ಮಡಿಕೇರಿ ಫೆ.27 : ಸರ್ಕಾರದ ಸಾಧನೆಗಳನ್ನು ರಾಜ್ಯದ ಜನತೆಗೆ ತಲುಪಿಸುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಸಂಚಲಿಸಲಿರುವ ” ಪ್ರಗತಿ ರಥಯಾತ್ರೆ” ಗೆ ಮಡಿಕೇರಿಯಲ್ಲಿ ಶಾಸಕ ಕೆ.ಜಿ.ಬೋಪಯ್ಯ ಚಾಲನೆ ನೀಡಿದರು. ಈ ಸಂದರ್ಭ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ರವಿ ಕಾಳಪ್ಪ, ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ನಗರಸಭಾ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.
ಲೇಖಕ: admin
ಮಡಿಕೇರಿ ಫೆ.27 : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ‘ ಶ್ರೀ ಸವಿತಾ ಮಹರ್ಷಿ ಜಯಂತಿ ‘ ಹಾಗೂ ತಾಲೂಕು ಸವಿತಾ ಸಮಾಜದ ಜಿಲ್ಲಾ ಮಟ್ಟದ ಕ್ರೀಡೋತ್ಸವಕ್ಕೆ ಶಾಸಕ ಕೆ.ಜಿ.ಬೋಪಯ್ಯ ಪಂದ್ಯಾವಳಿಗೆ ಚಾಲನೆ ನೀಡಿದರು. ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಕೋರಿದರು.
ಶಿವಮೊಗ್ಗ ಫೆ.27 : ಶಿವಮೊಗ್ಗಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭೇಟಿ ನೀಡಿ ಸೋಗಾನೆಯಲ್ಲಿ ರೂ.450 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಿದರು. ನಂತರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಸ್ಮಾರ್ಟ್ಸಿಟಿ ಕಾಮಗಾರಿ, ಶಿಮುಲ್ ಹಾಲು ಪ್ಯಾಕಿಂಗ್ ಘಟಕ, ಮಾಮ್ ಕೋಸ್ ಆಡಳಿತ ಭವನ, ಶಿಮೊಗ್ಗ-ಶಿಕಾರಿಪುರ, ರಾಣೆಬೆನ್ನೂರು ಹೊಸ ರೈಲು ಮಾರ್ಗಕ್ಕೆ ಶಿಲಾನ್ಯಾಸ ಹಾಗೂ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋಗೆ ಶಿಲಾನ್ಯಾಸ ನೆರವೇರಿಸಿದರು.
ಮಡಿಕೇರಿ ಫೆ.27 : ಚೆಟ್ಟಳ್ಳಿಯ ಚೇರಳ ಶ್ರೀ ಭಗವತಿ ದೇವಾಲಯದ ವಾರ್ಷಿಕೋತ್ಸವವು ಫೆ.28 ರಿಂದ ಮಾ.5ರ ವರೆಗೆ ನಡೆಯಲಿದೆ ಎಂದು ದೇವಾಲಯದ ತಕ್ಕಮುಖ್ಯಸ್ಥರು ತಿಳಿಸಿದ್ದಾರೆ. ಫೆ.28 ರಂದು ಪೂರ್ವಾಹ್ನ ತಕ್ಕ ಮುಖ್ಯಸ್ಥರ ಸಮ್ಮುಖದಲ್ಲಿ ಊರಿನವರೆಲ್ಲ ಸೇರಿ ದೇವಾಲಯದಲ್ಲಿ ಬೊಳಕ್‌ಮರ ನಿಲ್ಲಿಸಿ, ಹಬ್ಬಕಟ್ಟು ಬೀಳುವುದು. ನಂತರ ಮೂರುದಿನ ಬೆಳಿಗ್ಗೆ ದೇವಾಲಯದಲ್ಲಿ ಕೊಂಬಾಟ್ ನೆರವೇರಲಿದೆ. ಮಾ.3 ರಂದು ಪಟ್ಟಣಿ ಹಬ್ಬ ನಡೆಯಲಿದ್ದು, ದೇವರ ಬನಕ್ಕೆ ಕಲ್ಡಾಚ ಹೋಗಿ ಹೆಣ್ಣುಮಕ್ಕಳು ಪಾಯಸಮಾಡಿ ಅಯ್ಯಪ್ಪದೇವರ ಭನದಲ್ಲಿ ನೈವೇದ್ಯ ವಿಟ್ಟು ಬರುವುದು. ಮಧ್ಯಾಹ್ನ 3 ಗಂಟೆಗೆ ಕೊಂಗೇಟಿರ ಐನ್ ಮನೆ ಯಿಂದ ತಕ್ಕರು ಊರಿನವರು ದೇವತಕ್ಕರ ಮನೆಗೆ ಬಂದು ಫಲಹಾರ ಸ್ವೀಕರಿಸಿ, ದೇವರ ಭಂಡಾರವನ್ನು ದೇವತಕ್ಕರ ಮನೆಯಿಂದ ದೇವಾಲಕ್ಕೆತರುವುದು. ದೇವಾಲಯದಲ್ಲಿ ಪೂಜಾ ಕೈಂಕರ್ಯ ನಡೆದು ಕೋಂಬಾಟ್ ನೇರವೇರಲಿದೆ. ನಂತರ ದೇವರ ಭಂಡಾರವನ್ನು ಮನೆಗೆ ತರಲಾಗುವುದು. ಮಾ.4 ರಂದು ಅಯ್ಯಪ್ಪ ಬನದಲ್ಲಿ ಪೂಜಾ ಕಾರ್ಯಕ್ರಮ ನಡೆದು ಊರಿನವರು ತಕ್ಕಮುಖ್ಯಸ್ಥರ ಸಮ್ಮುಖದಲ್ಲಿ ದೇವಾಲಯಕ್ಕೆ ಬಂದು ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ…
ಮಡಿಕೇರಿ ಫೆ.27 : ಯುವ ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಸರಕಾರ (ministry of education:PM yuva mentorship scheme) ದೇಶದಾದ್ಯಂತ ಉತ್ಸಾಹಿ ಯುವ ಬರಹಗಾರರನ್ನು ಆಯ್ಕೆ ಮಾಡಿದ್ದು,ಕೊಡಗಿನ ಯುವ ಬರಹಗಾರ್ತಿ ಆಲಿಯಾ ಚೋಂದಮ್ಮ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ದೇಶದಾದ್ಯಂತ ಒಟ್ಟು 75 ಯುವ ಬರಹಗಾರರನ್ನು ಕೇಂದ್ರ ಸರಕಾರ ಆಯ್ಕೆ ಮಾಡಿದ್ದು, ಕರ್ನಾಟಕದಿಂದ ಆಯ್ಕೆಗೊಂಡ ಮೂವರಲ್ಲಿ ಕೊಡಗಿನ ಆಲಿಯಾ ಚೋಂದಮ್ಮ ಇಡೀ ದೇಶದಲ್ಲೇ ಅತೀ ಕಿರಿಯ ವಯಸ್ಸಿನ (16 ವರ್ಷ) ಬರಹಗಾರ್ತಿಯಾಗಿ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ. ಆಲಿಯಾ ಚೋಂದಮ್ಮ ಜಿಲ್ಲೆಯ ಕಾಕೋಟು ಪರಂಬುವಿನ ಮೇವಡ ಅಯ್ಯಣ್ಣ ಹಾಗೂ ಚೇಂದಂಡ(ಹೊಸೂರು) ಮೀನಾಕ್ಷಿ ದಂಪತಿಯ ಪುತ್ರಿ. ಗೋಣಿಕೊಪ್ಪಲಿನ ಕಾಲ್ಸ್ ವಿದ್ಯಾಸಂಸ್ಥೆಯಲ್ಲಿ ಎಸ್.ಎಸ್.ಎಲ್.ಸಿ. ಪೂರೈಸಿ ಪ್ರಸ್ತುತ ಬೆಂಗಳೂರಿನ BETHANYS HIGH ಕಾಲೇಜಿನಲ್ಲಿ 11ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾಳೆ. ದೆಹಲಿಯಲ್ಲಿ ಫೆ.25 ರಿಂದ ಮಾ.5 ರ ತನಕ ನಡೆಯುತ್ತಿರುವ 9 ದಿನಗಳ WORLD BOOK FAIR ನಲ್ಲಿ ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರ ಕುರಿತು…
ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳ ನಡುವೆ ಇರುವ ಶಿಶಿಲ ಎಂಬ ಪುಟ್ಟ ಹಳ್ಳಿಯಲ್ಲಿದೆ ಈ ಪ್ರಸಿದ್ಧ ಮತ್ಸ್ಯತೀರ್ಥ ಕ್ಷೇತ್ರ. ಸುಂದರ ಮತ್ತು ರಮಣೀಯ ಪಶ್ಚಿಮ ಘಟ್ಟಗಳ ನಡುವೆ ಪಸರಿಸಿದ ತುಳುನಾಡು ಸಾವಿರಾರು ದೈವ ದೇವತೆಗಳ ಪುಣ್ಯದ ನೆಲೆವೀಡು.ಇಲ್ಲಿ ಪೂಜಿಸಲ್ಪಡುವ ನೂರಾರು ದೈವ ದೇವಸ್ಥಾನ ಗಳಲ್ಲಿ ಬಹು ಪುರಾತನ ದಿಂದಲೂ ಉದ್ಭವ ಲಿಂಗವೆಂದು ಪೂಜಿಸಲ್ಪಡುವ ಶಿಶಿಲೇಶ್ವರ ದೇವಸ್ಥಾನವೂ ಒಂದು.ಊರಿನ ಹೆಸರಿನೊಂದಿಗೆ ಅಪರೂಪದ ದೇವಸ್ಥಾನ ಇದಾಗಿದೆ. ಕಪಿಲ ನದಿಯ ದಂಡೆಯ ಮೇಲಿರುವ ಶಿಲಾಮಯ ಶಿಶಿಲೇಶ್ವರ ದೇವಾಲಯ ಪಕ್ಕದಲ್ಲಿದೆ ನದಿಯಿಂದಾಶ್ರಯಿಸಿದ ಮನಮೋಹಕ ಮತ್ಸ್ಯತೀರ್ಥ. ಇದು ಇಲ್ಲಿಯ ದೃಶ್ಯ ವೈಶಿಷ್ಟ್ಯ. ಕಪಿಲಾ ತಟದಲ್ಲಿರುವ ಶಿಶಿಲೇಶ್ವರ ಕ್ಷೇತ್ರದಲ್ಲಿ ಮೀನುಗಳ ಸಮೃದ್ಧವಾದ ಸಾಮ್ರಾಜ್ಯವೇ ಇದೆ. ಶಿಶಿಲೇಶ್ವರ ದೇವಸ್ಥಾನದಲ್ಲಿ ಹರಕೆ ಸಲ್ಲಿಸಿ ಈ ಮೀನುಗಳಿಗೆ ಆಹಾರವನ್ನು ನೀಡಿದರೆ ಮನುಷ್ಯನ ದೇಹಕ್ಕೆ ಅಂಟಿರುವ ಚರ್ಮರೋಗ ಸೇರಿದಂತೆ ಇತರೇ ವ್ಯಾಧಿಗಳು ಗುಣಮುಖವಾಗುತ್ತದೆ ಎನ್ನುವ ನಂಬಿಕೆ ಇದೆ. ಪಶ್ಚಿಮಘಟ್ಟಗಳ ತಪ್ಪಲಿನಲ್ಲಿರುವ ಶಿಶಿಲೇಶ್ವರ ದೇವಸ್ಥಾನ ಶುಭ್ರವಾಗಿ ಹರಿಯುವ ಕಪಿಲಾ ನದಿಯ ತಟದಲ್ಲಿದೆ. ಘಟ್ಟ ಪ್ರದೇಶಗಳಿಂದ…
ನಾಪೋಕ್ಲು ಫೆ.27 : ಗ್ರಾಮೀಣ ಭಾಗದಲ್ಲಿ ಕ್ಯಾಟರ್ ಬಿಲ್ ಸ್ಪರ್ಧೆಯನ್ನು ಆಯೋಜಿಸುವುದರ ಮೂಲಕ ಗ್ರಾಮೀಣ ಕ್ರೀಡೆಗೆ ಮತ್ತೆ ಜೀವ ತುಂಬ ಕೆಲಸವನ್ನು ಸ್ಟೆಪ್ಸ್ ಸಂಸ್ಥೆ ಮಾಡಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು. ಕಕ್ಕಬೆಯ ಪ್ರೌಢಶಾಲಾ ಮೈದಾನದಲ್ಲಿ ಸ್ಟೆಪ್ಸ್ ಸಂಸ್ಥೆ ವತಿಯಿಂದ ಆಯೋಜಿಸಲಾದ ರಾಜ್ಯಮಟ್ಟದ ಕ್ಯಾಟರ್ ಬಿಲ್ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೊಡಗು ಕ್ರೀಡೆಯ ತವರೂರು. ಕ್ರೀಡೆ ಇಲ್ಲಿನ ಜನರ ಸಂಸ್ಕೃತಿಯಾಗಿದ್ದು, ಗ್ರಾಮೀಣ ಕ್ರೀಡೆಯೊಂದಕ್ಕೆ ಹೊಸತನ ನೀಡುವ ಕೆಲಸವನ್ನು ಸ್ಟೆಪ್ಸ್ ಸಂಸ್ಥೆ ಮಾಡಿದೆ. ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ರಾಜ್ಯದ ನಾನಾ ಭಾಗಗಳಿಂದ ಕ್ರೀಡಾಪಟುಗಳು ಆಗಮಿಸಿರುವುದು ಸಂತಸದ ವಿಷಯ ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಕ್ಯಾಟರ್ ಬಿಲ್ ಸ್ಪರ್ಧೆಯ ಮೂಲಕ ಉತ್ತಮ ಗುರಿ ಸಾಧಿಸಲು ಸಾಧ್ಯ. ಕೊಡಗಿನಲ್ಲಿ ಹಾಕಿ ಉತ್ಸವ ಆರಂಭಗೊಂಡ ಬಳಿಕ ವಿವಿಧ ಗ್ರಾಮೀಣ ಕ್ರೀಡೆಗಳು ಕ್ರೀಡಾಸಕ್ತರಿಗೆ ರಸದೌತಣ ನೀಡುತ್ತಿವೆ. ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ಸೌಹಾರ್ದತೆಯನ್ನು ಮೆರೆಯಬೇಕು ಎಂದರು. ಶ್ರೀ ರಾಮ ಟ್ರಸ್ಟ್…
ನಾಪೋಕ್ಲು ಫೆ.27 : ಹಳೆ ತಾಲೂಕಿನ ಶ್ರೀ ಪೊನ್ನು ಮುತ್ತಪ್ಪ ದೇವಾಲಯದ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಎ.ಕೆ. ಚಂದ್ರನ್, ಉಪಾಧ್ಯಕ್ಷರಾಗಿ ಟಿ.ಎ. ಶ್ರೀಧರ, ಕಾರ್ಯದರ್ಶಿಯಾಗಿ ಟಿ. ಸಿ. ರಾಜೀವನ್, ಸಹ ಕಾರ್ಯದರ್ಶಿಯಾಗಿ ಟಿ.ಎಂ. ತಂಗನ್, ಕೋಶಾಧಿಕಾರಿಯಾಗಿ ಕೆ.ಬಿ. ವಿನಿಲ್,ಸಮಿತಿ ಸದಸ್ಯರಾಗಿ ಕೆ.ಮಹೇಶ್, ಸುನಿಲ್ ಪಿ.ಕೆ, ಕಿಶೋರ್ ಪಿ.ಸಿ, ಸಂತೋಷ್ ಎ.ವಿ, ರವಿ ಟಿ. ಎ, ಮಹೇಶ್ ಟಿ.ಎನ್, ಜಗದೀಶ್ ಟಿ.ಬಿ, ಕೃಷ್ಣ ಟಿ.ಕೆ, ಸುಕುಮಾರ್ , ಬಾಲಕೃಷ್ಣ ಟಿ.ಕೆ, ರಾಜು ಮೊಣ್ಣಪ್ಪ,ಕೆ.ಕೆ.ವಿನೋದ್ ಆಯ್ಕೆಯಾದರು. ದೇವಾಲಯದ ಸಭಾಂಗಣದಲ್ಲಿ ನಡೆದ ದೇವಾಲಯದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ವರದಿ : ಝಕರಿಯ ನಾಪೋಕ್ಲು
ಕುಶಾಲನಗರ,ಫೆ.27 : ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕುಶಾಲನಗರದ ಎಸ್.ಆದಂ ಆಯ್ಕೆಯಾಗಿದ್ದಾರೆ. ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ನ ಅಧ್ಯಕ್ಷರಾದ ಅಬ್ದುಲ್ ಖಾದರ್ ಅವರ ಅಧ್ಯಕ್ಷತೆಯಲ್ಲಿ ಮೂರ್ನಾಡುವಿನಲ್ಲಿ ನಡೆದ ಸಭೆಯಲ್ಲಿ ಆದಂ ಅವರನ್ನು ಸರ್ವ ಸದಸ್ಯರು ಆಯ್ಕೆ ಮಾಡಿದ್ದಾರೆ. ಎಸ್.ಆದಂ ಅವರು ಕೊಡಗು ಕಬಡ್ಡಿ ಅಸೋಸಿಯೇಷನ್ ನ ಜಿಲ್ಲಾ ಸಂಘಟನಾ ಕಾರ್ಯದರ್ಶಿ, ಕೊಡಗು ನೆಟ್ ಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ, ರಂಜಿತ್ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಇದರೊಂದಿಗೆ ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಆಗಿ ಆಯ್ಕೆಯಾಗಿದ್ದಾರೆ. ಇವರಿಗೆ ಬಂಧು ಬಳಗ, ಸ್ನೇಹಿತರು ಹಾಗೂ ಕುಶಾಲನಗರದ ಜನತೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಮಡಿಕೇರಿ ಫೆ.27 : ಚಂಡಿಘಡದಲ್ಲಿ ನಡೆದ ಆಲ್ ಇಂಡಿಯಾ ಪೊಲೀಸ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಫ್ ನಲ್ಲಿ ಮಡಿಕೇರಿ ಡಿಎಆರ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಜಿತೇಂದ್ರ ರೈ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ.






