ಮಡಿಕೇರಿ ಏ.1 : ಮಡಿಕೇರಿ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಯನ್ನಾಗಿ ಟಿ.ಕೆ.ಸಾಯಿಕುಮಾರ್ ಅವರನ್ನು ಕಣಕ್ಕಿಳಿಸಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ ಘೋಷಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು ಬೆಂಗಳೂರಿನಲ್ಲಿ ಮಡಿಕೇರಿ ಕ್ಷೇತ್ರ ಸೇರಿದಂತೆ 142 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದರು ಎಂದು ತಿಳಿಸಿದ್ದಾರೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಧ್ಯದಲ್ಲೇ ಅಭ್ಯರ್ಥಿಯನ್ನು ಘೋಷಿಸಲಾಗುವುದೆಂದು ಹೇಳಿದ್ದಾರೆ.
ಲೇಖಕ: admin
ನಾಪೋಕ್ಲು ಏ.1 : ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಬಳಿ ಅಮ್ಮಂಗೇರಿಯಲ್ಲಿ ಪುದಿಯೋದಿ ದೇವರ ವಾರ್ಷಿಕ ಕೋಲವು ಶ್ರದ್ಧಾಭಕ್ತಿಯಿಂದ ಜರುಗಿತು. ಈ ದೈವವು ಪಾಡಿ ಶ್ರೀ ಇಗ್ಗುತ್ತಪ್ಪ ದೇವರ ಕಾವಲುಗಾರ ಆಗಿ ನೆಲೆ ನಿಂತು ನಂಬಿದವರಿಗೆ ಒಳಿತು ಮಾಡುವ ದೇವರೆಂದು ಪ್ರಸಿದ್ಧಿ ಪಡೆದಿದೆ. ಮಾ.30 ರ ರಾತ್ರಿಯಿಂದ ದೈವಸ್ಥಾನದಲ್ಲಿ ದೈವತಾ ಕಾರ್ಯಗಲು ಜರುಗಿ ನಂತರ ಮುಂಜಾನೆಯ ವರೆಗೆ ಬೀರ, ಬೀರಾಳಿ ಸೇರಿದಂತೆ ವಿವಿಧ ದೈವಗಳ ಕೋಲ ನಡೆಯಿತು. ಮಾ.31 ರಂದು ಮುಂಜಾನೆ ಪುದಿಯೋಧಿ, ಭದ್ರಕಾಳಿ ದೇವರ ಕೋಲವು ನಡೆದು ಭಕ್ತಾದಿಗಳು ಇಷ್ಟಾರ್ಥ ಸೇವೆ ಹರಕೆ ಒಪ್ಪಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ಗ್ರಾಮಸ್ಥರು, ಪರ ಊರಿನ ಭಕ್ತಾದಿಗಳು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕೋಲವನ್ನು ಕಟ್ಟಿದವರು ತಮ್ಮ ಮೈ ಪಕ್ಕದಲ್ಲಿ ಉರಿಯುವ ಬೆಂಕಿಯ ಜ್ವಾಲೆಯನ್ನು ಕಟ್ಟಿ ಕೊಂಡು ಮೈ ಸುಡುವ ಹಾಗೆ ದೇವರು ಬರುವ ದೃಶ್ಯ ನೋಡುಗರನ್ನು ಮೂಕಪ್ರೇಕಕರನ್ನಾಗಿಸಿತು. ವರದಿ : ದುಗ್ಗಳ ಸದಾನಂದ.
ಮಡಿಕೇರಿ ಏ.1 : ನಾಪೋಕ್ಲು ರಾಮ ಮಂದಿರದಲ್ಲಿ ರಾಮ ನವಮಿ ಪ್ರಯುಕ್ತ ಶೌರ್ಯ ವಿಪತ್ತು ತಂಡದ ವತಿಯಿಂದ ದೇವಾಲಯದಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು. ದೇವಾಲಯದ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಕಡಿದು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ ಶುಚಿಗೊಳಿಸಲಾಯಿತು. ಸೇವೆಯಲ್ಲಿ ಸಂಯೋಜಕಿ ಬಾಳೆಯಡ ದಿವ್ಯ, ಉಮಾಲಕ್ಷ್ಮಿ, ನಿಶಾ, ಗೀತಾ, ಆಶಾ, ದಮಯಂತಿ, ದಿಲೀಶ್, ಸೀನ ಮಾಧವನ್, ಶಂಕರ್, ಶರವಣ ಉಪಸ್ಥಿತರಿದ್ದರು. ವರದಿ : ದುಗ್ಗಳ ಸದಾನಂದ.
ಮಡಿಕೇರಿ ಏ.1 : ಕೊಡಗು ಜಿಲ್ಲಾ ಪೊಲೀಸ್ ಘಟಕದ ವಿವಿಧ ಠಾಣೆ, ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸಿ ಮಾ.31 ರಂದು ನಿವೃತ್ತಿ ಹೊಂದಿದ ಪಿಎಸ್ಐ ಎಂ.ಡಿ.ಅಪ್ಪಾಜಿ ಮತ್ತು ಎಎಸ್ಐ ಜಿ.ಎಸ್.ಧರ್ಮಪ್ಪ ಅವರನ್ನು ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ನಿವೃತ್ತರನ್ನು ಸನ್ಮಾನಿಸಿ ನಿವೃತ್ತ ಜೀವನ ಶುಭಪ್ರದವಾಗಿರಲೆಂದು ಹಾರೈಸಿದರು.
ಮಡಿಕೇರಿ ಏ.1 : ಪದ್ಮಭೂಷಣ ಜನರಲ್ ತಿಮ್ಮಯ್ಯ ಅವರ 117ನೇ ಹುಟ್ಟುಹಬ್ಬದ ದಿನ ಪ್ರಯುಕ್ತ ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯಿತು.
ವಿರಾಜಪೇಟೆ ಮಾ.31 : ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ವಿರಾಜಪೇಟೆ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿರಾಜಪೇಟೆ ತಾಲ್ಲೂಕಿನ ಇಂಜಿಲಗೆರೆ ಗ್ರಾಮದ ಕಲ್ಲುಕೊರೆ ನಿವಾಸಿ ಪ್ರವೀಣ (31) ಹಾಗೂ ವಿರಾಜಪೇಟೆ ಗಾಂಧಿ ನಗರದ ನಿವಾಸಿ ಇಮ್ರಾನ್ ಸೋನು (22) ಬಂಧಿತ ಆರೋಪಿಗಳು. ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಸಮೀಪ ಸಂಶಯಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದರು. ಇವರ ಬಳಿ 1.22 ಕೆ.ಜಿ ಗಾಂಜಾ ಹಾಗೂ 770 ರೂ. ನಗದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ವರಿಷ್ಠಾಧಿಕಾರಿ ಸುಂದರ್ ರಾಜ್ ಹಾಗೂ ವಿರಾಜಪೇಟೆ ಉಪ ವಿಭಾಗದ ಡಿ.ವೈಎಸ್ಪಿ ಮೋಹನ್ ಕುಮಾರ್ ಅವರುಗಳ ಮಾರ್ಗದರ್ಶನದಲ್ಲಿ ವಿರಾಜಪೇಟೆ ನಗರ ವೃತ ನಿರೀಕ್ಷಕ ಅವರ ಶಿವರುದ್ರ ನಿರ್ದೇಶನದ ಮೇರೆಗೆ ವಿರಾಜಪೇಟೆ ನಗರ ಠಾಣೆಯ ಠಾಣಾಧಿಕಾರಿ ಮದನ್ ಕುಮಾರ್ ಎ.ಎಸ್.ಐ. ಮೊಹಮ್ಮದ್ ಎಂ.ಎo. ಸಿಬ್ಬಂದಿಗಳಾದ ಗಿರೀಶ್, ಮಲ್ಲಿಕಾರ್ಜುನ, ಧರ್ಮ ಹಾಗೂ ಸತೀಶ್ ಅವರು…
ಸೋಮವಾರಪೇಟೆ ಮಾ.31 : ಶ್ರೀ ಆಂಜನೇಯ ದೇವಾಲಯ ಸಮಿತಿ ವತಿಯಿಂದ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಅದ್ದೂರಿಯ ರಾಮನವಮಿ ಉತ್ಸವ ಗುರುವಾರ ರಾತ್ರಿ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ನಡೆಯಿತು. ಒಂದು ವಾರದಿಂದ ಅಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಪ್ರತಿನಿತ್ಯ ಶ್ರೀರಾಮನಿಗೆ ವಿವಿಧ ಅಲಂಕಾರಗಳು ನಡೆಯಿತು. ಗುರುವಾರ ಬೆಳಗ್ಗಿನಿಂದಲೇ ಪಟ್ಟಣದ ವಿವಿಧ ದೇವಸ್ಥಾನಗಳಲ್ಲಿ ಕೋಸಂಬರಿ, ಪಾನಕ, ಮಜ್ಜಿಗೆವಿತರಿಸಲಾಯಿತು. ಜ್ಞಾನವಿಕಾಸ ಶಾಲಾ ಆವರಣದಲ್ಲಿ ಹಿಂದೂ ಜಾಗರಣ ವೇದಿಕೆಯ ವತಿಯಿಂದ ಸಾರ್ವಜನಿಕರಿಗೆ ಅನ್ನದಾನ ನಡೆಯಿತು. ಸಂಜೆ ಶ್ರೀ ರಾಮನ ವಿಗ್ರಹವನ್ನು ಹೊತ್ತು ತಾಲೂಕಿನ ವಿವಿಧ ಗ್ರಾಮಗಳಿಂದ ವಿದ್ಯುತ್ ಅಲಂಕೃತ ಮಂಟಪಗಳು ಹಾಗು ಸ್ತಬ್ದ ಚಿತ್ರಗಳೊಂದಿಗೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಕೇರಳದ ಚಂಡೆವಾದ್ಯ, ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ, ಪಟಾಕಿ ಸಿಡಿಮದ್ದಿನೊಂದಿಗೆ ಶೋಭಾಯಾತ್ರೆ ನಡೆಯಿತು. ಉತ್ಸವ ಸಮಿತಿ ಅಧ್ಯಕ್ಷ ಸುಭಾಶ್ ತಿಮ್ಮಯ್ಯ, ಅಂಜನೇಯ ದೇವಾಲಯ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಎಸ್.ಎಲ್.ಸೀತಾರಾಮ್, ದೇವಾಲಯ ಸಮಿತಿ ಅಧ್ಯಕ್ಷರಾದ ಬನ್ನಳ್ಳಿ ಗೋಪಾಲ್, ಉತ್ಸವ ಸಮಿತಿ ಉಪಾಧ್ಯಕ್ಷರಾದ ಎಂ.ಬಿ.ಉಮೇಶ್…
ಸೋಮವಾರಪೇಟೆ ಮಾ.31 : ಸೋಮವಾರಪೇಟೆ ತಾಲ್ಲೂಕಿನ 15 ಕೆಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳು ಶುಕ್ರವಾರ ಮೊದಲ ಕನ್ನಡ ಭಾಷಾ ಪರೀಕ್ಷೆ ಬರೆದರು. ತಾಲ್ಲೂಕಿನಲ್ಲಿ ಒಟ್ಟು 2382 ವಿದ್ಯಾರ್ಥಿಗಳು ನೊಂದಣಿ ಮಾಡಿಕೊಂಡಿದ್ದರು. ಅದರಲ್ಲಿ 2376 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 6 ವಿದ್ಯಾರ್ಥಿಗಳು ಗೈರಾಗಿದ್ದರು.ಕಳೆದ ಸಾಲಿನಲ್ಲಿ ಅನುತೀರ್ಣಗೊಂಡಿದ್ದ 22 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 8 ವಿದ್ಯಾರ್ಥಿಗಳು ಗೈರಾಗಿದ್ದರು. ಒಟ್ಟು 2398 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಮೊದಲ ಪರೀಕ್ಷೆ ಯಾವುದೇ ಗೊಂದಲಗಳಿಲ್ಲದೆ ನಡೆಯಿತು. ಏಪ್ರಿಲ್ 15ರ ವರಗೆ ಪರೀಕ್ಷೆ ನಡೆಯಿದ್ದು, ಏ.3ರಂದು ಗಣಿತ ಪರೀಕ್ಷೆ ಇದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಹೇಳಿದರು.
ವಿರಾಜಪೇಟೆ ಮಾ.31 : ಬೆಳ್ಳುಮಾಡು ಆಡುಕೋಣಿ ಶಾಸ್ತಾವು ಈಶ್ವರ ವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ರೂ. 2 ಲಕ್ಷ ಆರ್ಥಿಕ ನೆರವು ನೀಡಲಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕರಾದ ಲೀಲಾವತಿ ಅವರು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಚಂಗುಲಂಡ ಪಿ ಬಿದ್ದಪ್ಪ ಅವರ ಬಳಿ ಮಂಜೂರಾದ 2 ಲಕ್ಷ ರೂ. ಗಳ ಡಿಡಿಯನ್ನು ಹಸ್ತಾಂತರ ಮಾಡಿದರು. ಈ ಸಂದರ್ಭ ತಾಲೂಕು ಯೋಜನಾಧಿಕಾರಿ ದಿನೇಶ್, ಮೇಲ್ವಿಚಾರಕ ನಾಗರಾಜ್ ಸೇವಾಪ್ರತಿನಿಧಿ ತೇಜಸ್ವಿನಿ, ಒಕ್ಕೂಟದ ಅಧ್ಯಕ್ಷೆ ಜಮುನಾ, ದೇವಸ್ಥಾನ ಅಭಿವೃದ್ದಿ ಸಮಿತಿಯ ಪದಾಧಿಕಾರಿಗಳಾದ ಪಟ್ಟಂಡ ಕಾವೇರಪ್ಪ, ಪಟ್ಟಂಡ ಅರುಣ, ಮಾತಂಡ ಮಧು, ಎಂ.ದಿನೇಶ್ ಮಾತಂಡ ದೇವಯ್ಯ ಕುಯ್ಮಂಡ ಉತ್ತಯ್ಯ, ಮಾತಂಡ ಕಾಳಪ್ಪ, ಪದಾಧಿಕಾರಿಗಳು, ಹಾಗೂ ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಕುಶಾಲನಗರ ಮಾ.31 : ಮುಂದಿನ ಪೀಳಿಗೆಗೆ ಉತ್ತಮ ಸಂಸ್ಕೃತಿ, ಸಂಸ್ಕಾರವನ್ನು ತಿಳಿಸಿಕೊಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಕೊಡಗು ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ ತಿಳಿಸಿದ್ದಾರೆ. ಕರ್ನಾಟಕ ಜಾನಪದ ಪರಿಷತ್ ಕೊಡಗು ಜಿಲ್ಲೆ ಮತ್ತು ಕುಶಾಲನಗರ ತಾಲೂಕು ಘಟಕ ಹಾಗೂ ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿ ಆಶ್ರಯದಲ್ಲಿ ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ರಥೋತ್ಸವ ಪ್ರಯುಕ್ತ ನಡೆದ ಹಳ್ಳಿ ಹಬ್ಬ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಭಿವೃದ್ಧಿಯ ನಾಗಾಲೋಟದಲ್ಲಿ ಅಳಿದು ಹೋಗುತ್ತಿರುವ ಜನಪದೀಯ ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ತಿಳಿ ಹೇಳಬೇಕಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಹಿಂದಿನ ಕಾಲದಲ್ಲಿ ಜೀವನಕ್ಕೆ ಆಧಾರವಾಗಿದ್ದ ಜನಪದ ಕಥೆಗಳನ್ನು ಯುವ ಪೀಳಿಗೆಗೆ ಹೇಳಿಕೊಡಬೇಕಾಗಿದೆ. ಆ ಮೂಲಕ ಜಾನಪದ ಸಾಹಿತ್ಯದ ಅರಿವು ಮೂಡಿಸಲು ಸಾಧ್ಯ, ಮುಂದಿನ ಪೀಳಿಗೆಗೆ ಹಿಂದಿನ ಸಂಸ್ಕೃತಿ ಬಗ್ಗೆ ಪರಿಚಯಿಸುವ ಸಲುವಾಗಿ ಜಾನಪದ ಪರಿಷತ್ ಜಿಲ್ಲೆಯ ವಿವಿಧೆಡೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಅನಂತಶಯನ ಹೇಳಿದರು. ಜಾನಪದ ಸಂಭ್ರಮಕ್ಕೆ ಚಾಲನೆ…






