ಮಡಿಕೇರಿ ಮಾ.23 : ಚೆನ್ನಯ್ಯನಕೋಟೆ ಗ್ರಾ.ಪಂ ವ್ಯಾಪ್ತಿಯ ಚೆನ್ನಯ್ಯನಕೋಟೆಯಲ್ಲಿ ರೂ.42.50 ಲಕ್ಷ ವೆಚ್ಚದ ವಿವಿಧ ರಸ್ತೆ ಕಾಮಗಾರಿಗಳಿಗೆ ಶಾಸಕ ಕೆ.ಜಿ.ಬೋಪಯ್ಯ ಚಾಲನೆ ನೀಡಿದರು. ಈ ಸಂದರ್ಭ ಗ್ರಾ.ಪಂ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.
ಲೇಖಕ: admin
ಮಡಿಕೇರಿ ಮಾ.23 : ಅಗ್ನಿ ಆಕಸ್ಮಿಕದಿಂದ ಲಾರಿಯೊಂದು ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ. ಗುಜುರಿ ತುಂಬಿದ ಲಾರಿ ಕೊಯಮತ್ತೂರಿನಿಂದ ಮಂಗಳೂರಿಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ತಾಂತ್ರಿಕ ದೋಷದಿಂದ ನಿಲುಗಡೆಗೊಳಿಗೊಳಿಸಿದ್ದ ಲಾರಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತು. ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆಯಿತ್ತಾದರೂ ಅಷ್ಟೊತ್ತಿಗಾಗಲೇ ಲಾರಿ ಸಂಪೂರ್ಣವಾಗಿ ಬೆಂಕಿಗೆ ಆಗುತಿಯಾಗಿತ್ತು.
ಮಡಿಕೇರಿ ಮಾ.22 : ಭಾಗಮಂಡಲದ ಕೋಪಟ್ಟಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭ ನಡೆಯಿತು. ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ಪಂಚಾಯತಿ ಅಧ್ಯಕ್ಷೆ, ಸದಸ್ಯರು, ಗ್ರಾಮದ ನಿವಾಸಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಬಾಗವಹಿಸಿದ್ದರು.
ಮಡಿಕೇರಿ ಮಾ.22 : ಒಂದು ಕೋಟಿ ರೂ. ವೆಚ್ಚದ ಮೂರ್ನಾಡು ಕೊಂಡಂಗೇರಿ ರಸ್ತೆ, 6 ಕೋಟಿ ರೂ. ವೆಚ್ಚದ ಹೊದ್ದೂರು ಜೆ.ಜೆ.ಎಂ ಕುಡಿಯುವ ನೀರಿನ ಯೋಜನೆಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಚಾಲನೆ ನೀಡಿದರು. 2 ಕೋಟಿ ರೂ. ವೆಚ್ಚದ ಮೂರ್ನಾಡು- ನಾಪೋಕ್ಲು ರಸ್ತೆ, 1 ಕೋಟಿ ರೂ. ವೆಚ್ಚದ ಬೆಟ್ಟಗೇರಿ ಮತ್ತು ಕುಂಬಳಗೇರಿ ರಸ್ತೆ ಅಭಿವೃದ್ಧಿಗೆ ಶಾಸಕರು ಭೂಮಿಪೂಜೆ ನೆರವೇರಿಸಿದರು.
ಮಡಿಕೇರಿ ಮಾ.22 : ಗೋಣಿಕೊಪ್ಪ ಸರಕಾರಿ ಶಾಲಾ ಮೈದಾನದಲ್ಲಿ “ಗೋಣಿಕೊಪ್ಪ ಪ್ರಿಮಿಯರ್ ಲೀಗ್” ಕ್ರಿಕೆಟ್ ಅಂತಿಮ ಪಂದ್ಯದ ಉದ್ಘಾಟನೆಯನ್ನು ಶಾಸಕ ಕೆ.ಜಿ.ಬೋಪಯ್ಯ ನೆರವೇರಿಸಿದರು. ನಂತರ ಅವರು ಕ್ರೀಡಾಪಟುಗಳಿಗೆ ಸ್ಫೂರ್ತಿಯ ಮಾತುಗಳನ್ನಾಡಿದರು.
ಸೋಮವಾರಪೇಟೆ ಮಾ.22 : ಯುವತಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಸಿದ ಆರೋಪದಡಿ ಮೂವರ ವಿರುದ್ಧ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೋಮವಾರಪೇಟೆ ತಾಲ್ಲೂಕು ತಾಕೇರಿ ಸಮೀಪದ ಬಿಳಿಗೇರಿಯಲ್ಲಿ 19 ವರ್ಷದ ದಲಿತ ಯುವತಿಯನ್ನು ರಾತ್ರಿ ವೇಳೆ ಎಳೆದೊಯ್ದ ಮೂವರು ಜಾತಿ ನಿಂದನೆ ಮಾಡಿರುವುದಲ್ಲದೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿ ರಾಜು ಎಂಬಾತನನ್ನು ಆಟೋ ರಿಕ್ಷಾ ಸಹಿತ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ. ಉಳಿದ ಇಬ್ಬರು ಆರೋಪಿಗಳಾದ ನೌಷದ್ ಹಾಗೂ ಫಾರೂಕ್ ತಲೆ ಮರೆಸಿಕೊಂಡಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಹಿಂದೂ ಜಾಗರಣಾ ವೇದಿಕೆ ಆರೋಪಿಗಳನ್ನು ತಕ್ಷಣ ಬಂಧಿಸದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ನಾಪೋಕ್ಲು ಮಾ.22 : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿರಾಜಪೇಟೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಈಗಾಗಲೇ ಸ್ಪರ್ಧಿಸುವುದಾಗಿ ಘೋಷಣೆ ಮಾಡಿರುವ ಅಲ್ಪಸಂಖ್ಯಾತರ ನಾಯಕ ಕುಂಜಿಲ ಗ್ರಾಮದ ಮಕ್ಕಿ ನಾಸಿರ್ ಬೆಂಬಲಿಗರೊಂದಿಗೆ ಕ್ಷೇತ್ರದ ವಿವಿಧ ಗ್ರಾಮಗಳಿಗೆ ತೆರಳಿ ಕಾರ್ಯಕರ್ತರ ಸಭೆ ನಡೆಸಿ ಅಬ್ಬರದ ಪ್ರಚಾರ ಮಾಡುತ್ತಿದ್ದು, ರಾಜಕೀಯ ಪಕ್ಷಗಳಿಗೆ ಟಾಂಗ್ ಕೊಡಲು ಮುಂದಾಗಿದ್ದಾರೆ. ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ನೂರಾರು ವಾಹನದಲ್ಲಿ ಎಮ್ಮೆಮಾಡು ದರ್ಗಾಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಅವರು ಎಮ್ಮೆಮಾಡು ಗ್ರಾಮದ ಕೂರುಳಿ ಪಡಿಯಾಣಿ,ಹಾಗೂ ಕಕ್ಕಬ್ಬೆ ಕುಂಜಿಲ, ಕೊಳಕೇರಿ ಸೇರಿದಂತೆ ಕ್ಷೇತ್ರದ ವಿವಿಧ ಗ್ರಾಮಗಳಿಗೆ ತೆರಳಿ ಕಾರ್ಯಕರ್ತರನ್ನು ಒಗ್ಗೂಡಿಸಿ ಶಕ್ತಿ ಪ್ರದರ್ಶನದೊಂದಿಗೆ ಮುಂಬರುವ ಚುನಾವಣೆಯಲ್ಲಿ ಮತ ಪಡೆದು ಗೆಲುವು ಸಾಧಿಸುವ ಹಾಗೂ ರಾಜಕೀಯ ಪಕ್ಷಗಳಿಗೆ ಟಾಂಗ್ ಕೊಡುವ ಕಾರ್ಯ ಪ್ರಾರಂಭ ಮಾಡುತ್ತಿದ್ದಾರೆ. ಇದರಿಂದ ರಾಜಕೀಯ ಪಕ್ಷಗಳಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಇವರು ಕಬ್ಬಿಣದ ಕಡಲೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹಲವು ದಿನಗಳಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ತೆರೆ ಮರೆಯಲ್ಲಿ ಬೆಂಬಲಿಗರೊಂದಿಗೆ ಗೌಪ್ಯ ಸಭೆನಡೆಸುತ್ತಿದ್ದ ನಾಸಿರ್…
ಕಡಂಗ ಮಾ.22 : ಮುಸ್ಲಿಂಮರ ಪವಿತ್ರ ರಂಜಾನ್ ತಿಂಗಳು ಗುರುವಾರದಿಂದ ಪ್ರಾರಂಭವಾಗಲಿದೆ. ಕೇರಳದಲ್ಲಿ ಚಂದ್ರ ದರ್ಶನ ವಾದ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಗುರುವಾರದಿಂದ ಉಪವಾಸ ಪ್ರಾರಂಭಗೊಳ್ಳಲಿದೆ ಎಂದು ಕೊಡಗು ಜಿಲ್ಲಾ ಖಾಜಿ ಗಳಾದ ಸಯ್ಯದ್ ಜಮಲುಲೈಲಿ ತಂಗಳ್ ಮತ್ತು ಕಾಂತಪುರ ಎ ಪಿ ಅಬೂಬಕರ್ ಮುಸ್ಲಿಯಾರ್ ತಿಳಿಸಿದ್ದಾರೆ. (ವರದಿ ನೌಫಲ್ ಎಂ.ಬಿ)
ಸುಂಟಿಕೊಪ್ಪ ಮಾ.22 : ಕೊಡಂಗಲ್ಲೂರು ಭದ್ರಕಾಳಿ ಕುರುಂಬ, ಭಗವತಿ ದೇವಸ್ಥಾನದ 57ನೇ ವಾರ್ಷಿಕ ಮಹಾಪೂಜೆಯು ಶ್ರದ್ಧಾಭಕ್ತಿಯಿಂದ ನೂರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಕಳೆದ 57 ವರ್ಷಗಳಿಂದ ಗದ್ದೆಹಳ್ಳದಲ್ಲಿ ನೆಲೆನಿಂತಿರುವ ಕೊಡಂಗಲ್ಲೂರು ಭದ್ರಕಾಳಿ ಕುರುಂಬ, ಭಗವತಿ ಮಂಗಳವಾರ ಬೆಳಿಗ್ಗೆ ಗಣಪತಿ ಹೋಮದೊಂದಿಗೆ ವೈದಿಕ ಕೈಂಕಾರ್ಯಗಳಿಗೆ ಚಾಲನೆ ನೀಡಲಾಯಿತು. ಸಂಜೆ ಗಣಪತಿ ಪೂಜೆ, ಸುಬ್ರಹ್ಮಣ್ಯ ದೇವರ ಪೂಜೆ, ಮುತ್ತಪ್ಪ ದೇವರಿಗೆ ಪೈಂಗುತ್ತಿ, ರಾತ್ರಿ ಚಾಮುಂಡೇಶ್ವರಿ ಪೂಜೆ, ಗುಳಿಗನ ಪೂಜೆ,ಭದ್ರಕಾಳಿ ದೇವಿಗೆ ಅರ್ಚನೆ ಮತ್ತು ನೈವೇದ್ಯ ಪೂಜೆ ನೆರವೇರಿತು. ನಂತರ ದೇವಿ ಕಾರಣಿಕ ದರ್ಶನ ಭಕ್ತರಿಗೆ ನೀಡಲಾಯಿತು. ರಾತ್ರಿ,ವಸೂರಿಮಲೆ ತಲಪುರಿ ಸ್ನಾನ ಮೆರವಣಿಗೆ ಆಕರ್ಷಣೀಯವಾಗಿ ಮೂಡಿಬಂದಿತು. ಕೇರಳದ ಚಂಡೆ ವಾದ್ಯದೊಂದಿಗೆ ಹಣತೆ ಹಿಡಿದು ಮಹಿಳೆಯರು ಮಕ್ಕಳು ಮೆರವಣಿಗೆ ಮೂಲಕ ಸಾಗಿ ನಂತರ ದೇವಾಲಯದಲ್ಲಿ ಸಮಾಪ್ತಿಗೊಂಡಿತು. 9.30 ಗಂಟೆಯಿಂದ ವಸೂರಿಮಾಲೆ ದೇವರ ಬೆಳ್ಳಾಟಂ ಮತ್ತು ದೇವಿಯ ದರ್ಶನ ನಡೆಯಿತು. ನಂತರ ದೇವಿಗೆ ತಮ್ಮ ಬೇಡಿಕೆ ಮತ್ತು ಹರಕೆ ಸಲ್ಲಿಸುವ ಮೂಲಕ ಭಕ್ತಾಧಿಗಳು ಸಂತೃಪ್ತಗೊಂಡರು. ಮಹಾಮಂಗಳಾರತಿ, ಪ್ರಸಾದ ವಿನಿಯೋಗ…
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು : ಈ ಯುಗಾದಿ ನಿಮಗೆಲ್ಲರಿಗೂ ಯಶಸ್ಸನ್ನು ನೀಡಲಿ : ಸೂರಜ್ ಹೊಸೂರು, ಅಧ್ಯಕ್ಷರು, ಸಾಮಾಜಿಕ ಜಾಲತಾಣ, ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ.






