ಮಡಿಕೇರಿ ಮೇ 6 : ಕೆಪಿಸಿಸಿ ಸದಸ್ಯರಾಗಿದ್ದ ಕದ್ದಣಿಯಂಡ ಹರೀಶ್ ಬೋಪಣ್ಣ ಕಾಂಗ್ರೆಸ್ ಪಕ್ಷ ತೊರೆದು ಭಾರತೀಯ ಜನತಾ ಪಾರ್ಟಿ ಗೆ ಸೇರ್ಪಡೆಗೊಂಡಿದ್ದಾರೆ. ಶಾಸಕ ಕೆ.ಜಿ.ಬೋಪಯ್ಯ ಅವರ ಸರಳತೆ, ಸಜ್ಜನಿಕೆ ಹಾಗೂ ಬಿಜೆಪಿ ಯ ತತ್ವ ಸಿದ್ಧಾಂತವನ್ನು ಮೆಚ್ಚಿ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿರುವುದಾಗಿ ಹರೀಶ್ ಬೋಪಣ್ಣ ಸ್ಪಷ್ಟಪಡಿಸಿದರು. ಈ ಸಂದರ್ಭ ಶಾಸಕ ಕೆ.ಜಿ.ಬೋಪಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಜಿಲ್ಲಾ ಬಿಜೆಪಿ ಕಾರ್ಯಕಾರಿ ಸಮಿತಿಯ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ಹಾಗೂ ಮತ್ತಿತರ ಕಾರ್ಯಕರ್ತರು ಹಾಜರಿದ್ದರು.
ಲೇಖಕ: admin
ಮಡಿಕೇರಿ ಮೇ.5 : ಚುನಾವಣೆಯಲ್ಲಿ ಸೋಲಿನ ಭೀತಿಯನ್ನು ಎದುರಿಸುತ್ತಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷ ನನ್ನ ವಿರುದ್ಧ ಅಪಪ್ರಚಾರ ಮಾಡುವ ಮೂಲಕ ಮತದಾರರಲ್ಲಿ ಗೊಂದಲ ಸೃಷ್ಟಿಸುವ ಕಾರ್ಯದಲ್ಲಿ ತೊಡಗಿವೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಆರೋಪಿಸಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿರುವ ತಾವು, ಬಿಜೆಪಿಯನ್ನು ಬೆಂಬಲಿಸುತ್ತಿರುವುದಾಗಿ ಕಾಂಗ್ರೆಸ್ ಪಕ್ಷದವರು ಹಾಗೂ ಕಾಂಗ್ರೆಸ್ ಅನ್ನು ಬೆಂಬಲಿಸುತ್ತಿರುವುದಾಗಿ ಬಿಜೆಪಿಯವರು ಅಪಪ್ರಚಾರ ನಡೆಸುತ್ತಿದ್ದಾರೆ. ಜೆಡಿಎಸ್ ಪಕ್ಷದ ಪ್ರಬಲ ಪೈಪೋಟಿಯಿಂದಾಗಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಭಯ ಕಾಡುತ್ತಿದೆ ಎಂದು ಟೀಕಿಸಿದರು. ::: ನಿಲುವು ಸ್ಪಷ್ಟಪಡಿಸಲಿ: ಹಿಜಾಬ್, ಹಲಾಲ್ ಘಟನೆಗಳ ಸಂದರ್ಭ ಧ್ವನಿ ಎತ್ತದ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳು ವಿಭಜನೆಯಾಗುವ ಭೀತಿಯಲ್ಲಿ ಜೆಡಿಎಸ್ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದೆ. ಬಿಜೆಪಿಯ ‘ಬೀ ಟಿಂ’ ಆಗಿರುವ ಕಾಂಗ್ರೆಸ್ ಪಕ್ಷ, ಟಿಪ್ಪು ಜಯಂತಿ ಬಗ್ಗೆ ತಮ್ಮ ನಿಲುವು ಏನೆಂದು ಸ್ಪಷ್ಟಪಡಿಸಲಿ ಎಂದು ನಾಪಂಡ ಮುತ್ತಪ್ಪ ಸವಾಲೆಸೆದರು. ನಾನು ಓರ್ವ…
ಮಡಿಕೇರಿ ಮೇ 5 : ಕುಂಜಿಲದಲ್ಲಿ ವಿರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪೊನ್ನಣ್ಣ ಪರ ಬಿರುಸಿನ ಮತ ಪ್ರಚಾರ ನಡೆಯಿತು. ಈ ಸಂದರ್ಭ ಕಕ್ಕಬ್ಬೆ ಗ್ರಾ.ಪಂ ಅಧ್ಯಕ್ಷ ಕಲಿಯಂಡ ಸಂಪ, ಪ್ರಮುಖರಾದ ಮಹಮ್ಮದ್ ಹಾಜಿ, ಬಶೀರ್ ಪೊಯಕರೆ ರಝು ಕುಂಡಂಡ, ಮುಸ್ತು ಬಾರಿಕೆ, ಹಸನ್ ಪಯ್ಯಡಿ , ಹಂಸ ಮಾತನಾಡಿ ಕಾಂಗ್ರೆಸ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ಸೂಚಿಸಲಾಗುತ್ತಿದ್ದು, ಪೊನ್ನಣ್ಣ ಅವರು ಅತೀ ಹೆಚ್ಚು ಮತಗಳಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕುಂಜಿಲ ಬೂತ್ ಕಾಂಗ್ರೆಸ್ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ಪಕ್ಷದ ಗೆಲುವಿಗೆ ನಿರಂತರ ಶ್ರಮಿಸುವುದಾಗಿ ತಿಳಿಸಿದರು. ಈ ಸಂದರ್ಭ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಹಾಜರಿದ್ದರು.
ಮಡಿಕೇರಿ ಮೇ 5 : ಕೊಡಗು ಜಿಲ್ಲಾಡಳಿತ, ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ, ಕೊಡಗು ಸ್ಕೌಟ್ಸ್ ಮತ್ತು ಗೈಡ್ಸ್ ಸಹಯೋಗದಲ್ಲಿ ಮತದಾನದ ಮಹತ್ವ ಕುರಿತು ಜಾಗೃತಿ ಜಾಥವು ನಡೆಯಿತು. ಜಾಗೃತಿ ಜಾಥಗೆ ಜಿ.ಪಂ.ಸಿಇಒ ಮತ್ತು ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ.ಎಸ್.ಆಕಾಶ್ ಚಾಲನೆ ನೀಡಿದರು. ಜಾಥವು ಮಹದೇವ ಪೇಟೆಯ ಎ.ವಿ.ಶಾಲೆ ಬಳಿಯಿಂದ ಆರಂಭವಾಗಿ ಮಹದೇವಪೇಟೆಯ ಪ್ರಮುಖ ರಸ್ತೆ ಮೂಲಕ ಸ್ಕ್ವಾಡರ್ನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತ ತಲುಪಿತು. ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ರಾಣಿ ಮಾಚಯ್ಯ ಮಾತನಾಡಿ ಇದೇ ಮೇ 10 ರಂದು ನಡೆಯುವ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಅರ್ಹರೆಲ್ಲರೂ ಮತದಾನ ಮಾಡುವ ಮೂಲಕ ಸಂಭ್ರಮಿಸಬೇಕು ಎಂದು ಕರೆ ನೀಡಿದರು. ಜಿಲ್ಲಾಡಳಿತ, ಸ್ವೀಪ್ ಸಮಿತಿ, ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಮತದಾನ ಮಹತ್ವ ಕುರಿತು ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ತಪ್ಪದೇ ಮತದಾನ ಮಾಡುವಂತಾಗಬೇಕು ಎಂದು ರಾಣಿ ಮಾಚಯ್ಯ ಕೋರಿದರು. ಜಾಥಗೆ ಚಾಲನೆ ನೀಡಿ…
ಮಡಿಕೇರಿ ಮೇ 5 : ಭಾಗಮಂಡಲ ಸಮೀಪದ ಕಡೋಡಿ ಶ್ರೀ ಮಹಾವಿಷ್ಣು ದೇವಾಲಯದಲ್ಲಿ ವಿರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್.ಪೊನ್ನಣ್ಣ ಗೆಲುವಿಗಾಗಿ ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು. ಪೊನ್ನಣ್ಣ ಅವರ ಸಹೋದರ ನರೇನ್ ಕಾರ್ಯಪ್ಪ ಮತ್ತು ಕುಟುಂಬದ ಸದಸ್ಯರು ಹಾಗೂ ಅಭಿಮಾನಿಗಳು ವಿಶೇಷ ಪ್ರಾರ್ಥನೆ ನೆರವೇರಿಸಿದರು. ದೇವಾಲಯದ ಮುಖ್ಯಸ್ಥರಾದ ಗಣೇಶ್ ಶ್ರೀನಿವಾಸ್, ಚರಣ್ ಕುಮಾರ್, ಸುಜಯ್ ನೇತೃತ್ವದಲ್ಲಿ ಪೂಜೆ ನಡೆಯಿತು. ಈ ಸಂದರ್ಭ ಪ್ರಮುಖರಾದ ಮಂಗೇರಿರ ಜಗದೀಶ್, ಪ್ರೇಮ್ ಕುಮಾರ್ ಮನು, ದೀಪಕ್, ಕೆದಂಬಾಡಿ ರಮೇಶ್, ಹರೀಶ್ ಕುಮಾರ್, ವಿಶು ಪ್ರವೀಣ್ ಕುಮಾರ್, ದೊಡ್ಡೇರ ರಘು, ಹೇಮರಾಜು, ಶಿವಕುಮಾರ್, ಕೀರ್ತಿ ಉತ್ತಪ್ಪ, ಹಾರೀಶ್, ವೇಣುಗೋಪಾಲ್ ಸರು, ಬಾಚಿಮಂಡ ಲವ ಚಿಣ್ಣಪ್ಪ, ಕರಣ್ ಕಾರ್ಯಪ್ಪ ಹಾಗೂ ಮತ್ತಿತರರು ಹಾಜರಿದ್ದರು.
ಕುಶಾಲನಗರ ಮೇ 5 : ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧ ಅಂಶ ಪ್ರಕಟವಾದ ಹಿನ್ನೆಲೆಯಲ್ಲಿ ಕುಶಾಲನಗರದ ವಿವಿಧ ದೇವಾಲಯಗಳಲ್ಲಿ ಹನುಮಾನ್ ಚಾಲಿಸಾ ಪಾರಾಯಣ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕುಶಾಲನಗರ ರಾಮಾಂಜನೇಯ ಉತ್ಸವ ಸಮಿತಿಯ ನೇತೃತ್ವದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸೇರಿ ಪಾರಾಯಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪ್ರಮುಖರಾದ ಜಿಎಲ್ ನಾಗರಾಜ್, ನವನೀತ್ ಪೊನ್ನಟ್ಟಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಸಮಿತಿಯ ಪ್ರಮುಖರಾದ ಪ್ರವೀಣ್, ರಾಜೀವ್, ಪುಂಡರಿಕಾಕ್ಷ,, ಆರ್ ರಾಜೀವ್, ವಿನು ಅಮೃತರಾಜ್, ಆಮೆ ಜನಾರ್ಧನ್ ಮತ್ತಿತರರು ಇದ್ದರು. ವಿಶ್ವ ಹಿಂದೂ ಪರಿಷತ್ನ ಜಿಲ್ಲಾ ಸಂಚಾಲಕರಾದ ಸಂತೋಷ್ ನೇತೃತ್ವದಲ್ಲಿ ವಿವಿಧ ದೇವಾಲಯಗಳಲ್ಲಿ ಕಾರ್ಯಕರ್ತರು ಪಾರಾಯಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮಡಿಕೇರಿ ಮೇ 5 : ‘ಇದು ನನ್ನ ಕೊನೇ ಚುನಾವಣೆಯಾಗಿದ್ದು, ಮುಂದಿನ ಸಲ ಯುವಕರಿಗೆ ಸ್ಪರ್ಧಿಸಲು ಅವಕಾಶ ನೀಡಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲಾಗುತ್ತದೆ’ ಎಂದು ಐದು ಬಾರಿಯ ಶಾಸಕ, ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ತಮ್ಮ ನಿರ್ಧಾರ ಪ್ರಕಟಿಸುತ್ತಲೆ, ತಮ್ಮ ಪಕ್ಕದಲ್ಲೆ ಕುಳಿತಿದ್ದ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರು ಹಾಗೂ ಈ ಬಾರಿಯ ಚುನಾವಣಾ ಆಕಾಂಕ್ಷಿಯೂ ಆಗಿದ್ದ ಬಿ.ಬಿ. ಭಾರತೀಶ್‍ರತ್ತ ಅರ್ಥಗರ್ಭಿತ ನೋಟ ಬೀರುವ ಮೂಲಕ ಮುಂದಿನ ಚುನಾವಣೆಯ ಸ್ಪರ್ಧಿ ಯಾರಾಗಬಹುದೆನ್ನುವ ಬಗ್ಗೆ ಮೌನವಾಗಿಯೇ ಉತ್ತರ ನೀಡಿದಂತೆ ಕಂಡು ಬಂದಿತು. ಕಾಂಗ್ರೆಸ್ ತೊರೆದಿರುವ ಜೀವಿಜಯ ತನಗೆ ಬೆಂಬಲ ನೀಡುವ ವಿಶ್ವಾಸವಿದೆ. ಕಾಂಗ್ರೆಸ್ ಉಪಾಧ್ಯಕ್ಷ ಅನಂತ ಕುಮಾರ್ ಬಿಜೆಪಿಗೆ ತನ್ನ ಅಪಾರ ಬೆಂಬಲಿಗರೊಂದಿಗೆ ಸೇರಲಿರುವುದು ಮತ್ತಷ್ಟು ಬಲ ನೀಡಲಿದೆ ಎಂದೂ ರಂಜನ್ ನುಡಿದರು. ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿಜೆಪಿಗೆ?- ಕಾಂಗ್ರೆಸ್‍ನ ಜಿಲ್ಲಾಧ್ಯಕ್ಷರಾಗಿದವರೊಬ್ಬರು ಬಿಜೆಪಿಗೆ ಸಧ್ಯದಲ್ಲಿಯೇ ಸೇರ್ಪಡೆಯಾಗಲಿದ್ದಾರೆ. ಕಾಂಗ್ರೆಸ್ ಈಗ ನಾಯಕರಿಲ್ಲದ ಮನೆಯಂತಾಗಿದೆ ಎಂದು ರಂಜನ್ ಲೇವಡಿ…
ಮಡಿಕೇರಿ ಮೇ 5 : ಮಡಿಕೇರಿ ಕ್ಷೇತ್ರದ ಸಮೃದ್ಧ ಭವಿಷ್ಯಕ್ಕಾಗಿ ಸುಸ್ಥಿರ ಯೋಜನೆಯ ಪರಿಕಲ್ಪನೆಯೊಂದಿಗೆ ‘ಗ್ರೇಟರ್ ಮಡಿಕೇರಿ ಟೂರಿಸಂ ಕಾರಿಡಾರ್’ ಪ್ರಮುಖ ಅಂಶಗಳನ್ನು ಒಳಗೊಂಡ ಮಡಿಕೇರಿ ಕ್ಷೇತ್ರದ ಬಿಜೆಪಿ ಚುನಾವಣಾ ಪ್ರಣಾಳಿಕೆಯನ್ನು ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ಬಿಡುಗಡೆಗೊಳಿಸಿದರು, ಸುದ್ದಿಗೋಷ್ಠಿಯಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅಭ್ಯರ್ಥಿ ಅಪ್ಪಚ್ಚು ರಂಜನ್, ಮಡಿಕೇರಿ ಕ್ಷೇತ್ರದ 24 ಗ್ರಾಮಗಳನ್ನು ಒಳಗೊಂಡ ಗ್ರೇಟರ್ ಮಡಿಕೇರಿ ಟೂರಿಸಂ ಕಾರಿಡಾರ್‍ನ್ನು ಮುಂದಿನ ದಿನಗಳಲ್ಲಿ ರೂಪಿಸಲಾಗುತ್ತದೆ. ಮಡಿಕೇರಿ ಕ್ಷೇತ್ರದಾದ್ಯಂತ ಇರುವ ಪ್ರವಾಸಿ ಮತ್ತು ಧಾಮಿಕ ಕ್ಷೇತ್ರಗಳನ್ನು ಒಳಗೊಂಡ ಟೂರಿಸಂ ಕಾರಿಡಾರ್ ಇದಾಗಿರಲಿದೆ ಎಂದರು. ಮಡಿಕೇರಿ, ಕೆ.ನಿಡುಗಣೆ ಭಾಗಮಂಡಲ, ತಲಕಾವೇರಿ, ಕೆ.ನಿಡುಗಣಿ, ಗಾಳಿಬೀಡು, ಗರ್ವಾಲೆ, ಕಿರಗಂದೂರು, ಬೆಟ್ಟದಳ್ಳಿ, ಶಾಂತಳ್ಳಿ, ಸಕಲೇಶಪುರ, ಹಾನಗಲ್ಲು, ಚೌಡ್ಲು , ಸೋಮವಾರಪೇಟೆ, ದೊಡ್ಡಮಳ್ತೆ, ಗೌಡಳ್ಳಿ, ಶನಿವಾರಸಂತೆ, ನಿಡ್ತ, ತೊರೆನೂರು, ಹೆಬ್ಬಾಲೆ, ಕೂಡು ಮಂಗಳೂರು, ಕುಶಾಲನಗರ, ಗುಡ್ಡೆಹೊಸೂರು, ನಂಜರಾಯಪಟ್ಟಣ, ನಾಕೂರು ಶಿರಂಗಾಲ, ಕಂಬಿಬಾಣೆ ಸೇರಿದಂತೆ ಮಡಿಕೇರಿ ಕ್ಷೇತ್ರದ ಹಲವು ಗ್ರಾಮಗಳಲ್ಲಿನ ಪ್ರವಾಸೋದ್ಯಮ ತಾಣಗಳನ್ನು ಗ್ರೇಟರ್ ಮಡಿಕೇರಿ ಟೂರಿಸಂ ಕಾರಿಡಾರ್…
ಮಡಿಕೇರಿ ಮೇ 9 : ಸಾರ್ವತ್ರಿಕ ವಿಧಾನ ಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೆ ಕೊಡಗಿನ ಜಿಲ್ಲಾ ಕೇಂದ್ರ್ರ ಮಡಿಕೇರಿಯಲ್ಲಿ ಸಂತೆಯ ದಿನವಾದ ಇಂದು ಜಾತ್ಯತೀತ ಜನತಾ ದಳ ಮತ್ತು ಕಾಂಗ್ರೆಸ್ ಪಕ್ಷಗಳಿಂದ ರೋಡ್ ಶೋ ಮತ್ತು ಬೈಕ್ ಜಾಥದ ಮೂಲಕ ಮತದಾರರ ಬಳಿ ಸಾಗುವ ಪ್ರಯತ್ನ ನಡೆಯಿತು. ಮಡಿಕೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಅವರು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ. ಗಣೇಶ್ ಅವರ ನೇತೃತ್ವದಲ್ಲಿ, ನೂರಾರು ಕಾರ್ಯಕರ್ತರೊಂದಿಗೆ ನಗರದ ಎ.ವಿ.ಶಾಲೆಯ ಬಳಿಯಿಂದ ನಗರದ ಮುಖ್ಯ ರಸ್ತೆಯಲ್ಲಿ ರೋಡ್ ಶೋ ನಡೆಸುವ ಮೂಲಕ ಭರ್ಜರಿ ಮತಯಾಚನೆ ನಡೆಸಿದರು. ಶುಕ್ರವಾರದ ಸಂತೆಗೆಂದು ಮಡಿಕೇರಿ ಸುತ್ತಮುತ್ತಲಿನಿಂದ ಆಗಮಿಸಿದ್ದ ಗ್ರಾಮೀಣರು, ನಗರದ ನಿವಾಸಿಗಳನ್ನು ಸಂಪರ್ಕಿಸಿದ ಅಭ್ಯರ್ಥಿ ನಾಪಂಡ ಮುತ್ತಪ್ಪ ಮತ್ತು ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು, ಪಕ್ಷದ ಕರಪತ್ರವನ್ನು ನೀಡಿ ‘ ಬದಲಾವಣೆಗಾಗಿ ಜೆಡಿಎಸ್ ಬೆಂಬಲಿಸಿ’ ಎಂದು ಮನವಿ ಮಾಡಿಕೊಂಡರು. ಕಾಂಗ್ರೆಸ್‍ನಿಂದ ಬೈಕ್ ರ‍್ಯಾಲಿ : ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಥರ್…
ಮಡಿಕೇರಿ ಮೇ 5 : 19 ಕರ್ನಾಟಕ ಬೆಟಾಲಿಯನ್ ಎನ್‍ಸಿಸಿ ವಾರ್ಷಿಕ ತರಬೇತಿ ಶಿಬಿರವು ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಸ್ಕೂಲ್‍ನಲ್ಲಿ ನಡೆಯಿತು. ಹಿರಿಯ ವಿಭಾಗ (ಸೀನಿಯರ್ ವಿಂಗ್) ಎನ್‍ಸಿಸಿ ಕೆಡೆಟ್‍ಗಳು ಮತ್ತು ಜೂನಿಯರ್ ವಿಭಾಗ (ಜೂನಿಯರ್ ವಿಂಗ್) ಎನ್‍ಸಿಸಿ ಕೆಡೆಟ್‍ಗಳಿಗೆ 10 ದಿನಗಳ ಶಿಬಿರವನ್ನು ಮಡಿಕೇರಿಯ 19 ಕರ್ನಾಟಕ ಬಿಎನ್ ಎನ್‍ಸಿಸಿಯ ಕಮಾಂಡಿಂಗ್ ಆಫೀಸರ್ ಕರ್ನಲ್ ಜೆಫಿರಿನ್ ಗಿಲ್ಬರ್ಟ್ ಅರಾನ್ಹಾ, ಲೆಫ್ಟಿನೆಂಟ್ ಕರ್ನಲ್ ಚಾಕೋ ಹಾಗೂ ಹಲವಾರು ಎನ್‍ಸಿಸಿ ಮೇಲುಸ್ತುವಾರಿಗಳ ನೇತೃತ್ವದಲ್ಲಿ ನಡೆಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮತ್ತು ಸುಳ್ಯ ತಾಲೂಕುಗಳ ಜೊತೆಗೆ ಕೊಡಗು ಜಿಲ್ಲೆಯ ವಿವಿಧ ಸಂಸ್ಥೆಗಳಿಂದ 520 ಕೆಡೆಟ್‍ಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಶಿಬಿರದಲ್ಲಿ ನಾಯಕತ್ವದ ಗುಣ, ಶಿಸ್ತು, ಕರ್ತವ್ಯನಿಷ್ಠೆ, ಸಮಯಪಾಲನೆ, ಕ್ರಮಬದ್ಧತೆ, ನ್ಯಾಯಸಮ್ಮತ ಅಧಿಕಾರ, ಮೌಲ್ಯ, ಆತ್ಮ ವಿಶ್ವಾಸ ಮತ್ತು ಸ್ವಾವಲಂಬನೆಯ ಮಟ್ಟವನ್ನು ಹೆಚ್ಚಿಸುವ ಬಗ್ಗೆ ತರಬೇತಿ ನೀಡಲಾಯಿತು. ಎನ್‍ಸಿಸಿ ಕೆಡೆಟ್‍ಗಳಿಗೆ ಸಮಾಜ ಕಲ್ಯಾಣ, ಪರಿಸರ ಜಾಗೃತಿ, ಸಾಹಸ ಮತ್ತು ಮನರಂಜನಾ ಚಟುವಟಿಕೆಗಳಿಗೆ ಒತ್ತು ನೀಡುವ ಮೂಲಕ…






