ಲೇಖಕ: admin

ವಿರಾಜಪೇಟೆ ಆ.12 NEWS DESK : ವಿರಾಜಪೇಟೆ ತಾಲ್ಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಕೃಷಿ ಕಾರ್ಯಕ್ರಮದಡಿಯಲ್ಲಿ ಅಮ್ಮತ್ತಿ ವಲಯದ ಬಿಳುಗುಂದ ಕಾರ್ಯಕ್ಷೇತ್ರದ ಡಾ.ಬೋಪಣ್ಣ ಅವರ ಗದ್ದೆಯಲ್ಲಿ ಯಾಂತ್ರಿಕೃತ ಭತ್ತ ಬೇಸಾಯ ವಿಧಾನಗಳ ಬಗ್ಗೆ ಮಾಹಿತಿ ಮತ್ತು ನಾಟಿ ಯಂತ್ರ ಪ್ರಾತ್ಯಕ್ಷಿತೆ ನಡೆಯಿತು. ಕಾರ್ಯಕ್ರಮವನ್ನು ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪಿ.ಹರೀಶ್ ಉದ್ಘಾಟಿಸಿದರು. ಸಿಹೆಚ್‍ಎಸ್‍ಸಿ ಮೇಲ್ವಿಚಾರಕರಾದ ಪ್ರದೀಪ್, ಯಾಂತ್ರಿಕೃತ ಭತ್ತ ಬೇಸಾಯ ಯಂತ್ರಗಳ ಮೂಲಕ ನಾಟಿ ಮಾಡಿದರೆ ಕಡಿಮೆ ಖರ್ಚಿನಲ್ಲಿ ಭತ್ತ ಕೃಷಿ ಮಾಡಲು ಸಾಧ್ಯ. ಇದರೊಂದಿಗೆ ಕಾರ್ಮಿಕರ ಸಮಸ್ಯೆ ನಿವಾರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಕೃಷಿ ಇಲಾಖೆಯ ತಾಂತ್ರಿಕ ಸಹಾಯಕ ಅಧಿಕಾರಿ ಮೇಘನ ಮಾತನಾಡಿ, ಕೃಷಿ ಇಲಾಖೆಯಿಂದ ಭತ್ತ ಬೇಸಾಯಕ್ಕೆ ಸಿಗುವ ಸಹಾಯಧನ ಮತ್ತು ರೈತರು ಕೃಷಿ ಇಲಾಖೆಗೆ ಯಾವ ರೀತಿಯ ದಾಖಲೆಗಳನ್ನು ನೀಡಬೇಕು ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕೃಷಿ ಮೇಲ್ವಿಚಾರಕರಾದ ವಸಂತ್, ವಲಯ ಮೇಲ್ವಿಚಾರಕರಾದ ದಿನೇಶ್, ಒಕ್ಕೂಟದ…

Read More

ವಿರಾಜಪೇಟೆ ಆ.12 NEWS DESK : ವಿರಾಜಪೇಟೆ ತಾಲ್ಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಕೃಷಿ ಕಾರ್ಯಕ್ರಮದಡಿಯಲ್ಲಿ ಗೋಣಿಕೊಪ್ಪ ವಲಯದ ಮಾಯಮುಡಿ ಕಾರ್ಯಕ್ಷೇತ್ರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವಲಯ ಅರಣ್ಯ ಅಧಿಕಾರಿ ಸಚಿನ್ ಮಾತನಾಡಿ, ಗಿಡಮರಗಳನ್ನು ಬೆಳೆಸಬೇಕು, ನೆಟ್ಟ ಗಿಡಗಳನ್ನು ಪೋಷಣೆ ಮಾಡಬೇಕು, ಪರಿಸರ ಸಂರಕ್ಷಣೆಯಿಂದ ಶುದ್ಧವಾದ ಗಾಳಿ, ನೀರು ಸಿಗುತ್ತದೆ. ಹಣ್ಣಿನ ಗಿಡಗಳನ್ನು ಬೆಳೆಸಬೇಕು ನಮ್ಮ ಮನೆಯ ಸುತ್ತಮುತ್ತಲು ಗಿಡಮರಗಳನ್ನು ಬೆಳೆಸಬೇಕು ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪರಿಸರದ ಕುರಿತು ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಉಮೇಶ್, ಕೃಷಿ ಮೇಲ್ವಿಚಾರಕ ವಸಂತ್, ಶಾಲಾ ಮುಖ್ಯ ಶಿಕ್ಷಕಿ ಜಯಮ್ಮ, ಮೀನಾಕ್ಷಿ ವೇದಿಕೆಯಲ್ಲಿದ್ದರು. ಶಾಲೆಯ ಸಹ ಶಿಕ್ಷಕಿ ಸಹನ ಪರಿಸರದ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ ಪದಾಧಿಕಾರಿಗಳಾದ ಬಿಂದು, ಮೇರಿ, ಶಶಿ, ಸೇವಾ ಪ್ರತಿನಿಧಿ…

Read More

ವಿರಾಜಪೇಟೆ ಆ.12 NEWS DESK : ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಪತಿ ದ್ರೌಪದಿ ಮುರ್ಮು  ಅವರನ್ನು ಭೇಟಿ ಮಾಡಿ ರಕ್ಷಾಬಂಧನವನ್ನು ಆಚರಿಸಿದರು. ರಾಷ್ಟ್ರೀಯ ಬುಡಕಟ್ಟು ವಿದ್ಯಾರ್ಥಿಗಳ ಶೈಕ್ಷಣಿಕ ಸಿಂಧು ಸಂಸ್ಥೆಯಿಂದ ನವದೆಹಲಿಯಲ್ಲಿ ಆಯೋಜಿಸಿದ್ದ ರಾಷ್ಟ್ರ ಅಧ್ಯಕ್ಷರ ರಕ್ಷಾಬಂಧನ ಕಾರ್ಯಕ್ರಮಕ್ಕೆ ರಾಜ್ಯದಿಂದ ರಾಯಚೂರು, ಬೆಳಗಾವಿ, ಕೋಲಾರ ಹಾಗೂ ಕೊಡಗು ಜಿಲ್ಲೆಗಳ ಬುಡಕಟ್ಟು ಸಮುದಾಯದ ವಸತಿ ಶಾಲೆಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ರಾಷ್ಟ್ರ ಅಧ್ಯಕ್ಷರಾದ ದ್ರೌಪದಿ ಮುರ್ಮು ಅವರು ಪ್ರತಿ ವರ್ಷ ವಿವಿಧ ವಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವವರೊಂದಿಗೆ ರಕ್ಷಾಬಂಧನ ಕಾರ್ಯಕ್ರಮವನ್ನು ಆಚರಿಸುವುದು ವೈಶಿಷ್ಟ್ಯವಾಗಿದ್ದು, ಅದರಂತೆ ಈ ವರ್ಷ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳೊಂದಿಗೆ ರಕ್ಷಾಬಂಧನ ಕಾರ್ಯಕ್ರಮ ಆಚರಿಸುವ ಆಶಯ ಹೊಂದಿದ್ದರಿಂದ ಅವರ ಕರೆಯ ಮೇರೆಗೆ ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆಯ ಸಂಗೀತ ಶಿಕ್ಷಕಿ ಕುಮಾರಿ ಕೋಮಲ್ ಗುಪ್ತ ನೇತೃತ್ವದಲ್ಲಿ ವಿದ್ಯಾರ್ಥಿಗಳಾದ ಆರನೇ ತರಗತಿಯ ಎಲ್.ಎಂ.ಪ್ರತಿಕ್ಷ, 7ನೇ ತರಗತಿಯ ಸಿ.ಎಲ್.ಕನ್ನಿಕಾ, 8ನೇ ತರಗತಿಯ ತನ್ವಿ ತಂಗಮ್ಮ, 9ನೇ ತರಗತಿಯ ಹೆಚ್.ಕೆ.ನೇಹಾ ಮತ್ತು 10ನೇ…

Read More

ವಿರಾಜಪೇಟೆ ಆ.12 NEWS DESK : ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗ್ರಾಮದ ಕಲ್ಲುಬಾಣೆಯಲ್ಲಿರುವ ರಹ್‍ಮ ಚಾರಿಟೇಬಲ್ ಟ್ರಸ್ಟ್‌ನ ನೂತನ ಅಧ್ಯಕ್ಷರಾಗಿ ಪಿ.ಸಂಶುದ್ದೀನ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕೆ.ಪಿ.ಫಾರೂಕ್, ಕಾರ್ಯದರ್ಶಿಗಳಾಗಿ ಎಂ.ಎಂ.ನೌಫಲ್, ಜಂಟಿ ಕಾರ್ಯದರ್ಶಿಯಾಗಿ ಕೆ.ಕೆ.ರಹಿಮ್, ಖಜಾಂಚಿಯಾಗಿ ಪಿ.ಆಲಿ ಮತ್ತು ನಿರ್ದೇಶಕರುಗಳಾಗಿ ಕೆ.ಪಿ.ರಫೀಕ್, ಇ.ಕೆ.ಫನ್ಸಿರ್, ಪಿ.ಬಿ.ಫೈಸಲ್, ಕೆ.ಐ.ಅಶ್ರಫ್ ಆಯ್ಕೆಯಾಗಿದ್ದಾರೆ. ಗೌರವ ಅಧ್ಯಕ್ಷರಾಗಿ ಪಿ.ಶಾಪಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Read More

ಮಡಿಕೇರಿ ಆ.12 NEWS DESK : ಪರಿಸರ ಸ್ನೇಹಿಯಾಗಿ ಗೌರಿ-ಗಣೇಶ ಹಬ್ಬ ಆಚರಿಸಲು ಜಿಲ್ಲಾಧಿಕಾರಿ ವೆಂಕಟ್ ರಾಜಾ ಸಲಹೆ ನೀಡಿದ್ದಾರೆ. ಪ್ರಸಕ್ತ ಸಾಲಿನ ಗೌರಿ-ಗಣೇಶ ಹಬ್ಬವನ್ನು ರಾಜ್ಯದಲ್ಲಿ ಗೌರಿ ಹಾಗು ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ಪೂಜಿಸಿ ಕೆರೆ/ಬಾವಿ ಹಾಗು ಇನ್ನಿತರೆ ನೈಸರ್ಗಿಕ ಜಲಮೂಲಗಳಿಗೆ ವಿಸರ್ಜಿಸುವುದು ಸಂಪ್ರದಾಯವಾಗಿದೆ. ಇದರಿಂದ ಜಲಮೂಲಗಳು ಕಲುಷಿತಗೊಂಡು ಪರಿಸರಕ್ಕೆ ಹಾಗು ಸಾರ್ವಜನಿಕರ ಆರೋಗ್ಯಕ್ಕೆ ತೊಂದರೆ ಉಂಟಾಗುವುದರಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನೈಸರ್ಗಿಕ ಜಲಮೂಲಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ದಿನಾಂಕ 20-07-2016 ರಂದು ಅಧಿಸೂಚನೆಯನ್ನು ಹೊರಡಿಸಿದ್ದು, ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತ ಗೌರಿ ಹಾಗೂ ಗಣೇಶನ ವಿಗ್ರಹಗಳನ್ನು ರಾಜ್ಯದ ಕೆರೆ, ನದಿ, ಕಾಲುವೆ, ಬಾವಿ ಹಾಗೂ ಇತರೆ ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ಈ ವರ್ಷದ ಗೌರಿ-ಗಣೇಶ ಚರ್ತುರ್ಥಿ ಆಚರಣೆಯನ್ನು ಪರಿಸರಸ್ನೇಹಿಯಾಗಿ ಆಚರಿಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಕ್ರಮಗಳನ್ನು ಸಾರ್ವಜನಿಕರು ಅನುಸರಿಸಲು ತಿಳಿಸಲಾಗಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ವಿಗ್ರಹಗಳನ್ನು ತಯಾರಿಸಬಾರದೆಂದು ಹಾಗೂ…

Read More

ಮಡಿಕೇರಿ ಆ.12 NEWS DESK : ಕೊಡಗು ಗೌಡ ಮಹಿಳಾ ಒಕ್ಕೂಟದ 4ನೇ ವರ್ಷದ  ಆಟಿ ಹಬ್ಬವು ಮಡಿಕೇರಿ  ಗೌಡ ಸಮಾಜದ ಸಭಾಂಗಣದಲ್ಲಿ  ನಡೆಯಿತು. ಕೋಳುಮುಡಿಯನ ಪ್ರೇಮ, ಡಾ. ಕೋರನ ಸರಸ್ವತಿ, ತೋಟoಬೈಲು ಪಾರ್ವತಿ, ಕುಲ್ಲಚನ ಜ್ಯೋತಿ ಇವರುಗಳು ಆಟಿ ಪಾಯಸ ತಿನ್ನುವುದರ ಮೂಲಕ ಸಾಂಪ್ರದಾಯಕ ಅಡುಗೆಗಳ ಪ್ರದರ್ಶನ  ವಿಭಾಗಕ್ಕೆ ಚಾಲನೆ ನೀಡಿದರು.  ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಅಮೆ ದಮಯಂತಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ  ಬಾರಿಕೆ ದಿನೇಶ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.  ವೇದಿಕೆಯಲ್ಲಿ ಮಡಿಕೇರಿ ಗೌಡ ಸಮಾಜದ ಉಪಾಧ್ಯಕ್ಷರಾದ ಸೂರ್ತಲೆ ಸೋಮಣ್ಣ, ಸಾಹಿತಿ  ಬಾರಿಯಂಡ ಜೋಯಪ್ಪ, ಗೌಡ ವಿದ್ಯಾ ಸಂಘದ ಉಪಾಧ್ಯಕ್ಷರಾದ ನಿವೃತ್ತ ಡಿ.ಐ.ಜಿ.ಅಮೆ  ಸೀತಾರಾಮ್ , ನಿವೃತ್ತ ಶಿಕ್ಷಕಿ ಶಿವದೇವಿ ಅವನಿಶ್ಚಂದ್ರ, ಕಾಫಿ ಬೆಳೆಗಾರರಾದ  ತೋಟoಬೈಲು  ಪಾರ್ವತಿ, ಕೂಡಕಂಡಿ ಓಂಶ್ರೀ ದಯಾನಂದ ಉಪಸ್ಥಿತರಿದ್ದರು. ಸಭೆಯಲ್ಲಿ ಕೆಂಪೇಗೌಡ ರಾಜ್ಯ ಪ್ರಶಸ್ತಿ ಪುರಸ್ಕೃತ ರಾದ ಬಾರಿಯಂಡ ಜೋಯಪ್ಪ,…

Read More

ಮಡಿಕೇರಿ NEWS DESK ಆ.12 : ಸಿ ಮತ್ತು ಡಿ ಕೃಷಿ ಭೂಮಿ ಹಕ್ಕಿಗಾಗಿ ಒತ್ತಾಯಿಸಿ ರೈತ ಹೋರಾಟ ಸಮಿತಿ ಕರೆ ನೀಡಿರುವ ಸೋಮವಾರಪೇಟೆ ತಾಲ್ಲೂಕು ಬಂದ್ ಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಕೊಡಗು ಜಿಲ್ಲಾ ಘಟಕ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಅವರು ರೈತರ ಕೃಷಿ ಭೂಮಿಯನ್ನು ಸಿ ಮತ್ತು ಡಿ ಭೂಮಿ ಹೆಸರಿನಲ್ಲಿ ಅರಣ್ಯ ಇಲಾಖೆಗೆ ಸೇರ್ಪಡೆಗೊಳಿಸಲು ಸರಕಾರ ಸೆಕ್ಷನ್-4 ರಡಿ ಸರ್ವೆಗೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ, ಇದೊಂದು ರೈತ ವಿರೋಧಿ ನೀತಿಯಾಗಿದೆ ಎಂದು ಟೀಕಿಸಿದ್ದಾರೆ. ರೈತರ ಹಿತ ಕಾಪಾಡಲು ನಡೆಸುತ್ತಿರುವ ಸೋಮವಾರಪೇಟೆ ತಾಲ್ಲೂಕು ಬಂದ್ ಗೆ ಮತ್ತು ಮುಂದೆ ನಡೆಯುವ ರೈತಪರ ಹೋರಾಟಕ್ಕೆ ಎಸ್‌ಡಿಪಿಐ ಸಂಪೂರ್ಣ ಬೆಂಬಲವನ್ನು ಸೂಚಿಸುತ್ತದೆ. ಸಿ ಮತ್ತು ಡಿ ಭೂಮಿಯ ಸಮಸ್ಯೆ ಕಳೆದ ಅನೇಕ ವರ್ಷಗಳಿಂದ ಇತ್ಯರ್ಥವಾಗದೆ ಉಳಿದಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಎದುರಾಗಿದೆ. ಸರಕಾರ ಯಾವುದೇ ಕಾನೂನು…

Read More

ಮಡಿಕೇರಿ NEWS DESK ಆ.11 : ಮೂವರು ಆರೋಪಿಗಳ ಸಹಿತ 12 ಕೆ.ಜಿ ಗೂ ಅಧಿಕ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ. ಹುಣಸೂರು ಪಟ್ಟಣದ ವಿಜಯನಗರ ನಿವಾಸಿಗಳಾದ ಅನೀಸ್ ಅಹಮ್ಮದ್(45), ಪಿ.ಚೇತನ್(40) ಹಾಗೂ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕಿನ ಅಂತರಂಸಂತೆ ದೊಡ್ಡಬೈರನಕುಟ್ಟೆ ಗ್ರಾಮದ ನಿವಾಸಿ ಜಿ.ಅಕ್ರಂ(48) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ಆರೋಪಿಗಳಾದ ಅನೀಸ್ ಅಹಮ್ಮದ್ ಹಾಗೂ ಪಿ.ಚೇತನ್ ಅವರ ಬಳಿಯಿಂದ 7 ಕೆ.ಜಿ 872 ಗ್ರಾಂ ಗಾಂಜಾ, ಒಂದು ಕಾರು, 1 ಮೊಬೈಲ್ ಮತ್ತು ಗಾಂಜಾ ಸಾಗಿಸಲು ಬಳಸಿದ್ದ ಪ್ಲಾಸ್ಟಿಕ್ ಚೀಲವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹುಣಸೂರು ಕಡೆಯಿಂದ ವಿರಾಜಪೇಟೆ ಮಾರ್ಗವಾಗಿ ಕೇರಳಕ್ಕೆ ನಿಷೇಧಿತ ಮಾದಕ ವಸ್ತು ಗಾಂಜಾ ಸಾಗಿಸುತ್ತಿದ್ದ ಪ್ರಕರಣವನ್ನು ವಿರಾಜಪೇಟೆ ಪೊಲೀಸರು ಪತ್ತೆ ಹಚ್ಚಿದರು. ಕೇರಳದಲ್ಲಿ ಮಾರಾಟ ಮಾಡಲು ಗಾಂಜಾ ಸಾಗಾಟವಾಗುತ್ತಿರುವ ಕುರಿತು ಖಚಿತ ಮಾಹಿತಿ ದೊರೆತ ಹಿನ್ನೆಲೆ ವಿರಾಜಪೇಟೆ ಪೊಲೀಸರು ಆರ್ಜಿ ಪೆರುಂಬಾಡಿ ಬಳಿ ಬಂದ ಕಾರನ್ನು ಪರಿಶೀಲನೆಗೆ ಒಳಪಡಿಸಿದರು. ಈ ಸಂದರ್ಭ ಕಾರಿನಲ್ಲಿ 4…

Read More

ಮಡಿಕೇರಿ ಆ.11 NEWS DESK : ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣವೊಂದಿದ್ದರೆ ಸಾಕು ಎನ್ನುವ ಮನೋಭಾವ ಬೆಳೆಯುತ್ತಿದೆ. ಇದು ಸರಿಯಲ್ಲ, ಶಿಕ್ಷಣದೊಂದಿಗೆ ನಮ್ಮ ಸಂಸ್ಕೃತಿ ಮತ್ತು ಪರಿಸರವನ್ನು ಉಳಿಸಿ ಬೆಳೆಸಿದರೆ ಮಾತ್ರ ನಮಗೆ ಭವಿಷ್ಯವಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಡಿಕೇರಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಈರಮಂಡ ಹರಿಣಿ ವಿಜಯ್ ಅಭಿಪ್ರಾಯಪಟ್ಟಿದ್ದಾರೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಡಿಕೇರಿ ಸ್ಥಳೀಯ ಸಂಸ್ಥೆ ವತಿಯಿಂದ ಪಾಲೇಮಾಡು ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಬುಡಕಟ್ಟು ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರತಿಯೊಬ್ಬರಿಗೆ ಶಿಕ್ಷಣದ ಅಗತ್ಯವಿದೆ, ಆದರೆ ಶಿಕ್ಷಣದ ಜೊತೆ ಜೊತೆಯಲ್ಲಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗಾಗಿ ಬೆಳೆಸಿಕೊಂಡು ಹೋಗಬೇಕು ಎಂದರು. ಬುಡಕಟ್ಟು ಜನರು ಈ ಪರಿಸರದ ಅವಿಭಾಜ್ಯ ಅಂಗವಾಗಿದ್ದಾರೆ, ಅವರಿದ್ದರೆ ಪರಿಸರ ಉಳಿಯುತ್ತದೆ. ನಾವು ಕೂಡ ಪರಿಸರದ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ಕೊಡಗಿನ ಗದ್ದೆ ಮತ್ತು ತೋಟಗಳು ಇಂದು ಮರೆಯಾಗುತ್ತಿದ್ದು, ಕಾಂಕ್ರೀಟ್ ಕಟ್ಟಡಗಳು ತಲೆ ಎತ್ತುತ್ತಿವೆ. ಸುತ್ತಮುತ್ತಲ…

Read More

ಮಡಿಕೇರಿ ಆ.11 NEWS DESK :  ಸಮಾತ್ರಾ ಉತಾರಾ, ಇಂಡೋನೇಷ್ಯಾ – ಎಫ್‌ಐಎ ಏಷ್ಯಾ–ಪೆಸಿಫಿಕ್ ರ‍್ಯಾಲಿ ಚಾಂಪಿಯನ್‌ಶಿಪ್‌ (ಎಪಿಆರ್ಸಿ) ಮೂರನೇ ಸುತ್ತು, ಸಮಾತ್ರಾ ಉತಾರಾದ ಕಠಿಣ ಹಂತಗಳಲ್ಲಿ ಜರುಗಿದ  ಸ್ಪರ್ಧೆಯಲ್ಲಿ ಭಾರತೀಯ ರ‍್ಯಾಲಿ ತಂಡಗಳು ಅದ್ಭುತ ಪ್ರದರ್ಶನ ತೋರಿದ್ದು, ದೇಶದ ಮೋಟರ್‌ಸ್ಪೋರ್ಟ್‌ ಇತಿಹಾಸದಲ್ಲಿ ಹೆಮ್ಮೆ  ತರುವ ಹೊಸ ಇತಿಹಾಸ ಸೃಷ್ಟಿಸಿದೆ.  ವ್ಯಾಮ್‌ಸಿ ಮೆರ್ಲಾ ಪ್ರಾಯೋಜಿತ ವಿಎಂ ಮೋಟರ್‌ಸ್ಪೋರ್ಟ್‌ನ ಪರವಾಗಿ, ಚಾಲಕ  ಕೊಡಗು ಜಿಲ್ಲೆಯ  ಮೇಕೇರಿಯ ಅಬ್ಬಿನ್ ರೈ ಹಾಗೂ ಸಹ ಚಾಲಕ ಶ್ರೀಕಾಂತ್ ಗೌಡ ತಮ್ಮ ಅಂತರರಾಷ್ಟ್ರೀಯ ಮೋಟಾರ್ ರ್ಯಾಲಿಯ ಪ್ರವೇಶದಲ್ಲೇ ಶ್ರೇಷ್ಠ ಸಾಧನೆ ತೋರಿದರು. ಅವರು ಎನ್‌ವಿಎ ವರ್ಗದಲ್ಲಿ ದ್ವಿತೀಯ ಸ್ಥಾನ, ಜೂನಿಯರ್ ಎಪಿಆರ್ಸಿ 2ನೇ ಸ್ಥಾನ, ಎಂ1 ವರ್ಗದಲ್ಲಿ ಮೂರನೇ ರನ್ನರ್-ಅಪ್ ಹಾಗೂ ಎಪಿಆರ್ಸಿ ಒಟ್ಟು ಅಂಕಪಟ್ಟಿಯಲ್ಲಿ 8 ನೇ ಸ್ಥಾನ ಪಡೆದರು.  ರ‍್ಯಾಲಿಯಲ್ಲಿನ ಸವಾಲಿನ ಕಲ್ಲುಮಣ್ಣು ಹಂತಗಳಲ್ಲಿ ಅವರ ಸ್ಥಿರ   ಚಾಲನೆ ಮತ್ತು ವೇಗವು ಸ್ಪರ್ಧಿಗಳು ಹಾಗೂ ಅಭಿಮಾನಿಗಳ  ಶ್ಲಾಘನೆಗೆ  ಪಾತ್ರವಾಯಿತು. ಮತ್ತೊಂದು ಗಮನಾರ್ಹ ಫಲಿತಾಂಶದಲ್ಲಿ,…

Read More