ಲೇಖಕ: admin

ಮಡಿಕೇರಿ ಡಿ.23 NEWS DESK : ಬದುಕು ಇತರರ ಕಷ್ಟ ಸಂಕಷ್ಟಗಳಿಗೆ ಪರಿಹಾರವಾಗುವ ರೀತಿಯಲ್ಲಿ ಇರಬೇಕು. ಸ್ವರ್ಗ ಎಂಬುದು ಇದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ ಆದರೆ ಅದನ್ನು ಅನಭವಿಸಬೇಕಾದರೆ ನಿರಾಶ್ರಿತ, ನಿರ್ಗತಿಕ ಹಾಗೂ ಅನಾಥರ ಸೇವೆಯನ್ನು ಮಾಡುವ ಮೂಲಕ ಗಳಿಸಬೇಕು ಎಂದು ತನಲ್ ಟ್ರಸ್ಟ್ ಕೇರಳದ ವಡಗರ ವಿಭಾಗದ ಪ್ರತಿನಿಧಿ ಮೊಹಮ್ಮದ್ ಆಲಿ ಹೇಳಿದರು. ಮಡಿಕೇರಿಯ ತನಲ್ ಆಶ್ರಮದ 8ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ತನಲ್ ಸೇವಾ ಕೇಂದ್ರಗಳ ಅಧೀನದಲ್ಲಿ ದೇಶಾದ್ಯಾಂತ ಮೂರು ಲಕ್ಷದಷ್ಟು ಜನರು ಆಶ್ರಯ ಪಡುತ್ತಿದ್ದಾರೆ. 1330 ಶಾಲೆಗಳು ತನಲ್ ಆದೀನದಲ್ಲಿ ಕಾರ್ಯಚರಿಸುತ್ತಿದ್ದು, ಇನ್ನು ಅನೇಕ ಜನ ಹಸಿವು, ಬಡತನದಿಂದ ಬದುಕು ಸಾಗಿಸುತ್ತಿದ್ದಾರೆ ಎಂದು ಹೇಳಿದರು. ಅಧ್ಯಕ್ಷ ಮೊಹಮ್ಮದ್ ಮುಸ್ತಫ ತನಲ್ ಆಶ್ರಮದ ಪ್ರಾರಂಭ ಹಾಗೂ ಅದರ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿ, ಎಲ್ಲರನ್ನು ಸ್ವಾಗತಿಸಿದರು. ಅಬ್ದುಲಾ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಬಾಳೆಯಡ ದಿವ್ಯ ವಾರ್ಷಿಕ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿ ಕರಾಮತ್ತುಲ್ಲಾ ಖಾನ್ ವರ್ಷದ…

Read More

ಮಡಿಕೇರಿ ಡಿ.23 NEWS DESK : ಮಡಿಕೇರಿ ತಾಲ್ಲೂಕಿನ ‘ಮರಗೋಡು’ ಗ್ರಾಮವನ್ನು ಸಂಪರ್ಕಿಸುವ ರಸ್ತೆಗಳು ಕಳೆದ ಒಂದೂವರೆ ದಶಕಗಳಿಂದ ಸೂಕ್ತ ನಿರ್ವಹಣೆ ಇಲ್ಲದೆ ಸಂಪೂರ್ಣವಾಗಿ ಹದಗೆಟ್ಟಿವೆ. ವ್ಯವಸ್ಥಿತ ರಸ್ತೆ ನಿರ್ವಹಣೆಗೆ ಆಗ್ರಹಿಸಿ ಡಿ.26 ರಂದು ಮರಗೋಡಿನಲ್ಲಿ ‘ರಸ್ತೆ ತಡೆ’ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಹಾಗೂ ಮರಗೋಡು ಆಟೋ ಚಾಲಕರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಹದಗೆಟ್ಟ ರಸ್ತೆಗಳ ಬಗ್ಗೆ ಮಾಹಿತಿ ನೀಡಿದ ಮರಗೋಡು ಆಟೋ ಚಾಲಕರ ಸಂಘದ ಅಧ್ಯಕ್ಷ ಪಿ.ಟಿ.ನಂದಕುಮಾರ್ ಅವರು, ಮರಗೋಡು ಗ್ರಾಮವನ್ನು ಜಿಲ್ಲಾ ಕೇಂದ್ರಕ್ಕೆ ಬೆಸೆಯುವ ‘ಮಡಿಕೇರಿ-ಕತ್ತಲೆಕಾಡು-ಹುಲಿತಾಳ-ಮರಗೋಡು-ಕಟ್ಟೆಮಾಡು’ ರಸ್ತೆ ಹಾಗೂ ‘ಮರಗೋಡು-ಅರೆಕಾಡು-ಸಿದ್ದಾಪುರ’ ರಸ್ತೆ ಕನಿಷ್ಟ ದುರಸ್ತಿ ಕಾರ್ಯವನ್ನು ಕಾಣದೆ ಹೊಂಡಗುಂಡಿಗಳಿಂದ ಕೂಡಿದ್ದು, ವಾಹನ ಹಾಗೂ ಜನ ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿರುವುದಾಗಿ ಹೇಳಿದರು. ಕಳೆದ ಸುಮಾರು ಹದಿನೈದು ವರ್ಷಗಳಿಂದ ಮರಗೋಡು ಗ್ರಾಮ ಸಂಪರ್ಕ ರಸ್ತೆಗಳನ್ನು ದುರಸ್ತಿ ಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಕೇಳುತ್ತಲೆ ಬಂದಿದ್ದೇವೆ. ಆಯಾ ಸಂದರ್ಭಗಳಲ್ಲಿ ಆಶ್ವಾಸನೆಯಷ್ಟೆ ದೊರಕುತ್ತಿದ್ದು, ರಸ್ತೆ ದುರಸ್ತಿ ಪಡಿಸುವ ಯಾವ ಕಾರ್ಯವು ನಡೆದಿಲ್ಲವೆಂದು…

Read More

ವಿರಾಜಪೇಟೆ ಡಿ.23 NEWS DESK : ವಿರಾಜಪೇಟೆ ತಾಲ್ಲೂಕು ಪಾಲಿಬೆಟ್ಟ ಭಾಗದಲ್ಲಿ ಶಾಸಕರ ರೂ.20 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ವಿವಿಧ ರಸ್ತೆಗಳನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಉದ್ಘಾಟಿಸಿದರು. ಈ ಭಾಗದ ಜನರ ಬೇಡಿಕೆಗಳಿಗೆ ಸ್ಪಂದಿಸುತ್ತಿರುವ ಶಾಸಕರು ಹಿಂದೆಂದೂ ಕಾಣದ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತಿರುವುದು ಈ ಭಾಗದ ಏಳಿಗೆಗೆ ಕಾರಣವಾಗಿದ್ದು, ಇದು ಮರೆಯಲಾಗದ ಸುವರ್ಣ ಕಾಲ ಎಂದು ಗ್ರಾಮಸ್ಥರು ಬಣ್ಣಿಸಿದ್ದರು. ಈ ಸಂದರ್ಭ ವಲಯ ಅಧ್ಯಕ್ಷರು ಕಾಳಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗಣೇಶ್, ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷ ಹನೀಫ್, ತಾಲ್ಲೂಕು ಅಲ್ಪಸಂಖ್ಯಾತರ ಅಧ್ಯಕ್ಷರು ರಫೀಕ್, ರಜಾಕ್, ಪಂಚಾಯಿತಿ ಸದಸ್ಯರು ಪವಿತ್ರ, ನಾಸಿರ್, ಗಣಪತಿ, ಕಂಜಿತಂಡ ದೇಚಿ ಪೂವಣ್ಣ, ಗಣೇಶ್, ಕುಟ್ಟಂಡ ಕುಟ್ಟಪ್ಪ, ಪುಳಿಯಂಡ ಸತ್ಯ ಮಾದಪ್ಪ, ಕೊಂಗಂಡ ಮಾದಪ್ಪ, ಮಾಲೆಟೀರ ಗಣಪತಿ, ಪಕ್ಷದ ಮುಖಂಡರು, ಕಾರ್ಯಕರ್ತರು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

Read More

ಮಡಿಕೇರಿ ಡಿ.23 NEWS DESK : ದಶಕಗಳ ಸಮಸ್ಯೆಯಾಗಿ ಕೊಡಗಿನ ಜಮ್ಮಾ ಹಿಡುವಳಿದಾರರನ್ನು ಕಾಡಿದ್ದ ಜಮ್ಮಾ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ, ಕರ್ನಾಟಕ ಭೂಕಂದಾಯ ಕಾಯ್ದೆಯ ತಿದ್ದುಪಡಿ ವಿದೇಯಕವನ್ನು ಸದನದಲ್ಲಿ ಮಂಡಿಸಿ, ಯಶಸ್ವೀಯಾಗಿ ಅನುಮೋದನೆ ಪಡೆಯುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ  ಅವರಿಗೆ ಯುನೈಟೆಡ್ ಕೊಡವ ಆರ್ಗನೈಸೇಷನ್ – ಯುಕೊ ಸಂಘಟನೆಯ ಸದಸ್ಯರು ಅಭಿನಂದನೆ ಸಲ್ಲಿಸಿದರು. ಶಾಸಕ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಸ್ಮರಣಿಕೆ ನೀಡಿ ಅಭಿನಂದಿಸಿದರು. ನಂತರ ಮಾತನಾಡಿದ ಯುಕೊ ಸಂಘಟನೆಯ ಅಧ್ಯಕ್ಷರಾದ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಸುಮಾರು 7 ದಶಕಗಳಿಂದ ಜೀವಂತವಾಗಿರುವ ಕೊಡಗಿನ ಈ ಸಮಸ್ಯೆಯು ಜಮ್ಮಾ ಹಿಡುವಳಿದಾರರ ಜೀವ ಹಿಂಡಿತ್ತು, ಕೊಡವರಿಗೆ ಜಮ್ಮಾ ಯಾರೂ ನೀಡಿದ ಜಾಗವಲ್ಲ, ಕೊಡವರ ಜಾಗಕ್ಕೆ ಭೂದಾಖಲಾತಿ ವ್ವಸ್ಥೆ ಜಾರಿಗೆ ಬಂದಾಗ ಜಮ್ಮಾ ಎಂದು ವರ್ಗೀಕರಣ ಮಾಡಲಾಯಿತಲ್ಲದೆ, ರಾಜನರಾಗಲಿ, ಬ್ರಿಟಿಷರು ನೀಡಿರುವ ಬಳುವಳಿ ಆಸ್ತಿಯಲ್ಲ. 1956 ರ ವರೆಗೆ ಕೂರ್ಗ್…

Read More

ಮಡಿಕೇರಿ ಡಿ.23 NEWS DESK : ಶ್ರೀ ಅಯ್ಯಪ್ಪ ದೀಪಾರಾಧನಾ ಸಮಿತಿ ವತಿಯಿಂದ ಡಿ.27 ರಂದು ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿ ಶ್ರೀ ಅಯ್ಯಪ್ಪ ದೀಪಾರಾಧನಾ ಉತ್ಸವ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಈ.ಹೇಮಂತ್ ಕುಮಾರ್ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಗರದ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮುಂಜಾನೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಬೆಳಿಗ್ಗೆ 6 ಗಂಟೆಗೆ ನಡೆ ತೆಗೆಯುವುದು, 6.5ಕ್ಕೆ ನಿರ್ಮಲ್ಯ ಪೂಜೆ, 6.30ಕ್ಕೆ ಗಣಪತಿ ಹೋಮ, 8 ಗಂಟೆಗೆ ಅಷ್ಟಾಭಿಷೇಕ ಸೇವೆ, 10.30 ಗಂಟೆಗೆ ತುಳಸಿ ಸಹಸ್ರನಾಮಾರ್ಚನೆ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಮಂಗಳಾರತಿ ಹಾಗೂ ಪ್ರಸಾದ ವಿತರಣೆಯಾಗಲಿದೆ. ಮಧ್ಯಾಹ್ನ 1 ಗಂಟೆಗೆ ಪಾಲಕೊಂಬು ಪ್ರತಿಷ್ಠಾಪನೆ, 1.30 ಗಂಟೆಗೆ ತಾಯಂಬಕಂ (ಚಂಡೆಸೇವೆ) ನಡೆಯಲಿದೆ. ಸಂಜೆ 4 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಚಂಡೆ, ಮೇಳದೊಂದಿಗೆ ನಗರದ…

Read More

ಮಡಿಕೇರಿ NEWS DESK ಡಿ.23 : ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಗ್ರಾಮದ ಶ್ರೀ ಮಹಾಮೃತ್ಯುಂಜಯ ಮಹದೇಶ್ವರ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ಆರಂಭಗೊಂಡಿತು. ಇಂದು ಗಣಪತಿ ಹೋಮ, ಬ್ರಹ್ಮರಾಕ್ಷಸನಿಗೆ ನೈವೇದ್ಯ ಸಮರ್ಪಣೆ, ದುರ್ಗಾಪೂಜೆ, ಹೊರೆಕಾಣಿಕೆ ಸಮರ್ಪಣೆ, ಮಹಾಪೂಜೆ ಮತ್ತು ಧ್ವಜಾರೋಹಣ ನೆರವೇರಿತು. ಡಿ.24 ಮತ್ತು 25 ರಂದು ನೈರ್ಮಲ್ಯ ಬಲಿ, ಧ್ವಜಸ್ತಂಭ ಪೂಜೆ, ಭೂತಬಲಿ ಹಾಗೂ ಮಹಾಪೂಜೆ ಜರುಗಲಿದೆ. ಡಿ.26 ರಂದು ತುಲಭಾರ ಸೇವೆ, ಧ್ವಜಸ್ತಂಭ ಪೂಜೆ, ನೃತ್ಯ ಬಲಿ, ವಸಂತ ಪೂಜೆ, ದೇವರ ಶಯನೋತ್ಸವ ಮತ್ತು ಮಹಾಪೂಜೆ ನಡೆಯಲಿದೆ. ಡಿ.27 ರಂದು ಕವಟ ಪೂಜೆ, ತೈಲಾಭ್ಯಂಜನ, ಪಂಚಭೂತ ಅಭಿಷೇಕ, ಧ್ವಜಸ್ತಂಭ ಪೂಜೆ, ದೇವರು ಜಳಕಕ್ಕೆ ಹೊರಡುವುದು, ದೇವಾಲಯದ ಆವರಣದಲ್ಲಿ ನೃತ್ಯ ಬಲಿ, ನಡೆ ಭಂಡಾರ, ಧ್ವಜಾರೋಹಣ ಮತ್ತು ಮಹಾಪೂಜೆ ಜರುಗಲಿದೆ. ಜಾತ್ರಮಹೋತ್ಸವದ ಕೊನೆಯ ದಿನವಾದ ಡಿ.28 ರಂದು ನವಕ ಕಲಶ ಪೂಜೆ, ಅಭಿಷೇಕ, ಪಂಚಾಮೃತ ಅಭಿಷೇಕ, ಮಹಾಪೂಜೆ, ತೀರ್ಥ ಪ್ರಸಾದ ಹಾಗೂ ಮಂತ್ರಾಕ್ಷತೆ ವಿತರಣೆಯಾಗಲಿದೆ. ಜಾತ್ರಾ ಮಹೋತ್ಸವದ ಆರು…

Read More

ವಿರಾಜಪೇಟೆ ಡಿ.23 NEWS DESK : ವಿರಾಜಪೇಟೆಯಲ್ಲಿ  ಹಲವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.  ವಿರಾಜಪೇಟೆ ಪುರಸಭೆ ವ್ಯಾಪ್ತಿಯ ಅಂಬೇಡ್ಕರ್ ಭವನದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಡಾ.ಸುಭಾಷ್ ನಾಣಯ್ಯ ನೇತೃತ್ವದಲ್ಲಿ ಬಿಜೆಪಿಯ ಹಲವಾರು ನಾಯಕರು ಹಾಗೂ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಹಾಗೂ ಶಾಸಕರ ಜನಪದ ಕಾಳಜಿ ಹಾಗೂ ಕಾರ್ಯ ವೈಖರಿಯನ್ನು ಮೆಚ್ಚಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಎಲ್ಲರಿಗೂ ಪಕ್ಷದ ಶಲ್ಯ ಹೊದಿಸಿ ಬಾವುಟ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು. ಸಮಾಜದ ಪರ ಚಿಂತನೆ ಬೆಳೆಸಿಕೊಂಡು ನಾಡಿನ ಏಳಿಗೆಗೆ ಶ್ರಮಿಸುವ ಉದ್ದೇಶದಿಂದ ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡ ಎಲ್ಲರನ್ನೂ ಸ್ವಾಗತಿಸುತ್ತಾ ಶುಭಕೋರಿದರು. ಮುಂದಿನ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕೆಂದು ಸಲಹೆ ನೀಡಿದ ಶಾಸಕರು, ಒಳ್ಳೆಯ ಆಡಳಿತ ಹಾಗೂ ಜನಪರ ಕಾಳಜಿ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸಾಧ್ಯ ಎಂದು ಹೇಳಿದರು.…

Read More

ಮಡಿಕೇರಿ NEWS DESK ಡಿ.23 : ಮಂಡ್ಯ ಜಿಲ್ಲಾ ಕಿವುಡರ ಸಂಘದ ವತಿಯಿಂದ ಮಂಡ್ಯದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದ ಪಿಇಟಿ ಕ್ರೀಡಾಂಗಣದಲ್ಲಿ 3 ದಿನಗಳ ಕಾಲ ನಡೆದ 11ನೇ ರಾಜ್ಯ ಮಟ್ಟದ ಕಿವುಡರ ಟಿ.20 ಕ್ರಿಕೆಟ್ ಪಂದ್ಯಾವಳಿ ಸಂಭ್ರಮದಿಂದ ನಡೆಯಿತು. ಪಂದ್ಯಾವಳಿಯಲ್ಲಿ ಬಳ್ಳಾರಿ ತಂಡ ಪ್ರಥಮ, ಕೊಡಗು ದ್ವಿತೀಯ, ದಕ್ಷಿಣ ಕನ್ನಡ ತೃತೀಯ ಮತ್ತು ಮೈಸೂರು ತಂಡ ನಾಲ್ಕನೇ ಸ್ಥಾನ ಗಳಿಸಿತು. ಕೊಡಗು ಜಿಲ್ಲಾ ಕಿವುಡರ ಸಂಘದ ಅಧ್ಯಕ್ಷರಾದ ಗೌರು ಸೋಮಣ್ಣ, ಉಪಾಧ್ಯಕ್ಷ ಕೆ.ಕೆ.ಶಂಕರ ನಾರಾಯಣ, ಕಾರ್ಯದರ್ಶಿ ರಂಜಿತ್, ಕೋಶಾಧಿಕಾರಿ ಸುರೇಶ್ ಮತ್ತಿತರರು ಕ್ರೀಡಾಕೂಟ ಹಾಗೂ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Read More

ಮಡಿಕೇರಿ ಡಿ.23 NEWS DESK : ದ.ಕ.ಆದಿದ್ರಾವಿಡ ಯುವ ವೇದಿಕೆ ನಿಯೋಗವು  ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ ಟಿ.ಎಂ.ಶಾಹೀದ್ ತೆಕ್ಕಿಲ್ ಅವರನ್ನು ಭೇಟಿ ಮಾಡಿದರು. ಸುಳ್ಯ ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿದ ವೇದಿಕೆಯ ಪ್ರಮುಖರು ಹಾಗೂ ಪದಾದಿಕಾರಿಗಳು ಸುಳ್ಯ ತಾಲ್ಲೂಕಿನ ಕಸಬಾ ಗ್ರಾಮದಲ್ಲಿ ಆದಿದ್ರಾವಿಡ ಯುವ ವೇದಿಕೆಯ ನೂತನ ಸಮುದಾಯ ಭವನ ನಿರ್ಮಿಸಲು ಸರಕಾರದ ವತಿಯಿಂದ ಭೂಮಿಯನ್ನು ಮಂಜೂರು ಮಾಡುವಂತೆ ಮನವಿ ಸಲ್ಲಿದರು. ಈ ಸಂದರ್ಭ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ  ಸದಾನಂದ ಮಾವಜಿ ಹಾಗೂ ಆದಿದ್ರಾವಿಡ ಯುವ ವೇದಿಕೆಯ ಅಧ್ಯಕ್ಷ  ಸುಂದರ, ಕಾರ್ಯದರ್ಶಿ ಸತೀಶ್, ಕೋಶಾಧಿಕಾರಿ ಗೋಪಾಲ ಆರಂಬೂರು, ಉಪಾಧ್ಯಕ್ಷ ಅಶ್ವಿನ್ ಅಜ್ಜಾವರ ಹಾಗೂ ಯೂತ್ ಕಾಂಗ್ರೆಸ್ ಮುಖಂಡ ರಂಜಿತ್ ರೈ ಮೇನಲ ಮುಂತಾದವರು ಉಪಸ್ಥಿತರಿದ್ದರು.

Read More

ಮಡಿಕೇರಿ ಡಿ.23 NEWS DESK : ಬಾಲಗೋಕುಲ – ಮಡಿಕೇರಿ ಹಾಗೂ ಮುಳಿಯ ಪ್ರತಿಷ್ಠಾನದ ಸಹಯೋಗದೊಂದಿಗೆ ಡಿ.25 ರಂದು “ಬಾಲಸಂಗಮ” ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಮಧ್ಯಾಹ್ನ 2 ಗಂಟೆಯಿಂದ ಪ್ರಾರಂಭವಾಗಿ ಸಂಜೆ 5 ಗಂಟೆಯವರಗೆ ನಡೆಯಲಿದೆ. ಮುಳಿಯ ಜ್ಯುವೆಲ್ಸ್ ಸಭಾಂಗಣದಲ್ಲಿ ನಡೆಯಲಿರುವ ಈ ಬಾಲ ಸಂಗಮವು ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಇದೊಂದು ವೇದಿಕೆಯಾಗಿದೆ.  6 ವಯಸ್ಸಿನಿಂದ 15 ವಯಸ್ಸಿನ ಒಳಗಿರುವ ಎಲ್ಲಾ ಮಕ್ಕಳು ಇದರಲ್ಲಿ ಭಾಗವಹಿಸಬಹುದು. ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಚಿಸುವವರು ಈ‌ ಮೊಬೈಲ್ ಸಂಖ್ಯೆಗಳನ್ನು: 9481858609 ಸಂಪರ್ಕಿಸಬೇಕಾಗಿ ಕೋರಲಾಗಿದೆ.

Read More