ಮಡಿಕೇರಿ ಏ.8 : ಕೊಡವ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ತ್ರಿವೇಣಿ ಪೊಮ್ಮಕ್ಕಡ ಕೂಟ ಅಸ್ತಿತ್ವಕ್ಕೆ ಬಂದಿದ್ದು, ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲಿದೆ ಎಂದು ಕೂಟದ ಅಧ್ಯಕ್ಷೆ ಕಿಕ್ಕೇರಿಯಂಡ ಲೀಲಾ ಅಯ್ಯಪ್ಪ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.11 ರಂದು ತ್ರಿವೇಣಿ ಪೊಮ್ಮಕ್ಕಡ ಕೂಟವನ್ನು ಅಸ್ಥಿತ್ವಕ್ಕೆ ತರಲಾಗಿದೆ. ಸುಮಾರು 19 ಸದಸ್ಯರಿದ್ದು, ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಲಾಗಿದೆ. ನೊಂದ ಕೊಡವರಿಗೆ ಸಹಾಯ ಮಾಡುವುದು, ಕಡು ಬಡತನದಲ್ಲಿರುವರಿಗೆ ಸಹಾಯ, ಕಾನೂನು ಅರಿವು, ಇತ್ಯಾದಿ ಸೇವೆಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಆಕಾಶವಾಣಿಯಲ್ಲಿ ಕೊಡವ ಸಿರಿ ಮತ್ತು ಮಹಿಳಾ ಲೋಕಾದಲ್ಲಿ ವಿವಿಧ ಕಾರ್ಯಕ್ರಮ ನೀಡುವುದು, ಕಡುಬಡವ ಕೊಡವ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುವುದು, ಮದುವೆಯ ನಂತರ ಕಿರುಕುಳಕ್ಕೆ ಒಳಗಾದ ಮಹಿಳೆಗೆ ಸಾಂತ್ವಾನ ಹೇಳುವುದು ಸೇರಿದಂತೆ ಇತ್ಯಾದಿ ಸೇವೆಗಳನ್ನು ಮಾಡಲಾಗುವುದು ಎಂದು ತಿಳಿಸಿದ ಅವರು, ಹೆಚ್ಚಿನ ಮಾಹಿತಿಗಾಗಿ 9972375541, 9686092250 ಸಂಪರ್ಕಿಸುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷೆ ಬೊಪ್ಪಂಡ ಸರಳ ಕರುಂಬಯ್ಯ, ಕಾರ್ಯದರ್ಶಿ ಮಲ್ಚೀರ ಯಶೋಧ ದೇವಯ್ಯ, ಸದಸ್ಯರಾದ…
ಲೇಖಕ: admin
ಮಡಿಕೇರಿ ಏ.8 : ಕೊಡವ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ತ್ರಿವೇಣಿ ಪೊಮ್ಮಕ್ಕಡ ಕೂಟ ಅಸ್ತಿತ್ವಕ್ಕೆ ಬಂದಿದ್ದು, ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲಿದೆ ಎಂದು ಕೂಟದ ಅಧ್ಯಕ್ಷೆ ಕಿಕ್ಕೇರಿಯಂಡ ಲೀಲಾ ಅಯ್ಯಪ್ಪ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.11 ರಂದು ತ್ರಿವೇಣಿ ಪೊಮ್ಮಕ್ಕಡ ಕೂಟವನ್ನು ಅಸ್ತಿತ್ವಕ್ಕೆ ತರಲಾಗಿದೆ. ಸುಮಾರು 19 ಸದಸ್ಯರಿದ್ದು, ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಲಾಗಿದೆ. ನೊಂದ ಕೊಡವರಿಗೆ ಸಹಾಯ ಮಾಡುವುದು, ಕಡು ಬಡತನದಲ್ಲಿರುವರಿಗೆ ಸಹಾಯ, ಕಾನೂನು ಅರಿವು, ಇತ್ಯಾದಿ ಸೇವೆಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಆಕಾಶವಾಣಿಯಲ್ಲಿ ಕೊಡವ ಸಿರಿ ಮತ್ತು ಮಹಿಳಾ ಲೋಕಾದಲ್ಲಿ ವಿವಿಧ ಕಾರ್ಯಕ್ರಮ ನೀಡುವುದು, ಕಡುಬಡವ ಕೊಡವ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುವುದು, ಮದುವೆಯ ನಂತರ ಕಿರುಕುಳಕ್ಕೆ ಒಳಗಾದ ಮಹಿಳೆಗೆ ಸಾಂತ್ವಾನ ಹೇಳುವುದು ಸೇರಿದಂತೆ ಇತ್ಯಾದಿ ಸೇವೆಗಳನ್ನು ಮಾಡಲಾಗುವುದು ಎಂದು ತಿಳಿಸಿದ ಅವರು, ಹೆಚ್ಚಿನ ಮಾಹಿತಿಗಾಗಿ 9972375541, 9686092250 ಸಂಪರ್ಕಿಸುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷೆ ಬೊಪ್ಪಂಡ ಸರಳ ಕರುಂಬಯ್ಯ, ಕಾರ್ಯದರ್ಶಿ ಮಲ್ಚೀರ ಯಶೋಧ ದೇವಯ್ಯ, ಸದಸ್ಯರಾದ…
ಮಡಿಕೇರಿ ಏ.8 : ಮಡಿಕೇರಿ ಕನ್ನಡ ಸಾಹಿತ್ಯ ಪರಿಷತ್ತು, ಪುರಾತತ್ವ ಸಂಗ್ರಹಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆಯಲಿರುವ ‘ಬಣ್ಣ-2023’ ಮಕ್ಕಳ ಬೇಸಿಗೆ ಶಿಬಿರಕ್ಕೆ ದಾಖಲಾತಿ ಆರಂಭಗೊಂಡಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷ ಅಂಬೆಕಲ್ ನವೀನ್ ಹಾಗೂ ರಂಗಮಯೂರಿ ಕಲಾ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲ್, ನಗರದ ಜ್ಯೂನಿಯರ್ ಕಾಲೇಜಿನ ಆವರಣದಲ್ಲಿ ಏ.22 ರಿಂದ 30ರ ವರೆಗೆ ಶಿಬಿರ ನಡೆಯಲಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಯೋಗ, ಭಜನೆ, ಯಕ್ಷಗಾನ, ಡ್ರಾಯಿಂಗ್, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ನೃತ್ಯ, ವ್ಯಕ್ತಿತ್ವ ವಿಕಸನ, ಪರಿಸರ ಶಿಕ್ಷಣ, ಜನಪದ ಕಲೆ, ಪ್ರಥಮ ಚಿಕಿತ್ಸೆ, ಅಗ್ನಿ ಅನಾಹುತದ ರಕ್ಷಣೆ, ಜೀವನ ಪ್ರೀತಿ, ಅಭಿನಯ ಇತ್ಯಾದಿ ತರಗತಿಗಳನ್ನು ಆಯಾಯ ಶಿಕ್ಷಕರ ಮಾರ್ಗದರ್ಶನದ ಮುಖಾಂತರ ವಾರಪೂರ್ತಿ ನಡೆಸುತ್ತಿರುತ್ತದೆ ಎಂದು ತಿಳಿಸಿದರು. ರಾಜ್ಯದ ವಿವಿಧ ಕ್ಷೇತ್ರದ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ತರಬೇತಿಗಾಗಿ ಭಾಗವಹಿಸುತ್ತಿದ್ದು, ಹದಿನೇಳು (6-17) ವರ್ಷ…
ಮಡಿಕೇರಿ ಏ.8 : ಕ್‌ಗ್ಗಟ್ಟ್‌ನಾಡ್ ಹಿರಿಯ ನಾಗರಿಕ ವೇದಿಕೆ ಮತ್ತು ನಿನಾದ ವಿದ್ಯಾಸಂಸ್ಥೆ ಸಹಯೋಗದಲ್ಲಿ ಪೊನ್ನಂಪೇಟೆಯಲ್ಲಿ ಕೊಡವ ಭಾಷಿಕ ಜನಾಂಗಗಳಿಗೆ ಆಯೋಜಿಸಿದ್ದ ’ಉಮ್ಮತ್ ಬೊಳಕ್’ ಕಾರ್ಯಕ್ರಮದಲ್ಲಿ ಮಹಿಳೆಯರು ಉಮ್ಮತ್ತಾಟ್, ಪುರುಷರು ಬೊಳಕಟ್ ಸ್ಪರ್ಧೆಯಲ್ಲಿ ಪಾಲ್ಗಗೊಂಡು ಸಂಸ್ಕೃತಿಕ ಅನಾವರಣಗೊಳಿಸಿದರು. ಪೊನ್ನಂಪೇಟೆ ನಿನಾದ ವಿದ್ಯಾಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡವ ಸೀರೆ, ಪತ್ತಾಕ್, ಜೋಮಾಲೆಯಲ್ಲಿ ಮಹಿಳೆಯರು ಕಂಗೊಳಿಸಿದರು. ಪುರುಷರು ಕುಪ್ಯಚೇಲೆ, ಪೀಚೆಕತ್ತಿ ತೊಟ್ಟು ಬೊಳಕಾಟ್ ಪ್ರದರ್ಶನ ನೀಡಿದರು. ಚೆಕ್ಕೇರ ಪಂಚಮ್ ತ್ಯಾಗರಾಜ್ ಅವರಿಂದ ಕೊಡವ ಹಾಡು ಮೂಡಿ ಬಂತು. ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ಕಾಳಿಮಾಡ ಎಂ.ಮೋಟಯ್ಯ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಉಮ್ಮತ್ತಾಟ್ ಎಂಬುವುದು ಕೊಡವ ಜಾನಪದ ನೃತ್ಯವಾಗಿದೆ. ಉಮ್ಮತ್ ಎಂದರೆ ಹೂವಿನ ಹೆಸಳಿನಂತಿರುವ ತಾಳದಲ್ಲಿ ಹೆಜ್ಜೆಗೆ ತಕ್ಕವಾಗಿ ಬಡಿದುಕೊಂಡು ಕುಣಿಯುವ ವಿಶಿಷ್ಟ ಕಲೆಯಾಗಿದೆ. ತಾಳಕ್ಕೆ ತಕ್ಕ ಹೆಚ್ಚೆ ಈ ಕಲೆಯ ವಿಶೇಷತೆಯಲ್ಲೊಂದು ಎಂದರು. ಇಂತಹ ನೃತ್ಯ ಕಲೆಯನ್ನು ಪೋಷಿಸುವುದು ಎಲ್ಲರ ಜವಾಬ್ದಾರಿ. ಸಂಸ್ಕೃತಿ, ನೀತಿಯ ನಡೆ ಉಳಿಯಲು ಆಚರಣೆ…
ಕುಶಾಲನಗರ ಏ.8 : ಪ್ರತಿಯೊಬ್ಬರೂ ಜಲಮೂಲಗಳ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸಬೇಕಾಗಿದೆ ಎಂದು ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ಜಿ. ಕೆಂಚಪ್ಪ ಕರೆ ನೀಡಿದ್ದಾರೆ. ಮಹಾ ಆರತಿ ಬಳಗ ಆಶ್ರಯದಲ್ಲಿ ಸ್ಥಳೀಯ ಗೌರಿ ಗಣೇಶ ದೇವಾಲಯ ಟ್ರಸ್ಟ್ ಸಹಯೋಗದೊಂದಿಗೆ ಜೀವನದಿ ಕಾವೇರಿಗೆ ನಡೆದ 143 ನೆಯ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ನದಿ ತೊರೆಗಳು ಕಲುಷಿತಗೊಳ್ಳದಂತೆ ಎಚ್ಚರವಹಿಸಿ ಸ್ವಚ್ಛವಾಗಿ ಹರಿಯುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ಕುಶಾಲನಗರ ಕೊಡವ ಸಮಾಜದ ಅಧ್ಯಕ್ಷರಾದ ಮಂಡೆಪಂಡ ಬೋಸ್ ಮೊಣ್ಣಪ್ಪ ಮಾತನಾಡಿ, ಪಟ್ಟಣ ಗ್ರಾಮಗಳ ತ್ಯಾಜ್ಯಗಳು ನೇರವಾಗಿ ನದಿ ಸೇರಿದಂತೆ ಶಾಶ್ವತ ಯೋಜನೆಗಳು ರೂಪಿಸಬೇಕು. ಆ ಮೂಲಕ ಸ್ವಚ್ಛ ಕಾವೇರಿ ಕನಸು ನನಸಾಗಲು ಸಾಧ್ಯ ಎಂದರು. ಅರ್ಚಕರಾದ ನೇತೃತ್ವದಲ್ಲಿ ಕುಂಕುಮ ಅರ್ಚನೆ, ಅಷ್ಟೋತ್ತರ ನಂತರ ಸಾಮೂಹಿಕವಾಗಿ ಕಾವೇರಿ ನದಿಗೆ ಮಹಾ ಆರತಿ ಬೆಳಗಲಾಯಿತು. ಗೌರಿ ಗಣೇಶ ದೇವಾಲಯ ಟ್ರಸ್ಟ್ ಅಧ್ಯಕ್ಷರಾದ ಸುಚಿತ್ರ ತಮ್ಮಯ್ಯ, ಮಮತಾ, ಭವಾನಿ, ಹೇಮಾ, ಲಾವಣ್ಯ, ನಿತಿನ್ ಮತ್ತು ಮಹಾ…
ಮಡಿಕೇರಿ ಏ.8 : ಕರ್ನಾಟಕ ರಾಜ್ಯದ ಭಾಗವಾಗಿರುವ ಕೊಡಗು ಜಿಲ್ಲೆಗೆ ಸಂವಿಧಾನಾತ್ಮಕವಾಗಿ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಸ್ವಯಂ ಆಡಳಿತ, ಕೊಡವರನ್ನು ಎಸ್‍ಟಿ ಪಟ್ಟಿಗೆ ಸೇರಿಸುವುದು ಮತ್ತು ಕೊಡವ ನ್ಯಾಷನಲ್ ಕೌನ್ಸಿಲ್ ನ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಆಯೋಗವೊಂದನ್ನು ರಚನೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಕರ್ನಾಟಕ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಲಾಗಿದೆ. ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಮಾಜಿ ಕೇಂದ್ರ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಅವರು ವಕೀಲ ಸತ್ಯ ಸಬರ್ವಾಲ್ ಅವರ ಮೂಲಕ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಲೆ ಅವರ ಪೀಠದ ಮುಂದೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಕೊಡವರ ಸ್ಥಿತಿಗತಿಯ ಕುರಿತು ವಿವರಿಸಲಾಗಿದೆ. ಅರ್ಜಿ ಸ್ವೀಕರಿಸಿದ ನ್ಯಾಯಪೀಠ ಏ.17ಕ್ಕೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಪ್ರಕರಣದಲ್ಲಿ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಲ್ಪಡುವ ರಾಜ್ಯ ಕಾನೂನು ಇಲಾಖೆ ಕಾರ್ಯದರ್ಶಿ, ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಲ್ಪಡುವ ಕೇಂದ್ರ ಕಾನೂನು ಸಚಿವಾಲಯದ ಕಾರ್ಯದರ್ಶಿ, ಕೇಂದ್ರ ಗೃಹ ಕಾರ್ಯದರ್ಶಿ ಹಾಗೂ ಕೊಡವ…
ಮಡಿಕೇರಿ ಏ.8 : ಕೊಡಗು ಜಿಲ್ಲೆಯಲ್ಲಿ ಮತದಾನದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ(ಸ್ವೀಪ್) ವತಿಯಿಂದ ಸ್ತ್ರೀಶಕ್ತಿ ಸಂಘಟನೆಯ ಜಿಲ್ಲಾ ಒಕ್ಕೂಟದ ಸಹಯೋಗದಲ್ಲಿ ಏ.30 ರಂದು ಬೆಳಗ್ಗೆ 10 ಗಂಟೆಗೆ ಮಡಿಕೇರಿ ಗಾಂಧಿ ಮೈದಾನದಲ್ಲಿ ರಂಗೋಲಿ ಸ್ಪಧೆ೯ಯನ್ನು ಆಯೋಜಿಸಲಾಗಿದೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷೆ ರೆಹನಾ ಸುಲ್ತಾನ್ ತಿಳಿಸಿದ್ದಾರೆ. ಅಂದು ಬೆಳಗ್ಗೆ 10 ಗಂಟೆಗೆ ಗಾಂಧಿ ಮೈದಾನದಲ್ಲಿ 18 ವಷ೯ ಮೇಲ್ಪಟ್ಟ ಮಹಿಳೆಯರಿಗಾಗಿ ಪುಡಿ ರಂಗೋಲಿ ಮತ್ತು ಪುಪ್ಪ ರಂಗೋಲಿ ವಿಭಾಗಗಳಲ್ಲಿ ಸ್ಪಧೆ೯ ಆಯೋಜಿಸಲಾಗಿದೆ. ಮತದಾನದ ಮಹತ್ವ ಸಾರುವ ವಿಷಯದಲ್ಲಿಯೇ ವಿಭಿನ್ನವಾಗಿ ರಂಗೋಲಿ ಮೂಡಿಬರಬೇಕು. ಸ್ಪಧಿ೯ಗಳು ಏ.30 ರಂದು ಬೆಳಗ್ಗೆ 10 ಗಂಟೆಯೊಳಗೆ ಗಾಂಧಿ ಮೈದಾನದ ಸ್ಪಧಾ೯ ಸ್ಥಳದಲ್ಲಿಯೇ ಹೆಸರು ನೋಂದಾಯಿಸಬೇಕು.
ನಾಪೋಕ್ಲು ಏ.8 : ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಭಕ್ತ ಜನಸಂಘದ ವತಿಯಿಂದ ಮಳೆಗಾಗಿ ಪರ್ಜನ್ಯ ಹೋಮ ನಡೆಯಿತು. ಈ ಸಂದರ್ಭ ಅಖಿಲ ಕೊಡವ ಸಮಾಜದ ಅಧ್ಯಕ್ಷರು ಹಾಗೂ ದೇವತಕ್ಕರಾದ ಪರದಂಡ ಸುಮನ್ ಸುಬ್ರಮಣಿ ಮಾತನಾಡಿ, ಜಿಲ್ಲೆಯ ಜನರ ಶಾಂತಿ ಸುಭಿಕ್ಷೆಗಾಗಿ ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಪರ್ಜನ್ಯ ಹೋಮ ನೆರವೇರಿಸಲಾಗಿದೆ. ಜಿಲ್ಲೆಯ ಎಲ್ಲೆಡೆ ಮಳೆಯಾಗಬೇಕು. ಸಮೃದ್ಧಿ ನೆಲೆಸೆಬೇಕು ಎಂಬ ಆಕಾಂಕ್ಷೆಯೊಂದಿಗೆ ತಕ್ಕಮುಖ್ಯಸ್ಥರು ಒಟ್ಟಾಗಿ ದೇವನೆಲೆಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇವೆ. ಸಂಕಲ್ಪ ಕೈಗೊಂಡಾಗಿನಿಂದ ಅಲ್ಲಲ್ಲಿ ಮಳೆ ಬರಲು ಆರಂಭಿಸಿದೆ ಎಂದರು. ಪುತ್ತೂರಿನ ತಂತ್ರಿ ಗಿರೀಶ್ ಭಟ್ ನೇತೃತ್ವದಲ್ಲಿ ಮುಖ್ಯ ಅರ್ಚಕ ಕುಶಭಟ್, ಶ್ರೀಕಾಂತ್ ಹಾಗೂ ಶ್ರೀನಿವಾಸ್ ಪರ್ಜನ್ಯ ಹೋಮ ಹಾಗೂ ಪೂಜಾ ವಿಧಿವಿಧಾನಗಳು ನೆರವೇರಿತು. ಈ ಸಂದರ್ಭ ಭಕ್ತ ಜನಸಂಘದ ಅಧ್ಯಕ್ಷ ಕಾಂಡಂಡ ಜೋಯಪ್ಪ, ಕಲಿಯಂಡ ಹ್ಯಾರಿ ಮಂದಣ್ಣ, ಪರದಂಡ ಡಾಲಿ, ಪ್ರಹ್ಲಾದ, ವಿಠಲ, ಸದಾ ನಾಣಯ್ಯ, ಜೋಯಪ್ಪ, ಶಂಭು ನಂಜಪ್ಪ, ಪಾಡಂಡ ನರೇಶ್, ಕೇಟೋಳಿರ ಕುಟ್ಟಪ್ಪ, ಕಣಿಯರ ನಾಣಯ್ಯ, ಕಲಿಯಂಡ…
ಮಡಿಕೇರಿ ಏ.8 : ನಗರದ ಶ್ರೀ ಮುತ್ತಪ್ಪನ್ ಕ್ಷೇತ್ರಂನ ಪುನರ್ ಪ್ರತಿಷ್ಟಾಪನಾ ವಾರ್ಷಿಕೋತ್ಸವ ಹಾಗೂ ಶ್ರೀ ಮುತ್ತಪ್ಪ ಜಾತ್ರಾ ಮಹೋತ್ಸವ ಅಂಗವಾಗಿ ಸಂಜೆ ಕಲಶ ಹಾಗೂ ತಾಲಾ ಪೊಲಿ ಮೆರವಣಿಗೆ ನಡೆಯಿತು. ನಗರದ ಗಾಂಧಿ ಮೈದಾನದಿಂದ ಆರಂಭಗೊಂಡ ಮೆರವಣಿಗೆಗೆ ಮಡಿಕೇರಿ ನಗರ ಪೊಲೀಸ್ ಠಾಣಾಧಿಕಾರಿ ಶ್ರೀನಿವಾಸ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ.ಸುದೀರ್, ಪ್ರಮುಖರಾದ ಕೆ.ಎಸ್.ರಮೇಶ್, ಉನ್ನಿಕೃಷ್ಣ, ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ವಿ.ಹಿಂ.ಪ ಪ್ರಮುಖರಾದ ಸುರೇಶ್ ಮುತ್ತಪ್ಪ ಹಿಂದೂ ಮಲಯಾಳಿ ಸಂಘದ ವಾಸುದೇವ್, ಚೇತನ್ ಇನ್ನಿತರರು ಇದ್ದರು. ಮೆರವಣಿಗೆಯಲ್ಲಿ ಕಡಗದಾಳು, ನೀರುಕೊಲ್ಲಿ, ಸಂಪಿಗೆಕಟ್ಟೆ, ಕೆಎಸ್‌ಆರ್‌ಟಿಸಿ, ಸಂಪಿಗೆಕಟ್ಟೆ, ಕೆಎಸ್‍ಆರ್‍ಟಿಸಿ ಡಿಪೋ ಮುಂಭಾಗ, ಮೈತ್ರಿ ಜಂಕ್ಷನ್‍ನಿಂದ ಆಗಮಿಸಿದ್ದ ಮುತ್ತಪ್ಪ ದೇವರ ಕಶದೊಂದಿಗೆ ಮಹಿಳೆಯರು ಹಾಗೂ ಮಕ್ಕಳು ತಾಲಾ ಪೊಲಿಯೊಂದಿಗೆ ಭಾಗವಹಿಸಿದ್ದರು. ಮಂಗಳೂರಿನ ಕಲಾತಂಡಗಳು, ಮುತ್ತಪ್ಪ ದೇವರ ಮೂರ್ತಿಯ ಮಂಟಪದೊಂದಿಗೆ ಚಂಡೆ, ವಾದ್ಯಗಳು ಮೆರವಣಿಗೆಯನ್ನು ಮುನ್ನಡೆಸಿದವು. ವಾಹನ ದಟ್ಟಣೆಯ ನಡುವೆ ಸಾಗಿದ ಮೆರವಣಿಗೆ ಮುತ್ತಪ್ಪ ದೇವಾಲಯದಲ್ಲಿ…
ಮಡಿಕೇರಿ ಏ.8 : ಸೋಮವಾರಪೇಟೆ ತಾಲೂಕಿನ ಗೋಪಾಲಪುರ ಚರ್ಚಿನಲ್ಲಿ ಗುಡ್ ಫ್ರೈಡೆ (ಶುಭ ಶುಕ್ರವಾರ)ಆಚರಿಸಲಾಯಿತು. ಸಂತ ಅಂತೋಣಿ ಚರ್ಚಿನಲ್ಲಿ ಸಂಜೆ ಪ್ರಾರ್ಥನೆ ಆರಂಭಿಸಿ ಚರ್ಚ್ ನ ಹಿಂಭಾಗ ಇರುವ ಶಿಲುಬೆಟ್ಟದಲ್ಲಿ 15 ಶಿಲುಬೆಯ ಪ್ರಾರ್ಥನೆಯನ್ನು ಮಾಡಿ ಗುಡ್ ಫ್ರೈಡೆ ಆಚರಿಸಲಾಯಿತು. ಈ ಸಂದರ್ಭ ಫಾದರ್ ಜಾಕಬ್ ಕೊಲ್ಲನೂರು ದೇವರ ಸಂದೇಶವನ್ನು ಭಕ್ತಾದಿಗಳಿಗೆ ಬೋಧಿಸಿದರು. ಯೇಸುವಿನ ಪ್ರೀತಿ, ತ್ಯಾಗ, ಸಂಕೇತವಾಗಿ ಈ ಗುಡ್ ಫ್ರೈಡೆಯನ್ನು ಆಚರಿಸತ್ತೇವೆ ಎಂದು ತಿಳಿಸಿದರು. ಗೋಪಾಲಪುರ ಚರ್ಚ್ ಗುರುಗಳಾದ ಫಾದರ್ ಜಾಕಪ್ ಹಾಜರಿದ್ದರು.






