ಮೈಸೂರು ಆ.18 NEWS DESK : ಜಾಗತಿಕ ಮಟ್ಟದಲ್ಲಿ ಭಾರತ ವೈದ್ಯಕೀಯ ಸೇವೆ ನೀಡುವುದರಲ್ಲಿ ಮುಂಚೂಣಿಯಲ್ಲಿದೆ. “ಹೀಲ್ ಇನ್ ಇಂಡಿಯಾ” ಎಂಬ ಯೋಜನೆಯಡಿ ಇದುವರೆಗೆ ಭಾರತಕ್ಕೆ ಬಂದಿರುವ ವಿದೇಶಿ ಪ್ರವಾಸಿಗರ ಸಂಖ್ಯೆ ಕುರಿತು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದು, ಅದಕ್ಕೆ ಕೇಂದ್ರ ಸಚಿವರು ವಿವರ ನೀಡಿದ್ದಾರೆ. ಸಂಸತ್ತಿನ ಅಧಿವೇಶನದ ಲೋಕಸಭಾ ಕಲಾಪದಲ್ಲಿ ಸಂಸದ ಯದುವೀರ್ ಅವರ ಚುಕ್ಕಿ ರಹಿತ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ಶೇಖಾವತ್, ಜಾಗತಿಕ ಸ್ವಾಸ್ಥ್ಯ ಪ್ರವಾಸೋದ್ಯಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಯದುವೀರ್, ಕಳೆದ ಐದು ವರ್ಷದಲ್ಲಿ ಭಾರತಕ್ಕೆ ಹಲವಾರು ದೇಶಗಳ ಪ್ರವಾಸಿಗರು ಬಂದು ಚಿಕಿತ್ಸೆ ಪಡೆದು ಕೊಂಡಿದ್ದಾರೆ. ವೈದ್ಯಕೀಯ ಪ್ರವಾಸೋದ್ಯಮಕ್ಕೆ ಹೆಚ್ಚು ಸ್ಪಂದನೆ ದೊರಕಿದೆ ಎಂದಿದ್ದಾರೆ. ನಮ್ಮ ಕೇಂದ್ರ ಸರ್ಕಾರ ಆರಂಭಿಸಿರುವ “ಹೀಲ್‍ಇನ್‍ಇಂಡಿಯಾ”ಯೋಜನೆಯಡಿ ಚಿಕಿತ್ಸೆಗೆ ಬರುವ ವಿದೇಶಿಗರು ಹಾಗೂ ಅವರ ಜೊತೆಗಿರುವ ವೀಸಾ ಸೌಲಭ್ಯವನ್ನು ಸರಳೀಕರಣಗೊಳಿಸಿ…
ಲೇಖಕ: admin
ಮಡಿಕೇರಿ ಆ.18 NEWS DESK : 220/66/11 ಕೆ.ವಿ ಕುಶಾಲನಗರ, 66/11 ಕೆ.ವಿ ಸುಂಟಿಕೊಪ್ಪ, 33/11 ಕೆವಿ ಸೋಮವಾರಪೇಟೆ ಹಾಗೂ 66/11 ಕೆವಿ ಮಾದಾಪುರ ವಿದ್ಯುತ್ ವಿತರಣಾ ಉಪ ಕೇಂದ್ರದಲ್ಲಿ ಎರಡನೇ ತ್ರೈಮಾಸಿಕ ನಿರ್ವಹಣೆ ಕೈಗೆತ್ತಿಕೊಳ್ಳಲಾಗಿದೆ. ಈ ವಿದ್ಯುತ್ ವಿತರಣಾ ಉಪ ಕೇಂದ್ರದಿಂದ ಹೊರಹೊಮ್ಮುವ ಎಲ್ಲಾ 11 ಕೆವಿ ಮಾರ್ಗಗಳಲ್ಲಿ ಆಗಸ್ಟ್, 20 ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಈ ಮಾರ್ಗದಿಂದ ಸರಬರಾಜಾಗುವ ಕುಶಾಲನಗರ ಟೌನ್, ನಂಜರಾಯಪಟ್ಟಣ, ಗುಡ್ಡೆಹೊಸೂರು, ಹೆಬ್ಬಾಲೆ, ಭುವನಗಿರಿ, ಇಂಡಸ್ಟ್ರಿಯಲ್ ಏರಿಯಾ, ಕೂಡಿಗೆ, ಕಾನ್‍ಬೈಲು, ಅಂದಗೋವೆ, ನಾಕೂರು, ಹಾದ್ರೆ ಹೊರೂರು, ಹಟ್ಟಿಹೊಳೆ, ಗರ್ವಾಲೆ, ಗರಗಂದೂರು, ಕಾಂಡನಕೊಲ್ಲಿ, ಕುಂಬೂರು, ಸುಂಟಿಕೊಪ್ಪ, ಮಾದಾಪುರ, ಚೆಟ್ಟಳ್ಳಿ, ಅಭ್ಯತ್‍ಮಂಗಲ, ನಾಕೂರು ಶಿರಂಗಾಲ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಹಾಗೆಯೇ 66/11 ಕೆ.ವಿ ಆಲೂರು ಸಿದ್ದಾಪುರ ವಿದ್ಯುತ್ ವಿತರಣಾ ಉಪ ಕೇಂದ್ರ ಹಾಗೂ 66/33/11 ಕೆವಿ ಸೋಮವಾರಪೇಟೆ ವಿದ್ಯುತ್ ವಿತರಣಾ ಉಪ ಕೇಂದ್ರದಿಂದ ಹೊರಹೊಮ್ಮುವ ಮಾರ್ಗದಿಂದ ವಿದ್ಯುತ್…
ಮಡಿಕೇರಿ ಆ.18 NEWS DESK : ಕೊಡಗು ಜಿಲ್ಲಾ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಬೆರಳಚ್ಚುಗಾರರು(ಕಂಪ್ಯೂಟರ್ ಆಪರೇಟರ್), ವಾಹನ ಚಾಲಕರು ಮತ್ತು ಡಿ ಗ್ರೂಪ್ ಹುದ್ದೆಗೆ ಸೇವೆಯನ್ನು ಬಾಹ್ಯ ಮೂಲಕ ಪಡೆಯಲು ಇ-ಪ್ರೊಕ್ಯೂರ್ ಮೆಂಟ್ ಮುಖಾಂತರ ಟೆಂಡರ್ ಆಹ್ವಾನಿಸಲಾಗಿದೆ. ಸಾರ್ವಜನಿಕ ಹಾಗೂ ಆಡಳಿತ ಹಿತದೃಷ್ಟಿಯಿಂದ ಕೊಡಗು ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಬೆರಳಚ್ಚುಗಾರರು, ವಾಹನ ಚಾಲಕರು, ಗ್ರೂಪ್ ‘ಡಿ’ ಮತ್ತು ಸ್ವೀಪರ್ ಹುದ್ದೆಗಳ ಪೈಕಿ ಕೆಲವು ಹುದ್ದೆಗಳಿಗೆ ನೌಕರರನ್ನು ಹೊರಗುತ್ತಿಗೆ ಆಧಾರದಲ್ಲಿ ಒಂದು ವರ್ಷದ ವರೆಗೆ ಅಥವಾ ಸರ್ಕಾರದಿಂದ ಹುದ್ದೆಗಳು ನೇರ ನೇಮಕಾತಿ ಮುಖಾಂತರ ಭರ್ತಿ ಮಾಡುವ ತನಕ ಮಾತ್ರ ಸೇವೆಯನ್ನು ಮಾನವ ಸಂಪನ್ಮೂಲ ಗುತ್ತಿಗೆದಾರರಿಂದ ಪಡೆಯಲು ಇ-ಪ್ರೊಕ್ಯೂರ್‍ಮೆಂಟ್ ಮುಖಾಂತರ ಅಲ್ಪಾವಧಿ ಟೆಂಡರ್ ಆಹ್ವಾನಿಸಲಾಗಿದೆ. ಆಸಕ್ತ ಟೆಂಡರ್‍ದಾರರು ಟೆಂಡರ್‍ನ ಪೂರ್ಣ ವಿವರಗಳನ್ನು ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್‍ಮೆಂಟ್ ಪೋರ್ಟಲ್ ವೆಬ್‍ಸೈಟ್‍ನಲ್ಲಿ (http://www.eproc.karnataka.gov.in) ಮಾತ್ರ ಪಡೆಯಬಹುದು. ಹೆಚ್ಚಿನ ವಿವರಗಳಿಗೆ ಈ ಕಚೇರಿಯ ದೂ.ಸಂ.08272-225811 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ವೆಂಕಟ್…
ಮಡಿಕೇರಿ ಆ.18 NEWS DESK : ಮಡಿಕೇರಿಯ ಕೊಡಗು ವಿದ್ಯಾಲಯದಲ್ಲಿ ವಿಶಿಷ್ಟ ರೀತಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು. ಶ್ರೀ ಕೃಷ್ಣನ ಬಾಲ ಲೀಲೆಗಳು, ರಾಧಾ ಮೋಹನ ಪಾತ್ರಗಳು, ಗೋಪ ಗೋಪಿಯರೊಂದಿಗಿನ ನೃತ್ಯಗಳು, ಕೋಲಾಟ, ಬೆಣ್ಣೆ ಮೊಸರು ಸವಿಯುವ ಪ್ರಹಸನಗಳು, ಮೊಸರು ಕುಡಿಕೆ ಒಡೆಯುವಿಕೆ ಇತ್ಯಾದಿ ಪ್ರದರ್ಶನಗಳು ಶ್ರೀ ಬಿ.ಕೆ. ಸುಬ್ಬಯ್ಯ ಸಭಾಂಗಣ ದಲ್ಲಿ ಆಕರ್ಷಕವಾಗಿ ಮೂಡಿಬಂದವು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ “ಶಕ್ತಿ” ಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ , ಶ್ರೀ ಕೃಷ್ಣನ ಅವತಾರವು ಒಂದು ಅಮೋಘ ಚೈತನ್ಯ ಮತ್ತು ಶಕ್ತಿಯ ಪ್ರತೀಕವಾಗಿದೆ ಎಂದು ಬಣ್ಣಿಸಿದರು. ಶ್ರೀ ಕೃಷ್ಣನ ಬಾಹ್ಯ ರೂಪ ಈಗ ಇರದಿದ್ದರೂ ಆತನ ಆದರ್ಶ, ಅನುಕರಣೆ 5 ಸಾವಿರ ವರ್ಷಗಳ ಬಳಿಕವೂ ಜೀವಂತವಾಗಿದ್ದು ಸರ್ವಕಾಲಿಕ ಶಾಶ್ವತ ಪ್ರಜ್ಞೆಯಾಗಿ ಉಳಿದಿದೆ. ಇಂದಿನ ಆಧುನಿಕ ಯುಗದಲ್ಲಿ ಕೃಷ್ಣನ ಗೀತಾ ಬೋಧನೆ, ಆ ಮಾರ್ಗದ ಪಾಲನೆ ಮಕ್ಕಳ ಜೀವನವನ್ನು ಉತ್ತಮಗೊಳಿಸಲು ಸಹಕಾರಿ ಎಂದು ರಾಜೇಂದ್ರ ಅಭಿಪ್ರಾಯಪಟ್ಟರು. ಶಿಕ್ಷಕ ವೃಂದ ತರಬೇತಿ ನೀಡಿ ಬಾಲಕ-ಬಾಲಕಿಯರಿಂದಲೇ…
ಮಡಿಕೇರಿ ಆ.18 NEWS DESK : ಕೊಡವಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಮತ್ತು ಎಸ್‍ಟಿ ವರ್ಗೀಕರಣವು ಸೇರಿದಂತೆ 2026ರ ರಾಷ್ಟ್ರೀಯ ಜನಗಣತಿಯೊಂದಿಗೆ ಜನಾಂಗವಾರು ಮಾಹಿತಿ ಕಲೆಹಾಕುವ ಸಂದರ್ಭ ಆದಿಮ ಸಂಜಾತ ಏಕ-ಜನಾಂಗೀಯ (ಆ್ಯನಿಮಿಸ್ಟಿಕ್) ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ನ್ನು ಸೇರಿಸಬೇಕು, ಸಂಸತ್ ಹಾಗೂ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಆ.21 ರಂದು ಸಿದ್ದಾಪುರದಲ್ಲಿ 10ನೇ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಸಿದ್ದಾಪುರದಲ್ಲಿ ಮಾನವ ಸರಪಳಿ ನಿರ್ಮಿಸಿ ವಿವಿಧ ಸಂವಿಧಾನಿಕ ಹಕ್ಕೊತ್ತಾಯಗಳ ಕುರಿತು ಹಕ್ಕೊತ್ತಾಯ ಮಂಡಿಸಲಾಗುವುದು. ಜನಗಣತಿಯ ಸಂದರ್ಭ ಪ್ರತ್ಯೇಕ ಕಾಲಮ್ ಮತ್ತು ಕೋಡ್ ಸೇರಿಸುವುದರಿಂದ ಕೊಡವ ಸಮುದಾಯಕ್ಕೆ ಆಗಬಹುದಾದ ಲಾಭಗಳನ್ನು ವಿವರಿಸಲಾಗುವುದು ಎಂದು ಹೇಳಿದ್ದಾರೆ. 2025-26ರ ರಾಷ್ಟ್ರೀಯ ಜನಗಣತಿ ಮತ್ತು ಜಾತಿ ಗಣತಿಯಲ್ಲಿ ಕೊಡವರಿಗೆ ಪ್ರತ್ಯೇಕ…
ಮಡಿಕೇರಿ ಆ.18 NEWS DESK : ವಿಶ್ವ ಹಿಂದೂ ಪರಿಷತ್, ಭಜರಂಗದಳ, ಮಾತೃಶಕ್ತಿ ಮತ್ತು ದುರ್ಗಾವಾಹಿನಿ ವತಿಯಿಂದ ಮೂರ್ನಾಡಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮೈಕೊರೆಯುವ ಚಳಿ, ಮಳೆಯ ನಡುವೆ ನೂರಾರು ಪುಟಾಣಿಗಳು ಬಾಲಕೃಷ್ಣರಾಗಿ ಮಿಂಚಿದರು. ಮೂರ್ನಾಡಿನ ಪ್ರಕೃತಿ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆದ ಶ್ರೀಕೃಷ್ಣ ಛದ್ಮವೇಷ ಸ್ಪರ್ಧೆಯಲ್ಲಿ 3 ತಿಂಗಳಿನಿಂದ 6 ವರ್ಷದವರೆಗಿನ 93 ಮಕ್ಕಳು ಶ್ರೀಕೃಷ್ಣ ವೇಷಧಾರಿಗಳಾಗಿ ಗಮನ ಸೆಳೆದರು. ಕುಶಾಲನಗರ, ಪೊನ್ನಂಪೇಟೆ, ನಾಪೋಕ್ಲು ಮತ್ತಿತರ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಪುಟಾಣಿ ಸ್ಪರ್ಧಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು. ವಿಶ್ವ ಹಿಂದೂ ಪರಿಷತ್ ನ ಮೂರ್ನಾಡು ಘಟಕದ ಅಧ್ಯಕ್ಷ ಚಾರಿಮಂಡ ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಲವಾಗ್ಮಿ ಸುಂಟಿಕೊಪ್ಪದ ಶ್ರೀಷ ದಿಕ್ಸೂಚಿ ಭಾಷಣ ಮಾಡಿದರು. ಮಡಿಕೇರಿ ಸಂತ ಜೋಸೆಫರ ಶಾಲೆಯ ಉಪನ್ಯಾಸಕರಾದ ಜಯಲಕ್ಷ್ಮಿ ಕೆ. ಮುಖ್ಯ ಭಾಷಣ ಮಾಡಿದರು. ಮೂರ್ನಾಡು ಪದವಿ ಕಾಲೇಜ್ ನ ಕಲ್ಪನಾ ಸಾಮ್ರಾಟ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಕಾರ್ಯಾಧ್ಯಕ್ಷ…
ಮಡಿಕೇರಿ ಆ.18 NEWS DESK : ಅನಾಮಧೇಯ ಕರೆಗಳು, ಲಿಂಕ್‍ಗಳಿಗೆ ಸ್ಪಂದನೆ ನೀಡಿದೆ ಸೈಬರ್ ವಂಚಕರ ಬಲೆಯಿಂದ ಎಚ್ಚರ ವಹಿಸಬೇಕು. ಕಣ್ಣು ತಪ್ಪಿನಿಂದ ಮೋಸ ಜರುಗಿದರೆ ಕೂಡಲೆ 1930 ಗೆ ಕರೆಮಾಡುವ ಮುಖಾಂತರ ಸೈಬರ್ ವಂಚಕರಿಗೆ ಕಡಿವಾಣ ಹಾಕಬೇಕೆಂದು ಅವಾರ್ಡ್ ಸಂಸ್ಥೆಯ ಜಿಲ್ಲಾ ಸಂಯೋಜಕರಾದ ಕೆ.ಎ.ಆಸೀಫ್ ಮಾಹಿತಿ ನೀಡಿದರು. ಕೊಡಗು ಜಿಲ್ಲಾ ಲೀಡ್ ಬ್ಯಾಂಕ್ ಮಡಿಕೇರಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂರ್ನಾಡು ಶಾಖೆ ಇವರ ಸಹಯೋಗದೊಂದಿಗೆ ಮಡಿಕೇರಿ ತಾಲ್ಲೂಕಿನ ಹೊದ್ದೂರು ಗ್ರಾಮದಲ್ಲಿ, ಗ್ರಾಮ ಪಂಚಾಯತಿಯ ಸಹಕಾರದೊಂದಿಗೆ ಕೇಂದ್ರ ಸರಕಾರದ ಆದೇಶದಂತೆ ಜನ ಸುರಕ್ಷಾ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜನ ಸಾಮಾನ್ಯರು ಕಡ್ಡಾಯವಾಗಿ ಸಾಮಾಜಿಕ ಭದ್ರತಾ ಯೋಜನೆಗಳ ಸಂಪೂರ್ಣ ಮಾಹಿತಿ ಮತ್ತು ಉಪಯೋಗ ತಿಳಿದುಕೊಂಡು ಇದುವರೆಗೂ ಯೋಜನೆ ಮಾಡಿಸಿಕೊಳ್ಳದೆ ಇರುವವರು ಶೀಘ್ರದಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಕೋರಿದರು. ವಿಶೇಷವಾಗಿ ಕೊಡಗು ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಅತೀ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು ಇಂತಹ ಸಂದರ್ಭದಲ್ಲಿ ಇದು ಅತೀ ಉಪಯೋಗಕರ ಎಂದು ತಿಳಿಸಿದರು. ಮೊಬೈಲ್…
ಮಡಿಕೇರಿ ಆ.18 NEWS DESK : ವಿರಾಜಪೇಟೆ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ವಿರಾಜಪೇಟೆ ತಾಲ್ಲೂಕು ಆಡಳಿತಾಧಿಕಾರಿಗಳು, ಜಿ.ಪಂ.ಉಪ ಕಾರ್ಯದರ್ಶಿ ಎಂ.ಸಿ.ಚಂದ್ರಶೇಖರ್ ಅವರ ನೇತೃತ್ವದಲ್ಲಿ ವಿರಾಜಪೇಟೆ ತಾ.ಪಂ.ಸಾಮಾನ್ಯ ಸಭೆ ನಡೆಯಿತು. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಪೊನ್ನಂಪೇಟೆ ಹಾಗೂ ವಿರಾಜಪೇಟೆ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಒಟ್ಟು 3 ಬ್ಯಾಚ್‍ಗಳಿಂದ 120 ಕಾಮಗಾರಿಗಳಿದ್ದು 44 ಕಾಮಗಾರಿಗಳು ಮಾತ್ರ ಮುಕ್ತಾಯಗೊಂಡಿದೆ. ಇನ್ನುಳಿದ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಲು ಕ್ರಮವಹಿಸಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಗ್ರಾಮೀಣ ಕುಡಿಯುವ ನೀರು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಶಾಲಾ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಉಚಿತ ಪಠ್ಯ-ಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಊಟದ ನೀಡುತ್ತಿದ್ದರೂ ಕೂಡ ಸರ್ಕಾರಿ ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಮಾತ್ರ ಇಳಿಕೆಯಾಗುತ್ತಿದೆ. ಎಸ್‍ಎಸ್‍ಎಲ್‍ಸಿ ಓದುತ್ತಿರುವ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಗಮನಹರಿಸಿ ಫಲಿತಾಂಶವು ಕಳೆದ ವರ್ಷಕ್ಕಿಂತ ಈ ಬಾರಿ ಉತ್ತಮಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದು ಕ್ಷೇತ್ರ…
ಮಡಿಕೇರಿ ಆ.18 NEWS DESK : ಜಾತ್ಯಾತೀತ ಪಕ್ಷವೆಂದು ಘೋಷಿಸಿಕೊಂಡು ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ಜೆಡಿಎಸ್ ನ ಅಲ್ಪಸಂಖ್ಯಾತರ ಘಟಕಕ್ಕೆ ಅಲ್ಪಸಂಖ್ಯಾತರ ಅಭಿವೃದ್ಧಿಯ ಬಗ್ಗೆ ಮತ್ತು ಜನಪರ ಕಾಳಜಿಯ ಕಾಂಗ್ರೆಸ್ ವಿರುದ್ಧ ಮಾತನಾಡುವ ನೈತಿಕತೆ ಇಲ್ಲವೆಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಪಿ.ಎ.ಹನೀಫ್ ಅವರು, ನೆಲಕಚ್ಚಿರುವ ಜೆಡಿಎಸ್ ಪಕ್ಷದಲ್ಲಿ ತಮ್ಮ ಸ್ಥಾನವನ್ನು ಭದ್ರ ಮಾಡಿಕೊಳ್ಳುವ ಉದ್ದೇಶದಿಂದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರು ಶಾಸಕರ ವಿರುದ್ಧ ಬಾಲಿಶ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದರು. ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ವಿದ್ಯಾವಂತ ಯುವ ಶಾಸಕರಿದ್ದಾರೆ, ಎಲ್ಲಾ ವರ್ಗದ ಜನರನ್ನು ಸಮಾನವಾಗಿ ವಿಶ್ವಾಸದಿಂದ ಕಾಣುತ್ತಿದ್ದಾರೆ. ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಅನುದಾನವನ್ನು ತಂದು ಎರಡೂ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ. ಇದನ್ನು ಸಹಿಸದ ಜೆಡಿಎಸ್ ಅಲ್ಪಸಂಖ್ಯಾತರ ಘಟಕ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದೆ ಎಂದು ಹೇಳಿದರು. ಶಾಸಕ ಡಾ.ಮಂತರ್ ಗೌಡ ಅವರು ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ…
ನಾಪೋಕ್ಲು ಆ.18 NEWS DESK : ಪಂಜಾಬ್ ನ ಜಲಂಧರ್‍ನಲ್ಲಿ ಆ.23ರವರೆಗೆ ಹಾಕಿ ಇಂಡಿಯಾ ವತಿಯಿಂದ ಆಯೋಜಿತಗೊಂಡಿರುವ 15ನೇ ಹಾಕಿ ಇಂಡಿಯಾ ಜೂನಿಯರ್ ಮೆನ್ ನ್ಯಾಷನಲ್ ಚಾಂಪಿಯಶಿಪ್-2025ಕ್ಕೆ ಹಾಕಿ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಹಾಕಿ ಕರ್ನಾಟಕ ತಂಡದಲ್ಲಿ ಕೊಡಗು ಜಿಲ್ಲೆಯ ಮೂಲದ 11 ಆಟಗಾರರು ಸ್ಥಾನ ಪಡೆದಿದ್ದಾರೆ. ತಂಡದ ಕೋಚ್ ಹಾಗೂ ವ್ಯವಸ್ಥಾಪಕರಾಗಿಯೂ ಜಿಲ್ಲೆಯ ಇಬ್ಬರು ತಂಡವನ್ನು ಮುನ್ನಡೆಸುತ್ತಿರುವುದು ವಿಶೇಷವಾಗಿದೆ. ತಂಡದ ನಾಯಕನಾಗಿ ಕೊಡಗಿನವರಾದ ಧ್ರುಮ ಬಿ.ಎಸ್. ಕಾರ್ಯನಿರ್ವಹಿಸಲಿದ್ದು, ಆಟಗಾರರಾಗಿ ನಾಪೋಕ್ಲು ಗ್ರಾಮದ ಬಿದ್ದಾಟಂಡ ಬೋಪಣ್ಣ, ಕುಲ್ಲೇಟಿರ ವಚನ್ ಕಾಳಪ್ಪ, ಮಕ್ಕಂದೂರು ಗ್ರಾಮದ ವಿಶ್ವಜಿತ್ ಕುಂಬಗೌಡನ ವಿ., ಹರ್ಷಿತ್ ಕುಮಾರ್, ಮಂಡೇಡ ಅಚ್ಚಯ್ಯ, ಬಲ್ಯಂಡ ಸಂಪನ್ ಗಣಪತಿ, ಚೋಯಮಾಡಂಡ ಆಕರ್ಷ್ ಬಿದ್ದಪ್ಪ, ಪೂಜಿತ್ ಕೆ.ಆರ್, ಕೋಳೆರ ಹೃತಿಕ್ ಅಯ್ಯಪ್ಪ, ಚೋಕಿರ ಕುಶಾಲ್ ಬೋಪಯ್ಯ ತಂಡದಲ್ಲಿದ್ದಾರೆ. ತಂಡದ ಕೋಚ್ ಆಗಿ ಮೇಚಂಡ ತನು ನಂಜಪ್ಪ ಹಾಗೂ ವ್ಯವಸ್ಥಾಪಕರಾಗಿ ಬಲ್ಲಮಾವಟ್ಟಿ ಗ್ರಾಮದ ಅಪ್ಪಚೆಟ್ಟೋಳಂಡ ಅಯ್ಯಪ್ಪ ಭಾಗವಹಿಸದ್ದಾರೆ. ವರದಿ : ದುಗ್ಗಳ ಸದಾನಂದ.






