ನಾಪೋಕ್ಲು ನ.20 NEWS DESK : ಕ್ರೀಡೆಯು ವ್ಯಾಯಾಮ ಮಾತ್ರವಲ್ಲದೆ ಮನೋರಂಜನೆಯನ್ನು ಸಹ ನೀಡುತ್ತದೆ. ಕ್ರೀಡೆಗಳ ಆಯೋಜನೆಯಿಂದ ಸಮಾಜದಲ್ಲಿ ಪರಸ್ಪರ ಬಾಂಧವ್ಯ ವೃದ್ಧಿಯಾಗಲು ಸಾಧ್ಯ ಎಂದು ಜಿಲ್ಲಾ ಎಸ್.ಎನ್.ಡಿ.ಪಿ ಅಧ್ಯಕ್ಷ ವಿ.ಕೆ. ಲೋಕೇಶ್ ಹೇಳಿದರು. ಕರ್ನಾಟಕ ಪಬ್ಲಿಕ್ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ ಸೌಹಾರ್ದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆ ಆರ್ಥಿಕವಾಗಿ ಸದೃಢವಾಗಲು ಮೂಲ ಕಾರಣ. ಸಮಾಜದಲ್ಲಿ ಯಾವುದೇ ಧರ್ಮ, ಜಾತಿ, ರಾಜಕೀಯವಿಲ್ಲದೆ ಕ್ರೀಡಾ ಪ್ರತಿಭೆಗಳಿಗೆ ಗೌರವ ಸಿಗುವುದು ಕ್ರೀಡೆಯಿಂದ ಮಾತ್ರ.ವಿವಿಧ ಭಾಗಗಳಿಂದ ಆಗಮಿಸುವ ಕ್ರೀಡಾಪಟುಗಳಿಗೆ ಪರಸ್ಪರ ಸೌಹಾರ್ದಯುತ ವಾಗಿ ಒಗ್ಗೂಡಲು ಕ್ರೀಡೆ ಒಂದು ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದರು. ಜಿಲ್ಲಾ ಎಸ್‍ಎನ್ಡಿಪಿ ಸಂಘಟನೆ ಕಾರ್ಯದರ್ಶಿ ಪ್ರೇಮಾನಂದ ಮಾತನಾಡಿ ಎಸ್‍ಎನ್‍ಡಿಪಿ ಸಂಘಟನೆ 1903ರಲ್ಲಿ ಮಾನವತಾವಾದಿ ಶ್ರೀ ನಾರಾಯಣ ಗುರುಗಳು ಹುಟ್ಟು ಹಾಕಿದ ಬಲಿಷ್ಠ ಸಂಘಟನೆಯಾಗಿದೆ. ಈ ಸಂಘಟನೆಯು ಇಂದು ಕೊಡಗಿನ ಜಿಲ್ಲಾದ್ಯಂತ 18 ಸಾವಿರಕ್ಕೂ ಅಧಿಕ ಸದಸ್ಯರನ್ನು ಒಳಗೊಂಡಿದ್ದು ಶ್ರೀ ನಾರಾಯಣ ಗುರು ಅವರ ಆದರ್ಶಗಳನ್ನು ಪಾಲಿಸಿ ಹತ್ತು ಹಲವು…
ಲೇಖಕ: admin
ವಿರಾಜಪೇಟೆ ನ.20 NEWS DESK : ನಗರದ ಶಿವಕೇರಿಯಲ್ಲಿರುವ ಶ್ರೀ ದುರ್ಗಿ ವಿಷ್ಣು ಮೂರ್ತಿ ದೇವಾಲಯದಲ್ಲಿ ಸುಬ್ರಹಣ್ಯ ಷಷ್ಠಿ ಪ್ರಯುಕ್ತ ನ.26 ರಂದು ಶ್ರೀ ನಾಗದೇವರ ಷಷ್ಠಿ ಪೂಜೆ ನಡೆಯಲಿದೆ. ಪೂಜೆಯ ಅಂಗವಾಗಿ ಬೆಳಿಗ್ಗೆ 8 ಗಂಟೆಯಿಂದ ನಾಗನಿಗೆ ಹಾಲಿನ ಅಭಿಷೇಕ ಬಳಿಕ ವಿಶೇಷ ಪೂಜೆಗಳು ನಡೆಯಲಿದೆ. ಬಳಿಕ, ಶ್ರೀದುರ್ಗಿ ವಿಷ್ಣು ಮೂರ್ತಿ ನಾಗದೇವರಿಗೆ ಮಹಾಪೂಜೆ ಪ್ರಸಾಧ ವಿನಿಯೋಗ ನಂತರ ಅನ್ನ ಸಂತಾರ್ಪಣೆ ನಡೆಯಲಿದೆ.
ಮಡಿಕೇರಿ NEWS DESK ನ.19 : ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ನ.26 ರಂದು ನಡೆಯುವ 35ನೇ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನಾಚರಣೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಹಾರ್ವರ್ಡ್ ವಿಶ್ವವಿದ್ಯಾನಿಲಯದ ವಿದ್ವಾಂಸ ಡಾ.ಸಂಜೀವ್ ಚೋಪ್ರಾ ಅವರು ಮುಖ್ಯ ಅತಿಥಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಡಾ.ಸಂಜೀವ್ ಚೋಪ್ರಾ ಅವರು ಖ್ಯಾತ ಹಾರ್ವರ್ಡ್ ವಿದ್ವಾಂಸ, ಇತಿಹಾಸಕಾರ, ರಾಜಕೀಯ ವಿಜ್ಞಾನಿ, ಸಾರ್ವಜನಿಕ ಬುದ್ಧಿಜೀವಿ ಮತ್ತು ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದು, ಕೊಡವ ನ್ಯಾಷನಲ್ ಡೇಯಲ್ಲಿ ಭಾರತೀಯ ಸಂವಿಧಾನದ 5ನೇ ಶೆಡ್ಯೂಲ್ ಪಟ್ಟಿ ಅಡಿಯಲ್ಲಿ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಗಾಗಿ ಕೊಡವ ಅನ್ವೇಷಣೆಯ ಕುರಿತು ಭಾಷಣ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಸ್ವ-ಆಡಳಿತ, ಎಸ್‌ಟಿ ವರ್ಗೀಕರಣ, ಕೊಡವ ಸ್ಯಾಕ್ರಮೆಂಟಲ್ ಗನ್-ತೋಕ್ ಹಕ್ಕು ಸೇರಿದಂತೆ ಆದಿಮಸಂಜಾತ ಏಕ-ಜನಾಂಗೀಯ, ಆನಿಮಿಸ್ಟಿಕ್ ಕೊಡವರಿಗಾಗಿ 10 ಗೌರವಾನ್ವಿತ ಗುರಿಗಳು ಹಾಗೂ ಹಕ್ಕೊತ್ತಾಯಗಳನ್ನು…
ಮಡಿಕೇರಿ NEWS DESK ನ.19 : ನಾನು 1980 ರಿಂದಲೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಯಾವುದೇ ಕಾರಣಕ್ಕೂ ಪಕ್ಷಾಂತರ ಮಾಡುವುದಿಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ನನ್ನ ರಾಜಕಾರಣದ ಕುರಿತು ಊಹಾಪೋಹಗಳು ಹರಿದಾಡುತ್ತಿದ್ದು, ಇದು ಸತ್ಯಕ್ಕೆ ದೂರವಾಗಿದೆ ಎಂದು ಕೆಪಿಸಿಸಿ ಸದಸ್ಯ ಕೆ.ಎ.ಯಾಕುಬ್ ಅವರು ಸ್ಪಷ್ಟಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ದೇಶದ ಸಂವಿಧಾನಕ್ಕೆ ಬದ್ಧವಾದ ಆಶಯಗಳೊಂದಿಗೆ ಸರ್ವಜನಾಂಗದ ಶಾಂತಿಯ ತೋಟದಂತ್ತಿರುವ ಕಾಂಗ್ರೆಸ್ ಪಕ್ಷ ನನಗೆ ಎಲ್ಲಾ ರೀತಿಯ ಹಕ್ಕುಗಳನ್ನು ನೀಡಿ ಪಕ್ಷ ನಿಷ್ಠಗೆ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ. ಆದರೆ ಇತ್ತೀಚೆಗೆ ನಾನು ಕಾಂಗ್ರೆಸ್ ತೊರೆದು ಬೇರೆ ಪಕ್ಷ ಸೇರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಊಹಾಪೋಹಗಳನ್ನು ಗಮನಿಸಿದ್ದೇನೆ. ಇದರಲ್ಲಿ ಯಾವುದೇ ಹುರುಳಿಲ್ಲ, ನನ್ನ ಅಭಿಮಾನಿಗಳು ಹಿತೈಷಿಗಳು ಪಕ್ಷದ ಕಾರ್ಯಕರ್ತರು ಮುಖಂಡರು ನನಗೆ ಪಕ್ಷದಲ್ಲಿ ಉತ್ತಮ ಸ್ಥಾನ ಮಾನಕ್ಕೆ ಆಗ್ರಹಿಸುವುದರಲ್ಲಿ ತಪ್ಪೇನಿಲ್ಲ ಎಂದು ತಿಳಿಸಿದ್ದಾರೆ. ಸಾಮಾನ್ಯ ಕಾರ್ಯಕರ್ತನಾಗಿದ್ದ ನನ್ನ ಮೇಲೆ ಕಾಂಗ್ರೆಸ್ ಪಕ್ಷ ವಿಶ್ವಾಸವಿಟ್ಟು ಹಲವು ಸಂದರ್ಭಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನೀಡಿ ಬೆಳೆಸಿದೆ. ಅಲ್ಲದೆ ಪ್ರಸ್ತುತ…
ಮಡಿಕೇರಿ ನ.19 NEWS DESK : ಕೊಡಗು ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘಕ್ಕೆ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಗೆ ಅತ್ಯಧಿಕ ಮತಗಳನ್ನು ಗಳಿಸಿ ಸಂಘದ ಮಾಜಿ ಅಧ್ಯಕ್ಷ ಸಿ.ವಿ.ನಾಗೇಶ್ ಅವರ ನೇತೃತ್ವದ 9 ನಿರ್ದೇಶಕರುಗಳು ಆಯ್ಕೆಯಾಗಿದ್ದಾರೆ. ಸಾಮಾನ್ಯ ಸ್ಥಾನದಿಂದ ಸಿ.ವಿ.ನಾಗೇಶ್, ಎ.ಜೇಕಬ್, ಬಿ.ಹೆಚ್.ಪ್ರದೀಪ್ ಕುಮಾರ್, ಮಹಿಳಾ ಮೀಸಲು ಸ್ಥಾನದಿಂದ ಪಿ.ಎನ್.ಅಶ್ವಿನಿ, ಲತಾಮಣಿ ಆರ್.ಸಿ. ಹಿಂದುಳಿದ ಪ್ರವರ್ಗ “ಎ” ಸ್ಥಾನದಿಂದ ಜಿ.ಸಿ.ಜಗದೀಶ್, ಹಿಂದುಳಿದ ಪ್ರವರ್ಗ “ಬಿ” ಸ್ಥಾನದಿಂದ ಬಿ.ಸಿ.ಜಾನಕಿ ಹಾಗೂ ಸದಸ್ಯ ಸಹಕಾರ ಸಂಘದಿಂದ ಆಶಾ ಚಿಣ್ಣಪ್ಪ, ಎಸ್.ವಿ.ಲೋಕಪ್ರಾಕಾಶ್ ಆಯ್ಕೆಯಾಗಿದ್ದಾರೆ ಎಂದು ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎನ್.ರಶ್ಮಿರಾಣಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಳೆದ 5 ವರ್ಷಗಳ ಕಾಲ ಅಧ್ಯಕ್ಷರಾಗಿ ಸಿ.ವಿ.ನಾಗೇಶ್ ಅವರು ಕಾರ್ಯನಿರ್ವಹಿಸಿದ್ದರು.
ಮಡಿಕೇರಿ ನ.19 NEWS DESK : ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ನ.25 ರವರೆಗೆ ನಡೆಯುವ ವಿಶ್ವ ಪಾರಂಪರ ಸಪ್ತಾಹ ಹಾಗೂ ಶಾಶ್ವತ ಛಾಯಾಚಿತ್ರ ಪ್ರದರ್ಶನ, ಗ್ಯಾಲರಿ ಸಹಿತ ವ್ಯಾಖ್ಯಾನ ಕೇಂದ್ರವನ್ನು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ನಗರದ ಕೋಟೆ ಆವರಣದಲ್ಲಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಸಂಸದರು, ಕೊಡಗು ಜಿಲ್ಲೆಗೆ ತನ್ನದೇ ಆದ ಇತಿಹಾಸವಿದ್ದು, 1600 ವರ್ಷಗಳ ಹಿಂದೆಯೇ ಕೊಡಗನ್ನು ಹಲವರು ಆಡಳಿತ ಮಾಡಿದ್ದು, ಕೊಡಗಿನ ಇತಿಹಾಸ, ಪರಂಪರೆ ಮತ್ತು ಸಂಸ್ಕøತಿ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದು ಅವರು ಹೇಳಿದರು. ಕೊಡಗಿನ ಇತಿಹಾಸ, ಸಂಸ್ಕøತಿ, ಪರಂಪರೆ ಕಲೆಗಳು ಶ್ರೀಮಂತಿಕೆ ಹೊಂದಿದ್ದು, ಅದನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವಂತಾಗಬೇಕು. ಆ ನಿಟ್ಟಿನಲ್ಲಿ ಕೋಟೆಯಲ್ಲಿ ಇತಿಹಾಸದ ಪರಂಪರಿಕ ಛಾಯಾಚಿತ್ರ ಪ್ರದರ್ಶನ ಮತ್ತಿತರ ಕಲಾ ಚಟುವಟಿಕೆಗಳು ನಡೆಯುವಂತಾಗಬೇಕು ಎಂದು ಸಂಸದರು ಹೇಳಿದರು. ನಗರದ ಕೋಟೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ…
ವಿರಾಜಪೇಟೆ ನ.19 NEWS DESK : ವಿರಾಜಪೇಟೆಯ ಸಾಹಿತಿಗಳು, ಪತ್ರಕರ್ತರು ಆದ ರಜಿತ ಕಾರ್ಯಪ್ಪ ಅವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವಿರಾಜಪೇಟೆ ತಾಲ್ಲೂಕು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಗೋಣಿಕೊಪ್ಪದ ಉಮಾಮಹೇಶ್ವರಿ ದೇವಾಲಯದ ಸಭಾಂಗಣದಲ್ಲಿ ನಡೆದ ಮಹಿಳಾ ವಿಚಾರಗೋಷ್ಟಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಹಿನ್ನಲೆ ರಜಿತ ಕಾರ್ಯಪ್ಪ ಅವರನ್ನು ಅತಿಥಿ ಗಣ್ಯರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ಗೋಣಿಕೊಪ್ಪ ಗ್ರಾ.ಪಂ ಅಧ್ಯಕ್ಷ ಪ್ರಮೋದ್ ಗಣಪತಿ, ಗ್ರಾ.ಪಂ ಮಾಜಿ ಅಧ್ಯಕ್ಷೆ ಸೌಮ್ಯ ಬಾಲ ಕೃಷ್ಣ, ಗ್ರಾಮಾಭಿವೃದ್ಧಿ ಯೋಜಾನಾಧಿಕಾರಿ ಹರೀಶ್, ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಉಷಾರಾಣಿ, ಗೋಣಿಕೊಪ್ಪ ಪೋಲಿಸ್ ಇಲಖೆಯ ಕಾವೇರಮ್ಮ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಮುದಾಯ ಇಲಾಖೆಯ ವೈದ್ಯಾಧಿಕಾರಿ ಡಾ. ಗ್ರೀಷ್ಮಾ, ಗೋಣಿಕೊಪ್ಪ ಸರಕಾರಿ ಪ್ರೌಢಶಾಲೆಯ ಶಿಕ್ಷಕರಾದ ಚಂದನ ಹಾಗೂ ಇತರರು ಇದ್ದರು.
ಮೂರ್ನಾಡು ನ.19 NEWS DESK : ಶ್ರೀ ಗಜಾನನಯುವಕ ಸಂಘದ ವತಿಯಿಂದ ನ.26 ರಂದು ಸುಬ್ರಹ್ಮಣ್ಯ ಷಷ್ಠಿಯ ಪ್ರಯುಕ್ತ ಮೂರ್ನಾಡಿನ ಅಯ್ಯಪ್ಪ ದೇವಾಲಯದಲ್ಲಿ ಭಕ್ತಾಧಿಗಳು ಮತ್ತು ಸಾರ್ವಜನಿಕರಿಗೆ 3ನೇ ವರ್ಷದ ಅನ್ನ ಸಂತರ್ಪಣೆ ಸೇವೆಯನ್ನು ಕೈಗೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಕೊಟ್ಟಂಗಡ ನವೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವರದಿ : ಟಿ.ಸಿ. ನಾಗರಾಜ್, ಮೂರ್ನಾಡು
ಮಡಿಕೇರಿ ನ.19 NEWS DESK : ಮುಕ್ಕಾಟಿರ(ದೇವಣಗೇರಿ) ಕುಟುಂಬದ ವತಿಯಿಂದ ಕೊಡವ ಕುಟುಂಬಗಳ ನಡುವಣ 5ನೇ ವರ್ಷದ ‘ಕೊಡವ ಫುಟ್ಬಾಲ್ ಉತ್ಸವ’ವು 2026ರ ಏ.7 ರಿಂದ 12ರವರೆಗೆ ಗೋಣಿಕೊಪ್ಪಲುವಿನಲ್ಲಿ ನಡೆಯಲಿದೆಯೆಂದು ಪಂದ್ಯಾವಳಿ ಆಯೋಜನಾ ಸಮಿತಿಯ ಅಧ್ಯಕ್ಷ ಮುಕ್ಕಾಟಿರ ಸಿ.ಕರುಂಬಯ್ಯ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕೌಟುಂಬಿಕ ಹಾಕಿ, ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡಾಕೂಟಗಳು ಪ್ರಸ್ತುತ ದೊಡ್ಡ ಮಟ್ಟದಲ್ಲಿ ಬೆಳೆದು, ಪ್ರತಿಭಾವಂತ ಕ್ರೀಡಾಪಟುಗಳನ್ನು ಉತ್ತೇಜಿಸುತ್ತಿವೆ. ಅದೇ ರೀತಿ ಫುಟ್ಬಾಲ್ ಪ್ರತಿಭೆಗಳನ್ನು ಗುರುತಿಸಲು ಹಾಗೂ ಕೊಡವ ಸಮುದಾಯದವರನ್ನು ಒಂದಾಗಿ ಬೆಸೆಯುವ ಚಿಂತನೆಗಳಡಿ ಫುಟ್ಬಾಲ್ ಉತ್ಸವವನ್ನು ಆಯೋಜಿಸುತ್ತಿರುವುದಾಗಿ ಹೇಳಿದರು. ಗೋಣಿಕೊಪ್ಪಲು ಸಮೀಪದ ಅಥ್ಲಾನ್ ಮೈದಾನದಲ್ಲಿ ಫುಟ್ಬಾಲ್ ಪಂದ್ಯಾವಳಿ ನಡೆಯಲಿದೆ. ಕಳೆದ ಬಾರಿಯ ಪಂದ್ಯಾವಳಿಯಲ್ಲಿ 74 ತಂಡಗಳು ಪಾಲ್ಗೊಂಡಿದ್ದವು. ಈ ಬಾರಿ 100 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಪಂದ್ಯಾವಳಿ ಐವರು ಆಟಗಾರರ ತಂಡಗಳ ನಡುವೆ ನಡೆಯಲಿದೆ. ಪ್ರತಿ ತಂಡದಲ್ಲಿ ಇಬ್ಬರು ಅತಿಥಿ ಆಟಗಾರರು ಪಾಲ್ಗೊಳ್ಳುವ ಅವಕಾಶವನ್ನು ಒದಗಿಸಲಾಗಿದೆ. ಈ ಅತಿಥಿ ಆಟಗಾರರು…
ಮಡಿಕೇರಿ ನ.19 NEWS DESK : ಮಡಿಕೇರಿಯ ಸಂತ ಮೈಕಲರ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ “ಸಮಾಗಮ” ನ.22 ರಂದು ನಡೆಯಲಿದೆ. ಅಂದು ಸಂಜೆ 4 ಗಂಟೆಗೆ ನಗರದ ಗಾಂಧಿ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ಮೈಸೂರು ಬಿಷಪ್ ಮತ್ತು ಎಂಡಿಇಎಸ್ ಅಧ್ಯಕ್ಷರಾದ ವಂದನೀಯ ಡಾ. ಫ್ರಾನ್ಸಿಸ್ ಸೆರಾವೊ ಎಸ್.ಜೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ವೆಂಕಟ್‍ರಾಜಾ ಪಾಲ್ಗೊಳ್ಳಲಿದ್ದು, ಅತಿಥಿಗಳಾಗಿ ಮೈಸೂರು ಡಯಾಸಿಸ್ ವಿಕಾರ್ ಜನರಲ್ ಆಲ್ಫ್ರೆಡ್ ಜಾನ್ ಮೆಂಡೋನ್ಸಾ, ಎಂಡಿಇಎಸ್ ಕಾರ್ಯದರ್ಶಿ ಫಾದರ್ ಎಡ್ವರ್ಡ್ ವಿಲಿಯಂ ಸಲ್ಡಾನಾ, ಖಜಾಂಚಿ ಫಾ. ನವೀನ್ ಕುಮಾರ್ ಎ, ಮಡಿಕೇರಿ ಸೇಂಟ್ ಮೈಕೆಲ್ಸ್ ಚರ್ಚ್‍ನ ಫಾ. ಜಾರ್ಜ್ ದೀಪಕ್ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.






