ಲೇಖಕ: admin

ವಿರಾಜಪೇಟೆ ಸೆ.24 NEWS DESK : ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ವಿರಾಜಪೇಟೆಯ ಸೆಂಟ್ ಆನ್ಸ್ ಕಾಲೇಜಿನಲ್ಲಿ  ಸ್ನಾತಕೋತ್ತರ ವಿಭಾಗಕ್ಕೆ 2025 -26ನೇ ಸಾಲಿಗೆ ಪ್ರವೇಶಾತಿ ಆರಂಭವಾಗಿದೆ. ನುರಿತ ಉಪನ್ಯಾಸಕರು, ಸುಸಜ್ಜಿತ ಕೊಠಡಿ, ಐಸಿಟಿ ತರಗತಿ, ಗ್ರಂಥಾಲಯ ವ್ಯವಸ್ಥೆ, ವೈಫೈ ವ್ಯವಸ್ಥೆ, ಕೆ ಸೆಟ್ ಹಾಗೂ ನೆಟ್ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಜೊತೆಗೆ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ವಿಚಾರ ಮಂಡನೆ, ಇಂಡಸ್ಟ್ರಿಯಲ್ ವಿಸಿಟ್ ಹಾಗೂ ಇಂಟರ್ನ್ ಷಿಪ್, ಬೋಧನಾ ಕೌಶಲ್ಯ ತರಬೇತಿ, ಸೆಮಿನಾರ್, ಫೆಸ್ಟ್ ಗಳಲ್ಲಿ ಪಾಲ್ಗೊಳ್ಳುವಿಕೆ ಹಾಗೂ ಪ್ರಾಯೋಗಿಕ ತರಬೇತಿಗಳಿಗೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ. ಈ ಹಿಂದಿನ ಸಾಲಿನ ವಿದ್ಯಾರ್ಥಿಗಳು ಸೆಮಿಸ್ಟರ್ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿಯನ್ನು ಪಡೆಯುವುದರ ಜೊತೆಗೆ ಪ್ರತಿ ಸೆಮಿಸ್ಟರ್ ಗಳಲ್ಲೂ ಶೇ.100 ಫಲಿತಾಂಶ ದಾಖಲಾಗಿರುತ್ತದೆ. ಶಿಕ್ಷಣ ಮಾತ್ರವಲ್ಲದೆ ಉದ್ಯೋಗ ಘಟಕದ ಮೂಲಕ ಕ್ಯಾಂಪಸ್ ಸೆಲೆಕ್ಷನ್, ಸಾಂಸ್ಕೃತಿಕ ಚಟುವಟಿಕೆ, ಶೈಕ್ಷಣಿಕ ಪ್ರವಾಸ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತಿದೆ. ಜೊತೆಗೆ ಗ್ರಾಮೀಣ ಭಾಗದ…

Read More

ಮಡಿಕೇರಿ ಸೆ.24 NEWS DESK : ಗೋಣಿಕೊಪ್ಪ ಕಾಲ್ಸ್ ಶಾಲಾ ಮೈದಾನದಲ್ಲಿ ಕೊಡಗು ಜಿಲ್ಲಾ ಕಿವುಡರ ಸಂಘ ಹಾಗೂ ಕರ್ನಾಟಕ ಕಿವುಡರ ಕ್ರೀಡಾ ಒಕ್ಕೂಟದ ವತಿಯಿಂದ 1ನೇ ಕರ್ನಾಟಕ ರಾಜ್ಯ ಕಿವುಡರ ಇಂಟರ್ ಶಾಲಾ ಅಥ್ಲೆಟಿಕ್ ಚಾಂಪಿಯನ್‍ಶಿಪ್ ಕ್ರೀಡಾಕೂಟ ನಡೆಯಿತು. ರಾಜ್ಯದ ವಿವಿಧ ಜಿಲ್ಲೆಗಳಾದ ಬಾಗಲಕೋಟೆ, ಗದಗ, ಕೋಲಾರ, ಬೆಂಗಳೂರು, ಮೈಸೂರು, ಮಂಡ್ಯ, ಕೊಡಗು ಸೇರಿದಂತೆ 16 ಜಿಲ್ಲೆಯ ಶಾಲೆಗಳ ಒಟ್ಟು 250 ವಿಶೇಷಚೇತನ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ಕ್ರೀಡಾಕೂಟದಲ್ಲಿ 800ಮೀ, 400ಮೀ, 200ಮೀ, 100 ಮೀ ಓಟ, ಎತ್ತರ ಜಿಗಿತ, ಉದ್ದ ಜಿಗಿತ, ಭಾರದ ಗುಂಡು ಎಸೆತ ಇನ್ನಿತರ ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಕ್ರೀಡೆಯಲ್ಲಿ ಜಯಗಳಿಸಿದ ವಿಶೇಷಚೇತನ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಪದಕವನ್ನು ಸಂಸ್ಥೆಯ ವತಿಯಿಂದ ನೀಡಲಾಯಿತು. ಕ್ರೀಡಾಕೂಟವನ್ನು ಕಾಲ್ಸ್ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರಾದ ಗೌರಮ್ಮ ನಾಚಪ್ಪ ಶುಭ ಹಾರೈಸಿದರು. ಕೊಡಗು ಜಿಲ್ಲಾ ಕಿವುಡರ ಸಂಘದ ಜಿಲ್ಲಾಧ್ಯಕ್ಷರಾದ ಗೌರು ಸೋಮಣ್ಣ ಮಾತನಾಡಿ, ಈ ರೀತಿಯ…

Read More

ಮಡಿಕೇರಿ ಸೆ.24 NEWS DESK : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಕುಂದುರುಮೊಟ್ಟೆ ಶ್ರೀ ಚೌಟಿಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನೆಯ 22ನೇ ವಾರ್ಷಿಕೋತ್ಸವವು ಸೆ.24 (ಇಂದು) ರಿಂದ 26ರ ವರೆಗೆ ನಡೆಯಲಿದೆ.  ಸೆ.24 (ಇಂದು) ರಂದು ಸಂಜೆ 6 ಗಂಟೆಗೆ ಗುರು ಗಣಪತಿ ಪೂಜೆ, ಪುಣ್ಯಾಹ, ಸಂಕಲ್ಪ, ದುರ್ಗಾ ಸಪ್ತಶತಿ ಪಾರಾಯಣ, ಮಹಾಪೂಜೆ, ದೀಪರಾಧನೆ ಹಾಗೂ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. ಸೆ.25 ರಂದು ಬೆಳಿಗ್ಗೆ 8 ಗಂಟೆಗೆ ಚಂಡಿಕಾ ಹೋಮ, ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ ಹಾಗೂ ಮಹಾ ಮಂಗಳಾರತಿ ಜರುಗಲಿದ್ದು, ನಂತರ ತೀರ್ಥಪ್ರಸಾದ ವಿನಿಯೋಗ ನೆರವೇರಲಿದೆ. ಸಂಜೆ 6 ಗಂಟೆಯಿಂದ ವಾರ್ಷಿಕೋತ್ಸವ ಕಾರ್ಯಕ್ರಮಗಳು ಆರಂಭವಾಗಲಿದ್ದು, ಗುರು ಗಣಪತಿ ಪೂಜೆ, ಪುಣ್ಯಾಹ, ಸಂಕಲ್ಪ, ಕಳಶಸ್ಥಾಪನೆ, ದೀಪಾರಾಧನೆ, ಅಷ್ಠಾವಧಾನ ಸೇವೆ ನಂತರ ತೀರ್ಥಪ್ರಸಾದ ವಿನಿಯೋಗವಾಗಲಿದೆ.  ಸೆ.26 ರಂದು ಬೆಳಿಗ್ಗೆ ಗುರುಗಣಪತಿ ಪೂಜೆ, ಪುಣ್ಯಾಹ, ಗಣಪತಿ ಹೋಮ, ಕಲಾಹೋಮ, ತತ್ವಹೋಮ, ತತ್ವಶಾಂತಿ ಹೋಮ, ದುರ್ಗಾ ಹೋಮ, ತತ್ವಕಲಶಾಭಿಷೇಕ, ಮಹಾಪೂಜೆ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.…

Read More

ಮಡಿಕೇರಿ ಸೆ.24 NEWS DESK : ನಿರ್ಲಕ್ಷಿಸಲ್ಪಟ್ಟ ಮತ್ತು ಅಳಿವಿನಂಚಿನ ಸಮುದಾಯಗಳ ರಕ್ಷಣೆ ನಾಗರೀಕ ಸಮಾಜದ ಹೊಣೆಯಾಗಬೇಕು ಎಂದು ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಅವರು ಅಭಿಪ್ರಾಯಪಟ್ಟಿದ್ದಾರೆ. ಹಾಕತ್ತೂರು ಸರಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆದ ಕೊಡಗು ಮೂಲನಿವಾಸಿ ಅರಮನೆಪಾಲೆ ಸಮಾಜದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೊಡಗಿನ ಹಲವು ಸಮುದಾಯಗಳು ಇಂದು ಅಳಿವಿನಂಚಿಗೆ ಬಂದು ತಲುಪಿದ್ದು, ಅದರಲ್ಲಿ ಅರಮನೆಪಾಲೆ ಸಮುದಾಯವು ಒಂದು. ಇದು ಕೊಡಗಿನಲ್ಲಿ ತನ್ನದೇ ಆದ ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿದೆ. ಕೊಡಗಿನ ಕೊಡವ ಸಂಸ್ಕೃತಿಯ ಮೂಲ ಬೇರುಗಳನ್ನು ಹೊಂದಿರುವ ಈ ಸಮುದಾಯವನ್ನು ಸರಕಾರ ಇಲ್ಲಿಯವರೆಗೆ ಗುರುತಿಸದೆ ಇರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು. ನಿರ್ಲಕ್ಷ್ಯಕ್ಕೆ ಒಳಗಾಗುವ ಸಮುದಾಯಗಳ ರಕ್ಷಣೆ ನಾಗರೀಕ ಸಮಾಜದ  ಹೊಣೆಯಾಗಿದೆ. ಈ ನಿಟ್ಟಿನಲ್ಲಿ ಕೊಡವ ಭಾಷಿಕ ಸಮುದಾಯಗಳ ಕೂಟ ಎಲ್ಲಾ ರೀತಿಯ ಸಲಹೆ, ಸಹಕಾರ ನೀಡಲು ಮತ್ತು ಅಗತ್ಯ ಕ್ರಮ ಕೈಗೊಳ್ಳಲು ಸದಾ ಸಿದ್ಧವಿದೆ ಎಂದು ಡಾ.ಸುಭಾಷ್ ನಾಣಯ್ಯ…

Read More

ಮಡಿಕೇರಿ ಸೆ.24 NEWS DESK : ಕೊಡಗು ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್(ನೀಮಾ) ಹಾಗೂ ಆಯುಷ್ ಇಲಾಖೆ ವತಿಯಿಂದ ಹತ್ತನೆಯ ವರ್ಷದ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಮೇಕೇರಿಯಲ್ಲಿ ಆಚರಿಸಲಾಯಿತು.  ಕೇಂದ್ರ ಸರ್ಕಾರ ಈ ವರ್ಷ ಆರೋಗ್ಯಕ್ಕಾಗಿ ಆಯುರ್ವೇದ ಎಲ್ಲರಿಗೂ ಆಯುರ್ವೇದ ಎಂಬ ಧ್ಯೇಯದೊಂದಿಗೆ ಪ್ರತಿ ಮನೆಯಲ್ಲಿಯೂ ಮದ್ದಿನ ಗಿಡದ ಪ್ರಾಮುಖ್ಯತೆ ತಿಳಿಸುವ ಯೋಜನೆಗೆ ಪೂರಕವಾಗಿ “ನೀಮಾ-ಕೊಡಗು” ವತಿಯಿಂದ ಕೊಡಗಿನ ಅಳಿವಿನಂಚಿನಲ್ಲಿರುವ ಹಾಗೂ ವಿಶೇಷ ಔಷಧೀಯ ಗುಣಗಳನ್ನು ಹೊಂದಿರುವ “ಮೂಲಿಕಾ ವನ” ವನ್ನು ನಿರ್ಮಿಸಲು ಉದ್ದೇಶಿಸಿದ್ದು, ಇದಕ್ಕಾಗಿ ಗಜರಾಜ ನಾಯ್ಡು ಅವರು ಸಂಘಕ್ಕೆ ಒಂದು ಎಕರೆಗೂ ಮೀರಿದ ಜಾಗವನ್ನು ಉದಾರವಾಗಿ  ಹಸ್ತಂತರಿಸಿದರು. ಮುಂದಿನ ದಿನಗಳಲ್ಲಿ ನಾಗರಿಕರಿಗೆ, ವಿದ್ಯಾರ್ಥಿಗಳಿಗೆ, ಆಯುರ್ವೇದ ತಜ್ಞರಿಗೆ, ಪ್ರಕೃತಿ ಪ್ರಿಯರಿಗೆ ಸಹಕಾರಿ ಆಗುವಂತೆ ಈ ಜಾಗವನ್ನು ಮೂಲಿಕಾ ವನವಾಗಿ ಬೆಳೆಸುವ ಯೋಜನೆಯನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು ಎಂದು “ನೀಮಾ” ಅಧ್ಯಕ್ಷ ಡಾ.ರಾಜಾರಾಮ್ ತಿಳಿಸಿದರು. ಕಾರ್ಯಕ್ರಮದಲ್ಲಿ ಡಾ. ಜ್ಯೋತಿ, ಡಾ. ಸಾವಿತ್ರಿ, ಡಾ.ರಾಜಗೋಪಾಲ್.ಹೆಚ್.ಆರ್, ಆಯುಷ್ ಇಲಾಖೆಯ ಡಾ.ಅರುಣ್, ಡಾ.ಶೋಭಾ,  ಆಯುಷ್…

Read More

ಬೆಂಗಳೂರು ಸೆ.24 NEWS DESK: ಸರಸ್ವತಿ ಸಮ್ಮಾನ್, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ (94) ಇಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ನಿಧನರಾದರು. ಪರ್ವ, ಉತ್ತರಕಾಂಡ, ವಂಶವೃಕ್ಷ, ಆವರಣ ಸೇರಿ ಹಲವು ಕೃತಿಗಳನ್ನು ಎಸ್ಎಲ್ ಬೈರಪ್ಪ ರಚಿಸಿದ್ದರು. ಗೃಹ ಭಂಗ ಕಾದಂಬರಿ ಧಾರಾವಾಹಿಯಾಗಿದ್ದರೆ, ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ ಕಾದಂಬರಿಗಳು ಸಿನಿಮಾಗಳಾಗಿವೆ. ಇಂದಿಗೂ ಕೂಡ ಎಸ್ಎಲ್ ಭೈರಪ್ಪನವರ ಕೃತಿಗಳು ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ. ಮೈಸೂರಿನಲ್ಲಿ ವಾಸವಿದ್ದ ಎಸ್.ಎಲ್.ಬೈರಪ್ಪ ಹಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಎಸ್ಎಲ್ ಭೈರಪ್ಪ ಅವರ ಅನೇಕ ಕೃತಿಗಳು ಮರಾಠಿ, ಗುಜರಾತ್ ಸೇರಿದಂತೆ ದೇಶದ ಅನೇಕ ಭಾಷೆಗಳಿಗೆ ಅನುವಾದಗೊಂಡಿವೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಸಂತೇಶಿವರದಲ್ಲಿ 20-08-1931 ರಂದು ಹುಟ್ಟಿದ ಭೈರಪ್ಪನವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪಡೆದರು.   

Read More

ಕಾರ್ಕಳ ಸೆ.23 NEWS DESK : ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ “ಶಿಕ್ಷಣವೇ ಎಲ್ಲಾ” ಶೀರ್ಷಿಕೆಯಡಿಯಲ್ಲಿ ಕ್ರಿಯೇಟಿವ್ ಸ್ಫೂರ್ತಿಮಾತು ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪಶ್ಚಿಮ ಬಂಗಾಳದ ಶಿಕ್ಷಣತಜ್ಞ, ಆನಂದ್ ಶಿಕ್ಷಾನಿಕೇತನ ಸಂಸ್ಥೆಯ ಸ್ಥಾಪಕರಾದ ಬಾಬರ್ ಅಲಿ ಅವರು ಶೈಕ್ಷಣಿಕ ವಿಚಾರಗಳ ಕುರಿತು ಹೇಳುತ್ತಾ, ತಾನು ಬೆಳೆದು ಬಂದ ಹಾದಿಯ ರೋಚಕತೆಯನ್ನು ವಿವರಿಸಿ ಇತರರಿಗೂ ಸ್ಫೂರ್ತಿಯಾದರು. ಕಠಿಣ ಪರಿಶ್ರಮದ ಮೂಲಕ ಯಶಸ್ಸನ್ನು ಗಳಿಸಲು ಸಾಧ್ಯ. ಇಂದು ಶ್ರದ್ಧೆಯಿಂದ ಓದಿ ಗುರಿ ಸಾಧಿಸಬೇಕು. ಮುಂದೊಂದು ದಿನ ಹಿಂದೆ ಕಳೆದ ದಿನಗಳನ್ನು ಅವಲೋಕಿಸಿದಾಗ, ಹೋರಾಟದ ದಿನಗಳು ಕೂಡ ನಿಮಗೆ ಅತ್ಯಂತ ಸುಂದರವಾಗಿ ಕಾಣುತ್ತವೆ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಮಾತನಾಡಿದರು. ಸಹ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಬೋಧಕ, ಬೋಧಕೇತರ ವರ್ಗದವರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆಂಗ್ಲ ಭಾಷಾ ಉಪನ್ಯಾಸಕ ಯೋಗೀಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Read More

ಮಡಿಕೇರಿ ಸೆ.24 NEWS DESK : ಪ್ರಸ್ತುತ ರಾಜ್ಯ ಸರಕಾರ ನಡೆಸುತ್ತಿರುವ ಮತ್ತು ಮುಂದಿನ ವರ್ಷ ಕೇಂದ್ರ ಸರಕಾರ ನಡೆಸುವ ಜಾತಿ ಜನಗಣತಿಯ ಸಂದರ್ಭ ಕೊಡಗಿನ ಆದಿದ್ರಾವಿಡ ಸಮುದಾಯದವರು ಜಾತಿಯ ಕಾಲಂನಲ್ಲಿ ಪರಿಶಿಷ್ಟ ಜಾತಿ ಮತ್ತು ಉಪಜಾತಿಯ ಕಾಲಂನಲ್ಲಿ ಆದಿದ್ರಾವಿಡ ಎಂದು ನಮೂದಿಸುವಂತೆ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ ಮನವಿ ಮಾಡಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಸಂಘದ ರಾಜ್ಯಾಧ್ಯಕ್ಷ ಹೆಚ್.ಎಂ.ಸೋಮಪ್ಪ ಅವರು ರಾಜ್ಯ ಸರಕಾರವು ಈಗಾಗಲೇ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ಜಾತಿ ಜನಗಣತಿಯ ಸಮೀಕ್ಷೆಯನ್ನು ಆರಂಭಿಸಿದೆ. ಮುಂದಿನ ವರ್ಷ ಕೇಂದ್ರ ಸರಕಾರ ಕೂಡ ಗಣತಿ ನಡೆಸಲಿದ್ದು, ಎರಡೂ ಗಣತಿಯಲ್ಲೂ ಆದಿದ್ರಾವಿಡ ಸಮಾಜ ಬಾಂಧವರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಆದಿದ್ರಾವಿಡರು ಧರ್ಮದ ಕಾಲಂನಲ್ಲಿ ಹಿಂದೂ ಎಂದು, ಜಾತಿಯ ಕಾಲಂನಲ್ಲಿ ಪರಿಶಿಷ್ಟ ಜಾತಿ, ಉಪಜಾತಿ ಕಾಲಂನಲ್ಲಿ ಆದಿದ್ರಾವಿಡ ಮತ್ತು ಉಪಜಾತಿಗೆ ಪರ್ಯಾಯ ಹೆಸರು ಕಾಲಂನಲ್ಲಿ ಮೂಲದ್ರಾವಿಡರು ಎಂದು ನಮೂದಿಸುವಂತೆ ತಿಳಿಸಿದ್ದಾರೆ. ಸರಕಾರ ನಡೆಸುತ್ತಿರುವ ಜಾತಿ ಜನಗಣತಿ ಮುಂದಿನ ಭವಿಷ್ಯದ…

Read More

ಮಡಿಕೇರಿ ಸೆ.24 NEWS DESK :  ಕೊಡಗಿನ ಕಾಳಿದಾಸ ಎಂದೇ ಪ್ರಖ್ಯಾತರಾಗಿರುವ ಕೊಡವ ಭಾಷಾ ಸಾಹಿತಿ ‘ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ’ಗಳ 158ನೇ ಜನ್ಮದಿನಾಚರಣೆ ನಗರದ ಕೊಡವ ಸಮಾಜದ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ನಡೆಯಿತು. ಅಲ್ಲಾರಂಡ ರಂಗಚಾವಡಿ ಮತ್ತು ಮಡಿಕೇರಿ ಕೊಡವ ಸಮಾಜದ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಅಪ್ಪಚ್ಚಕವಿ ಕಲಾಭವನ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಅಪ್ಪನೆರವಂಡ ಮನೋಜ್ ಮಂದಪ್ಪ ಅಪ್ಪಚ್ಚ ಕವಿಯ ಭಾವ ಚಿತ್ರಕ್ಕೆ ಜ್ಯೋತಿಯನ್ನು ಬೆಳಗಿ, ‘ಮೀದಿ’ಯನ್ನಿರಿಸಿ ಉದ್ಘಾಟಿಸಿದರು. ಕೊಡವ ‘ನಾಟಕ ಪ್ರದರ್ಶನ ಕೇಂದ್ರ’ದ ಸ್ಥಾಪನೆಯಾಗಲಿ :: ಕಾರ್ಯಕ್ರಮ ಉದ್ಘಾಟಿಸಿದ ಅಪ್ಪನೆರವಂಡ ಮನೋಜ್ ಮಂದಪ್ಪ ಮಾತನಾಡಿ, ಕೊಡವ ಭಾಷಾ ಸಂಸ್ಕೃತಿ, ನಾಟಕಗಳ ಪ್ರದರ್ಶನ ಸಾಹಿತ್ಯಿಕವಾದ ಕಾರ್ಯಕ್ರಮಗಳಿಗಾಗಿ ಕೊಡವ ನಾಟಕ ಪ್ರದರ್ಶನ ಕೇಂದ್ರ (ಡ್ರಾಮಾ ಸೆಂಟರ್) ಸ್ಥಾಪನೆ ಅತ್ಯವಶ್ಯಕವಾಗಿ ಆಗಬೇಕಿದೆಯೆಂದು ಅಭಿಪ್ರಾಯಿಸಿದರು. ಶತಮಾನಗಳ ಹಿಂದೆ ಅತ್ಯಂತ ಸಂಕಷ್ಟದ ಬದುಕಿನ ನಡುವೆಯೂ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಕೊಡವ ಭಾಷೆಯಲ್ಲಿ ಸಾಕಷ್ಟು ಹಾಡುಗಳನ್ನು, ನಾಟಕಗಳನ್ನು ರಚಿಸುವ ಮೂಲಕ ಕೊಡವ ಭಾಷಾ ಆದಿ ಕವಿಯಾಗಿ ಗುರುತಿಸಿಕೊಂಡಿದ್ದಾರೆ.…

Read More

ಮಡಿಕೇರಿ ಸೆ.24 : ಪ್ರಸ್ತುತ ನಡೆಯುತ್ತಿರುವ ಕರ್ನಾಟಕ ರಾಜ್ಯ ಸರಕಾರದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷ್ಲೆ ಮತ್ತು ಮುಂದೆ ನಡೆಯಲಿರುವ ಕೇಂದ್ರ ಸರಕಾರದ ಜಾತಿ ಜನಗಣತಿಯ ಸಂದರ್ಭ ಅರೆಭಾಷೆ ಗೌಡರು ಜಾತಿಯ ಕಾಲಂನಲ್ಲಿ GOWDA (ಗೌಡ) ಎಂದು, ಉಪಜಾತಿ ಅರೆಭಾಷೆ ಗೌಡ, ಮಾತೃಭಾಷೆ ಕಾಲಂನಲ್ಲಿ ಅರೆಭಾಷೆ ಎಂದು ನಮೂದಿಸುವಂತೆ ಮೈಸೂರು ಗೌಡ ಸಮಾಜ ಮನವಿ ಮಾಡಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಮೈಸೂರು ಗೌಡ ಸಮಾಜದ ಅಧ್ಯಕ್ಷ ಕೊಂಬಾರನ ಬಸಪ್ಪ ಅವರು ರಾಜ್ಯ ಸರಕಾರವು ಈಗಾಗಲೇ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ಜಾತಿ ಜನಗಣತಿಯ ಸಮೀಕ್ಷೆಯನ್ನು ಆರಂಭಿಸಿದೆ. ಮುಂದಿನ ವರ್ಷ ಕೇಂದ್ರ ಸರಕಾರ ಕೂಡ ಗಣತಿ ಆರಂಭಿಸಲಿದ್ದು, ಎರಡೂ ಪ್ರಕ್ರಿಯೆಯ ಸಂದರ್ಭ ಕೊಡಗಿನ ಅರೆಭಾಷೆ ಗೌಡರು ಜಾತಿಯ ಕಾಲಂನಲ್ಲಿ GOWDA (ಗೌಡ), ಉಪಜಾತಿ ಅರೆಭಾಷೆ ಗೌಡ ಮತ್ತು ಮಾತೃ ಭಾಷೆ ಕಾಲಂನಲ್ಲಿ ಅರೆಭಾಷೆ ಎಂದು ನಮೂದಿಸುವಂತೆ ಕೋರಿದ್ದಾರೆ. ಉಪಜಾತಿಯಲ್ಲಿ ಅರೆಭಾಷೆ ಗೌಡ ಎಂಬುವುದನ್ನು ಪ್ರತ್ಯೇಕ ಕಾಲಂನಲ್ಲಿ ಸೇರಿಸಬೇಕೆಂದು ಕೊಡಗು ಗೌಡ ಸಮಾಜಗಳ…

Read More