ಮಡಿಕೇರಿ ಆ.11 NEWS DESK : ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿಯಿಂದ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 2ರ ವರೆಗೆ ನಗರದಲ್ಲಿ ಆಯೋಜಿತ ಮಡಿಕೇರಿ ದಸರಾ ಜನೋತ್ಸವ ಸಾಂಸ್ಕೃತಿಕ ಕಾಯ೯ಕ್ರಮಗಳಿಗೆ ಕಲಾವಿದರು, ಕಲಾತಂಡಗಳಿಂದ ಅಜಿ೯ ಆಹ್ವಾನಿಸಲಾಗಿದ ಎಂದು ಸಮಿತಿಯ ಅಧ್ಯಕ್ಷ ಕುಡೆಕಲ್ ಸಂತೋಷ್ ತಿಳಿಸಿದ್ದಾರೆ. ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಸೆ.23 ರಿಂದ ಅ2 ರವರೆಗೆ ದಸರಾ ಸಾಂಸ್ಕೃತಿಕ ಸಮಿತಿಯಿಂದ ವೈವಿಧ್ಯಮಯ ಕಾಯ೯ಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಸಾಂಸ್ಕೖತಿಕ ಕಾಯ೯ಕ್ರಮಗಳಲ್ಲಿ ಪಾಲ್ಗೊಳ್ಳುವ ಕಲಾವಿದರು, ಕಲಾತಂಡಗಳು ತಾವು ಪ್ರದಶಿ೯ಸುವ ಕಲಾ ಪ್ರಕಾರ, ಪಾಲ್ಗೊಳ್ಳುವ ಕಲಾವಿದರ ಸಂಖ್ಯೆ, ಅಪೇಕ್ಷಿತ ದಿನಾಂಕ, ಮೊಬೈಲ್ ಸಂಖ್ಯೆಯೊಂದಿಗಿನ ವಿಳಾಸವನ್ನು ಆಗಸ್ಟ್ 25 ರೊಳಗಾಗಿ ಅಧ್ಯಕ್ಷರು ಮಡಿಕೇರಿ ನಗರ ದಸರಾ ಸಾಂಸ್ಕೖತಿಕ ಸಮಿತಿ, ಮಡಿಕೇರಿ ನಗರ ದಸರಾ ಸಮಿತಿ ಕಛೇರಿ, ನಗರಸಭಾ ಸಂಕೀಣ೯, ಮುಖ್ಯರಸ್ತೆ, ಮಡಿಕೇರಿ – 571201 ಈ ವಿಳಾಸಕ್ಕೆ ತಲುಪಿಸಬೇಕು. ಅಥವಾ madikeridasara @ gmail.com ಇಮೇಲ್ ಮೂಲಕ ಕಳುಹಿಸಬಹುದು. ಅಜಿ೯ ಸಲ್ಲಿಸುವ ಕೊನೇ ದಿನಾಂಕದ ಬಳಿಕ…
ಲೇಖಕ: admin
ಮಡಿಕೇರಿ ಆ.11 NEWS DESK : ಕೊಡಗು ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಜಿಲ್ಲಾ ನೋಡಲ್ ಅಧಿಕಾರಿಯಾಗಿ ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ದಯಾನಂದ.ಕೆ.ಸಿ ಅವರನ್ನು ನೇಮಿಸಲಾಗಿದೆ.
ಕುಶಾಲನಗರ ಆ.11 NEWS DESK : ಕೊಡಗು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸದಸ್ಯರಾಗಿ ಕುಶಾಲನಗರ ಎಂ.ಜಿ.ಎಂ ಪದವಿ ಕಾಲೇಜಿನ ಪ್ರಾಂಶುಪಾಲರಾದ ಅಯ್ಯಂಡ್ರ ಲಿಖಿತ ಟಿ.ಎ ಅವರು ನೇಮಕಗೊಂಡಿದ್ದಾರೆ. 2025- 2026ನೇ ಸಾಲಿನ ಶೈಕ್ಷಣಿಕ ವರ್ಷದ ಒಂದು ವರ್ಷದ ಅವಧಿಗೆ ಮುಂದಿನ ಆದೇಶದ ವರೆಗೆ ಕೊಡಗು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನಾಮ ನಿರ್ದೇಶನ ಮಾಡಲಾಗಿದೆ. ಇವರು 13 ವರ್ಷಗಳ ಬೋಧನಾ ಅನುಭವ ಹೊಂದಿದ್ದಾರೆ. ಸಿಂಡಿಕೇಟ್ ಸದಸ್ಯರಾಗಿ ಆಯ್ಕೆಯಾಗಿರುವ ಅಯ್ಯಂಡ್ರ ಲಿಖಿತ ಅವರನ್ನು ವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶಂಭುಲಿಂಗಪ್ಪ ಎನ್.ಎನ್ ಹಾಗೂ ಪದವಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದರು.
ಮಡಿಕೇರಿ ಆ.11 NEWS DESK : ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರು ಮತಗಳ್ಳತನದ ಕುರಿತು ಆಧಾರ ರಹಿತ ಸುಳ್ಳು ಆರೋಪಗಳನ್ನು ಮಾಡುತ್ತಿರುವುದರಿಂದ ಇವರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕೆಂದು ವಿರಾಜಪೇಟೆ ಮಂಡಲ ಬಿಜೆಪಿಯ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕೂಡ ಮತಗಳ್ಳತನದ ಮೂಲಕ ಬಿಜೆಪಿ ಗೆಲುವು ಸಾಧಿಸಿದೆ ಎಂದು ಎಂ.ಲಕ್ಷ್ಮಣ್ ಅವರು ಮಾಡಿರುವ ಆರೋಪವನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ. ಸೋಲಿನ ಹತಾಶೆಯಿಂದ ಹೊರ ಬರಲಾಗದೆ ಪರಿತಪಿಸುತ್ತಿರುವ ಲಕ್ಷ್ಮಣ್ ಅವರು ತಮ್ಮ ನಾಯಕ ರಾಹುಲ್ ಗಾಂಧಿ ಅವರಂತೆ ಯಾವುದೇ ದಾಖಲೆ ಇಲ್ಲದ ಆಧಾರ ರಹಿತ ಆರೋಪಗಳನ್ನು ಮಾಡುತ್ತಾ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಸುಳ್ಳು ಹೇಳಿಕೆಗಳನ್ನು ನೀಡಿ ಅಪಪ್ರಚಾರ ಮಾಡುವವರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವ ಕಾನೂನನ್ನು ಕಾಂಗ್ರೆಸ್ ಸರಕಾರವೇ ಜಾರಿಗೆ ತಂದಿದೆ. ಈ ಕಾನೂನಿನನ್ವಯ ಲಕ್ಷ್ಮಣ್ ಅವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು…
ಮಡಿಕೇರಿ ಆ.11 NEWS DESK : ಸೋಮವಾರಪೇಟೆ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಸೇವೆ ಸಲ್ಲಿಸಿ ನಿರ್ಗಮಿತಗೊಂಡ ಬಿಇಓ ಎಸ್ ಭಾಗ್ಯಮ್ಮ ಅವರು ಸುಳ್ಯ ತಾಲ್ಲೂಕಿನಿಂದ ಆಗಮಿಸಿದ ನೂತನ ಬಿಇಓ ಎಂ.ಕೃಷ್ಣಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಬಿಇಓ ಎಂ.ಕೃಷ್ಣಪ್ಪ ತಾಲ್ಲೂಕಿನಲ್ಲಿ ಉತ್ತಮ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಶಾಲೆಗಳಿ ಅಭಿವೃದ್ಧಿಗೆ ವಿಶೇಷ ಗಮನ ಹರಿಸಲಾಗುವುದು. ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು ಈ ಹಿಂದೆ ತಾಲ್ಲೂಕಿನಲ್ಲಿ ಕೈಗೊಂಡ ಶೈಕ್ಷಣಿಕ ಚಟುವಟಿಕೆಗಳು ಹಾಗೂ ಯೋಜನೆಯಂತೆ ಪರೀಕ್ಷಾ ಫಲಿತಾಂಶವನ್ನು ಉತ್ತಮಪಡಿಸಲು ವಿಶೇಷ ಗಮನಹರಿಸಲಾಗುವುದು ಎಂದರು. ಬಿಇಓ ಭಾಗ್ಯಮ್ಮ ಅವರು ತಾಲ್ಲೂಕಿನಲ್ಲಿ ಈ ಹಿಂದೆ ಕೈಗೊಂಡ ಶೈಕ್ಷಣಿಕ ಕಾರ್ಯಕ್ರಮಗಳಂತೆ ಮುಂದೆ ಕೂಡ ಎಲ್ಲರ ಸಹಕಾರದಿಂದ ಉತ್ತಮ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಶಾಲೆಗಳ ಅಭಿವೃದ್ಧಿಗೆ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶವನ್ನು ಇನ್ನಷ್ಟು ಸುಧಾರಿಸಲು ಪ್ರಯತ್ನಿಸಲಾಗುವುದು ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಿರ್ಗಮಿತ ಬಿಇಓ ಭಾಗ್ಯಮ್ಮ, ಸೋಮವಾರಪೇಟೆ ತಾಲೂಕಿನಲ್ಲಿ ಉತ್ತಮ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಶೈಕ್ಷಣಿಕ ಪ್ರಗತಿ ಸಾಧಿಸಲಾಗಿದೆ.…
ಮಡಿಕೇರಿ NEWS DESK ಆ.11 : ಸ್ವಾತಂತ್ರ್ಯೋತ್ಸವದ ಪ್ರಯುಕ್ತ ದೇಶಭಕ್ತಿ ಮತ್ತು ದೇಶಾಭಿಮಾನದ ಕುರಿತು ಯುವಸಮೂಹ ಹಾಗೂ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಲು ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾ ಮಡಿಕೇರಿಯಲ್ಲಿ ಬೈಕ್ ಜಾಥಾ ನಡೆಸಿತು. ತ್ರಿವರ್ಣಧ್ವಜ ಹಿಡಿದ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ನಗರದ ಮುಖ್ಯ ರಸ್ತೆಗಳಲ್ಲಿ ಸಾಗಿ ಗಮನ ಸೆಳೆದರು.
ಮಡಿಕೇರಿ ಆ.11 NEWS DESK : ಪಠ್ಯದಲ್ಲಿನ ಅಂಕಗಳಿಕೆಯೇ ವಿದ್ಯಾಥಿ೯ಗಳ ಸಾಧನೆಗೆ ಪ್ರಮುಖ ಮಾನದಂಡವಾಗದೇ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ರೂಡಿಸಿಕೊಳ್ಳುವುದೂ ವಿದ್ಯಾಥಿ೯ಗಳ ಜೀವನದಲ್ಲಿ ಪ್ರಮುಖವಾಗಿರಲಿ ಎಂದು ಹಿರಿಯ ವಕೀಲ, ಮಡಿಕೇರಿ ವಕೀಲರ ಸಂಘದ ನಿಕಟಪೂವ೯ ಅಧ್ಯಕ್ಷ ಎಂ.ಎ.ನಿರಂಜನ್ ಕರೆ ನೀಡಿದ್ದಾರೆ. ನಗರದ ಕೊಡಗು ಪತ್ರಿಕಾಭವನ ಟ್ರಸ್ಟ್ ವತಿಯಿಂದ ಜಿಲ್ಲೆಯ ಪತ್ರಕತ೯ರ 48 ವಿದ್ಯಾಥಿ೯ಗಳಿಗೆ 2.19ಲಕ್ಷ ರು. ವೆಚ್ಚದಲ್ಲಿ ವಿದ್ಯಾನಿಧಿ ವಿತರಣಾ ಕಾಯ೯ಕ್ರಮಕ್ಕೆ ಚಾಲನೆ ನೀಡಿ ನಿರಂಜನ್ ಮಾತನಾಡಿದರು. ಪತ್ರಕತ೯ರ ಮಕ್ಕಳಲ್ಲಿನ ಶೈಕ್ಷಣಿಕ ಪ್ರತಿಭೆಗೆ ಪ್ರೋತ್ಸಾಹ ನೀಡಲು ಪತ್ರಿಕಾಭವನ ಟ್ರಸ್ಟ್ ನೀಡುತ್ತಿರುವ ವಿದ್ಯಾನಿಧಿ ಕಾರಣವಾಗಲಿ ಎಂದು ಹಾರೈಸಿದರಲ್ಲದೇ, ಜಿಲ್ಲೆಯಾದ್ಯಂತಲಿನ ಪತ್ರಕತ೯ರ ಮಕ್ಕಳಿಗೆ ವಿದ್ಯಾನಿಧಿಯನ್ನು ವಿತರಿಸಿರುವುದು ಶ್ಲಾಘನೀಯ ಎಂದು ನಿರಂಜನ್ ಹೇಳಿದರು. ಹಿಂದಿನ ಕಾಲದಲ್ಲಿ ಮನೆಯೊಳಕ್ಕೆ ಆಟದ ಮೈದಾನದಿಂದ ಮಕ್ಕಳನ್ನು ಕರೆತರುವುದೇ ಪೋಷಕರಿಗೆ ಸಮಸ್ಯೆಯಾಗಿತ್ತು. ಬದಲಾದ ಕಾಲಘಟ್ಟದಲ್ಲಿ ಮೊಬೈಲ್ ದಾಸರಾಗಿರುವ ಮಕ್ಕಳನ್ನು ಮನೆಯಿಂದ ಹೊರಕ್ಕೆ ಕರೆತರುವುದೇ ಪೋಷಕರ ಪಾಲಿಗೆ ಸವಾಲಾಗಿದೆ ಎಂದು ವಿಷಾಧಿಸಿದ ನಿರಂಜನ್, ಪೋಷಕರಾಗಿ ನಾವೇನು ಮಾಡುತ್ತೇವೆಯೋ ಅದನ್ನೇ ಮಕ್ಕಳೂ ಅನುಸರಿಸುತ್ತಾರೆ ಎಂಬುದನ್ನು…
ಮಡಿಕೇರಿ NEWS DESK ಆ.11 : ಆದಿವಾಸಿಗಳ ಮೇಲಿನ ದೌರ್ಜನ್ಯವನ್ನು ತಕ್ಷಣ ನಿಲ್ಲಿಸಬೇಕು ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ಆದಿವಾಸಿಗಳ ಸಮನ್ವಯ ಸಮಿತಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಭವನದ ಎದುರು ಘೋಷಣೆಗಳನ್ನು ಕೂಗಿದ ಸಮಿತಿಯ ಪ್ರಮುಖರು ಹಾಗೂ ಆದಿವಾಸಿಗಳು ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಸಲ್ಲಿಸಿದರು. ರಾಷ್ಟ್ರೀಯ ಉದ್ಯಾನವನಗಳು, ಮೀಸಲು ಅರಣ್ಯಗಳು ಮತ್ತು ಹುಲಿ ಮೀಸಲು ಪ್ರದೇಶದಿಂದ ಆದಿವಾಸಿಗಳನ್ನು ಹೊರ ಹಾಕಬಾರದು. ಆದಿವಾಸಿ ಅರಣ್ಯ ಹಕ್ಕು ಕಾಯ್ದೆ 2006 ರ ಅನುಷ್ಠಾನದ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಭೂಮಿ ಮತ್ತು ಅರಣ್ಯದ ಮೇಲೆ ಆದಿವಾಸಿಗಳ ಹಕ್ಕುಗಳನ್ನು ಗುರುತಿಸುವ ಮೂಲಕ ಕಿರುಕುಳವನ್ನು ನಿಲ್ಲಿಸಬೇಕು. ಆದಿವಾಸಿಗಳ ಆಚರಣೆ, ನಂಬಿಕೆಗೆ ವಿರುದ್ಧವಾಗಿ ಕೋಮು ದ್ವೇಷ ಹರಡುವುದನ್ನು ನಿಲ್ಲಿಸಬೇಕು. ಆದಿವಾಸಿಗಳ ಅಭಿವೃದ್ಧಿಗಾಗಿ ಕಾಲಮಿತಿಯ ಯೋಜನೆಗಳನ್ನು ರೂಪಿಸಿ ಮೂಲಭೂತ ಸೌಲಭ್ಯಗಳಾದ ಶಾಲೆಗಳು, ಕುಡಿಯುವ ನೀರು, ವಿದ್ಯುತ್, ರಸ್ತೆ, ವೈದ್ಯಕೀಯ ವ್ಯವಸ್ಥೆ ಮತ್ತು ನಿವೇಶನವನ್ನು ನೀಡಬೇಕು. ಆದಿವಾಸಿಗಳ ಕಲ್ಯಾಣಕ್ಕಾಗಿ ಬಜೆಟ್ ನಲ್ಲಿ ಅಗತ್ಯ…
ಮಡಿಕೇರಿ ಆ.11 NEWS DESK : ಮಾದಾಪುರದ ಶ್ರೀಮತಿ ಡಿ ಚೆನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಪೋಕ್ಸೋ ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಹಳೆಯ ವಿದ್ಯಾರ್ಥಿನಿ, ಮಕ್ಕಳಾ ರಕ್ಷಣಾ ಇಲಾಖೆಯಲ್ಲಿ ಪೋಲೀಸ್ ಸಿಬ್ಬಂದಿಯಾಗಿರುವ ರಾಷ್ಟ್ರ ಪ್ರಶಸ್ತಿ ವಿಜೇತೆ ಸುಮತಿ ಶೆಟ್ಟಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳು ಹಾಗೂ ಯುವ ಜನತೆ ಮಾದಕ ವ್ಯಸನಿಗಳಾಗುತ್ತಿರುವುದಕ್ಕೆ ಕಾರಣ ಹಾಗೂ ಲೈಂಗಿಕ ದೌರ್ಜನ್ಯ ವಿರುದ್ಧ ಕಾನೂನು ಅರಿವು, ಪೋಕ್ಸೋ ಕಾಯಿದೆಯ ಕುರಿತು ಸಮಗ್ರವಾಗಿ ಮಾಹಿತಿಯನ್ನು ಸುಮತಿ ನೀಡಿದರು. ಸಂಸ್ಥೆಯ ಪ್ರಾಂಶುಪಾಲ ಸಿ.ಜಿ.ಮಂದಪ್ಪ ಮಾತನಾಡಿ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಪಡೆಯುವುದರೊಂದಿಗೆ ಸನ್ನಡತೆಯನ್ನು, ಉತ್ತಮ ಸಂಸ್ಕಾರವನ್ನು ಮೈಗೂಡಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು. ಸಂಸ್ಥೆಯ ಹಿಂದಿ ಉಪನ್ಯಾಸಕ ರಾಜ ಸುಂದರಂ ಸ್ವಾಗತಿಸಿದರು. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸ್ನೇಹಾ ನಿರೂಪಿಸಿ ತ್ರಿಷಾ ವಂದಿಸಿದಳು. ಮುಖ್ಯ ಶಿಕ್ಷಕಿ ಕೆ.ಯು.ರೀಟಾ ಸಂಸ್ಥೆಯ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಪುತ್ತೂರು ಆ.11 NEWS DESK : ಒಳ್ಳೆಯ ಗುಣ ಮನುಷ್ಯನನ್ನು ಎತ್ತರಕ್ಕೆ ಏರಿಸುತ್ತದೆ. ಗುಣ ಇದ್ದಾಗ ಹಣ ಬರುತ್ತದೆ. ಆದರೆ ಹಣ ಇದ್ದಾಗ ಗುಣ ಇರುವುದಿಲ್ಲ. ಆದುದರಿಂದ ಎಲ್ಲರೂ ಸದ್ಗುಣವಂತರಾಗಿ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು. ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ 2024-25ನೇ ಸಾಲಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ನಡೆಸಿದ ಇಂಜಿನಿಯರಿಂಗ್ ವಿಭಾಗಗಳ ಅಂತಿಮ ವರ್ಷದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಪದವೀಧರರಾದ ಅರ್ಹ ವಿದ್ಯಾರ್ಥಿಗಳ ಪದವಿ ಪ್ರದಾನ ಕಾರ್ಯಕ್ರಮ ಸಮಾವರ್ತನ ಸಮಾರಂಭದಲ್ಲಿ ಅವರು ಮಾತಾಡಿದರು. ಕಾಲೇಜಿನಲ್ಲಿ ಇದುವರೆಗಿನ ಬೇರೆ ಬೇರೆ ವಿಭಾಗಗಳಲ್ಲಿ ವಿದ್ಯಾರ್ಜನೆಯನ್ನು ಮಾಡಿದ್ದೀರಿ. ಆದರೆ ಮುಂದೆ ಇರುವ ಸಮಾಜ ಎನ್ನುವುದು ಬೇರೆಯದೇ ವಿಭಾಗ ಇದರಿಂದ ಕಲಿಯುವುದು ಸಾಕಷ್ಟಿದೆ. ಅದರಲ್ಲಿ ಸಫಲರಾದರೆ ಜೀವನವನ್ನು ಸಾರ್ಥಕಪಡಿಸಿದಂತೆ ಎಂದು ಹೇಳಿದರು. ವಿವಿಧ ವಿಷಯಗಳಲ್ಲಿ ಸಂಶೋಧನೆಗಳನ್ನು ಮಾಡುವತ್ತ ಗಮನಹರಿಸಬೇಕು. ಹಣದ ಹಿಂದೆ ಓಡುವುದಲ್ಲ ಕೊಡುವುದರಲ್ಲಿಯೂ ಮುಂದಾಗಬೇಕು. ಸಮಾಜಕ್ಕೋಸ್ಕರ ಬದುಕುವುದರಿಂದ ಮಾನಸಿಕ ನೆಮ್ಮೆದಿ ಸಿಗುತ್ತದೆ ಎಂದರು.…






