ಮಡಿಕೇರಿ ಏ.13 : ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಪಿ.ಕೃಷ್ಣಮೂರ್ತಿ ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣವನ್ನು ಮಡಿಕೇರಿ ನಗರ ಬಿಜೆಪಿ ಯುವ ಮೋರ್ಚಾ ತೀವ್ರವಾಗಿ ಖಂಡಿಸಿದೆ. ಗುಂಡು ಹಾರಿಸಿದ ಆರೋಪಿಗಳನ್ನು ಪೊಲೀಸರು ಶೀಘ್ರ ಬಂಧಿಸಬೇಕು ಮತ್ತು ಜಿಲ್ಲೆಯ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಯುವ ಮೋರ್ಚಾದ ನಗರಾಧ್ಯಕ್ಷ ನವೀನ್ ಪೂಜಾರಿ ಒತ್ತಾಯಿಸಿದ್ದಾರೆ.
ಲೇಖಕ: admin
ವರಂಗ ಕಾರ್ಕಳ ತಾಲೂಕಿನಲ್ಲಿರುವ ಒಂದು ಜೈನ ಯಾತ್ರಾ ಸ್ಥಳ. ಎಲ್ಲಿದೆ ವರಂಗ…? ವರಂಗ ಇರುವುದು ಉಡುಪಿ ಜಿಲ್ಲೆಯ ಹೆಬ್ರಿಯಿಂದ ಕಾರ್ಕಳದ ಕಡೆಗೆ 5 ಕಿ.ಮೀ. ದೂರದಲ್ಲಿ. ಕಾರ್ಕಳದಿಂದ ಸುಮಾರು 25 ಕಿ.ಮೀ., ಉಡುಪಿಯಿಂದ 37 ಕಿ.ಮೀ. ಮಂಗಳೂರಿನಿಂದ 85 ಕಿ.ಮೀ. ದೂರ. ಸಮಯವಿದ್ದರೆ, ಕೆರೆಯ ಪಕ್ಕವೇ ಇರುವ ಬೇಡ ರಾಜನ ಅರಮನೆಯ ಕುರುಹುಗಳಿರುವ ಬೆಟ್ಟವನ್ನು ಹತ್ತಿಳಿಯಬಹುದು. ವರಂಗ ಕೆರೆ ಬಸದಿ : ಒಂದು ಕಡೆ ಎತ್ತರಕ್ಕೆ ಉದ್ದಾನುದ್ದ ಹರಡಿ ನಿಂತ ಪಶ್ಚಿಮ ಘಟ್ಟದ ಪಸಿರುಡೆಯ ಸೊಬಗು. ಮತ್ತೊಂದು ಕಡೆಯಲ್ಲಿ ಹಚ್ಚ ಹಸಿರಿನ ಗದ್ದೆ, ತೋಟದ ಬೆಡಗು. ನಡುವೆ ವಿಶಾಲ ಕೆರೆಯ ಮಧ್ಯೆ ಫಳಫಳಿಸುವ ಪದ್ಮಾವತಿ ದೇವಿಯ ಬಸದಿ. ನೀರಿನಲ್ಲಿ ಅಲ್ಲಾಡುವ ಮಂದಿರದ ಚಿತ್ರಕ್ಕೆ ಕಮಲದ ಹೂವುಗಳ ಸಿಂಗಾರದೈಸಿರಿ. ಇಂತಹುದೊಂದು ಅಪರೂಪದ, ಇಡೀ ದಕ್ಷಿಣ ಭಾರತದಲ್ಲಿ ಮತ್ತೆಲ್ಲೂ ಸಿಗದಂಥ ಸೌಂದರ್ಯ ಮತ್ತು ದೈವಿಕ ಶಕ್ತಿಯ ಪರಮ ಕ್ಷೇತ್ರವನ್ನು ನೋಡಬೇಕಾದರೆ ನೀವು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ವರಂಗ ಎಂಬ ಪುಟ್ಟ ಹಳ್ಳಿಗೆ ಬರಬೇಕು.…
ಮಡಿಕೇರಿ ಏ.13 : ಮಡಿಕೇರಿಯ ಬ್ರೈನೋಬ್ರೈನ್ ಅಬಾಕಸ್ ವಿದ್ಯಾರ್ಥಿಗಳಿಗೆ ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಪದವಿ ಪ್ರದಾನ ಮಾಡಲಾಯಿತು. ರಾಜ್ಯ ಬ್ರೈನೋಬ್ರೈನ್ ಸಂಸ್ಥೆಯ ಸ್ಥಳೀಯ ವ್ಯವಸ್ಥಾಪಕ ನಿರ್ದೇಶಕ ನೀಲ್ ಕಮಲ್ ಸ್ವರ್ಣಾಕರ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು. ಮಡಿಕೇರಿ ಕೇಂದ್ರದಲ್ಲಿ ಪದವಿ ಪ್ರದಾನ ಸ್ವೀಕರಿಸಿದ ವಿದ್ಯಾರ್ಥಿಗಳ ಸಂಖ್ಯೆ ವಿಶ್ವದ ಇತರೆ ಬ್ರೈನೋಬ್ರೈನ್ ಕೇಂದ್ರಗಳಲ್ಲೇ ಅತ್ಯಧಿಕ ಮತ್ತು ಎಲ್ಲಾ ಕೇಂದ್ರಗಳಿಗೂ ಮಾದರಿಯಾಗಿದೆ ಎಂದು ಶ್ಲಾಘಿಸಿದರು. ಮಡಿಕೇರಿಯ ಬ್ರೈನೋಬ್ರೈನ್ ಕೇಂದ್ರದ ಮುಖ್ಯಸ್ಥೆ ಹಾಗೂ ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ಅವರನ್ನು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪೊಷಕರು ಮಾತನಾಡಿ, ಸ್ಮರಣಾ ಶಕ್ತಿ, ಕಲ್ಪನಾ ಶಕ್ತಿ, ಆತ್ಮ ವಿಶ್ವಾಸ, ಚುರುಕುತನ, ಬಹುಕಾರ್ಯ ಕೌಶಲ್ಯ, ಛಾಯಾಗ್ರಹಣದ ಬಗ್ಗೆ ಆಸಕ್ತಿ, ಹೆಚ್ಚಾಗಿ ಮಕ್ಕಳ ಕನಸಿಗೆ ರೆಕ್ಕೆ ಸಿಕ್ಕಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ::: ಪದವಿ ಪ್ರದಾನ ಸ್ವೀಕರಿಸಿದ ವಿದ್ಯಾರ್ಥಿಗಳು ::: ಹೆಚ್.ಎಸ್.ಆರ್ಯ, ಎಂ.ಎಸ್.ನಿತೀಶ್, ಎಂ.ಜಿ.ಧನ್ವಿತ್, ಹೆಚ್.ಎಲ್.ಆದರ್ಶ್, ಕೆ.ಮಾನ್ವಿಕ್ ಮೌರ್ಯ, ಬಿ.ಆರ್.ಗನ್ಯಶ್ರೀ, ಆನ್ಶಿಯಾ ಡಿ ಕ್ರೂಜ್, ಎನ್.ಕೆ.ಪುನೀತ್, ಹೆಚ್.ಎಲ್.ಅಶ್ರಿತ್, ಎಂ.ಎನ್.ನೀಲ್,…
ಮಡಿಕೇರಿ ಏ.13 : ಕೊಡಗು ಐರಿ ಸಮುದಾಯಗಳ ಮಧ್ಯೆ ನಡೆಯುವ ಒಂಭತ್ತನೇ ವರ್ಷದ ಕ್ರಿಕೆಟ್ ಪಂದ್ಯಾವಳಿಯ ಲಾಂಛನವನ್ನು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಬಿಡುಗಡೆಗೊಳಿಸಲಾಯಿತು. ಕಲಾವಿದ ಐಮಂಡ ರೂಪೇಶ್ ನಾಣಯ್ಯ ಲೋಗೋ ವಿನ್ಯಾಸ ಮಾಡಿದ್ದಾರೆ. ಐರಿ ಜನಾಂಗದ ಸಂಸ್ಕೃತಿಕ ಹೆಗ್ಗುರುತಾಗಿರುವ ಐನ್ ಮನೆಯನ್ನು ಮುಖ್ಯ ಥೀಂ ಆಗಿಟ್ಟುಕೊಂಡು ಲೋಗೋ ರಚಿಸಲಾಗಿದೆ. ಐರಿ ಜನಾಂಗದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸತತ ಏಳು ಬಾರಿ ಚಾಂಪಿಯನ್ ಆಗಿದ್ದ ಬಲ್ಲಮಾವಟಿ ಐರೀರ ತಂಡದ ಹೊಡಿ ಬಡಿ ಆಟಗಾರ ಚಂಗಪ್ಪ ಲೋಗೋ ಬಿಡುಗಡೆ ಮಾಡಿದರು. ಈ ಸಂದರ್ಭ ಐನ್ ಮನೆ ಟ್ರೋಫಿ ಕ್ರಿಕೆಟ್ ಆಯೋಜನಾ ಸಮಿತಿ ಕಾರ್ಯದರ್ಶಿ ಮುಲ್ಕೈರಿರ ರೋಷನ್ ಸುಬ್ಬಯ್ಯ, ಸದಸ್ಯರಾದ ಮುಲ್ಲೈರಿರ ಮೋಹನ್ ಗಣಪತಿ, ಐಮಣಿಯಂಡ ಕಿಶೋರ್ ಕಾವೇರಪ್ಪ, ಕರಕುಶಲಕರ್ಮಿ ಐನಂಗಡ ಉದಯ್, ಮುಲ್ಕೈರಿರ ಸುಬ್ಬಯ್ಯ, ಆಯಪಂಡ ದಿಲನ್ ದೇವಯ್ಯ, ಕುಂದೈರಿರ ರೇಖಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಐನ್ ಮನೆ ಟ್ರೋಫಿ -2023 : ಐನ್ ಮನೆ ಟ್ರೋಫಿ -2023 ಇದೇ…
ಮಡಿಕೇರಿ ಏ.13 : ವಿಶ್ವ ಹಿಂದೂ ಪರಿಷತ್ ನ ಕೊಡಗು ಜಿಲ್ಲಾಧ್ಯಕ್ಷ ಹಾಗೂ ವಕೀಲ ಪಿ.ಕೃಷ್ಣಮೂರ್ತಿ ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣವನ್ನು ಮಡಿಕೇರಿ ವಕೀಲರ ಸಂಘ ತೀವ್ರವಾಗಿ ಖಂಡಿಸಿದೆ. ಗುoಡು ಹಾರಿಸಿದ ವ್ಯಕ್ತಿಯನ್ನು ತಕ್ಷಣ ಬಂಧಿಸಬೇಕೆoದು ಒತ್ತಾಯಿಸಿ ಕಲಾಪವನ್ನು ನಡೆಸದೆ ಕೋರ್ಟ್ ಎದುರು ವಕೀಲರು ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾದ ಸಂಘದ ಅಧ್ಯಕ್ಷ ಕೆ.ಡಿ.ದಯಾನಂದ ಹಾಗೂ ಪ್ರಮುಖರು ಸೂಕ್ತ ತನಿಖೆಗಾಗಿ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.
ಮಡಿಕೇರಿ ಏ.13 : ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸಿಕೊಂಡು ಬರುವ ಕೆದಕಲ್ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಭದ್ರಕಾಳೇಶ್ವರಿ ದೇವಿಯ ಉತ್ಸವ ಆರಂಭಗೊಂಡಿದ್ದು, ಏ.16 ರಂದು ದೊಡ್ಡಹಬ್ಬ ನಡೆಯಲಿದೆ. ಅಂದು ಬೆಳಿಗ್ಗೆ 8.30 ಗಂಟೆಗೆ ನಾಡು ಹತ್ತುವುದರಿಂದ ಪ್ರಾರಂಭಗೊಂಡು ಕೊಂಬಾಟ್, ಚೌರಿಯಾಟ್, ಬಿಲ್ಲಾಆಟ್ ನಂತರ ದೇವರಿಗೆ ಭಂಡಾರ, ಹರಕೆ ಹಾಕುವುದು, ಭಕ್ತಾಧಿಗಳಿಗೆ ದೇವರ ಪ್ರಸಾದ ವಿನಿಯೋಗ, ಬಾಳೆಸೂರೆ ಎಸೆಯುವುದು, ಕಾಳೆ ಓಡಿಸುವುದು, ತೆಂಗಿನಕಾಯಿ ಗುಂಡು ಹೊಡೆಯುವುದು ಹಾಗೂ ದೇವಿಯ ಇತರೆ ಕೈಂಕರ್ಯ ನಡೆಯಲಿದೆ. ಏ.17 ರಂದು ಚಿಕ್ಕಹಬ್ಬ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಗೆ ಮೂರು ತರಹದ ಕುಣಿತ, ಭಂಡಾರ ಹಾಕುವುದು ಮತ್ತು ಕೊಂಬು ಅರ್ಪಿಸುವುದು. ಏ.18 ರಂದು ಭಂಡಾರ ಹಾಕುವುದು, ತಪ್ಪು ಹಣ ಒಪ್ಪಿಸುವುದು, ಶುದ್ಧ ಕಲಶ ಹಾಗೂ ಮಹಾ ಪೂಜೆಯೊಂದಿಗೆ ಉತ್ಸವ ಮುಕ್ತಾಯವಾಗಲಿದೆ ಎಂದು ಅಧ್ಯಕ್ಷ ಮುಕ್ಕಾಟಿರ ಅಶ್ವಿನ್ ಹಾಗೂ ತಕ್ಕ ಮುಖ್ಯಸ್ಥರು ಮತ್ತು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.
ಮಡಿಕೇರಿ ಏ.13 : ವಿಶ್ವ ಹಿಂದೂ ಪರಿಷತ್ ನ ಕೊಡಗು ಜಿಲ್ಲಾಧ್ಯಕ್ಷ ಹಾಗೂ ವಕೀಲ ಪಿ.ಕೃಷ್ಣಮೂರ್ತಿ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆದಿದೆ. ಬುಧವಾರ ರಾತ್ರಿ 11.30 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕುಶಾಲನಗರದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಡಿಕೇರಿಯ ನಿವಾಸಕ್ಕೆ ಆಗಮಿಸುತ್ತಿದ್ದಾಗ ಚೆಟ್ಟಳ್ಳಿ ಸಮೀಪ ಗುಂಡಿನ ದಾಳಿಯಾಗಿದೆ. ಕಾರಿಗೆ ಗುಂಡು ತಗುಲಿದ್ದು, ಕೃಷ್ಣಮೂರ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಿಡಗಳ ಮರೆಯಿಂದ ಆರೋಪಿ ಗುಂಡು ಹಾರಿಸಿರುವ ಶಂಕೆ ವ್ಯಕ್ತವಾಗಿದೆ. ಚೆಟ್ಟಳ್ಳಿ ಗ್ರಾ.ಪಂ ಸದಸ್ಯ ಹಾಗೂ ವಕೀಲ ಬಲ್ಲಾರಂಡ ಕಂಠಿ ಕಾರ್ಯಪ್ಪ ಅವರನ್ನು ಚೆಟ್ಟಳ್ಳಿಯ ನಿವಾಸಕ್ಕೆ ಬಿಟ್ಟು ಮಡಿಕೇರಿ ಕಡೆಗೆ ಪ್ರಯಾಣ ಬೆಳೆಸಿದಾಗ ಘಟನೆ ನಡೆದಿದೆ. ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಾಪೋಕ್ಲು ಏ.13 : ಯವಕಪಾಡಿ ಗ್ರಾಮದ ಶ್ರೀ ಪನ್ನಂಗಾಲತ್ತಮ್ಮೆ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಸಮೀಪವಿರುವ ಅಮ್ಮಂಗೇರಿಯಲ್ಲಿ ಶ್ರೀ ದೇವಿಯ ದೇವತಾ ಕೆಲಸಕ್ಕೆ ನಿಯೋಜಿಸಲ್ಪಟ್ಟ ಕಣಿಯ ಜನಾಂಗದವರು ಶುದ್ಧ, ಶ್ರದ್ಧಾಭಕ್ತಿಯಿಂದ ಓಲೆ (ತಾಳೆ ಜಾತಿ ಸೇರಿದ ಮರದ ಗರಿ) ಯಲ್ಲಿ ತಯಾರಿಸಿದ ಎರಡು ಕೊಡೆಗಳನ್ನು ದೈವ ದರ್ಶನ ಹಾಗೂ ಎತ್ತೇರಾಟ, ತಕ್ಕ ಮುಖ್ಯಸ್ಥರು, ಭಕ್ತಾದಿಗಳೊಂದಿಗೆ ಪನ್ನಂಗಾಲತ್ತಮ್ಮೆ ದೇವಸ್ಥಾನಕ್ಕೆ ತರಲಾಯಿತು. ಈ ಕೊಡೆಯಲ್ಲಿ ಪನ್ನಂಗಾಲ ತಮ್ಮೆ ನೆಲೆಸಿರುವಳೆಂದೂ, ಅಣ್ಣನ ಮನೆಯಿಂದ ಅವಳನ್ನು ತನ್ನ ಮನೆಗೆ ಕರೆತರಲಾಗುವ ಪದ್ಧತಿ ಇದೆಂಬ ನಂಬಿಕೆ ಗ್ರಾಮಸ್ಥರಲ್ಲಿ ಮತ್ತು ಭಕ್ತರಲ್ಲಿದೆ. ಅಣ್ಣನನ್ನು(ಇಗ್ಗುತ್ತಪ್ಪ) ಬಿಟ್ಟು ಹೋಗಲು ಮನಸ್ಸಿಲ್ಲದ ತಂಗಿಯು ಮಾರ್ಗ ಮಧ್ಯೆ ಸಿಗುವ (ಮೊದಲ ಬಾರಿಗೆ ಜನರಿಗೆ ಬೆಳ್ಳಕ್ಕಿ ರೂಪದಲ್ಲಿ ದರ್ಶನ ನೀಡಿದಳೆಂದು ಹೇಳಲಾದ) ಭತ್ತದ ಗದ್ದೆಯಿಂದ ಹಿಂತಿರುಗಿ ಹೋಗಲು ಯತ್ನಿಸುವ ದೃಶ್ಯ ಭಕ್ತರನ್ನು ರೋಮಾಂಚನಗೊಳಿಸುತ್ತದೆ. ಹಿಂತಿರುಗಲು ಪ್ರಯತ್ನಿಸುವ ಕೊಡೆಯನ್ನು ತಡೆ ಹಿಡಿಯಲು ಎರಡು ಜನ (ಅದಕ್ಕೆಂದೆ ಶುದ್ಧ ನಿಷ್ಠೆಯಿಂದ ಇರುವವರು) ಕೊಡೆಗೆ ಜೋಡಿಸಿದ…
ಮಡಿಕೇರಿ ಏ.13 : ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ಇವರ ವತಿಯಿಂದ, ಮತದಾನದ ಜಾಗೃತಿ ಸಾರುವ ನಿಟ್ಟಿನಲ್ಲಿ ನಗರದ ಚೇಂಬರ್ ಆಫ್ ಕಾಮರ್ಸ್ ಮಡಿಕೇರಿ, ಸ್ವಾಮಿ ವಿವೇಕಾನಂದ ಯೂಥ್ ಮೂವ್‍ಮೆಂಟ್ ಇವರ ಸಹಯೋಗದೊಂದಿಗೆ, ಮುಂಬರುವ ವಿಧಾನಸಭಾ ಚುನಾವಣೆ ಯ ಮತದಾನ ಜಾಗೃತಿ ಅಭಿಯಾನವನ್ನು ಬೈಕ್ ಜಾಥಾದ ಮೂಲಕ ಆಯೋಜಿಸಲಾಗಿದೆ. ಬೈಕ್ ಜಾಥಾವು ಇದೇ ಏಪ್ರಿಲ್, 16 ರಂದು ಬೆಳಗ್ಗೆ 10 ಗಂಟೆಗೆ ನಗರದ ಬನ್ನಿಮಂಟಪದಿಂದ ಪ್ರಾರಂಭಗೊಂಡು ರಾಜಾಸೀಟು ಉದ್ಯಾನವನದಲ್ಲಿ ಕೊನೆಗೊಳ್ಳಲಿದೆ. ಈ ಮತದಾನ ಜಾಗೃತಿ ಬೈಕ್ ಜಾಥಾದಲ್ಲಿ ವರ್ತಕರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮಡಿಕೇರಿ ಏ.13 : ಮತದಾನದ ಪ್ರಕ್ರಿಯೆಯಲ್ಲಿ ನಾವು ಪಾಲ್ಗೊಂಡರೆ ಮಾತ್ರ ನಮ್ಮನ್ನು ಆಳುವ ಸೂಕ್ತ ನಾಯಕನ್ನು ಆಯ್ಕೆ ಮಾಡಲು ಸಾಧ್ಯ ಎಂದು ಕುಶಾಲನಗರ ಉಪ ಖಜಾನೆ ಅಧಿಕಾರಿ ಎಲ್.ಎಸ್ ವಿಜಯ ಕುಮಾರ್ ತಿಳಿಸಿದರು. ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮತ್ತು ಮತದಾರರ ಜಾಗೃತಿ ಸಂಘದ ವತಿಯಿಂದ ಆಯೋಜಿಸಿದ್ದ ರಾಜ್ಯಶಾಸ್ತ್ರ ಸಂಘ ಮತ್ತು ಮತದಾರರ ಸಂಘವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ನಾವು ಮತದಾನ ಮಾಡುವಾಗ ನಮ್ಮ ಇಚ್ಚೆಗೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದು ತಿಳಿದು ಮತದಾನ ಮಾಡಬೇಕು. 1988 ರಲ್ಲಿ ಸಂವಿಧಾನದ 61 ತಿದ್ದುಪಡಿಯನ್ನು ಮಾಡಿ 18 ವರ್ಷದ ಯುವಜನರಿಗೆ ಮತದಾನ ಮಾಡುವ ಅವಕಾಶ ಕಲ್ಪಿಸಿದೆ. ಭಾರತದ ಸಂವಿಧಾನದ 15 ನೇ ಭಾಗದಲ್ಲಿ 324 ರಿಂದ 329 ವಿಧಿಗಳು ಮತದಾನದ ಕುರಿತು ತಿಳಿಸುತ್ತದೆ. ಪ್ರತಿ ವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನ ಘೋಷಣೆ ಮಾಡುವ ಮೂಲಕ ಮತದಾನ ಮಹತ್ವದ ಬಗ್ಗೆ ತಿಳಿಸಲಾಗಿದೆ. ಯುವಜನರು ಮತದಾನದಲ್ಲಿ ಭಾಗವಹಿಸುವುದಲ್ಲದೆ…






