಲೇಜಿನ ಆವರಣದಲ್ಲಿ ಭಾರತೀಯ ಬಾಹ್ಯಾಕಾಶ ಕೇಂದ್ರವು ಪ್ರಪ್ರಥಮ ಬಾರಿಗೆ ಕೊಡಗಿನಲ್ಲಿ ’ಸ್ಪೇಸ್‌ಆನ್ವೀಲ್ಸ್’ ಪ್ರದರ್ಶನ ನಡೆಸುತ್ತಿದೆ ಎಂದರು. ಅಂದು ಬೆಳಿಗ್ಗೆ 10.30 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಇಸ್ರೋದ ವಿಜ್ಞಾನಿ ಶ್ರೀನಿವಾಸ್ ಮತ್ತು ಕೊಡವ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಡಾ.ಎಂ.ಸಿ.ಕಾರ್ಯಪ್ಪ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ವೈಜ್ಞಾನಿಕ ಅಭಿವೃದ್ಧಿಯ ಭಾರತದ ದೃಷ್ಟಿಯನ್ನು ಸಾಕಾರಗೊಳಿಸಲು ರಾಕೆಟ್‌ಗಳು, ಉಪಗ್ರಹಗಳು ಮತ್ತು…
ಲೇಖಕ: admin
ವಿರಾಜಪೇಟೆ ಏ.12 : ಬಿಟ್ಟಂಗಾಲ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಪೊನ್ನಿಮನೆ ಅಯ್ಯಪ್ಪ ಮತ್ತು ಬೋಟೆ ಚಾಮುಂಡಿ ದೇವರ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ಉತ್ಸವದ ಅಂಗವಾಗಿ ಭಂಡಾರ ಹೊರಡುವುದು, ದೇವಸ್ಥಾನದಲ್ಲಿ ಕೊಟ್ಟಿ ಪಾಟ್ ಮತ್ತು ವಿವಿಧ ಧಾರ್ಮಿಕ ಕೋಲಗಳಾದ ಬೋಟೆ ಚಾಮುಂಡಿ ಹಾಗೂ ವಿಷ್ಣುಮೂರ್ತಿ ದೇವರ ತೆರೆ ಸೇರಿದಂತೆ ವಿವಿಧ ತೆರೆಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ವಿವಿಧ ಗ್ರಾಮದ ಭಕ್ತಾದಿಗಳು ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಮಡಿಕೇರಿ ಏ.12 : ನಗರದ ಶ್ರೀ ಓಂಕಾರೇಶ್ವರ ದೇವಾಲಯದ ಸಮೀಪವಿರುವ ಮಧುಕೃಪದ ಆವರಣದಲ್ಲಿ ಮಕ್ಕಳಿಗಾಗಿ “ಬಾಲಗೋಕುಲ” ವಸಂತ ಉಚಿತ ಬೇಸಿಗೆ ಶಿಬಿರ ನಡೆಯಿತು. ಶಿಬಿರದಲ್ಲಿ ಐದರಿಂದ ಹದಿನೈದನೆಯ ವಯಸ್ಸಿನ ಐವತ್ತಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಸಂಭ್ರಮಿಸಿದರು. ಶಿಬಿರದಲ್ಲಿ ವಿವಿಧ ಕ್ಷೇತ್ರಗಳ ನುರಿತ ವ್ಯಕ್ತಿಗಳು ಮಕ್ಕಳಿಗೆ ಅಮೃತ ವಚನ, ಶ್ಲೋಕಗಳು, ಕಬೀರನ ದೋಹಗಳು, ಗಾದೆಗಳು, ಒಗಟುಗಳು, ಮಂಕುತಿಮ್ಮನ ಕಗ್ಗ, ದೇಶಭಕ್ತಿ ಗೀತೆಗಳು, ಅಭಿನಯ ಗೀತೆಗಳು, ದೇಶಿಯ ಆಟಗಳು, ಯೋಗಾಸನ, ಸಂಗೀತ, ಕ್ರಾಫ್ಟ್ ಮುಂತಾದವುಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಜೊತೆಗೆ ಮರೆಯಾಗುತ್ತಿರುವ ದೇಶಿಯ ಆಟಗಳನ್ನು ಮಕ್ಕಳು ಆಟವಾಡಿ ಸಂಭ್ರಮಿಸಿದರು. ಸಮಾರೋಪ ಸಮಾರಂಭ : ಶಿಬಿರದ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೊಡಗು ಜಿಲ್ಲಾ ಸಂಘಚಾಲಕ ಚಕ್ಕೇರ ಮನು ಕಾವೇರಪ್ಪ ಮಾತನಾಡಿ, “ಇಂದಿನ ಸಮಾಜದಲ್ಲಿ ಸಂಸ್ಕಾರ ಹಾಗೂ ಸಂಸ್ಕೃತಿಯ ಕೊರತೆ ಬಹಳಷ್ಟು ಇದೆ. ಇದನ್ನು ಹೋಗಲಾಡಿಸಲು ಬಾಲ ಗೋಕುಲದಂತಹ ಕಾರ್ಯಕ್ರಮಗಳು ಅಗತ್ಯ ಹಾಗೂ ಅನಿವಾರ್ಯ’ ಎಂದರು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಶ್ಲೋಕ, ಕಥೆ…
ನಾಪೋಕ್ಲು ಏ.12 : ಬಲ್ಲಮಾವಟಿ ಗ್ರಾಮ ಪಂಚಾಯತಿಯ ಪೇರೂರಿಯನ್ಸ್ ಹಾಕಿ ಕೋಚಿಂಗ್ ಕ್ಯಾಂಪ್ ವತಿಯಿಂದ ಆಯೋಜಿಸಲಾಗಿರುವ ಉಚಿತ ಕ್ರೀಡಾ ತರಬೇತಿ ಶಿಬಿರವನ್ನು ಬಲ್ಲಮಾವಟಿ ಗ್ರಾ.ಪಂ ಅಧ್ಯಕ್ಷ ಮುಕ್ಕಾಟಿರ ಸುತನ್ ಸುಬ್ಬಯ್ಯ ಹಾಗೂ ಮಂಡಲ ಮಾಜಿ ಪ್ರಧಾನ ಕಾರ್ಯದರ್ಶಿ ಮೂವೇರ ನಾಣಪ್ಪ ದೀಪ ಬೆಳಗಿಸಿ ಉದ್ಘಾಟಿಸಿದರು. ಪೇರೂರು ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಚಿಂಗ್ ಕ್ಯಾಂಪ್ ಅಧ್ಯಕ್ಷ ಮೊವೇರ ಪಟ್ಟು ತಮ್ಮಯ್ಯ ವಹಿಸಿದ್ದರು. ಈ ಸಂದರ್ಭ ಕೋಚಿಂಗ್ ಕ್ಯಾಂಪು ಕಾರ್ಯದರ್ಶಿ ತಾಪಂಡ ಅಪ್ಪಣ್ಣ, ಗ್ರಾ.ಪಂ ಸದಸ್ಯರಾದ ಮಚ್ಚೂರ ರವೀಂದ್ರ, ಚೋಕಿರ ಬಾಬಿ ಬೀಮಯ್ಯ, ಚ0ಗೇಟ್ಟಿರ ಕುಮಾರ್ ಸೋಮಣ್ಣ, ಪಾಲಯಾಡ ಸಂತೋಷ ದೇವಯ್ಯ, ಅಯ್ಯಪ್ಪ, ತರಬೇತಿದಾರ ಮಾಜಿ ಸೈನಿಕ ಕುಮ್ಮಂಡ ವಿಠಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಈ ಕೋಚಿಂಗ್ ಕ್ಯಾಂಪ್ 18 ವರ್ಷಕ್ಕೆ ಒಳಪಟ್ಟ ಮಕ್ಕಳಿಗೆ ಏ.28ರ ವರೆಗೆ ಪೇರೂರು ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಬೆಳಿಗ್ಗೆ 6.30 ಗಂಟೆಯಿಂದ ಬೆಳಿಗ್ಗೆ 9 ಗಂಟೆವರೆಗೆ ಜರುಗಲಿದೆ. ವರದಿ : ದುಗ್ಗಳ ಸದಾನಂದ
ನನಗೆ ವಿರಾಜಪೇಟೆ ಕ್ಷೇತ್ರದ ಟಿಕೆಟ್ ನೀಡದೆ ಇರುವ ಪಕ್ಷದ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ನಾನು ರಾಜಕೀಯಕ್ಕೆ ವೈಯುಕ್ತಿಕವಾಗಿ ಏನನ್ನೋ ಪಡೆಯಬೇಕೆಂದು ಬಂದವನಲ್ಲ. ಜನರಿಗಾಗಿ ಏನಾದರು ಮಾಡೋಣ ಎಂದು ಬಂದವನು. ಕಳೆದ 30 ವರ್ಷಗಳಿಂದ ಕೊಡಗು ಜಿಲ್ಲೆಯ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದ್ದೇ ನನ್ನ ಭಾಗ್ಯ. ಪ್ರವಾಹ ಮತ್ತು ಕೋವಿಡ್ ಸಂದರ್ಭದಲ್ಲಿ ಜನರ ಕಷ್ಟವನ್ನು ಹತ್ತಿರದಿಂದ ನೋಡಿದವನು ನಾನು. ಜೀವನದುದ್ದಕ್ಕೂ ಜನಸೇವೆಯಲ್ಲೇ ತೊಡಗಿಸಿಕೊಳ್ಳಬೇಕಂದು ನಿರ್ಧರಿಸಿದವನು ನಾನು. ಎಲ್ಲಾ ಸಂದರ್ಭಗಳಲ್ಲೂ ಕೊಡಗಿನ ಜನತೆ ನನ್ನ ಜೊತೆಯಲ್ಲಿರುವುದೇ ನಾನು ಮಾಡಿದ ಸೇವೆಗೆ ಸಿಕ್ಕ ಜನಾಶೀರ್ವಾದ. ರಾಜಕೀಯ ನನಗೆ ವ್ಯಾಪಾರವು ಅಲ್ಲ, ಜೀವನವು ಅಲ್ಲ ಕೇವಲ ಒಂದು ಸೇವಾಕ್ಷೇತ್ರ ಮಾತ್ರ. ಆದುದರಿಂದ ಬಿಜೆಪಿ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ದುಡಿದಿದ್ದೇನೆ, ಇನ್ನು ಮುಂದೆಯೂ ದುಡಿಯುತ್ತೇನೆ. ಕೊಡಗು ಜಿಲ್ಲೆಯ ಜನರು ಕರೆ ಮಾಡಿ ಅವರ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನಿಮ್ಮ ನಿರೀಕ್ಷೆಯಂತೆ ನನಗೆ ಈ ಬಾರಿ ನಿಮ್ಮನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿಲ್ಲ. ಹಾಗೆಂದು ನಾನು ನಿಮ್ಮ ಸೇವೆಯನ್ನು ಮತ್ತು ನಿಮ್ಮ ಪರವಾದ…
ಮಡಿಕೇರಿ ಏ.12 : ಅರಮೇರಿಯ ಎಸ್‌ಎಂಎಸ್ ವಿದ್ಯಾ ಸಂಸ್ಥೆಯಲ್ಲಿ ಮಾರ್ಚ್ 27ರಿಂದ ಏಪ್ರಿಲ್ 5 ರವರೆಗೆ ಹತ್ತು ದಿನಗಳ ಕಾಲ ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರ ನಡೆಯಿತು. ಶಿಬಿರದಲ್ಲಿ ಪಾಲ್ಗೊಂಡಿದ್ದ 145 ಶಿಬಿರಾರ್ಥಿಗಳಿಗೆ ಕಸದಿಂದ ರಸ, ಕಲೆ, ಕರಕುಶಲ, ಕ್ರೀಡೆ, ಅಡುಗೆ, ಇನ್ನಿತರ ಚಟುವಟಿಕೆಗಳ ಜೊತೆಗೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಕಾಂತ್ ರಾವ್ ಬೇಟೋಳಿ ಮತ್ತು ದೇವರ ಕಾಡುಗಳಲ್ಲಿ ಪಕ್ಷಿಗಳ ಚಲನವಲನಗಳ ಕುರಿತು ಮಾರ್ಗದರ್ಶನ ನೀಡಿದರು. ಶಿಬಿರದಲ್ಲಿ ಸ್ಕೌಟ್ಸ್ ಮತ್ತು ಗೈಡ್ ವಿದ್ಯಾರ್ಥಿಗಳು ಭಾಗವಹಿಸಿ ಹಲವಾರು ಬ್ಯಾಡ್ಜ್ ಗಳನ್ನು ಸಂಪಾದಿಸಿಕೊಂಡರು. ಕೊಡಗು ರೆಡ್ ಕ್ರಾಸ್ ಸೊಸೈಟಿಯ ಡಾ. ರವೀಂದ್ರಕಾಮತ್, ಶ್ರೀಮುರಳಿಧರ್ ಪ್ರಥಮ ಚಿಕಿತ್ಸೆಯ ಕಾರ್ಯಾಗಾರ ನಡೆಸಿದರು. ದಂತ ವೈದ್ಯರಾದ ಡಾ.ಸುಪ್ರೀತಾ ದೀಪಕ್ ಮಕ್ಕಳ ಹಲ್ಲುಗಳ ಶುಚಿತ್ವ ಕಾಪಾಡುವ ಬಗೆಗೆ ಮಾಹಿತಿ ನೀಡಿದರು. ಜನರಲ್ ತಿಮ್ಮಯ್ಯ ಜನ್ಮದಿನದ ಪ್ರಯುಕ್ತ ಮಡಿಕೇರಿಯ ತಿಮ್ಮಯ್ಯ ವೃತ್ತದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಮುಖ್ಯ ಆಯುಕ್ತ ಕೆ.ಟಿ ಬೇಬಿ ಮ್ಯಾಥ್ಯು ತಿಮ್ಮಯ್ಯ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಶಿಬಿರಾರ್ಥಿಗಳೊಡನೆ…
ಮಡಿಕೇರಿ ಏ.12 : ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಮಡಿಕೇರಿ ಕ್ಷೇತ್ರದಿಂದ ಎಂ.ಪಿ.ಅಪ್ಪಚ್ಚು ರಂಜನ್ ಹಾಗೂ ವಿರಾಜಪೇಟೆ ಕ್ಷೇತ್ರದಿಂದ ಕೆ.ಜಿ.ಬೋಪಯ್ಯ ಅವರಿಗೆ ಮತ್ತೆ ಟಿಕೆಟ್ ನೀಡಲಾಗಿದೆ. ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚುನಾವಣಾ ಉಸ್ತುವಾರಿಗಳಾದ ಅರುಣ್ ಸಿಂಗ್, ಧರ್ಮೇಂದ್ರ ಪ್ರಧಾನ್ ಅವರುಗಳು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. ಒಟ್ಟು 224 ಕ್ಷೇತ್ರಗಳ ಪೈಕಿ ಮೊದಲ ಪಟ್ಟಿಯಲ್ಲಿ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.
ಮಡಿಕೇರಿ ಏ.11 : ಅಯ್ಯಪ್ಪ ಸ್ವಾಮಿ ಮಾಲಾಧಾರಿ ತಂದೆ ಹಾಗೂ ಮಗ ನದಿ ಪಾಲಾದ ಘಟನೆ ಗುಡ್ಡೆಹೊಸೂರು ಗ್ರಾ.ಪಂ ವ್ಯಾಪ್ತಿಯ ಚಿಕ್ಕ ಬೆಟ್ಟಗೇರಿಯಲ್ಲಿ ನಡೆದಿದೆ. ಸೋಮವಾರಪೇಟೆ ಮೂಲದ ಮಣಿಕಂಠ (47) ಹಾಗೂ ಅವರ ಮಗ ಪ್ರೀತಂ (15) ಮೃತ ದುರ್ದೈವಿಗಳು. ಗುಡ್ಡೆಹೊಸೂರು ಚಿಕ್ಕ ಬೆಟ್ಟಗೇರಿಯಲ್ಲಿರುವ ಸಂಬoಧಿಕರಾದ ಅಂಬಾಡಿ ರವಿ ಎಂಬುವವರ ಮನೆಗೆ ಬಂದಿದ್ದ ಇಬ್ಬರು ಮಂಗಳವಾರ ಮಧ್ಯಾಹ್ನ ಕಾವೇರಿ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ದುರಂತ ಸಂಭವಿಸಿದೆ. ಸ್ನಾನಕ್ಕೆಂದು ನಾಲ್ವರು ನದಿಗೆ ಇಳಿದಿದ್ದರು ಎಂದು ತಿಳಿದು ಬಂದಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿಗಳ ಸಹಕಾರದಿಂದ ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಕುಶಾಲನಗರ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಡಿಕೇರಿ ಏ.11 : ಪೀಪಲ್ಸ್ ಮೂಮೆಂಟ್ ಫಾರ್ ಹ್ಯೂಮನ್ ರೈಟ್ಸ್ ಮತ್ತು ವೀರನಾಡು ರಕ್ಷಣಾ ವೇದಿಕೆಯ ಅಧ್ಯಕ್ಷರಾಗಿರುವ ಶ್ರೀ ಕೃಷ್ಣ ಗೋಶಾಲೆಯ ಸಂಸ್ಥಾಪಕ ಅಧ್ಯಕ್ಷ ಹರೀಶ್ ಜಿ.ಆಚಾರ್ಯ ಅವರು ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಏ.13 ರಂದು ಮಡಿಕೇರಿಯಲ್ಲಿ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿರುವ ಅವರು, ಕೊಡಗಿನ ಜನ ಬದಲಾವಣೆಯನ್ನು ಬಯಸುತ್ತಿದ್ದು, ನಮ್ಮಂತಹ ಸಾಮಾನ್ಯ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಕಾಲ ಪಕ್ವವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಶಿವಸೇನೆ ಮತ್ತು ಹಿಂದೂಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ರಾಜಕೀಯವಾಗಿ ತೊಡಗಿಸಿಕೊಂಡಿದ್ದೆ. ನಂತರದ ದಿನಗಳಲ್ಲಿ ಪೀಪಲ್ಸ್ ಮೂಮೆಂಟ್ ಫಾರ್ ಹ್ಯೂಮನ್ ರೈಟ್ಸ್ ಮತ್ತು ವೀರನಾಡು ರಕ್ಷಣಾ ವೇದಿಕೆಯ ಅಧ್ಯಕ್ಷನಾಗಿ ಅನೇಕ ಜನಪರ ಹೋರಾಟಗಳನ್ನು ಮಾಡಿದ್ದೇನೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಮೂಲಭೂತ ಸೌಲಭ್ಯಗಳ ಕೊರತೆಯ ಕುರಿತು ಆಡಳಿತ ವ್ಯವಸ್ಥೆಯ ಗಮನ ಸೆಳೆದಿದ್ದೇನೆ. 2018 ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಸಿಲುಕಿ ಅನಾಥವಾಗಿ ಅಲೆದಾಡುತ್ತಿದ್ದ ಗೋವುಗಳಿಗೆ ಆಶ್ರಯ ನೀಡುವ ಸಲುವಾಗಿ ಶ್ರೀಕೃಷ್ಣ ಗೋಶಾಲೆಯನ್ನು ಸ್ಥಾಪಿಸಿದ್ದೇನೆ.…
ಮಡಿಕೇರಿ ಏ.11 : ಪದ್ಮಶ್ರೀ ಪ್ರಶಸ್ತಿ ಪಡೆದು ಕುಶಾಲನಗರಕ್ಕೆ ಆಗಮಿಸಿದ ಜಾನಪದ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು ಜಿಲ್ಲೆ ಗಡಿಭಾಗ ಕುಶಾಲನಗರದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡು ಸ್ವಾಗತಿಸಲಾಯಿತು. ಕುಶಾಲನಗರ ಕೊಪ್ಪ ಗಡಿ ಭಾಗದ ಕಾವೇರಿ ಪ್ರತಿಮೆ ಬಳಿ ಕುಶಾಲನಗರ ಜಾನಪದ ಪರಿಷತ್ತು ಮತ್ತು ಕುಶಾಲನಗರ ಕೊಡವ ಸಮಾಜ ಪ್ರಮುಖರು ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿದ ನಂತರ ಪ್ರಶಸ್ತಿ ಪುರಸ್ಕೃತ ರನ್ನು ಗೌರವಿಸಲಾಯಿತು. ಈ ಸಂದರ್ಭ ಮಾತನಾಡಿದ ರಾಣಿ ಮಾಚಯ್ಯ , ತನಗೆ ಸಂದ ಪ್ರಶಸ್ತಿ ಕೊಡಗು ಜಿಲ್ಲೆಗೆ ಹಾಗೂ ಕಲಾ ಕ್ಷೇತ್ರಕ್ಕೆ ಲಭಿಸಿದ ಗೌರವ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕುಶಾಲನಗರ ಕೊಡವ ಸಮಾಜದ ಅಧ್ಯಕ್ಷ ಮಂಡೆಪಂಡ ಬೋಸ್ ಮೊಣ್ಣಪ್ಪ, ಉಪಾಧ್ಯಕ್ಷ ಪುಲಿಯಂಡ ಚಂಗಪ್ಪ, ಸಮಾಜದ ನಿರ್ದೇಶಕರುಗಳಾದ ಚೌರಿರ ತಿಮ್ಮಯ್ಯ, ಕೊಕ್ಕಲೆರ ಧರಣಿ, ಮುಕ್ಕಾಟಿ ಪೊನ್ನಣ್ಣ, ಬೊಪ್ಪಂಡ ನಂದ, ನಲ್ಲಪಟ್ಟಿರ ಸೂರಪ್ಪ, ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ಕರ್ನಾಟಕ ಜಾನಪದ ಪರಿಷತ್ ಕುಶಾಲನಗರ ತಾಲೂಕು ಅಧ್ಯಕ್ಷ ಚಂದ್ರಮೋಹನ್, ಗೌರವಾಧ್ಯಕ್ಷ ಫ್ಯಾನ್ಸಿ…






