ಮಡಿಕೇರಿ ಜ.24 NEWS DESK : ತುರ್ತು ಸಂದರ್ಭಗಳಲ್ಲಿ ನಾಗರಿಕರ ಕರೆಗಳಿಗೆ ಶೀಘ್ರ ಸ್ಪಂದಿಸಲು ಜಿಲ್ಲೆಯ ವಿವಿಧೆಡೆ 112 ತುರ್ತು ಸ್ಪಂದನೆ ದ್ವಿಚಕ್ರ ವಾಹನಕ್ಕೆ ಚಾಲನೆ ದೊರೆಯಿತು. ಈಗಾಗಲೇ ಕಾರ್ಯಾಚರಿಸುತ್ತಿರುವ 112 ವಾಹನಗಳ ಜೊತೆಗೆ, ನಗರ ಪ್ರದೇಶಗಳಲ್ಲಿ ಇನ್ನೂ ಶೀಘ್ರವಾಗಿ ಸ್ಪಂದಿಸಲು ಅನುಕೂಲವಾಗುವಂತೆ ಜಿಲ್ಲೆಯ ಮಡಿಕೇರಿ, ವಿರಾಜಪೇಟೆ ಮತ್ತು ಕುಶಾಲನಗರ ಪಟ್ಟಣ ಠಾಣೆಗಳಲ್ಲಿ ದ್ವಿಚಕ್ರ ವಾಹನದ ಮೂಲಕವೂ 112 ತುರ್ತು ಸ್ಪಂದನೆ ಸೇವೆ ಲಭ್ಯವಾಗಲಿದೆ.
ಲೇಖಕ: admin
ಮಡಿಕೇರಿ ಜ.24 NEWS DESK : ಅಂತರರಾಷ್ಟ್ರೀಯ ಶೋಲಿಂಗ್ ಕುಂಗ್ಫು ಸಂಸ್ಥೆಯ ವತಿಯಿಂದ ಚೆಟ್ಟಿಮಾನಿಯ ಸಾಂದೀಪನಿ ಶಾಲೆಯಲ್ಲಿ ನಡೆದ ಕರಾಟೆ ಪರೀಕ್ಷೆಯಲ್ಲಿ ಚೆಟ್ಟಿಮಾನಿಯ ಸಾಂದೀಪನಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಳದಿ, ಅರೇಂಜ್ ಹಾಗೂ ಹಸಿರು ಬೆಲ್ಟ್ ಪಡೆದು ಸಾಧನೆ ಮಾಡಿದ್ದಾರೆ. ಶಾಲೆಯ ಒಟ್ಟು ಮೂವತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದು, ಹನ್ನೊಂದು ವಿದ್ಯಾರ್ಥಿಗಳು ಹಳದಿ, ಹತ್ತು ವಿದ್ಯಾರ್ಥಿಗಳು ಅರೇಂಜ್, ಒಂಭತ್ತು ವಿದ್ಯಾರ್ಥಿಗಳು ಹಸಿರು ಬೆಲ್ಟ್ ಗೆದ್ದುಕೊಂಡಿದ್ದಾರೆ. ಪರೀಕ್ಷಾರ್ಥಿಗಳಾಗಿ ಇಂಡಿಯನ್ ಗ್ರ್ಯಾಂಡ್ ಮಾಸ್ಟರ್ ಶಿಫು ಇಂದ್ರಜಿತ್, ಇಂಡಿಯನ್ ತರಬೇತುದಾರರಾದ ದೇವರಾಜ್, ಕೊಡಗು ಜಿಲ್ಲೆಯ ತರಬೇತುದಾರರಾದ ವೇಣು ಗೋಪಾಲ್, ಕರ್ನಾಟಕ ರಾಜ್ಯದ ತರಬೇತುದಾರರಾದ ನಾಟೋಳಂಡ ನಂಜುಂಡ ಪಾಲ್ಗೊಂಡಿದ್ದರು. ಉತ್ತಿರ್ಣರಾದ ವಿದ್ಯಾರ್ಥಿಗಳನ್ನು ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಅಭಿನಂದಿಸಿದರು.
ಮೈಸೂರು, ಜ.24 NEWS DESK : ಮೈಸೂರು ನಗರಪಾಲಿಕೆ ಈಗ ಅವ್ಯವಸ್ಥೆಗಳ ಆಗರವಾಗಿದೆ. ಉತ್ತರದಾಯಿತ್ವ ಇಲ್ಲದೇ ಅಕ್ರಮಗಳ ಸಂಖ್ಯೆ ಏರಿಕೆಯಾಗಿದೆ. ಇದಕ್ಕೆ ಕಾಂಗ್ರೆಸ್ ಸರ್ಕಾರವೇ ಸಂಪೂರ್ಣ ಹೊಣೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆರೋಪಿಸಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಯದುವೀರ್, ನಗರ ಪಾಲಿಕೆಯಲ್ಲಿ ಸಾರ್ವಜನಿಕ ನಿಧಿಯನ್ನೇ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಮೂವರು ಮಹಿಳಾ ಸಿಬ್ಬಂದಿಯನ್ನು ಅಮಾನತು ಮಾಡಿರುವುದೇ ಇದಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ. ಚುನಾಯಿತ ಕಾರ್ಪೊರೇಟರ್‌ಗಳು ಇಲ್ಲದಿರುವುದು, ಸಮರ್ಥ ಮೇಲ್ವಿಚಾರಣೆ ಮಾಡದಿರುವುದು, ಸುಧಾರಣೆ ಕ್ರಮಗಳನ್ನು ಕೈಗೊಳ್ಳದಿರುವುದು, ಉತ್ತರದಾಯಿತ್ವ ಇರದಿರುವುದು ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದೆ ಎಂದಿದ್ದಾರೆ. ಕಾಂಗ್ರೆಸ್ ರಾಜ್ಯ ಸರ್ಕಾರವು ಸ್ಥಳೀಯ ಸಂಸ್ಥೆ ಚುನಾವಣೆ ನಡೆಸದೇ ವಿಳಂಬ ಧೋರಣೆ ತೋರುತ್ತಿರುವುದು ಎಲ್ಲದ್ದಕ್ಕೂ ಕಾರಣವಾಗಿದೆ ಎಂದು ಸಂಸದರು ತಿಳಿಸಿದ್ದಾರೆ. ಸ್ಥಳೀಯ ಪ್ರಜಾಪ್ರಭುತ್ವ ಹಾದಿ ತಪ್ಪಿದಾಗ, ಭ್ರಷ್ಟಾಚಾರ ಪ್ರಕರಣಗಳು ಹೆಚ್ಚಾಗುತ್ತಿದೆ. ಒಟ್ಟಾರೆ ಎಲ್ಲ ಪ್ರಕರಣಗಳಿಗೂ ಕಾಂಗ್ರೆಸ್ ಸರ್ಕಾರವೇ ಸಂಪೂರ್ಣ ಹೊಣೆಯಾಗಿದೆ ಎಂದು ಯದುವೀರ್ ಆರೋಪಿಸಿದ್ದಾರೆ. ಗ್ರೇಟರ್…
ನಾಪೋಕ್ಲು ಜ.24 NEWS DESK : ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ವತಿಯಿಂದ ಆಯೋಜಿಸಿದ 2025-26ನೇ ಸಾಲಿನ ಕ್ಲಸ್ಟರ್ ಹಂತದ ಕಲಿಕಾ ಹಬ್ಬ ಕಾರ್ಯಕ್ರಮವು ಮೇಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಮಡಿಕೇರಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಕಲಿಕಾ ಹಬ್ಬ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿದ್ದು ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳುವಂತಾಗಬೇಕು ಎಂದು ಹೇಳಿದರು. ಮೇಕೇರಿ ಕ್ಲಸ್ಟರ್ ಸಿಆರ್ಪಿ ಯವರಾದ ಕಲ್ಪನಾ ಮಾತನಾಡಿ, ಇಂದು ಆಚರಿಸುತ್ತಿರುವುದು ಶಿಕ್ಷಣೋತ್ಸವವಾಗಿದ್ದು ವಿದ್ಯಾರ್ಥಿಗಳಿಗೆ ಸಂತಸದಾಯಕ ಕಲಿಕೆಯ ಮೂಲಕ ಜ್ಞಾನಾರ್ಜನೆಯನ್ನು ಮಾಡಿಕೊಳ್ಳಲು ಸಹಾಯಕವಾಗಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಸಂತಸದಾಯಕವೆಂದು ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭ ವಿವಿಧ ಚಟುವಟಿಕೆಗಳನ್ನು ನಡೆಸಿ ವಿಜೇತರದ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿದ್ದ ಗಣ್ಯರು ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು. ಮೇಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ರಮ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ…
ನಾಪೋಕ್ಲು ಜ.24 NEWS DESK : ಹೊದವಾಡ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭೇಟಿ ಬಚಾವೋ ಭೇಟಿ ಪಡಾವೋ ಕಾರ್ಯಕ್ರಮ ನಡೆಯಿತು. ಹೊದ್ದೂರು ಗ್ರಾ.ಪಂ ಅಧ್ಯಕ್ಷ ಹೆಚ್.ಎ.ಹಂಸ ಅವರ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಮಡಿಕೇರಿ ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾ ಅಶೋಕ್ ಮಾತನಾಡಿ, ಮಕ್ಕಳು ಶಿಕ್ಷಣವನ್ನು ಪಡೆದು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು. ಓದುವ ವಯಸ್ಸಿನಲ್ಲಿ ಇತರ ಯಾವುದೇ ಆಕರ್ಷಣೆಗಳಿಗೆ ಒಳಗಾಗಬಾರದು. ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡಿ ಮಕ್ಕಳು ಯಾವುದೇ ದೌರ್ಜನಕ್ಕೆ ಒಳಗಾದರೆ ಮಕ್ಕಳ ಸಹಾಯವಾಣಿ ಸಂಖ್ಯೆ 1098ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಿದರು. ಜಿಲ್ಲಾ ಮಹಿಳಾ ಮಿಷನ್ ಶಕ್ತಿ ಸಂಯೋಜಕಿ ಮಮತಾ ಮಾತನಾಡಿ, ಹೆಣ್ಣುಮಕ್ಕಳಿಗೆ 18 ವರ್ಷ ತುಂಬಿದ ಬಳಿಕ ಗಂಡು ಮಕ್ಕಳಿಗೆ 21 ವರ್ಷ ತುಂಬಿದ ಬಳಿಕ ವಿವಾಹ ನೆರವೇರಿಸಬೇಕು ಎಂದರು. ಈ ಯೋಜನೆಯು ಸಂಕಷ್ಟದಲ್ಲಿರುವ ಮಹಿಳೆಯರು…
ವಿರಾಜಪೇಟೆ ಜ.24 NEWS DESK : ವಿರಾಜಪೇಟೆಯ ಅಮ್ಮತ್ತಿ ಕಾರ್ಮಾಡುವಿನ ರಾಮಮಂದಿರದಲ್ಲಿ ಜಾತ್ಯತೀತ ಜನತಾದಳದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಜೆಡಿಎಸ್ ಎಸ್‍ಸಿ-ಎಸ್ಟಿ ಘಟಕದ ಜಿಲ್ಲಾಧ್ಯಕ್ಷೆ, ಗ್ರಾ.ಪಂ ಮಾಜಿ ಸದಸ್ಯೆ ಅಮ್ಮತಿ ಜಯಮ್ಮ ಅವರ ನೇತೃತ್ವದಲ್ಲಿ ಪುಟಾಣಿ ಮಕ್ಕಳು, ಸಾರ್ವಜನಿಕರು, ಮಹಿಳೆಯರು ಹಾಗೂ ಪಕ್ಷದ ಮುಖಂಡರು ಕೇಕ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸದರು. ಈ ಸಂದರ್ಭ ವಿರಾಜಪೇಟೆ ತಾಲೂಕು ಅಧ್ಯಕ್ಷ ಪಿ.ಎ.ಮಂಜುನಾಥ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಜೀದ್ ಚೋಕಂಡಳ್ಳಿ, ಮಡಿಕೇರಿ ತಾಲೂಕಿನ ಅಲ್ಪಸಂಖ್ಯಾತರ ಘಟಕದ ಅಶ್ರಫ್, ಸಿದ್ದಾಪುರದ ಸಿಯಾಬುದ್ದೀನ್, ವಿರಾಜಪೇಟೆ ತಾಲ್ಲೂಕು ಕಾರ್ಯದರ್ಶಿ, ಹರ್ಷ ಟಿ.ಆರ್, ಮೇಘನಾ, ಸುಮತಿ, ಗೀತಾ, ಸರಸು ಸೇರಿದಂತೆ ಇತರ ಕಾರ್ಯಕರ್ತರು ಹಾಜರಿದ್ದರು.
ಕುಶಾಲನಗರ ಜ.24 NEWS DESK : ಮೈಸೂರು ಜಿಲ್ಲೆಯ ಸುತ್ತೂರು ಸಂಸ್ಥಾನ ಮಠ ಕನ್ನಡ ನಾಡಿನ ಕಲೆ, ಆಚಾರ, ಆಹಾರ, ಸಂಸ್ಕೃತಿ ಗಳ ಸಂಗಮ ಎಂದು ಕುಶಾಲನಗರದ ಉದ್ಯಮಿ ಎಸ್.ಎಲ್.ಎನ್ ಸಂಸ್ಥೆಯ ಸಾತಪ್ಪನ್ ಶ್ಲಾಘಿಸಿದರು. ನಂಜನಗೂಡು ತಾಲ್ಲೂಕು ಸುತ್ತೂರು ಮಠದ ಆವರಣದಲ್ಲಿ ಒಂದು ವಾರ ಕಾಲ ನಡೆದ ಐತಿಹಾಸಿಕ ಸುತ್ತೂರು ಜಾತ್ರೋತ್ಸವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಜೆಎಸ್ಎಸ್ ವಿದ್ಯಾಸಂಸ್ಥೆ ಗಳು ರಾಜ್ಯದಲ್ಲಿ ಅಷ್ಟೇ ಅಲ್ಲದೇ ದೇಶ ವಿದೇಶಗಳಲ್ಲಿ ತೆರೆದುಕೊಳ್ಳುವ ಮೂಲಕ ಲಕ್ಷಾಂತರ ಮಂದಿಗೆ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಮಣಿಪುರ ಹಾಗೂ ನಾಗಲ್ಯಾಂಡ್ ಶಿಕ್ಷಣ ವಂಚಿತ ಸಾವಿರಾರು ಬಡ ಮಕ್ಕಳನ್ನು ಕರೆ ತಂದು ಸುತ್ತೂರು ಮಠದಲ್ಲಿ ತ್ರಿವಿಧ ದಾಸೋಹ ನೀಡುತ್ತಿರುವುದು ಸುಲಭದ ಸೇವೆಯಲ್ಲ ಎಂದು ಸಾತಪ್ಪನ್ ಹೇಳಿದರು. ಒಂದು ವಾರ ಕಾಲ ನಡೆಯುವ ಜಾತ್ರೋತ್ಸವ ದಲ್ಲಿ ದೇಶೀಯ ಕ್ರೀಡೆಗಳು, ಜಾನಪದ ಕಲೆಗಳು, ನಶಿಸುವ ಅಂಚಿನಲ್ಲಿರುವ ಎಲ್ಲಾ ಕ್ರೀಡಾ ಪ್ರಾಕಾರಗಳು ಜಾತ್ರೋತ್ಸವದಲ್ಲಿ ಸೇರುವ ಲಕ್ಷಾಂತರ ಮಂದಿಗೆ ಹೆಮ್ಮೆ…
ಮಡಿಕೇರಿ ಜ.23 NEWS DESK : ಕೊಡಗು ಜಿಲ್ಲೆಯಲ್ಲಿ ಯಶಸ್ವಿನಿ ಯೋಜನೆಯನ್ನು 2025-26 ನೇ ಸಾಲಿಗೂ ಮುಂದುವರೆಸಲು ಅರ್ಹ ಸದಸ್ಯರ ನೋಂದಣಿಯು ಪ್ರಾರಂಭಿಸಲಾಗಿದ್ದು, ಈ ಯೋಜನೆಯಡಿ ಸದಸ್ಯತ್ವ ನವೀಕರಣ ಮತ್ತು ಹೊಸ ಸದಸ್ಯರ ನೋಂದಣಿಗೆ ಇದೇ ಮಾರ್ಚ್ 31 ರ ವರಗೆ ಅವಕಾಶವಿದೆ. ಜಿಲ್ಲೆಯಲ್ಲಿರುವ ಯಾವುದೇ ಸಹಕಾರ ಸಂಘಗಳು/ ಸಹಕಾರ ಬ್ಯಾಂಕ್‍ಗಳು ಮತ್ತು ಸೌಹಾರ್ದ ಸಹಕಾರಿ ಸಂಘಗಳಲ್ಲಿ ಸದಸ್ಯರಾಗಿರುವವರು ಈ ಯೋಜನೆಯ ಉಪಯೋಗ ಪಡೆದುಕೊಳ್ಳಬಹುದು. ಅದರಂತೆ ಈ ಯಶಸ್ವಿನಿ ಯೋಜನೆಯ ವಿಮೆ ಮಾಡಿಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದೆ. ನೋಂದಣಿಗೆ ಲಗತ್ತಿಸಬೇಕಾದ ದಾಖಲೆಗಳು. ಅರ್ಜಿ ನಮೂನೆ, ರೇಷನ್ ಕಾರ್ಡ್/ ಆಧಾರ್ ಕಾರ್ಡ್, ಯೋಜನೆಗೆ ಒಳಪಡುವ ಸದಸ್ಯರ ಪ್ರತಿಯೊಬ್ಬರ ತಲಾ 2 ಫೋಟೋ, ಗ್ರಾಮೀಣ ಸಹಕಾರ ಸಂಘಗಳ ಹೊಸ ಸದಸ್ಯರ ನೋಂದಣಿ ಹಾಗೂ ನವೀಕರಣಕ್ಕೆ ಸಂಬಂಧಿಸಿದಂತೆ ಗರಿಷ್ಟ 04 ಸದಸ್ಯರ ಕುಟುಂಬ ಒಂದಕ್ಕೆ ರೂ 500 ಗಳ ವಂತಿಕೆ ಹಾಗೂ 04 ಕ್ಕಿಂತ ಹೆಚ್ಚಿನ ಸದಸ್ಯರುಗಳ ಕುಟುಂಬದ ಪ್ರತೀಯೊಬ್ಬ ಹೆಚ್ಚುವರಿ ಸದಸ್ಯರಿಗೆ ರೂ…
ಮಡಿಕೇರಿ ಜ.23 NEWS DESK : ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಅವಧಿಯಲ್ಲಿ ಆರಂಭಿಸಿದ್ದ, ‘ಜಮ್ಮಾಬಾಣೆ’ ಸಮಸ್ಯೆ ಬಗೆಹರಿಕೆಗೆ ಪೂರಕವಾಗಿರುವ ‘ಪೌತಿ ಖಾತೆ ಆಂದೋಲನ’ವನ್ನು ಈಗಿನ ಸರಕಾರ ಮುಂದುವರಿಸಬೇಕು ಎಂದು ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಮ್ಮಾಬಾಣೆ’ ಸಮಸ್ಯೆಗೆ ಸಂಬಂಧಿಸಿದಂತೆ ಬಿಜೆಪಿಯ ವಿರುದ್ಧ ಅಸಂಬದ್ಧ ಹೇಳಿಕೆಗಳನ್ನು ನೀಡುವ ಮೂಲಕ ಕಾಂಗ್ರೆಸ್ ಪ್ರಮುಖರು ಜನರ ಹಾದಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಜಮ್ಮಾಬಾಣೆ ಸಮಸ್ಯೆಯ ಶೇ.90ರಷ್ಟನ್ನು ಬಿಜೆಪಿ ಅಧಿಕಾರದ ಅವಧಿಯಲ್ಲಿ ಬಗೆಹರಿಸಲಾಗಿದೆ. ಅದರ ಲಾಭ ಬಿಜೆಪಿಗೆ ಹೋಗುತ್ತದೆ ಎನ್ನುವ ಆತಂಕದಲ್ಲಿರುವ ಕಾಂಗ್ರೆಸ್ ರಾಜಕೀಯ ಕಾರಣಗಳಿಗೋಸ್ಕರ ಬಿಜೆಪಿ ಸರಕಾರದ ಕ್ರಮಗಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದೆ ಎಂದು ಆರೋಪಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೆ.ಜಿ.ಬೋಪಯ್ಯ, 2012ರಲ್ಲಿ ರಾಷ್ಟ್ರಪತಿಗಳ ಅಂಕಿತವಾಗಿ ಬಂದ ಜಮ್ಮಾಬಾಣೆ ವಿಧೇಯಕವನ್ನು ಜಾರಿಗೊಳಿಸಕೂಡದೆಂದು ಸಲ್ಲಿಕೆಯಾಗಿದ್ದ ನಾಲ್ಕು ರಿಟ್ ಪಿಟೀಷನ್‍ಗಳನ್ನು 2024ರಲ್ಲಿ ವಜಾಗೊಳಿಸಿರುವ ರಾಜ್ಯ ಉಚ್ಚ ನ್ಯಾಯಾಲಯ, ಸಮಸ್ಯೆಯ ಬಗೆಹರಿಕೆಗೆ ಅಗತ್ಯ ಆದೇಶವನ್ನು ನೀಡಿ, 30 ದಿನಗಳಲ್ಲಿ ಜಾರಿಗೊಳಿಸುವಂತೆ ತಿಳಿಸಿದ್ದನ್ನು ಉಲ್ಲೇಖಿಸಿದರು.…
ಮಡಿಕೇರಿ ಜ.23 NEWS DESK : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಹಿರಿಯ ನಾಗರಿಕರಿಗಾಗಿ ಕೇಂದ್ರ ಪ್ರಾಯೋಜಿತ ಅಟಲ್ ವಯೋ ಅಭ್ಯುದಯ ಯೋಜನೆಯಡಿ ಕೇಂದ್ರ ಸರ್ಕಾರದ ಸ್ಟೇಟ್ ಆಕ್ಷನ್ ಪ್ಲಾನ್ ಫಾರ್ ಸೀನಿಯರ್ ಸಿಟಿಜನ್ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಸಲುವಾಗಿ ಕೊಡಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಹಿರಿಯ ನಾಗರಿಕರ ಕಾಯ್ದೆ 2007, ಹಿರಿಯ ನಾಗರಿಕರ ಆಸ್ತಿ ಸಂರಕ್ಷಣೆ, ಹಿರಿಯ ನಾಗರಿಕರಿಗೆ ಇರುವ ಸೌಲಭ್ಯಗಳ ಕುರಿತಾಗಿ ಸಾರ್ವಜನಿಕರಿಗೆ ಕಾನೂನು ಅರಿವು ಮತ್ತು ನೆರವು ಶಿಬಿರ ಕಾರ್ಯಕ್ರಮವು ನಗರದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ನಡೆಯಿತು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅವರು ಉದ್ಘಾಟಿಸಿ ಮಾತನಾಡಿ, ಹಿರಿಯ ನಾಗರಿಕರು ಸಮಾಜದ ಆಸ್ತಿ. ಹಿರಿಯರಿಗೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳಿಂದ ಇರುವಂತಹ ಅವರ ಹಕ್ಕುಗಳನ್ನು ಪಡೆಯುವಲ್ಲಿ ಹಾಗೂ ತಮ್ಮ ಆಸ್ತಿಯಲ್ಲಿ ತಮಗೆ ಅಗತ್ಯವಿರುವಷ್ಟನ್ನು ಇಟ್ಟುಕೊಂಡು ಮಕ್ಕಳಿಗೆ ನೀಡುವಂತಾಗಬೇಕು ಎಂದು…






