ಮಡಿಕೇರಿ ಡಿ.22 NEWS DESK : ಕೊಯನಾಡು ವಲಯ ಅರಣ್ಯ ಕಚೇರಿ ಬಳಿ ನೂತನವಾಗಿ ನಿರ್ಮಿಸಿರುವ ಅಧಿಕಾರಿಗಳ ವಸತಿ ಗೃಹವನ್ನು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಉದ್ಘಾಟಿಸಿದರು. ಕೊಯನಾಡು ಬಳಿಯ ವಲಯ ಅರಣ್ಯಾಧಿಕಾರಿ ಕಚೇರಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಸರಳ ಸಮಾರಂಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ವಸತಿ ಗೃಹ ಉದ್ಘಾಟಿಸಿ ಶಾಸಕರು ಮಾತನಾಡಿದರು.
ಲೇಖಕ: admin
ಮಡಿಕೇರಿ ಡಿ.22 NEWS DESK : ಗ್ರಾಮೀಣ ಜನರು ಸರ್ಕಾರದ ಸೌಲಭ್ಯಗಳನ್ನು ಪಡೆದು ಸ್ವ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲರಾಗುವತ್ತ ಗಮನಹರಿಸಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಸಲಹೆ ನೀಡಿದರು. ಕೊಯನಾಡು ವಲಯ ಅರಣ್ಯ ಕಚೇರಿ ಬಳಿ ನೂತನವಾಗಿ ನಿರ್ಮಿಸಿರುವ ಅಧಿಕಾರಿಗಳ ವಸತಿ ಗೃಹವನ್ನು ಅವರು ಉದ್ಘಾಟಿಸಿ, 30 ಜನ ಕೃಷಿಕರಿಗೆ ತಲಾ 2 ಜೇನು ಪೆಟ್ಟಿಗೆ, ಹಾಗೂ 6 ಜನ ಮಹಿಳೆಯರಿಗೆ ಹೊಲಿಗೆಯಂತ್ರ ಹಸ್ತಾಂತರಿಸಿದರು. ಜೊತೆಗೆ ಊರುಬೈಲು ಮತ್ತು ಕೂಡಡ್ಕ ಸರ್ಕಾರಿ ಶಾಲೆಗೆ ಡಿಜಿಟಲ್ ಸಾಕ್ಷರತೆ ಉದ್ದೇಶದಿಂದ ಲ್ಯಾಪ್‍ಟಾಪ್ ಮತ್ತು ಪ್ರಾಜೆಕ್ಟರ್‍ನ್ನು ವಿತರಿಸಿದರು. ಬಳಿಕ ಮಾತನಾಡಿದ ಶಾಸರು, ಸ್ವಂತ ಶಕ್ತಿಯಿಂದ ಜೀವನ ರೂಪಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಜೇನು ಸಾಕಾಣಿಕೆಯ ಪೆಟ್ಟಿಗೆಯನ್ನು 30 ಜನರಿಗೆ ವಿತರಿಸಲಾಗಿದೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಡಿಜಿಟಲ್ ಸಾಕ್ಷರತೆ ಸಂಬಂಧ ಲ್ಯಾಪ್‍ಟಾಪ್ ಮತ್ತು ಪ್ರಾಜೆಕ್ಟರ್ ವಿತರಿಸಲಾಗಿದೆ. ಹಾಗೆಯೇ ಮಹಿಳೆಯರ ಸ್ವ ಉದ್ಯೋಗಕ್ಕಾಗಿ 6 ಜನ…
ಸುಂಟಿಕೊಪ್ಪ ಡಿ.22 NEWS DESK : ಚರ್ಚ್ ಆಫ್ ಸೌತ್ ಇಂಡಿಯಾದ ದಕ್ಷಿಣಪ್ರಾಂತ್ಯದ ಸುಂಟಿಕೊಪ್ಪದ ಇಮ್ಮಾನುವೇಲ್ ದೇವಾಲಯದಲ್ಲಿ ಕ್ರಿಸ್ಮಸ್ ಆಚರಣೆಯ ಅಂಗವಾಗಿ ಕೊಡಗು ವಲಯದ ವಿವಿಧ ದೇವಾಲಯಗಳಿಂದ ಮಹಿಳಾ ಕ್ರಿಸ್ಮಸ್ ಆಚರಿಸಲಾಯಿತು. ಸೋಮವಾರಪೇಟೆ, ಕುಶಾಲನಗರ, ಸುಂಟಿಕೊಪ್ಪ, ಮಡಿಕೇರಿ, ಆನಂದಪುರ, ಪಾಲಿಬೆಟ್ಟ ದೇವಾಲಯಗಳಲ್ಲಿರುವ ಮಹಿಳೆಯರು ಮತ್ತು ಯುವತಿಯರು ಸುಂಟಿಕೊಪ್ಪದ ಚರ್ಚ್ ಆಫ್ ಸೌತ್ ಇಂಡಿಯಾದ ದಕ್ಷಿಣಪ್ರಾಂತ್ಯದ ಇಮ್ಮಾನುವೇಲ್ ದೇವಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಕ್ರಿಸ್ಮಸ್ ಆಚರಣೆಯಲ್ಲಿ ಪ್ರಭು ಕ್ರಿಸ್ತರ ಜನನದ ಸಂದೇಶವನ್ನು ಗಾಯನ ಹಾಗೂ ರೂಪಕದ ಮೂಲಕ ಸಾರಿದರು. ನಂತರ ನೆರೆದಿದ್ದವರಿಗೆ ಕ್ರಿಸ್ಮಸ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಸಮಾರಂಭದಲ್ಲಿ ಚರ್ಚ್ ಆಫ್ ಸೌತ್ ಇಂಡಿಯಾದ ದಕ್ಷಿಣಪ್ರಾಂತ್ಯದ ಬಿಷೋಪ್ ಹೇಮಚಂದ್ರ ಅವರ ಪತ್ನಿ ಮಂಗಳೂರು ಪ್ರಾಂತಿಯ ಮಹಿಳಾ ಅಧ್ಯಕ್ಷೆ ಬಾಲಭಾರತಿ ಮಾತನಾಡಿ, ಮಹಿಳೆಯರು ಒಂದಾಗಿ ಸಮಾರಂಭವನ್ನು ಆಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದು ಮಹಿಳೆಯರಲ್ಲಿರುವ ಪ್ರತಿಭೆಗಳನ್ನು ಹೊರತರಲು ಸಹಕಾರಿಯಾಗಿದ್ದು, ಇದರಿಂದ ಗ್ರಾಮೀಣ ಪ್ರದೇಶದ ಪ್ರತಿಭೆಗಳು ಹೊರ ಬರಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ಮಡಿಕೇರಿ ಶಾಂತಿ…
ಮಡಿಕೇರಿ ಡಿ.22 NEWS DESK : ಚೇರಂಬಾಣೆಯಲ್ಲಿ ಜಾನ್ ಡ್ಯಾನ್ಸ್ ಗ್ಯಾಲರಿ ಮತ್ತು ಚೈನೀಸ್ ಕೆನ್‌ಪೊ ಕರಾಟೆ ಶಾಖೆ ಉದ್ಘಾಟನೆಗೊಂಡಿತು. ವಿಎಸ್‍ಎಸ್‍ಎನ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಚೇರಂಬಾಣೆ ಗ್ರಾ.ಪಂ ಅಧ್ಯಕ್ಷ ಮಿಲನ್ ಮುತ್ತಣ್ಣ ಅವರು ಉದ್ಘಾಟಿಸಿ ಶುಭ ಕೋರಿದರು. ಶ್ರೀ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಕವನ್ ಕುಮಾರ್, ರಾಷ್ಟ್ರಮಟ್ಟದ ತರಬೇತುದಾರರು, ಅನುಭವಿ ತರಬೇತುದಾರರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. ಸಾನ್ವಿ ಜಿ. ಪ್ರಾರ್ಥಿಸಿ, ಶ್ರೀನಿಧಿ ಸ್ವಾಗತಿಸಿ, ಶೃತಿ ಪೆರಲ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ನಿರ್ದೇಶಕರಾಗಿ ನಾಗರಾಜ್, ನೃತ್ಯ ತರಬೇತುದಾರರಾಗಿ ತರಬೇತುದಾರ ಪೃಥ್ವಿ ನಾಯಕ್, ಸಹ ತರಬೇತುದಾರ ಬೃಂದಾ ಕವನ್, ಕರಾಟೆ ತರಬೇತುದಾರರಾಗಿ ತರಬೇತುದಾರ ಇಮ್ಯಾನವಲ್ ಕೆ.ಜೆ ಹಾಗೂ ಸಹ ತರಬೇತುದಾರ ರಾಯ್ ಜೋಸೆಫ್ ಕಾರ್ಯನಿರ್ವಹಿಸಲಿದ್ದಾರೆ.
ಮಡಿಕೇರಿ ಡಿ.22 NEWS DESK : ಮೈಸೂರಿನ ಹೂಟುಗಳ್ಳಿಯ ಕೊಡಗು ಗೌಡ ಕ್ಷೇಮಾಭಿವೃದ್ಧಿ ಸಂಘದ 11ನೇ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ ಮತ್ತು ಸಂತೋಷ ಕೂಟ ಸಂಘದ ಅಧ್ಯಕ್ಷ ಪೊನ್ನಚ್ಚನ ಪಿ.ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ಮೈಸೂರಿನ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಗೌಡ ಸಮಾಜಗಳ ಒಕ್ಕೂಟದ ಉಪಾಧ್ಯಕ್ಷರಾದ ಡಾ.ರಾಜೇಶ್ ತೇನನ ಹಾಗೂ ದೇವಜನ ಗೀತಾ ಮೊಂಟಡ್ಕ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಹತ್ತನೇ ತರಗತಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕರಾದ ಕುಯ್ಯಮುಡಿ ಗೀತಾ, ಸಂಘದ ಹಿರಿಯರಾದ ದಾಯನ ಬಾಲಕೃಷ್ಣ ಹಾಗೂ ನಾಟೋಳನ ಭವಾನಿ ಮಾಚಯ್ಯ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕೊಡಗು ಗೌಡ ಕ್ಷೇಮಾಭಿವೃದ್ಧಿ ಸಂಘದ ಪ್ರಗತಿಯ ಕುರಿತು ಮುಖ್ಯ ಅತಿಥಿಗಳು ಮೆಚ್ಚುಗೆಯ ಮಾತುಗಳನ್ನಾಡಿದರು. ಮಧ್ಯಾಹ್ನ ಸಂತೋಷ ಕೂಟದ ಪ್ರಯುಕ್ತ ಆಕರ್ಷಕ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ಸಂಘದ ಉಪಾಧ್ಯಕ್ಷ ಚೆರುಕನ…
ಮಡಿಕೇರಿ ಡಿ.22 NEWS DESK : ಪ್ರಕೃತಿಯ ಮಡಿಲಿನ ಮರಗೋಡು ಹೊಸ್ಕೇರಿ ಗ್ರಾಮದ ಬೇರಂಗಿ ಬೆಟ್ಟದ ‘ಬಯಲ ಈಶ್ವರ ಸನ್ನಿಧಿ’ಯಲ್ಲಿ ಏಳನೇ ವಾರ್ಷಿಕೋತ್ಸವ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಶ್ರದ್ಧಾ ಭಕ್ತಿಗಳಿಂದ ಸಂಭ್ರಮದಿಂದ ನಡೆಯಿತು. ಮಡಿಕೇರಿ ತಾಲ್ಲೂಕಿನ ಮರಗೋಡು ಸಮೀಪದ ಬೇರಂಗಿ ಬೆಟ್ಟದ ಬಯಲ ಈಶ್ವರ ಸನ್ನಿಧಿಯಲ್ಲಿ ಉತ್ಸವದ ಅಂಗವಾಗಿ, ವಿಶಾಲ ವೃಕ್ಷದ ಬುಡದಲ್ಲಿರುವ ದೇವರ ವಿಗ್ರಹವನ್ನು ವಿವಿಧ ವರ್ಣದ ಪುಷ್ಪಗಳಿಂದ ಅಲಂಕರಿಸಿ, ವಿಶೇಷ ಪೂಜೆ, ಮಹಾ ಮಂಗಳಾರತಿಯನ್ನು ನೆರವೇರಿಸಲಾಯಿತು. ಉತ್ಸವದ ಪ್ರಯುಕ್ತ ಭಕ್ತಾದಿಗಳಿಗೆ ಅನ್ನದಾನವು ಇದೇ ಸಂದರ್ಭ ನಡೆಯಿತು. ಉತ್ಸವದ ನೇತೃತ್ವ ವಹಿಸಿದ್ದ ದೇವಸ್ಥಾನ ಸಮಿತಿಯ ಅಧ್ಯಕ್ಷ ಬಿ.ಎಂ.ರಾಮಣ್ಣ ಒಳಗೊಂಡಂತೆ, ಮಣಿ , ಶೇಷಪ್ಪ, ದಿನೇಶ್, ಪಾಪು, ಸುಹಾಸ್ ಸೇರಿದಂತೆ ಹಲ ಗ್ರಾಮಸ್ಥರು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಮಡಿಕೇರಿ ಡಿ.22 NEWS DESK : ಪಾಲಿಬೆಟ್ಟದ ಚೆಶೈರ್ ಹೋಮ್ಸ್ ಇಂಡಿಯಾ ಕೂರ್ಗ್ ವಿಶೇಷ ಶಾಲೆಯಲ್ಲಿ ಎರಡನೇಯ ವಿಶ್ವ ಧ್ಯಾನ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯೋಪಾಧ್ಯಾಯರಾದ ಶಿವರಾಜ್ ಅವರು ಧ್ಯಾನ ಮಾಡುವುದರಿಂದ ಆಗುವ ಪ್ರಯೋಜನದ ಕುರಿತು ಮಾಹಿತಿಯನ್ನು ನೀಡುವುದರ ಜೊತೆಗೆ ವಿಶೇಷ ಚೇತನ ವಿದ್ಯಾರ್ಥಿಗಳೊಂದಿಗೆ ಸೇರಿ ಸಾಮೂಹಿಕ ಧ್ಯಾನದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಶೇಷ ಶಾಲೆಯ ಅಧ್ಯಕ್ಷರಾದ ಗೀತಾಚೆಂಗಪ್ಪ, ಕಾರ್ಯದರ್ಶಿ ಆಶಾ ಸುಬ್ಬಯ್ಯ, ಖಜಾಂಚಿ ಡಾ.ಎ.ಸಿ.ಗಣಪತಿ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಮಡಿಕೇರಿ ಡಿ.22 NEWS DESK : ಕೊಡಗಿನ ಮೊಟ್ಟ ಮೊದಲ ಸೌಹಾರ್ದ ಸಹಕಾರಿ ‘ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತ’ ಶತಮಾನೋತ್ಸವದ ಸಂಭ್ರಮದಲ್ಲಿದೆ. ಇದರ ಅಂಗವಾಗಿ ಡಿ.25 ರಂದು ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಭ್ರಮದಿಂದ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಚೇತನ್ ಹೆಚ್.ಎಸ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸೌಹಾರ್ದ ಸಹಕಾರಿ ಶತಸಂಭ್ರಮದ ಕಾರ್ಯಕ್ರಮ ಜ.11 ರಂದು ನಗರದ ಗೌಡ ಸಮಾಜದಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದರು. ಡಿ.25 ರಂದು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲೆಯ ಶಿಕ್ಷಕರಿಗೆ, ಸಂಘದ ಸದಸ್ಯರಿಗೆ ಹಾಗೂ ಕೊಡಗು ಜಿಲ್ಲಾ ಶಿಕ್ಷಣ ಇಲಾಖಾ ನೌಕರರಿಗೆ ಕ್ರೀಡಾಕೂಟ ನಡೆಯಲಿದೆ. ಪುರುಷರಿಗೆ ವಾಲಿಬಾಲ್, ಹಗ್ಗ ಜಗ್ಗಾಟ, ಕಬ್ಬಡ್ಡಿ, ಮಹಿಳೆಯರಿಗೆ ಹಗ್ಗ ಜಗ್ಗಾಟ ಮತ್ತು ಥ್ರೋಬಾಲ್. ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ 100 ಮೀಟರ್ ಓಟದ ಸ್ಪರ್ಧೆ, ನಡೆಯುವ ಸ್ಪರ್ಧೆ, ಮೂಸಿಕಲ್ ಚೇರ್, ಭಾರತದ ಗುಂಡು ಎಸೆತ ಮತ್ತು ವಿಷದ ಚೆಂಡು…
ಮಡಿಕೇರಿ ಡಿ.22 NEWS DESK : ಕೆ.ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ಣಂಗೇರಿ ಗ್ರಾಮದ ಮೊಣಕಾಲ್ಮುರಿ ಅಂಗನವಾಡಿಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ’ ಕಾರ್ಯಕ್ರಮ ನಡೆಯಿತು. ಗ್ರಾಮ ಪಂಚಾಯಿತಿ ಸದಸ್ಯರಾದ ಜಾನ್ಸನ್ ಪಿಂಟೋ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಪಲ್ಸ್ ಪೋಲಿಯೊ ಲಸಿಕೆ ದಿನದಂದು ದೇಶಾದ್ಯಂತ ಲಕ್ಷಾಂತರ ಮಕ್ಕಳಿಗೆ ಲಸಿಕೆ ಹಾಕಲಾಗುತ್ತದೆ. ಇದರಿಂದ ಪೋಲಿಯೊ ಪ್ರಕರಣಗಳ ಸಂಖ್ಯೆಯನ್ನು ತೀವ್ರವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ವಿರಾಜಪೇಟೆ ಡಿ.22 NEWS DESK : ಕೊಡಗು ಜಿಲ್ಲೆ ಹಾಗೂ ಕೇರಳ ರಾಜ್ಯದ ನಡುವೆ ಪುರಾತನ ಕಾಲದಿಂದಲೂ ಅವಿನಾಭಾವ ಸಂಬಂಧವಿದೆ. ಇದಕ್ಕೆ ಸಾಕ್ಷಿ ಎಂದರೆ ಕೊಡಗಿನ ಜನತೆ ಕೇರಳದಲ್ಲಿ ಆಚರಣೆ ಮಾಡುವ ಮೈರೋಮಾಂಚನಗೊಳಿಸುವಂತಹ ಬೈತೂರು ಉತ್ಸವ, ಪಯ್ಯವೂರ್ ಉತ್ಸವವೂ ಹೌದು. ಕೊಡಗು ಮತ್ತು ಕೇರಳದ ನಡುವೆ ಇತಿಹಾಸ, ಸಂಸ್ಕೃತಿ ಮತ್ತು ಭೂಗೋಳಶಾಸ್ತ್ರದ ಆಳವಾದ ಸಂಬಂಧವಿದೆ; ಎರಡೂ ಪಶ್ಚಿಮ ಘಟ್ಟಗಳ ಭಾಗವಾಗಿರುವುದರಿಂದ ಧಾರ್ಮಿಕ ಆಚರಣೆಗಳು (ತೆಯ್ಯಂ), ತೆರೆ, ದೇವರುಗಳು, ದೇವಾಲಯದ ವಾಸ್ತುಶಿಲ್ಪ ಮತ್ತು ಸ್ಥಳೀಯರ ನಡುವೆ ಸಾಮ್ಯತೆಗಳಿವೆ, ವ್ಯಾಪಾರ ವಹಿವಾಟು, ದೇವರು, ಮದುವೆ ಹೀಗೆ ಅನೇಕ ರೀತಿಯಲ್ಲಿ ಸಂಬಂಧ ಮುಂದುವರೆದಿದೆ. ದೈವ ದೇವರ ವಿಚಾರಕ್ಕೆ ಬಂದರೆ ಕೇರಳದ ಮುತ್ತಪ್ಪನ ಬಗ್ಗೆ ತಿಳಿಯದವರೇ ಇಲ್ಲ. ಪರಶಿನಿಕಡವು ಅಂದರೆ ಮುತ್ತಪ್ಪ ಎಂದೇ ಹೇಳಬೇಕು. ಕೊಡಗಿನಲ್ಲಿಯೂ ಮುತ್ತಪ್ಪನ ಮಡಪುರಕ್ಕೆ ಕೊರತೆ ಇಲ್ಲ. ಸರ್ವರನ್ನು ದಯಾಪಾಲಿಸುವ ದೈವವಾಗಿ ಮುತ್ತಪ್ಪ ಕೊಡಗಿನೆಲ್ಲೆಡೆ ಸ್ಥಿತಗೊಂಡಿದ್ದಾನೆ. ಆದರೆ ಈ ಮುತ್ತಪ್ಪನ ನಿಜವಾದ ಮೂಲ ಸ್ಥಾನ ಮತ್ತು ಹಿನ್ನಲೆ ಬಹಳಷ್ಟು ಜನರಿಗೆ ಇನ್ನೂ ತಿಳಿದಿಲ್ಲ.…






