ಮಡಿಕೇರಿ ಏ.10 : ಸಿರಿಗನ್ನಡ ವೇದಿಕೆ ಕೊಡಗು ಹಾಗೂ ಮಡಿಕೇರಿ ಸಿರಿಗನ್ನಡ ವೇದಿಕೆ ಮಹಿಳಾ ಘಟಕದ ವತಿಯಿಂದ ಏ.13 ರಂದು ಪದಾಧಿಕಾರಿಗಳ ಪದಗ್ರಹಣ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ನಡೆಯಲಿದೆ. ನಗರದ ಭಾರತೀಯ ವಿದ್ಯಾ ಭವನದಲ್ಲಿ ಬೆಳಿಗ್ಗೆ 10.30 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಸಿರಿಗನ್ನಡ ವೇದಿಕೆ ರಾಜ್ಯ ಸಮಿತಿ ಕಾರ್ಯಾಧ್ಯಕ್ಷರು ಹಾಗೂ ವಿಶ್ವಾಸಿ ಮಂಡಳಿ ಟ್ರಸ್ಟಿ ಡಾ.ಸೌಗಂಧಿಕಾ ವಿ. ಜೋಯಿಸ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸಾಹಿತಿ, ನಿರ್ಮಾಪಕರು, ನಟಿ ಹಾಗೂ ಸಿರಿಗನ್ನಡ ವೇದಿಕೆ ಮಡಿಕೇರಿ ತಾಲ್ಲೂಕು ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ವಹಿಸಲಿದ್ದಾರೆ. ಅತಿಥಿಗಳಾಗಿ ಸುಳ್ಯ ಕೆ.ವಿ.ಜಿ.ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರು ಹಾಗೂ ನಗರದ ಇ.ಎನ್.ಟಿ. ವರ್ಟಿಗೋ ಕ್ಲಿನಿಕ್‍ನ ಸಮಾಲೋಚಕರಾದ ಡಾ. ಮೋಹನ್ ಅಪ್ಪಾಜಿ ಕೋಲೆಯಂಡ, ವಿರಾಜಪೇಟೆ ತೂಕ್ ಬೊಳಕ್ ಪತ್ರಿಕೆಯ ಸಂಪಾದಕ ಮುಲ್ಲೇಂಗಡ ಮಧೋಷ್ ಪೂವಯ್ಯ, ಶಕ್ತಿ ದಿನಪತ್ರಿಕೆಯ ಹಿರಿಯ ಉಪಸಂಪಾದಕ, ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಕುಡೆಕಲ್ ಸಂತೋಷ್ ಪಾಲ್ಗೊಳ್ಳಲಿದ್ದು, ಗೌರವಾಧ್ಯಕ್ಷರಾಗಿ ಅಲ್ಲಾರಂಡ ರಂಗಚಾವಡಿ ಅಧ್ಯಕ್ಷರು ಹಾಗೂ ಕೊಡಗು…
ಲೇಖಕ: admin
ಮಡಿಕೇರಿ ಏ.10 : ಅಲ್ಪಸಂಖ್ಯಾತರು ವಾಸವಿರುವ ಪ್ರದೇಶಗಳು ರಾಜಕೀಯ ಪಕ್ಷಗಳ ನಿರ್ಲಕ್ಷ್ಯದಿಂದ ಮೂಲಭೂತ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿವೆ ಎಂದು ಆರೋಪಿಸಿರುವ ಹೊದ್ದೂರು ಗ್ರಾ.ಪಂ ಸದಸ್ಯ ಕೆ.ಎಂ.ಮೊಯ್ದು ಕೊಟ್ಟಮುಡಿ, ಸರ್ವಜನರ ಹಿತ ಕಾಯುವುದಕ್ಕಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವುದಾಗಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 70 ವರ್ಷಗಳಿಂದ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸುತ್ತಾ ಮತ ನೀಡುತ್ತಾ ಬಂದಿದ್ದಾರೆ. ಆದರೆ ಇಲ್ಲಿಯವರೆಗೆ ಪಕ್ಷದಲ್ಲಿ ಅಲ್ಪಸಂಖ್ಯಾತರಿಗೆ ಸೂಕ್ತ ಸ್ಥಾನಮಾನವನ್ನು ನೀಡಿಲ್ಲ ಎಂದು ಟೀಕಿಸಿದರು. ಕೊಡಗು ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ಪಕ್ಷದವರು ವಿಧಾನಸಭೆ ಮತ್ತು ವಿಧಾನ ಪರಿಷತ್ ಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿಲ್ಲ. ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನವನ್ನು ಕೂಡ ನೀಡಿಲ್ಲ. ಅಲ್ಪಸಂಖ್ಯಾತರು ವಾಸವಿರುವ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಆಸಕ್ತಿ ತೋರಿಲ್ಲ. ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 45 ಸಾವಿರಕ್ಕೂ ಅಧಿಕ ಮತದಾರರು ಅಲ್ಪಸಂಖ್ಯಾತರೇ ಆಗಿದ್ದಾರೆ. ಆದರೆ ಯಾವ ರಾಜಕೀಯ ಪಕ್ಷದಿಂದಲೂ ಯಾವುದೇ ರೀತಿಯ ಲಾಭವಾಗಿಲ್ಲ. ಆದ್ದರಿಂದ ಎಲ್ಲಾ ಸಮುದಾಯದವರ ಅಭಿಪ್ರಾಯ ಮತ್ತು ಬೆಂಬಲ…
ಮಡಿಕೇರಿ ಏ.10 : ಆಟೋಟಗಳು ಅನೇಕ ರೀತಿಯಲ್ಲಿ ಜೀವನ ಪಾಠಗಳನ್ನು ಕಲಿಸುವುದರಿಂದಾಗಿ ಪ್ರತೀಯೋವ೯ರೂ ಕ್ರೀಡಾಚಟುವಟಿಕೆಗಳಿಗೆ ಆದ್ಯತೆ ನೀಡಬೇಕು ಎಂದು ಕೂಡಿಗೆ ಕ್ರೀಡಾಶಾಲೆಯ ನಿವೃತ್ತ ಪ್ರಾಂಶುಪಾಲೆ ಕುಂತಿಬೋಪಯ್ಯ ಕರೆ ನೀಡಿದ್ದಾರೆ. ವಿರಾಜಪೇಟೆ ಬಳಿಯ ಅರಮೇರಿ ಕಳಂಚೇರಿ ಮಠದ ಶ್ರೀ ಲಿಂಗರಾಜೇಂದ್ರ ಪ್ರಸಾದ ಭವನದಲ್ಲಿ ಆಯೋಜಿತ 209 ನೇ ಹೊಂಬೆಳಕು ತತ್ವ ಚಿಂತನಾಗೋಷ್ಟಿ ಕಾಯ೯ಕ್ರಮದಲ್ಲಿ ಕುಂತಿಟೀಚರ್ ಸಾಕ್ಷ್ಯ ಚಿತ್ರ ಪ್ರದಶ೯ನ ಕಾಯ೯ಕ್ರಮದಲ್ಲಿ ಮಾತನಾಡಿದ ಅವರು. ಕ್ರೀಡೆಯಂತೆ ಜೀವನದಲ್ಲಿ ಕೂಡ ಎದುರಾಗುವ ಸೋಲು ಗೆಲವುಗಳನ್ನು ಸಮಚಿತ್ತದಿಂದ ಸ್ವೀಕರಿಸಬೇಕು. ಇಂಥ ಮನೋಭಾವನೆಯನ್ನು ಜೀವನದಲ್ಲಿ ಕ್ರೀಡೆ ಕಲಿಸುತ್ತದೆ. ಆಧುನಿಕ ಯುಗದಲ್ಲಿ ಮೊಬೈಲ್ ಆಟದತ್ತಲೇ ಮಕ್ಕಳು ಹೆಚ್ಚಿನ ಆಸಕ್ತಿತೋರುತ್ತಿದ್ದಾರೆ. ಹೀಗಾಗಿ ಮಾನಸಿಕವಾಗಿಯೂ, ದೈಹಿಕವಾಗಿಯೂ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ ಎಂದು ಕುಂತಿ ಕಳವಳ ವ್ಯಕ್ತಪಡಿಸಿದರು. ವಿದ್ಯಾಥಿ೯ಗಳ .ಸವ೯ತೋಮುಖ ಬೆಳವಣಿಗೆಗೆ ಕ್ರೀಡೆ ಅತ್ಯಂತ ಅಗತ್ಯ . ಮಾನಸಿಕ ಉಲ್ಲಾಸಕ್ಕೆ ಕ್ರೀಡೆ ಸಹಕಾರಿ. ಜತೆಗೆ ಕ್ರೀಡೆ ವ್ಯಕ್ತಿಯ ಮನೋಸ್ಥೆಯ೯ದೊಂದಿಗೆ ಉತ್ಸಾಹವನ್ನೂ ಹೆಚ್ಚಿಸುವುದಲ್ಲದೇ ಸಂಘಟನಾ ಚಾತುಯ೯ಕ್ಕೂ ಕಾರಣವಾಗಿದೆ. ಎಂದು ಕ್ರೀಡೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು.…
ಮಡಿಕೇರಿ ಏ.10 : ವಿದ್ಯಾರ್ಥಿಗಳು ಸಾರ್ವಜನಿಕ ಸಭೆ ಮತ್ತು ವೇದಿಕೆಗಳಲ್ಲಿ ಮುಕ್ತವಾಗಿ ಮಾತನಾಡುವ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ.ದಯಾನಂದ ಅಭಿಪ್ರಾಯಪಟ್ಟರು. ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಮತ್ತು ಉದ್ಯೋಗ ಕೋಶ ಸಮಿತಿ ಹಾಗೂ ಜೆಸಿಐ ಪೊನ್ನಂಪೇಟೆ ನಿಸರ್ಗ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪರಿಣಾಮಕಾರಿ ಭಾಷಣ ಕಲೆ ಮತ್ತು ಸಂಸತ್ತಿನ ನಡವಳಿ ಕುರಿತ ಒಂದು ದಿನದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿ ದಿಸೆಯಲ್ಲಿಯೇ ನಾಯಕತ್ವದ ಗುಣ ಮತ್ತು ಪ್ರತಿಭಟಿಸುವ ಮನೋಭಾವವನ್ನು ವಿದ್ಯಾರ್ಥಿಗಳು ರೂಡಿಸಿಕೊಳ್ಳಬೇಕೆಂದು ತಿಳಿಸಿದರು. ಪ್ರಸಕ್ತ ರಾಜಕೀಯದ ಕುರಿತು ಜ್ಞಾನ ಪಡೆದುಕೊಂಡು ಸಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಜೆ ಸಿ ಐ ಪೊನ್ನಂಪೇಟೆ ನಿಸರ್ಗದ ಅಧ್ಯಕ್ಷರಾದ ನೀತ್ ಅಯ್ಯಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ, ಸಮಾಜದ ಕಲ್ಯಾಣಕ್ಕಾಗಿ ನಮ್ಮ ಸಂಸ್ಥೆಯು ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ರಾಷ್ಟ್ರದ ಏಳಿಗೆಗೆ ನಿರಂತರವಾಗಿ ಶ್ರಮಿಸುತ್ತಿದೆ. ಸಮಾಜ ಸೇವೆಯೇ ನಮ್ಮ…
ಮಡಿಕೇರಿ ಏ.10 : ಅಮ್ಮತ್ತಿ ಗುಡ್ ಶಫರ್ಡ್ ಸಂಯುಕ್ತ ಪದವಿ ಪೂರ್ವ ಶಾಲೆಯ ಗೈಡ್ಸ್ ವಿದ್ಯಾರ್ಥಿನಿಯರಾದ ಎ.ಡಿ.ಪೊನ್ನಮ್ಮ ಹಾಗೂ ಎಂ.ಎ.ಮಧುಮಿತ ಭಾರತ್ ಸ್ಕೌಟ್ ಮತ್ತು ಗೈಡ್ಸ್ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕರ್ನಾಟಕ ಭಾರತ್ ಸ್ಕೌಟ್ ಮತ್ತು ಗೈಡ್ಸ್ ವತಿಯಿಂದ ರಾಜ್ಯ ಭವನದಲ್ಲಿ ನಡೆದ ಸ್ಕೌಟ್ ಮತ್ತು ಗೈಡ್ಸ್ ರಾಜ್ಯ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯಪಾಲರಿಂದ ಪ್ರಶಸ್ತಿ ಸ್ವೀಕರಿಸಿದರು. ಎ.ಡಿ.ಪೊನ್ನಮ್ಮ ಹಾಗೂ ಎಂ.ಎ.ಮಧುಮಿತ ಗೆ ಶಾಲೆಯ ಗೈಡ್ಸ್ ಕ್ಯಾಪ್ಟನ್ ಮೇರಿ ರೊಜಾರಿಯೋ, ಸ್ಕೌಟ್ ಮಾಸ್ಟರ್ ಗಣೇಶ್ ಹಾಗೂ ಮುಖ್ಯ ಶಿಕ್ಷಕಿ ಸಿಸ್ಟರ್ ಜೆಸ್ಸಿ ಜೋಸೆಫ್ ಮಾರ್ಗದರ್ಶನ ನೀಡಿರುತ್ತಾರೆ. ಶಾಲಾ ವ್ಯವಸ್ಥಾಪಕರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದರು.
ಮಡಿಕೇರಿ ಏ.10 : ಚೇರಂಬಾಣೆಯ ಬೇಂಗೂರು ಗ್ರಾಮದ ಇಂದಂಡ ಒಕ್ಕದ ಐದು ವರ್ಷಕೊಮ್ಮೆ ನಡೆಯುವ ಅಂಜಿ ಕೂಟ್ ಮೂರ್ತಿ ಗುರುಕಾರೋಣ ಕೋಲವು ಶ್ರದ್ಧಾಭಕ್ತಿಯಿಂದ ಜರುಗಿತು. ರಾತ್ರಿ ಅಂಜಿಕೊಟ್ ಮೂರ್ತಿಗಳಾದ, ಧರ್ಮದೇವತೆ, ಪಂಜುರುಳಿ ಪಾಸಾಣ ಮೂರ್ತಿ, ಅಂಗಾರ ಮತ್ತು ಗುಳಿಗ ಕೋಲಗಳು ನಡೆದು ಅಲ್ಲಿ ನೆರೆದಿದ್ದ ಗ್ರಾಮದ ಜನರನ್ನು ವಿಶೇಷ ಭಕ್ತಿಭಾವದಲ್ಲಿ ಮುಳುಗುವಂತೆ ಮಾಡಿತು. ಮಾರನೆಯ ದಿನ ಬೆಳಿಗ್ಗೆ ಒಕ್ಕದ ಗುರುಕಾರೋಣ ಕೋಲವು ನಡೆದು ನೆರೆದಿದ್ದ ಕುಟುಂಬಸ್ಥರಿಗೆ ಅನುವಾದ ನೀಡಲಾಯಿತು. ಕೊಡಗಿನ ಬಿಳಿಗೇರಿ, ವಿರಾಜಪೇಟೆ, ನಾಪೋಕ್ಲು ಭಾಗಗಳಿಂದ ಆಗಮಿಸಿದ್ದ ಪಾತ್ರಿಗಳು ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಇಂದಂಡ ಪೂವಯ್ಯ, ಕುಟುಂಬ ಪೂಜಾರಿಯಾದ ಇಂದಂಡ ಪ್ರವೀಣ್, ಇಂದಂಡ ಚಿಮ್ಮಣ್ಣ ದೇವಯ್ಯ, ಮತ್ತು ಕುಟುಂಬ ಅಧ್ಯಕ್ಷರಾದ ಇಂದಂಡ ಗಣೇಶ್ ಹಾಜರಿದ್ದರು.
ಸುಂಟಿಕೊಪ್ಪ ಏ.10 : ಯೇಸುಕ್ರಿಸ್ತರ ಪುನರುತ್ಥಾನದ ಪಾಸ್ಕಕಾಲದ (ಈಸ್ಟರ್) ಹಬ್ಬವನ್ನು ಸುಂಟಿಕೊಪ್ಪ ದೇವಾಲಯದ ವತಿಯಿಂದ ಸಂತ ಮೇರಿ ಶಾಲಾವರಣದಲ್ಲಿ ಬಲಿಪೂಜೆ ಹಾಗೂ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಿಸಲಾಯಿತು. ಸಂತಮೇರಿ ಸಂಭಾಗಣದಲ್ಲಿ ಯೇಸು ಕ್ರಿಸ್ತರು ಮಾನವರ ಪಾಪಕ್ಕಾಗಿ ಶಿಲುಬೆಯ ಮರದಲ್ಲಿ ಮರಣವನ್ನಾಪ್ಪಿದ್ದು, 3ನೇ ದಿನ ಸಮಾಧಿಯಿಂದ ಪುನರುತ್ಥಾನಗೊಂಡಿರುವುದನ್ನು ಕ್ರೈಸ್ತರು ಭಾಂದವರು ಪಾಸ್ಕ ಕಾಲದ (ಈಸ್ಟರ್) ಹಬ್ಬವನ್ನು ಆಚರಿಸುವುದು ವಾಡಿಕೆಯಾಗಿದೆ. ಸಂತ ಮೇರಿ ಶಾಲಾವರಣದಲ್ಲಿ ಮೈಸೂರು ಕೇತ್ರದ ಕೋಶಾಧಿಕಾರಿ ರೇ. ಫಾ. ಜೇಮ್ಸ್ ಡೊಮಿನಿಕ್ ಸಂತ ದೇವಾಲಯದ ಧರ್ಮಗುರುಗಳಾದ ಪಾಧರ್ ಅರುಳ್ ಸೇಲ್ವಕುಮಾರ್ ಅವರು ನೂತನ ಬೆಂಕಿಯನ್ನು ಆರ್ಶಿವಚಿಸಿ, ಜೇನುಮೇಣದಿಂದ ತಯಾರಿಸಲಾದ ದೊಡ್ಡ ಮೊಂಬತ್ತಿಯನ್ನು ಆರ್ಶಿವಚಿಸಿ ಸಂತ ಮೇರಿ ಶಾಲಾವರಣದಿಂದ ಅದನ್ನು ಬೆಳಗಿಸಿಕೊಂಡು ಭಕ್ತಾಧಿಗಳೊಂದಿಗೆ ಮೆರವಣಿಗೆಯೊಂದಿಗೆ ಪೀಠದಲ್ಲಿ ತಂದು ಗುರುಗಳು ಪ್ರತಿಷ್ಠಾಪಿಸಿದರು. ನಂತರ ಪ್ರಾರ್ಥನಾ ಕೂಟ ಹಾಗೂ ಆಡಂಬರ ದಿವ್ಯ ಬಲಿಪೂಜೆ ನಡೆಯಿತು. ಇದೇ ಸಂದರ್ಭ ಪ್ರಭು ಕ್ರಿಸ್ತರ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಬಲಿಪೂಜೆಯನ್ನು ಸಮರ್ಪಿಸಿದರು. ಚಾಲ್ರ್ಸ್ ಸಂತ ಕ್ಲಾರ ಕನ್ಯಾಸ್ತ್ರೀ ಕಾನ್ವೆಂಟಿನ ಕನ್ಯಾಸ್ತ್ರೀಯರು,…
ಮಡಿಕೇರಿ ಏ.10 : ಕಾರು ಮತ್ತು ಸಾರಿಗೆ ಬಸ್ ನಡುವೆ ಅಪಘಾತ ಸಂಭವಿಸಿದ ಘಟನೆ ಸೀಗೆತೋಡುವಿನಲ್ಲಿ ನಡೆದಿದೆ. ತಿರುಪತಿಯಿಂದ ಗೋಣಿಕೊಪ್ಪಲು ಮಾರ್ಗವಾಗಿ ಮೂರ್ನಾಡುವಿಗೆ ತೆರಳುತ್ತಿದ್ದ ಕಾರಿಗೆ ಪಿರಿಯಾಪಟ್ಟಣದಿಂದ ಗೋಣಿಕೊಪ್ಪಲಿಗೆ ಬರುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂ ಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ . ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಡಿಕೇರಿ ಏ.9 : ಇಸ್ಲಾಮಿಕ್ ಎಜುಕೇಶನ್ ಬೋರ್ಡ್ ಆಫ್ ಇಂಡಿಯಾ ನಡೆಸಿರುವ 5, 7, 10 ಹಾಗೂ 12ನೇ ತರಗತಿಗಳ ಪಬ್ಲಿಕ್ ಪರೀಕ್ಷೆಯಲ್ಲಿ ಜಿಲ್ಲೆಯ 2800 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಜಿಲ್ಲಾ ಮಟ್ಟದ RANK ಪಟ್ಟಿ ಈ ಕೆಳಗಿನಂತಿದೆ. 12ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಪಾಲಿಬೆಟ್ಟ ಮದ್’ರಸ ವಿದ್ಯಾರ್ಥಿನಿಗಳಾದ ಇರ್ಫಾನ ಹಾಗೂ ರಿಝ್ವಾನಾ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದರೆ ಫಾರಿಸಾ ಆಝಾದ್ ನಗರ ತೃತೀಯ ಸ್ಥಾನವನ್ನು ಪಡೆದರು. 10ನೇ ತರಗತಿಯಲ್ಲಿ ಫರೀದಾ ಕುಂಜಿಲ ಪ್ರಥಮ ಸ್ಥಾನ ಗಳಿಸಿದರೆ ನಾಪೋಕ್ಲುವಿನ ಝಿಯಾ ಝೈನಬ ಹಾಗೂ ಅಮ್ಮತ್ತಿಯ ಮುಹಮ್ಮದ್ ಅಜ್’ನಾಸ್ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದುಕೊಂಡರು. ಏಳನೇ ತರಗತಿಯಲ್ಲಿ ರಿಶಾನಾ ಪಾಲಿಬೆಟ್ಟ ಹಾಗೂ ಫಾತಿಮಾ ಐಫಾ ಆಝಾದ್ ನಗರ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದರೆ ಮೂರ್ನಾಡುವಿನ ಹಬೀಬ ತೃತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡರು. ಐದನೇ ತರಗತಿಯಲ್ಲಿ 7ನೇ ಹೊಸಕೋಟೆಯ ಇಝಾನ್ ಫೆಬಿನ್ ಪ್ರಥಮ ಸ್ಥಾನವನ್ನು ಪಡೆದರೆ ಮುಹಮ್ಮದ್ ಆಶಿಖ್…
ಸೋಮವಾರಪೇಟೆ ಏ.9 : ಕಳೆದ ಒಂದೂವರೆ ದಶಕಗಳಿಂದ ಗ್ರಾಮದ ರಸ್ತೆಗೆ ಅನುದಾನ ಕೊಡದೆ ವಂಚಿಸಲಾಗಿದೆ ಎಂದು ಆರೋಪಿಸಿ ಸುಳಿಮಳ್ತೆ ಗ್ರಾಮಸ್ಥರು ಮುಂಬರುವ ವಿಧಾನಸಭಾ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ ಮಾಡಿದ್ದಾರೆ. ಗ್ರಾಮದಲ್ಲಿ ಸಭೆ ನಡೆಸಿದ ಗ್ರಾಮಸ್ಥರು, ತೀರ್ಮಾನ ತೆಗದುಕೊಂಡು ಗ್ರಾಮದ ಮುಖ್ಯರಸ್ತೆಗೆ ಮತದಾನ ಬಹಿಷ್ಕಾರದ ಬ್ಯಾನರ್ ಕಟ್ಟಿದ್ದರು. ಹೊನವಳ್ಳಿ ಜಂಕ್ಷನ್‌ನಿಂದ ಸುಳಿಮಳ್ತೆ ಮಾರ್ಗವಾಗಿ ದೊಡ್ಡಮಳ್ತೆ ಹೊನ್ನಮ್ಮನ ಕೆರೆ ಜಂಕ್ಷನ್ ತನಕ ರಸ್ತೆ ಕಾಮಗಾರಿಗೆ ಅನುದಾನ ಕೋರಲಾಗಿತ್ತು. ಆದರೆ ಇದುವರೆಗೆ ಜನಪ್ರತಿನಿಧಿಗಳು ಅನುದಾನ ಕಲ್ಪಿಸದೆ ಅನ್ಯಾಯ ಮಾಡಿದ್ದಾರೆ ಎಂದು ಗ್ರಾಮಸ್ಥರು ದೂರಿದರು. ಕೃಷಿಕರು ವಾಸಿಸುವ ಗ್ರಾಮ, ರಸ್ತೆ ಗುಂಡಿಬಿದ್ದು ವಾಹನ ಚಾಲನೆ ಕಷ್ಟಕರವಾಗಿದೆ. ಕೃಷಿ ಫಸಲನ್ನು ಸಾಗಿಸಲು ಕಷ್ಟವಾಗುತ್ತಿದೆ. ಪ್ರತಿವರ್ಷ ಗೌರಿ-ಗಣೇಶ ಹಬ್ಬದಂದು ಐತಿಹಾಸಿಕ ಹಿನ್ನೆಲೆಯುಳ್ಳ ದೊಡ್ಡಮಳ್ತೆ ಗ್ರಾಮದಲ್ಲಿರುವ ಹೊನ್ನಮ್ಮನ ಕೆರೆ ಜಾತ್ರೆಗೆ ಸಾವಿರಾರು ಜನರು ಸೇರುತ್ತಾರೆ. ಹೆಚ್ಚಿನ ಜನರು ಇದೇ ರಸ್ತೆಯನ್ನು ಅವಲಂಭಿಸಿದ್ದಾರೆ. ಆದರೂ ರಸ್ತೆಗೆ ಅನುದಾನ ಕಲ್ಪಿಸದೆ ಅನ್ಯಾಯವೆಸಲಾಗಿದೆ ಎಂದು ಗ್ರಾಮಾಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಗೋವಿಂದ, ಹಿರಿಯರಾದ ಎಸ್.ಆರ್.ಪುಟ್ಟರಾಜು, ಹೊನವಳ್ಳಿ ಚಂದ್ರಶೇಖರ್,…






