ಸೋಮವಾರಪೇಟೆ ತಾಲ್ಲೂಕಿನ ತೋಳೂರು ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂತಿ ಗ್ರಾಮದಿಂದ ಕೆರೆಕೊಪ್ಪ ಮಾರ್ಗವಾಗಿ ನಗರಳ್ಳಿ ಮತ್ತು ಶಾಂತಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು ಭಾನುವಾರ ಗ್ರಾಮಸ್ಥರು ಶ್ರಮದಾನದ ಮೂಲಕ ರಸ್ತೆ ಗುಂಡಿ ಮುಚ್ಚಿದರು. ಈ ರಸ್ತೆಯು ಮಲ್ಲಳ್ಳಿ ಜಲಪಾತ, ಪುಷ್ಪಗಿರಿ ಬೆಟ್ಟವನ್ನು ತಲುಪಲು ಹತ್ತಿರದ ಮಾರ್ಗವಾಗಿದ್ದು ಅತೀ ಹೆಚ್ಚು ಪ್ರವಾಸಿಗರ ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ. ಅಲ್ಲಲ್ಲಿ ಗುಂಡಿಗಳು ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗಿರುವ ಕಾರಣದಿಂದ ರಸ್ತೆಯನ್ನು ಗ್ರಾಮಸ್ಥರೇ ಶ್ರಮದಾನದ ಮೂಲಕ ಗುಂಡಿ ಮುಚ್ಚಿದರು. ಶ್ರಮದಾನದಲ್ಲಿ ಯು.ಕೆ.ಸೋಮಶೇಖರ್, ಸಿ.ಕೆ.ನಾಗರಾಜ್, ಕೆ.ಕೆ.ಲಕ್ಷ್ಮೀಕಾಂತ ಕೆ,ಡಿ.ಗಿರೀಶ್, ಸಿ.ಸಿ.ದಯಾನಂದ, ಪ್ರದೀಪ್ ಕುಮಾರ್, ಗಣೇಶ್, ದಿನೇಶ್ ಭಾಗವಹಿಸಿದ್ದರು.
ಲೇಖಕ: admin
ಸೋಮವಾರಪೇಟೆ ಏ.9 : ಚಿಲ್ಲರೆ ಅಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಚಿಲ್ಲರೆ ಅಂಗಡಿಗೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು 17.280 ಲೀ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಐಗೂರು ಸಮೀಪದ ಯಡವಾರೆ ಗ್ರಾಮ ನಿವಾಸಿಯೊಬ್ಬರು ತನ್ನ ಚಿಲ್ಲರೆ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಮಾಹಿತಿ ಪಡೆದ ಅಧಿಕಾರಿಗಳು ಈಚೆಗೆ ದಾಳಿ ನಡೆಸಿದ್ದರು. ಉಪ ವಿಭಾಗ ಅಬಕಾರಿ ಅಧೀಕ್ಷಕರಾದ ಆರ್.ಎಂ. ಚೈತ್ರಾ ಅರೋಪಿ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.
ಸೋಮವಾರಪೇಟೆ ಏ.9 : ಸೋಮವಾರಪೇಟೆ ತಾಲ್ಲೂಕಿನ ಕೂತಿನಾಡು ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಎಂದೇ ಕರೆಯಲ್ಪಡುವ ನಗರಳ್ಳಿ ಸುಗ್ಗಿ ಉತ್ಸವದ ಪ್ರಯುಕ್ತ ಸುಗ್ಗಿ ಆಚರಣೆಯ ವಿಧಿವಿಧಾನದಂತೆ ದೇವಿಯ ತವರೂರೆಂದು ಕರೆಯಲ್ಪಡುವ ಕೂತಿ ಗ್ರಾಮದ ಚಾವಡಿಕಟ್ಟೆಯಲ್ಲಿ ಸಂಜೆ ದೀಪಗಳನ್ನು ತಂದು ಪೂಜಿಸಿದರು. ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಕೂತಿ ಗ್ರಾಮದ ಚಾವಡಿಕಟ್ಟೆಯಲ್ಲಿ ಗ್ರಾಮದ ಮನೆಯಿಂದ ಗ್ರಾಮಸ್ಥರು ಸಾಮೂಹಿಕವಾಗಿ ದೀಪಗಳನ್ನು ಇಟ್ಟು ಸಾಮೂಹಿಕವಾಗಿ ಪೂಜೆ ಮಾಡಲಾಯಿತು. ನಂತರ ದೇವರಕಟ್ಟೆಯಲ್ಲಿ ಗ್ರಾಮಸ್ಥರು ಸುಗ್ಗಿ ಕುಣಿತದೊಂದಿಗೆ ಪೂಜಾ ಕಾರ್ಯ ನಡೆಸಿದರು. ಕೂತಿ ಗ್ರಾಮದ ಅಧ್ಯಕ್ಷ ಎಚ್.ಡಿ. ಮೋಹನ್, ಉಪಾಧ್ಯಕ್ಷ ಜಗದೀಶ್, ಕಾರ್ಯದರ್ಶಿ ವಿನೋದ್ ಕುಮಾರ್, ಖಜಾಂಚಿ ಕಿಶನ್, ಗ್ರಾಮದ ಪಟೇಲರಾದ ಬಸವರಾಜ್, ಹಿರಿಯರಾದ ಕೆ.ಟಿ. ಪರಮೇಶ್, ಗಣೇಶ್, ದಿನೇಶ್, ಗಿರೀಶ್, ಅರ್ಚಕ ಅನಂತರಾಮ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ಮಡಿಕೇರಿ ಏ.9 : ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಕೊಡವ ಕುಟುಂಬಗಳ ನಡುವಿನ 23ನೇ ವರ್ಷದ ಪ್ರತಿಷ್ಠಿತ ‘ಅಪ್ಪಚೆಟ್ಟೋಳಂಡ ಕಪ್ ಹಾಕಿ ನಮ್ಮೆ’ಯಲ್ಲಿ ಕುಪ್ಪಂಡ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಎದುರಾಳಿ ತಂಡದ ವಿರುದ್ಧ ಸಮಬಲ ಪ್ರದರ್ಶನ ನೀಡಿದರೂ ಶೂಟ್‌ಔಟ್‌ನಲ್ಲಿ ಕೇವಲ 2 ಗೋಲು ದಾಖಲಿಸಿದ ಕುಲ್ಲೇಟಿರ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇಂದು ನಡೆದ ಅಂತಿಮ ಪಂದ್ಯಾವಳಿಯನ್ನು ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಅವರು ಬೆಳ್ಳಿಯ ಹಾಕಿ ಸ್ಟಿಕ್‌ನಿಂದ ಬೆಳ್ಳಿಯ ಹಾಕಿ ಚೆಂಡನ್ನು ಹೊಡೆಯುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು. ಬಳಿಕ ನಡೆದ ರೋಚಕ ಪಂದ್ಯಾಟದಲ್ಲಿ ಕುಪ್ಪಂಡ ತಂಡ ಮೊದಲ ಕ್ವಾಟರ್‌ನಲ್ಲಿ 1 ಗೋಲು ಗಳಿಸಿ ಮುನ್ನಡೆ ಪಡೆಯಿತು. ರಭಸದ ಪ್ರದರ್ಶನ ನೀಡಿದ ಕುಲ್ಲೇಟಿರ ತಂಡ ದ್ವಿತೀಯಾರ್ಧದಲ್ಲಿ ಎದುರಾಳಿ ಕುಪ್ಪಂಡ ವಿರುದ್ದ 1 ಗೋಲು ದಾಖಲಿಸಿ ಸಮಬಲ ಸಾಧಿಸಿತು. ಆದರೆ ನಿಗಧಿತ ಅವಧಿಯಲ್ಲಿ ಇತ್ತಂಡಗಳಿಗೆ ಒಟ್ಟು 11 ಪೆನಾಲ್ಟಿ ಕಾರ್ನರ್ ಅವಕಾಶ ದೊರೆಯಿತಾದರೂ, ಯಾವುದೇ…
ಮಡಿಕೇರಿ ಏ.9 : ಪೋಷಕರು ಮಕ್ಕಳಿಗೆ ಹಾಕಿ ಕ್ರೀಡೆಯಲ್ಲಿ ಒಲವು ಮೂಡಿಸುವ ಮೂಲಕ ಪ್ರೋತ್ಸಾಹಿಸಬೇಕು, ಆ ಮೂಲಕ ಭವಿಷ್ಯದ ದಿನಗಳಲ್ಲಿ ಕೊಡಗಿನಿಂದ ಹೆಚ್ಚು ಮಂದಿ ಆಟಗಾರರು ಭಾರತ ಹಾಕಿ ತಂಡವನ್ನು ಪ್ರತಿನಿಧಿಸುವಂತಾಗಬೇಕು ಎಂದು ಭಾರತ ಹಾಕಿ ತಂಡದ ಮಾಜಿ ನಾಯಕ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ವಿಜೇತ, ಒಲಿಂಪಿಯನ್ ಧನ್‌ರಾಜ್ ಪಿಳ್ಳೆ ಕರೆ ನೀಡಿದರು. ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿತ 23ನೇ ವರ್ಷದ ಕೊಡವ ಕೌಟುಂಬಿಕ ‘ಅಪ್ಪಚೆಟ್ಟೋಳಂಡ ಕಪ್ ಹಾಕಿ ನಮ್ಮೆ 2023’ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಒಂದು ಕಾಲದಲ್ಲಿ ಭಾರತ ಹಾಕಿ ತಂಡದಲ್ಲಿ 8ರಿಂದ 10 ಮಂದಿ ಕೊಡಗಿನ ಆಟಗಾರರು ಇರುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಈ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಅವರು ವಿಷಾಧಿಸಿದರು. ಮಕ್ಕಳು, ಯುವಕರಲ್ಲಿ ಹಾಕಿ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸಲು ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಸಹಕಾರಿಯಾಗಿದೆ. ಇಂತಹ ಕ್ರೀಡಾಕೂಟಗಳಿಂದ ಮತ್ತಷ್ಟು ಯುವ ಹಾಕಿಪಟುಗಳು ರಾಜ್ಯ ಮತ್ತು ರಾಷ್ಟ್ರವನ್ನು ಪ್ರತಿನಿಧಿಸುವಂತಾಗಲಿ ಎಂದು…
ಮಡಿಕೇರಿ ಏ.9 : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಂಡೀಪುರ ಅಭಯಾರಣ್ಯಕ್ಕೆ ಭೇಟಿ ನೀಡಿದ್ದಾರೆ. ತೆರೆದ ಜೀಪ್ ನಲ್ಲಿ ಸಫಾರಿ ನಡೆಸಿದ ಅವರು ವನ್ಯಜೀವಿಗಳನ್ನು ವೀಕ್ಷಿಸಿದರು. ಮೋದಿ ಅವರು ಟೋಪಿ, ಗಾಗಲ್ಸ್ ಜೊತೆಗೆ ಸಫಾರಿ ದಿರಿಸಿನಲ್ಲಿ ಕಾಡಿನಲ್ಲಿ ಮಿಂಚಿದರು. ಒಟ್ಟು 9 ವಾಹನಗಳು ಪ್ರಧಾನಿ ಅವರ ಜೊತೆಗಿದ್ದು, ಸಫಾರಿ ಮುಗಿಸಿ ತಮಿಳುನಾಡಿನ ತೆಪ್ಪಕಾಡಿಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಮಡಿಕೇರಿ ಏ.9 : ಹಾಕತ್ತೂರು-ಬಿಳಿಗೇರಿ ದರ್ಗಾ ಶರೀಫಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಫಕೀರ್ ಬಾವ (ಖ.ಸಿ) ಅವರ ಹೆಸರಿನಲ್ಲಿ ಮೇ 7, 8 ಮತ್ತು 9 ರಂದು ನಡೆಯಬೇಕಾಗಿದ್ದ ಉರೂಸ್ ನ್ನು ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಮುoದೂಡಲ್ಪಟ್ಟ ಉರೂಸ್ ಮೇ 14, 15 ಮತ್ತು 16 ರಂದು ಉಲಮಾ-ಉಮಾರ, ಸಾದತುಗಳ ನೇತೃತ್ವದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಲಿದೆ ಎಂದು ಬದರ್ ಜಮಾಅತ್ ಸಮಿತಿ ಕಾರ್ಯದರ್ಶಿ ಎಸ್.ಎ.ಅಬ್ದುಲ್ ಖಾದರ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 93538 34014 ನ್ನು ಸಂಪರ್ಕಿಸಬಹುದಾಗಿದೆ.
ಮಡಿಕೇರಿ ಏ.8 : ಆಸಕ್ತಿಯಿಂದ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಉತ್ತಮ ಭವಿಷ್ಯ ಕಂಡುಕೊಳ್ಳಬಹುದೆoದು ಒಲಂಪಿಯನ್‌ಗಳಾದ ಮನೆಯಪಂಡ ಸೋಮಯ್ಯ ಹಾಗೂ ಅಂಜಪರವoಡ ಸುಬ್ಬಯ್ಯ ಅವರುಗಳು ಕರೆ ನೀಡಿದರು. ವಾಂಡರರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಇಲ್ಲಿನ ಜ.ತಿಮ್ಮಯ್ಯ ಕ್ರಿಡಾಂಗಣದಲ್ಲಿ ನಡೆಯುತ್ತಿರುವ ದಿ.ಶಂಕರ್ ಸ್ವಾಮಿ ಸ್ಮರಣಾರ್ಥ ಉಚಿತ ಬೇಸಿಗೆ ಕ್ರೀಡಾ ಶಿಬಿರದಲ್ಲಿ ಬಾಗವಹಿಸಿ ಅವರು ಮಕ್ಕಳಿಗೆ ಹಿತವಚನ ನುಡಿದರು. ಸೊಮಯ್ಯ ಮಾತನಾಡಿ ಇಂತಹ ಶಿಬಿರಗಳಿಂದ ಸಾಕಷ್ಟು ಕಲಿಯಬಹುದಾಗಿದೆ. ಜೀವನದಲ್ಲಿ ಐದು ಎಸ್‌ಗಳನ್ನು, ಅಂದರೆ ‘ಸ್ಪೀಡ್, ಸ್ಟ್ರೇಂತ್, ಸ್ಟೆಮಿನಾ, ಸ್ಕಿಲ್ ಹಾಗೂ ಸ್ಪೋರ್ಟ್ಸ್ಮೆನ್‌ಶಿಪ್’ ಇವುಗಳನ್ನು ಅಳವಡಿಸಿಕೊಂಡರೆ ಉತ್ತಮ ಕ್ರಿಡಾಪಟು ಹಾಗೂ ಉತ್ತಮ ಮನುಜನಾಗಲು ಸಾಧ್ಯವಾಗುತ್ತದೆ. ಉತತಮ ಭವಿಷ್ಯ ರುಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಎ.ಬಿ.ಸುಬ್ಬಯ್ಯ ಮಾತನಾಡಿ ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡರೆ ಉತ್ತಮ ಪ್ರಜೆಯಾಗಲು ಸಾಧ್ಯ. ಸಮಾಜದಲ್ಲೂ ಗುರುತಿಸಲ್ಪಡುತ್ತಾರೆ, ಮಕ್ಕಳು ಟಿವಿ, ಮೊಬೈಲ್ ಬಿಟ್ಟು ಮೈದಾನಕ್ಕೆ ಬರಬೇಕು. ಶಾರೀರಿಕ ದೃಢತೆ ಇದ್ದರೆ ಜೀವನವನ್ನು ಸಂತೋಷದಿoದ ಕಳೆಯಬಹುದು. ಕ್ರಿಡೆಯಿಂದ ಇದು ಸಾಧ್ಯವಾಗಲಿದೆ. ಶಿಬಿರದಲ್ಲಿ ಕಲಿಸುವದನ್ನು ನಿರಂತರ ಅಭ್ಯಾಸ ಮಾಡಬೇಕು. ಇಲ್ಲಿ ತರಬೇತುದಾರರು…
ಮಡಿಕೇರಿ ಏ.8 : ಬಿರು ಬಿಸಿಲು ಮತ್ತು ಭಾರೀ ಪ್ರಮಾಣದಲ್ಲಿ ಹೂಳು ತುಂಬಿರುವುದರಿAದ ಮಡಿಕೇರಿ ನಗರಕ್ಕೆ ನೀರು ಪೂರೈಸುವ ಪ್ರಮುಖ ನೀರು ಸಂಗ್ರಹಗಾರ ಕೂಟುಹೊಳೆ ಸಂಪೂರ್ಣ ಬರಿದಾಗಿದೆ. ನಗರದ ಕೆಲವು ಬಡಾವಣೆಗಳ ನಿವಾಸಿಗಳು ನೀರಿನ ಕೊರತೆಯನ್ನು ಎದುರಿಸುತ್ತಿದ್ದಾರೆ. ಜಲಾಶಯದಲ್ಲಿ ಪ್ರಸ್ತುತ 10ರಿಂದ 15 ಅಡಿಯಷ್ಟೇ ನೀರು ನಿಂತಿದ್ದು, ಡೆಡ್ ಸ್ಟೋರೇಜ್ ತಲುಪಿರುವ ಈ ನೀರನ್ನು ಕುಡಿಯುವ ಉದ್ದೇಶಕ್ಕೆ ಪಂಪ್ ಮಾಡಲು ಕೂಡ ಸಾಧ್ಯವಿಲ್ಲದಂತಾಗಿದೆ. ಮಳೆ ನೀರು ಮತ್ತು ಜಲ ಮೂಲವನ್ನು ನಂಬಿರುವ ಕೂಟುಹೊಳೆ ಜಲಾನಯನ ವ್ಯಾಪ್ತಿಯಲ್ಲಿ ಮಳೆ ಬಾರದಿದ್ದಲ್ಲಿ ಜಲಾಶಯ ಸಂಪೂರ್ಣ ಬತ್ತಿ ಹೋಗುವ ಆತಂಕವೂ ಎದುರಾಗಿದೆ. ಮೇ ತಿಂಗಳಲ್ಲಿ ಪರಿಸ್ಥಿತಿ ಮತ್ತಷ್ಟು ವಿಷಮಕ್ಕೆ ತಿರುಗಲಿದೆ. ಕುಡಿಯುವ ನೀರಿನ ಪೂರೈಕೆಯಲ್ಲಿ ಸಮಸ್ಯೆಯಾಗಲಿದ್ದು, ಜನತೆ ಸಹಕರಿಸುವಂತೆ ನಗರಸಭೆ ಮನವಿ ಮಾಡಿದೆ. ಕೂಟುಹೊಳೆಯಲ್ಲಿ ತುಂಬಿರುವ ಹೂಳನ್ನು ತೆಗೆಯದೆ ಇರುವುದರಿಂದ ನೀರಿನ ಶೇಖರಣೆಯಲ್ಲಿ ಕುಸಿತ ಕಂಡು ಬಂದಿದೆ. ಬೇಸಿಗೆಯಲ್ಲಿ ಉಂಟಾಗಬಹುದಾದ ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳದೆ ಇಷ್ಟು ದಿನ ಸುಮ್ಮನಿದ್ದ ನಗರಸಭೆ…
ಮಡಿಕೇರಿ ಏ.8 : ಕಾಡಾನೆಯೊಂದು ಮನೆ ಮುಂದೆ ನಿಲ್ಲಿಸಿದ್ದ ಕಾರುಗಳ ಮೇಲೆ ದಾಳಿ ಮಾಡಿರುವ ಘಟನೆ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆಯ ಮೆಟ್ಟಳ್ಳದಲ್ಲಿ ನಡೆದಿದೆ. ಸ್ವಿಫ್ಟ್ ಮತ್ತು ಸ್ಯಾಂಟ್ರೋ ಕಾರಿನ ಮೇಲೆ ದಾಳಿ ಮಾಡಿದ ಕಾಡಾನೆ ಸಾನಿಫ್ ಎಂಬುವವರ ಸ್ವಿಫ್ಟ್ ಕಾರನ್ನು ಪಕ್ಕದಲ್ಲೇ ಇದ್ದ ಹೆದ್ದಾರಿವರೆಗೆ ತಳ್ಳಿಕೊಂಡು ಬಂದಿದೆ. ನಂತರ ಅಲ್ಲಿಂದ ಕಾಡಾನೆ ಕಾಲ್ಕಿತ್ತಿದ್ದು, ಕಾರಿಗೆ ಹಾನಿಯಾಗಿದೆ. ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ.






