ಲೇಖಕ: admin

ಮಡಿಕೇರಿ ಜು.9 NEWS DESK : ಮಡಿಕೇರಿ-ನಾಪೋಕ್ಲು-ಯಡಪಾಲ-ಕೆದಮುಳ್ಳೂರು-ವಿರಾಜಪೇಟೆ ಮಾರ್ಗ ಮೈಸೂರಿಗೆ ಹಾಗೆಯೇ ಮೈಸೂರು-ವಿರಾಜಪೇಟೆ-ಕೆದಮುಳ್ಳೂರು-ಯಡಪಾಲ-ನಾಪೋಕ್ಲು-ಮಡಿಕೇರಿ ಮಾರ್ಗದ ಕೆಎಸ್‍ಆರ್‍ಟಿಸಿ ಬಸ್ ಸಂಚಾರಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ ನೀಡಿದರು. ನಾಪೋಕ್ಲುವಿನಲ್ಲಿ ಚಾಲನೆ ನೀಡಿ ಮಾತನಾಡಿದ ಶಾಸಕರು, ಬೆಳಗ್ಗೆ 7 ಗಂಟೆಗೆ ಮಡಿಕೇರಿಯಿಂದ ಹೊರಟು ನಾಪೋಕ್ಲು-ಯಡಪಾಲ-ಕೆದಮುಳ್ಳೂರು-ವಿರಾಜಪೇಟೆ ಮಾರ್ಗ ಮೈಸೂರಿಗೆ ತೆರಳಿ ಮತ್ತೆ ಅದೇ ಮಾರ್ಗದಲ್ಲಿ ಸಂಚರಿಸಲಿದೆ ಎಂದು ಹೇಳಿದರು. ಹಲವು ವರ್ಷಗಳಿಂದ ಇಲ್ಲಿನ ಸ್ಥಳೀಯರು ಕೆಎಸ್‍ಆರ್‍ಟಿಸಿ ಬಸ್ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದ್ದರು, ಈ ಹಿನ್ನೆಲೆ ಸಾರ್ವಜನಿಕರ ಬೇಡಿಕೆ ಈಡೇರಿದೆ ಎಂದು ಪೊನ್ನಣ್ಣ ತಿಳಿಸಿದರು. ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಕ ಅಮರಲಿಂಗಯ್ಯ, ವಿಭಾಗೀಯ ಸಂಚಲನಾಧಿಕಾರಿ ಜಯ ಶಾಂತಕುಮಾರ್, ಮಡಿಕೇರಿ ಕೆಎಸ್‍ಆರ್‍ಟಿಸಿ ಘಟಕದ ವ್ಯವಸ್ಥಾಪಕರಾದ ಎಂ.ಮೆಹಬೂಬ್ ಅಲಿ ಇತರರು ಇದ್ದರು. ಇದೇ ಸಂದರ್ಭ ಗ್ರಾ.ಪಂ.ವತಿಯಿಂದ ನಿರ್ಮಾಣ ಮಾಡಿರುವ ಬಸ್ ನಿಲ್ದಾಣವನ್ನು ಶಾಸಕ ಎ.ಎಸ್.ಪೊನ್ನಣ್ಣ ಅವರು ಉದ್ಘಾಟಿಸಿದರು. ನಾಪೋಕ್ಲು ಗ್ರಾ.ಪಂ.ಅಧ್ಯಕ್ಷರಾದ ವನಜಾಕ್ಷಿ, ಉಪಾಧ್ಯಕ್ಷರಾದ ಶಶಿ ಮಂದಣ್ಣ, ಪಿಡಿಒ ಚೋಂದಕ್ಕಿ, ಸದಸ್ಯರು ಇತರರು ಇದ್ದರು.

Read More

ಮಡಿಕೇರಿ ಜು.9 NEWS DESK : ನಾಪೋಕ್ಲುವಿನ ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ತಮ್ಮ 51ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದವರ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ನಂತರ ಮಾತನಾಡಿದ ಶಾಸಕರು, ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಂತಹ ಶಾಲೆಯಲ್ಲಿ ಓದಲು ಅವಕಾಶ ಸಿಕ್ಕಿರುವುದು ತಮಗೆ ಅದೃಷ್ಟವೇ ಸರಿ ಎಂದು ನುಡಿದರು. ಇಲ್ಲಿನ ಉತ್ತಮ ವಾತಾವರಣ, ಪರಿಸರ ಚೆನ್ನಾಗಿದ್ದು, ಲಭ್ಯವಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು. ಹೆಚ್ಚಿನ ವಿದ್ಯಾರ್ಥಿಗಳು ಇರುವ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಆಟದ ಮೈದಾನವನ್ನು ನಿರ್ಮಿಸಲಾಗುವುದು ಎಂದು ಇದೇ ಸಂದರ್ಭ ಭರವಸೆ ನೀಡಿದರು. ‘ವಿದ್ಯಾರ್ಥಿಗಳಲ್ಲಿ ಮುಂದಾಲೋಚನೆ ಹಾಗೂ ದೂರದೃಷ್ಟಿ ಇರಬೇಕು. ಪೋಷಕರ ಕನಸನ್ನು ನನಸು ಮಾಡಲು ಪ್ರಯತ್ನಿಸಬೇಕು. ಬದುಕು ಬದಲಾಯಿಸಲು ವಿಫುಲ ಅವಕಾಶಗಳಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು…

Read More

ಮಡಿಕೇರಿ ಜು.9 NEWS DESK : ವಿರಾಜಪೇಟೆ 66/33/11 ಕೆ.ವಿ ವಿದ್ಯುತ್ ವಿತರಣಾ ಉಪ ಕೇಂದ್ರದ ವಿರಾಜಪೇಟೆ ಶಾಖಾ ವ್ಯಾಪ್ತಿಯ ವಿಎಫ್-3 ಕೆಎಸ್‍ಆರ್‍ಟಿಸಿ ಮತ್ತು ವಿಎಫ್-7 ಹೆಗ್ಗಳ ಫೀಡರ್‍ಗಳಲ್ಲಿ ಜುಲೈ, 10 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಈ ಫೀಡರ್‍ಗಳ ಬೇರ್ಪಡಿಸುವ ಕಾರ್ಯ ಕೈಗೆತ್ತಿಕೊಂಡಿರುವುದರಿಂದ ಈ ಫೀಡರ್‍ನಿಂದ ಹೊರಹೊಮ್ಮುವ ವಿರಾಜಪೇಟೆ ಪಟ್ಟಣ, ಗೋಣಿಕೊಪ್ಪ ರಸ್ತೆ, ಪಂಜರಪೇಟೆ, ವಿದ್ಯಾನಗರ, ಕೆಎಸ್‍ಆರ್‍ಟಿಸಿ, ಶಾಂತಿನಗರ, ಸುಭಾಶ್‍ನಗರ, ಮೀನುಪೇಟೆ, ಹೆಗ್ಗಳ, ಬೇಟೋಳಿ, ಆರ್ಜಿ, ರಾಮನಗರ, ತೋರ, ಬೂದಿಮಾಳ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.

Read More

ಮಡಿಕೇರಿ ಜು.9 NEWS DESK : ಕರ್ನಾಟಕ ಕಿವುಡರ ಕ್ರೀಡಾ ಒಕ್ಕೂಟ ಹಾಗೂ ಧಾರವಾಡ ಜಿಲ್ಲಾ ಕಿವುಡರ ಸಂಘದ ಸಹಯೋಗದಲ್ಲಿ ನಡೆದ 20ನೇ ಕರ್ನಾಟಕ ರಾಜ್ಯ ಕಿವುಡರ ಚೆಸ್ ಚಾಂಪಿಯನ್‍ಶಿಪ್‍ನಲ್ಲಿ ಕೊಡಗಿನ ಪದಾಧಿಕಾರಿಗಳು ಭಾಗವಹಿಸಿದ್ದರು. ಹುಬ್ಬಳ್ಳಿಯ ಶಾಂತಿನಾಥ ಸಾಂಸ್ಕೃತಿಕ ಭವನದಲ್ಲಿ ಜು.3 ರಿಂದ 5ರ ವರೆಗೆ ನಡೆದ ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲಾ ಕಿವುಡರ ಸಂಘದ ಉಪಾಧ್ಯಕ್ಷ ಶಂಕರನಾರಾಯಣ ಹೆಬ್ಬಾರ್ ಹಾಗೂ ಕಾರ್ಯದರ್ಶಿ ರಂಜಿತ್ ಪಾಲ್ಗೊಂಡಿದ್ದರು.

Read More

ಮಡಿಕೇರಿ ಜು.9 NEWS DESK : ಯುವ ಕಾಂಗ್ರೆಸ್ ವತಿಯಿಂದ ವಿಕಾಸ್ ಜನ ಸೇವಾ ಟ್ರಸ್ಟ್ ವೃದ್ಧಾಶ್ರಮದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ 51ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.  ವಯೋವೃದ್ಧರ ಯೋಗ ಕ್ಷೇಮ ವಿಚಾರಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ನಂತರ ಹಿರಿಯರಿಗೆ ಸ್ವೇಟರ್ ಹಾಗೂ ಬ್ಲಾಂಕೆಟ್ ಗಳನ್ನು ವಿತರಿಸಿ ಊಟದ ವ್ಯವಸ್ಥೆಯನ್ನು ಮಾಡಲಾಯಿತು. ಕೊಡಗು ಯುವ ಕಾಂಗ್ರೆಸ್ ನ ಉಪಾಧ್ಯಕ್ಷ ಮೈಸಿ ಕತ್ತಾಣಿ, ರಾಹುಲ್ ಮಾರ್ಷಲ್, ಮಡಿಕೇರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಕವನ ಕೊತ್ತೊಳಿ, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ  ಪ್ರಕಾಶ್ ಆಚಾರ್ಯ, ಮೂಡ ಸದಸ್ಯರಾದ ಚಂದ್ರಶೇಖರ್ ಆರ್.ಪಿ, ಮಿನಾಜ್ ಪ್ರವೀಣ್, ಮಡಿಕೇರಿ ನಗರ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೌಸರ್, ಮಡಿಕೇರಿ ನಗರಸಭ ಸದಸ್ಯರಾದ ಜಗದೀಶ್ ಜಿ.ಸಿ, ಕಾರ್ಮಿಕ ಘಟಕ ಜಿಲ್ಲಾ ಅಧ್ಯಕ್ಷ ದಿನೇಶ್ ಕೆ.ಆರ್, ಎನ್.ಎಸ್.ಯು.ಐ ಮಡಿಕೇರಿ ಬ್ಲಾಕ್ ಅಧ್ಯಕ್ಷ ಶರಣ್, ಸೇವಾದಳದ ನಜೀರ್, ಹಬೀಬ್, ಶೋಯಬ್ ಸಿದ್ದಾಪುರ, ಮಿಥುನ್ ಸಿದ್ದಾಪುರ, ಜಕ್ರಿಯ,…

Read More

ಮಡಿಕೇರಿ ಜು.9 NEWS DESK : ಕೋಮು ದ್ವೇಷದ ಭಾವನೆಗಳು ಸಮಾಜದಲ್ಲಿ ದಳ್ಳುರಿಯಾಗಿ ಕಾಣಿಸಿಕೊಳ್ಳುತ್ತಿರುವ ಈ ದಿನಗಳಲ್ಲಿ, ಶಾಂತಿ ಸಹಬಾಳ್ವೆಯನ್ನು ಸಾರಿದ ಸಾಮ್ರಾಟ ಅಶೋಕ ಪ್ರಸ್ತುತ ಎನಿಸಿಕೊಳ್ಳುತ್ತಾನೆ. ಆತನ ಸಂದೇಶಗಳನ್ನು ಜನಮಾನಸಕ್ಕೆ ತಲುಪಿಸುವ ಪ್ರಯತ್ನವಾಗಿ ಜು.13 ರಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಬೆಂಗಳೂರಿನಲ್ಲಿ ‘ಮಹಾನಾಯಕ ಸಾಮ್ರಾಟ್ ಅಶೋಕ’ ನಾಟಕ ಪ್ರದರ್ಶನ ನಡೆಯಲಿದೆ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ರಾಜಶೇಖರ್ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗಪುರ ಬುದ್ಧಿಸ್ಟ್ ಅಕಾಡೆಮಿ ಆಫ್ ಪರ್ಫಾಮಿಂಗ್ ಆರ್ಟ್‍ನಿಂದ ಅಂದು ಮಧ್ಯಾಹ್ನ 3 ಗಂಟೆಯಿಂದ 6 ಗಂಟೆಯವರೆಗೆ ಬೆಂಗಳೂರಿನ ವಸಂತ ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕದ ಪರಿಕಲ್ಪನೆ ಮತ್ತು ನಿರ್ದೇಶನ ನಾಗಪುರದ ಅಶೋಕ ಜಾಂಬುಲ್ಕರ್ ಹಾಗೂ ನಿರ್ಮಾಣ ನಾಗಪುರದ ಎ.ವಂದನಾ ಜಾಂಬುಲ್ಕರ್ ಅವರದೆಂದು ಮಾಹಿತಿ ನೀಡಿದರು. ‘ಕಳಿಂಗ ಯುದ್ಧ’ದ ಗೆಲುವಿನ ನಂತರ, ಯುದ್ಧದಿಂದ ಉಂಟಾದ ಸಾವು ನೋವುಗಳಿಂದ ಜರ್ಝರಿತನಾದ ಸಾಮ್ರಾಟ್ ಅಶೋಕ ಶಸ್ತ್ರ ತ್ಯಾಗ ಮಾಡಿ ಶಾಂತಿ ಸಹಬಾಳ್ವೆಯನ್ನು…

Read More

ಮಡಿಕೇರಿ ಜು.9 NEWS DESK : ನಗರದ ಶ್ರೀ ಚೌಡೇಶ್ವರಿ ದಸರಾ ಮಂಟಪ ಸಮಿತಿಯ ಅಧ್ಯಕ್ಷರಾಗಿ ಜಗದೀಶ್ (ಸೋಮಣ್ಣ) ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಡಿ.ಎಂ.ಮದನ್, ಕಾರ್ಯದರ್ಶಿಯಾಗಿ ಚಿನ್ಮಯ್ ಕಿಗ್ಗಾ, ಸಹ ಕಾರ್ಯದರ್ಶಿಯಾಗಿ ಶರತ್, ಖಜಾಂಚಿಯಾಗಿ ಕುಮಾರ್, ಉಪ ಖಜಾಂಚಿಯಾಗಿ ಅಂಕುಶ್, ಅನಿಲ್ ಕೆಂಚೆಟ್ಟಿ ನೇಮಕಗೊಂಡಿದ್ದಾರೆ.

Read More

ಮಡಿಕೇರಿ ಜು.9 NEWS DESK : ಮೈಸೂರು-ಕುಶಾಲನಗರ ಎಕ್ಸ್‌ಪ್ರೆಸ್‌ವೇ ಕಾಮಗಾರಿಯ ಶೀಘ್ರದಲ್ಲಿ ಆರಂಭವಾಗಲಿದೆ ಎಂದು ಕೊಡಗು-ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇಲ್ಲಿನ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕುಶಾಲನಗರ ರೈಲು ಸಂಪರ್ಕ ಯೋಜನೆಗೆ ಹಣ ಇಲ್ಲ ಎಂದು ರಾಜ್ಯಸರ್ಕಾರ ಭೂಸ್ವಾಧೀನ ನಡೆಸಿಲ್ಲ. ಕೊಡಗಿನ ರಸ್ತೆಗಳ ಅಭಿವೃದ್ಧಿಗಾಗಿ ಕೇಂದ್ರದ ಗ್ರಾಮ ಸಡಕ್ ಯೋಜನೆಯಡಿ ರಾಜ್ಯಸರ್ಕಾರವೇ ಪ್ರಸ್ತಾವ ಕಳಿಸಬೇಕಿದೆ. ಮೈಸೂರು-ಕುಶಾಲನಗರ ಎಕ್ಸ್ಪ್ರೆಸ್‌ವೇ ಕಾಮಗಾರಿಯ ನಾಲ್ಕು ಪ್ಯಾಕೇಜ್ ಪೈಕಿ ೩ರಲ್ಲಿ ಕೆಲಸ ಶುರುವಾಗಿದೆ. 1 ಪ್ಯಾಕೇಜ್‌ಗೆ ಪರಿಸರಕ್ಕೆ ಸಂಬಂಧಿಸಿದಂತೆ ಕ್ಲಿಯರೆನ್ಸ್ ಬೇಕಾಗಿದೆ. ಅದು ಬಂದ ಕೂಡಲೇ ಅಲ್ಲಿಯೂ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿರುವ ೨೪ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇರುವುದು ಕೇವಲ ಒಂದೇ ಕ್ಷೇತ್ರದಲ್ಲಿ ಮಾತ್ರ. ವರ್ಷದ ಒಂದು ದಿನ ಮಾತ್ರ ರಾಜಕಾರಣ ಮಾಡಿ, ಉಳಿದೆಲ್ಲ ದಿನಗಳಲ್ಲೂ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ಇದಕ್ಕೆ…

Read More

ಮಡಿಕೇರಿ NEWS DESK  ಜು.9 : ಕೊಡಗು ಜಿಲ್ಲೆಯ ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಕರ್ನಾಟಕ ಭೂಕಂದಾಯ ಕಾಯ್ದೆಯನ್ನು ಉಲ್ಲಂಘಿಸಿ ಅಕ್ರಮವಾಗಿ ನಿರ್ಮಿಸಿರುವ ರೆಸಾರ್ಟ್‌ ಗಳನ್ನು ತಕ್ಷಣ ನೆಲಸಮಗೊಳಿಸಬೇಕೆಂದು ಎನ್ವಿರಾನ್ಮೆಂಟ್ ಐಂಡ್ ಹೆಲ್ತ್ ಫೌಂಡೇಶನ್ ಸಂಸ್ಥೆ ಹಾಗೂ ಸೋಮವಾರಪೇಟೆ ತಾಲ್ಲೂಕಿನ ಕಿರಗಂದೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎನ್ವಿರಾನ್ಮೆಂಟ್ ಐಂಡ್ ಹೆಲ್ತ್ ಫೌಂಡೇಶನ್ ನ ಅಧ್ಯಕ್ಷ ಕರ್ನಲ್ ಚೆಪ್ಪುಡಿರ ಪಿ.ಮುತ್ತಣ್ಣ ಅವರು ಜಿಲ್ಲೆಯ ವಿವಿಧೆಡೆ ಅಕ್ರಮ ರೆಸಾರ್ಟ್‌ ಗಳು ತಲೆ ಎತ್ತಿದ್ದು, ಭೂಕುಸಿತ ಪ್ರದೇಶಗಳಲ್ಲಿ ಅಪಾಯವನ್ನು ಎದುರಿಸುತ್ತಿವೆ. ಒಂದು ವೇಳೆ ಭೂಕುಸಿತ ಉಂಟಾಗಿ ರೆಸಾರ್ಟ್ಗಳು ಹಾನಿಗೀಡಾದರೆ ಇವುಗಳಲ್ಲಿ ತಂಗಿರುವ ಪ್ರವಾಸಿಗರು ಹಾಗೂ ಉದ್ಯೋಗಿಗಳು ಸಾವಿಗೀಡಾಗುವ ಸಾಧ್ಯತೆಗಳಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಅನ್ವಯ ಕೊಡಗಿನಲ್ಲಿ ತೋಟ, ಜಮ್ಮಾ, ಬಾಣೆ ಮತ್ತು ಜೌಗು ಭೂಮಿಯನ್ನು ವಾಣಿಜ್ಯ ಉದ್ದೇಶಗಳಿಗಾಗಿ ಪರಿವರ್ತಿಸುವುದನ್ನು ನಿಷೇಧಿಸಲಾಗಿದೆ. ಅಲ್ಲದೆ 2018ರಲ್ಲಿ ಕೊಡಗಿನ ಬೆಟ್ಟ ಪ್ರದೇಶಗಳಲ್ಲಿ ಸಂಭವಿಸಿದ ಭೀಕರ ಭೂಕುಸಿತಗಳ ನಂತರ, ಕರ್ನಾಟಕ ಸರ್ಕಾರವು 2020 ಜೂನ್…

Read More

ಮಡಿಕೇರಿ ಜು.9 NEWS DESK : ಮಡಿಕೇರಿ ತಾಲ್ಲೂಕಿನ ಕೆ.ನಿಡುಗಣೆ ಗ್ರಾಮದ ಗ್ರಾಮ ಅಬ್ಬಿ ಜಲಪಾತ ರಸ್ತೆಯಲ್ಲಿರುವ ಕೊಡಗು ಜಿಲ್ಲಾ ಮಟ್ಟದ ಗೋಶಾಲೆಗೆ ಶಾಸಕ ಡಾ.ಮಂತರ್ ಗೌಡ ಭೇಟಿ  ಪರಿಶೀಲನೆ ನಡೆಸಿದರು. 8 ಎಕ್ರೆ ಜಾಗದ ಸುತ್ತ ಚೈನ್ ಲಿಂಕ್ ಮೆಶ್ ಅಳವಡಿಸುವುದು ಮತ್ತು ನೂತನ ಶೆಡ್ ನಿರ್ಮಾಣಕ್ಕೆ ಸೂಕ್ತ ಅನುದಾನ ಒದಗಿಸಲುಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರಿಗೆ ದೂರವಣಿ ಕರೆ ಮಾಡಿ ಮನವಿ ಸಲ್ಲಿಸಿದರು.

Read More