ಲೇಖಕ: admin

ಚೆಟ್ಟಳ್ಳಿ ಡಿ.25 NEWS DESK : ಚೆಟ್ಟಳ್ಳಿ ಅಯ್ಯಪ್ಪ ದೇವಾಲಯದ ವಾರ್ಷಿಕ ಮಹೋತ್ಸವ ಹಾಗೂ ಮಂಡಲ ಪೂಜೋತ್ಸವ ಡಿ.27 ರಂದು ನಡೆಯಲಿದೆ ಎಂದು ದೇವಾಲಯ ಸಮಿತಿ‌ ಕಾರ್ಯದರ್ಶಿ ಕೆ.ಕೆ‌.ಸುರೇಶ್ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಪೂರ್ವಾಹ್ನ 7 ರಿಂದ 8 ಗಂಟೆಯವರೆಗೆ ಗಣಪತಿ ಹವನ, 10 ಗಂಟೆಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ, 12.30ಕ್ಕೆ ಮಧ್ಯಾಹ್ನದ ಪೂಜೆ, ಮಂಗಳಾರತಿ ಮತ್ತು ಪ್ರಸಾದ ವಿತರಣೆ  ನಂತರ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4 ಗಂಟೆಗೆ ಶ್ರೀ ವಿನಾಯಕ ದೇವಸ್ಥಾನದಿಂದ ದೇವರ ಅಲಂಕೃತ ಮಂಟಪದೊಂದಿಗೆ ಶ್ರೀ ಅಯ್ಯಪ್ಪ ದೇವಸ್ಥಾನದ ವರೆಗೆ ಪಾಲಕೊಂಬು ಮೆರವಣಿಗೆ ನಡೆಯಲಿದೆ. ರಾತ್ರಿ 8 ಗಂಟೆಗೆ ದೀಪಾರಾಧನೆ, ರಂಗಪೂಜೆ, ಮಹಾ ಪೂಜೆಯ ನಂತರ ಅನ್ನಸಂತರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭಜನೆ ಹಾಗೂ ಇತರ ನೃತ್ಯ ಕಾರ್ಯಕ್ರಮಗಳು ನೆರವೇರಲಿದೆ.

Read More

ಶಹಜಹಾನ್‌ಪುರ NEWS DESK ಡಿ.25 : ಹಳಿ ದಾಟುತ್ತಿದ್ದ ಬೈಕ್ ಗೆ ರೈಲೊಂದು ಡಿಕ್ಕಿಯಾದ ಪರಿಣಾಮ ದಂಪತಿ ಹಾಗೂ ಅವರ ಇಬ್ಬರು ಮಕ್ಕಳು ಸೇರಿದಂತೆ ಐವರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಈ ಐವರು ಒಂದೇ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೌಜಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ರೌಜಾ ರೈಲ್ವೆ ನಿಲ್ದಾಣದ ಬಳಿ ಪಾದಚಾರಿ ಮಾರ್ಗದ ಮೂಲಕ ಬೈಕ್ ರೈಲು ಮಾರ್ಗವನ್ನು ದಾಟುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ದ್ವಿವೇದಿ ತಿಳಿಸಿದ್ದಾರೆ.

Read More

ಚಿತ್ರದುರ್ಗ NEWS DESK ಡಿ.25 : ಲಾರಿ ಡಿಕ್ಕಿಯಾಗಿ ಖಾಸಗಿ ಸ್ಲೀಪರ್ ಕೋಚ್ ಬಸ್​ಗೆ ಬೆಂಕಿ ಹೊತ್ತಿಕೊಂಡು ಉರಿದ ಪರಿಣಾಮ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಈ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಮಧ್ಯರಾತ್ರಿ ಸಂಭವಿಸಿದೆ. ಬೆಂಗಳೂರಿನಿಂದ ಹೊರಟಿದ್ದ ಈ ಬಸ್ಸಿನಲ್ಲಿ 29 ಮಂದಿ ಪ್ರಯಾಣಿಸುತ್ತಿದ್ದರು. 9 ಮಂದಿ ಮೃತಪಟ್ಟಿರುವುದಾಗಿ ಪ್ರಾಥಮಿಕ ವರದಿ ತಿಳಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಘಟನೆ ಕುರಿತು ಬೇಸರ ವ್ಯಕ್ತಪಡಿಸಿ ಪರಿಹಾರ ಘೋಷಿಸಿದ್ದಾರೆ. ಮೃತರ ಕುಟುಂಬಕ್ಕೆ ರೂ.2 ಲಕ್ಷ ಹಾಗೂ ಗಾಯಾಳುಗಳಿಗೆ ರೂ.50 ಸಾವಿರ ನೀಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘಟನೆ ಕುರಿತು ದು:ಖ ವ್ಯಕ್ತಪಡಿಸಿದ್ದಾರೆ.

Read More

ಮೂರ್ನಾಡು ಡಿ.25 NEWS DESK : ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮವಾದ ನ್ಯಾಯಯುತವಾದ ಗುರಿಯನ್ನು ಇಟ್ಟುಕೊಳ್ಳಬೇಕು. ಹಾಗೆಯೇ ಆ ಗುರಿಯನ್ನು ತಲುಪಲು ಅದಮ್ಯ ಪ್ರಯತ್ನ ಇದ್ದಾಗ ಮಾತ್ರ ಸಾಧನೆಗೈಯುವುದರೊಂದಿಗೆ ಸಮಾಜದಲ್ಲಿ ಮಹತ್ತರವಾದ ಬದಲಾವಣೆಯನ್ನು ತರಲು ಸಾಧ್ಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ಚರ್ಯ ಹೇಳಿದರು. ಮೂರ್ನಾಡು ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿದ್ಯಾಸಂಸ್ಥೆಯ 26ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಹೊರಹೊಮ್ಮಿಸುವ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪೋಷಕರ ಪಾತ್ರ ಪ್ರಮುಖವಾದದ್ದು, ಈಗಿನ ಮಕ್ಕಳು ಸಣ್ಣ ಸಣ್ಣ ವಿಚಾರಗಳಿಗೆ ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಇವರಲ್ಲಿ ಧೈರ್ಯವನ್ನು ತುಂಬುವ ಕಾರ್ಯವಾಗಬೇಕು ಎಂದು ತಿಳಿಸಿದರು. ಇಂತಹ ಶಾಲೆಗಳಿಂದಲೆ ದೇಶವನ್ನು ಮುನ್ನೆಡುಸುವಂತಹ ಪ್ರತಿಭಾವಂತ ವ್ಯಕ್ತಿಗಳು ರೂಪುಗೊಳ್ಳುತ್ತಾರೆ ಎಂದು ಹೇಳಿದರು. ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಮುಕ್ಕಾಟಿರ ರವಿ ಚೀಯಣ್ಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ಉತ್ತಮ ಜೀವನದ ಮೌಲ್ಯಗಳು, ಸಂಸ್ಕಾರಗಳನ್ನು ರೂಢಿಸಿಕೊಳ್ಳಬೇಕು. ಈಗಿನ ಮಕ್ಕಳು ಆರೋಗ್ಯಕರವಲ್ಲದ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿರುವುದು…

Read More

ನವದೆಹಲಿ NEWS DESK ಡಿ.25 : ಥಾಯ್ಲೆಂಡ್‌ ಮತ್ತು ಕಾಂಬೋಡಿಯಾ ದೇಶಗಳ ನಡುವಿನ ಗಡಿ ಸಂಘರ್ಷ ವಿವಾದಿತ ಪ್ರದೇಶದಲ್ಲಿರುವ ಪ್ರಸಕ್ತ ಕಾಂಬೋಡಿಯಾ ಗಡಿಯೊಳಗೆ ಬರುವ 9 ಮೀಟರ್‌ (ಸುಮಾರು 30 ಅಡಿ) ಎತ್ತರದ ವಿಷ್ಣುವಿನ ವಿಗ್ರಹವನ್ನು ಥಾಯ್ಲೆಂಡ್‌ ಸೇನೆ ಬುಲ್ಡೋಜರ್‌ ಬಳಸಿ ಧ್ವಂಸಗೊಳಿಸಿದೆ. ಇದು ಇತ್ತೀಚಿನ ದಿನಗಳಲ್ಲಿ ಹಿಂದೂ ಮತ್ತು ಬೌದ್ಧರ ಪ್ರಮುಖ ಪ್ರಾರ್ಥನಾ ಸ್ಥಳವಾಗಿ ಹೊರಹೊಮ್ಮಿತ್ತು. ಆದರೆ ಈ ಪ್ರದೇಶ ತನಗೆ ಸೇರಿದ್ದೆಂದು ವಾದಿಸುತ್ತಿರುವ ಥಾಯ್ಲೆಂಡ್‌ ಸೇನೆ ವಿಗ್ರಹವನ್ನು ಬೀಳಿಸಿದೆ. ಈ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ.

Read More

ಮಡಿಕೇರಿ ಡಿ.25 NEWS DESK : ಕನಾ೯ಟಕ ಶಾಸ್ತ್ರೀಯ ಸಂಗೀತದ ಸೀನಿಯರ್ ವಿಭಾಗದಲ್ಲಿ ತೇಗ೯ಡೆಯಾಗಿರುವ ಮಡಿಕೇರಿಯ ಪ್ರತಿಭಾವಂತ ವಿದ್ಯಾಥಿ೯ ತಾಪಂಡ ಹಷಿ೯ತ್ ಪೊನ್ನಪ್ಪ ಕಲಾಪ್ರತಿಭೋತ್ಸವದಲ್ಲಿ ರಾಜ್ಯಮಟ್ಟಕ್ಕೂ ಆಯ್ಕೆಯಾಗಿ ಸಾಧನೆ ತೋರಿದ್ದಾರೆ. 2025ನೇ ಸಾಲಿನಲ್ಲಿ ಕನಾ೯ಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದಶ೯ನ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರು ವತಿಯಿಂದ ನಡೆಸಲಾದ ಕನಾ೯ಟಕ ಶಾಸ್ತ್ರೀಯ ಸಂಗೀತದ ಸೀನಿಯರ್ ವಿಭಾಗದಲ್ಲಿ ಕೊಡಗಿನಿಂದ ಪರೀಕ್ಷೆ ಬರೆದಿದ್ದ ಏಕೈಕ ವಿದ್ಯಾಥಿ೯ ತಾಪಂಡ ಹಷಿ೯ತ್ ಪೊನ್ನಪ್ಪ, 500 ಅಂಕಗಳಿಗೆ 285 ಅಂಕ ಪಡೆದು ದ್ವಿತೀಯ ದಜೆ೯ಯಲ್ಲಿ ತೇಗ೯ಡೆಯಾಗಿದ್ದಾರೆ. ಇವರು ಮಡಿಕೇರಿಯ ದೇಚೂರು ನಿವಾಸಿ ತಾಪಂಡ ಲೋಕೇಶ್ ಮತ್ತು ಶುಭಾ ದಂಪತಿಯ ಪುತ್ರರಾಗಿದ್ದು ನಗರದ ಸಂಗೀತ ಶಿಕ್ಷಕಿ ಸರೋಜಾ ಸುಧಾಕರ್ ಬಳಿ ಸಂಗೀತಾಭ್ಯಾಸ ಮಾಡುತ್ತಿದ್ದಾನೆ. ಮಡಿಕೇರಿಯ ಸಂತ ಜೋಸೇಫರ ಪ್ರೌಢ ಶಾಲೆಯಲ್ಲಿ 10ನೇ ತರಗತಿ ವಿದ್ಯಾಥಿ೯ಯಾಗಿದ್ದಾನೆ. ಕನ್ನಡ ಮತ್ತು ಸಂಸ್ಕೖತಿ ಇಲಾಖೆಯು ಮಡಿಕೇರಿಯಲ್ಲಿ ನಡೆಸಿದ ಕಲಾ ಪ್ರತಿಭೋತ್ಸವದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ತಾಪಂಡ ಹಷಿ೯ತ್ ಪೊನ್ನಪ್ಪ, ಕಿಶೋರ ಪ್ರತಿಭೆಯಲ್ಲಿ ಪ್ರಥಮ ಸ್ಥಾನ…

Read More

ಮಡಿಕೇರಿ ಡಿ.25 NEWS DESK : ಚಿಕ್ಕಮಂಗಳೂರಿನ ಬಾಳೆ ಹೊನ್ನೂರಿನಲ್ಲಿ ನಡೆಯುತ್ತಿರುವ ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಎರಡನೇಯ ದಿನದ  ಕಾರ್ಯಕ್ರಮದಲ್ಲಿ ಮಡಿಕೇರಿ‌ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ವತಿಯಿಂದ ಉಮ್ಮತಾಟ್ ಪ್ರದರ್ಶನ ನಡೆಯಿತು. ಮೂವೆರ ಸರಿತ ಹರೀಶ್, ಚೊಟ್ಟೆಯಂಡ ಮಿಥಿಲ ಸಂಜು, ಓಡಿಯಂಡ ಜಾನ್ಸಿ ರಾಜ,ಪೊನ್ನಚೆಟ್ಟೀರ ಡಾಟಿ ಅರುಣ್, ಕನ್ನಂಡ ಶೀತಲ್ ರಿವಿನ್, ಐಚೆಟ್ಟೀರ ಸುನಿತ ಮಾಚಯ್ಯ, ಮಿನ್ನಂಡ ಜಾನ್ಸಿ ಮಾದಪ್ಪ,ತಾಪಂಡ ಶುಭಾ ಲೋಕೇಶ್, ಕನ್ನಂಡ ಪ್ರಮಿತ ಉತ್ತಪ್ಪ ಭಾಗವಹಿಸಿದರು.

Read More

ಮಡಿಕೇರಿ ಡಿ.25 NEWS DESK : ಏಸು ಕ್ರಿಸ್ತ ಜನನದ ಸಂಕೇತವಾದ ಕ್ರಿಸ್‍ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಿದರು. ವಿವಿಧ ಚರ್ಚ್‍ಗಳಲ್ಲಿ ರಾತ್ರಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಏಸು ಧರೆಗಿಳಿದನೆಂದು ಗೋದಲಿಯಲ್ಲಿ ಬಾಲಯೇಸುವಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಶ್ರದ್ಧಾಭಕ್ತಿಯನ್ನು ಮೆರೆದರು. ಮಡಿಕೇರಿಯ ಸಂತ ಮೈಕಲರ ಚರ್ಚ್ ಆವರಣದಲ್ಲಿ ನಿರ್ಮಿಸಲಾಗಿದ್ದ ಗೋದಲಿಯಲ್ಲಿ ಬಾಲ ಏಸುವಿನ ಪ್ರತಿಕೃತಿಯನ್ನಿರಿಸಿ ಪೂಜಿಸಲಾಯಿತು. ಧರ್ಮಗುರು ಜಾರ್ಜ್ ದೀಪಕ್ ಪೂಜೆ ಸಲ್ಲಿಸಿ, ಏಸುವಿನ ಸಂದೇಶವನ್ನು ಸಾರಿದರು. ಸಂತ ಮೈಕಲರ ಸಂಸ್ಥೆಯ ಪ್ರತಿನಿಧಿ ಸಂಜಯ್ ಹಾಗೂ ಪ್ರಮುಖರು ಇದ್ದರು.

Read More

ವಿರಾಜಪೇಟೆ ಡಿ.25 NEWS DESK : ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವುದು ಅವಶ್ಯ. ಈ ನಿಟ್ಟಿನಲ್ಲಿ ಶಾಲಾ ಮಕ್ಕಳಿಗೆ ಮೂಲಸೌಕರ್ಯ ಒದಗಿಸಲು ಅಗತ್ಯ ಸಹಕಾರ ನೀಡುವುದಾಗಿ ದಾನಿಗಳು ಹಾಗೂ ಮಾಜಿ ಸೈನಿಕ ಕ್ಯಾಪ್ಟನ್ ಬಾಚುರ ಎಸ್ ಪೂಣಚ್ಚ ಭರವಸೆ ನೀಡಿದರು. ಕರಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಟಿ ಶರ್ಟ್ ಹಾಗೂ ಜೆರ್ಸಿ ವಿತರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ತನಗೆ ವಿದ್ಯೆ ನೀಡಿದ ಶಾಲೆಗೆ ಏನಾದರೊಂದು ಕೊಡುಗೆ ನೀಡಬೇಕು ಎನ್ನುವ ನಿಟ್ಟಿನಲ್ಲಿ ಈ ಶಾಲೆಯಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ತನ್ನಿಂದ ಆದ ಸಹಾಯವನ್ನು ನೀಡಿದ್ದೇನೆ. ಮುಂದಿನ ದಿನಗಳಲ್ಲಿಯೂ ಸಾಧ್ಯವಾದಷ್ಟು ನೆರವು ನೀಡುತ್ತೇನೆ. ಇಲ್ಲಿಂದ ವಿದ್ಯೆ ಪಡೆದ 30 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ಕ್ಯಾಪ್ಟನ್ ಆಗಿ ನಿರ್ವಋತ್ತಿಗೊಂಡಿದ್ದೇನೆ. ಇದು ನನ್ನ ಮೈಲಿಗಲ್ಲು. ಸಮಾಜಕ್ಕೆ ನಾವು ಏನಾದರೊಂದು ಕೊಡುಗೆ ನೀಡಬೇಕು. ಇಲ್ಲಿನ ವಿದ್ಯಾರ್ಥಿಗಳು ಕೂಡ ಉನ್ನತ ವಿದ್ಯಾಭ್ಯಾಸ ಪಡೆದು ಸೇನೆಗೆ ಸೇರುವಂತಾಗಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.…

Read More

ಬೆಂಗಳೂರು ಡಿ.24 NEWS DESK : ರಾಜ್ಯ ಸರ್ಕಾರಿ ನೌಕರರ ಸಂಘದ 2026ನೇ ವರ್ಷದ ಕ್ಯಾಲೆಂಡರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು,  ಬಿಡುಗಡೆಗೊಳಿಸಿ ಸರ್ಕಾರಿ ನೌಕರರಿಗೆ ಹೊಸ ವರ್ಷದ ಶುಭ ಕೋರಿದರು.‌ ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಕ್ಷರಿ ಹಾಗೂ ಸಂಘದ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

Read More