ನಾಪೋಕ್ಲು ಮಾ.2 : ಖಾಸಗಿ ಬಸ್ ವೊಂದು ಪಲ್ಟಿಯಾದ ಪರಿಣಾಮ ಓರ್ವ ಮಹಿಳೆ ಮೃತಪಟ್ಟಿರುವ ಘಟನೆ ನಾಪೋಕ್ಲು- ಕೊಳಕೇರಿ ಮುಖ್ಯ ರಸ್ತೆಯಲ್ಲಿ ನಡೆದಿದೆ. ಕಕ್ಕಬ್ಬೆ ನಿವಾಸಿ ಸರಸ್ವತಿ (65) ಎಂಬುವವರು ಮೃತ ದುರ್ದೈವಿ. ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಇವರನ್ನು ದಾಖಲಿಸಲಾಯಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕೊಳಕೇರಿ- ನಾಪೋಕ್ಲು ಮಾರ್ಗವಾಗಿ ಮಡಿಕೇರಿಗೆ ತೆರಳುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಮುಖ್ಯ ರಸ್ತೆಯ ಕೋಟೇರಿ ಎಂಬಲ್ಲಿ ಪಲ್ಟಿಯಾಗಿದೆ. ಬಸ್ ನಲ್ಲಿದ್ದ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಗಾಯಗೊಂಡಿದ್ದು, ನಾಪೋಕ್ಲು ಮತ್ತು ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಭೇಟಿ ನೀಡಿದರು. (ವರದಿ : ದುಗ್ಗಳ ಸದಾನಂದ)
ಲೇಖಕ: admin
ಮಡಿಕೇರಿ ಮಾ.2 : ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಹರಿಹರ ಗ್ರಾಮದಲ್ಲಿ ನಡೆದಿದೆ. ಸಂತು ಸುಬ್ಬಯ್ಯ (39) ಸಾವಿಗೀಡಾದ ವ್ಯಕ್ತಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಳಪ್ಪ ಹಾಗೂ ಸಂಪತ್ ಎಂಬಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಸ್ಥಳಕ್ಕೆ ಶ್ರೀಮಂಗಲ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಡಿಕೇರಿ ಮಾ.2 : ಸ್ವಾಥ೯ ಮೀರಿದ ಸೇವಾ ಗುಣಗಳಿಗೆ ರೋಟರಿ ವಿಶ್ವದಲ್ಲಿಯೇ ಮಾದರಿಯಾಗಿದ್ದು, ಹೀಗಾಗಿಯೇ ವಿಶ್ವವ್ಯಾಪಿ 12 ಲಕ್ಷ ಸದಸ್ಯರು ರೋಟರಿ ಸಂಸ್ಥೆಯಲ್ಲಿನ ವಿವಿಧ ಸಾಮಾಜಿಕ ಸೇವಾ ಕಾಯ೯ಗಳಲ್ಲಿ ಸಕ್ರಿಯವಾಗಿ ನಿರತರಾಗಿದ್ದಾರೆ ಎಂದು ರೋಟರಿ ಜಿಲ್ಲೆ 3181 ರ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಹೇಳಿದ್ದಾರೆ. ನಗರದ ರೋಟರಿ ಸಭಾಂಗಣದಲ್ಲಿ ಮಡಿಕೇರಿ ರೋಟರಿ ವುಡ್ಸ್ ವತಿಯಿಂದ ರೋಟರಿ ಸಂಸ್ಥೆಯ 118 ನೇ ವಾಷಿ೯ಕೋತ್ಸವ ಸಂದಭ೯ ಮಾತನಾಡಿದ ಅನಿಲ್, 1905 ರ ಫೆಬ್ರವರಿ 23 ರಂದು ಚಿಕಾಗೋದ ಪುಟ್ಟ ಕೋಣೆಯಲ್ಲಿ ಪೌಲ್ ಹಾರಿಸ್ ಮತ್ತು ವಿವಿಧ ವೖತ್ತಿಯಲ್ಲಿನ ಅವರ 4 ಸ್ನೇಹಿತರಿಂದ ಪ್ರಾರಂಭಗೊಂಡ ರೋಟರಿ ಸಂಸ್ಥೆಯು ಇದೀಗ ಜಗತ್ತಿನ ಅತೀ ದೊಡ್ಡ ಸಾಮಾಜಿಕ ಸೇವಾ ಸಂಸ್ಥೆಯಾಗಿ ಬೆಳೆದಿದೆ. ಆರೋಗ್ಯ, ಶಿಕ್ಷಣ, ಪರಿಸರ ಸಂರಕ್ಷಣೆ ಮುಂತಾದ ಕಾಯ೯ಯೋಜನೆಗಳಲ್ಲಿ ರೋಟರಿ ಕೆಲಸ ಗಮನಾಹ೯ವಾದದ್ದು ಎಂದರು. 225 ದೇಶಗಳ 36 ಸಾವಿರ ರೋಟರಿ ಸಂಸ್ಥೆಗಳಲ್ಲಿ ಪ್ರತೀ ವಾರವೂ ಒಂದಲ್ಲ ಒಂದು ಸಾಮಾಜಿಕ ಸೇವಾ ಕಾಯ೯ಯೋಜನೆ…
ನಾಪೋಕ್ಲು ಮಾ.2 : ಖಾಸಗಿ ಬಸ್ ವೊಂದು ಪಲ್ಟಿಯಾದ ಪರಿಣಾಮ ಓರ್ವ ಮಹಿಳೆ ಮೃತಪಟ್ಟಿರುವ ಘಟನೆ ನಾಪೋಕ್ಲು- ಕೊಳಕೇರಿ ಮುಖ್ಯ ರಸ್ತೆಯಲ್ಲಿ ನಡೆದಿದೆ. ಕಕ್ಕಬ್ಬೆ ನಿವಾಸಿ ಸರಸ್ವತಿ (65) ಎಂಬುವವರು ಮೃತ ದುರ್ದೈವಿ. ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಇವರನ್ನು ದಾಖಲಿಸಲಾಯಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕೊಳಕೇರಿ- ನಾಪೋಕ್ಲು ಮಾರ್ಗವಾಗಿ ಮಡಿಕೇರಿಗೆ ತೆರಳುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಮುಖ್ಯ ರಸ್ತೆಯ ಕೋಟೇರಿ ಎಂಬಲ್ಲಿ ಪಲ್ಟಿಯಾಗಿದೆ. ಬಸ್ ನಲ್ಲಿದ್ದ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಗಾಯಗೊಂಡಿದ್ದು, ನಾಪೋಕ್ಲು ಮತ್ತು ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಭೇಟಿ ನೀಡಿದರು. (ವರದಿ : ದುಗ್ಗಳ ಸದಾನಂದ)
ಮಡಿಕೇರಿ ಮಾ.2 : ಕೃಷಿ ಇಲಾಖೆ ವತಿಯಿಂದ ಸರಕಾರದ ಸಹಾಯಧನದಲ್ಲಿ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕಿನ 14 ರೈತ ಫಲಾನುಭವಿಗಳಿಗೆ ಪವರ್ ಟಿಲ್ಲರ್ ಮಂಜೂರು ಮಾಡಲಾಗಿದ್ದು, ವಿರಾಜಪೇಟೆ ತಾಲ್ಲೂಕು ಕೃಷಿ ಇಲಾಖೆ ಆವರಣದಲ್ಲಿ ಶಾಸಕ ಕೆ.ಜಿ.ಬೋಪಯ್ಯ ಸಾಂಕೇತಿಕವಾಗಿ 4 ರೈತ ಫಲಾನುಭವಿಗಳಿಗೆ ಪವರ್ ಟಿಲ್ಲರ್ ನ್ನು ವಿತರಿಸಲಾಯಿತು.
ಮಡಿಕೇರಿ ಮಾ.2 : ((ಬರಹ : ಬೊಳ್ಳಜಿರ ಬಿ.ಅಯ್ಯಪ್ಪ)) ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಹಾಗೂ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ತರಬೇತಿ ಆಯುಕ್ತರಾದ ಹೆಚ್.ಮೈಥಿಲಿ ರಾವ್ ಅವರು ನಿಸ್ವಾರ್ಥ ಸೇವೆಯ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಹಲವು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. 1973 ಜೂನ್ 12 ರಂದು ಜನಿಸಿದ ಹೆಚ್.ಮೈಥಿಲಿ ರಾವ್ ಅವರು ಹರೀಶ್ ರಾವ್.ಎಸ್ ಅವರನ್ನು ವಿವಾಹವಾಗಿದ್ದು, ಇಬ್ಬರು ಪುತ್ರಿಯರಿದ್ದಾರೆ. ಒಬ್ಬರು ಕ್ಯಾಪ್ಟನ್ ಶರಣ್ಯ ರಾವ್ ಹೆಚ್. ಭಾರತೀಯ ಸೇನೆಯಲ್ಲಿದ್ದು, ಮತೋರ್ವರು ಹೆಚ್.ಪಲ್ಲವಿ ರಾವ್ ದುಬೈನ ಜಿ.ಆರ್.ಇ ತಾಜ್‍ಪಾಮ್ ಜುಮೇರ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಹೇಶ್ ಚಂದ್ರ ಕೊಡ್ಕಣಿ ಹಾಗೂ ಮಮತಾ ಎಂ.ಕೊಡ್ಕಣಿ ಅವರ ಪುತ್ರಿ ಹೆಚ್.ಮೈಥಿಲಿ ರಾವ್ ದಾಂಡೇಲಿಯ ಸೇಂಟ್ ಮೈಕಲ್ ಸ್ಕೂಲ್ ನಲ್ಲಿ 1 ಮತ್ತು 2ನೇ ತರಗತಿ, 3ನೇ ತರಗತಿಯಿಂದ 10ನೇ ತರಗತಿಯವರೆಗೆ ದಾಮೋದರ್ ವಿದ್ಯಾಲಯ ಮಾರ್ಗೋವಾ ಗೋವಾದಲ್ಲಿ ಶಿಕ್ಷಣ ಪಡೆದರು. 1991ರಲ್ಲಿ ದಾಂಡೇಲಿ ಬಂಗೂರ್…
ಸೋಮವಾರಪೇಟೆ ಮಾ.1 : ಒಕ್ಕಲಿಗರ ಯುವವೇದಿಕೆ ಸೋಮವಾರಪೇಟೆ, ರಾಜ್ಯ ಮತ್ತು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅವರುಗಳ ಸಂಯುಕ್ತ ಆಶ್ರಯದಲ್ಲಿ 4ನೇ ವರ್ಷದ ‘ಒಕ್ಕಲಿಗರ ಕಪ್’ ಅಂತರ ರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾವಳಿ ಮಾ.4 ಮತ್ತು 5ರಂದು ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಯುವ ವೇದಿಕೆ ಅಧ್ಯಕ್ಷ ಚಕ್ರವರ್ತಿ ಸುರೇಶ್ ಹೇಳಿದರು. ಪಂದ್ಯಾಟದಲ್ಲಿ ರಾಷ್ಟçಮಟ್ಟದ ಪ್ರತಿಷ್ಠಿತ ತಂಡಗಳಾದ ಮಹರಾಷ್ಟ, ರ‍್ಯಾಣ, ಯುವ ಪಲ್ಟಾನ್ ಪುಣೆ, ಸೌತ್‌ಸೆಂಟ್ರಲ್ ರೈಲ್ವೆ ಹೈದರಾಬಾದ್, ತಮಿಳುನಾಡು, ಜೆ.ಕೆ.ಅಕಾಡೆಮಿ ಕೇರಳ, ಏರ್ ಇಂಡಿಯಾ, ಬ್ಯಾಂಕ್ ಆಫ್ ಬರೋಡ, ಕರ್ನಾಟಕ ಪೊಲೀಸ್, ಕಸ್ಟಮ್ಸ್ ಮತ್ತು ಜಿಎಸ್‌ಟಿ ತಂಡ, ಕರ್ನಾಟಕ ತಂಡ, ಚೈನ್ಸ್ ಪ್ರತಿಷ್ಠಿತ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು ಕಬಡ್ಡಿ ಪ್ರೇಮಿಗಳಿಗೆ ರಸದೌತಣ ನೀಡಲಿವೆ ಎಂದು ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಪ್ರೊ ಕಬಡ್ಡಿಯಲ್ಲಿ ಖ್ಯಾತಿ ಗಳಿಸಿರುವ ಆಟಗಾರರಾದ ಸಿದ್ದಾರ್ಥ್ ದೇಸಾಯಿ, ಅಜಯ್ ಠಾಕೂರ್, ಸುಕೇಶ್‌ಹೆಗಡೆ, ಪ್ರಶಾಂತ್ ರೈ, ಆಕಾಶ್‌ಶಿಂದೆ, ಪ್ರಪಂಚನ್, ಅಸ್ಲಾಂ…
ಸೋಮವಾರಪೇಟೆ ಮಾ.1 : 7ನೇ ವೇತನ ಆಯೋಗ ವರದಿ ಜಾರಿ ಸೇರಿ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸುವವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ಕರೆ ನೀಡಿದ್ದ ಮುಷ್ಕರಕ್ಕೆ ಸೋಮವಾರಪೇಟೆ ಸರ್ಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸರ್ಕಾರಿ ನೌಕರರ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಕರ್ತವ್ಯಕ್ಕೆ ಹಾಜರಾಗದ ಹಿನ್ನಲೆಯಲ್ಲಿ ಆಡಳಿತ ಸೌಧ ಕಚೇರಿಗೆ ಬೀಗ ಹಾಕಲಾಗಿತ್ತು. ತಹಸೀಲ್ದಾರ್ ಹೊರತುಪಡಿಸಿ, ನೌಕಕರರು ಇಲ್ಲದೆ ಬಿಕೋ ಎನ್ನುತ್ತಿತ್ತು. ಇತರ ಕಚೇರಿಗಳಲ್ಲೂ ಕೆಲಸಗಳು ನಡೆಯಲಿಲ್ಲ.
ಮಡಿಕೇರಿ ಮಾ.1 : ಹುಲಿಯೊಂದು ಕಾಫಿ ತೋಟದಲ್ಲಿ ಕಾಡುಕೋಣವನ್ನು ಬೇಟೆಯಾಡಿರುವ ಘಟನೆ ಪಾಲಿಬೆಟ್ಟ ಗ್ರಾಮ ವ್ಯಾಪ್ತಿಯಲ್ಲಿ ನಡೆದಿದೆ. ಕಾರ್ಮಿಕರು ಕೆಲಸಕ್ಕೆಂದು ತೋಟಕ್ಕೆ ಆಗಮಿಸಿದ ಸಂದರ್ಭ ಕಾಡುಕೋಣ ಮೃತಪಟ್ಟಿರುವುದು ಕಂಡು ಬಂದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಹುಲಿದಾಳಿಯ ಕುರಿತು ಸಂಶಯ ವ್ಯಕ್ತಪಡಿಸಿದರು. ಮಂಗಳವಾರ ತಡರಾತ್ರಿ ಕಾಡುಕೋಣದ ಮೇಲೆ ಹುಲಿದಾಳಿ ಮಾಡಿರಬಹುದೆಂದು ಅಂದಾಜಿಸಲಾಗಿದೆ. ಈ ಭಾಗದಲ್ಲಿ ಕಳೆದ ಹಲವು ದಿನಗಳಿಂದ ಹುಲಿ ಸಂಚರಿಸುತ್ತಿದೆ ಎಂದು ಸ್ಥಳೀಯ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ ಮಾ.1 : ಮಾಕುಟ್ಟ ಬ್ರಹ್ಮಗಿರಿ ವನ್ಯಜೀವಿ ಅರಣ್ಯ ವ್ಯಾಪ್ತಿಯಲ್ಲಿ ಗಾಯಗೊಂಡು ಗೀಳಿಡುತ್ತಿದ್ದ ಕಾಡಾನೆಗೆ ಅರಣ್ಯ ಇಲಾಖೆ ಚಿಕಿತ್ಸೆ ನೀಡಿದೆ. ಚೇತರಿಸಿಕೊಂಡಿರುವ ಕಾಡಾನೆ ಇದೀಗ ಮತ್ತೆ ಕಾಡು ಸೇರಿಕೊಂಡಿದೆ. ಒAಟಿ ಸಲಗ ಗೀಳಿಡುತ್ತಿದ್ದ ಪ್ರದೇಶಕ್ಕೆ ಭೇಟಿ ನೀಡಿದ ಅರಣ್ಯ ಅಧಿಕಾರಿಗಳ ತಂಡ ಡಿಎಫ್‌ಒ ಎ.ಟಿ.ಪೂವಯ್ಯ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದರು. ವನ್ಯಜೀವಿ ವೈದ್ಯರಾದ ಡಾ.ಚಿಟ್ಟಿಯಪ್ಪ, ಡಾ.ಪ್ರಶಾಂತ್, ಶಾರ್ಪ್ ಶೂಟರ್ ರಂಜನ್ ಹಾಗೂ ಮಾಕುಟ್ಟ ವಲಯದ ಅರಣ್ಯ ಸಿಬ್ಬಂದಿಗಳು ಮತ್ತಿಗೋಡಿನಿಂದ ಸಾಕಾನೆಗಳ ನೆರವು ಪಡೆದು ಗಾಯಾಳು ಸಲಗಕ್ಕೆ ಸೂಕ್ತ ಚಿಕಿತ್ಸೆ ನೀಡಿದರು. ಚಿಕಿತ್ಸೆಯ ನಂತರ ಚೇತರಿಸಿಕೊಂಡ ಕಾಡಾನೆ ಕಾಡಿಗೆ ಮರಳಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.






