ಲೇಖಕ: admin

ಸೋಮವಾರಪೇಟೆ ಆ.4 NEWS DESK : ಸಂತ ಜೋಸೆಫರ ಪಿಯು ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸಂತಜೋಸೆಫರ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಧರ್ಮಗುರು ಅವಿನಾಶ್ ಉದ್ಘಾಟಿಸಿದರು. ಕಾಲೇಜಿನ ಆಧ್ಯಕ್ಷೆಯಾಗಿ ಎಸ್.ಹಿತೈಸಿ, ಉಪಾಧ್ಯಕ್ಷರಾಗಿ ತೀರ್ಥೆಶ್‍ಗೌಡ, ಶಿಸ್ತುಪಾಲಕರಾಗಿ ಕೆ.ನಿತೇಶ್, ಸಾಯಿ ಪ್ರಿಯ, ಸಾಂಸ್ಕøತಿಕ ನಾಯಕರಾಗಿ ಡಿ.ಪಿ.ಮೊನಿಶಾ, ಟಿ.ಎಸ್.ಸೂರ್ಯ, ಕ್ರೀಡಾನಾಯಕರಾಗಿ ಕೆ.ಎಸ್.ತೇಜಸ್, ಎಂ.ಸಿ.ಹಂಸಿನಿ, ವಿವಿಧ ಘಟಕಗಳ ನಾಯಕರುಗಳಾಗಿ ಪಿ.ಸಾತ್ವಿಕ್, ಎಂ.ಪಿ.ಕಾರುಣ್ಯ, ಫಾತಿಮ ಹಮೀದ್, ಎಸ್.ಎಸ್.ಜತೀನ್, ವಯಾಲಿನ್ ಲೋಬೋ, ಜಿ.ಎನ್.ಕೌಸಿಕ್, ಸಿ.ಪಿ.ವರ್ಷಾ, ಎಂ.ಆಕಾಶ್, ಡಿ.ಪಿ.ಮೊನಿಷಾ, ಎಸ್.ಲಕಿನ್, ಎಂ.ನಿಖಿಲೇಶ್, ಹೆಚ್.ಎಂ.ಪೂರ್ವಿಕಾ, ಟಿ.ಎ.ಸಂಜಯ್, ಎಸ್.ಕೆ.ಚಿರಾಗ್, ಕೆ.ಆರ್.ಆಧ್ಯ, ಡಿ.ಎಸ್.ದೀಪಾಲಿ, ಬಿ.ಡಿ.ಪ್ರೀತಮ್, ಪಾರ್ವತಿ, ಸಿ.ಆರ್.ಸುಪ್ರಿತಾ, ಸಿ.ಪಿ.ಶೇಯಾ, ಎಂ.ರಿತೀಶ್, ಕೆ.ಎ.ನೌಫಿಯಾ, ಎಂ.ಎ.ಆಶಿಕ್, ಜಿ.ಆರ್.ಸೋನಿಕಾ, ಎಚ್.ವಿ.ಧನ್ವಂತ್ರಿ, ಎನ್.ಜಿ.ಮೊನಿಕಾ, ಕೆ.ಯು.ಕುವಾಲ್, ಎಸ್.ಮೊನಿಷ, ಕೆ.ಜಿ.ದಿಶಾ, ಕೆ.ಡಿ.ಗುರುಪ್ರಸಾದ್ ಪ್ರಮಾಣ ವಚನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಶಶಿಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯೆ ಶೀಲಾ ಡಿಸೋಜ, ಸರ್ಕಲ್‍ಇನ್ಸ್‍ಪೆಕ್ಟರ್ ಮುದ್ದು ಮಹಾದೇವ, ಆರ್‍ಎಫ್‍ಒ ಶೈಲೆಂದ್ರ ಕುಮಾರ್, ಓಎಲ್‍ವಿ ಚರ್ಚ್ ಸದಸ್ಯ ವಿ.ಎ.ಲಾರೆನ್ಸ್, ಪ್ರಾಂಶುಪಾಲರಾದ…

Read More

ಮಡಿಕೇರಿ ಆ.4 NEWS DESK : ಮರಗೋಡು ಅಂಗನವಾಡಿ ಕೇಂದ್ರದಲ್ಲಿ ಸ್ತನ್ಯಪಾನ ಸಪ್ತಾಹ  ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಭಾರ ಸಾಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಎದೆ ಹಾಲಿನ ಮಹತ್ವವನ್ನು ತಿಳಿಸಿದರು.  :: ಬೀಳ್ಕೊಡುಗೆ :: ಇದೇ ಸಂದರ್ಭ ಕತ್ತಲೆಕಾಡು ಅಂಗನವಾಡಿ ಕೇಂದ್ರದಲ್ಲಿ 31 ವರ್ಷಗಳ ಕಾಲ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಬಿ.ಕೆ.ಸುಶೀಲಾ  ಅವರನ್ನು ಅಂಗನವಾಡಿ ಕಾರ್ಯಕತೆಯರು ಮತ್ತು ಸಹಾಯಕಿಯರು ಆತ್ಮೀಯವಾಗಿ ಬೀಳ್ಕೊಟ್ಟರು. ಕಡಗದಾಳು ಅಂಗನವಾಡಿ ಕಾರ್ಯಕರ್ತೆ ಕೆ.ಆರ್.ಅನಿಲ ಸ್ವಾಗತಿಸಿದರು. ಮರಗೋಡು ಅಂಗನವಾಡಿ ಕಾರ್ಯಕರ್ತೆ ಅಕ್ಕಮ್ಮ  ವಂದಿಸಿದರು.

Read More

ನಾಪೋಕ್ಲು ಆ.4 NEWS DESK : ಹದಿನೆಂಟು ಬಗೆಯ ಔಷಧೀಯ ಗುಣಗಳು ಹೊಂದಿರುವ ಮದ್ದುಸೊಪ್ಪಿನ ಬಳಕೆಯ ಆಚರಣೆ ಕಕ್ಕಡ-18 ಅನ್ನು ವೈಶಿಷ್ಟಪೂರ್ಣವಾಗಿ ಆಚರಿಸಬೇಕು ಎಂದು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ.ನಾಣಯ್ಯ ಹೇಳಿದರು. ನಾಪೋಕ್ಲು ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್ ವತಿಯಿಂದ ಕೊಡವ ಸಮಾಜದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಸಭಾಂಗಣದಲ್ಲಿ ನಡೆದ ಕಕ್ಕಡ-18 ತೀನಿ ನಮ್ಮೆ ಸ್ಪರ್ಧೆ ಮತ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಹಿಂದೆ ಭತ್ತದ ಕೃಷಿ ಮಾಡುವ ರೈತರಲ್ಲಿ ಸಂತೋಷ, ಸಂಭ್ರಮ ಇತ್ತು. ಇಂದು ಅದೆಲ್ಲವೂ ಮರೆಯಾಗಿದೆ ಮಕ್ಕಳಿಗೆ ಕೃಷಿ ಚಟುವಟಿಕೆಗಳಲ್ಲಿ ಆಸಕ್ತಿ ಇಲ್ಲ. ರೈತರಿಗೆ ಖುಷಿ, ತೃಪ್ತಿ ಇಲ್ಲ. ಗದ್ದೆಗಳೆಲ್ಲ ಪಾಳುಬಿದ್ದಿವೆ. ಒಂದಷ್ಟು ಭಾಗ ಅಡಿಕೆ, ಕಾಫಿ ತೋಟಗಳಾಗಿವೆ. ಗತವೈಭವದ  ಸಂತೋಷ, ಸಂಭ್ರಮವನ್ನು ಕಾಣಬೇಕಿದ್ದರೆ ಇಂದಿನ ಯುವ ಜನರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಭತ್ತದ ಗದ್ದೆಗಳಲ್ಲಿ ಅಗೆ ತೆಗೆಯುವುದು, ನಾಟಿ ಮಾಡುವುದು ಹೇಗೆ ಎಂಬ ಬಗ್ಗೆ ಕರ್ನಾಟಕ ಕೊಡವ ಸಾಹಿತ್ಯ…

Read More

ನಾಪೋಕ್ಲು ಆ.4 NEWS DESK : ನಾಪೋಕ್ಲು ಬಿಲ್ಲವ ಸಮಾಜದ ವತಿಯಿಂದ ಆ.10 ರಂದು ಸ್ಥಳೀಯ ಕೊಡವ ಸಮಾಜದಲ್ಲಿ ಆಟಿಡೊಂಜಿ ದಿನ-2025 ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಬೃಹತ್ ರಕ್ತದಾನ ಶಿಬಿರ, ಬಿಲ್ಲವ ಸಮಾಜದ ಮಹಾಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲು ತೀರ್ಮಾನಿಸಲಾಗಿದೆ ಎಂದು ನಾಪೋಕ್ಲು ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ.ಪ್ರತೀಪ ಹೇಳಿದರು. ಪಟ್ಟಣದಲ್ಲಿ  ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ,ಶಾಸಕರಾದ ಎ.ಎಸ್.ಪೊನ್ನಣ್ಣ, ಮಡಿಕೇರಿ ವಿದಾನ ಸಭಾ ಕ್ಷೇತ್ರದ ಶಾಸಕರಾದ ಡಾ.ಮಂಥರ್ ಗೌಡ, ರಾಮನಗರ ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ವಿಖ್ಯಾತಾನಂದ ಸ್ವಾಮೀಜಿ, ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸೂರತ್ಕಲ್ ಪಾಲ್ಗೊಳ್ಳಲಿರುವರು ಎಂದರು. ಅಂದು ಬೆಳಿಗ್ಗೆ 10 ಗಂಟೆಗೆ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಲಾಗುವುದು. ಬಳಿಕ ಆಟಿಡೊಂಜಿ ದಿನ -2025 ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಬಿಲ್ಲವ ಸಮಾಜದ ಸಾಧಕರನ್ನು ಸನ್ಮಾನಿಸಲಾಗುವುದು. ಬಳಿಕ ಆಟಿ ಮಾಸದ ಸಾಂಪ್ರದಾಯಿಕ…

Read More

ನಾಪೋಕ್ಲು ಆ.4 NEWS DESK : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ನಾಲ್ಕುನಾಡು ಪ್ಲಾಂಟರ್ಸ್ ಕ್ಲಬ್ ಹಾಗೂ ನಾಪೋಕ್ಲು ಕೊಡವ ಸಮಾಜದ ಕ್ರೀಡಾ ಮತ್ತು ಸಾಂಸ್ಕೃತಿಕ, ಮನೋರಂಜನಾ ಕೂಟ ಹಾಗೂ ಬಿದ್ದಾಟಂಡ ಕುಟುಂಬಸ್ಥರ ಸಹಯೋಗದೊಂದಿಗೆ ಆ.7 ರಂದು ಬೇಲ್ ನಮ್ಮೆಯನ್ನು ಆಯೋಜಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಹೇಳಿದರು. ಬಿದ್ದಾಟಂಡ ಕುಟುಂಬಸ್ಥರ (ಬುಟ್ಟಿಆಕ್) ಗದ್ದೆಯಲ್ಲಿ ಜರುಗಲಿರುವ ಬೇಲ್ ನಮ್ಮೆ ಪೂರ್ವಸಿದ್ಧತೆಯ ಬಗ್ಗೆ ಪ್ರಮುಖರೊಂದಿಗೆ ಪರಿಶೀಲಿಸಿ ಅವರು ಮಾತನಾಡಿ, ಕೊಡಗಿನಲ್ಲಿ ಕೃಷಿ ಚಟುವಟಿಕೆಗಳು ಪೂರ್ಣಗೊಂಡ ಬಳಿಕ ಕೈಲ್ ಮುಹೂರ್ತ ಹಬ್ಬವನ್ನು ಆಚರಿಸಲಾಗುವುದು. ಕೃಷಿ ಚಟುವಟಿಕೆಗಳಿಗೆ ಇನ್ನಷ್ಟು ಸಡಗರ ಸಂಭ್ರಮ ತುಂಬಿಕೊಳ್ಳಲು ಕಕ್ಕಡ-18 ಕ್ಕೆ ಪೂರಕವಾಗಿ ಬೇಲ್ ನಮ್ಮೆಯನ್ನು ಆಯೋಜಿಸಲಾಗಿದೆ. ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಬೇಲ್ ನಮ್ಮೆಯಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಲಾಗುವುದು. ಕೂಡು ನಾಟಿ, ನಾಟಿ ಓಟದಂತಹ ಚಟುವಟಿಕೆಗಳು ಜೊತೆಯಲ್ಲಿ ಕೃಷಿಗೆ ಪೂರಕವಾದ ಆಟೋಟಗಳನ್ನು ಹಮ್ಮಿಕೊಳ್ಳಲಾಗುವುದು. ಕೊಡಗಿನಲ್ಲಿ ಬದುಕಿನ ಆಧಾರ ಕೃಷಿ ಆಗಿದ್ದು ಅದನ್ನು ಉತ್ತೇಜಿಸಬೇಕು. ಕೃಷಿಯಾಧಾರಿತ ಬದುಕಿನಲ್ಲಿ ಯುವಜನರನ್ನು ತೊಡಗಿಸಿಕೊಳ್ಳುವಂತೆ ಮಾಡುವುದು…

Read More

ಸುಂಟಿಕೊಪ್ಪ ಆ.4 NEWS DESK : ಸುಂಟಿಕೊಪ್ಪ ಹೋಬಳಿಯ ಗದ್ದೆಹಳ್ಳದಲ್ಲಿ ‘ಗದ್ದೆ ಆಟ’ ಎಂಬ ವಿನೂತನ ಕಾರ್ಯಕ್ರಮ ಗಮನ ಸೆಳೆಯಿತು. ಹಿರಿಯ ರಾಜಕಾರಣಿ ಸಮಾಜ ಸೇವಕರಾದ ಯಂಕನ ವೈ. ಕರುಂಬಯ್ಯ ಅವರ ಗದ್ದೆಯಲ್ಲಿ 3 ವರ್ಷದಿಂದ 60 ವರ್ಷ ಮೇಲ್ಪಟ್ಟವರಿಗೂ ಮುಕ್ತ ಕೆಸರು ಗದ್ದೆ ಓಟ, ರಿಲೆ, ಹಗ್ಗ ಜಗ್ಗಾಟ,ಮಹಿಳೆಯರು ಪುರುಷರಿಗೆ ಕಾಲ್ನಡಿಗೆ ಸ್ಪರ್ಧೆಗಳು ನಡೆಯಿತು. ಮಕ್ಕಳು, ಹಿರಿಯರು, ಕಿರಿಯರು ಸ್ಪರ್ಧೆಯಲ್ಲಿ ಪಾಲ್ಗೊಂಡು ಸಂಭ್ರಮಸಿದರು. ಫನ್‍ಗೆಮ್ಸ್ ಎಂಬ ಸ್ಪರ್ಧೆಯಲ್ಲಿ ದಂಪತಿಗಳು ಪಾಲ್ಗೊಂಡಿದ್ದರು. ಒಂದೇ ಕುಟುಂಬದ ತಾಯಿ, ತಂದೆ, ಮಗ, ಮಗಳು ಒಗ್ಗೂಡಿ ಸೇರಿ ತಿರುಗಿ ಓಟ ಎಂಬ ಸ್ಪರ್ಧೆ ಕುತೂಲಹ ಮೂಡಿಸಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮಾಜ ಸೇವಕ ವೈ.ಎಂ.ಕರುಂಬಯ್ಯ, ರೈತರೇ ದೇಶದ ಬೆನ್ನಲುಬು. ರೈತಾಪಿ ವರ್ಗದಿಂದ ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ ಭತ್ತದ ಗದ್ದೆಯನ್ನು ಪಾಳು ಬಿಡದಂತೆ ಅವರು ಕರೆ ನೀಡಿದರು.  ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್ ಮಾತನಾಡಿ, ರೈತರಿಗೆ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸಿದ್ದು ಶ್ಲಾಘನೀಯವಾದದ್ದು, ಇದರಿಂದ ಕೃಷಿಕರಿಗೆ…

Read More

ಸೋಮವಾರಪೇಟೆ ಆ.4 NEWS DESK : ಇನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಆಲೂರು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಾಣಂತಿಯರಿಗೆ ಸ್ತನ್ಯಪಾನ ಮಹತ್ವ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ತನ್ಮಯಿ ಪ್ರವೀಣ್ ಕಾರ್ಯಕ್ರಮ ಉದ್ಘಾಟಿಸಿದರು. ತಾಯಿಗೆ ತಾಯ್ತನದ ಸಂಭ್ರಮ ಅತ್ಯಮೂಲ್ಯವಾದದ್ದು, ಪೌಷ್ಠಿಕಾಂಶಯುಕ್ತ ಆಹಾರವನ್ನು ಸೇವಿಸಬೇಕು. ಆರೋಗ್ಯವಂತ ಮಗುವನ್ನು ಈ ಸಮಾಜಕ್ಕೆ ನೀಡುವುದು ತಾಯಿಯ ಜವಾಬ್ದಾರಿಯೂ ಆಗಿದೆ ಎಂದು ಕಿವಿಮಾತು ಹೇಳಿದರು. ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುಪರ್ಣ ಕೃಷ್ಣನಂದ ಮಾತನಾಡಿ, ನವಜಾತ ಶಿಶುಗಳಿಗೆ ತಾಯಿಯ ಎದೆಹಾಲೇ ಆಹಾರ ಮತ್ತು ಅಮೃತವಾಗಿದೆ. ದೈಹಿಕ ಮತ್ತು ಸರ್ವತೋಮುಖ ಬೆಳವಣಿಗೆಗೆ ಬೇಕಾದ ಎಲ್ಲಾ ಪೌಷ್ಠಿಕಾಂಶಗಳು ಎದೆ ಹಾನಿನಿಂದಲೇ ಸಿಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬಾಣಂತಿಯರಿಗೆ ಬೆಡ್‍ಶಿಟ್‍ಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಕಾರ್ಯದರ್ಶಿ ಸುವಿನಾ ಕೃಪಾಲ್, ಉಪಾಧ್ಯಕ್ಷೆ ಲತಾಮಂಜು, ಮಾಜಿ ಅಧ್ಯಕ್ಷೆ ಸಂಗೀತ ದಿನೇಶ್, ಖಜಾಂಚಿ ಆಶಾ ಮೋಹನ್ ಪದಾಧಿಕಾರಿಗಳಾದ ನಂದಿನಿ ಗೋಪಾಲ್, ಸ್ಮಿತಾ ನವೀನ್,…

Read More

ಮಡಿಕೇರಿ ಆ.4 NEWS DESK : ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗದ ವತಿಯಿಂದ ನೀಡಲಾಗುವ 2025ನೇ ಸಾಲಿನ ಅಧ್ಯಾಪಕ ಭೂಷಣ ಪ್ರಶಸ್ತಿಗೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಗ್ರಂಥಪಾಲಕಿ ಡಾ.ವಿಜಯಲತಾ ಸಿ ಅವರು ಭಾಜನರಾಗಿದ್ದಾರೆ. ಗ್ರಂಥಾಲಯದ ಡಿಜೀಟಲೀಕರಣ, ಇ-ಬುಕ್ ವ್ಯವಸ್ಥೆ, ಆನ್ಲೈನ್ ಕಾಟ್ ಲಾಗ್ , ಇ-ಲರ್ನಿಂಗ್ ಹಾಗೂ ವಿದ್ಯಾರ್ಥಿಗಳಿಗೆ ದೈನಂದಿನ ಬಳಕೆಗೆ ಸುಲಭವಾದ ವ್ಯವಸ್ಥೆಗಳನ್ನು ಹಾಗೂ ವಿದ್ಯಾರ್ಥಿಗಳಲ್ಲಿ ಓದಿನ ಮಹತ್ವವವನ್ನು ಅರ್ಥ ಮಾಡಿಸಲು ಕಾರ್ಯಗಾರ ಹೀಗೆ ಶಿಕ್ಷಣಕ್ಕೆ ಬೇಕಾದ ಸಾಕಷ್ಟು ಸಂಪನ್ಮೂಲಗಳನ್ನು ವಿದ್ಯಾರ್ಥಿ ಓದುಗರಿಗೆ ಒದಗಿಸುವ  ಕೆಲಸ ಮಾಡಿದ್ದಾರೆ. ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗದ ವತಿಯಿಂದ ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ನಡೆದ ಪ್ರೇರಣಾ ದಿವಸ್ -2025 ಕಾರ್ಯಕ್ರಮದಲ್ಲಿ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್  ಅವರು ಡಾ.ವಿಜಯಲತಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

Read More

ಮಡಿಕೇರಿ ಆ.4 NEWS DESK : ಮಡಿಕೇರಿ ಕೊಡವ ಸಮಾಜ, ಪೊಮ್ಮಕ್ಕಡ ಒಕ್ಕೂಟ, ಮಡಿಕೇರಿ ಕೊಡವ ಕೇರಿಗಳ ಸಹಯೋಗದಲ್ಲಿ ಕೊಡವ ಸಮಾಜದ ಸಭಾಂಗಣದಲ್ಲಿ ಕಕ್ಕಡ ನಮ್ಮೆಯ ಒತ್ತೋರ್ಮೆ ಕೂಟ ನಡೆಯಿತು. ಕೊಡಗಿನ ಎಲ್ಲೆಡೆ ಆ.3ರಂದು ಸಾಂಪ್ರದಾಯಿಕವಾಗಿ ಆಚರಿಸಲಾಗುವ ಕಕ್ಕಡ ಸಂಪ್ರದಾಯವನ್ನು ಪುರುಷರು, ಮಹಿಳೆಯರು‌ ಮಕ್ಕಳು ಸಂಭ್ರಮದಿಂದ ಆಚರಿಸಿದರು. ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ರೀಡೆಯನ್ನು  ಆಯೋಜಿಸಲಾಗಿತ್ತು. ಅತಿಥಿಗಳಿಂದ ಪೊಮ್ಮಡ ಕೂಟದ ಬ್ಯಾಡ್ಜ್ ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಕಕ್ಕಡ‌ ನಮ್ಮೆ ಒಂದು‌ ಸಂಭ್ರಮಾಚರಣೆಯಾಗಿದೆ. ಮಡಿಕೇರಿ‌ ಪೊಮ್ಮಕ್ಕಡ‌ ಕೂಟದ ಕಟ್ಟಡ ನಿರ್ಮಾಣಕ್ಕೆ 20 ಲಕ್ಕ ಅನುದಾನ ಹಾಗೂ ತಡೆಗೋಡೆ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು. ಹಿಂದೆ ಪ್ರಾಯೋಗಿಕ ಆರೋಗ್ಯಕರ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯಯುತರಾಗಿದ್ದರು. ಈಗಿನ ಆಹಾರ ಪದ್ದತಿ ಬದಲಾವಣೆಗೊಂಡಿದೆ ಆದ್ದರಿಂದ ಎಲ್ಲರು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರು. ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ‌ ಮಾತನಾಡಿ, ಕೊಡಗಿನ ಮೂಲ ಸಂಸ್ಕೃತಿಯಂತೆ ಮಳೆಗಾಲ‌ಪ್ರಾರಂಭವಾದೊಡನೆ ಗದ್ದೆಯಲ್ಲಿ ಉಳುಮೆ…

Read More

ಸುಂಟಿಕೊಪ್ಪ NEWS DESK ಜು.3 : ಭಾರೀ ಗಾಳಿ ಮಳೆಯಿಂದ ಮನೆಯ ಮೇಲೆ ಮರ ಬಿದ್ದು ನಷ್ಟವುಂಟಾಗಿದ್ದ ಕೆಂಚೆಟ್ಟಿ ನಿವಾಸಿ ಎನ್.ಆರ್.ನಂಜಪ್ಪ ಅವರ ನಿವಾಸಕ್ಕೆ ಶಾಸಕ ಡಾ.ಮಂತರ್‌ಗೌಡ ಅವರು ಭೇಟಿ ನೀಡಿ ಪರಿಶೀಲಿಸಿ ಧೈರ್ಯ ತುಂಬಿದರು. ಮರವೊAದು ಮನೆಯ ಮೇಲೆ ಬಿದ್ದ ಪರಿಣಾಮ ಮನೆಯ ಮೇಲ್ಚಾವಣಿ ಹಾಗೂ ಮನೆಯ ಗೋಡೆ ಸೇರಿದಂತೆ ಸಿಂಟೆಕ್ಸ್ ನೀರಿನ ಟ್ಯಾಂಕ್ ಹಾನಿಗೀಡಾಗಿತ್ತು. ನಷ್ಟದ ಕುರಿತು ಮಾಹಿತಿ ಪಡೆದ ಶಾಸಕರು ಪರಿಹಾರದ ಮೊತ್ತವನ್ನು ಆದಷ್ಟು ಶೀಘ್ರ ಒದಗಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಹಶೀಲ್ದಾರ್ ಕಿರಣ್ ಗೌರಯ್ಯ, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್, ಗ್ರಾ.ಪಂ ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯ ರಫೀಕ್‌ಖಾನ್, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮಂಜುನಾಥ್, ಉಪತಹಶೀಲ್ದಾರ್ ಪ್ರಶಾಂತ್, ಸುಂಟಿಕೊಪ್ಪ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ಉಷಾ ಮತ್ತಿತರರು ಹಾಜರಿದ್ದರು.

Read More