ಮಡಿಕೇರಿ ಏ.16 : ರಾಷ್ಟ್ರದ ಪ್ರಗತಿಯಲ್ಲಿ ಮಾಧ್ಯಮ ಕ್ಷೇತ್ರದ ಪಾತ್ರ ಅತ್ಯಂತ ಮಹತ್ವದ್ದು ಮತ್ತು ಜವಾಬ್ದಾರಿಯುತವಾದುದು ಎಂದು ವಕೀಲರಾದ ಡಾ.ಯಾಲದಾಳು ಮನೋಜ್ ಬೋಪಯ್ಯ ಅಭಿಪ್ರಾಯಪಟ್ಟರು. ನಗರದ ಪತ್ರಿಕಾಭವನದಲ್ಲಿಂದು ಕೊಡಗು ಪತ್ರಕರ್ತರ ಸಂಘದ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಒಳಾಂಗಣ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 4ನೇ ಅಂಗವಾಗಿ ಪರಿಗಣಿತವಾಗಿರುವ ಮಾಧ್ಯಮ ಕ್ಷೇತ್ರ ಸಮಾಜದ ಭಾವನೆಗಳಿಗೆ ಸದಾ ಸ್ಪಂದಿಸುವ ಅತ್ಯಂತ ಸೂಕ್ಷ್ಮವಾದ ಕ್ಷೇತ್ರವೆಂದರು. ರಾಷ್ಟçವನ್ನು ಕಟ್ಟುವ ಮತ್ತು ಬೆಳೆೆಸುವ ಮಹತ್ತರ ಜವಾಬ್ದಾರಿ ಮಾಧ್ಯಮ ಕ್ಷೇತ್ರದ ಮೇಲಿದೆಯೆಂದು ತಿಳಿಸಿದ ಅವರು, ಕೊಡಗಿನ ಮಾಧ್ಯಮಗಳು ಅತ್ಯಂತ ಪ್ರಾಮಾಣಿಕವಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆಯೆಂದು ಮೆಚ್ಚುಗೆಯ ನುಡಿಗಳನ್ನಾಡಿದರು. ಪತ್ರಕರ್ತರು ತಮ್ಮ ದೈನಂದಿನ ಬಿಡುವಿಲ್ಲದ ಕೆಲಸ ಕಾರ್ಯಗಳ ಒತ್ತಡಗಳಿಂದ ಮುಕ್ತರಾಗಿ ಮತ್ತೆ ಉತ್ಸಾಹ ಮತ್ತು ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸಲು ಕ್ರೀಡಾ ಚಟುವಟಿಕೆಗಳು ಸಹಾಯಕವಾಗಿದೆಯೆಂದು ಡಾ. ಮನೋಜ್ ಬೋಪಯ್ಯ ಹೇಳಿದರು. ಪತ್ರಕರ್ತರು ತಮ್ಮ ವೃತ್ತಿ ಧರ್ಮವನ್ನು ಕಾಪಾಡಿಕೊಳ್ಳುವ ಮೂಲಕ ಪತ್ರಿಕೋದ್ಯಮಕ್ಕೆ ಗೌರವ, ಘನತೆಯನ್ನು ತರಬೇಕು ಎಂದು ಕಿವಿ ಮಾತು…
ಲೇಖಕ: admin
ಮಡಿಕೇರಿ ಏ.16 : ಗುಂಡೇಟಿನಿಂದ ವ್ಯಕ್ತಿಯೊಬ್ಬರು ಬಲಿಯಾಗಿರುವ ಘಟನೆ ವಿರಾಜಪೇಟೆ ಸಮೀಪದ ತೋರ ಗ್ರಾಮದಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಬೈಮನ ನಾಣಿ ಎಂಬುವವರ ಪುತ್ರ ಬಿ.ಎಂ.ಮಧು (44) ಮೃತ ವ್ಯಕ್ತಿ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಡಿಕೇರಿ ಏ.16 : ಮಾದಕ ವಸ್ತುಗಳಾದ ಚರಸ್ ಹಾಗೂ ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಭೇದಿಸಿರುವ ವಿರಾಜಪೇಟೆ ಅಬಕಾರಿ ಇಲಾಖೆ ಸಿಬ್ಬಂದಿಗಳು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪೊನ್ನಂಪೇಟೆ ತಾಲ್ಲೂಕಿನ ಕಾರ್ಮಾಡು ಚೆಕ್ ಪೋಸ್ಟ್ ನಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಅಬಕಾರಿ ಇಲಾಖೆ ಸಿಬ್ಬಂದಿಗಳು ಕಾರೊಂದನ್ನು ತಪಾಸಣೆ ನಡೆಸಿದಾಗ ಮಾದಕ ವಸ್ತುಗಳು ಪತ್ತೆಯಾಗಿದೆ. ಅಲ್ಲದೆ ಗಾಂಜಾ ಸೇವನೆ ಮಾಡಿರುವುದು ಕಂಡು ಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಸಿಬ್ಬಂದಿಗಳು 10 ಗ್ರಾಂ ಚರಸ್, 35 ಗ್ರಾಂ ಗಾಂಜಾ, ಕಾರು ಸಹಿತ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡರು. ಆರೋಪಿಗಳಾದ ತಮಪ್ಪ ಸರ್ಕಾರ್, ಬೀಬವ್, ದೇವಾಂಸ್ ಶರ್ಮಾ ಹಾಗೂ ಆದಿತ್ಯ ಕುಮಾರ್ ಅವರುಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಿರಾಜಪೇಟೆ ಉಪ ವಿಭಾಗ ಕಛೇರಿಯ ಅಬಕಾರಿ ಉಪ ಅಧೀಕ್ಷಕ ಎಂ.ಎನ್.ನಟರಾಜು, ಸಿಬ್ಬಂದಿಗಳಾದ ಎನ್.ಜಿ.ಮದನ್ ಕುಮಾರ್, ಸಂತೋಷ್, ಚಾಲಕ ದರ್ಶನ್ ಪೊಲೀಸ್ ಸಿಬ್ಬಂದಿ ಸಂತೋಷ್ ಕುಮಾರ್, ಅರಣ್ಯ ಇಲಾಖಾ ಸಿಬ್ಬಂದಿ ಉದಯಕುಮಾರ್ ಮತ್ತಿತರ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಮಡಿಕೇರಿ ಏ.16 : ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿಯ ವತಿಯಿಂದ ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ ಸಹಯೋಗದಲ್ಲಿ ನಗರದ ರಾಜಾಸೀಟ್ ನಲ್ಲಿ ಶನಿವಾರ ಆಯೋಜಿಸಲ್ಪಟ್ಟಿದ್ದ ಕೊಡಗು ಮತ್ತು ಮತದಾನ ವಿಷಯ ಸಂಬಂಧಿತ ಚಿತ್ರಕಲಾ ಸ್ಪರ್ಧೆಯಲ್ಲಿ ಜಿಲ್ಲೆಯಾದ್ಯಂತಲಿನ ವಿದ್ಯಾರ್ಥಿಗಳಲ್ಲದೇ ಹೊರಜಿಲ್ಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮತದಾನದ ಮಹತ್ವದ ಕುರಿತಂತೆ ವಿದ್ಯಾರ್ಥಿಗಳಲ್ಲಿನ ಆಸಕ್ತಿ, ತಿಳುವಳಿಕೆ ಬಗ್ಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಮೆಚ್ಚುಗೆ ವ್ಯಕ್ತಪಡಿಸಿದರು. ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳ ವಿವರ : 14 ವರ್ಷದೊಳಗಿನ ವಿಭಾಗ -ಹರ್ಷಿತ ಪೊನ್ನಪ್ಪ ಸಂತಜೋಸೇಫರ ಶಾಲೆ ಮಡಿಕೇರಿ (ಪ್ರಥಮ), ಧ್ರುವನಂಜಪ್ಪ, ಜನರಲ್ ತಿಮ್ಮಯ್ಯ ಶಾಲೆ ಮಡಿಕೇರಿ (ದ್ವಿತೀಯ) , ಧೃತಿ ಕೆ.ಯು. ಸಂತಜೊಸೇಫರ ಶಾಲೆ. ಮಡಿಕೇರಿ (ತೃತೀಯ) ವಿಸ್ಮಯಿ ಎಂ. ಮೊರಾರ್ಜಿ ದೇಸಾಯಿ ವಸತಿಶಾಲೆ, ಕೂಡಿಗೆ ( ಸಮಧಾನಕರ) 14 ರಿಂದ 18 ವರ್ಷದೊಳಗಿನ ವಿಭಾಗ – ಮೋಕ್ಷಾ ಎ.ಕೆ. ಕಾವೇರಿ ವಿದ್ಯಾಸಂಸ್ಥೆ. ವಿರಾಜಪೇಟೆ (ಪ್ರಥಮ) ತಶ್ಮಿಕಾ ಕೆ.ಎಂ. ಸರ್ಕಾರಿ ಪ್ರೌಢಶಾಲೆ ಮೂರ್ನಾಡು (ದ್ವಿತೀಯ), ಮೋಕ್ಷಿತಾ ಕೆ.ಜೆ.…
ಮಡಿಕೇರಿ ಏ.16 : ಮತದಾನದ ಮಹತ್ವ ಮತ್ತು ಮತದಾನ ಮಾಡಿ ಎಂಬ ಜಾಗೃತಿ ಸಂದೇಶದ ಬೈಕ್ ಜಾಥಾ ಮಡಿಕೇರಿಯಲ್ಲಿ ಜನಮನ ಸೆಳೆಯಿತು. ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿಯ ವತಿಯಿಂದ (ಸ್ವೀಪ್) ಮತ್ತು ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ್ದ ಬೈಕ್ ಜಾಥಾಕ್ಕೆ ನಗರದ ಬನ್ನಿಮಂಟಪದಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಹಸಿರುನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಸತೀಶ್ ಅವರ ಪತ್ನಿ ರೂಪಶ್ರೀ ಅವರೊಂದಿಗೆ ಬೈಕ್ ಜಾಥಾದಲ್ಲಿ ಪಾಲ್ಗೊಂಡರೆ, ಜಿ.ಪಂ.ಸಿಇಒ ಮತ್ತು ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಎಸ್.ಆಕಾಶ್ ಬುಲೆಟ್ ಬೈಕ್ ನಲ್ಲಿ ಬಂದು ಗಮನ ಸೆಳೆದರು. ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತ, ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ತಿಮ್ಮಯ್ಯ ವೃತ್ತ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತಕ್ಕಾಗಿ ಸಾಗಿದ ಬೈಕ್ ಜಾಥಾ ರಾಜಾಸೀಟು ಉದ್ಯಾನವನದಲ್ಲಿ ಕೊನೆಗೊಂಡಿತು. ರಾಜಾಸೀಟ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್, ಮತದಾನ ಪ್ರತಿಯೊಬ್ಬರ ಹಕ್ಕಾಗಿದೆ. ಯುವಜನತೆ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಲು…
ಮಡಿಕೇರಿ ಏ.16 : ವಿಧಾನಸಭಾ ಚುನಾವಣೆ ಸಂಬoಧ ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ಮಾಡದೆ ವ್ಯವಸ್ಥಿತವಾಗಿ ಚುನಾವಣಾ ಕಾರ್ಯ ನಿರ್ವಹಿಸುವಂತೆ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಬಿ.ಸಿ.ಸತೀಶ ಅವರು ನಿರ್ದೇಶನ ನೀಡಿದ್ದಾರೆ. ನಗರದ ಸಂತ ಜೋಸೆಫರ ಕಾಲೇಜಿನಲ್ಲಿ ಪಿಆರ್‌ಒ ಮತ್ತು ಎಪಿಆರ್‌ಗಳಿಗೆ ಭಾನುವಾರ ನಡೆದ ಚುನಾವಣಾ ತರಬೇತಿ ಕಾರ್ಯಗಾರದಲ್ಲಿ ಪಾಲ್ಗೊಂಡು ಜಿಲ್ಲಾಧಿಕಾರಿ ಅವರು ಮಾತನಾಡಿದರು. ಚುನಾವಣಾ ಕಾರ್ಯವನ್ನು ಶ್ರದ್ಧೆಯಿಂದ ನಿರ್ವಹಿಸಬೇಕು. ಯಾವುದೇ ರೀತಿಯ ಆತಂಕ ಅಥವಾ ಭಯ ಪಡಬಾರದು, ಚುನಾವಣಾ ಆಯೋಗದ ನಿರ್ದೇಶನದಂತೆ ವಿದ್ಯುನ್ಮಾನ ಮತಯಂತ್ರ, ವಿವಿಪ್ಯಾಟ್ ಮತ್ತಿತರ ಬಗ್ಗೆ ಮಾಹಿತಿ ಪಡೆದು ವ್ಯವಸ್ಥಿತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು. ಜಿಲ್ಲೆಯಲ್ಲಿ ಒಟ್ಟು 542 ಮತಗಟ್ಟೆಗಳಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 269 ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 273 ಮತಗಟ್ಟೆಗಳಿದ್ದು, ಮತಗಟ್ಟೆಗಳಿಗೆ ನಿಯೋಜಿಸುವ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಚುನಾವಣಾ ತರಬೇತಿ ನೀಡಲಾಗುತ್ತಿದೆ ಎಂದರು. ಚುನಾವಣೆಗೆ ನಿಯೋಜಿಸಿರುವ…
ಮಡಿಕೇರಿ ಏ.16 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳದ ಅಭ್ಯರ್ಥಿಯಾಗಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ನಾಪೋಕ್ಲುವಿನ ಎಂ.ಎ.ಮನ್ಸೂರ್ ಆಲಿ ಆಯ್ಕೆಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಂದ ಇಂದು “ಬಿ” ಫಾರಂ ಪಡೆದುಕೊಂಡಿರುವ ಮನ್ಸೂರ್ ಆಲಿ ಏ.19 ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳಿಂದ ಬೇಸತ್ತಿರುವ ಜನ ಈ ಬಾರಿ ಜೆಡಿಎಸ್ ನ್ನು ಬೆಂಬಲಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ ಏ.16 : ಪಕ್ಷೇತರ ಅಭ್ಯರ್ಥಿಯಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಗರಗಂದೂರು ಗ್ರಾಮದ ಜಿ.ಜಿ.ಹೇಮಂತ್ ಕುಮಾರ್ ಅವರು ಏ.17 ರಂದು ಮಡಿಕೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಅಂದು ಬೆಳಗ್ಗೆ 10 ಗಂಟೆಗೆ ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೆಂಬಲಿಗರೊoದಿಗೆ ಮೆರವಣಿಗೆಯಲ್ಲಿ ಸಾಗಿ 11 ಗಂಟೆಗೆ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಕಳೆದ 30 ವರ್ಷಗಳಿಂದ ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿ ಪಕ್ಷದ ಬೆಳವಣಿಗೆಗಾಗಿ ಪ್ರಾಮಾಣಿಕವಾಗಿ ದುಡಿದಿದ್ದೇನೆ. ಮಡಿಕೇರಿ ಕ್ಷೇತ್ರದಲ್ಲಿ ಬದಲಾವಣೆಯ ಅಗತ್ಯವಿದೆ ಎಂದು ಬೆಂಬಲಿಗರು ನೀಡಿದ ಸಲಹೆ ಹಿನ್ನೆಲೆ ಬಂಡಾಯವಾಗಿ ಕಣಕ್ಕಿಳಿಯುತ್ತಿರುವುದಾಗಿ ಹೇಮಂತ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಚೆಟ್ಟಳ್ಳಿ ಏ.15 : ಚೆಟ್ಟಳ್ಳಿಯ ಶ್ರೀಮಂಗಲ (ಪೊವ್ವೊದಿ ) ಭಗವತಿ ಉತ್ಸವವು ಎರಡು ದಿನಗಳ ಕಾಲ ಶ್ರದ್ದಾಭಕ್ತಿಯಿಂದ ನೆರವೇರಿತು. ಶುಕ್ರವಾರದಂದು ನಡೆದ ಪಟ್ಟಣಿ ಹಬ್ಬದಂದು ಊರಿನವರ ಸಮ್ಮುಖದಲ್ಲಿ ದುಡಿಕೊಟ್ಟು ಹಾಡಿನೊಂದಿಗೆ ದೇವಾಲಯ ತಕ್ಕರಾದ ಮುಳ್ಳಂಡ ಐನ್ ಮನೆಯಿಂದ ಎತ್ತುಪೋರಾಟದೊಂದಿಗೆ ದೇವರ ಭಂಡಾರವನ್ನು ತರಲಾಯಿತು. ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಶನಿವಾರ ದೊಡ್ದಹಬ್ಬವಾಗಿದ್ದು ದೇವರ ಭಂಡಾರವನ್ನು ದೇವಾಲಯಕ್ಕೆ ತರುವುದು ವಿಶೇಷ ಪೂಜೆ, ತೆಂಗಿಕಾಯಿ ಎಳೆಯುವುದು, ತೆಂಗಿನ ಕಾಯಿಗೆ ಗುಂಡು ಹೊಡೆಯುವ ಕಾರ್ಯಕ್ರಮ ನಡೆಯಿತು. ಬೊಳಕ್ ಮರವನ್ನು ತೆಗೆದು ದೇವಾಲಯದ ಗರ್ಭಗುಡಿಯೊಳಗೆ ಇಡಲಾಯಿತು. ನಂತರ ದೇವರ ನೆಲೆಯಲ್ಲಿ ಭಕ್ತಾದಿಗಳು ಹರಕೆ ಕಾಣಿಕೆ ಒಪ್ಪಸಿದರು. ಪ್ರಸಾದ ವಿತರಣೆ ನಡೆಯಿತು. ಏ.16 ರ ಭಾನುವಾರ ಪೂರ್ವಾಹ್ನ 7 ಗಂಟೆಗೆ ದೇವಾಲಯದಲ್ಲಿ ಶುದ್ಧ ಕಳಸ ಪೂಜೆ ನೆವೇರಿಸಿ ದೇವರ ಭಂಡಾರವನ್ನು ತಕ್ಕರಾದ ಮುಳ್ಳಂಡ ಐನ್ ಮನೆಯಲ್ಲಿ ಒಪ್ಪಿಸಲಾಗುವುದು ಎಂದು ದೇವಾಲಯದ ಪ್ರಮುಖರು ತಿಳಿಸಿದ್ದಾರೆ.
ಮಡಿಕೇರಿ ಏ.15 : ಕೊಡವ ಹೊಸ ವರ್ಷಾಚರಣೆ ಎಡ್ಮ್ಯಾರ್ ಒಂದ್ ರ ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಬೆಟ್ಟತ್ತೂರು ಗ್ರಾಮದ ಕೂಪದಿರ ಮೋಹನ್ ಅವರ ಗದ್ದೆಯಲ್ಲಿ ಉಳುಮೆ ಕಾರ್ಯ ಮಾಡಿ ಭೂದೇವಿಗೆ ನಮಿಸಿತು. ದೇವಟ್ ಪರಂಬುವಿನ ಕೊಡವ ನರಮೇಧದ ಸ್ಮಾರಕದಲ್ಲಿ ಪುಷ್ಪ ನಮನ ಸಲ್ಲಿಸಿ ನಾಲ್ನಾಡ್ ಅರಮನೆ ಮತ್ತು ಮಡಿಕೇರಿ ಕೋಟೆ ಆವರಣದಲ್ಲಿ ಹತ್ಯೆಗೀಡಾದ ಕೊಡವರ ಪರವಾಗಿ ಪ್ರಾರ್ಥಿಸಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಎತ್ತುಗಳ ಸಹಾಯದಿಂದ ಗದ್ದೆಯನ್ನು ಸಾಂಪ್ರದಾಯಿಕವಾಗಿ ಉಳುಮೆ ಮಾಡಿದರು. ಕೊಡವ ಸಾಂಪ್ರದಾಯಿಕ ಆಚರಣೆಗಳು ಭೂತಾಯಿಯ ಮಣ್ಣಿನೊಂದಿಗೆ ಕೊಡವ ಬುಡಕಟ್ಟಿನ ಅವಿನಾಭಾವ ಬಂಧವನ್ನು ಪ್ರದರ್ಶಿಸುತ್ತದೆ ಎಂದು ಅವರು ಇದೇ ಸಂದರ್ಭ ಅಭಿಪ್ರಾಯಪಟ್ಟರು. ಬುಡಕಟ್ಟು ಜನಾಂಗವಾಗಿರುವ ಕೊಡವರ ಮೂಲ ಸಂಸ್ಕೃತಿಯನ್ನು ಸಂರಕ್ಷಿಸಲು ಈ ರೀತಿಯ ಆಚರಣೆಗಳು ಸಾರ್ವಜನಿಕವಾಗಿ ನಡೆಯಬೇಕು. ಕೊಡವ ಸಂಪ್ರದಾಯವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಸಿಎನ್‌ಸಿ ಮಾಡುತ್ತಿದೆ ಎಂದರು. ಕೂಪದಿರ ಮೋಹನ್, ಕೂಪದಿರ ಗಂಗಮ್ಮ, ಕೂಪದಿರ ತಂಗಮ್ಮ, ಕೂಪದಿರ ಕಾವೇರಮ್ಮ, ಕೂಪದಿರ ರೋಶನ್, ಕೂಪದಿರ ಎನ್.ದಿಲೀಪ್, ಕೂಪದಿರ…






