ಮಡಿಕೇರಿ NEWS DESK ಸೆ.18 : ತುಳು ಭಾಷೆಯ ಸರ್ವತೋಮುಖ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಆಡಳಿತದಲ್ಲಿ ಕನ್ನಡ ಭಾಷೆಯ ಜೊತೆಗೆ ತುಳು ಭಾಷೆಯನ್ನು ಬಳಸಲು ಕರ್ನಾಟಕದ ಎರಡನೇ ಹೆಚ್ಚುವರಿ ಭಾಷೆಯಾಗಿ ಘೋಷಿಸುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿರುವುದು ಸ್ವಾಗತಾರ್ಹವೆಂದು ವಿಶ್ವ ತುಳುವ ಮಹಾಸಭಾದ ಕೊಡಗು ಜಿಲ್ಲಾ ಘಟಕ ಹರ್ಷ ವ್ಯಕ್ತಪಡಿಸಿದೆ. ಮಂಗಳೂರಿನಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯ ಸಂದರ್ಭ ಭೇಟಿ ನೀಡಿದ್ದ ತುಳುವ ಮಹಾಸಭಾದ ಕೊಡಗು ನಿಯೋಗ ಸರಕಾರದ ನಿರ್ಧಾರವನ್ನು ಸ್ವಾಗತಿಸಿತು. ತುಳು ಎರಡು ಸಾವಿರ ವರ್ಷಗಳಿಗೂ ಹಳೆಯದಾದ ಭಾಷೆಯಾಗಿದ್ದು, ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿದೆ. ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ತುಳು ಭಾಷೆ ಮಹತ್ವದ ಬೆಳವಣಿಗೆಯನ್ನು ಹೊಂದಿದೆ. ತುಳು ಭಾಷೆಯ ಅಭಿವೃದ್ಧಿಗಾಗಿ ಇದನ್ನು ಕರ್ನಾಟಕದ ಎರಡನೇ ಹೆಚ್ಚುವರಿ ಭಾಷೆಯಾಗಿ ಘೋಷಿಸಬೇಕೆಂದು ವಿಶ್ವ ತುಳುವ ಮಹಾಸಭಾ ಸರಕಾರಕ್ಕೆ ಕಳೆದ ಅನೇಕ ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದಿದೆ. ಈ ಕುರಿತು ತಜ್ಞರು ಹಾಗೂ ಅಧಿಕಾರಿಗಳಿಂದ ವರದಿ ಪಡೆದ…
ಲೇಖಕ: admin
ಮಡಿಕೇರಿ NEWS DESK ಸೆ.18 : ತುಳು ಭಾಷೆಯ ಸರ್ವತೋಮುಖ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಆಡಳಿತದಲ್ಲಿ ಕನ್ನಡ ಭಾಷೆಯ ಜೊತೆಗೆ ತುಳು ಭಾಷೆಯನ್ನು ಬಳಸಲು ಕರ್ನಾಟಕದ ಎರಡನೇ ಹೆಚ್ಚುವರಿ ಭಾಷೆಯಾಗಿ ಘೋಷಿಸುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿರುವುದು ಸ್ವಾಗತಾರ್ಹವೆಂದು ವಿಶ್ವ ತುಳುವ ಮಹಾಸಭಾದ ಕೊಡಗು ಜಿಲ್ಲಾ ಘಟಕ ಹರ್ಷ ವ್ಯಕ್ತಪಡಿಸಿದೆ. ಮಂಗಳೂರಿನಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯ ಸಂದರ್ಭ ಭೇಟಿ ನೀಡಿದ್ದ ತುಳುವ ಮಹಾಸಭಾದ ಕೊಡಗು ನಿಯೋಗ ಸರಕಾರದ ನಿರ್ಧಾರವನ್ನು ಸ್ವಾಗತಿಸಿತು. ತುಳು ಎರಡು ಸಾವಿರ ವರ್ಷಗಳಿಗೂ ಹಳೆಯದಾದ ಭಾಷೆಯಾಗಿದ್ದು, ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿದೆ. ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ತುಳು ಭಾಷೆ ಮಹತ್ವದ ಬೆಳವಣಿಗೆಯನ್ನು ಹೊಂದಿದೆ. ತುಳು ಭಾಷೆಯ ಅಭಿವೃದ್ಧಿಗಾಗಿ ಇದನ್ನು ಕರ್ನಾಟಕದ ಎರಡನೇ ಹೆಚ್ಚುವರಿ ಭಾಷೆಯಾಗಿ ಘೋಷಿಸಬೇಕೆಂದು ವಿಶ್ವ ತುಳುವ ಮಹಾಸಭಾ ಸರಕಾರಕ್ಕೆ ಕಳೆದ ಅನೇಕ ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದಿದೆ. ಈ ಕುರಿತು ತಜ್ಞರು ಹಾಗೂ ಅಧಿಕಾರಿಗಳಿಂದ ವರದಿ ಪಡೆದ…
ಮೈಸೂರು NEWS DESK ಸೆ.18 : ಮೈಸೂರಿನಲ್ಲಿ ನೂತನವಾಗಿ ಆರಂಭಗೊಂಡ ಬೇಕಲ್ ಆಯುರ್ವೇದ ಪಂಚಕರ್ಮ ಮತ್ತು ಬಾಣಂತಿ ಆರೈಕೆ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಅವರು ಭಾಗವಹಿಸಿ ನೂತನ ಕೇಂದ್ರಕ್ಕೆ ಶುಭ ಹಾರೈಸಿದರು. ಮೈಸೂರಿನ ವಿಜಯನಗರ 2ನೇ ಹಂತದಲ್ಲಿ ಈ ಆರೋಗ್ಯ ಕೇಂದ್ರವು ಆರಂಭಗೊಂಡಿದ್ದು, ಕೆಪಿಸಿಸಿ ಸದಸ್ಯರು ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಬೇಕಲ್ ರಮನಾಥ್ ಅವರ ಪುತ್ರ ಡಾ. ಅಮರನಾಥ್ ಬೇಕಲ್ ಹಾಗೂ ಅವರ ಪತ್ನಿ ಡಾ. ಮೆರ್ಲಿನ್ ಅವರ ಒಡೆತನದಲ್ಲಿ ಈ ಕೇಂದ್ರ ಕಾರ್ಯನಿರ್ವಹಿಸಲಿದೆ. ಕೇಂದ್ರದಲ್ಲಿ ಸಂಪೂರ್ಣ ಆಯುರ್ವೇದ ಚಿಕಿತ್ಸಾ ಪದ್ಧತಿಯೊಂದಿಗೆ ಪಂಚಕರ್ಮ ಚಿಕಿತ್ಸೆಗಳು ಹಾಗೂ ವಿಶೇಷ ಬಾಣಂತಿ ಆರೈಕೆ ಸೇವೆಗಳು ಲಭ್ಯವಿರಲಿವೆ ಎಂದು ಕೇಂದ್ರದ ಮಾಲೀಕರು ಈ ಸಂದರ್ಭ ತಿಳಿಸಿದರು. ನೂತನ ಆರೋಗ್ಯ ಕೇಂದ್ರದ ಉದ್ಘಾಟನೆಗೆ ಶುಭ ಕೋರಿದ ಶಾಸಕರು,…
ಮಡಿಕೇರಿ NEWS DESK ಸೆ.18 : ಹೊರ ಜಿಲ್ಲೆಗಳ ಕೆಲವು ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳ ಮೂಲಕ “ವಾರಾಂತ್ಯದ ಪಾರ್ಟಿ” ಆಯೋಜಿಸುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವುದು ಕಂಡುಬಂದಿದ್ದು, ಇಂತಹ ಆಮಿಷಗಳಿಗೆ ಒಳಗಾಗದಂತೆ ಕೊಡಗು ಜಿಲ್ಲಾ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. “ದಿ ಕೂರ್ಗ್ ರೇವ್” ಸೇರಿದಂತೆ ಸೆಪ್ಟೆಂಬರ್ 25ರಿಂದ 27ರವರೆಗೆ ಕೊಡಗಿನಲ್ಲಿ ಮೂರು ದಿನಗಳ ಫಾರೆಸ್ಟ್ ರೇವ್, ಅರಣ್ಯ ಪ್ರದೇಶದಲ್ಲಿ ಕ್ಯಾಂಪಿಂಗ್ ಮತ್ತಿತರ ಚಟುವಟಿಕೆಗಳನ್ನು ಆಯೋಜಿಸುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿರುವುದು ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದೆ. ಇಂತಹ ಪಾರ್ಟಿಗಳ ಹೆಸರಿನಲ್ಲಿ ಹಣ ವಸೂಲಿ ಮಾಡುವ ವಂಚನೆ ಹಾಗೂ ಮಾದಕ ದ್ರವ್ಯಗಳ ಬಳಕೆಗೆ ಸಂಬಂಧಿಸಿದ ಜಾಲ ಇರಬಹುದಾದ ಹಿನ್ನೆಲೆಯಲ್ಲಿ ಸಾರ್ವಜನಿಕರು ತೀವ್ರ ಎಚ್ಚರಿಕೆ ವಹಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಅಪರಿಚಿತ ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ನೀಡುವ ಆಕರ್ಷಕ ಆಮಿಷಗಳಿಗೆ ಒಳಗಾಗಬಾರದು. ಮಾದಕ ದ್ರವ್ಯಗಳ ಬಳಕೆಗೆ ಸಂಬಂಧಿಸಿದ ಯಾವುದೇ ಜಾಲದಿಂದ ದೂರವಿರಬೇಕು. ಇಂತಹ ಅನುಮಾನಾಸ್ಪದ ಪಾರ್ಟಿ ಅಥವಾ ಕಾರ್ಯಕ್ರಮಗಳ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು ಎಂದು ಕೊಡಗು…
ಆತ ಜಗ್ಗಬಾರದು…. ಕುಗ್ಗಬಾರದು ಎಂದಾದರೆ…. ತಡಮಾಡದೆ ಜಗ್ಗನ ನೆರವಿಗೆ ಮುಂದಾಗಿ… ಪ್ಲೀಸ್ ನಮ್ ಜಗ್ಗನಿಗೆ ಹುಷಾರಿಲ್ಲವಂತೆ ಎಂಬ ಸುದ್ದಿ ಬರಸಿಡಿಲಿನಂತೆ ಬಡಿದಾಗ.. ನಂಬಲೇ ಆಗಲಿಲ್ಲ.. ಛೇ.. ಏನಾಯಿತು ಎಂದು ವಿವರ ಕೇಳಿದಾಗ.. ಮನ ಮುದುಡಿಹೋಗಿತ್ತು. ಆದ್ರೂ ಎಲ್ಲೋ ಒಂದು.. ಸಮಾಧಾನ.. ಎಂಥಹದ್ದೇ ಸಂಕಷ್ಟ ಎದುರಾಗಲಿ.. ಆ ಕಲ್ಲು ಬಂಡೆಯಂತೆ, ಅವನ್ನೆಲ್ಲಾ ಎದುರಿಸುವ ಶಕ್ತಿ ಜಗ್ಗನಿಗೆ ಸಿದ್ದಿಸಿದೆ. ಎಂತೆಂಥ ಛಾಲೆಂಜ್ ಗಳು, ಜೀವನದ ಕಷ್ಟಗಳನ್ನು ಕಳೆದ 30 ವಷ೯ಗಳಲ್ಲಿ ನೋಡಿರುವ ಜಗ್ಗ ಈಗ ತನಗೊದಗಿರುವ ಈ ಆರೋಗ್ಯದ ಮಹಾ ಛಾಲೆಂಜ್ ನ್ನು ಕೂಡ ಗೆಲ್ಲಬಲ್ಲ.. ಆ ಆತ್ಮಸ್ಥೆಯ೯ ಜಗ್ಗನಲ್ಲಿದೆ. ಇದು ಜಗ್ಗನನ್ನು ಗೊತ್ತಿರುವ ಪ್ರತೀಯೋವ೯ ಗೆಳೆಯನಿಗೂ ತಿಳಿದಿರುವ ಸತ್ಯ. ಜಗ್ಗ ಒಂಥರಾ ಜಗ್ಗು ದಾದಾನಂತೆ.. ಸುಲಭವಾಗಿ ಮಣಿಯಲಾರ.. ಮಣಿಸಲಾಗದಂಥ ಆತ್ಮ ವಿಶ್ವಾಸ ನಮ್ಮ ಜಗ್ಗನಲ್ಲಿದೆ.. …………..… ಜಗ್ಗ… ಎಂದೇ ಪತ್ರಿಕಾವಲಯದಲ್ಲಿ ಚಿರಪರಿಚಿತನಾಗಿರುವ ಜಗದೀಶ್ ಬೆಳ್ಯಪ್ಪ, ವೖತ್ತಿಯನ್ನು ಪ್ರಾರಂಭ ಮಾಡಿದ್ದೇ ಕೊಡಗಿನ ಪತ್ರಕತ೯ರ ಗರಡಿ ಮನೆ ಶಕ್ತಿ ಪತ್ರಿಕೆಯಿಂದ .. ಶಕ್ತಿಯಲ್ಲಿ ಅದಾಗಷ್ಟೇ, ಎಂ.ಎನ್. ಮಂಜುನಾಥ್, ಎಂ.ಇ. ಮಹಮ್ಮದ್ ಮತ್ತು ಚಿ. ನಾ.…
ವಿರಾಜಪೇಟೆ ಸೆ.17 NEWS DESK : ನಗರದ ನಾಟ್ಯಾಂಜಲಿ ನೃತ್ಯ ಸಂಸ್ಥೆಯಲ್ಲಿ ಭರತನಾಟ್ಯ ವಿದ್ಯಾರ್ಥಿನಿಯರಿಗೆ ಸಂಪ್ರದಾಯಬದ್ಧವಾಗಿ ಗೆಜ್ಜೆ ಪೂಜಾ ಕಾರ್ಯಕ್ರಮ ನಡೆಯಿತು. ಭರತನಾಟ್ಯ ಗುರುಗಳಾದ ಹೇಮಾವತಿ ಕಾಂತರಾಜ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಟರಾಜನ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಗೆಜ್ಜೆ, ಹೂವು, ಹಣ್ಣು, ತೆಂಗಿನಕಾಯಿ ಹಾಗೂ ಮಂಗಳ ದ್ರವ್ಯಗಳೊಂದಿಗೆ ಪುರೋಹಿತರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಹಳದಿ ಮತ್ತು ಹಸಿರು ಸಮವಸ್ತ್ರದಲ್ಲಿದ್ದ ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪೂಜೆಯಲ್ಲಿ ಭಕ್ತಿಯಿಂದ ಪಾಲ್ಗೊಂಡಿದ್ದರು. ಗುರು ವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮಕ್ಕಳು ಗೆಜ್ಜೆಯನ್ನು ದೇವರಲ್ಲಿ ಸಮರ್ಪಿಸಿ, ತಮ್ಮ ಕಲಾ ಪಯಣ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗುರುಗಳಾದ ಹೇಮಾವತಿ ಅವರು, “ನೃತ್ಯ ಕಲಿಯುವ ಮುನ್ನ ಗೆಜ್ಜೆ ಪೂಜೆ ಮಾಡುವುದು ನಮ್ಮ ಸಂಪ್ರದಾಯ. ಇದು ಕೇವಲ ಒಂದು ಆಚರಣೆಯಲ್ಲ, ಕಲೆಯ ಬಗೆಗಿನ ಗೌರವ ಎಂದು ಹೇಳಿದರು.
ವಿರಾಜಪೇಟೆ ಸೆ.17 NEWS DESK : ಸ್ಥಳೀಯ ಶ್ರೀ ಬಸವೇಶ್ವರ ದೇವಾಲಯದಲ್ಲಿ ಗೌರಿ ಗಣೇಶೋತ್ಸವ ಸಮಿತಿಯ ವತಿಯಿಂದ ಆಯೋಜಿಸಲಾಗಿರುವ ಗೌರಿ ಗಣೇಶೋತ್ಸವವು 11 ದಿನಗಳ ಕಾಲ ವೈಭವ ಹಾಗೂ ಶ್ರದ್ಧಾಭಕ್ತಿಯಿಂದ ನಡೆಯುತ್ತಿದ್ದು, ಸೆಪ್ಟೆಂಬರ್ 20ರಂದು ಬೆಳಿಗ್ಗೆ 11 ಗಂಟೆಯಿಂದ ಎನ್. ವೆಂಕಟೇಶ್ ಕಾಮತ್ ಟ್ರಸ್ಟ್ ಸಹಯೋಗದೊಂದಿಗೆ ‘ವಾಯ್ಸ್ ಆಫ್ ವಿರಾಜಪೇಟೆ–2026’ ಗಾಯನ ಸ್ಪರ್ಧೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರನಾಥ ಕಾಮತ್ ತಿಳಿಸಿದ್ದಾರೆ. ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದ ರೂಪುರೇಷೆ ಕುರಿತ ಸಭೆಯಲ್ಲಿ ಮಾತನಾಡಿದ ಅವರು, 250ಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಸಾರ್ವಜನಿಕರು ಹಾಗೂ ಭಕ್ತಾದಿಗಳ ಸಹಯೋಗದೊಂದಿಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಈಗಾಗಲೇ ಮುತ್ತೈದೆಯರಿಂದ ವಿಶೇಷ ಗೌರಿ ಪೂಜೆ ಹಾಗೂ ಗೌರಮ್ಮನ ಪಲ್ಲಕ್ಕಿ ಉತ್ಸವ ನೆರವೇರಿದೆ ಎಂದು ತಿಳಿಸಿದರು. ಸೆ.18 ಮತ್ತು 19ರಂದು ವಿವಿಧ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು…
ವಿರಾಜಪೇಟೆ ಸೆ.17 NEWS DESK : ಐತಿಹಾಸಿಕ ಗಣೇಶೋತ್ಸವದ ಅಂಗವಾಗಿ ಪಂಜರಪೇಟೆಯ 32ನೇ ವರ್ಷದ ಶ್ರೀ ವಿನಾಯಕ ಸೇವಾ ಸಮಿತಿಯ ವತಿಯಿಂದ ನಿರ್ಮಿಸಲಾಗಿರುವ ದೇವಾಲಯದ ಮಾದರಿಯ ವಿಶಿಷ್ಟ ಮಂಟಪ ಹಾಗೂ ಆಕರ್ಷಕ ಕಾರಂಜಿ ಸಜ್ಜಿಕೆ ಸಾರ್ವಜನಿಕರ ವಿಶೇಷ ಗಮನ ಸೆಳೆಯುತ್ತಿದೆ. ದೇವಾಲಯದ ಸ್ವರೂಪವನ್ನು ಹೋಲುವಂತೆ ಅತ್ಯಂತ ಕಲಾತ್ಮಕವಾಗಿ ಹಾಗೂ ವಿಭಿನ್ನ ವಿನ್ಯಾಸದೊಂದಿಗೆ ಈ ಮಂಟಪವನ್ನು ನಿರ್ಮಿಸಲಾಗಿದ್ದು, ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತಂದಿದೆ. ಮಂಟಪದ ಜೊತೆಗೆ ಸುಂದರವಾಗಿ ಅಲಂಕರಿಸಲಾಗಿರುವ ಕಾರಂಜಿ ವೀಕ್ಷಕರನ್ನು ಸಮ್ಮೋಹನಗೊಳಿಸುತ್ತಿದ್ದು, ನಗರದಲ್ಲಿ ಹಬ್ಬದ ವಾತಾವರಣವನ್ನು ಕಳೆಗಟ್ಟಿಸಿದೆ. ಸೃಜನಶೀಲ ಪರಿಕಲ್ಪನೆಯೊಂದಿಗೆ ರೂಪುಗೊಂಡಿರುವ ಈ ಮಂಟಪವನ್ನು ವೀಕ್ಷಿಸಲು ಪ್ರತಿದಿನ ನೂರಾರು ಸಾರ್ವಜನಿಕರು ಹಾಗೂ ಭಕ್ತಾದಿಗಳು ಆಗಮಿಸುತ್ತಿದ್ದು, ಕಲಾತ್ಮಕ ವಿನ್ಯಾಸ ಮತ್ತು ನಿರ್ಮಾಣ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. :: ಯುವಕರ ಶ್ರಮಕ್ಕೆ ಪ್ರಶಂಸೆ : : ಈ ವಿಶಿಷ್ಟ ಮಂಟಪ ಹಾಗೂ ಕಾರಂಜಿ ಸಜ್ಜಿಕೆಯ ಸುಂದರ ನಿರ್ಮಾಣ ಕಾರ್ಯದಲ್ಲಿ ಮುದ್ದಿಯಡ ಕರಣ್ ಕಾವೇರಪ್ಪ, ಅನುಷ್, ಧನು ರೈ, ಶಿಜೋ, ದೀಪಕ್ ಹಾಗೂ…
ಮಡಿಕೇರಿ ಸೆ.17 NEWS DESK : ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ರಾಜ್ಯಾದ್ಯಂತ ಸೆ.19 ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ. ಅದರಂತೆ ಕೊಡಗು ಜಿಲ್ಲೆಯಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ಸೆಪ್ಟೆಂಬರ್, 19 ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಶುಭ ಅವರು ತಿಳಿಸಿದ್ದಾರೆ.
ಮಡಿಕೇರಿ ಸೆ.17 NEWS DESK : ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಗೆ ಅರ್ಹರಾಗಿರುವ ಎಲ್ಲಾ ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿರನ್ನು ಗುರುತಿಸಿ, ಶೇ.100ರಷ್ಟು ಅರ್ಹ ಫಲಾನುಭವಿಗಳ ನೋಂದಣಿಯನ್ನು ಖಚಿತಪಡಿಸುವ ಉದ್ದೇಶದಿಂದ ‘ಪೋಷಣೆಯೊಂದಿಗೆ ಮಾತೃ ವಂದನ’ ವಿಶೇಷ ನೋಂದಣಿ ಹಾಗೂ ನಾಗರಿಕ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಸುಮಂಗಲ ಜಿ. ಹಿರೇಮನಿ ತಿಳಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಅರ್ಹ ಫಲಾನುಭವಿಗಳು ಯೋಜನೆಯ ಸೌಲಭ್ಯದಿಂದ ವಂಚಿತರಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು. ಪ್ರತಿಯೊಬ್ಬರೂ ಪ್ರತಿದಿನ ಸರಿಯಾದ ಸಮಯಕ್ಕೆ ಪ್ರೋಟೀನ್‌ಯುಕ್ತ ಹಾಗೂ ಪೌಷ್ಟಿಕ ಆಹಾರ ಸೇವಿಸುವಂತೆ ಕರೆ ನೀಡಿದರು. ಇಲಾಖೆಯ ನಿರೂಪಣಾಧಿಕಾರಿ ಪ್ರಸನ್ನ ಕುಮಾರ್ ಅವರು ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ಅರ್ಹತಾ ಮಾನದಂಡಗಳು, ಯೋಜನೆಯ ಪ್ರಯೋಜನಗಳು, ಕಂತುಗಳು ಹಾಗೂ ಅರ್ಜಿ ಸಲ್ಲಿಸುವ ವಿಧಾನ ಕುರಿತು ವಿವರಿಸಿದರು. ಫಲಾನುಭವಿಗಳ ಅನುಭವಗಳು ಮತ್ತು ಯಶೋಗಾಥೆಗಳನ್ನು ಸಾಮಾಜಿಕ ಹಾಗೂ ಸಮುದಾಯ ಮಾಧ್ಯಮಗಳ ಮೂಲಕ…






