ಲೇಖಕ: admin

ಮಡಿಕೇರಿ ಡಿ.24 NEWS DESK : ಭಾಗಮಂಡಲ ಪೊಲೀಸ್ ಠಾಣೆಯ ವತಿಯಿಂದ ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗಮಂಡಲದ ಕಾವೇರಿ ಪದವಿ ಪೂರ್ವ ಕಾಲೇಜು ಹಾಗೂ ಕೆವಿಜಿ ಐಟಿಐ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಅಪರಾಧ ತಡೆ ಸಂಬಂಧಿತ ಕಾನೂನು ಅರಿವು ಮೂಡಿಸಿದರು.

Read More

ಕುಶಾನಲಗರ NEWS DESK ಡಿ.24 : ಕುಶಾಲನಗರದ ಮುಖ್ಯ ರಸ್ತೆಯ  ಕೆನರಾ ಬ್ಯಾಂಕ್ ಬಳಿ ಮಂಗಳವಾರ ಬೆಳಗ್ಗೆ  ವಾಹನವೊಂದು ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ  ಮುಗ್ಧ ಆಕಳು (ಪುಟ್ಟ ಕರು) ಗಂಭೀರ ಗಾಯಗೊಂಡಿತ್ತು. ಅಂದರೆ ವೇಗದಲ್ಲಿ ಬಂದ  ಯಾವುದೋ  ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಕರುವಿನ ಕಣ್ಣ ಕೆಳಗೆ ಬಲವಾದ ಪೆಟ್ಟು ಬಿದ್ದು  ಎರಡು ಮೂರು ಇಂಚಿನಷ್ಟು  ತೂತು ಬಿದ್ದಿತ್ತು. ಕೊಂಬಿನ ಭಾಗವೂ ಘಾಸಿಯಾಗಿತ್ತು. ಹಾಗಾಗಿ ತೀವ್ರತರಹದ ರಕ್ತ ಸ್ರಾವ ವಾಗಿತ್ತು. ಅತ್ತ ತನ್ನ ಕರುಳ ಬಳ್ಳಿಗಾಗಿ ಅಂದರೆ ತನ್ನ ಕರುವಿಗಾಗಿ  ಹುಡುಕಾಡುತ್ತಿದ್ದ ತಾಯಿ ಹಸುವಿಗೆ   ಗಂಭೀರ ಗಾಯಗೊಂಡು ಸಾವು ಬದುಕಿನ ನಡುವೆ ನಿತ್ರಾಣಗೊಂಡಿದ್ದ ಕರುವಿನ ದರ್ಶನವಾದೊಡನೆಯೇ, ಅಯ್ಯೋ ಕಂದಾ ಏನಾಯಿತು ನಿನಗೆ…? ನಿನ್ನ ಈ ಸ್ಥಿತಿಗೆ ಕಾರಣರಾರು ?  ಎಂದು ಘೀಳಿಟ್ಟು ಗೋಳಾಡಿದ ಹೆತ್ತ ಕರುಳು ರಕ್ತ ಸ್ರಾವದಿಂದ ಒದ್ದೆಯಾಗಿದ್ದ ಕಂದಮ್ಮನ ಹಣೆ, ಮುಖ, ಹೊಟ್ಟೆ ಎಲ್ಲವನ್ನು ತನ್ನ ನಾಲಿಗೆಯಿಂದ ಸಾವರಿಸಿ ಕಂದಮ್ಮನು ಅನಭವಿಸುತ್ತಿದ್ದ ನೋವು ನುಂಗಲು ಹರಸಾಹಸ ಪಟ್ಟಿತು. ಮನುಷ್ಯರಂತೆಯೇ ಕಂದಮ್ಮನ ಸ್ಥಿತಿಗೆ ಪರದಾಡಿ ಮನದಲ್ಲೇ ವ್ಯಥೆ…

Read More

ಶ್ರೀಹರಿಕೋಟಾ ಡಿ.24 NEWS DESK : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ (ISRO) ಬಾಹ್ಯಾಕಾಶದಲ್ಲಿ ಮತ್ತೊಂದು ಐತಿಹಾಸಿಕ ಸಾಧನೆಯನ್ನು ಮಾಡಿದೆ. ಅಮೆರಿಕಾದ ಬ್ಲ್ಯೂಬರ್ಡ್ ಬ್ಲ್ಯಾಕ್-2 ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ‘ಬ್ಲೂಬರ್ಡ್ ಬ್ಲಾಕ್-2’ ಉಪಗ್ರಹವನ್ನು ಇಂದು (ಡಿಸೆಂಬರ್ 24) ಬೆಳಿಗ್ಗೆ 8.55ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾ ಉಡ್ಡಯನ ಕೇಂದ್ರದ 2ನೇ ಲಾಂಚ್ ಪ್ಯಾಡ್‌ನಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. LVM3-M6 ಬ್ಲೂಬರ್ಡ್ ಬ್ಲಾಕ್-2 ಉಪಗ್ರಹ ಉಡಾವಣೆಯಾದ ಸುಮಾರು 15 ನಿಮಿಷಗಳ ನಂತರ ಕೆಳ ಭೂಮಿಯ ಕಕ್ಷೆಗೆ ಸೇರಿಸಿತು. ಇದು ಭೂ ಕಕ್ಷೆಯಲ್ಲಿ ನಿಯೋಜಿಸಲಾದ ಅತಿದೊಡ್ಡ ವಾಣಿಜ್ಯ ಸಂವಹನ ಉಪಗ್ರಹವಾಗಿದೆ. ಬ್ಲೂಬರ್ಡ್ ಬ್ಲಾಕ್-2 ಉಪಗ್ರಹವು ಭಾರತೀಯ ನೆಲದಿಂದ ಐಗಿಒ3 ನಿಂದ ಉಡಾವಣೆ ಮಾಡಲಾದ ಅತ್ಯಂತ ಭಾರವಾದ ಪೇಲೋಡ್ ಆಗಿದೆ. ಬ್ಲೂಬರ್ಡ್ ಬ್ಲಾಕ್-2 ಮಿಷನ್ ಜಾಗತಿಕ LEO ಸಮೂಹದ ಭಾಗವಾಗಿದ್ದು, ಇದು ಉಪಗ್ರಹದ ಮೂಲಕ ನೇರ-ಮೊಬೈಲ್ ಸಂಪರ್ಕವನ್ನು ಒದಗಿಸುತ್ತದೆ. ಈ ಸಮೂಹವು 4G ಮತ್ತು 5G ಧ್ವನಿ ಮತ್ತು ವೀಡಿಯೊ ಕರೆಗಳು, ಪಠ್ಯಗಳು, ಸ್ಟ್ರೀಮಿಂಗ್…

Read More

ಕುಶಾಲನಗರ ಡಿ.24 NEWS DESK : ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ರೈತರ ಕಲ್ಯಾಣಕ್ಕಾಗಿ ಜಾರಿಗೊಳಿಸಿದ ಹಲವು ಸುಧಾರಣೆಗಳು ಹಾಗೂ ಕಲ್ಯಾಣ ಕಾರ್ಯಕ್ರಮಗಳ ಸ್ಮರಣೆಗಾಗಿ ಕೂಡಿಗೆ ಕೃಷಿ ಫಾರಂ ನಲ್ಲಿ ರೈತ ದಿನಾಚರಣೆ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್, ಮಣ್ಣು ಹಾಗೂ ನೀರನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗೆ ಹಸ್ತಾಂತರ ಮಾಡಬೇಕಿದೆ. ಇತ್ತೀಚಿನ ದಿನಗಳಲ್ಲಿ ರೈತರು ಬೆಳೆವ  ಬೆಳೆಗಳಿಗೆ ಕೀಟ ಬಾಧೆ ಕಾಡುತ್ತಿದ್ದು ಅದರ ಹತೋಟಿಗೆ ಕೃಷಿ ವಿಜ್ಞಾನಿಗಳು ನೀಡುವ ಸಲಹೆಗಳನ್ನು ರೈತರು ಪಾಲಿಸಬೇಕಿದೆ. ಪ್ರಧಾನ ಮಂತ್ರಿ ಸಣ್ಣ ಆಹಾರ ಸಂಸ್ಕರಣೆ ಹಾಗೂ ಉದ್ಯಮಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯಡಿ ಸಿಗುವ ಸವಲತ್ತುಗಳನ್ನು ರೈತರಿಗೆ ಒದಗಿಸಲಾಗುತ್ತಿದೆ. ಈಗಾಗಲೇ 7.50 ಕೋಟಿ ರೂಗಳ ಸಹಾಯ ಧನದಲ್ಲಿ ಕೊಡಗಿನಲ್ಲಿ 107 ಕೃಷಿಕರು ಪ್ರಯೋಜನ ಪಡೆದುಕೊಂಡಿದ್ದಾರೆ. ಅಲ್ಲದೇ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ಕಾಫಿ, ಜೇನು, ಮೀನು, ಚಪಾತಿ ಸಂಸ್ಕರಣೆ, ಎಣ್ಣೆಯ ಗಾಣಗಳು ಸೇರಿದಂತೆ ವಿವಿಧ ಆಹಾರಗಳ…

Read More

ಮಡಿಕೇರಿ ಡಿ.24 NEWS DESK : ಮೈಸೂರಿನ ವಿದ್ಯಾಶ್ರಮ ಕಾಲೇಜಿನ ವಿದ್ಯಾರ್ಥಿನಿ ಕೊಡಗಿನ ಬಿ.ದಿಯಾ ಭೀಮಯ್ಯಗೆ ಕರ್ನಾಟಕ ಸರ್ಕಾರದ ಬಾಲ ವಿಕಾಸ ಅಕಾಡೆಮಿಯಿಂದ ಕೊಡಲ್ಪಡುವ ರಾಜ್ಯ ಮಟ್ಟದ ಬಾಲ ಗೌರವ ಪ್ರಶಸ್ತಿ ಲಭಿಸಿದೆ.  ಅಕಾಡೆಮಿಯು ಘೋಷಿಸಿದ ಆಯ್ಕೆ ಪಟ್ಟಿಯಂತೆ 202223 ನೇ ಸಾಲಿನ ಜೂನಿಯರ್ ವಿಭಾಗದ ಕ್ರೀಡಾ ಕ್ಷೇತ್ರಕ್ಕೆ ಈ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯನ್ನು ಕುಂದಾನಗರಿ ಬೆಳಗಾವಿಯ ಸುವರ್ಣ ಸೌಧದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್,  ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಜಕ್ಸ್ತಾನ್ ನಲ್ಲಿ ನಡೆಯುತ್ತಿರುವ ಅಸ್ತಾನ ಇಂಟರ್ನ್ಯಾಷನಲ್ ಚಾಲೆಂಜ್ 2025 ಟೂರ್ನಿಯಲ್ಲಿ ಭಾಗವಹಿಸಲು ತೆರಳಿರುವ ದಿಯಾ ಭೀಮಯ್ಯ ಪರವಾಗಿ ಪ್ರಶಸ್ತಿಯನ್ನು ಅವರ ತಾಯಿ ಕುಸುಮ ಅವರು ಸ್ವೀಕರಿಸಿದರು.  ಕರ್ನಾಟಕ ಅಗ್ರ ಶ್ರೇಯಾಂಕದ ಆಟಗಾರ್ತಿಯಾದ ಬಿ.ದಿಯಾ ಮೈಸೂರಿನ ಸ್ಪೋರ್ಟ್ಸ್ ಪಾರ್ಕ್ ನಲ್ಲಿ ಬ್ಯಾಡ್ಮಿಂಟನ್ ತರಬೇತಿಯನ್ನು ಮೇದುರ ಅರುಣ್ ಪೆಮ್ಮಯ್ಯ ಅವರಿಂದ ಪಡೆದಿದ್ದು,…

Read More

ಮಡಿಕೇರಿ ಡಿ.24 NEWS DESK : ಭಾಗಮಂಡಲದ ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವದ ವಿಕಸನ ಕುರಿತಾಗಿ ಸರಳ ಶಾರೀರಿಕ ವ್ಯಾಯಾಮದ ಶಿಬಿರ ನಡೆಯಿತು. ಗೋಣಿಕೊಪ್ಪಲಿನ ಹೊಳೆಕರೆ ಚಂಗಪ್ಪ ಅವರು ವಿದ್ಯಾರ್ಥಿಗಳಿಗೆ ವ್ಯಾಯಾಮದ ಆಯಾಮಗಳನ್ನು ಹೇಳಿಕೊಟ್ಟರು. ಅಲ್ಲದೇ ವಿದ್ಯಾರ್ಥಿಗಳಿಗೆ ಚಂಗಪ್ಪ ಅವರು ಬರೆದ “ಬದಕ್ ನ ಸಿನ್ಮಲಿ ಒಂದು ಒಳ್ಳ ಪಾರ್ಟ್” ಎಂಬ ಪುಸ್ತಕವನ್ನು ಉಚಿತವಾಗಿ ವಿತರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಕೆ.ಜೆ.ದಿವಾಕರ್ ಮತ್ತು ರಾಜ್ಯಶಾಸ್ತ್ರ ಉಪನ್ಯಾಸಕರಾದ ದಾಮೋದರ್ ನಾಯಕ್  ಉಪಸ್ಥಿತರಿದ್ದರು.

Read More

ನಾಪೋಕ್ಲು ಡಿ.24 NEWS DESK : ಗ್ರಾಮಗಳು ಅಭಿವೃದ್ಧಿ ಹೊಂದಿದರೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಾಜಿ ಶಾಸಕ ಕೊಂಬಾರನ ಜಿ.ಬೋಪಯ್ಯ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಟ್ಟಗೇರಿ ವಲಯದ ವತಿಯಿಂದ ಮೇಕೇರಿ ಗೌರಿ ಶಂಕರ ದೇವಾಲಯದಲ್ಲಿ ಆಯೋಜಿಸಿದ ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ ಮತ್ತು 1500 ಹೊಸ ಸದಸ್ಯರ ಸೇರ್ಪಡೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸದೃಢ ಸಮಾಜ ನಿರ್ಮಾಣವಾಗಬೇಕಾದರೆ ಎಲ್ಲರ ಸಹಕಾರ ಅವಶ್ಯಕ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಯೋಜಿಸಲಾಗುತ್ತಿರುವ ಜನಪರ ಕಾರ್ಯಕ್ರಮಗಳಿಂದಾಗಿ ಗ್ರಾಮೀಣ ಜನರು ಸದೃಢರಾಗಲು ಸಹಕಾರಿಯಾಗಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳುವಂತಾಗಬೇಕೆಂದು ಯೋಜನೆಯ ಬಗ್ಗೆ ಬೆಳಕು ಚೆಲ್ಲಿ ಶುಭ ಹಾರೈಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ ಅವರು ಮಾತನಾಡಿ, ನಮ್ಮ ಕೊಡಗು…

Read More

ನಾಪೋಕ್ಲು ಡಿ.29 NEWS DESK : ಬಲ್ಲಮಾವಟಿ ಗ್ರಾಮದ ಕೃಷಿಕ ಚೀಯಕಪೂವಂಡ ಮಿಥುನ್ ಚಂಗಪ್ಪ ಅವರ ಕೃಷಿ ಚಟುವಟಿಕೆಯನ್ನುಗುರುತಿಸಿ ಕೃಷಿ ಜಾಗರಣ್ ವತಿಯಿಂದ ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಪ್ರಶಸ್ತಿ-2025ಅನ್ನು ನೀಡಿ ಗೌರವಿಸಲಾಯಿತು. ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಮಿಥುನ್ ಚಂಗಪ್ಪ ಅವರು ಈಪ್ರಶಸ್ತಿಯನ್ನು ಮಾಜಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ನಾಪೋಕ್ಲುವಿನ ಫಾರ್ಮರ್ ಪ್ರೊಡ್ಯೂಸರ್ ಆರ್ಗನೈಸೇಷನ್ ಮಿಥುನ್ ಅವರ ಹೆಸರನ್ನು ಪ್ರಶಸ್ತಿಗೆ ಶಿಫಾರಸ್ಸು ಮಾಡಿತ್ತು. ವರದಿ : ದುಗ್ಗಳ ಸದಾನಂದ. 

Read More

ಮಡಿಕೇರಿ ಡಿ.24 NEWS DESK : ಮಡಿಕೇರಿ ನಗರಸಭೆ ಸ್ಥಾಯಿ ಸಮಿತಿಗೆ ಅವಿರೋಧವಾಗಿ ಬಿಜೆಪಿಯ 4 ಮಂದಿ ಸದಸ್ಯರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆಯ್ಕೆ. ತೆರಿಗೆ ನಿರ್ಧಾರ ಮತ್ತು ಹಣಕಾಸು ಸಮಿತಿಗೆ ಅರುಣ್ ಶೆಟ್ಟಿ, ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಸಮಿತಿಗೆ ಎಸ್.ಸಿ.ಸತೀಶ್, ಪಟ್ಟಣ ಯೋಜನೆ ನಗರ ಅಭಿವೃದ್ಧಿ ಸಮಿತಿಗೆ ಅಪ್ಪಣ್ಣ, ಲೆಕ್ಕಪತ್ರ ಸಮಿತಿ ಅಧ್ಯಕ್ಷರಾಗಿ ಶಾರದ ನಾಗರಾಜ್ ಅವರುಗಳು ಆಯ್ಕೆಯಾಗಿದ್ದಾರೆ. ಮಡಿಕೇರಿ ನಗರ ಸಭೆ ಅಧ್ಯಕ್ಷೆ ಕಲಾವತಿ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆ ನಡೆದಿದೆ.

Read More

ಮಡಿಕೇರಿ ಡಿ.24 NEWS DESK : ಕೊಡಗು ಜಿಲ್ಲಾಡಳಿತ ಭವನದ ಮುಂಭಾಗದ ತಡೆಗೋಡೆಯ 2ನೇ ಹಂತದ ಕಾಮಗಾರಿ 3.45 ಕೋಟಿ ರೂ ವೆಚ್ಚದಲ್ಲಿ ಪೂರ್ಣಗೊಂಡಿದ್ದು, ಲೋಕಾಯುಕ್ತ ಮುಖ್ಯ ಇಂಜಿನಿಯರ್ ಮತ್ತು ಅಧಿಕಾರಿಗಳ ತಂಡ ಕಾಮಗಾರಿ ಪರಿಶೀಲನೆ ನಡೆಸಿದರು. ಕಾಮಗಾರಿಯನ್ನು ವೀಕ್ಷಿಸಿದ ಲೋಕಾಯುಕ್ತ ಮುಖ್ಯ ಇಂಜಿನಿಯರ್ ರಮೇಶ್, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಗಳಿಂದ ಮಾಹಿತಿ ಪಡೆದರು. ದ್ವಿತೀಯ ಹಂತದ ಕಾಮಗಾರಿಯ ವಿನ್ಯಾಸ, ಬಳಸಲಾದ ತಂತ್ರಜ್ಞಾನ, ಕಾಮಗಾರಿ ಮುಕ್ತಾಯಗೊಂಡ ಅವಧಿ, ಕಾಮಗಾರಿಯಲ್ಲಿ ಬಳಸಲಾದ ವಸ್ತುಗಳ ಗುಣಮಟ್ಟ ಸೇರಿದಂತೆ ವಿವಿಧ ಮಾಹಿತಿಗಳನ್ನು ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಗಳಿಂದ ಪಡೆದುಕೊಂಡರು. ಈ ಸಂದರ್ಭ ಲೋಕಾಯುಕ್ತ ಕಾರ್ಯಪಾಲಕ ಇಂಜಿನಿಯರ್ ಅರವಿಂದ್, ಕೊಡಗು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಇಬ್ರಾಹಿಂ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸತೀಶ್, ಗಿರೀಶ್ ಮತ್ತಿತ್ತರರು ಹಾಜರಿದ್ದರು.

Read More