ಮಡಿಕೇರಿ ಸೆ.18 NEWS DESK : ಕೊಡಗು ಮೂಲ ನಿವಾಸಿ ಅರಮನೆಪಾಲೆ ಸಮಾಜದ ಮಹಾಸಭೆ ಸೆ.21 ರಂದು ಬೆಳಿಗ್ಗೆ 10 ಗಂಟೆಗೆ ಹಾಕತ್ತೂರು ಸರಕಾರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಮಾಜದ ಪ್ರಧಾನ ಸಂಘಟಕ ಮಂದಣ್ಣ ಪಿ.ಕೆ. ಅವರು ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡಗು ಮೂಲ ನಿವಾಸಿ ಅರಮನೆಪಾಲೆ ಸಮಾಜದ ಪ್ರಧಾನ ಸಂಚಾಲಕ ಅರಮನೆಪಾಲೆರ ಮಂಜುನಾಥ್ ಜಿ. ಅವರ ಅಧ್ಯಕ್ಷತೆಯಲ್ಲಿ ನಡೆಯುವ ಮಹಾಸಭೆಯನ್ನು ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಅವರು ಉದ್ಘಾಟಿಸಲಿದ್ದು, ತಾವು ಪ್ರಾಸ್ತಾವಿಕ ಭಾಷಣ ಮಾಡುವುದಾಗಿ ತಿಳಿಸಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡವ ಭಾಷಿಕ ಸಮುದಾಯಗಳ ಕೂಟದ ನಿರ್ದೇಶಕ ಅರಮನೆಪಾಲೆರ ದೇವಯ್ಯ, ಮಾಜಿ ಯೋಧರಾದ ಅರಮನೆಪಾಲೆರ ಸುಭಾಷ್, ಅರಮನೆಪಾಲೆರ ಸಿ.ಶಿವಪ್ಪ, ಅರಮನೆಪಾಲೆ ಸಮಾಜದ ಕಾರ್ಯದರ್ಶಿ ಅರಮನೆಪಾಲೆರ ದೇವಯ್ಯ ಹಾಕತ್ತೂರು, ನಿರ್ದೇಶಕರಾದ ಅರಮನೆಪಾಲೆರ ಗಣೇಶ್ ಹಾಗೂ ಅರಮನೆಪಾಲೆರ ವಿಶ್ವನಾಥ್ ಪಾಲ್ಗೊಳ್ಳಲಿದ್ದಾರೆ. ನಿರ್ದೇಶಕರಾದ ಅರಮನೆಪಾಲೆರ ಜೋಯಪ್ಪ, ಕಾರ್ಯಕ್ರಮ ಸಂಯೋಜಕ ಅರಮನೆಪಾಲೆರ ಲೋಕೇಶ್, ಮರಣ ಧನಸಹಾಯನಿಧಿಯ…
ಲೇಖಕ: admin
ಮಡಿಕೇರಿ NEWS DESK ಸೆ.18 : ಮಡಿಕೇರಿ ದಸರಾ ಜನೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ದಶಮಂಟಪಗಳ ಶೋಭಾಯಾತ್ರೆಯ ಸಂದರ್ಭ ಅಗತ್ಯ ಧ್ವನಿವರ್ಧಕಗಳನ್ನು ಬಳಸಲು ನಿಯಮಗಳನ್ನು ಸಡಿಲಿಸಬೇಕು ಮತ್ತು ಈ ಕುರಿತು ಅವಕಾಶ ನೀಡಲು ಪೊಲೀಸ್ ಇಲಾಖೆಗೆ ಸೂಚನೆ ನೀಡಬೇಕೆಂದು ಒತ್ತಾಯಿಸಿ ಮಡಿಕೇರಿ ದಸರಾ ದಶಮಂಟಪ ಸಮಿತಿ ಮೈಸೂರು- ಕೊಡಗು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಅವರಿಗೆ ಮನವಿ ಸಲ್ಲಿದೆ. ಸಂಸದರು ಇಂದು ನಗರದ ದಶ ದೇವಾಲಯಗಳಿಗೆ ಭೇಟಿ ನೀಡಿ ದಸರಾ ಆಚರಣೆಯ ಕುರಿತು ದಸರಾ ಸಮಿತಿ ಮತ್ತು ದಶಮಂಟಪ ಸಮಿತಿಗಳ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿದರು. ಈ ಸಂದರ್ಭ ಮನವಿ ಪತ್ರ ಸಲ್ಲಿಸಿದ ದಶ ಮಂಟಪ ಸಮಿತಿಯ ಪ್ರಮುಖರು ಮಡಿಕೇರಿ ದಸರಾ ಜನೋತ್ಸವ ಮೈಸೂರು ದಸರಾದಂತೆಯೇ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ನಾಲ್ಕು ಶಕ್ತಿ ದೇವತೆಗಳ ಕರಗೋತ್ಸವ ಮತ್ತು ನಗರ ಸಂಚಾರ ಭಕ್ತಿಪೂರ್ವಕವಾಗಿ ನಡೆಯುತ್ತದೆ. ವಿಜಯದಶಮಿಯಂದು ದಶಮಂಟಪಗಳ ಶೋಭಾಯಾತ್ರೆ ಜನಾಕರ್ಷಣೆಯನ್ನು ಪಡೆದುಕೊಳ್ಳುತ್ತದೆ. ಪ್ರತಿ ಮಂಟಪವನ್ನು ತಯಾರಿಸಲು ಸುಮಾರು 25ರಿಂದ 30ಲಕ್ಷ ರೂ.ಗಳಷ್ಟು ಖರ್ಚು ಮಾಡಲಾಗುತ್ತಿದೆ. ಆದರೆ…
ಮಡಿಕೇರಿ. ಸೆ.18 NEWS DESK : ಮಡಿಕೇರಿಯ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಸೆ.24 ರಂದು ಬುಧವಾರ ಕಾಫಿ ದಸರಾ ಸಂಭ್ರಮ ಮೇಳೈಸಲಿದ್ದು, ಕಾಫಿ ಕೃಷಿಕರಿಗೆ ಸನ್ಮಾನ ಮತ್ತು ಕಾಫಿ ಕೖಷಿ ಸಂಬಂಧಿತ ಮಾಹಿತಿ ದೊರಕಲಿದೆ ಎಂದು ಕಾಫಿ ದಸರಾ ಸಂಚಾಲಕ ಅನಿಲ್ ಹೆಚ್.ಟಿ. ಮಾಹಿತಿ ನೀಡಿದ್ದಾರೆ. ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ಪರಿಕಲ್ಪನೆಯಲ್ಲಿ ಕಳೆದ ವಷ೯ದಿಂದ ಮಡಿಕೇರಿ ದಸರಾಕ್ಕೆ ಪರಿಚಯಿಸಲ್ಪಟ್ಟ ಕಾಫಿ ದಸರಾಕ್ಕೆ ಉತ್ತಮ ಸ್ಪಂದನ ದೊರಕಿದ್ದ ಹಿನ್ನಲೆಯಲ್ಲಿ ಈ ವಷ೯ವೂ ಕಾಫಿ ದಸರಾ ಆಯೋಜಿಸಲಾಗಿದೆ. ಕೂಗ್೯ ಪ್ಲಾಂಟಸ್೯ ಅಸೋಸಿಯೇಷನ್ ಸಹಯೋಗದಲ್ಲಿ ಆಯೋಜಿತ ಎರಡನೇ ವಷ೯ದ ಕಾಫಿ ದಸರಾವನ್ನು ಸೆ.24 ರಂದು ಬುಧವಾರ ಬೆಳಗ್ಗೆ 10 ಗಂಟೆಗೆ ಕನಾ೯ಟಕದ ಮೊದಲ ಮಹಿಳಾ ಕಾಫಿ ಉದ್ಯಮಿ ಕೊಡಗಿನ ದಿ.ಸಾಕಮ್ಮ ಸ್ಮರಣಾಥ೯ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್. ಭೋಸರಾಜ್ ಅವರು ಕಾಫಿ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ವೇದಿಕೆಯ ಕಾಯ೯ಕ್ರಮಗಳನ್ನು ಭಾರತೀಯ ಕಾಫಿ ಮಂಡಳಿಯ ಅಧ್ಯಕ್ಷ ದಿನೇಶ್ ದೇವವೖಂದ ಉದ್ಘಾಟಿಸಲಿದ್ದಾರೆ.…
ಮಡಿಕೇರಿ ಸೆ.19 NEWS DESK : ಕೊಡಗು ಪತ್ರಕರ್ತರ ಸಂಘದ ಸದಸ್ಯ ಮೋಹನ್ ರಾಜ್ ಅವರ ತಂದೆ ಕರುಪಯ್ಯ (76) ಪಳ್ಳಕೆರೆಯಲ್ಲಿ ಇಂದು ಮೃತಪಟ್ಟಿದ್ದಾರೆ.
ಮಡಿಕೇರಿ ಸೆ.18 NEWS DESK : ನೆಲ್ಲಿಹುದಿಕೇರಿಯ ಶ್ರೀ ವಿಘ್ನೇಶ್ವರ ಮಿತ್ರ ಮಂಡಳಿ ವತಿಯಿಂದ ಗೌರಿ ಗಣೇಶೋತ್ಸವ ಅಂಗವಾಗಿ ಬರಡಿ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ-ಗಣೇಶ ಮೂರ್ತಿ ಯನ್ನು ಶ್ರದ್ಧಾಭಕ್ತಿಯಿಂದ ವಿಸರ್ಜಿಸಲಾಯಿತು. ಮುಂಜಾನೆಯಿಂದ ಅರ್ಚಕರಾದ ಯೋಗೇಶ್ ಭಟ್ ಅವರ ನೇತೃತ್ವದಲ್ಲಿ ಗಣಪತಿಗೆ ಹೋಮ, ಮಂಗಳಾರತಿ, ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಸಿದ್ದಾಪುರ, ಅಮ್ಮತ್ತಿ ಸೇರಿದಂತೆ ಸುತ್ತಮುತ್ತಲ ಗ್ರಾಮ ವ್ಯಾಪ್ತಿಯ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಧ್ಯಾಹ್ನ ನೆರೆದಿದ್ದ ಭಕ್ತಾಧಿಗಳಿಗೆ ಅನ್ನದಾನ ನೆರವೇರಿತು. ಬಳಿಕ ಪುಷ್ಪಾಲಂಕಾರ ಭವ್ಯ ಮಂಟಪದಲ್ಲಿ ಮೂರ್ತಿಗಳನ್ನು ಕುಳ್ಳಿರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಗಣೇಶ ಮೂರ್ತಿಯನ್ನು ಕೊಂಡೊಯ್ದು ಬರಡಿ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು. ಈ ಸಂದರ್ಭ ಗಣಪತಿ ಬಪ್ಪ ಮೋರಿಯ ಎಂಬ ಘೋಷ ಮೊಳಗಿತು. ಮಹಿಳೆಯರು ಮಕ್ಕಳು ಯುವಕರು ಡಿಜೆಗೆ ಹೆಜ್ಜೆ ಹಾಕಿ ಸಂಭ್ರಮದಿಂದ ಕುಣಿದು ಕುಪ್ಪಳಿಸಿದರು. ಶ್ರೀ ವಿಘ್ನೇಶ್ವರ ಮಿತ್ರ ಮಂಡಳಿಯ ಅಧ್ಯಕ್ಷರಾದ ಅನಿಲ್ ಕುಮಾರ್, ಪದಾಧಿಕಾರಿಗಳು, ಸದಸ್ಯರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.…
ಮಡಿಕೇರಿ ಸೆ.18 NEWS DESK : ಕೊಡಗು ಪತ್ರಕರ್ತರ ಸಂಘ(ರಿ.) ಪತ್ರಕರ್ತರ ಕ್ಷೇಮಾಭಿವೃದ್ಧಿ ಸಮಿತಿಯಿಂದ 2025 ರ ಸೆ.19 ರಂದು ಮಡಿಕೇರಿಯ ಕಾವೇರಿ ಹಾಲ್ ನಲ್ಲಿ ಪತ್ರಕರ್ತರು, ಪತ್ರಕರ್ತರ ಕುಟುಂಬ ವರ್ಗದವರು, ಪತ್ರಿಕಾ ಕ್ಷೇತ್ರದ ಸಿಬ್ಬಂದಿಗಳು, ಪತ್ರಿಕಾ ವಿತರಕರು ಹಾಗೂ ಕುಟುಂಬದವರಿಗೆ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಭೋದಕ ಆಸ್ಪತ್ರೆಯ 15 ವಿಭಾಗಗಳ ನುರಿತ ತಜ್ಞರುಗಳು ಹಾಗೂ ವೈದ್ಯರುಗಳು ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ನೇತ್ರ ತಜ್ಞರು, ಜನರಲ್ ಮೆಡಿಸಿನ್, ಮೂಳೆ ತಜ್ಞರು, ಇ.ಎನ್.ಟಿ. ತಜ್ಞರು, ಶ್ವಾಸಕೋಶ ತಜ್ಞರು, ದಂತ ವೈದ್ಯಕೀಯ, ಶಸ್ತ್ರ ಚಿಕಿತ್ಸಕರು, ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು, ಶ್ರವಣ ಆರೋಗ್ಯ ತಜ್ಞರು, ಮಾನಸಿಕ ಆರೋಗ್ಯ ತಜ್ಞರು ಮುಂತಾದ 15 ವಿಭಾಗಗಳ ನುರಿತ ತಜ್ಞರು ಈ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಆರೋಗ್ಯಕ್ಕೆ ಸಂಬಂಧಿಸಿದ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಆಯುಷ್ಮಾನ್ ಭಾರತ್…
ವಿರಾಜಪೇಟೆ ಸೆ.18 NEWS DESK : ಮಾನಸ ಗಂಗೋತ್ರಿಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಸೆ.23 ರಂದು ನಡೆಯುವ ದಸರಾ ಕವಿಗೋಷ್ಠಿಗಳ ಪ್ರಭಾತ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಲು ಮಡಿಕೇರಿಯ ಸಂತ ಜೋಸೆಫರ ಕಾನ್ವೆಂಟ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಜಯಲಕ್ಷ್ಮಿ ಕೆ. ಆಯ್ಕೆಯಾಗಿದ್ದಾರೆ.
ನಾಪೋಕ್ಲು ಸೆ.18 NEWS DESK : ನಾಲ್ಕುನಾಡ್ ವ್ಯಾಪ್ತಿಯ ನಾಪೋಕ್ಲು ಮುಸ್ಲಿಂ ಜಮಾಅತ್ ಅಧೀನದಲ್ಲಿ ಆಯೋಜಿಸಲಾಗಿದ್ದ ಮದದೇ ಮದೀನ ಮಿಲಾದ್ ಬೃಹತ್ ಸಮಾವೇಶ ರ್ಯಾಲಿಯಲ್ಲಿ ಕುಂಜಿಲ-ಪಯ್ನರಿ ಯುವಕರ ದಫ್ ತಂಡವು ಅತ್ಯುತ್ತಮ ದಫ್ ಪ್ರದರ್ಶನ ನೀಡಿ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದೆ. ಈ ಬಹುಮಾನವನ್ನು ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಎ.ಎಸ್.ಪೊನ್ನಣ್ಣ ಅವರಿಂದ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ತಂಡದ ತರಬೇತುದಾರ ಪಯ್ಯಡಿ ರಶೀದ್ ಉಸ್ತಾದ್, ನಾಯಕ ರಝಕ್ ಅಲಿ (ಜಜ್ಜು) ಮತ್ತು ಪಯ್ನರಿ ಸುನ್ನಿ ಮುಸ್ಲಿಂ ಜಮಾಅತ್ತಿನ ಅಧ್ಯಕ್ಷರಾದ ಸೌಕತ್ ಅಲಿ ಮಕ್ಕಿ, ಖಲೀಲ್ ಮತ್ತು ಅಝರುದ್ದೀನ್ ಉಪಸ್ಥಿತರಿದ್ದರು. ವರದಿ : ದುಗ್ಗಳ ಸದಾನಂದ.
ಮಡಿಕೇರಿ ಸೆ.18 NEWS DESK : 2025-26ನೇ ಸಾಲಿನ ಆಯವ್ಯಯ ಭಾಷಣದಲ್ಲಿ ನಿರುದ್ಯೋಗಿಗಳಾಗಿರುವ ಪದವೀಧರರಿಗೆ ಹಾಗೂ ಡಿಪ್ಲೋಮ ಪಡೆದವರಿಗೆ ನಿರುದ್ಯೋಗ ಭತ್ಯೆ ನೀಡಲು ರಾಜ್ಯ ಸರ್ಕಾರವು ‘ಯುವನಿಧಿ’ ಯೋಜನೆ ಅನುಷ್ಠಾನಗೊಳಿಸಿದೆ. ನಿರುದ್ಯೋಗ ಭತ್ಯೆ ನೀಡುವುದರೊಂದಿಗೆ ಈ ಯುವಕರಿಗೆ ಇಂಡಸ್ಟ್ರೀ ಲಿಂಕೇಜ್ ಸೆಲ್ ಅಡಿ ಭವಿಷ್ಯ ಕೌಶಲ್ಯ ತರಬೇತಿ ನೀಡಲಾಗುತ್ತದೆ. ಅದರಂತೆ ಇಂಡಸ್ಟ್ರೀ ಲಿಂಕೇಜ್ ಸೆಲ್ ಅಡಿ ಮತ್ತು ಪ್ಯೂಚರ್ ಸ್ಕಿಲ್ಸ್ ಕಾರ್ಯಕ್ರಮದಡಿ ಕೈಗಾರಿಕೆ/ ಕೈಗಾರಿಕಾ ಸಂಸ್ಥೆಗಳ ತರಬೇತಿ ಕೇಂದ್ರಗಳು ಮತ್ತು ಸರ್ಕಾರಿ ತರಬೇತಿ ಸಂಸ್ಥೆಗಳ ಮೂಲಕ ತಾಂತ್ರಿಕ ಉದ್ದಿಮೆ/ ಕೈಗಾರಿಕೆ ಆಧಾರಿತ ಹಾಗೂ ಉದ್ಯಮಶೀಲತೆಯ ತರಬೇತಿ ನೀಡುವುದರೊಂದಿಗೆ ಕಾರ್ಯಕ್ರಮ ಅನುಷ್ಠಾನಗೊಳಿಸಲು ಯೋಜಿಸಲಾಗಿದೆ. ಯುವನಿಧಿ ಯೋಜನೆಯಡಿ ನೋಂದಾಯಿಸಿ ನೇರ ನಗದು ವರ್ಗಾವಣೆ ಮೂಲಕ ನಿರಂತರವಾಗಿ ಆರು ತಿಂಗಳು ನಿರುದ್ಯೋಗ ಭತ್ಯೆ ಪಡೆದಿರುವ ಫಲಾನುಭವಿಗಳು ಕೌಶಲ್ಯ ತರಬೇತಿ ಮತ್ತು ಉದ್ಯಮಶೀಲತೆ ತರಬೇತಿಯನ್ನು ಪಡೆಯಲು ಕೌಶಲ್ಕರ್ ಪೋರ್ಟಲ್ನಲ್ಲಿ ಕಡ್ಡಾಯವಾಗಿ ನೋಂದಾಯಿಸುವಂತೆ ಹಾಗೂ ಒಂದು ವೇಳೆ ತರಬೇತಿ ಪಡೆಯಲು ನೋಂದಾಯಿಸದೆ ಇದ್ದಲ್ಲಿ ಅಂತಹ ಅಭ್ಯರ್ಥಿಗಳಿಗೆ ನಿರುದ್ಯೋಗ ಭತ್ಯೆಯನ್ನು…
ಸುಂಟಿಕೊಪ್ಪ ಸೆ.1 NEWS DESK : ಸುಂಟಿಕೊಪ್ಪ ಸಂತ ಮೇರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಫುಟ್ಬಾಲ್ ತಂಡ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಗೋಣಿಕೊಪ್ಪದ ಕಾಪ್ಸ್ ಶಾಲಾ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಪಂದ್ಯಾವಳಿಯಲ್ಲಿ ಪದವಿಪೂರ್ವ ಕಾಲೇಜುಗಳ ಫುಟ್ಬಾಲ್ ವಿಭಾಗದಲ್ಲಿ ಸಂತಮೇರಿ ಪದವಿ ಕಾಲೇಜು ಬಾಲಕರು ಜಯಗಳಿಸುವ ಮೂಲಕ ದಾವಣೆಗೆರೆಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಕಾಲೇಜಿನ ವ್ಯವಸ್ಥಾಪಕರಾದ ರೇ.ಫಾ.ವಿಜಯಕುಮಾರ್ ಹಾಗೂ ಪ್ರಾಚಾರ್ಯರಾದ ಆರ್.ಸೇಲ್ವರಾಜ್, ಬಾಲಕರ ತಂಡಕ್ಕೆ ಹಾಗೂ ತರಬೇತುದಾರ ದೈಹಿಕ ಶಿಕ್ಷಣ ಶಿಕ್ಷಕ ಸುನಿಲ್ ಅವರಿಗೆ ಶುಭಹಾರೈಸಿ ಬೀಳ್ಕೊಟ್ಟರು.






