ಮಡಿಕೇರಿ ಜ.12 NEWS DESK : ಭಾರತೀಯ ವಿದ್ಯಾಭವನ ಕೊಡಗು ಕೇಂದ್ರ ಆಯೋಜಿಸಿದ್ದ ನೀನಾಸಂ ತಿರುಗಾಟ ನಾಟಕಗಳು ಯಶಸ್ವಿಯಾಗಿ ಪ್ರದರ್ಶನಗೊಂಡವು. ನಗರದ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಆಯೋಜಿತವಾಗಿದ್ದ ಡಾ. ಎಂ.ಗಣೇಶ್ ನಿರ್ದೇಶನದಲ್ಲಿ ಮೊದಲ ದಿನದ ನಾಟಕ ‘ಹೃದಯದ ತೀರ್ಪು’ ಬಾನು ಮುಷ್ತಾಕ್ ಅವರ ಕಥೆಯನ್ನು ಆಧರಿಸಿದ ರಂಗಪ್ರಸ್ತುತಿ. ಒಂದು ವಿಶಿಷ್ಟ ಸಾಂಸಾರಿಕ ವೃತ್ತಾಂತವನ್ನು ಬಿಂಬಿಸುವ ಈ ನಾಟಕ ಮುಸ್ಲಿಂ ಸಮುದಾಯದ ಸಾಂಸ್ಕೃತಿಕ ಪರಿಸರದೊಳಗೆ ಸಾಗುತ್ತಲೇ ಅದರ ಎಲ್ಲೆಗಳನ್ನು ಮೀರಿ ಹೆಣ್ಣಿನ ನೋಟಗಳ ಮುಖಾಂತರ ಅನನ್ಯ ವಾದ ಮಾನವೀಯ ಬಿಕ್ಕಟ್ಟುಗಳನ್ನು ರಂಗದ ಮೇಲೆ ಅದ್ಭುತವಾಗಿ ಕಟ್ಟಿಕೊಟ್ಟಿತು. ಎರಡನೇ ದಿನ ಪ್ರದರ್ಶನಗೊಂಡ ‘ಅವತರಣಮ್ ಭ್ರಾಂತಾಲಯಮ್’ ಜಿ. ಶಂಕರ ಪಿಳ್ಳೆ ರಚಿಸಿ, ನಾ. ದಾಮೋದರ ಶೆಟ್ಟಿ ಅನುವಾದಿಸಿ, ಶಂಕರ ವೆಂಕಟೇಶ್ವರನ್ ನಿರ್ದೇಶಿಸಿದ ನಾಟಕ. ಮಾನವನ ಅನಿಶ್ಚಿತತೆ ಮತ್ತು ಅಸಂಬದ್ಧತೆಯನ್ನು ತೆರೆದಿಡುತ್ತ, ಬದುಕಿನ ಅರ್ಥಹೀನತೆಗೆ ಒಂದು ಇತ್ಯಾತ್ಮಕ ಮುದ್ರೆ ಸಿಗಬೇಕೆಂಬ ಹಂಬಲ ಈ ಪ್ರಯೋಗದ್ದು. ನಟರ ಅತ್ಯುತ್ತಮ ಅಭಿನಯದಿಂದ ನಾಟಕಗಳು ಪ್ರೇಕ್ಷಕರ ಮನ ಗೆದ್ದವು.
ಲೇಖಕ: admin
ಮಡಿಕೇರಿ ಜ.12 NEWS DESK : ದೇವರಕೊಲ್ಲಿಯಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ನೂತನವಾಗಿ ಉದ್ದೇಶಿತ ಶ್ರೀ ಚಾಮುಂಡೇಶ್ವರಿ ಕಲಾಭವನಕ್ಕೆ ಭೂಮಿಪೂಜೆ ಮತ್ತು ಮಕರ ಸಂಕ್ರಾಂತಿ ಪೂಜಾಮಹೋತ್ಸವ ಜ.14 ರಂದು ಜರುಗಲಿದೆ. ಬುಧವಾರ ಬೆಳಗ್ಗೆ 10.45 ಗಂಟೆಗೆ ಶ್ರೀ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ಕನಾ೯ಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಟಿ.ಶ್ಯಾಮ್ ಭಟ್ ಇವರು ಕಲಾಮಂದಿರಕ್ಕೆ ಭೂಮಿಪೂಜೆ ನೆರವೇರಿಸಲಿದ್ದಾರೆ. ಪೂವಾ೯ಹ್ನ 11 ಗಂಟೆಗೆ ಆಯೋಜಿತ ಸಭಾಕಾಯ೯ಕ್ರಮವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವಿರಾಜಪೇಟೆ ಕ್ಷೇತ್ರ ಶಾಸಕರಾದ ಎ.ಎಸ್. ಪೊನ್ನಣ್ಣ ಉದ್ಘಾಟಿಸಲಿದ್ದು, ಟಿ.ಶ್ಯಾಮ್ ಭಟ್, ಶ್ರೀ ಚಾಮುಂಡೇಶ್ವರಿ ದೇವಾಲಯದ ಅಧ್ಯಕ್ಷರಾದ ಯಶೋಧರ ಬಿ.ಜೆ.ಪಾಲ್ಗೊಳ್ಳಲಿದ್ದಾರೆ. ಕಾಯ೯ಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ., ಮೈಸೂರಿನ ಉದ್ಯಮಿ ನರೇಶ ಚೆರಿಯಮನೆ, ಮದೆನಾಡು ಪ್ರಾಥಮಿಕ ಕೖಷಿ ಪತ್ತಿನ ಸಹಕಾರ ಸಂಘದ, ಅಧ್ಯಕ್ಷ ಧನಂಜಯ್ ಅಗೋಳಿಕಜೆ, ಶ್ರೀ ಧಮ೯ಸ್ಥಳ ಗ್ರಾಮೀಣಾಭಿವೖದ್ದಿ ಯೋಜನೆಯ ಸಂಪಾಜೆ ವಲಯಾಧಿಕಾರಿ ಸಂತೋಷ್ ಕುಮಾರ್, ಶ್ರೀ ಚಾಮುಂಡೇಶ್ವರಿ ದೇವಾಲಯದ ಉಪಾಧ್ಯಕ್ಷ ರಾಜು ಕೆ.ಆರ್…
ಮಡಿಕೇರಿ ಜ.12 NEWS DESK : ದಕ್ಷಿಣ ಕನಾ೯ಟಕದ ದಕ್ಷಿಣ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಥಿ೯ಗಳು ಸೈನಿಕಶಾಲೆಗೆ ಸೇಪ೯ಡೆಯಾಗಲು ಈ ವ್ಯಾಪ್ತಿಯಲ್ಲಿ ಪರೀಕ್ಷಾ ಮಾಗ೯ದಶಿ೯ ಶಿಬಿರಗಳು ಹೆಚ್ಚಾಗಗಬೇಕೆಂದು ಸರಗೂರು ವಿನಲ್ಲಿರುವ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಸಹಾಯಕ ಮುಖ್ಯಕಾಯ೯ನಿವ೯ಹಣಾಧಿಕಾರಿ ಹಾಗೂ ಶಿಕ್ಷಣ ಕಾರ್ಯಕ್ರಮಗಳ ಮುಖ್ಯಸ್ಥ ಪ್ರವೀಣ್ ಕುಮಾರ್ ಎಸ್. ಅಭಿಪ್ರಾಯಪಟ್ಟಿದ್ದಾರೆ. ನಗರದ ರೋಟರಿ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಮತ್ತು ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸೈನಿಕ ಶಾಲಾ ಪ್ರವೇಶ ಪರೀಕ್ಷಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪ್ರವೀಣ್ ಕುಮಾರ್ ಮಾತನಾಡಿದರು. ಸೈನಿಕ ಶಾಲೆಗೆ ಸೇಪ೯ಡೆಯಾಗಬೇಕೆಂಬುದು ಅನೇಕ ವಿದ್ಯಾಥಿ೯ಗಳು, ಪೋಷಕರ ಆಸೆಯಾಗಿರುತ್ತದೆ. ಆದರೆ ಈ ನಿಟ್ಟಿನಲ್ಲಿ ಸೂಕ್ತವಾದ ಪರೀಕ್ಷಾ ಮಾಗ೯ದಶ೯ನ ಮತ್ತು ತರಬೇತಿಯ ಕೊರತೆ ಈವರೆಗೂ ಕಾಡುತ್ತಿತ್ತು. ಸೈನಿಕಶಾಲೆಯ ಆಯ್ಕೆಗಾಗಿ ಬಹುಮುಖ್ಯವಾದ ಪರೀಕ್ಷೆಯ ಹಂತದಲ್ಲಿ ಬಹುತೇಕ ವಿದ್ಯಾಥಿ೯ಗಳು ಮಾಗ೯ದಶ೯ನದ ಕೊರತೆಯಿಂದ ಆಯ್ಕೆಯಾಗದೇ ಸೈನಿಕಶಾಲೆಗೆ ಸೇಪ೯ಡೆಯಾಗುವ ಕನಸು ನನಸಾಗದೇ ನಿರಾಶರಾಗುತ್ತಿದ್ದರು. ಇದನ್ನು ಗಮನಿಸಿಯೇ ಸರಗೂರಿನಲ್ಲಿ…
ಮಡಿಕೇರಿ ಜ.12 NEWS DESK : ಕುಶಾಲನಗರದ ಮುಖ್ಯರಸ್ತೆಯಲ್ಲಿರುವ ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಪ್ರಸ್ತುತ ಪಡಿಸಿರುವ “ಗ್ಲೋಫೆಸ್ಟ್” ವಜ್ರಾಭರಣಗಳ ವಾರ್ಷಿಕ ಮಹೋತ್ಸವವು ಜ.15 ರಂದು ಕೊನೆಗೊಳ್ಳಲಿದೆ. ಹಾಗಾದ್ರೆ ಇನ್ಯಾಕೆ ತಡ… ಬೇಗ ಬೇಗ ಬನ್ನಿ ಕೊನೆಯ ನಾಲ್ಕು ದಿನಗಳ ಕಾಲಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ. ವಜ್ರಾಭರಣಗಳ ಮೇಲೆ ಪ್ರತೀ ಕ್ಯಾರೆಟ್ ರೂ.7000 ವರೆಗೆ ವಿಶೇಷ ರಿಯಾಯಿತಿ ನೀಡಲಾಗಿದೆ. ವೈವಿಧ್ಯಮಯ ವಜ್ರಾಭರಣಗಳ ವಿನೂತನ ಸಂಗ್ರಹವಿದ್ದು, ವಜ್ರಾಭರಣಗಳು ದುಬಾರಿ ಎಂದೇ ಭಾವನೆಯಲ್ಲಿರುವ ಜನರಿಗೆ ಕೈಗೆಟಕುವ ದರದಲ್ಲೂ ವಜ್ರಾಭರಣಗಳು ಲಭ್ಯವಿದೆ. ರೂ.3500 ರಿಂದ ವಜ್ರಾಭರಣದ ಬೆಲೆಗಳು ಪ್ರಾರಂಭವಾಗುತ್ತದೆ. ಗ್ಲೋ ವಜ್ರಾಭರಣಗಳು ಅಂತರಾಷ್ಟ್ರೀಯ ಪ್ರಯೋಗಾಲಯದಿಂದ ಪ್ರಮಾಣಿಕರಿಸಲ್ಪಟ್ಟ, ಉತ್ಕೃಷ್ಟ ಶ್ರೇಣಿಯ ಮೂಗುತಿ, ಪೆಂಡೆಂಟ್, ಉಂಗುರ, ಕಿವಿಯೋಲೆ ನೆಕ್ಲೇಸ್, ಬಳೆಗಳ ವಿವಿಧ ವಿನ್ಯಾಸಗಳ ಅಮೋಘ ಸಂಗ್ರಹವಿದೆ. ನುರಿತ ತಜ್ಞರಿಂದ ವಜ್ರಾಭರಣಗಳ ಬಗ್ಗೆ ಸಂಪೂರ್ಣ ಮಾಹಿತಿ, ಪ್ರತಿಷ್ಠಿತ ಪ್ರಮಾಣೀಕೃತ ಏಜೆನ್ಸಿಗಳಿಂದ ಧೃಡೀಕರಣಗೊಂಡ ವಜ್ರಾಭರಣಗಳ ಶ್ರೇಣಿ, ಪ್ರಮಾಣೀಕೃತ EF ಬಣ್ಣದ ಹಳೆಯ ವಜ್ರಾಭರಣಗಳ ವಿನಿಮಯ, ಮರುಖರೀದಿಯ ಗ್ಯಾರಂಟಿ, ಅಚ್ಚರಿಯ ಕೊಡುಗೆ…
ಮಡಿಕೇರಿ ಜ.12 NEWS DESK : ರಾಜ್ಯದ NH-275 ಹೆದ್ದಾರಿ ಸುರಕ್ಷತೆಗಾಗಿ ಕೇಂದ್ರ ಸರ್ಕಾರದಿಂದ 94.08 ಕೋಟಿ ರೂ.ಗಳ ಬೃಹತ್ ಯೋಜನೆಗೆ ತಾಂತ್ರಿಕ ಅನುಮೋದನೆ ನೀಡಿ ಹಣಬಿಡುಗಡೆ ಮಾಡಲಾಗಿದೆ ಎಂದು ಮೈಸೂರು-ಕೊಡಗು ಲೋಕಸಭಾ ಸದಸ್ಯರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕರ್ನಾಟಕದ ಅತ್ಯಂತ ಜನನಿಬಿಡ ಹೆದ್ದಾರಿಗಳಲ್ಲಿ ಒಂದಾದ NH-275 (ಬಂಟ್ವಾಳ-ಬೆಂಗಳೂರು ವಿಭಾಗ) ರಸ್ತೆಯ ಅಭಿವೃದ್ಧಿಗಾಗಿ (ಸಂಪಾಜೆ ಯಿಂದ ಕುಶಾಲನಗರ ವರೆಗೆ) ಭರ್ಜರಿ ಕೊಡುಗೆ ನೀಡಿದ್ದು, ಈ ರಸ್ತೆ ಅಭಿವೃದ್ಧಿ ಕಾಣಲಿದೆ ಎಂದಿದ್ದಾರೆ. ಈ ಹೆದ್ದಾರಿಯ ಆಯ್ದ ಭಾಗಗಳಲ್ಲಿ ರಕ್ಷಣಾತ್ಮಕ ಗೋಡೆಗಳ ನಿರ್ಮಾಣ ಮತ್ತು ಸುರಕ್ಷತಾ ಕಾಮಗಾರಿಗಳಿಗಾಗಿ 94.08 ಕೋಟಿ ರೂಪಾಯಿಗಳ ಆರ್ಥಿಕ ಮತ್ತು ತಾಂತ್ರಿಕ ಮಂಜೂರಾತಿಯನ್ನು ನೀಡಿ ಆದೇಶ ಹೊರಡಿಸಿದ್ದುಯೋಜನೆಯ ಹಿನ್ನೆಲೆ ಮತ್ತು ಉದ್ದೇಶಬಂಟ್ವಾಳ ಮತ್ತು ಬೆಂಗಳೂರು ನಡುವಿನ ಈ ಘಟ್ಟ ಪ್ರದೇಶದ ರಸ್ತೆಯು ಮಳೆಗಾಲದಲ್ಲಿ ಪದೇ ಪದೇ ಭೂಕುಸಿತಕ್ಕೆ ತುತ್ತಾಗುತ್ತಿತ್ತು. ಇದನ್ನು ತಡೆಗಟ್ಟಲು ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಲು…
ಮಡಿಕೇರಿ ಜ.12 NEWS DESK : ಯುವಶಕ್ತಿ ರಾಷ್ಟ್ರ ಶಕ್ತಿ..ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಯುವಜನತೆಗೆ ಕರೆ ನೀಡಿದ ಹರಿಕಾರ, ಮಹಾಚೇತನ ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬವನ್ನು ಜನವರಿ 12 ರಂದು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಯುವಕರ ಬಗ್ಗೆ ಅಪಾರ ನಂಬಿಕೆ ಹೊಂದಿದ್ದ ಅವರು ಯುವಶಕ್ತಿಕ್ಕಿಂತ ಮಿಗಿಲಾದದ್ದು ಯಾವುದು ಇಲ್ಲ. ನನಗೆ ಗಟ್ಟಿಮುಟ್ಟಾದ 100 ಜನ ಯುವಕರನ್ನು ಕೊಡಿ ನಾನು ನವ ಭಾರತವನ್ನು ನಿರ್ಮಾಣ ಮಾಡುತ್ತೀವಿ ಎಂದು ಕರೆ ನೀಡಿದ ಮಹಾನ್ ಚೇತನ. ಯುವಕರು ಹೇಡಿಗಳಲ್ಲ, ಪರಾವಲಂಬಿಗಳಲ್ಲ ಎಂದ ಅವರು ನಿಮ್ಮ ಬದುಕಿನ ಶಿಲ್ಪಿಗಳು ನೀವೇ ಎಂದು ಯುವಜನತೆಗೆ ಸಂದೇಶವನ್ನು ಸಾರಿದರು. ಅವರ ಹುಟ್ಟು ಹಬ್ಬವನ್ನು ಭಾರತ ಸರ್ಕಾರ 1985 ರಿಂದ ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿದೆ. ಸ್ವಾಮಿ ವಿವೇಕಾನಂದರನ್ನು ವ್ಯಕ್ತಪಡಿಸಿದ ಕೆಲವು ಅಭಿಪ್ರಾಯಗಳು ಏನೆಂದರೆ, ಆಧುನಿಕ ಜಗತ್ತಿನ ನಿರ್ಮಾತ್ರರಲ್ಲಿ ವಿವೇಕಾನಂದರನ್ನು ಪ್ರಮುಖರೆಂದು ಗೌರವಿಸುತ್ತದೆ. ಭಾರತವನ್ನು ಅರಿಯಬೇಕೆಂದರೆ ಸ್ವಾಮಿ ವಿವೇಕಾನಂದರ ಕುರಿತು ಅಧ್ಯಯನ ಮಾಡಬೇಕು. ಅಮೆರಿಕನ್ನರಿಗೆ…
ಪಾಲಿಬೆಟ್ಟ ಜ.12 NEWS DESK : ಯಂಗ್ ಇಂಡಿಯಾ ಯೂಥ್ ಕ್ಲಬ್ ನ 55ನೇ ಸುವರ್ಣ ಮಹೋತ್ಸವದ ಸಂಭ್ರಮಕ್ಕಾಗಿ ರಾಷ್ಟ್ರೀಯ ಮಟ್ಟದ ಮುಕ್ತ 5s ಫುಟ್ಬಾಲ್ ಪಂದ್ಯಾವಳಿಗೆ ಪಾಲಿಬೆಟ್ಟ ಕ್ರೀಡಾ ಮೈದಾನದಲ್ಲಿ ಚಾಲನೆ ನೀಡಲಾಯಿತು. ಜಿಲ್ಲಾ ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮೂಕೂಂಡ ವಿಜು ಸುಬ್ರಮಣಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ. ಗ್ರಾಮೀಣ ಭಾಗದಲ್ಲಿ ರಾಷ್ಟ್ರೀಯ ಮಟ್ಟದ ಫುಟ್ಬಾಲ್ ಪಂದ್ಯಾವಳಿ ನಡೆಯುತ್ತಿರುವುದು ಜಿಲ್ಲೆಯ ಕ್ರೀಡಾಪಟುಗಳಿಗೆ ರಾಜ್ಯ ರಾಷ್ಟ್ರಮಟ್ಟದ ಆಟಗಾರನ್ನ ಪರಿಚಯಿಸುವ ಮೂಲಕ ಯಂಗ್ ಇಂಡಿಯಾ ಯೂತ್ ಕ್ಲಬ್ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕ್ರೀಡೆ ಜಿಲ್ಲೆ ಎಂದು ಹೆಸರುವಾಸಿಯಾಗಿದ್ದರು ಕ್ರೀಡಾಪಟುಗಳಿಗೆ ಸರ್ಕಾರದ ಪ್ರೋತ್ಸಾಹ ಕೊರತೆ ಇದೆ. ಗ್ರಾಮೀಣ ಭಾಗದಲ್ಲಿ ಸುಸಜ್ಜಿತ ಮೈದಾನದ ವ್ಯವಸ್ಥೆ ಇಲ್ಲದೆ ಕ್ರೀಡಾಪಟುಗಳು ಕ್ರೀಡೆಯಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೈದಾನದ ವ್ಯವಸ್ಥೆ ಸೇರಿದಂತೆ ಸೌಲಭ್ಯಗಳನ್ನ ಕಲ್ಪಿಸಿ ಕೊಡಬೇಕೆಂದು ಕ್ರೀಡಾ ಜಿಲ್ಲಾಡಳಿತವನ್ನು ಒತ್ತಾಯಿಸಿದರು. 55 ವರ್ಷ ಪೂರೈಸಿರುವ ಯಂಗ್ ಇಂಡಿಯಾ ಯುವಕ ಸಂಘದ ಕಟ್ಟಡ ಶಿಥಿಲ ವ್ಯವಸ್ಥೆಯಲ್ಲಿದ್ದು…
ನಾಪೋಕ್ಲು ಜ.12 NEWS DESK : ಸ್ಥಳೀಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ವಾಹನವನ್ನು ಪೊಲೀಸರು ಮರಳು ಸಹಿತ ವಶಕ್ಕೆ ಪಡೆದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಿ ದಂಡ ವಿಧಿಸಿದ್ದಾರೆ. ಬೇತು ಗ್ರಾಮದ ಕಾರೆಕಾಡು ಬಳಿಯ ಕಾವೇರಿ ನದಿ ದಡದಿಂದ ಟಿಪ್ಪರ್ ವಾಹನದಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎಸ್‍ಐ ರಾಘವೇಂದ್ರ ಹಾಗೂ ಸಿಬ್ಬಂದಿಗಳು ಮಾಲು ಸಹಿತ ಟಿಪ್ಪರ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಪ್ರಕರಣವನ್ನು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಿ ವಾಹನದ ಮಾಲೀಕನಿಗೆ 32,320 ರೂಗಳ ದಂಡವನ್ನು ವಿಧಿಸಿ ಕಾನೂನಿನ ಕ್ರಮ ಕೈಗೊಂಡಿದ್ದಾರೆ. ಕಾವೇರಿ ನದಿ ದಡದಲ್ಲಿ ಮರಳು ಸಾಗಟಕ್ಕೆ ತೆರಳುವ ರಸ್ತೆಗೆ ಅಡ್ಡಲಾಗಿ ಜೆಸಿಬಿ ಯಂತ್ರವನ್ನು ಬಳಸಿ ಚರಂಡಿ ತೆಗೆಸಿದ ಪೊಲೀಸರು ಮರಳುಗಾರಿಕೆಗೆ ವಾಹನಗಳು ತೆರಳದಂತೆ ಕ್ರಮ ಕೈಗೊಂಡಿದ್ದಾರೆ. ಠಾಣಾ ವ್ಯಾಪ್ತಿಯ ಕೆಲವು…
ನಾಪೋಕ್ಲು ಜ.12 NEWS DESK : ನಾಪೋಕ್ಲು ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಿದ ಲಯನ್ಸ್ ರೀಜನ್ ಮೀಟ್ ಸಮ್ಮೇಳನದಲ್ಲಿ ಕ್ಲಬ್‍ನ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ನಾಪೋಕ್ಲು ಕೊಡವ ಸಮಾಜದ ಅಪ್ಪಚ್ಚ ಕವಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಲಯನ್ಸ್ ರೀಜನ್ ಮೀಟ್ “ಬೆಸುಗೆ” ಸಮ್ಮೇಳನದಲ್ಲಿ ಲಯನ್ಸ್ ಕ್ಲಬ್‍ನ ಹಿರಿಯ ಸದಸ್ಯರುಗಳಾದ ಬೊಪ್ಪೆರ ಕಾವೇರಪ್ಪ ಹಾಗೂ ಸರ್ವೆ ಆಫ್ ಇಂಡಿಯಾ ನಿವೃತ ಅಧಿಕಾರಿ, ಕೇಟೋಳಿರ ಎಸ್.ಕುಟ್ಟಪ್ಪ ಅವರ ಸುದೀರ್ಘ ಅವಧಿಯ ಸೇವೆಯನ್ನು ಪರಿಗಣಿಸಿ ಸನ್ಮಾನಿಸಿ ಗೌರವಿಸಲಾಯಿತು. ಲಯನ್ಸ್ ಕ್ಲಬ್‍ಗಳ ಪ್ರಾಂತೀಯ ಅಧ್ಯಕ್ಷ ಡಾ.ಕೋಟೆರ ಪಂಚಮ್ ತಿಮ್ಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರೊಟೇರಿಯನ್ ಜಿಲ್ಲಾ ಮಾಜಿ ರಾಜ್ಯಪಾಲ ಅಭಿನಂದನ್ ಬಿ.ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಲಯನ್ಸ್ ಪ್ರಾಂತಿಯ ರಾಯಬಾರಿ ಲಯನ್ ನವೀನ್ ಅಂಬೆಕಲ್, ವಲಯ ಅಧ್ಯಕ್ಷರುಗಳಾದ ಲಯನ್ ಬಿಂದ್ಯಾ ಗಣಪತಿ, ಲಯನ್ ಸಿ.ಟಿ.ಅಪ್ಪಣ್ಣ, ಲಯನ್ ನಟರಾಜ ಕೆಸ್ತೂರು, ಪ್ರಾಂತ್ಯ ಅಧ್ಯಕ್ಷರುಗಳು, ಸಮ್ಮೇಳನ ಅಧ್ಯಕ್ಷೆ ಲಯನ್ ಕೇಟೋಳಿರ ರತ್ನ ಚರ್ಮಣ್ಣ, ಕಾರ್ಯದರ್ಶಿ ಲಯನ್ ಮುಕ್ಕಾಟಿರ ವಿನಯ್, ಖಜಾಂಚಿ ಲಯನ್…
ಮಡಿಕೇರಿ ಜ.12 NEWS DESK : ಜಿಲ್ಲೆಯ ಕುಟ್ಟ, ಶ್ರೀಮಂಗಲ, ಭಾಗಮಂಡಲ ಮತ್ತು ತಲಕಾವೇರಿ ಉಪ ಠಾಣೆಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಠಾಣೆಗಳ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿ, ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರೊಂದಿಗೆ ಸಭೆ ನಡೆಸಿದರು. ನಂತರ ಠಾಣಾ ವ್ಯಾಪ್ತಿಯ ಕಾನೂನು ಸುವ್ಯವಸ್ಥೆ, ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಡುವುದು ಮುಂತಾದ ವಿಷಯಗಳ ಬಗ್ಗೆ ಸೂಕ್ತ ನಿರ್ದೇಶನಗಳನ್ನು ನೀಡಿದರು.






