ಲೇಖಕ: admin

ಮಡಿಕೇರಿ ಮಾ.23 : ವಿಶ್ವ ಕ್ಷಯರೋಗ ದಿನಾಚರಣೆ ಪ್ರಯುಕ್ತ ಮಾರ್ಚ್, 24 ರಂದು ಬೆಳಗ್ಗೆ 10 ಗಂಟೆಗೆ ನಗರದ ಜಿಲ್ಲಾಡಳಿತ ಭವನದಿಂದ ಬಾಲಭವನದವರೆಗೆ ಜಾಥಾ ನಡೆಯಲಿದೆ. ಜಾಥಾವನ್ನು ಹಿರಿಯ ಪ್ರಧಾನ ನ್ಯಾಯಾಧೀಶರು ಹಾಗೂ ಜಿಲ್ಲಾಧಿಕಾರಿ ಅವರು ಉದ್ಘಾಟಿಸಲಿದ್ದಾರೆ. ನಂತರ ಬೆಳಗ್ಗೆ 11 ಗಂಟೆಗೆ ಬಾಲಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಕ್ಷಯ ರೋಗ ನಿವಾರಣಾ ಕೇಂದ್ರದ ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಅವರು ತಿಳಿಸಿದ್ದಾರೆ.

Read More

ಮಡಿಕೇರಿ ಮಾ.23 : ಕರ್ನಾಟಕ ಲೋಕಾಯುಕ್ತ ಮಡಿಕೇರಿಯ ಅಧಿಕಾರಿಗಳು ಮಾ.27 ರಂದು ಸೋಮವಾರಪೇಟೆ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ಮತ್ತು ಮಾ.31 ರಂದು ಮಡಿಕೇರಿ ಸುದರ್ಶನ ಅತಿಥಿ ಗೃಹದಲ್ಲಿ ಆಯಾಯ ದಿನಗಳಂದು ಬೆಳಗ್ಗೆ 11 ರಿಂದ 1 ಗಂಟೆವರೆಗೆ ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿ ದೂರು ಅರ್ಜಿ ವಿತರಿಸಲಿದ್ದಾರೆ. ಭರ್ತಿ ಮಾಡಿದ ಮತ್ತು ನೋಟರಿಯಿಂದ ಆಫಿಡೆವಿಟ್ ಮಾಡಿಸಿದ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರೆ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ದ ಸಾರ್ವಜನಿಕರು ದೂರುಗಳನ್ನು ನಿಗದಿತ ಪತ್ರದಲ್ಲಿ ನೀಡಬಹುದಾಗಿದೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕೋರಿದೆ. ಹೆಚ್ಚಿನ ವಿವರಗಳಿಗೆ ಮಡಿಕೇರಿ ಲೋಕಾಯುಕ್ತ ಪೊಲೀಸ್ ಕಚೇರಿ, ಗೌಳಿಬೀದಿ, ಮಡಿಕೇರಿಯ ದೂ.ಸಂ.08272-295297 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ತಿಳಿಸಿದ್ದಾರೆ.

Read More

ಮಡಿಕೇರಿ ಮಾ.23 : ಐದನೇ ತರಗತಿಗೆ ಮಾ.27 ರಿಂದ 30 ರವರೆಗೆ ಮತ್ತು 8 ನೇ ತರಗತಿಗೆ ಮಾ.27 ರಿಂದ ಏಪ್ರಿಲ್, 01 ರವರೆಗೆ ಮೌಲ್ಯಾಂಕನ ನಡೆಯಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಸಿ.ರಂಗಧಾಮಯ್ಯ ಅವರು ತಿಳಿಸಿದ್ದಾರೆ. 5 ಮತ್ತು 8 ನೇ ತರಗತಿಯ ಮೌಲ್ಯಾಂಕನದಲ್ಲಿ ಯಾವುದೇ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವುದಿಲ್ಲ. ಎಲ್ಲಾ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ತೇರ್ಗಡೆಗೊಳಿಸಲಾಗುವುದು ಎಂದು ಹೇಳಿದ್ದಾರೆ. 5 ಮತ್ತು 8 ನೇ ತರಗತಿಯ ಮೌಲ್ಯಾಂಕನವು ವಾರ್ಷಿಕ ಪರೀಕ್ಷೆಯಾಗಿರುವುದಿಲ್ಲ. ಇದು ಕೇವಲ ಮೌಲ್ಯಾಂಕನವಾಗಿದೆ. ಈ ಮೌಲ್ಯಾಂಕನದ ಮೂಲಕ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ, ಕಲಿಕಾ ನ್ಯೂನ್ಯತೆ, ಕಲಿಕಾ ಪ್ರಗತಿ ತಿಳಿದುಕೊಂಡು ಮುಂದಿನ ಶೈಕ್ಷಣಿಕ ವರ್ಷಕ್ಕೆ ಕಲಿಕಾ ಕೊರತೆಯನ್ನು ನೀಗಿಸಲು ಶೈಕ್ಷಣಿಕ ಕಾರ್ಯಕ್ರಮ ಹಮ್ಮಿಕೊಳ್ಳುವುದು ಪ್ರಮುಖ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮಾಹಿತಿ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಮೌಲ್ಯಾಂಕನದ ಫಲಿತಾಂಶವನ್ನು ಸಂಬಂಧಿಸಿದ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾತ್ರ ತಿಳಿಸಲಾಗುವುದು. ಈ…

Read More

ಮಡಿಕೇರಿ ಮಾ.23 : ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಮರಗೋಡು ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ 6 ನೇ ವರ್ಷದ ಗೌಡ ಕುಟುಂಬಗಳ ನಡುವಣ ‘ಫುಟ್ಬಾಲ್ ಪಂದ್ಯಾವಳಿ’ ಮತ್ತು ಮರಗೋಡು ವ್ಯಾಪ್ತಿಯ ಗ್ರಾಮಗಳಿಗೆ ಸೀಮಿತವಾಗಿ ವಿವಿಧ ಜನಾಂಗಗಳಿಗೆ ‘ ಯೂನಿಟಿ ಕಪ್ ಫುಟ್ಬಾಲ್’ ಪಂದ್ಯಾವಳಿ ಮೇ6 ರಿಂದ 13ರವರೆಗೆ ನಡೆಯಲಿದೆ. ಸುದ್ದಿ ಗೋಷ್ಠಿಯಲ್ಲಿ ಗೌಡ ಫುಟ್ಬಾಲ್ ಅಕಾಡೆಮಿ ಪದಾಧಿಕಾರಿಗಳು ಈ ಕುರಿತು ಮಾಹಿತಿ ನೀಡಿ, ಗೌಡ ಸಮುದಾಯಗಳ ನಡುವಿನ 7+3 ಆಟಗಾರರ ಫುಟ್ಬಾಲ್ ಪಂದ್ಯಾವಳಿಯಲ್ಲಿ 80 ಕ್ಕೂ ಹೆಚ್ಚಿನ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ತಂಡಗಳು 2 ಸಾವಿರ ರೂ. ಮೈದಾನ ಶುಲ್ಕದೊಂದಿಗೆ ತಂಡದ ಹೆಸರನ್ನು ನೋಂದಾಯಿಸಿಕೊಳ್ಳಬಹುದೆಂದು ತಿಳಿಸಿದರು. ಪಂದ್ಯಾವಳಿ ವಿಜೇತ ತಂಡಕ್ಕೆ 60 ಸಾವಿರ ನಗದು ಮತ್ತು ಟ್ರೋಫಿ, ದ್ವಿತೀಯ 40 ಸಾವಿರ ರೂ. ಮತ್ತು ಟ್ರೋಫಿ, ತೃತೀಯ ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡಗಳಿಗೆ ತಲಾ 10 ಸಾವಿರ ರೂ. ನಗದು ಮತ್ತು ಟ್ರೋಫಿಯನ್ನು ಬಹುಮಾನವಾಗಿ…

Read More

ಮಡಿಕೇರಿ ಮಾ.23 : ಯುಗಾದಿ ಹಬ್ಬದ ಪ್ರಯುಕ್ತ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ‘ಹಿಂದೂ ಚಾಂಪಿಯನ್ ಟ್ರೋಫಿ ಕ್ರಿಕೆಟ್ ಹಾಗೂ ಹಗ್ಗಜಗ್ಗಾಟ ಪಂದ್ಯಾವಳಿ’ ಮಾ.24 ರಿಂದ 26ರವರೆಗೆ ನಾಪೋಕ್ಲುವಿನಲ್ಲಿ ನಡೆಯಲಿದೆಯೆಂದು ಬಜರಂಗದಳದ ನಾಪೋಕ್ಲು ವಿಭಾಗದ ಸಂಚಾಲಕ ರಾಧಕೃಷ್ಣ ರೈ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ನಾಪೋಕ್ಲುವಿನ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆರಂಭಿಕ ದಿನದಂದು ಬೆಳಿಗ್ಗೆ 9.30 ಗಂಟೆಗೆ ಪಂದ್ಯಾವಳಿಗೆ ಚಾಲನೆ ದೊರೆಯಲಿದ್ದು, ವಿ.ಹಿಂ.ಪ. ನಾಪೋಕ್ಲು ಸಂಚಾಲಕ ನಾಟೋಳಂಡ ಸಚಿನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉದ್ಯಮಿ ಬಿದ್ದಾಟಂಡ ದಿನೇಶ್, ಹಿರಿಯ ವಕೀಲರು ಹಾಗೂ ಸಮಾಜ ಸೇವಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ, ವಿ.ಹಿಂ.ಪ. ಬೆಂಗಳೂರು ಪ್ರಮುಖ ಮುನಿಕೃಷ್ಣ, ಸಮಾಜ ಸೇವಕ ಡಾ.ಮಂಥರ್ ಗೌಡ, ಬ್ರೂ ವಿಲ್ಲಾ ಹೋಂ ಸ್ಟೇ ಮಾಲೀಕ ರೋಷನ್, ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್, ಉದ್ಯಮಿಗಳಾದ ಬಲ್ಲಂಡ ಗಿರಿ, ಕಂಗಂಡ ಅರುಣ, ನಾಪೋಕ್ಲು ಎಂ.ಪಿ.ಸ್ಟೋರ್‍ನ ಮಧು ಮೋಹನ, ಕುಶಾಲನಗರ ಆ್ಯಡ್ ಕೂರ್ಗ್‍ನ ಮಧು, ಗೋ…

Read More

ಮಡಿಕೇರಿ ಮಾ.23 : ಕೆದಂಬಾಡಿ ಕ್ರಿಕೆಟ್ ಹಬ್ಬದ 27ನೇ ಆವೃತ್ತಿಯ ಪಂದ್ಯಾವಳಿ ಚೆಟ್ಟಿಮಾನಿಯ ಕೆದಂಬಾಡಿ ಐನ್ ಮನೆಯ ಮೈದಾನದಲ್ಲಿ ಏ.15 ರಿಂದ ಹತ್ತು ದಿನಗಳ ಕಾಲ ನಡೆಯಲಿದೆಯೆಂದು ಕ್ರಿಕೆಟ್ ಹಬ್ಬದ ಆಯೋಜಕ ಸಮಿತಿಯ ಅಧ್ಯಕ್ಷರಾದ ಕೆದಂಬಾಡಿ ಎಸ್.ಕೀರ್ತಿ ಕುಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಕೊಡಗು ಮತ್ತು ದಕ್ಷಿಣ ಕನ್ನಡ ವಿಭಾಗದ ಗೌಡ ಸಮುದಾಯದ ಕಟುಂಬಗಳಿಗೆ ಸೀಮಿತವಾಗಿ ನಡೆಯುವ ಪಂದ್ಯಾವಳಿಯಲ್ಲಿ 80 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು. 2018-2019ರಲ್ಲಿ ಕ್ರಿಕೆಟ್ ಹಬ್ಬವನ್ನು ಆಯೋಜಿಸಲಾಗಿತ್ತು. ಆದರೆ, ಕೊರೊನಾ ಹಾಗೂ ಇನ್ನಿತರ ಸಮಸ್ಯೆಗಳಿಂದ ಕ್ರೀಡಾಕೂಟವನ್ನು ಆಯೋಜಿಸಲು ಸಾಧ್ಯವಾಗಿರಲಿಲ್ಲ.ಈ ಬಾರಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದರು. ಆಸಕ್ತ ತಂಡಗಳು ಏ.5ರೊಳಗೆ ಮೈದಾನ ಶುಲ್ಕ 2500 ರೂ.ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ನಾಕೌಟ್ ಮಾದರಿಯ ಪಂದ್ಯಾವಳಿಯ ಆರಂಭಿಕ ಪಂದ್ಯಗಳು 6 ಓವರ್‍ಗೆ ಸೀಮಿತವಾಗಿರುತ್ತದೆ. ಪ್ರೀ ಕ್ವಾರ್ಟರ್ ಫೈನಲ್‍ನಿಂದ ಸೆಮಿಫೈನಲ್‍ವರೆಗಿನ ಪಂದ್ಯಗಳು 8 ಓವರ್ ಹಾಗೂ ಫೈನಲ್ ಪಂದ್ಯ 12 ಓವರ್‍ನದ್ದಾಗಿರುತ್ತದೆ.ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ…

Read More

ಮಡಿಕೇರಿ ಮಾ.23 : ನಾಪೋಕ್ಲುವಿಗೆ ಸಂಪರ್ಕ ಕಲ್ಪಿಸುವ ಕೋಕೇರಿ-ಕೊಳಕೇರಿ ರಸ್ತೆಯ ಅವ್ಯವಸ್ಥೆಯನ್ನು ಖಂಡಿಸಿ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುತ್ತಿರುವುದಾಗಿ ಸ್ಥಳೀಯ ಗ್ರಾಮಸ್ಥರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಎರಡೂ ಗ್ರಾಮಸ್ಥರು ಮಾತನಾಡಿ, ಶಾಲಾ ಮಕ್ಕಳು, ಸಾರ್ವಜನಿಕರು, ವಾಹನಗಳ ಸಂಚಾರ ಅಸಾಧ್ಯವಾಗಿರುವ ಕೋಕೇರಿ-ಕೊಳಕೇರಿ ರಸ್ತೆ ದುರಸ್ತಿಗೆ ಆಗ್ರಹಿಸಿ ಮಾ.25 ರಂದು ಕೊಳಕೇರಿಯಲ್ಲಿ ‘ರಸ್ತೆ ತಡೆ’ ಪ್ರತಿಭಟನೆ ನಡೆಸಲಾಗುವುದು ಎಂದರು. ನಾಪೋಕ್ಲು ಸಂಪರ್ಕ ರಸ್ತೆಯಾಗಿರುವ ಕೋಕೇರಿ-ಕೊಳಕೇರಿ ನಡುವೆ ಇರುವ ಜಿಲ್ಲಾ ಪಂಚಾಯ್ತಿಗೆ ಒಳಪಟ್ಟ ಸುಮಾರು 6 ಕಿ.ಮೀ. ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲೆ ಪ್ರತಿನಿತ್ಯ ಆರೇಳು ಶಾಲಾ ವಾಹನಗಳು, ವಿರಾಜಪೇಟೆ-ನಾಪೋಕ್ಲು ನಡುವೆ ಖಾಸಗಿ ಬಸ್ ಸಂಚರಿಸುತ್ತದೆ. ಸಂಪೂರ್ಣ ಹದಗೆಟ್ಟಿರುವ ಈ ರಸ್ತೆ ದುರಸ್ತಿಯನ್ನೇ ಕಂಡಿಲ್ಲವೆಂದು ತೀವ್ರ ಅಸಮಾಧಾನ ವ್ಯಕಪಡಿಸಿದರು. ರಸ್ತೆ ಅವ್ಯವಸ್ಥೆಯ ಬಗ್ಗೆ ಆಗಿಂದಾಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿಯನ್ನು ಸಲ್ಲಿಸಿಕೊಂಡು ಬರಲಾಗುತ್ತಿದೆ. ಚುನಾವಣಾ ಹಂತದಲ್ಲಿ ಮಾತ್ರ ರಸ್ತೆ ದುರಸ್ತಿಯ ಭರವಸೆ ನೀಡಲಾಗುತ್ತದೆ. ನಂತರ ರಸ್ತೆಯನ್ನು ಸರಿಪಡಿಸುವ ಬಗ್ಗೆ ಯಾರೂ ಕಾಳಜಿ ವಹಿಸುತ್ತಿಲ್ಲ. ನರಿಯಂದಡ ಗ್ರಾ.ಪಂ…

Read More

ಸೋಮವಾರಪೇಟೆ ಮಾ.23 : ತಾಲೂಕಿನ ಅಕ್ರಮಸಕ್ರಮ ಸಮಿತಿ ಸಭೆಯ ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್  ಅಧ್ಯಕ್ಷತೆಯಲ್ಲಿ ನಡೆಯಿತು. ಫಾಂ 57 ರ ಅಡಿಯಲ್ಲಿ ಅಕ್ರಮಸಕ್ರಮ ಅರ್ಜೀವಿಲೇವಾರಿಗೆ ಸಮಿತಿಯ ಸದಸ್ಯರಿಗೂ ಹಣ ನೀಡಬೇಕೆಂದು ತಾಲೂಕು ಕಚೇರಿ ಸಿಬ್ಬಂದಿಗಳು ಹಾಗೂ ಕೆಲವು ದಲ್ಲಾಳಿಗಳು ಹಣ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ ಎಂದು ಸಮಿತಿ ಸದಸ್ಯ ಎಂ.ಎನ್.ಕುಮಾರಪ್ಪ ಗಂಭೀರ ಆರೋಸಿದರು. ಯಾರು, ಯಾರಿಗೆ ಹಣಕೊಡುತಿದ್ದಾರೆ ಕೇಳಬೇಕು. ಇಲ್ಲಿ ಹಣವಿಲ್ಲದೆ ಕಡತವೇ ಮುಂದೆ ಹೋಗುತ್ತಿಲ್ಲ ಎಂದು ಸಾರ್ವನಿಕವಾಗಿ ಕೇಳಿಬರುತ್ತಿದೆ ಎಂದರು. ಈ ಸಂದರ್ಭ ಮಾತನಾಡಿದ ಶಾಸಕರು ಯಾರಿಗೆ ಹಣಕೊಡುತ್ತಿದ್ದೀರಿ ಹೇಳಿ ಅಧಿಕಾರಿಗಳೇ, ನಾವು ಸಭೆಯಲ್ಲಿ ನೀವು ಕೊಡುವ ಟೀ ಬಿಟ್ಟರೆ ಏನೂ ಕೇಳುತ್ತಿಲ್ಲ, ಬೇಕಾದರೆ ಮುಂದಿನ ಸಭೆಯಿಂದ ಅದನ್ನು ನೀಡಬೇಡಿ. ಹಣಕ್ಕಾಗಿ ಜನ ಸಾಮಾನ್ಯರಿಗೆ ತೊಂದರೆ ಕೊಡಬೇಡಿ, ಹಾಗೆಯೇ ಜನರೂ ಅಷ್ಟೇ ಸುಮ್ಮನೆ ಲಂಚ ಕೊಡಬೇಡಿ ಎಂದರು. ಚುನಾವಣೆ ಹಿನ್ನೆಲೆ ಇದು ಕೊನೆಯ ಸಬೆಯಾದ ಕಾರಣ  ಸಾಕಷ್ಟು ಕಡತ ವಿಲೇವಾರಿ ಮಾಡಲಾಯಿತು ಮತ್ತು ಪಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು. ಸಭೆಯಲ್ಲಿ…

Read More

ಮಡಿಕೇರಿ ಮಾ.23 : ವಿರಾಜಪೇಟೆ  ತಾಲ್ಲೂಕಿನ ಅರ್ಜಿ ಗ್ರಾಮದಲ್ಲಿ  ಜಲಜೀವನ್ ಮಿಷನ್ ಯೋಜನೆಯಡಿ ನಿರ್ಮಿಸಲಾಗಿರುವ  ಕುಡಿಯುವ ನೀರು ಸರಬರಾಜು ಟ್ಯಾಂಕ್ ಅನ್ನು ಕೊಡಗು- ಮೈಸೂರು ಸಂಸದ ಪ್ರತಾಪ್ ಸಿಂಹ ಉದ್ಘಾಟಿಸಿದರು. ಶಾಸಕ ಕೆ.ಜಿ ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುಜಾ  ಕುಶಾಲಪ್ಪ, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.

Read More

ಸೋಮವಾರಪೇಟೆ ಮಾ.23 : ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪಟ್ಟಣದ ಜನತಾಕಾಲೋನಿಯಲ್ಲಿ 35 ಲಕ್ಷ ವೆಚ್ಚದ ಅಭಿವೃದ್ದಿ ಕಾಮಗಾರಿಗೆ ಶಾಸಕ ರಂಜನ್ ಭೂಮಿಪೂಜೆ ನೆರವೇರಿಸಿದರು ಪಟ್ಟಣದಲ್ಲಿ ಇದೆ ಮೊದಲ ಭಾರಿಗೆ ಜನತಾ ಕಾಲೋನಿಯ ನ್ನು ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಸೇರಿಸಲಾಗಿದ್ದು ಮುಂದೆ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಕೈಗೆತ್ತಿ ಕೊಳ್ಳಲಾಗುವುದು ಎಂದು ಶಾಸಕ ರಂಜನ್ ತಿಳಿದರು. ಈ ಭಾರಿ ಬಿಡುಗಡೆಯಾಗಿರುವ 35 ಲಕ್ಷ ರೂ ಗಳಲ್ಲಿ  ಕಾಂಕ್ರೀಟ್ ರಸ್ತೆ, ಚರಂಡಿ, ರಸ್ತೆ ಡಾಂಬರೀಕರಣ ಮುಂತಾದ ಕಾಮಗಾರಿಗಳು ನಡೆಯಲಿವೆ ಎಂದರು. ಈ ಸಂದರ್ಭ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಚಂದ್ರು, ಸದಸ್ಯರಾದ ಶುಭಕರ,ಎಸ್.ಮಹೇಶ್,ಶರತ್,ಮೋಹಿನಿ,ನಾಗರತ್ನ,ಸೋಮೇಶ್,ಜಯಂತಿ,ಮಹೇಶ್, ಮುಖ್ಯಾಧಿಕಾರಿ ನಾಚಪ್ಪ,ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾರ್ಯಪಾಲಕ ಅಭಿಯಂತರ ತೇಜಶ್ರೀ,ಅಭಿಯಂತರ ಜವಾಹರ್ ಜೋಗಿ ಹಾಗೂ ಮುಂತಾದವರು ಹಾಜರಿದ್ದರು.

Read More