ಲೇಖಕ: admin

ಮಡಿಕೇರಿ ಮಾ.25 : ಮಕ್ಕಳ ಕನಸಿನ ಬಣ್ಣಕ್ಕೆ ಮತ್ತಷ್ಟು ಮೆರುಗು ನೀಡುವ ನಿಟ್ಟಿನಲ್ಲಿ ಏ.22 ರಿಂದ ಏ.30ರ ವರೆಗೆ ಮಡಿಕೇರಿಯಲ್ಲಿ ರಂಗ ಶೈಲಿಯ ರಾಜ್ಯ ಮಟ್ಟದ ಬೇಸಿಗೆ ಶಿಬಿರ “ಬಣ್ಣ-2023” ನಡೆಯಲಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಸುಳ್ಯ ರಂಗಮಯೂರಿ ಕಲಾಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲ್, ಮಕ್ಕಳಲ್ಲಿ ಕ್ರಿಯಾತ್ಮಕತೆ, ವ್ಯಕ್ತಿತ್ವ ವಿಕಸನ, ಸಮಯದ ಬಳಕೆ, ಶಿಸ್ತು ಹಾಗೂ ಜೀವನ ಮೌಲ್ಯಗಳನ್ನೊಳಗೊಂಡಂತೆ ಹಲವಾರು ಮೌಲ್ಯಯುತವಾದ ಯೋಚನಾಶಕ್ತಿಯನ್ನು ಬೆಳೆಸುವುದು ಅನಿವಾರ್ಯವಾಗಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸದ ಬೇರನ್ನು ಗಟ್ಟಿಗೊಳಿಸಲು ಸುಳ್ಯದ ರಂಗ ಮಯೂರಿ ಕಲಾ ಶಾಲೆ, ಮಡಿಕೇರಿ ಪುರಾತತ್ವ ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆ ಹಾಗೂ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಎರಡನೇ ವರ್ಷದ ಬೇಸಿಗೆ ಶಿಬಿರ ಆಯೋಜಿಸಲಾಗಿದೆ ಎಂದರು. ಪ್ರತಿದಿನ ಬೆಳಿಗ್ಗೆ 8.45 ರಿಂದ ಸಂಜೆ 4.30ರ ವರೆಗೆ 7 ರಿಂದ 17 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ಯೋಗ, ಭಜನೆ, ಕೊಡಗಿನ ಇತಿಹಾಸ…

Read More

ಮಡಿಕೇರಿ ಮಾ.25 : ನಾಪೋಕ್ಲು ಗ್ರಾ.ಪಂ ಗೆ ಒಳಪಟ್ಟ ಕೊಳಕೇರಿ ಗ್ರಾಮದಿಂದ ಕೋಕೇರಿ ನರಿಯಂದಡ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದು, ತಕ್ಷಣವೇ ರಸ್ತೆ ದುರಸ್ಥಿ ಪಡಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಕೊಳಕೇರಿಯಲ್ಲಿ ಪ್ರತಿಭಟನೆ ನಡೆಸಿದರು. ನಾಪೋಕ್ಲು -ವಿರಾಜಪೇಟೆ ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದ ಎರಡು ಗ್ರಾಮದ ಜನರು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಒತ್ತಾಯಿಸಿ ಪಟ್ಟುಹಿಡಿದರು. ಈ ಸಂದರ್ಭ ಕೋಕೇರಿ ಗ್ರಾಮಸ್ಥ ಚೇನಂಡ ಜಪ್ಪು ದೇವಯ್ಯ ಮಾತನಾಡಿ, ಕೊಳಕೇರಿಯಿಂದ ಕೋಕೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 5 ಕಿ.ಮೀ ರಸ್ತೆ ಜಿ.ಪಂ ಗೆ ಒಳಪಟ್ಟ ರಸ್ತೆಯಾಗಿದ್ದು, ಇದರ ಬಗ್ಗೆ ಹಲವು ಭಾರಿ ಅಧಿಕಾರಿಗಳ, ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಆದರೆ ಅಧಿಕಾರಿಗಳು ರಸ್ತೆ ದುರಸ್ತಿ ಪಡಿಸುವ ಪೆÇಳ್ಳು ಭರವಸೆ ನೀಡಿ ಜನರ ಕಣ್ಣಿಗೆ ಮಣ್ಣೆರೆಚುವ ತಂತ್ರ ಮಾಡಿದ್ದಾರೆ ಎಂದು ಆರೋಪಿಸಿದರು. ಮುಂಬರುವ ಚುನಾವಣೆಗೂ ಮುನ್ನ ರಸ್ತೆಯನ್ನು ಪೂರ್ಣ ಪ್ರಮಾಣದಲ್ಲಿ ದುರಸ್ತಿಪಡಿಸಬೇಕು. ಇಲ್ಲದಿದ್ದರೆ ಯಾವ ರಾಜಕೀಯ ಪಕ್ಷದವರು,…

Read More

ಮಡಿಕೇರಿ ಮಾ.25 : ಕುಶಾಲನಗರದಲ್ಲಿ ಹೊಸದಾಗಿ ಜ್ಞಾನವಾಣಿ ಪತ್ರಿಕೆ ಆರಂಭವಾಗಿದ್ದು , ಕುಶಾಲನಗರದ ಎಪಿಸಿಎಂಸ್ ಸಭಾಂಗಣದಲ್ಲಿ  ಹಿರಿಯ ಶಿಕ್ಷಕ ನಜೀರ್ ಪತ್ರಿಕೆ ಬಿಡುಗಡೆ ಮಾಡಿದರು‌. ನಂತರ ಮಾತನಾಡಿದ ಅವರು, ಶೀರ್ಷಿಕೆ ತಕ್ಕಂತೆ ಸುದ್ದಿ ಮೂಡಿಬರಲಿ. ಒಳ್ಳೆಯ ವಿಚಾರ ಜನತೆಗೆ ತಲುಪವಂತಾಗಲಿ ಎಂದು ಆಶಿಸಿದರು. ದೈಹಿಕ ಶಿಕ್ಷಣ ಅಧೀಕ್ಷಕ ವಿ‌.ಪಿ.‌ಶಶಿಧರ್ ಮಾತನಾಡಿ, ಆಧುನಿಕತೆ ಎಷ್ಟೇ ಮುಂದುವರಿದರೂ ಕೂಡ ಪತ್ರಿಕಾ ರಂಗ ಇಂದಿಗೂ ಅದೇ ಬೇಡಿಕೆ ಉಳಿಸಿಕೊಂಡಿದೆ ಎಂದರು. ಕುಶಾಲನಗರ ಪ.ಪಂ ಅಧ್ಯಕ್ಷ ಜೈವರ್ಧನ್ ಮಾತನಾಡಿ, ಕುಶಾಲನಗರದಲ್ಲಿ ಜ್ಞಾನವಾಣಿ ಪತ್ರಿಕೆ ಆರಂಭವಾಗಿರುವುದು ಸಂತಸ ತಂದಿದೆ ಎಂದರು. ಜಿ.ಪಂ ಮಾಜಿ ಸದಸ್ಯ ವಿ.ಪಿ.ಶಶಿಧರ್ ಮಾತನಾಡಿ, ಈ ವ್ಯಾಪ್ತಿಯಲ್ಲಿ ಸಾಕಷ್ಟು ಸುದ್ದಿಗಳಿವೆ. ಅದೆಲ್ಲವೂ ಓದುಗರಿಗೆ ಸಿಗುವಂತಾಗಬೇಕು ಎಂದರು. ಪತ್ರಿಕೆಯ ಪ್ರಧಾನ ಸಂಪಾದಕ ಸತೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

Read More

ಚೆಟ್ಟಳ್ಳಿ ಮಾ.25 :   ಕೂರ್ಗ್ ಸ್ಟಾರ್ ವತಿಯಿಂದ ಏ.2 ಮತ್ತು 3 ರಂದು ನೆಲ್ಯಹುದಿಕೇರಿಯ ವಿ.ಎಸ್.ಎಸ್.ಎನ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಮುಕ್ತ ಕ್ಯಾರಂ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಕೂರ್ಗ್ ಸ್ಟಾರ್ಸ್ ಯೂಟ್ಯೂಬ್ ಚಾನೆಲ್ ಪ್ರಮುಖ ಅಜಿತ್ ತಿಳಿಸಿದ್ದಾರೆ. ಜಿಲ್ಲಾ ಮಟ್ಟದ ಮುಕ್ತ ಕ್ಯಾರಂ ಪಂದ್ಯಾವಳಿಯಾಗಿದ್ದು, ಸಿಂಗಲ್ಸ್ ಪ್ರಥಮ ಬಹುಮಾನ 4999 ನಗದು ಮತ್ತು ಟ್ರೋಫಿ, ದ್ವಿತೀಯ ಬಹುಮಾನ 2499 ನಗದು ಮತ್ತು ಟ್ರೋಫಿ, ಡಬಲ್ಸ್ ಪ್ರಥಮ ಬಹುಮಾನ 9999 ನಗದು ಮತ್ತು ಟ್ರೋಫಿ, ದ್ವಿತೀಯ ಬಹುಮಾನ 4999ನಗದು ಮತ್ತು ಟ್ರೋಫಿ ನೀಡಲಾಗುವುದು. ಆಸಕ್ತ ತಂಡಗಳು  7204577605  ಸಂಖ್ಯೆ ಕರೆ ಮಾಡಿ ಹೆಸರುಗಳನ್ನು ನೋಂದಾಯಿಸಿಕೊಳ್ಳ ಬಹುದಾಗಿದೆ.

Read More

ಮಡಿಕೇರಿ ಮಾ.25 : ಹಾಕಿ ಇಂಡಿಯಾ ವತಿಯಿಂದ ತಮಿಳುನಾಡಿನ ರಾಮನಾಥಪುರಂನಲ್ಲಿ ನಡೆಯುತ್ತಿರುವ ಪ್ರಥಮ ಜೂನಿಯರ್ ಮೆನ್ ಹಾಗೂ ಜೂನಿಯರ್ ವುಮೆನ್ ದಕ್ಷಿಣ ವಲಯ ಹಾಕಿ ಚಾಂಪಿಯನ್ ಶಿಪ್‍ನಲ್ಲಿ ಹಾಕಿ ಕರ್ನಾಟಕದ ಜೂನಿಯರ್ ಮೆನ್ ತಂಡ ಅಗ್ರ ಸ್ಥಾನದಲ್ಲಿದೆ. 18 ಮಂದಿಯ ಕರ್ನಾಟಕ ತಂಡದಲ್ಲಿ ಕೊಡಗಿನ 9 ಆಟಗಾರರಿದ್ದು, ಈ ತನಕ ನಡೆದ ಪಂದ್ಯದಲ್ಲಿ ಹಾಕಿ ಕರ್ನಾಟಕ ಅಮೋಘ ಸಾಧನೆ ತೋರಿ ಅಗ್ರ ಸ್ಥಾನದಲ್ಲಿದೆ. ಈ ತನಕದ ಪಂದ್ಯಗಳಲ್ಲಿ ಹಾಕಿ ಕರ್ನಾಟಕ ತಂಡ ತೆಲಂಗಾಣ ವಿರುದ್ಧ 25-0, ಪಾಂಡಿಚೇರಿ ವಿರುದ್ಧ 19-0, ಆಂಧ್ರ ಪ್ರದೇಶದ ಎದುರು 9-0 ಹಾಗೂ ತಮಿಳುನಾಡು ವಿರುದ್ಧ 4-2 ಗೋಲಿನಿಂದ ಜಯಗಳಿಸಿದೆ. ಹಾಕಿ ಕರ್ನಾಟಕ ತಂಡದಲ್ಲಿ ಕೊಡಗಿನ ಆಟಗಾರರಾದ ಜೋಕಿರ ಕುಶಾಲ್ ಬೋಪಯ್ಯ, ಕುಲ್ಲೇಟಿರ ವಚನ್ ಕಾಳಪ್ಪ, ಚಿದ್ದಾಟಂಡ ಅಖಿಲ್ ಅಯ್ಯಪ್ಪ, ಕಂಬೀರಂಡ ಮಾವನ್ ಮೇದಪ್ಪ, ಕಲಿಯಂಡ ಚಂಗಪ್ಪ, ಚೋಯಮಾಡಂಡ ಆಕಾಶ್ ಬಿದ್ದಪ್ಪ, ತೀತಮಾಡ ಯಶಸ್ಸ್, ಧ್ರುವ ಸೋಮವಾರಪೇಟೆ, ಶ್ರೀಜಿತ್ ಸೋಮವಾರಪೇಟೆ ಇದ್ದಾರೆ. ತಂಡದ ಕೋಚ್ ಆಗಿ ಕೊಡಗಿನವರಾದ…

Read More

ಮಡಿಕೇರಿ ಮಾ.25 :  ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಕೊಡಗು ಶಾಖೆ,  ಸೋಮವಾರಪೇಟೆ ತಾಲ್ಲೂಕು ಒಕ್ಕಲಿಗರ ಸಂಘ , ಸೋಮವಾರಪೇಟೆ ನಗರ ಒಕ್ಕಲಿಗರ ಸಂಘ  ಹಾಗೂ ಸಮುದಾಯದ ಸಹಭಾಗಿತ್ವದೊಂದಿಗೆ  “ಅಂಧ ವಿಶೇಷಚೇತನರಿಗೆ ಸ್ಥಳ ಪರಿಜ್ಞಾನ ಮತ್ತು ಚಲನವಲನ ವಸತಿಯುತ ಶಿಬಿರ”  ನಡೆಯಿತು. ಸೋಮವಾರಪೇಟೆಯ ಒಕ್ಕಲಿಗರ ಸಮುದಾಯ ಭವನದಲ್ಲಿ  ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ  ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಎಂ.ಅಣ್ಣಯ್ಯ ,  ಸೋಮವಾರಪೇಟೆ ತಾಲ್ಲೂಕಿನಲ್ಲಿ ಅಂಧ ವಿಶೇಷಚೇತನರಿಗೆ ಸ್ಥಳ ಪರಿಜ್ಞಾನ ಮತ್ತು ಚಲನವಲನ ವಸತಿಯುತ ಶಿಬಿರವನ್ನು ಆಯೋಜಿಸಿರುವುದು ಶ್ಲಾಘನೀಯ. ಅಂಧ ವಿಶೇಷಚೇತನರು ಈ  ಶಿಬಿರವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಆರ್. ಮುತ್ತಣ್ಣ ಮಾತನಾಡಿ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆ  ವತಿಯಿಂದ ವಿಶೇಷಚೇತನರಿಗೆ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಉತ್ತಮ ಕೆಲಸವಾಗಿದ್ದು, ಇಂತಹ ಕೆಲಸಗಳಿಗೆ ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸ್ವಾಮಿ ವಿವೇಕಾನಂದ ಯೂತ್…

Read More

ಮಡಿಕೇರಿ ಮಾ.25 :  ಕಾಂಗ್ರೆಸ್ ನಾಯಕ  ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ ಕ್ರಮವನ್ನು ಖಂಡಿಸಿ  ಕೊಡಗು ಜಿಲ್ಲಾ ಕಾಂಗ್ರೆಸ್ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಇಂದಿರಾ ಗಾಂಧಿ ವೃತ್ತ ದಲ್ಲಿ ಜಮಾಯಿಸಿದ ಕಾಂಗ್ರೆಸ್ ಪ್ರಮುಖರು ಹಾಗೂ ಕಾರ್ಯಕರ್ತರು  ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿ  ಅಸಮಾಧಾನ ವ್ಯಕ್ತಪಡಿಸಿದರು.  ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ  ಧರ್ಮಜ ಉತ್ತಪ್ಪ, ಈ ಸಂದರ್ಭ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ, ಕೆಪಿಸಿಸಿ ವಕ್ತಾರ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್, ಕಾಂಗ್ರೆಸ್ ನಾಯಕ ಸಂಕೇತ್ ಪೂವಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್, ಮಡಿಕೇರಿ ಬ್ಲಾಕ್ ಅಧ್ಯಕ್ಷ ಹೆಚ್.ಎ.ಹಂಸ, ಮಡಿಕೇರಿ ನಗರಾಧ್ಯಕ್ಷ ಬಿ.ವೈ.ರಾಜೇಶ್, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಎಂ.ಇಸ್ಮಾಯಿಲ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯ ಅಬ್ರಾರ್, ಪ್ರಧಾನ ಕಾರ್ಯದರ್ಶಿ ಮಿನಾಜ್ ಪ್ರವೀಣ್, ಸೇವಾದಳ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ರಾಜೀವ್ ಗಾಂಧಿ ಪಂಚಾಯತ್ ರಾಜ್…

Read More

ಮಡಿಕೇರಿ ಮಾ.24 : ಮಂಡ್ಯದ ಗೆಜ್ಜೆಲಗೆರೆ ಎಂಬಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕೊಡಗು ಜಿಲ್ಲೆಯ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಬಲಮುರಿ ಗ್ರಾಮದ ಚೆಯ್ಯಂಡ ಕವಿತಾ(45) ಹಾಗೂ ಅವರ ಪುತ್ರ ಹತ್ತನೇ ತರಗತಿಯ ವಿದ್ಯಾರ್ಥಿ ಆರ್ಯನ್ (15) ಮೃತ ದುರ್ದೈವಿಗಳು. ಪತಿ ಚೆಯ್ಯಂಡ ಕಟ್ಟಿ ಮುತ್ತಪ್ಪ ಅವರಿಗೆ ಗಾಯಗಳಾಗಿದ್ದು, ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ಮತ್ತು ಟಾಟಾ ಏಸ್ ವಾಹನದ ನಡುವೆ ಡಿಕ್ಕಿ ಸಂಭವಿಸಿದ್ದು, ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಟ್ಟಿ ಮುತ್ತಪ್ಪ, ಕವಿತಾ ಹಾಗೂ ಆರ್ಯನ್ ಮಾ.23 ರಂದು ನಾಪೋಕ್ಲುವಿನಲ್ಲಿ ಕೊಡವ ಕುಟುಂಬಗಳ ನಡುವಿನ ಹಾಕಿ ಉತ್ಸವದಲ್ಲಿ ಪಾಲ್ಗೊಂಡು ಇಂದು ಕಾರಿನಲ್ಲಿ ಬೆಂಗಳೂರಿಗೆ ಮರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಇವರಿಗೆ ಪುತ್ರಿಯೂ (ದೀಕ್ಷ) ಇದ್ದು, ಬೆಂಗಳೂರಿನಲ್ಲೇ ಉಳಿದುಕೊಂಡ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಕಟ್ಟಿ ಮುತ್ತಪ್ಪ ಬೆಂಗಳೂರಿನ ಸಂಸ್ಥೆಯೊAದರಲ್ಲಿ ಉದ್ಯೋಗದಲ್ಲಿದ್ದಾರೆ. ಬಲಮುರಿ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.

Read More

ಮಡಿಕೇರಿ ಮಾ.24 : ಕೋಮು ಪ್ರಚೋದನೆ  ಭಾಷಣ ಮಾಡಿದವರು ಊರು ಬಿಟ್ಟು ಹೋಗುತ್ತಾರೆ. ಆದರೆ ಭಾಷಣದಿಂದ ಪ್ರೇರಿತರಾದವರು ಕೇಸ್ ಹಾಕಿಸಿಕೊಂಡು ಕೋರ್ಟ್ ಗೆ ಅಲೆಯುತ್ತಾರೆ, ಮಹಿಳೆಯರು ಮನೆಯಲ್ಲಿ ಕಣ್ಣೀರು ಹಾಕುತ್ತಿರುತ್ತಾರೆ ಎಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಹೇಳಿದ್ದಾರೆ. ಪೊನ್ನಂಪೇಟೆಯಲ್ಲಿ ನಡೆದ ಕಾಂಗ್ರೆಸ್ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕೋಮು ಭಾವನೆಗಳನ್ನು ಕೆರಳಿಸಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಪ್ರತೀ ಮಹಿಳೆಯರ ಬ್ಯಾಂಕ್ ಖಾತೆಗೆ ವಾರ್ಷಿಕ 24 ಸಾವಿರ ರೂ. ಸಂದಾಯವಾಗಲಿದೆ. ಹೀಗಾಗಿ ಮಹಿಳೆಯರು ಕಡ್ಡಾಯವಾಗಿ ಬ್ಯಾಂಕ್ ಖಾತೆ ತೆರೆಯಿರಿ ಎಂದು ಸಲಹೆ ನೀಡಿದರು.

Read More

ಮಡಿಕೇರಿ ಮಾ.24 : ಬಿಜೆಪಿಯ ಪೊಳ್ಳು ಭರವಸೆಗಳನ್ನು ನಂಬಿದ ಪರಿಣಾಮವಾಗಿ ಮಹಿಳೆಯರು ಇಂದು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದು ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಆದ್ದರಿಂದ ಈ ಬಾರಿ ಬಿಜೆಪಿಯನ್ನು ನಂಬಿ ಮೂರ್ಖರಾಗದೆ ಸಂಕಷ್ಟಗಳಿಗೆ ಸ್ಪಂದಿಸುವ ಕಾಂಗ್ರೆಸ್ ನ್ನು ಬೆಂಬಲಿಸಿ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಕರೆ ನೀಡಿದ್ದಾರೆ. ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಪೊನ್ನಂಪೇಟೆ, ವಿರಾಜಪೇಟೆ ಮತ್ತು ನಾಪೋಕ್ಲು ಮಹಿಳಾ ಕಾಂಗ್ರೆಸ್‌ನಿAದ ನಡೆದ ‘ಕಾಂಗ್ರೆಸ್ ಮಹಿಳಾ ಸಮಾವೇಶ’ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿಯ ಸುಳ್ಳು ಆಶ್ವಾಸನೆ, ಭರವಸೆಗಳನ್ನು ನಂಬಿದಲ್ಲಿ ನಮಗಿಂತ ಮೂರ್ಖರು ಮತ್ತೊಬ್ಬರಿಲ್ಲವೆಂದು ಹೇಳಿದರು. ಬಿಜೆಪಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಎಷ್ಟು ಮಹಿಳೆಯರಿಗೆ ಸ್ಥಾನಮಾನ ನೀಡಿದೆ, ಇಂತಹ ವಿಚಾರಗಳ ಬಗ್ಗೆ ಮಹಿಳೆೆಯರು ಪ್ರಶ್ನೆ ಮಾಡಬೇಕು. ಪ್ರಸ್ತುತ ನಮ್ಮ ಜೀವನಕ್ಕಾಗಿ ಬೀದಿಗೆ ಬಂದು ಹೋರಾಟ ಮಾಡುವಂತಹ ಅನಿವಾರ್ಯತೆಯನ್ನು ಬಿಜೆಪಿ ಸೃಷ್ಟಿಸಿದೆಯೆಂದು ಆರೋಪಿಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ‘ಅನ್ನ ಭಾಗ್ಯ’ ನೀಡಿದ ಕಾರಣ ಕೋವಿಡ್ ಸಂದರ್ಭ…

Read More