ಮಡಿಕೇರಿ ಫೆ.16 : ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ರಿಲಯನ್ಸ್ ಜಿಯೋ ಟ್ರೂ 4ಜಿ ಡಿಜಿಟಲ್ ಲೈಫ್ ಪರಿಚಯಿಸಿದೆ. ಈಗ ಮೇಲ್ದರ್ಜೆಗೇರಿಸಿದ ನೆಟ್‍ವರ್ಕ್ ಮೂಲಕ ಇಲ್ಲಿನ ಮಕ್ಕಳು ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗುತ್ತದೆ. ಯುವಕರು ಮನೆಯಿಂದಲೇ ಕೆಲಸ (ವರ್ಕ್ ಫ್ರಮ್ ಹೋಮ್) ಮಾಡಲು ಅಥವಾ ಸುರಕ್ಷಿತ ವಾತಾವರಣದಲ್ಲಿ ಅನಿಯಮಿತ ಮನರಂಜನೆ ಪಡೆಯಲು ಸಾಧ್ಯವಾಗುತ್ತಿದೆ ಎಂದು ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ. ದೂರಸಂಪರ್ಕ ಸೇವೆಗಳ ಕೊರತೆಯಿಂದಾಗಿ ತಲಕಾವೇರಿಯ ಜನರು ಹೊರ ಜಗತ್ತಿಗೆ ಮೂಲಭೂತವಾದ ಸಂಪರ್ಕದಿಂದ ವಂಚಿತರಾಗಿದ್ದರು. ಜಿಯೋದಿಂದ ಸೌರ ಶಕ್ತಿಯನ್ನು ಬಳಸಿಕೊಂಡು, ಹಸಿರು ಟವರ್ ನೊಂದಿಗೆ ಟ್ರೂ 4ಜಿ ಒದಗಿಸುತ್ತದೆ ಎಂದು ಜಿಯೊ ವಕ್ತಾರರು ಹೇಳಿದ್ದಾರೆ. ಈ ಉಪಕ್ರಮದ ಮೂಲಕ ಜಿಯೋ ತನ್ನ ದೃಢವಾದ ನೆಟ್‍ವರ್ಕ್ ಮತ್ತು ಜಿಲ್ಲೆಯಾದ್ಯಂತ ವ್ಯಾಪಕವಾದ ಲಭ್ಯತೆಯ ಮೂಲಕ ತಲಕಾವೇರಿಯಲ್ಲಿನ ಸ್ಥಳೀಯ ಕುಟುಂಬಗಳಿಗೆ ಎಲ್ಲೆಡೆಯೂ ಎಲ್ಲ ಸಮಯದಲ್ಲಿಯೂ ತಡೆರಹಿತ ಅನುಭವ ನೀಡುವುದನ್ನು ಮುಂದುವರಿಸುತ್ತದೆ ಎಂಬುದನ್ನು ಖಾತ್ರಿಪಡಿಸುತ್ತದೆ ಎಂದು ಪ್ರಕಟಣೆ ಹೇಳಿದೆ.
ಲೇಖಕ: admin
ಶನಿವಾರಸಂತೆ ಫೆ.16 : ನಿಡ್ತ ಸರ್ಕಾರಿ ಪ್ರೌಡ ಶಾಲೆಯ ಆವರಣದಲ್ಲಿ ಕಲಿಕಾ ಚೇತರಿಕೆಯ ಅಂಗವಾಗಿ ಮಕ್ಕಳ ಸಂತೆ ನಡೆಯಿತು. ಮಕ್ಕಳ ಸಂತೆಯಲ್ಲಿ ಚಿಣ್ಣರು ತಮ್ಮ ತಮ್ಮ ಮನೆಯಲ್ಲಿ ಬೆಳೆದ ತರಕಾರಿ, ಸೊಪ್ಪು, ಹಣ್ಣು ಹಂಪಲನ್ನು ತಂದು ಮಾರಾಟ ಮಾಡಿದರೆ ಮತ್ತೆ ಕೆಲವು ಮಕ್ಕಳು ಪೋಷಕರ ಸಹಾಯದಿಂದ ಬೇರೆ ಕಡೆಯಿಂದ ತಂದ ತರಕಾರಿ, ಹಣ್ಣು ಹಂಪಲು,ತಿಂಡಿ ತಿನಿಸು, ಆಹಾರ ಪದಾರ್ಥಗಳನ್ನು ತಂದು ಮಾರಾಟ ಮಾಡಿದರು. ಚಿಣ್ಣರ ಸಂತೆಯಲ್ಲಿ ತರಕಾರಿ, ಸೊಪ್ಪು, ಗೆಡ್ಡೆ ಗೆಣಸು, ಹಣ್ಣು ಹಂಪಲು, ತಿಂಡಿ ತಿನಿಸು ಸೇರಿದಂತೆ ಜ್ಯೂಸ್, ಪಾನಿಪೂರಿ, ಗೂಬಿ ಮಂಚೂರಿ ಮಳಿಗೆ ಮಾಡಿಕೊಂಡು ವ್ಯಾಪಾರ ಮಾಡಿದರು. ಸಂತೆಯಲ್ಲಿ ಮಾರಾಟ ಮಾಡುವ ಬೆಲೆಗೆ ಚಿಣ್ಣರು ತಾವು ತಂದ ವಸ್ತುಗಳನ್ನು ಮಾರಾಟ ಮಾಡಿದರು. ಮಕ್ಕಳ ಸಂತೆಯಲ್ಲಿ ಪೋಷಕರು ಅಕ್ಕ ಪಕ್ಕದ ಜನರು ಗ್ರಾಹಕರಾಗಿ ಬಂದು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿದರು. ಶಾಲೆಯ 8 ರಿಂದ 10ನೇ ತರಗತಿಯ ಮಕ್ಕಳು ಸಂತೆಯಲ್ಲಿ ಪಾಲ್ಗೊಂಡು ಮುಂಜಾನೆಯಿಂದ ಸಂಜೆಯವರೆಗೆ ಪಾಲ್ಗೊಂಡರು. ಜಿ.ಪಂ ಮಾಜಿ ಸದಸ್ಯ…
ನಾಪೋಕ್ಲು ಫೆ.16 : ಪಾರಾಣೆಯತ್ತ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಪಿಕಪ್ ವಾಹನವೊಂದು ಬೇತು ಕುಟ್ಟಜ್ಜೆಟ್ಟಿರ ಮಂದ್ ಸಮೀಪ ಅವಘಡಕ್ಕೀಡಾಗಿದ್ದು ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ. ಎಮ್ಮೆಮಾಡಿನ ಅಚ್ಚುಪ್ಪು ಎಂಬವರು ಚಲಾಯಿಸುತ್ತಿದ್ದ ಪಿಕಪ್ ವಾಹನದ ಚಕ್ರ ಕಳಚಿ ರಸ್ತೆಯ ಅಂಚಿಗೆ ಸರಿದಿದೆ. ತೋಟದ ಕೆಲಸಕ್ಕೆಂದು ತೆರಳುತ್ತಿದ್ದ ಕಾರ್ಮಿಕರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ವರದಿ : ದುಗ್ಗಳ ಸದಾನಂದ
ಮಡಿಕೇರಿ ಫೆ.16 : ಭಾಗಮಂಡಲದ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ ಕರಾಟೆ ಪರೀಕ್ಷೆಯಲ್ಲಿ ಪದಕ ಮತ್ತು ವಿವಿಧ ಹಂತದ ಬೆಲ್ಟ್ ಗಳನ್ನು ಪಡೆದುಕೊಂಡಿದ್ದಾರೆ. ಅಂತರಾಷ್ಟ್ರೀಯ ಶಾವೊಲಿನ್ ಕುಂಗ್-ಫು ಕರಾಟೆ ಶಾಲೆಯ ವತಿಯಿಂದ ನಡೆಸಲಾದ ಕರಾಟೆ ಪರೀಕ್ಷೆಯಲ್ಲಿ 13 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕಿ ಶ್ವೇತ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪದಕ ಮತ್ತು ಕರಾಟೆ ಬೆಲ್ಟ್ ಗಳನ್ನು ವಿತರಿಸಿದರು. ಅಂತರಾಷ್ಟ್ರೀಯ ಶಾವೊಲಿನ್ ಕುಂಗ್-ಫು ಕರಾಟೆ ಶಾಲೆಯ ಭಾರತದ ಮುಖ್ಯ ತರಬೇತುದಾರ ಶಿಪು ಇಂದ್ರಜಿತ್ ಪರೀಕ್ಷಕರಾಗಿ ಭಾಗವಹಿಸಿದ್ದರು. ಈ ಸಂದರ್ಭ ಭಾಗಮಂಡಲದ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಯ ತರಬೇತುದಾರ ನಾಟೋಳಂಡ ನಂಜುಂಡ ಮತ್ತು ಶಾಲಾ ಶಿಕ್ಷಕ ಕಿಶೋರ್ ಕುಮಾರ್ ಹಾಜರಿದ್ದರು.
ಮಡಿಕೇರಿ ಫೆ.16 : ಭಾರತೀಯ ಬೌದ್ಧ ಮಹಾಸಭಾ ಮೈಸೂರು ಜಿಲ್ಲಾ ಶಾಖೆ ವತಿಯಿಂದ ಫೆ.26 ರಂದು ಮೈಸೂರಿನಲ್ಲಿ ರಾಜ್ಯಮಟ್ಟದ ಬೌದ್ಧ ಮಹಾ ಸಮ್ಮೇಳನ ನಡೆಯಲಿದೆ ಎಂದು ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವರಾಜ್ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9.30ಕ್ಕೆ ಮೈಸೂರಿನ ಪುರಭವನದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅವರ ಮೊಮ್ಮಗ ಡಾ.ಭೀಮ್‍ರಾವ್ ಯಶವಂತರಾವ್ ಅಂಬೇಡ್ಕರ್ ಮಾಲಾರ್ಪಣೆ ಮಾಡಲಿದ್ದಾರೆ. ನಂತರ ರಾಷ್ಟ್ರೀಯ ಹಾಗೂ ರಾಜ್ಯದ ಸಮತಾ ಸೈನಿಕ ದಳದ ಸದಸ್ಯರಿಂದ ಧಮ್ಮ ನಡಿಗೆ ಪಥಸಂಚಲನ ವೇದಿಕೆಯವರೆಗೆ ಸಾಗಲಿದೆ ಎಂದು ಮಾಹಿತಿ ನೀಡಿದರು. ಬೆಳಿಗ್ಗೆ 11.30ಕ್ಕೆ ಮೈಸೂರಿನ ಲಲಿತ ಮಹಲ್ ಅರಮನೆ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಬೌದ್ಧ ಬಿಕ್ಕುಗಳು ಹಾಗೂ ಡಾ.ಭೀಮ್‍ರಾವ್ ಮಾತನಾಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಬುದ್ಧ ಧಮ್ಮ ಕೃತಿಗಳ ಬಿಡುಗಡೆಯಾಗಲಿದ್ದು, ನಂತರ ಧಮ್ಮ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು. ಕಾರ್ಯಕ್ರಮಕ್ಕೆ ಸುಮಾರು 20 ಸಾವಿರದಿಂದ 30 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ…
ಮಡಿಕೇರಿ ಫೆ.16 : ಮೂರ್ನಾಡು ಸಮೀಪದ ಕೊಂಡಂಗೇರಿ ದರ್ಗಾ ಶರೀಫ್ ಉರೂಸ್ ಕಾರ್ಯಕ್ರಮವು ಫೆ.17 ರಿಂದ 21ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಸುನ್ನಿ ಮುಸ್ಲಿಂ ಜಮಅತ್ ನ ಸದಸ್ಯ ಪಿ.ಎಂ.ಹನೀಫ್ ಸಖಾಫಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಐದು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಫೆ.17 ರಂದು ಅಪರಾಹ್ನ 2 ಗಂಟೆಗೆ ಸಯ್ಯಿದ್ ಹಸನ್ ಆಟಕೋಯ ತಂಙಳ್ ಆದೂರು ಹಾಗೂ ತಕ್ಕ ಮುಖ್ಯಸ್ಥರು ದರ್ಗಾ ಅಲಂಕಾರ ಮತ್ತು ಸಾಮೂಹಿಕ ಪ್ರಾರ್ಥನೆಯ ಮೂಲಕ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು. ಜಮಾಅತ್ ಅಧ್ಯಕ್ಷರಾದ ಪಿ.ಇ.ಮೊಹಮ್ಮದ್ ಹಾಜಿ ಧ್ವಜಾರೋಹಣ ನೆರವೇರಸಲಿದ್ದು, ರಾತ್ರಿ 7 ಗಂಟೆಗೆ ಸಯ್ಯಿದ್ ಜಾಫರ್ ಸಾದಿಖ್ ಕುಂಬೋಲ್ ಅವರ ನೇತೃತ್ವದಲ್ಲಿ “ಜಲಾಲಿಯ್ಯ ರಾತೀಬ್” ಆದ್ಯಾತ್ಮಿಕ ಕಾರ್ಯಕ್ರಮ ಮೂಡಿಬರಲಿದೆ ಎಂದು ತಿಳಿಸಿದರು. ಫೆ.18 ರಂದು ರಾತ್ರಿ 7 ಗಂಟೆಗೆ “ಅಂತರ್ಜಾಲದ ಬಳಕೆ ಮತ್ತು ಯವ್ವನ” ಎಂಬ ವಿಷಯದಲ್ಲಿ ವಾಗ್ಮಿಗಳಾದ ಅನಸ್…
ಮಡಿಕೇರಿ ಫೆ.16 : ವಿರಾಜಪೇಟೆಯ ನಲ್ವತೋಕ್ಲು-ಚೊಕಂಡಳ್ಳಿ ಗ್ರಾಮದ ಅಲ್ ಹಿದಾಯ ಸಮಿತಿ ವತಿಯಿಂದ ಫೆ.19 ರಂದು ಮಜ್ಲಿಸ್ನೂರ್ ಹಾಗೂ ಧಾರ್ಮಿಕ ಮತಪ್ರಭಾಷಣ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿಯ ಕಾರ್ಯದರ್ಶಿ ಝಿಯಾಉದ್ದೀನ್ ಬಾಖವಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 4 ಗಂಟೆಗೆ ಮರ್ಹೂಂ ಸೈಯ್ಯಿದ್ ಆಟ್ಟಕೋಯ ತಂಙಳ್ ಅವರ ಖಬರ್ ಝಿಯಾರತ್‍ನೊಂದಿಗೆ ಕಾರ್ಯಕ್ರಮ ಆರಂಭವಾಗಲಿದ್ದು, 4.30ಕ್ಕೆ ಧ್ವಜಾರೋಹಣ ನಡೆಯಲಿದೆ ಎಂದು ಮಾಹಿತಿ ನೀಡಿದರು. ಸಂಜೆ 7 ಗಂಟೆಗೆ ಸಯ್ಯಿದ್ ಇಬ್ರಾಹಿಂ ಬಾದ್ ಷಾ ತಂಙಳ್ ಅಲ್ ಬುಖಾರಿ ಅಲ್ ಅಝ್‍ಹರಿ ಮಂಗಳೂರು ಅವರ ನೇತೃತ್ವದಲ್ಲಿ ಮಜ್ಲಿಸ್ನೂರ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ರಾತ್ರಿ 8 ಗಂಟೆಗೆ ನಲ್ವತೋಕ್ಲು ಮಹಲ್ ಅಧ್ಯಕ್ಷ ಜನಾಬ್ ಡಿ.ಹೆಚ್.ಸೂಫಿಹಾಜಿ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮ ಪ್ರಾರಂಭಗೊಳ್ಳಲಿದ್ದು, ಕೊಡಗು ಜಿಲ್ಲೆಯ ನಾಯಿಬ್ ಖಾಝಿಗಳಾದ ಉಸ್ತಾದ್ ಶಾದುಲಿ ಫೈಝಿ ಪ್ರಾರ್ಥನೆ ನಡೆಸಲಿದ್ದಾರೆ. ಜಿಲ್ಲೆಯ ನಾಯಿಬ್ ಖಾಝಿ ಹಾಗೂ ಸಮಸ್ತ ಕೇಂದ್ರ ಮುಶಾವರ ಸದಸ್ಯರುಗಳಾದ ಎಂ.ಎಂ.ಅಬ್ದುಲ್ಲ…
ಮಡಿಕೇರಿ ಫೆ.16 : ಹೊದ್ದೂರು ಗ್ರಾಮದ ಐತಿಹಾಸಿಕ ಶ್ರೀ ಶಾಸ್ತ-ಈಶ್ವರ ದೇವಾಲಯದ 2ನೇ ವಾರ್ಷಿಕೋತ್ಸವ ಹಾಗೂ ವಿಷ್ಣುಮೂರ್ತಿ ಕೋಲ ಫೆ.17 ರಿಂದ ಆರಂಭಗೊಳ್ಳಲಿದೆ. ಬೆಳಿಗ್ಗೆ 9 ಗಂಟೆಗೆ ಗಣಹೋಮ, ಸಹಸ್ರ ನಾಮ ಅರ್ಚನೆ, ಶ್ರೀ ಬೇಟೆ ಅಯ್ಯಪ್ಪ ಹಾಗೂ ಶ್ರೀ ವಿಷ್ಣುಮೂರ್ತಿ ದೈವ ಸನ್ನಿಧಿ ಅಭಿಷೇಕ ಪೂಜೆ, ಮಂಗಳಾರತಿ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ. ಸಂಜೆ 6 ಗಂಟೆಗೆ ದೇವರ ವಿವಿಧ ನೃತ್ಯ ಬಲಿ, ಸಂಪ್ರೋಕ್ಷಣೆ ಅನ್ನದಾನ ನಂತರ ಶ್ರೀ ವಿಷ್ಣುಮೂರ್ತಿ ದೈವದ ತೆರೆ ನಡೆಯಲಿದೆ. ಫೆ.18 ರಂದು ವಾರ್ಷಿಕೋತ್ಸವ ಹಾಗೂ ತೆರೆ ಸಂಪನ್ನಗೊಳ್ಳಲಿದೆ ಎಂದು ಕೂಡಂಡ ರಾಜೇಂದ್ರ ಅಯ್ಯಮ್ಮ ತಿಳಿಸಿದ್ದಾರೆ.
ಮಡಿಕೇರಿ ಫೆ.16 : ಕಂದಾಯ ಇಲಾಖೆಯಲ್ಲಿರುವ ಮೂಲ ಸಮಸ್ಯೆಗಳನ್ನು ಬಗೆಹರಿಸಬೇಕಾದ ಕಂದಾಯ ಸಚಿವರು ವಿನಾಕಾರಣ ಕೊಡಗಿನ ಜಮ್ಮಾ ಜಾಗದ ವಿಚಾರದಲ್ಲಿ ಹೊಸ ಸಮಸ್ಯೆಯನ್ನು ಸೃಷ್ಟಿಸಲು ಮುಂದಾಗಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ ಆರೋಪಿಸಿದ್ದಾರೆ. ಪತ್ರಿಕಾ ಪ್ರಕರಣ ನೀಡಿರುವ ಅವರು ಇತ್ತೀಚೆಗೆ ರಾಜ್ಯ ಕಂದಾಯ ಸಚಿವರು ಜಮ್ಮಾ ಜಾಗವನ್ನು ಗುತ್ತಿಗೆ ಆಧಾರದಲ್ಲಿ ನೀಡುವುದಾಗಿ ಹೇಳುವ ಮೂಲಕ ಕೊಡಗಿನ ಬೆಳೆಗಾರರಲ್ಲಿ ಆತಂಕ ಮತ್ತು ಗೊಂದಲವನ್ನು ಮೂಡಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಕಂದಾಯ ಇಲಾಖೆಯನ್ನು ಕಾಡುತ್ತಿರುವ ಸಮಸ್ಯೆಗಳನ್ನು ಬಗೆಹರಿಸದೆ ಇದೀಗ ಜಮ್ಮಾ ವಿಚಾರದಲ್ಲಿ ಮತ್ತೊಂದು ಸಮಸ್ಯೆಯನ್ನು ಸೃಷ್ಟಿಸಲು ಮುಂದಾಗಿರುವುದು ಖಂಡನೀಯವೆಂದು ತಿಳಿಸಿದ್ದಾರೆ. ಜಿಲ್ಲೆಯ ರೈತರು ಕೃಷಿ ಚಟುವಟಿಕೆ ಬಿಟ್ಟು ಸರ್ವೇ, ಪಹಣಿ, ತಿದ್ದುಪಡಿ ಇತ್ಯಾದಿಗಾಗಿ ದಿನವಿಡೀ ನಾಡ ಕಚೇರಿ ಮತ್ತು ತಾಲ್ಲೂಕು ಕಚೇರಿಗೆ ಅಲೆಯುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಪೌತಿಖಾತೆಗೆ ಆದೇಶ ಬಂದಿದ್ದರು ಇನ್ನೂ ಬಹಳ ಕಡೆ ಅನುಷ್ಠಾನಗೊಂಡಿಲ್ಲ. ಜನ ದಿನವಿಡೀ ಕಚೇರಿಗೆ ಹೋಗಿ ಬರುವುದನ್ನೇ ಮಾಡುತ್ತಿದ್ದು, ದುಡಿಮೆ ಮಾಡುವುದೇ ಕಷ್ಟವಾಗಿದೆ.…
ಮಡಿಕೇರಿ ಫೆ.16 : ಇತ್ತೀಚಿನ ವರ್ಷಗಳಲ್ಲಿ ಕೊಡಗು ಜಿಲ್ಲೆಯಲ್ಲಿ ವನ್ಯಜೀವಿಗಳ ಉಪಟಳ ಮಿತಿ ಮೀರಿದ್ದು, ಮಾನವ ಜೀವಹಾನಿ ನಿರಂತರವಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಖ್ಯಮಂತ್ರಿಗಳು ಕೊಡಗಿನಲ್ಲಿ ವಿಶೇಷ ಸಭೆ ನಡೆಸಬೇಕು ಎಂದು ಆಮ್ ಆದ್ಮಿ ಪಾರ್ಟಿಯ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ ಬ್ರಿಜೇಶ್ ಕಾಳಪ್ಪ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಇತ್ತೀಚೆಗೆ ಇಬ್ಬರು ಅಮಾಯಕರು ಹುಲಿ ದಾಳಿಗೆ ಬಲಿಯಾಗಿದ್ದಾರೆ. ಕಳೆದ 3- 4 ವರ್ಷಗಳಿಂದ ಕೊಡಗಿನಲ್ಲಿ ವನ್ಯಜೀವಿಗಳ ದಾಳಿ ಮಿತಿ ಮೀರಿದ್ದರೂ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸದೆ ಅಸಡ್ಡೆ ತೋರಿದ ಪರಿಣಾಮ ಜನ ನಿತ್ಯ ಬವಣೆ ಅನುಭವಿಸುವಂತ್ತಾಗಿದೆ ಎಂದು ಆರೋಪಿಸಿದ್ದಾರೆ. ಇಲ್ಲಿಯವರೆಗೆ ಯಾವುದೇ ಅರಣ್ಯ ಸಚಿವರು ಗಂಭೀರ ಸಮಸ್ಯೆಯಾಗಿರುವ ವನ್ಯಜೀವಿಗಳ ದಾಳಿ ಕುರಿತು ಕೊಡಗಿನಲ್ಲಿ ವಿಶೇಷ ಸಭೆ ನಡೆಸಿಲ್ಲ. ಜಿಲ್ಲೆಯ ಕೃಷಿಕ ವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇಲ್ಲಿನ ಸಮಸ್ಯೆಗಳ ಬಗ್ಗೆ ಗಂಭೀರ ಚಿಂತನೆಯನ್ನು ಮಾಡಿಲ್ಲ್ಲ. ವನ್ಯಜೀವಿ ಉಪಟಳ ತಡೆಗೆ ಶಾಶ್ವತ…






