ಮಡಿಕೇರಿ ಡಿ.25 NEWS DESK : ಮಡಿಕೇರಿಯ ಶ್ರೀ ಅಯ್ಯಪ್ಪ ಭಕ್ತ ವೃಂದದ ವತಿಯಿಂದ ನಗರದ ಶ್ರೀ ಕೋಟೆ ಮಾರಿಯಮ್ಮ ದೇವಾಲಯದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಅಪ್ಪ ಪೂಜೆ ಶ್ರದ್ಧಾಭಕ್ತಿಯಿಂದ ಜರುಗಿತು. ವಿಜಯ್ ಗುರುಸ್ವಾಮಿ ನೇತೃತ್ವದಲ್ಲಿ ಬಾಳೆ ದಿಂಡಿನ ಅಲಂಕೃತ ಮಂಟಪ ನಿರ್ಮಿಸಿ ಶಬರಿ ಗಿರಿವಾಸ ಶ್ರೀ ಅಯ್ಯಪ್ಪನ ಮೂರ್ತಿ ಪ್ರತಿಷ್ಠಾಪಿಸಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಇದೇ ವೇಳೆ ಕನ್ನಿ ಪೂಜೆಯನ್ನು ನಡೆಸಲಾಯಿತು. ಬಳಿಕ ನೂರಾರು ಮಂದಿ ವೃತಾಧಾರಿಗಳು ಶರಣು ಕರೆದು ಅಯ್ಯಪ್ಪ ಸ್ವಾಮಿಯ ನಾಮ ಸ್ಮರಣೆಯೊಂದಿಗೆ ಕುದಿಯುವ ತುಪ್ಪದಲ್ಲಿ ಬೇಯುತ್ತಿದ್ದ ಕಜಾಯವನ್ನು ಕೈಯಿಂದ ಹೊರ ತೆಗೆದು ಶ್ರೀ ಅಯ್ಯಪ್ಪನಿಗೆ ಸಮರ್ಪಿಸಿದರು. ನಗರದ ವಿವಿಧ ಕಡೆಗಳಿಂದ ಆಗಮಿಸಿದ್ದ ಅಯ್ಯಪ್ಪ ವೃತಾಧಾರಿಗಳು ಶಬರಿ ಮಲೆ ಅಯ್ಯಪ್ಪನನ್ನು ಭಜಿಸುವ ಮೂಲಕ ಭಕ್ತಿ ಮೆರೆದರು. ಪುಟ್ಟ ಮಕ್ಕಳು ಕೂಡ ಅಯ್ಯಪ್ಪ ವೃತಾಧಾರಿಗಳಾಗಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಅಯ್ಯಪ್ಪ ಸ್ವಾಮಿಗೆ ಮಹಾಮಂಗಳಾರತಿ ಬೆಳಗಿದ ಬಳಿಕ ನೆರೆದಿದ್ದ ಭಕ್ತರಿಗೆ ಮತ್ತು ಅಯ್ಯಪ್ಪ ವೃತಾಧಾರಿಗಳಿಗೆ ಅನ್ನ ಪ್ರಸಾದ ವಿತರಿಸಲಾಯಿತು.
ಲೇಖಕ: admin
ನಾಪೋಕ್ಲು ಡಿ.25 NEWS DESK : ಮೇರಿ ಮಾತೆಯ ದೇವಾಲಯಲ್ಲಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಸುಂದರವಾಗಿ ನಿರ್ಮಿಸಿದ್ದ ಗೋದಲಿಯಲ್ಲಿ ಬಾಲ ಏಸುವಿನ ಪ್ರತಿಕೃತಿಯನ್ನು ಧರ್ಮ ಗುರುಗಳಾದ ರೆ. ಫಾ ಜ್ಞಾನ ಪ್ರಕಾಶ್ ಪ್ರತಿಷ್ಠಾಪಿಸಿ ಬಲಿಪೂಜೆ, ಪ್ರಾರ್ಥನೆ ನೆರವೇರಿಸಿದರು. ನಂತರ ಏಸುವಿನ ಸಂದೇಶವನ್ನು ಸಾರಿ ಹಬ್ಬದ ಶುಭಾಶಯ ಕೋರಿದರು. ದೇವಾಲಯವನ್ನು ಹಬ್ಬದ ಪ್ರಯುಕ್ತ ವಿದ್ಯುತ್ ಅಲಂಕಾರಿಸಲಾಗಿತ್ತು. ಭವ್ಯವಾದ ಅಲಂಕಾರದ ಆಕರ್ಷಕ ಗೋದಲಿ ನಿರ್ಮಿಸಲಾಗಿತ್ತು. ಏಸುವಿನ ಗೋದಲಿ ನಿರ್ಮಿಸುವ ಸ್ಪರ್ಧೆ ಆಯೋಜಿಲಾಗಿದ್ದು, ಪ್ರಥಮ ಬಹುಮಾನವನ್ನು ಬಾಬಿ ವೇಗಸ್, ದ್ವಿತೀಯ ಬಹುಮಾನ ಕೆ.ಜೆ.ರಾಯ್ ಹಾಗೂ ತೃತೀಯ ಬಹುಮಾನ ಜಾಲಿ ಅಬ್ರಹಾಂ ಪಡೆದುಕೊಂಡರು. ವಿಜೇತರಿಗೆ ಧರ್ಮಗಳು ಬಹುಮಾನ ವಿತರಿಸಿದರು. ರೋಲಿಂಗ್ ಟ್ರೋಫಿಯನ್ನು ಕೆ.ಜೆ.ಜಾಯ್ ಪ್ರಾಯೋಜಕರಾಗಿದ್ದರು. ಸಾಂತಕ್ಲಾಸ್ ವೇಸದಾರಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉಡುಗೊರೆ ಕೊಟ್ಟು ಸಂಭ್ರಮಿಸಿದರು. ಈ ಸಂದರ್ಭ ಕ್ರೈಸ್ತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪಾಲನಾ ಸಮಿತಿ ಸದಸ್ಯರು, ಯುವಕ ಸಂಘದ ಸದ್ಯಸರು ಇದ್ದರು. ವರದಿ : ದುಗ್ಗಳ ಸದಾನಂದ.
ಪುತ್ತೂರು ಡಿ.25 NEWS DESK : ಪುತ್ತೂರು ಮುಖ್ಯ ರಸ್ತೆಯಲ್ಲಿರುವ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ತನ್ನ ಗ್ರಾಹಕರಿಗೆ ವರ್ಷಾಂತ್ಯದ ಕೊಡುಗೆಗಳನ್ನು ಘೋಷಿಸಿದೆ. ಚಿನ್ನದ ಬೆಲೆ ಗಗನಮುಖಿಯಾಗುತ್ತಿರುವ ನಡುವೆ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ಚಿನ್ನಾಭರಣಗಳ ತಯಾರಿಕಾ ವೆಚ್ಚದ (ಮೇಕಿಂಗ್ ಚಾರ್ಜ್) ಮೇಲೆ ಪ್ರತೀ ಗ್ರಾಂಗೆ 400 ರೂ. ವರೆಗೆ ರಿಯಾಯಿತಿ ನೀಡುತ್ತಿದೆ. ಈ ಕೊಡುಗೆ ಡಿ.25 ರಿಂದ ಪ್ರಾರಂಭವಾಗಿದ್ದು, ಡಿ.31ರ ವರೆಗೆ ಇರಲಿದೆ. ಹೆಚ್ಚಿನ ಮಾಹಿತಿಗಾಗಿ 8748877360 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈಗಾಗಲೇ ಸಂಸ್ಥೆಯಲ್ಲಿ ಗ್ಲೋ ಫೆಸ್ಟ್ ಎಂಬ ವಜ್ರಾಭರಣಗಳ ವಾರ್ಷಿಕ ಮಹೋತ್ಸವ ಡಿ.15 ರಿಂದ ನಡೆಯುತ್ತಿದ್ದು, ಜ.15ರ ವರೆಗೆ ಇರಲಿದೆ. ಅದರಂತೆ, ವಜ್ರಾಭರಣಗಳ ಮೇಲೆ ಪ್ರತಿ ಕ್ಯಾರೆಟ್ ಗೆ 7 ಸಾವಿರ ರೂ.ವರೆಗಿನ ವಿಶೇಷ ರಿಯಾಯಿತಿಯೊಂದಿಗೆ ವಜ್ರಾಭರಣಗಳನ್ನು ಖರೀದಿಸಬಹುದಾಗಿದೆ. ಈ ಎಲ್ಲಾ ಆಫರ್‌ಗಳು ಪುತ್ತೂರು ಮಾತ್ರವಲ್ಲದೆ, ಸುಳ್ಯ, ಮೂಡಬಿದ್ರಿ, ಹಾಸನ, ಕುಶಾಲನಗರದಲ್ಲಿನ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ಮಳಿಗೆಗಳಲ್ಲಿಯೂ ಲಭ್ಯವಿದೆ.
ಮಡಿಕೇರಿ ಡಿ.25 NEWS DESK : ಕೊಡಗು ವಿಶ್ವವಿದ್ಯಾಲಯ ಜ್ಞಾನ ಕಾವೇರಿಯ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ.ನಗ್ಮಾಭಾನು ಹೆಚ್.ಎ. ಅವರಿಗೆ ಯುವ ಮಹಿಳಾ ಸಂಶೋಧಕಿ ಪ್ರಶಸ್ತಿ ಲಭಿಸಿದೆ. ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಅಡ್ವಾನ್ಸ್‌ಡ್ ಸೈನ್ಸಸ್‌ನಲ್ಲಿ ನಡೆದ ಭಾರತೀಯ ರಸಾಯನಶಾಸ್ತ್ರಜ್ಞರ ಮಂಡಳಿಯ 44ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನದಲ್ಲಿ ಸಾವಯವ ರಸಾಯನಶಾಸ್ತ್ರ ವಿಭಾಗದಲ್ಲಿ ತಮ್ಮ ಪ್ರಬಂಧದ ಅತ್ಯುತ್ತಮ ಮೌಖಿಕ ಪ್ರಸ್ತುತಿಗಾಗಿ ಡಾ.ನಗ್ಮಾಭಾನು ಹೆಚ್.ಎ. ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ನಗ್ಮಾಭಾನು ಹೆಚ್.ಎ.ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಗಂಗೋತ್ರಿಯಲ್ಲಿನ ರಸಾಯನಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಬಾಲಕೃಷ್ಣ ಕಲ್ಲೂರಾಯ ಅವರ ಮಾರ್ಗದರ್ಶನದಲ್ಲಿ “ಸಿಂಥೆಸಿಸ್ ಆಫ್ ಸಮ್ ನೋವೆಲ್ ಹೆಟಾರಿಸೈಕ್ಲಿಕ್ ಕಾಂಪೌಂಡ್ಸ್ ವಯಾ ಡಯಪೊಲರ್ ಸೈಕ್ಲೋಡಿಷನ್ ರಿಯಾಕ್ಷನ್ಸ್” ಎಂಬ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಪ್ರಸ್ತುತ ಕೊಡಗು ವಿಶ್ವವಿದ್ಯಾಲಯದ ಜ್ಞಾನ ಕಾವೇರಿ ಮುಖ್ಯ ಆವರಣದಲ್ಲಿರುವ ರಸಾಯನಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ನಗ್ಮಾಭಾನು ಹೆಚ್. ಎ.…
ಮಡಿಕೇರಿ ಡಿ.25 NEWS DESK : ಭಾರತ ಕಂಡ ಶ್ರೇಷ್ಠ ಪ್ರಧಾನಿ, ಅಜಾತಶತ್ರು, ಅಟಲ್ ಬಿಹಾರಿ ವಾಜಪೇಯಿ ಅವರ ಗೌರವಾರ್ಥ ಸುಶಾಸನ ದಿನ (ಉತ್ತಮ ಆಡಳಿತ ದಿನ)ದ ಅಂಗವಾಗಿ ಮೇಕೇರಿಯ ಸ್ವಾಗತ ಯುವಕ ಸಂಘ ಹಾಗೂ ವಿವಿಧ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಡಿ.26 ರಂದು 14ನೇ ಗ್ರಾಮೀಣ ಮಟ್ಟದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಲಿದೆ. ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ಮೈ ಭಾರತ್, ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ ತಾಲ್ಲೂಕು ಯುವ ಒಕ್ಕೂಟ, ಕೊಡಗು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಡಿಕೇರಿ ಲಯನ್ಸ್ ಕ್ಲಬ್, ರೋಟರಿ ಕ್ಲಬ್ ಆಫ್ ಮಡಿಕೇರಿ ವುಡ್ಸ್, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ರೋಟರಿ ಮಿಸ್ಟಿಹಿಲ್ಸ್, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾಸ್ಪತ್ರೆ ಮಡಿಕೇರಿ, ಮೇಕೇರಿ ಗ್ರಾಮ ಪಂಚಾಯಿತಿ ಮತ್ತು ಮಡಿಕೇರಿ ಎಸ್‍ಡಿಎಂಸಿ ಸಹಯೋಗದಲ್ಲಿ ನಡೆಯಲಿದೆ. ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಮೇಕೇರಿಯ ಸರ್ಕಾರಿ ಹಿರಿಯ ಪ್ರಾಥಾರ್ಮಿಕ ಶಾಲೆಯಲ್ಲಿ ಶಿಬಿರ ನಡೆಯಲಿದ್ದು,…
ಮಡಿಕೇರಿ ಡಿ.25 NEWS DESK : ಕುಶಾಲನಗರ ಸಮೀಪದ ಬೊಳ್ಳೂರು ಗ್ರಾಮದಲ್ಲಿರುವ ಐಶ್ವರ್ಯ ಪಬ್ಲಿಕ್ ಸ್ಕೂಲ್ ಹಾಗೂ ಪದವಿ ಪೂರ್ವ ಕಾಲೇಜಿನ ‘ನೃತ್ಯ ಕಲಾಂಜಲಿ’ ವಾರ್ಷಿಕೋತ್ಸವ ಡಿ.26 ರಂದು ನಡೆಯಲಿದೆ. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪುಲಿಯಂಡ ರಾಮ್ ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ.ಎಲ್ ಚಿದಾನಂದ ಕುಮಾರ್ ಮುಖ್ಯ ಅತಿಥಿಗಳಾಗಿ ಮತ್ತು ವೀರಾಜಪೇಟೆ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಹಾಗೂ ಕೊಡಗು ಜಿಲ್ಲಾ ಪಿಯು ಕಾಲೇಜು ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಎನ್.ಕೆ.ಜ್ಯೋತಿ ಅವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರಮುಖರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಪೋಕ್ಲು ಡಿ.25 NEWS DESK : ಸ್ಪಷ್ಟವಾದ ಗುರಿ ಮತ್ತು ದೃಷ್ಟಿ ಇದ್ದಲ್ಲಿ ನಾವು ಯಶಸ್ಸನ್ನು ಕಾಣಲು ಸಾಧ್ಯ ಎಂದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಹೇಳಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಪೆರಾಜೆ, ಪೆರಾಜೆ ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಒಕ್ಕೂಟ ಮತ್ತೆ ಗ್ರಾಮ ಗೌಡ ಸಮಿತಿ ಪೆರಾಜೆ ಸಂಯುಕ್ತ ಆಶ್ರಯದಲ್ಲಿ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಅರೆಭಾಷೆ ಕೂಡ್ಕಟ್ಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಪೆರಾಜೆ ಊರು ಅರೆಭಾಷೆಯ ತವರೂರು ಎಂದ ಅವರು ಅರೆಭಾಷೆ ಜನಾಂಗದಲ್ಲಿರುವ ವಿಶಿಷ್ಟ ಆಚಾರ-ವಿಚಾರ ಪದ್ಧತಿ ಪರಂಪರೆಯ ಬಗ್ಗೆ ಬೆಳಕು ಚೆಲ್ಲಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾಷೆ ಅವನತಿ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ…
ನಾಪೋಕ್ಲು ಡಿ.25 NEWS DESK : ನಾಪೋಕ್ಲು ಹೋಬಳಿ ವ್ಯಾಪ್ತಿಯ ವಿವಿಧ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ನಾಪೋಕ್ಲುವಿನಲ್ಲಿ 20 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾದ ಕೊಡವ ಸಮಾಜ ರಸ್ತೆಯ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ನಾಣಯ್ಯ ಹಾಗೂ ಗ್ರಾಮಸ್ಥರು ಹದಗೆಟ್ಟ ರಸ್ತೆ ದುರಸ್ತಿಗೆ ಮನವಿ ಮಾಡಿ ಕೋರಿಕೆ ಮೇರೆಗೆ ಪಂಚಾಯತ್ ರಾಜ್ ಇಲಾಖೆಯ ಮೂಲಕ ಕೊಡವ ಸಮಾಜ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಬಾಕಿ ಉಳಿದಿರುವ ಅಜ್ಜಿಮುಟ್ಟ ಮೂಲಕ ಎಮ್ಮೆಮಾಡು ಸಂಪರ್ಕಿಸುವ ಮೂರುವರೆ ಕಿಲೋಮೀಟರ್ ಈ ರಸ್ತೆಯನ್ನು ಪಂಚಾಯತ್ ರಾಜ್ ಇಲಾಖೆಯ ಪ್ರಗತಿಪತ ಯೋಜನೆ ಮೂಲಕ ಅಭಿವೃದ್ಧಿಪಡಿಸಲಾಗುವುದು ಎಂದರು. ವಲಯ ಕಾಂಗ್ರೆಸ್ ಅಧ್ಯಕ್ಷ ಮಾಚೆಟ್ಟಿರ ಕುಸು ಕುಶಾಲಪ್ಪ, ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭ ಗ್ರಾ.ಪಂ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಹಾಗೂ ಸದಸ್ಯರು, ಕೊಡವ ಸಮಾಜದ ಉಪಾಧ್ಯಕ್ಷ ಕರವಂಡ ಲವನಾಣಯ್ಯ ಪದಾಧಿಕಾರಿಗಳು, ಸದಸ್ಯರು,…
ನಾಪೋಕ್ಲು ಡಿ.25 NEWS DESK : ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ವತಿಯಿಂದ ಆಯೋಜಿಸಲಾದ ಜಿಲ್ಲಾ ಮಟ್ಟದ ಚಿತ್ರಕಲಾಸ್ಪರ್ಧೆಯಲ್ಲಿ ಏಳು ಶಿಕ್ಷಕರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮಡಿಕೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಜಿಮ್ನಾಸ್ಟಿಕ್ ಸಭಾಂಗಣದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಶಿಕ್ಷಕರ ಸಹಪಠ್ಯ ಚಟುವಟಿಕೆ ಸ್ಪರ್ಧೆಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಿಂದ ತಲಾ ಏಳು ಶಿಕ್ಷಕರು ರಾಜ್ಯ ಮಟ್ಟಕ್ಕೆ ಆಯ್ಕೆಯಾದರು. ಭಕ್ತಿ ಗೀತೆ ಗಾಯನ, ಆಶುಭಾಷಣ, ಪ್ರಬಂಧ ಸ್ಪರ್ಧೆ ಸ್ಥಳದಲ್ಲಿ ಆಟೋಪಕರಣ ತಯಾರಿ, ಸ್ಥಳದಲ್ಲಿ ಚಿತ್ರ ಬಿಡಿಸುವಿಕೆ, ಸಾಮಾನ್ಯ ಜ್ಞಾನ- ರಸಪ್ರಶ್ನೆ ಸ್ಪರ್ಧೆ, ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಈ ಏಳು ವಿಭಾಗಗಳಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆ ನಡೆಯಿತು. ತಾಲ್ಲೂಕು ಮಟ್ಟದಲ್ಲಿ ಆಯ್ಕೆಯಾದ ಶಿಕ್ಷಕರು ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು. ಪ್ರಾಥಮಿಕ ಶಾಲಾ ವಿಭಾಗದ ಭಕ್ತಿ ಗೀತೆ ಗಾಯನ ಸ್ಪರ್ಧೆಯಲ್ಲಿ ಗೋಣಿಕೊಪ್ಪಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ರಾಜಶ್ರೀ ಕೆ.ಎಸ್.ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಆಶುಭಾಷಣ ಸ್ಪರ್ಧೆಯಲ್ಲಿ ಹಾತೂರು ಸರ್ಕಾರಿ ಮಾದರಿ ಪ್ರಾಥಮಿಕ…
ಚೆಟ್ಟಳ್ಳಿ ಡಿ.25 NEWS DESK : ಚೆಟ್ಟಳ್ಳಿಯ ಸೆಂಟ್ ಸಬಾಸ್ಟಿನ್ ಚರ್ಚ್ ನಲ್ಲಿ ಕ್ರೈಸ್ತ ಭಾಂದವರು ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಫಾದರ್ ಜರಾಲ್ಡ್ ಸಿಕ್ವೇರಾ ಅವರು ಬಾಲ ಏಸುವಿನ ಪ್ರತಿಕೃತಿಯನ್ನು ಅಲಂಕೃತ ಗೋದಲಿಯಲ್ಲಿ ಇರಿಸಿ ಪೂಜಿಸಿದರು. ನಂತರ ಎಲ್ಲರಿಗೂ ಕ್ರಿಸ್‌ಮಸ್ ಹಾಗೂ ಹೊಸ ವರ್ಷಕ್ಕೆ ಶುಭಕೋರಿದರು. ಕ್ರೈಸ್ತ ಭಾಂದವರು ಸಾಮೂಹಿ ಪ್ರಾರ್ಥನೆ ಸಲ್ಲಿಸಿ, ಕೇಕ್ ಕತ್ತರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.






