ಮಡಿಕೇರಿ ಜೂ.30 NEWS DESK : ನಗರದ ಹೊಸ ಬಡಾವಣೆಯಲ್ಲಿ ಶಾಸಕರ ಅನುದಾನ ರೂ.50 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿದರು. ನಂತರ ಹೊಸ ಬಡಾವಣೆಯ ನವ ಗ್ರಾಮದ ಅಧ್ಯಕ್ಷ ರವಿ ಹಾಗೂ ಉಪಾಧ್ಯಕ್ಷ ಸ್ಟೀವನ್ ಡಿಸೋಜ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಸಂಘದ ಪದಾಧಿಕಾರಿಗಳಾದ ಉಮೇಶ್, ಸುಮಿತ್ರ, ಅಮ್ಮಿ, ಗುರುವಣ ಹಾಗೂ ಬಡಾವಣೆಯ ಎಲ್ಲಾ ಸದಸ್ಯರು ಹಾಜರಿದ್ದು, ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.
ಲೇಖಕ: admin
ಮಡಿಕೇರಿ ಜೂ.30 NEWS DESK : ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 4.72 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 12.05 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1408.49 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 787.55 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 5.98 ಮಿ.ಮೀ. ಕಳೆದ ವರ್ಷ ಇದೇ ದಿನ 20.45 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2021.51 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1160.68 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 1.20 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 15.20 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1410.55 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 782.60 ಮಿ.ಮೀ. ಮಳೆಯಾಗಿತ್ತು. ಪೊನ್ನಂಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 7.41 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ…
ನಾಪೋಕ್ಲು ಜೂ.30 NEWS DESK : ಕಿರುಂದಾಡು ಗ್ರಾಮದ ತೋಟಗಳಲ್ಲಿ ಕಾಡಾನೆಗಳು ದಾಳಿ ಮಾಡಿ ಬೆಳೆ ನಾಶಪಡಿಸಿದೆ. ಗ್ರಾಮದಲ್ಲಿ ಕಾಡಾನೆಗಳ ಹಿಂಡು ತೋಟಗಳಲ್ಲಿ ದಾಂಧಲೆ ನಡೆಸಿದ್ದು, ಬೆಳೆಗಾರರು ತೋಟದಲ್ಲಿದ್ದ ತೆಂಗು, ಅಡಿಕೆ, ಕಾಫಿ, ಬಾಲೆ ಗಿಡಗಳನ್ನು ನಾಶಪಡಿಸಿ ನಷ್ಟ ಉಂಟು ಮಾಡಿದೆ. ಪಾರಾಣೆ ಗ್ರಾಮ ಪಂಚಾಯಿತಿಯ ಕಿರುಂದಾಡು ಗ್ರಾಮದ ಕಲಿಯಂಡ ಪೂವಣ್ಣ ಅವರ ತೋಟಗಳಲ್ಲಿ ದಾಳಿ ನಡೆಸಿರುವ ಕಾಡಾನೆಗಳ ಹಿಂಡು 3 ತೆಂಗು, 60 ಅಡಿಕೆ ಗಿಡ, ಕಾಫಿ, ಬಾಲೆ ಸೇರಿದಂತೆ ಅಪಾರ ಕೃಷಿ ಗಿಡಗಳನ್ನು ಧ್ವಂಸಗೊಳಿಸಿ ಫಸಲುಗಳಿಗೆ ಹಾನಿ ಉಂಟು ಮಾಡಿದೆ. ಕಿರುಂದಾಡು, ಕೈಕಾಡು ಗ್ರಾಮದ ಕೆ.ಡಿ.ಮೋಹನ್, ಹಂಸ, ಅಬ್ದುಲ್ಲಾ ಸೇರಿದಂತೆ ಇನ್ನಿತರ ತೋಟದಲ್ಲೂ ಕೃಷಿ ಗಿಡಗಳನ್ನು ಕಾಡಾನೆಗಳು ನಾಶಪಡಿಸಿದ್ದು, ಸಬಂಧಸಿದ ಇಲಾಖೆ ಹಾಗೂ ಸರ್ಕಾರ ನಷ್ಟಕ್ಕೆ ಒಳಗಾದ ರೈತರಿಗೆ ಸೂಕ್ತ ನಷ್ಟ ಪರಿಹಾರವನ್ನು ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮಡಿಕೇರಿ ಜೂ.30 NEWS DESK : ಜಾರ್ಖಂಡ್‍ನ ರಾಂಚಿಯಲ್ಲಿ ಜುಲೈ 3 ರಿಂದ 14ರ ತನಕ ಹಾಕಿ ಇಂಡಿಯಾ ವತಿಯಿಂದ ಜರುಗುತ್ತಿರುವ 15ನೇ ಹಾಕಿ ಇಂಡಿಯಾ ಸಬ್ ಜೂನಿಯರ್ ಮಹಿಳಾ ಹಾಕಿ ಪಂದ್ಯಾವಳಿ 2025ರಲ್ಲಿ ಹಾಕಿ ಕರ್ನಾಟಕ ತಂಡವನ್ನು ಕೊಡಗಿನ 11 ಮಂದಿ ಪ್ರತಿನಿಧಿಸುತ್ತಿದ್ದಾರೆ. ರಾಜ್ಯ ತಂಡವನ್ನು ಹಾಕಿ ಕರ್ನಾಟಕ ಪ್ರಕಟಿಸಿದ್ದು, ಒಟ್ಟು 20 ಮಂದಿಯ ತಂಡದಲ್ಲಿ 10 ಆಟಗಾರ್ತಿಯರು ಹಾಗೂ ತಂಡದ ವ್ಯವಸ್ಥಾಪಕರು ಕೊಡಗಿನವರಾಗಿರುವುದು ಜಿಲ್ಲೆಗೆ ಹೆಮ್ಮೆಯಾಗಿದೆ. ತಂಡದ ನಾಯಕಿಯಾಗಿ ಅಚ್ಚಪಂಡ ಪರ್ಲಿನ್ ಪೊನ್ನಮ್ಮ ತಂಡವನ್ನು ಮುನ್ನಡೆಸಲಿದ್ದಾರೆ. ಆಟಗಾರ್ತಿಯರಾಗಿ ಚೆಯ್ಯಂಡ ತ್ವಿಷಾ ದೇಚಮ್ಮ, ಬಾರಿಯಂಡ ಬೊಳ್ಳಮ್ಮ, ಚೇರಂಡ ನೀಲಮ್ಮ, ಕೀತಿಯಂಡ ಪೂರ್ವಿ ಪೂವಮ್ಮ, ಮಚ್ಚಾಮಾಡ ವಿದ್ಯಾ ಪೊನ್ನಮ್ಮ, ಪೊರ್ಕೋಂಡ ಗೀಷ್ಮ ಪೊನ್ನಮ್ಮ, ಚೌರೀರ ಧನ್ಯ ಕಾವೇಮ್ಮ, ಎಂ.ಎಲ್.ಕೃತಿಕಾ, ಹೆಚ್.ಎನ್.ಜೀವಿತಾ ಸ್ಥಾನ ಪಡೆದಿದ್ದಾರೆ. ತಂಡದ ವ್ಯವಸ್ಥಾಪಕರಾಗಿ ಕಂಬೀರಂಡ ರಾಖಿ ಪೂವಣ್ಣ ಕಾರ್ಯನಿರ್ವಹಿಸಲಿದ್ದಾರೆ.
ನಾಪೋಕ್ಲು ಜೂ.30 NEWS DESK : ಎಮ್ಮೆಮಾಡು ಗ್ರಾಮ ಪಂಚಾಯಿತಿಯ ಸುಧಾರಿತ ಆಡಳಿತ ಮತ್ತು ಅಂಗನವಾಡಿ ಪೋಷಣ ಅಭಿಯಾನದಲ್ಲಿ ಉತ್ತಮ ಪ್ರಗತಿಯನ್ನು ಗುರುತಿಸಿ ಅಸ್ಸಾಂ ರಾಜ್ಯದಿಂದ ಪ್ರತಿನಿದಿಗಳು ಕೊಡಗು ಜಿಲ್ಲೆಯ ಎಮ್ಮೆಮಾಡು ಗ್ರಾಮ ಪಂಚಾಂಯಿತಿಗೆ ಭೇಟಿ ನೀಡಿದರು. ಅಸ್ಸಾಂ ರಾಜ್ಯ ಸರಕಾರದ ಪ್ರತಿನಿದಿಗಳಾಗಿ ಸಬೀತಾ ರಾಥೋಡ್, ಮಲ್ಲಿಕಾ, ಪದ್ಮಜಾ (ಸಿ.ಡಿ.ಪಿ.ಓ) ಎಮ್ಮೆಮಾಡು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಗ್ರಾಮ ಪಂಚಾಯಿತಿಯ ಆಡಳಿತ ಸುಧಾರಣೆ ಮತ್ತು ಬಾಪೂಜಿ ಸೇವಾ ಕೇಂದ್ರದಿಂದ ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳ ವಿವರ ಮತ್ತು ಗ್ರಾಮ ಪಂಚಾಯಿತಿಯ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪೋಷಣ ಅಭಿಯಾನದ ಸಂಬಂಧಪಟ್ಟವರಿಂದ ಸಮಗ್ರ ಮಾಹಿತಿಯನ್ನು ಪಡೆದುಕೊಂಡರು. ಇದಕ್ಕೂ ಮೊದಲು ಅಸ್ಸಾಂ ರಾಜ್ಯದಿಂದ ಪ್ರತಿನಿದಿಗಳನ್ನು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಸದಸ್ಯ ರುಗಳು ಹಾಗೂ ಸಿಬ್ಬಂದಿ ವರ್ಗ ಆತ್ಮೀಯವಾಗಿ ಹೂಗೂಚ್ಚ ನೀಡಿ ಬರ ಮಾಡಿಕೊಳ್ಳಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಐಸಮ್ಮ, ನ್ಯಾಯ ಸಮಿತಿ ಅಧ್ಯಕ್ಷ ಗಫೂರ್, ಸದಸ್ಯರಾದ ಚೆಕ್ಕೇರ ಇಸ್ಮಾಯಿಲ್, ಟಿ.ಕೆ.ಯೂಸುಫ್, ಮಾಹಿನ್…
ವಿರಾಜಪೇಟೆ ಜೂ.30 NEWS DESK : ವಿರಾಜಪೇಟೆ ವಿವೇಕ ಜಾಗೃತ ಬಳಗ ಹಾಗೂ ಸರ್ವೋದಯ ಶಿಕ್ಷಣ ಮಹಾವಿದ್ಯಾಲಯದ ಜಂಟಿ ಆಶ್ರಯದಲ್ಲಿ ಜು.2 ರಂದು ಸಾರ್ವಜನಿಕರಿಗಾಗಿ ರಕ್ತದಾನ ಶಿಬಿರ ನಡೆಯಲಿದೆ. ಪಂಜರಪೇಟೆ ಸರ್ವೋದಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷರಾದ ರಾಜಶೇಖರ್ ತಿಳಿಸಿದ್ದಾರೆ.
ಮಡಿಕೇರಿ NEWS DESK ಜೂ.30 : ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರು ವಿರಾಜಪೇಟೆ ಕ್ಷೇತ್ರ ಸಂಚಾರ ಮಾಡಿ ವಿವಿಧ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲಿಸಿದರು. ವಿರಾಜಪೇಟೆ ತಾಲ್ಲೂಕು ವಿ.ಬಾಡಗದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಹಾಕಿ ಕ್ರೀಡಾ ತರಬೇತಿ ಕೇಂದ್ರದ ಯೋಜನೆಗಾಗಿ ಲಭ್ಯ ಇರುವ ಸ್ಥಳ ಪರಿಶೀಲನೆ ನಡೆಸಿದರು. ಸುಮಾರು 11 ಏಕರೆಯಷ್ಟು ಸರಕಾರಿ ಜಾಗವನ್ನು ತಕ್ಷಣ ಪರಿಗಣಿಸಿ ಒಂದು ವಾರದೊಳಗೆ ಸರ್ವೆ ನಕ್ಷೆ ನೀಡುವಂತೆ ಸರ್ವೆ ಇಲಾಖೆಗೆ ಸೂಚನೆ ನೀಡಿದರು. ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಸರಬರಾಜು ಕಾರ್ಯಕ್ರಮದ ಭಾಗವಾಗಿ ಪೊನ್ನಂಪೇಟೆ ತಾಲ್ಲೂಕಿನ ಹರಿಹರ, ಬೆಳ್ಳೂರು ಹಾಗೂ ಹುದಿಕೇರಿ ಭಾಗದಲ್ಲಿ ಮೂರು 25 ಕೆವಿ ವಿದ್ಯುತ್ ಪರಿವರ್ತಕಗಳನ್ನು ಶಾಸಕರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ತಾನು ಈ ಹಿಂದೆ ಚುನಾವಣೆಗೆ ಮೊದಲು ಆಶ್ವಾಸನೆ ನೀಡಿದಂತೆ ಕ್ಷೇತ್ರದಾದ್ಯಂತ ಗುಣಮಟ್ಟದ ಹಾಗೂ ನಿರಂತರ ವಿದ್ಯುತ್ ಸರಬರಾಜಿಗೆ ಹೆಚ್ಚುವರಿ ಅನುದಾನ ತಂದು ಈ ಯೋಜನೆ ರೂಪಿಸಿರುವುದಾಗಿ ಹೇಳಿದರು. ಈ ಮಹತ್ವಾಕಾಂಕ್ಷೆಯ…
ಕುಶಾಲನಗರ ಜೂ.30 NEWS DESK : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲಾ ಘಟಕ ಹಾಗೂ ಚಿಕ್ಕ ಅಳುವಾರದ ಕೊಡಗು ವಿವಿ ವತಿಯಿಂದ ಜು.3 ರಂದು ವಚನ ಸಾಹಿತ್ಯ ಪಿತಾಮಹ ಫ.ಗು.ಹಳಕಟ್ಟಿ ಅವರ ಜನ್ಮದಿನಾಚರಣೆ ಅಂಗವಾಗಿ ” ಶರಣ ಸ್ಮರಣೆ ” ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಪೀಠಾಧ್ಯಕ್ಷ ಸದಾಶಿವ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ನಿವೃತ್ತ ಜಿಲ್ಲಾಧಿಕಾರಿ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಡಾ.ಸಿ.ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕೊಡಗು ವಿವಿ ಕುಲಪತಿ ಡಾ.ಅಶೋಕ್ ಸಂಗಪ್ಪ ಆಲೂರ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಹಾಸನ ವಿಶ್ವ ವಿದ್ಯಾಲಯದ ಕುಲಪತಿ ಡಾ.ತಾರನಾಥ್ ಆಗಮಿಸಲಿದ್ದಾರೆ. ಶಸಾಪ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಗಾಂಜಿ, ಕೊಡಗು ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್.ವಿ.ಶಿವಪ್ಪ, ಹುಣಸೂರು ಜ್ಞಾನಧಾರಾ ಪದವಿ ಕಾಲೇಜು ಅಧ್ಯಕ್ಷ ಡಾ.ಜೆ.ಸಿ.ನಾಗೇಂದ್ರ, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ…
ಮಡಿಕೇರಿ ಜೂ.30 NEWS DESK : ಮೈಸೂರು ಕೊಡವ ಸಮಾಜದ ಯುವ ಘಟಕದ ವತಿಯಿಂದ ಆಯೋಜನೆಗೊಂಡ ಕೊಡವ ಹಾಕಿ ಪ್ರೀಮಿಯರ್ ಲೀಗ್ 2025 ಪಂದ್ಯಾವಳಿಯ ಫೈನಲ್ ಪಂದ್ಯಾಟವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಹಾಕಿಯಲ್ಲಿ ಕೊಡಗಿನ ಪ್ರತಿಭೆಗಳು ಅದರಲ್ಲೂ ವಿಶೇಷವಾಗಿ ಕೊಡವರು ಉತ್ತಮ ಪ್ರದರ್ಶನ ತೋರಿ ರಾಷ್ಟ್ರವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ವಿಷಯ. ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ ಹಲವು ಉನ್ನತ ಹಾಕಿ ಪಟುಗಳು ದೇಶವನ್ನು ಪ್ರತಿನಿಧಿಸುವಂಥಾಗಲಿ ಎಂದು ಶುಭ ಕೋರಿದರು. ಪಂದ್ಯಾವಳಿಯನ್ನು ಆಯೋಜಿಸಿದ ಯುವ ಘಟಕದ ಪ್ರಯತ್ನವನ್ನು ಶ್ಲಾಘಿಸಿದ ಶಾಸಕರು, ಇಂತಹ ಪಂದ್ಯಾವಳಿಗಳು ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವಂತಾಗಿದೆ ಎಂದರು. ಕಾರ್ಯಕ್ರಮ ಆಯೋಜಕರು, ಕ್ರೀಡಾ ಪ್ರೇಮಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಮಡಿಕೇರಿ ಜೂ.29 NEWS DESK : ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಪತ್ರಿಕಾ ಭವನದಲ್ಲಿ ನಡೆಯಿತು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಲಾಗುವ ಪಂದ್ಯಂಡ ಬೆಳ್ಯಪ್ಪ ಸ್ಮರಣಾರ್ಥ ಅತ್ಯುತ್ತಮ ಗ್ರಾಮೀಣ ವರದಿಯ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ”ಒಂದೇ ಊರು ಮೂರು ಚೆಕ್ ಡ್ಯಾಂ” ವರದಿಗೆ ಅಣ್ಣೀರ ಹರೀಶ್ ಮಾದಪ್ಪ ಪಡೆದುಕೊಂಡಿದ್ದಾರೆ. ಸಂಘದ ಮಾಜಿ ಅಧ್ಯಕ್ಷರಾದ ಕೆ.ಕೆ.ಶಶಿಧರ್ ಸ್ಮರಣಾರ್ಥ ಕ್ರೀಡಾ ವರದಿ ಪ್ರಶಸ್ತಿಯನ್ನು ವಾರ್ತಾಭಾರತಿ ಪತ್ರಿಕೆಯಲ್ಲಿ ಪ್ರಕಟವಾದ” ಕೊಡಗಿನ ಕ್ರೀಡಾಕಲಿಗಳಿಗೆ ಕಾಡುತ್ತಿರುವ ದೈಹಿಕ ಶಕ್ತಿ ಕೊರತೆ” ವರದಿಗೆ ಇಸ್ಮಾಯಿಲ್ ಕಂಡಕೆರೆ ಪಡೆದುಕೊಂಡಿದ್ದಾರೆ. ಸಂಘದ ಮಾಜಿ ಉಪಾಧ್ಯಕ್ಷರಾದ ಸಿ.ಎನ್.ಸುನಿಲ್ ಕುಮಾರ್ ಸ್ಮರಣಾರ್ಥ ಅತ್ಯುತ್ತಮ ವೀಡಿಯೋಗ್ರಫಿ ಪ್ರಶಸ್ತಿಯನ್ನು ಇಬ್ಬರು ಪಡೆದುಕೊಂಡಿದ್ದಾರೆ. ವಿಸ್ತಾರ ಚಾನಲ್ ನಲ್ಲಿ ಪ್ರಸಾರವಾಗಿರುವ” ಹಸಿರ ಮನಸಿರಿಗೆ ಚಂದದ ಹೊದಿಕೆ” ಸುದ್ದಿಯ ವೀಡಿಯೋಗ್ರಫಿಗೆ ಮನೋಜ್ ಆರ್.ಆರ್. ಪಡೆದುಕೊಂಡಿದ್ದಾರೆ. ಚಿತ್ತಾರ ವಾಹಿನಿಯಲ್ಲಿ ಪ್ರಸಾರವಾದ ದಟ್ಟ ಅರಣ್ಯದೊಳಗೆ ಜಲಲ ಜಲಲ ಜಲಧಾರೆ ವರದಿಯ ವೀಡಿಯೋಗ್ರಫಿಗೆ…






