ಲೇಖಕ: admin

ಮಡಿಕೇರಿ ಮಾ.14 : ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಆನೆಹಳ್ಳದಿಂದ ದಬ್ಬಡ್ಕದ ವರೆಗಿನ ರಸ್ತೆ ಕಾಮಗಾರಿ ನಡೆಯುತ್ತಿದೆ. ಆದರೆ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ಕಾಂಗ್ರೆಸ್ ವಿನಾಕಾರಣ ಕಾಮಗಾರಿ ಬಗ್ಗೆ ಅಪಪ್ರಚಾರ ಮಾಡುತ್ತಿದೆ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಅವರು ರಸ್ತೆ ಕಾಮಗಾರಿ ನಡೆಸುವ ಸಂದರ್ಭ ಗ್ರಾಮಸ್ಥರು ಹಾಗೂ ಸ್ಥಳೀಯ ಯುವಕರು ಸ್ಥಳದಲ್ಲೇ ಹಾಜರಿದ್ದು, ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಂಡಿದ್ದಾರೆ. ಹೀಗಿದ್ದರೂ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಯ ಗುಣಮಟ್ಟದ ಕುರಿತಂತೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿರುವುದು ಹಾಸ್ಯಸ್ಪದ ಎಂದರು. ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ಕಾಂಗ್ರೆಸ್ ನವರು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಇದೊಂದು ಚುನಾವಣಾ ಗಿಮಿಕ್ ಅಷ್ಟೆ, ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಯಾರನ್ನೋ ಮೆಚ್ಚಿಸುವ ಸಲುವಾಗಿ ದುರುದ್ದೇಶಪೂರಿತವಾಗಿ ಕಾಮಗಾರಿ ಬಗ್ಗೆ ಆರೋಪ ಮಾಡಲಾಗುತ್ತಿದೆ. ತಪ್ಪುಗಳಾದಾಗ ಅವುಗಳನ್ನು ಸರಿಪಡಿಸಿಕೊಳ್ಳಬಹುದು, ಆದರೆ ಪ್ರಚಾರಕ್ಕಾಗಿ ಈ ರೀತಿ ಮಾಡುವುದು ಸಣ್ಣತನದ ಪ್ರವೃತ್ತಿ ಎಂದು…

Read More

ಮಡಿಕೇರಿ ಮಾ.14 : ಮಂಗಳೂರು ವಿಶ್ವ ವಿದ್ಯಾನಿಲಯವು ಪದವಿ ವಿಭಾಗದ ರ‍್ಯಾಂಕ್ ಪಟ್ಟಿ ಪ್ರಕಟಿಸಿದ್ದು, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಬಿ.ಎ (ಎಚ್‌ಆರ್‌ಡಿ) ವಿಭಾಗದ ವಿದ್ಯಾರ್ಥಿ ಬ್ರೈಟನ್ ಮ್ಯಾಥ್ಯೂ 2022 ನೇ ಸಾಲಿನ ಬಿ.ಎ (ಎಚ್‌ಆರ್‌ಡಿ) ಪರೀಕ್ಷೆಗಳಲ್ಲಿ ತೃತೀಯ ರ್ಯಾಂಕ್ ಪಡೆದಿದ್ದಾರೆ. ಇವರು 6 ಸೆಮಿಸ್ಟರ್‍ಗಳಲ್ಲಿ ಒಟ್ಟು 3500 ಅಂಕಗಳಲ್ಲಿ 2648 ಅಂಕಗಳನ್ನು ಗಳಿಸಿ 75.65 ಅಂಕಗಳೊಂದಿಗೆ ಈ ಸಾಧನೆ ಮಾಡಿದ್ದಾರೆ. ಇವರು ಮಡಿಕೇರಿ ಮಂಗಳಾದೇವಿ ನಗರದ ನಿವಾಸಿಯಾದ ನಿವೃತ್ತ ಯೋಧ ಹಾಗೂ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜಿನ ಪೋಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಮ್ಯಾಥ್ಯೂ ಕೆ.ಪಿ. ಹಾಗೂ ಫಿಲೋಮಿನಾ ಇವರ ಪುತ್ರನಾಗಿದ್ದು, ಪ್ರಸ್ತುತ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂ.ಎ ಇಂಗ್ಲೀಷ್ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಹಾಗೆಯೇ ಕಾಲೇಜಿನ ಎಂ.ಎ ಇಂಗ್ಲೀಷ್ ವಿಭಾಗದ ವಿದ್ಯಾರ್ಥಿಗಳಾದ ಸುಬ್ರಮಣಿ ಸಿ.ಎ ಹಾಗೂ ಕಾವೇರಮ್ಮ ಕೆ.ಜೆ ಇವರುಗಳು ಶೈಕ್ಷಣಿಕ ವರ್ಷ 2020-21 ಮತ್ತು 2021-22 ನೇ ಸಾಲಿನಲ್ಲಿ ನಡೆದ ಸ್ನಾತಕೋತ್ತರ ಇಂಗ್ಲೀಷ್ ಪರೀಕ್ಷೆಯಲ್ಲಿ ತೃತೀಯ ಸೆಮಿಸ್ಟರ್‍ನ ಸಾಹಿತ್ಯ ವಿಮರ್ಶೆ-1 ಹಾಗೂ…

Read More

ಮಡಿಕೇರಿ ಮಾ.14 ; ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಥಮ ಬಿಬಿಎ ವಿದ್ಯಾರ್ಥಿಯಾದ ಮಹಮ್ಮದ್ ಶಾಹಿಲ್ ಕೆ.ಯು. ಅವರು ಮಹಾರಾಷ್ಟ್ರದ ಜವಹಾರ್ ಲಾಲ್ ನೆಹರು ಕ್ರೀಡಾಂಗಣದಲ್ಲಿ 2023 ರ ಮಾರ್ಚ್, 3 ರಿಂದ 5 ರವರೆಗೆ ನಡೆದ ಅಂತರ ರಾಷ್ಟ್ರೀಯ ಮಟ್ಟದ ಭಾರತ ಮತ್ತು ಬಾಂಗ್ಲಾದೇಶದ ಸೆಸ್ಟೋಬಾಲ್ ಟೂರ್ನಿಯಲ್ಲಿ ಭಾರತ ತಂಡದ ನಾಯಕತ್ವವನ್ನು ವಹಿಸಿದ್ದರು. ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ನಡೆದ ಮೂರು ಸರಣಿ ಪಂದ್ಯಾಟದಲ್ಲಿ 3-0 ಜಯಗಳಿಸುವ ಮೂಲಕ ಪಂದ್ಯದ ಉತ್ತಮ ಶೂಟರ್ ಪ್ರಶಸ್ತಿ ಪಡೆದಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆಯುವ ಮೂಲಕ ಕಾಲೇಜಿಗೆ ಹಿರಿಮೆ ತಂದಿದ್ದಾರೆ ಎಂದು ಫಿ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.

Read More

ಕಡಂಗ ಮಾ.14 : ಕರ್ನಾಟಕ ಮುಸ್ಲಿಂ ಜಮಾಅತ್ ಹಾಗೂ ಸುನ್ನೀ ಯುವಜನ ಸಂಘ (ಎಸ್ ವೈ ಎಸ್)ನ ವಾರ್ಷಿಕ ಮಹಾ ಸಭೆಯು  ಕಡಂಗ ಬದ್ರಿಯಾ ಮದರಸ ಸಭಾಂಗಣದಲ್ಲಿ ನಡೆಯಿತು. ಸಿ.ಎಂ.ಸುಲೈಮಾನ್  ಅಧ್ಯಕ್ಷತೆಯಲ್ಲಿ ಸಭೆಯನ್ನು ಸ್ಥಳೀಯ ಮಸೀದಿ ಖತೀಬ್ ಶಹಜಹಾನ್ ಶಾಖಾಫಿ  ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ವಿರಾಜಪೇಟೆ ಸೆಂಟರ್ ನ ಅಹ್ಮದ್ ಮದನಿ, ಸಂಘಟನೆ ನಡೆದು ಬಂದ ಹಾದಿ ಹಾಗೂ ಸಂಘಟನೆಯ ದ್ಯೇಯೋದ್ದೇಶ , ಸಂಘಟನೆ ನಡೆಸಬೇಕಾದ ಕಾರ್ಯ ಚಟುವಟಿಕೆಗಳ ಬಗ್ಗೆ  ವಿವರಿಸಿದರು. ಕಳೆದ ಸಾಲಿನ ವರದಿಯನ್ನು ಪ್ರಧಾನ ಕಾರ್ಯದರ್ಶಿ ಸಿ.ಎ.ಅಶ್ರಫ್ ಮಂಡಿಸಿದರು. ಅಬ್ದುಲ್ ಸಲಾಂ ಸಾರ್ವರನ್ನು ಸ್ವಾಗತಿಸಿದರು.  ಕರ್ನಾಟಕ ಮುಸ್ಲಿಂ ಜಮಾಅತ್ ನ ನೂತನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಂ ವಂದಿಸಿದರು. :: ನೂತನ ಆಡಳಿತ ಮಂಡಳಿ :: ಕರ್ನಾಟಕ ಮುಸ್ಲಿಂ ಜಮಾಅತ್ ಹಾಗೂ ಎಸ್ ವೈ ಎಸ್ ಕಡಂಗ ಶಾಖೆಗೆ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಕರ್ನಾಟಕ ಮುಸ್ಲಿಂ ಜಮಾಅತ್ ನೂತನ  ಅಧ್ಯಕ್ಷರಾಗಿ ಸಿ.ಎಂ.ಸುಲೈಮಾನ್,  ಪ್ರಧಾನ ಕಾರ್ಯದರ್ಶಿಯಾಗಿ ಯು.ಎ.ಅಬ್ದುಲ್…

Read More

ಮಡಿಕೇರಿ ಮಾ.14 : ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ವಿವಿಧ ಮನೆಗಳಿಗೆ ಗ್ಯಾರಂಟಿ ಕಾರ್ಡ್ ವಿತರಿಸಲಾಯಿತು. ಈ ಸಂದರ್ಭ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ಗ್ಯಾರಂಟಿ ಕಾರ್ಡ್‍ನಲ್ಲಿ ನೀಡಿರುವ ಭರವಸೆಗಳು ಈಡೇರಲಿವೆ ಎಂದರು. ಪಕ್ಷದ ನಾಯಕರು ಉತ್ತಮ ಯೋಜನೆಯನ್ನು ರೂಪಿಸಿದ್ದು, ಮತದಾರರು ಈ ಬಾರಿ ಕಾಂಗ್ರೆಸ್ ನ್ನು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಬೆಲೆ ಏರಿಕೆಯ ಬಿಜೆಪಿಯಿಂದ ಜನರು ಬೇಸತ್ತಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್ ನಗರಾಧ್ಯಕ್ಷ ಬಿ.ವೈ.ರಾಜೇಶ್ ಅವರ ನೇತೃತ್ವದಲ್ಲಿ ನಡೆದ ಗ್ಯಾರಂಟಿ ಕಾರ್ಡ್ ಅಭಿಯಾನದಲ್ಲಿ ಮಡಿಕೇರಿ ನಗರದ ಬೂತ್ ಸಂಖ್ಯೆ 201, 209 ಮತ್ತು 219ರಲ್ಲಿ ಕಾರ್ಡ್ ವಿತರಿಸಲಾಯಿತು. ಕಾಂಗ್ರೆಸ್ ನ ಮೊದಲ ಗ್ಯಾರಂಟಿ ಕಾರ್ಡ್ “ಗೃಹಜ್ಯೋತಿ” ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಪೂರೈಕೆ, 2ನೇ ಗ್ಯಾರಂಟಿ ಪ್ರತಿ ಮನೆಯೊಡತಿಗೆ 2 ಸಾವಿರ ರೂ.…

Read More

ವಿರಾಜಪೇಟೆ ಮಾ.14 : ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ವಿರಾಜಪೇಟೆ ತಾಲೂಕಿನ ಬೆಳ್ಳುಮಾಡು ಕುಂಜಿಗೇರಿ ಗ್ರಾಮದ ದೇವರ ಕಾಡಿನಲ್ಲಿ ನೆಲೆ ನಿಂತಿರುವ ಆಡುಕೋಣಿ ಶ್ರೀ ಶಾಸ್ತಾವು (ಈಶ್ವರ) ಮತ್ತು ಶ್ರೀ ವಿಷ್ಣುಮೂರ್ತಿ ದೇವರು ಪುನರ್ ಪ್ರತಿಷ್ಠಾಪನೆಗೊಂಡು ಲೋಕಾರ್ಪಣೆ ಗೊಳಿಸಲಾಯಿತು. ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಪ್ರಜ್ವಲ್ ಕುದ್ದಣ್ಣಯ್ಯ ನೇತೃತ್ವದಲ್ಲಿ ಪ್ರಭಾಕರ ಕುದ್ದಣ್ಣಯ, ಪ್ರಾಣಮ್ ಕುದ್ದಣ್ಣಯ ಮತ್ತು ವೆಂಕಟರಮಣ ಭಟ್ ಹಾಗೂ ದೇವಾಲಯದ ವಾಸ್ತುಶಿಲ್ಪಿ ಜಗನ್ನಿವಾಸ್ ರಾವ್ ಸಾನಿಧ್ಯದಲ್ಲಿ ಮೂರು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳು ಜರುಗಿತು. ಮಾ.11 ರಂದು ಸಾಮೂಹಿಕ ಪಾರ್ಥನೆ, ಆಚಾರ್ಯವರ್ಣ, ಆಲಯ ಪರಿಗ್ರಹ, ಬಿಂಬ ಪರಿಗ್ರಹ, ಸ್ವಸ್ತಿ ಪುಣ್ಯಾಹ ವಾಚನ, ಖನನಾದಿ ಸಪ್ತಶುದ್ಧಿ, ಪ್ರಾಸಾದ ಶುದ್ಧಿ, ಕಲಶ ಪೂಜೆ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ವಾಸ್ತು ಬಲಿ ನೂತನ ಬಿಂಬ ಜಲಾಧಿವಾಸ, ವಾಸ್ತು ಕಲಶಾಭಿಷೇಕ ನೆರವೇರಿತು. ಮಾ.12 ರಂದು ಮಾಹಾಗಣಪತಿ ಹೋಮ, ಪ್ರಾಯಶ್ಚಿತ ಹೋಮ, ಶಯ್ಯಾ ಮಂಟಪ ಪೂಜೆ, ಅನುಜ್ಞಾ ಕಲಶಾಭಿಷೇಕ, ಜೀವೋದ್ವಾಸನ…

Read More

ಮಡಿಕೇರಿ ಮಾ.14 :  ಪ್ರಧಾನ ಮಂತ್ರಿಗಳ ಮಾರ್ಗದರ್ಶನ ಮತ್ತು ಸ್ಫೂರ್ತಿ ಯಿಂದ ಭಾರತ 75ನೇ ವರ್ಷದ ಸ್ಮರಣಾರ್ಥವಾಗಿ “ ಆಜಾಧೀ ಕಾ ಅಮೃತ ಮಹೋತ್ಸವ” ವನ್ನು ಆಚರಿಸುತ್ತಿದೆ. ಭಾರತದ ಇತಿಹಾಸದಲ್ಲಿ ಖ್ಯಾತಿ ಪಡೆದ ಗಣ್ಯರ ಸಾಧನೆಗಳನ್ನು ಜನರಿಗೆ ತಿಳಿಸುವ ಪ್ರಯತ್ನದೊಂದಿಗೆ,  ನರೇಂದ್ರ ಮೋದೀಜಿ ರವರು ಸ್ವಾತಂತ್ರ್ಯ ದಿನಾಚರಣೆಯ ತಮ್ಮ ಭಾಷಣದಲ್ಲಿ “ ಪಂಚ ಪ್ರಾಣ್ “ ಎನ್ನುವ ಮಂತ್ರವನ್ನು ಘೋಷಿಸಿದ್ದಾರೆ. ಅಮೃತ ಕಾಲ ಇಂಡಿಯಾ@2047 ಎನ್ನುವ ದೃಷ್ಠಿಕೋನವನ್ನು ಜನತೆಯ ಮುಂದಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಸಂಘಟನೆಯು “ ‘ಯುವ ಸಂವಾದ’ ಇಂಡಿಯಾ@2047” ಎನ್ನುವ ಹೊಸ ಕಾರ್ಯಕ್ರಮವನ್ನು ಹೊರ ತಂದಿದ್ದು, ಸಮುದಾಯ ಅಭಿವೃದಿ ಆಧಾರಿತ ಸಂಸ್ಥೆಗಳ ಸಹಯೋಗದಲ್ಲಿ ಭಾರತದ ಎಲ್ಲಾ ಜಿಲ್ಲೆಗಳಲ್ಲಿ ದಿನಾಂಕ 1-4-2023 ರಿಂದ 31-5-2023 ನೇ ದಿನಾಂಕದ ವರೆಗೆ ಈ ಕಾರ್ಯಕ್ರಮವನ್ನು ಆಚರಿಸಲು ಉದ್ದೇಶಿಸಿದೆ. ಈ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟದಲ್ಲಿ ಸಮುದಾಯ ಅಭಿವೃದ್ದಿ ಸಂಸ್ಥೆಗಳ (CBOs) ಸಹಯೋಗದಲ್ಲಿ…

Read More

ಮಡಿಕೇರಿ ಮಾ.14 : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಲು ಕೆ.ನಿಡುಗಣೆ ಗ್ರಾ.ಪಂ ಸದಸ್ಯ ಜಾನ್ಸನ್ ಪಿಂಟೋ ಅವರನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಖಾಯಂ ಆಹ್ವಾನಿತರನ್ನಾಗಿ ನೇಮಕ ಮಾಡಿರುವುದಾಗಿ ಪಕ್ಷದ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ತಿಳಿಸಿದ್ದಾರೆ.

Read More

ನಾಪೋಕ್ಲು ಮಾ.14 :  ನಾಪೋಕ್ಲು ಸುತ್ತಮುತ್ತಲಿನ ಪ್ರದೇಶಗಳಿಗೆ ಅರ್ಧ ಇಂಚು ಮಳೆಯಾಗಿದ್ದು, ಸಕಾಲಿಕ ಮಳೆಯಿಂದಾಗಿ ನಾಪೋಕ್ಲು ವಿಭಾಗದ ಕಾಫಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಬೀರಿದೆ. ಉರಿ ಬಿಸಿಲಿನ ತಾಪದಿಂದ ಮಳೆಗಾಗಿ ಕಾದು ಕುಳಿತ  ಜನರು ಸಂತೋಷಗೊಂಡಿದ್ದಾರೆ.  ಬೆಳೆಗಾರರು ಈ ಸಮಯದಲ್ಲಿ ಕಾಫಿ ಮತ್ತು ಕರಿಮೆಣಸು ಕೊಯ್ಲು ಕಾರ್ಯ ಮುಗಿಸಿ ಉತ್ತಮ ಮಳೆಯಿಂದ ಮುಂದಿನ ಫಸಲನ್ನು  ಪಡೆಯಲು ಸಾಧ್ಯವಾಗುತ್ತದೆ. ಮಳೆಯಾಗದಿದ್ದರೆ ಕೃತಕ ಮಳೆ (ಸ್ಟ್ರಿಂಕ್ಲರ್ಸ್) ಮೊರೆ ಹೋಗಬೇಕಿದ್ದು, ಇದರಿಂದ ಬೆಳೆಗಾರ ನಷ್ಟ ಅನುಭವಿಸಬೇಕಾಗುತ್ತದೆ. ವಿಭಾಗದಲ್ಲಿ ಶೇ.80ರಷ್ಟು ಬೆಳೆಗಾರರು ಕಾಫಿ ಕೊಯ್ಲು ಕಾರ್ಯ ಮುಗಿಸಿದ್ದು,  ಮಳೆಯಿಂದಾಗಿ  ಬೆಳೆಗಾರರು  ನೆಮ್ಮದಿಯಿಂದ ನಿಟ್ಟುಸಿರು ಬಿಡುವಂತಾಗಿದೆ. ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ಈ ಭಾಗದಲ್ಲಿ ನೀರಿನ ಅಭಾವ  ಉಂಟಾಗಿದ್ದು,  ಕೆಲವು ದಿನಗಳ ಹಿಂದೆ  ಕಾಡುಗಳಲ್ಲಿ ಬೆಂಕಿ ಅವಘಡಗಳು ಸಹ ನಡೆದಿರುವುದನ್ನು  ಸ್ಮರಿಸಬಹುದು. ವರದಿ :ಝಕರಿಯ ನಾಪೋಕ್ಲು  

Read More

ಸೋಮವಾರಪೇಟೆ ಮಾ.14 : ತುರ್ತು ಸಂದರ್ಭದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ತಂಡ ನೆರವಿಗೆ ಬರಲಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ರೋಹಿತ್ ತಿಳಿಸಿದರು. ಸೋಮವಾರಪೇಟೆ  ಸರ್ಕಾರಿ ಆಸ್ಪತ್ರೆ ಆವರಣದಲ್ಲಿ  ನಡೆದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನಡೆಯುವ ಅಪಘಾತ ಮುಂತಾದ ತುರ್ತು ಸಂದರ್ಭದಲ್ಲಿ  ನೆರವಿಗೆ ಧಾವಿಸಬೇಕೆಂಬ ಸದಾಶೆಯಿಂದ  ಶ್ರೀ ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಶೌರ್ಯ ವಿಪತ್ತು ನಿರ್ವಹಣಾ ತಂಡವನ್ನು ರಚಿಸಿ ತರಬೇತಿ ಗೊಳಿಸಿದ್ದಾರೆ. ಇದರಲ್ಲಿ ಈಜುಗಾರ, ಮರ ಹತ್ತುವವರು, ಚಾಲಕರು ಸೇರಿದಂತೆ ಇನ್ನಿತರ ಪರಿಣಿತರು  ಇದ್ದು,  ಅಗತ್ಯ ಸಂದರ್ಭ ತಂಡದ ಮುಖ್ಯಸ್ಥ ರಾಮ್‌ದಾಸ್ ಅವರನ್ನು  9632102124 ಸಂಪರ್ಕಿಸಬಹುದು ಎಂದರು. ಈ ಸಂದರ್ಭ ಶಸ್ತ್ರ ಚಿಕಿತ್ಸಕರಾದ ಡಾ.ಸತೀಶ್ ಮಾತನಾಡಿ, ಕೊವಿಡ್ ನಂತಹ ಸಂದರ್ಭದಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ಬಗ್ಗೆ ಸ್ಮರಿಸಿಕೊಂಡ ಅವರು ಅಗತ್ಯ ಸಂದರ್ಭದಲ್ಲಿ ಆಸ್ಪತ್ರೆಯೊಂದಿಗೆ ಕೈ ಜೋಡಿಸಬೇಕೆಂದು ತಿಳಿಸಿದರು. ತಾಲೂಕು ಆಡಳಿತ ಮುಖ್ಯಸ್ಥರಾದ ತಹಶೀಲ್ದಾರ್ ಎಸ್.ಎನ್.ನರಗುಂದ, ಅಗ್ನಿ ಶಾಮಕ ಠಾಣೆ ಹಾಗೂ…

Read More