ಲೇಖಕ: admin

ಸುಂಟಿಕೊಪ್ಪ ಅ.8 NEWS DESK : ಕುಶಾಲನಗರ ತಾಲ್ಲೂಕಿನ ನಾಕೂರು ಶಿರಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ಸಮಸ್ತ ಮಲೆಯಾಳಿ ಭಾಷಿಗರ ಹಿಂದೂ ಮಲೆಯಾಳಿ ಸಮಾಜದ ವತಿಯಿಂದ ಮೂರನೇ ವರ್ಷದ ಓಣಂ ಆಚರಣೆ ತಾ.12 ರಂದು ಕಾನ್ ಬೈಲ್ ನಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಲಿದೆ. ಅಂದು ಬೆಳಗ್ಗೆ 9 ಗಂಟೆಗೆ ಕಲ್ಲೂರು ಬಸವೇಶ್ವರ ದೇವಾಲಯ ದಿಂದ ಕಾನ್ ಬೈಲ್ ಶಾಲೆಯವರೆಗೂ ಚಂಡೆ ಮೇಳದೊಂದಿಗೆ ಮೆರವಣಿಗೆ ಇರುತ್ತದೆ.  ಬಳಿಕ ಕಾನ್ ಬೈಲ್ ನ ಸರ್ಕಾರಿ ಶಾಲಾ ಆವರಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಮಾಜಿ ಸಚಿವ ಅಪ್ಪಚ್ಚು ರಂಜನ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಲಿದ್ದಾರೆ. ಓಣಂ ಅಂಗವಾಗಿ ಮಲೆಯಾಳಿ ಹಿಂದೂ ಸಮಾಜ ಬಾಂಧವರಿಗೆ ಪೂಕಳಂ ಸ್ಪರ್ಧೆ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಬಳಿಕ ತಿರುವಾದಿರ ನೃತ್ಯ ದೊಂದಿಗೆ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಕೇರಳದ ವಿಶೇಷ ಬಾಣಸಿಗರಿಂದ ತಯಾರಿಸಿದ ಓಣಂ ಸದ್ಯ ಏರ್ಪಡಿಸಲಾಗಿದೆ ಎಂದು ಹಿಂದೂ ಮಲೆಯಾಳಿ ಸಮಾಜದ ಅಧ್ಯಕ್ಷ ಕೆ.ಜಿ.ರಾಜ ತಿಳಿಸಿದ್ದಾರೆ.…

Read More

ಮಡಿಕೇರಿ ಅ.8 NEWS DESK : ಕೊಡಗು ಜಿಲ್ಲಾ ಪೊಲೀಸ್ ಘಟಕದ ವಿವಿಧ ಠಾಣೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಸಹಾಯಕ ಪೊಲೀಸ್ ಉಪ ನಿರೀಕ್ಷಕ ಕೆ.ಇ.ಉತ್ತಯ್ಯ ಅವರನ್ನು ಜಿಲ್ಲಾ ಪೊಲೀಸ್ ಘಟಕದ ಪರವಾಗಿ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್  ನಿವೃತ್ತರನ್ನು ಸನ್ಮಾನಿಸಿ ನಿವೃತ್ತ ಜೀವನ ಶುಭಪ್ರದವಾಗಿರಲೆಂದು ಹಾರೈಸಿದರು.

Read More

ವಿರಾಜಪೇಟೆ ಅ.8 NEWS DESK : “ವಿಶ್ವದ ಅಗ್ರ 2% ವಿಜ್ಞಾನಿಗಳು” (2025ರ ಸಮೀಕ್ಷೆ) ಪಟ್ಟಿಯಲ್ಲಿ ಡಾ.ಉತ್ತಪ್ಪ ಯು.ಟಿ. ಅವರು ತಮ್ಮ ಹೆಸರನ್ನು ದಾಖಲಿಸಿಕೊಂಡಿದ್ದಾರೆ. ಪ್ರತಿ ವರ್ಷ ಅಮೆರಿಕಾದ ಸ್ಟ್ಯಾಂಫರ್ಡ್ ವಿಶ್ವವಿದ್ಯಾಲಯದ ಪ್ರೊ. ಪಿ.ಎ.ಜಾನ್ ಇಯೋನಿಡಿಸ್ ಅವರು, ಎಲ್ಸೆವಿಯರ್ (Elsevier) ಮತ್ತು ಸ್ಕೋಪಸ್ Scopus ಸಂಸ್ಥೆಗಳ ಸಹಯೋಗದೊಂದಿಗೆ “ವಿಶ್ವದ ಅಗ್ರ 2% ವಿಜ್ಞಾನಿಗಳು” ಎಂಬ ಪಟ್ಟಿಯನ್ನು ಪ್ರಕಟಿಸುತ್ತಾರೆ. ಈ ಪಟ್ಟಿ ವಿಶ್ವದಾದ್ಯಂತದ ಸುಮಾರು 2% ವಿಜ್ಞಾನಿಗಳಲ್ಲಿ ಅತ್ಯಂತ ಪ್ರಭಾವಶಾಲಿ ವಿಜ್ಞಾನಿಗಳನ್ನು ಗುರುತಿಸುವುದು. ಈ ಸಮೀಕ್ಷೆ ಮಾನದಂಡಿತ ಉಲ್ಲೇಖ (citation) ಅಂಶಗಳು ಮತ್ತು ಸಂಯುಕ್ತ ವೈಜ್ಞಾನಿಕ ಪರಿಣಾಮದ ಸೂಚ್ಯಂಕಗಳ ಆಧಾರದ ಮೇಲೆ ಮಾಡಲ್ಪಟ್ಟಿದೆ. ಡಾ. ಉತಪ್ಪ ಯು.ಟಿ. ಅವರು ಪ್ರಸ್ತುತ ಚೀನಾದ ಶೆನ್ಜೆನ್ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ಮತ್ತು ಪರಿಸರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪೋಸ್ಟ್-ಡಾಕ್ಟರಲ್ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಮೊದಲು ಅವರು ದಕ್ಷಿಣ ಕೊರಿಯಾದ ಚೋನ್ನಮ್ ನ್ಯಾಷನಲ್ ಯುನಿವರ್ಸಿಟಿಯಲ್ಲಿ (2021-2022) ಪೋಸ್ಟ್-ಡಾಕ್ಟರಲ್ ಫೆಲೋ ಆಗಿ ಹಾಗೂ ಯಾಂಗ್ನಮ್ ಯುನಿವರ್ಸಿಟಿಯಲ್ಲಿ (2022-2023) ಸಂಶೋಧನಾ ಪ್ರಾಧ್ಯಾಪಕರಾಗಿ ಸೇವೆ…

Read More

ವಿರಾಜಪೇಟೆ ಅ.8 NEWS DESK : ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜು ವತಿಯಿಂದ ಎನ್‍ಎಸ್‍ಎಸ್ ವಿಶೇಷ ಶಿಬಿರ ಅಮ್ಮತ್ತಿಯಲ್ಲಿ ನಡೆಯಿತು. ನಶಾ ಮುಕ್ತ ಭಾರತ ಅಭಿಯಾನ ಭಾಗವಾಗಿ ನಡೆದ ವಿಶೇಷ ಶಿಬಿರದಲ್ಲಿ ಕಾಲೇಜಿನ ಎನ್‍ಎಸ್‍ಎಸ್ ಘಟಕದ ವಿದ್ಯಾರ್ಥಿಗಳು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಶಿಬಿರದ ಸಮಾರೋಪ ಸಮಾರಂಭ ಅಮ್ಮತ್ತಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಎ.ಡಿ.ಅಕ್ಕಮ್ಮ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಮಂಡೇಪಂಡ ಸುಗುಣ ಮುತ್ತಣ್ಣ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಶಿಸ್ತು, ಸಮಯ ಪಾಲನೆ, ಸಂಯಮ, ಎಲ್ಲರೊಡನೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು. ಅಮ್ಮತ್ತಿ ಪ್ರೌಢಶಾಲೆ ಅಧ್ಯಕ್ಷ ಕಾವಾಡಿಚಂಡ ಗಣಪತಿ ಮಾತನಾಡಿ, ದಸರ ರಜೆಯಲ್ಲಿ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡು ಸಮಾಜಮುಖಿ ಕಾರ್ಯದಲ್ಲಿ ಭಾಗಿಯಾಗಿರುವುದು ಉತ್ತಮ ಬೆಳವಣಿಗೆ. ಸಮಾಜ ಸೇವೆ ಮಾಡಲು ಸಿಗುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು. ಅಮ್ಮತ್ತಿ ಪ್ರೌಢಶಾಲೆ ನಿರ್ದೇಶಕ ಕೇಚಂಡ ಎಂ.ಕುಶಾಲಪ್ಪ, ಸದಸ್ಯೆ ಬಿ.ನಳಿನಿ, ಕಾವೇರಿ ಪಿಯು ಕಾಲೇಜಿನ ಪ್ರಾಂಶುಪಾಲ ನುಚ್ಚುಮಣಿಯಂಡ ನಾಣಯ್ಯ ಮುಂತಾವದರು…

Read More

ನಾಪೋಕ್ಲು ಅ.8 NEWS DESK : ಮಂಗಳೂರು ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅಕಾಡೆಮಿ ಪರವಾಗಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್, ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಕೆ.ಎಂ.ಮುಸ್ತಫ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಧ್ಯಕ್ಷರೊಂದಿಗೆ ಸುಳ್ಯದ ಗ್ರಾಮೀಣ ಭಾಗದ ವಿದ್ಯುತ್ ಸಮಸ್ಯೆ ಮತ್ತು 110 ಕೆವಿ ವಿದ್ಯುತ್ ಕಾಮಗಾರಿಯ ಬಗ್ಗೆ ಚರ್ಚಿಸಲಾಯಿತು. ಇದಕ್ಕೆ ಸ್ಪಂದಿಸಿದ ಅಧ್ಯಕ್ಷರಾದ ಹರೀಶ್ ಕುಮಾರ್ ಶೀಘ್ರ ದಲ್ಲಿಯೇ ಸುಳ್ಯಕ್ಕೆ ಭೇಟಿ ನೀಡಿ ಸಭೆ ನಡೆಸುವುದಾಗಿ ತಿಳಿಸಿದರು. ವರದಿ : ದುಗ್ಗಳ ಸದಾನಂದ. 

Read More

ಮಡಿಕೇರಿ ಅ.8 NEWS DESK : ಪೊನ್ನಂಪೇಟೆ ತಾಲ್ಲೂಕು ಟಿ.ಶೆಟ್ಟಿಗೇರಿಯಲ್ಲಿ ರೂ.1 ಕೋಟಿ 60ಲಕ್ಷ ಅನುದಾನದಲ್ಲಿ ವಿದ್ಯುತ್ ಮಾರ್ಗಗಳನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಭೂಮಿ ಪೂಜೆ ನೆರೆವೇರಿಸಿದರು. ಇದೀಗ ಕಾಮಗಾರಿ ಆರಂಭಗೊಂಡ ನಾಲ್ಕು ದಿನಗಳಲ್ಲಿ ಅರ್ಧದಷ್ಟು ಪೂರ್ಣಗೊಂಡಿದೆ. ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿದ ಬೆನ್ನಲ್ಲೇ, ಕಾಮಗಾರಿ ವೇಗ ಪಡೆದುಕೊಂಡು, ಇನ್ನು ಒಂದು ವಾರದೊಳಗೆ ಕಾಮಗಾರಿ ಮುಗಿಯುವ ಸಾಧ್ಯತೆ ಇದೆ.  ಶಾಸಕ ಪೊನ್ನಣ್ಣ ಅವರ ಕಾರ್ಯಕ್ಷಮತೆಗೆ ಸಾರ್ವಜನಿಕರಿಂದವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Read More

ನಾಪೋಕ್ಲು ಅ.8 NEWS DESK : ಸ್ಥಳಿಯ ಲಯನ್ಸ್ ಕ್ಲಬ್ ವತಿಯಿಂದ ಹಸಿವು ಮುಕ್ತ ಸಮಾಜ ಕಾರ್ಯಕ್ರಮದಡಿ ಬಡ 10 ಕುಟುಂಬಗಳಿಗೆ ಆಹಾರದ ಕಿಟ್‍ಗಳನ್ನು ವಿತರಿಸಲಾಯಿತು. ಲಯನ್ಸ್ ಕ್ಲಬ್‍ನ ಅಧ್ಯಕ್ಷರಾದ ಎಂ.ಬಿ.ಕುಟ್ಟಪ್ಪ ಅವರ ಅಧ್ಯಕ್ಷತೆಯಲ್ಲಿ ಹಸಿವು ಮುಕ್ತ ಸಮಾಜ ಅಭಿಯಾನ ಅಂಗವಾಗಿ ನಾಪೋಕ್ಲು ಮಹಿಳಾ ಸಮಾಜದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸ್ಥಳೀಯ ಬಡ ಹತ್ತು ಕುಟುಂಬಗಳಿಗೆ ಪ್ರತ್ಯೇಕವಾಗಿ ಒಂದು ತಿಂಗಳಿಗೆ ಬೇಕಾಗುವ ಅಕ್ಕಿ ಹಾಗೂ ಇದರ ಪದಾರ್ಥಗಳನ್ನು ಒಳಗೊಂಡ ಕಿಟ್ ಮತ್ತು ಬ್ಲಾಂಕೆಟ್ ವಿತರಿಸಲಾಯಿತು. ಈ ಸಂದರ್ಭ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಡಾ.ಪಂಚಮ್ ತಿಮ್ಮಯ್ಯ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಬನ್ಸಿ ಭೀಮಯ್ಯ, ಖಜಾಂಚಿ ವಸಂತ ಮುತ್ತಪ್ಪ, ಸುಧಿ ತಿಮ್ಮಯ್ಯ, ರೇಷ್ಮಾ ಉತ್ತಪ್ಪ, ರಘು ತಿಮ್ಮಯ್ಯ, ಮೇರಿ ಚೆಟ್ಟಿಯಪ್ಪ, ಶುಭಾಷ್ ತಿಮ್ಮಯ್ಯ, ರೇಖಾ ಪೊನ್ನಣ್ಣ ಉಪಸ್ಥಿತರಿದ್ದರು. ವರದಿ : ದುಗ್ಗಳ ಸದಾನಂದ.

Read More

ಗೋಣಿಕೊಪ್ಪ ಅ.8 NEWS DESK : ಸ್ಕೂಲ್‍ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ   ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ನಡೆದ 14 ವರ್ಷದೊಳಗಿನವರ ರಾಜ್ಯಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿದ್ದ ಲಿರನ್ ಬೋಪಣ್ಣ ಹೆಚ್.ಆರ್ ಚಿನ್ನದ ಪದಕ ಪಡೆದುಕೊಳ್ಳುವ ಮೂಲಕ ರಾಷ್ಟ್ರಮಟ್ಟದ ಬಾಕ್ಸಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಗೋಣಿಕೊಪ್ಪಲು ಜಿ.ಹೆಚ್.ಎಸ್ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಲಿರನ್, ಜೋಡುಬೀಟಿ ನಿವಾಸಿ ಹೆಚ್.ಕೆ.ರವಿ, ಹೆಚ್.ಎಸ್.ವನಿತಾ ದಂಪತಿ ಪುತ್ರ. ಕೊಡಗು ಬಾಕ್ಸಿಂಗ್ ಅಕಾಡೆಮಿಯ ಮುಖ್ಯಸ್ಥ ಕರ್ನಲ್ ಚೆಪ್ಪುಡೀರ ಮುತ್ತಣ್ಣ ಅವರ ಮಾರ್ಗದರ್ಶನದಲ್ಲಿ ತರಬೇತುದಾರರಾದ ದೇಯಂಡ ಮೇದಪ್ಪ ಹಾಗೂ ಶರತ್ ನಾಯ್ಡು ತರಬೇತಿ ನೀಡುತ್ತಿದ್ದಾರೆ.

Read More

ಮಡಿಕೇರಿ, ಅ.8 NEWS DESK : 2025-26 ನೇ ಸಾಲಿನ ಎನ್.ಎಂ.ಎಂ.ಎಸ್.( ನ್ಯಾಷನಲ್ ಮೀನ್ಸ್ ಕಂ ಮೆರಿಟ್ ) ವಿದ್ಯಾರ್ಥಿ ವೇತನ ಪರೀಕ್ಷೆಗೆ ಹೆಸರು ನೋಂದಾಯಿಸಲು ಅ.15 ರ ವರೆಗೆ ದಿನಾಂಕವನ್ನು ವಿಸ್ತರಿಸಲಾಗಿದೆ. ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಸ್ತುತ ಎಂಟನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಎನ್.ಎಂ.ಎಂ.ಎಸ್ .ಪರೀಕ್ಷೆ ತೆಗೆದುಕೊಳ್ಳಲು ಅರ್ಹತೆ ಪಡೆದಿದ್ದು, ಶಾಲೆಯ ಮೂಲಕ ಆನ್ ಲೈನ್ ( oಟಿ ಟiಟಿe ) ಮೂಲಕ ಸೂಕ್ತ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಬೇಕು. ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿ- ಪೋಷಕರ ವಾರ್ಷಿಕ ಆದಾಯವು ಗರಿಷ್ಠ ರೂ.3.5 ಲಕ್ಷ ಇರಬೇಕು. ಅಂತಹ ವಿದ್ಯಾರ್ಥಿಗಳು ಮಾತ್ರ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರುತ್ತಾರೆ. ಜಿಲ್ಲೆಯಿಂದ ಹೆಚ್ಚಿನ ಮಕ್ಕಳು ಈ ಪರೀಕ್ಷೆಯನ್ನು ತೆಗೆದುಕೊಂಡು ವಿದ್ಯಾರ್ಥಿ ವೇತನದ ಸೌಲಭ್ಯ ಪಡೆದುಕೊಳ್ಳಲು ಶಾಲಾ ಶಿಕ್ಷಕರು ಹಾಗೂ ಪೋಷಕರು ವಿದ್ಯಾರ್ಥಿಗಳ ನೋಂದಣಿ ಮಾಡಿಸಬೇಕು ಎಂದು ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ಸಂಸ್ಥೆ ( ಡಯಟ್ ) ಯ ಉಪ ನಿರ್ದೇಶಕ(…

Read More

ಮಡಿಕೇರಿ ಅ.8 NEWS DESK : ಮಹರ್ಷಿ ವಾಲ್ಮೀಕಿ ಅವರು ಬರೆದಿರುವ ರಾಮಾಯಣದಲ್ಲಿ ಭಾರತೀಯ‌ ಸಂಸ್ಕೃತಿ, ಇತಿಹಾಸ ಮತ್ತು ಪರಂಪರೆಯನ್ನು ಕಾಣಬಹುದಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಗಾಂಧಿ ಭವನದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.‌ ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಮಹಾಕಾವ್ಯ ರಚಿಸುವ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಇತಿಹಾಸವನ್ನು ಸಾರಿದ್ದಾರೆ. ಮಹಾ ಕಾವ್ಯದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. ಮಹರ್ಷಿ ವಾಲ್ಮೀಕಿ ಅವರ ಪರಿಕಲ್ಪನೆ, ದೂರದರ್ಶಿತ್ವ ಸ್ಮರಣೀಯವಾದುದು ಎಂದು ಜಿಲ್ಲಾಧಿಕಾರಿ ಅವರು ನುಡಿದರು. ಆಧುನಿಕತೆ ಬೆಳೆದಂತೆ ಭಾರತೀಯ ಹಿಂದಿನ ಇತಿಹಾಸ ಮತ್ತು ಸಂಸ್ಕೃತಿಯನ್ನು ಮರೆಯಬಾರದು. ವಾಲ್ಮೀಕಿ ರಾಮಾಯಣದ ಬಗ್ಗೆ ಅಂತರ್ಜಾಲದಲ್ಲಿ ಸಾಕಷ್ಟು ಮಾಹಿತಿ ದೊರೆಯಲಿದ್ದು, ಪ್ರತಿಯೊಬ್ಬರೂ ಅಧ್ಯಯನ ಮಾಡುವಂತಾಗಬೇಕು ಎಂದು ವೆಂಕಟ್ ರಾಜಾ ಅವರು…

Read More