ಲೇಖಕ: admin

ಮಡಿಕೇರಿ ಮೇ 2 NEWS DESK : ‘ಬೇಕಲ ರಾಮ ನಾಯಕರದ್ದು, ಸಾಹಿತ್ಯ ಸರಸ್ವತಿಯ ಮನಸ್ಸು. ಅವರ ನಿಸ್ವಾರ್ಥ ಸಾಹಿತ್ಯ ಸೇವೆಯು ಸಾರ್ವಕಾಲಿಕ ಆದರ್ಶ, ಸರ್ವರೂ ಒಂದಾಗಿ, ಸಹಬಾಳ್ವೆ ನಡೆಸಬೇಕೆಂಬ ಅರ್ಪಣಾ ಮನೋಭಾವ ಅವರ ಕೃತಿಗಳಲ್ಲಿವೆ. ಈ ಎಲ್ಲಾ ಕೃತಿಗಳೂ ಕೂಡಾ ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ವರದಾನ’ ಎಂದು ಸಾಹಿತಿ ಚಂದ್ರಹಾಸ ಎಂ.ಬಿ.ಚಿತ್ತಾರಿ ಹೇಳಿದರು. ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದ ಬಯಲು ರಂಗ ಮಂದಿರದಲ್ಲಿ ಡಾ.ವಾಮನ್ ಬೇಕಲ್ ಸ್ಥಾಪಕ ಸಂಚಾಲಕತ್ವದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡಿನ ಜಿಲ್ಲಾ ಘಟಕದ ನೇತೃತ್ವದಲ್ಲಿ ಕೊಡಗು ಜಿಲ್ಲಾ ಕನ್ನಡ ಭವನ, ಕೊಡಗು ಜಿಲ್ಲಾ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಕಾಸರಗೋಡಿನ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ನಡೆದ ಅಗ್ರಗಣ್ಯ ಸಾಹಿತಿ, ಇತಿಹಾಸ ಶಿಕ್ಷಕ ಮತ್ತು ಸಂಶೋಧಕರಾದ ಬೇಕಲ ರಾಮ ನಾಯಕರ ಬದುಕು – ಬರಹದ ಕುರಿತ ಸ್ಮರಣಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಮಾಜಿಕ…

Read More

ಮಡಿಕೇರಿ NEWS DESK ಮೇ 1 : ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡೆತ್ ನೋಟ್ ನಲ್ಲಿ ಉಲ್ಲೇಖಿಸಿರುವ ಕಾಂಗ್ರೆಸ್ ಪ್ರಮುಖನನ್ನು ತಕ್ಷಣ ಪೊಲೀಸರು ಬಂಧಿಸಬೇಕೆಂದು ವಿರಾಜಪೇಟೆ ಮಂಡಲ ಬಿಜೆಪಿಯ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗದಿದ್ದಲ್ಲಿ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಕರ್ನಾಟಕ ರಾಜ್ಯ ಪೊಲೀಸರು ದಕ್ಷತೆಗೆ ಹೆಸರುವಾಸಿಯಾಗಿದ್ದು, ದೇಶದಲ್ಲಿಯೇ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದಾರೆ. ಯಾವುದೇ ಕ್ಲಿಷ್ಟಕರ ಪ್ರಕರಣಗಳನ್ನು ಬೇಧಿಸಿ ಸೈ ಎನಿಸಿಕೊಂಡಿದ್ದಾರೆ. ಆದರೆ ವಿನಯ್ ಆತ್ಮಹತ್ಯೆ ಮಾಡಿಕೊಂಡು ತಿಂಗಳಾದರೂ ಡೆತ್ ನೋಟ್ ನಲ್ಲಿ ಉಲ್ಲೇಖಿಸಿರುವ ವ್ಯಕ್ತಿಯ ಬಂಧನವಾಗಿಲ್ಲ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರುವ ವ್ಯಕ್ತಿ ಪೊಲೀಸರ ಕಣ್ಣಿಗೆ ಯಾಕೆ ಬೀಳುತ್ತಿಲ್ಲವೆಂದು ಪ್ರಶ್ನಿಸಿದ್ದಾರೆ. ವಿನಯ್ ಪ್ರಕರಣದಲ್ಲಿ ಪೊಲೀಸರ ಮೇಲೆ ಒತ್ತಡ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ರಾಜಕೀಯ ಪ್ರಭಾವವಿಲ್ಲದೆ ಪೊಲೀಸರು ಸ್ವತಂತ್ರವಾಗಿ ಕಾರ್ಯನಿರ್ವಹಿಸಿದ್ದರೆ ಇಷ್ಟೊತ್ತಿಗಾಗಲೇ ಬಂಧನವಾಗುತ್ತಿತ್ತು. ಪೊಲೀಸರು ಅಸಹಾಯಕ ಸ್ಥಿತಿಯಲ್ಲಿರುವುದು ಸ್ಪಷ್ಟವಾಗುತ್ತಿದ್ದು, ಅನುಮತಿ ನೀಡಿದರೆ ಸಾರ್ವಜನಿಕರೇ ವ್ಯಕ್ತಿಯನ್ನು ಪತ್ತೆ…

Read More

ಮಡಿಕೇರಿ ಮೇ 1 NEWS DESK :  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ಶ್ರೀ ಆದಿ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮವು ಮೇ 2 ರಂದು ಬೆಳಗ್ಗೆ 11 ಗಂಟೆಗೆ ನಗರದ ಗಾಂಧಿ ಭವನದಲ್ಲಿ ನಡೆಯಲಿದೆ. ಗಣ್ಯರು ಪಾಲ್ಗೊಳ್ಳಲಿದ್ದಾರೆ.

Read More

ಮಡಿಕೇರಿ ಮೇ 1 NEWS DESK : ಇಂದಿರಾನಗರದ ಕುಂದುರುಮೊಟ್ಟೆ ಶ್ರೀ ಮಾರಿಯಮ್ಮ ದೇವಾಲಯದ 135ನೇ ವಾರ್ಷಿಕೋತ್ಸವವು ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಶ್ರದ್ಧಾಭಕ್ತಿಯಿಂದ ನೆರವೇರಿತು. ವಾರ್ಷಿಕೋತ್ಸವದ ಅಂಗವಾಗಿ ನಗರದ ಮುಖ್ಯ ಬೀದಿಗಳಲ್ಲಿ ದೇವಿಯ ಮೆರವಣಿಗೆ ನಡೆಯಿತು. ನಂತರ ಮನೆ ಮನೆಯಿಂದ ಪೂಜೆಯನ್ನು ದೇವಾಲಯಕ್ಕೆ ತಂದೊಪ್ಪಿಸಲಾಯಿತು. ರಾತ್ರಿ ಹೂವಿನ ವರ ಬೇಡುವುದು, ಮಹಿಳೆಯರು ಮನೆ, ಮನೆಯಿಂದ ಆರತಿಯನ್ನು ದೇವಾಲಯಕ್ಕೆ ತಂದೊಪ್ಪಿಸಿದರು. ದೇವಿಗೆ ಮಹಾ ಮಂಗಳಾರತಿ ಮತ್ತು ಮಹಾಪೂಜೆಯ ನಂತರ ಪ್ರಸಾದ ವಿತರಣೆ ನೆರವೇರಿತು. ಬಳಿಕ ಶ್ರೀ ದೇವಿಗೆ ಹರಕೆ ಮತ್ತು ಕಾಣಿಕೆ ಒಪ್ಪಿಸಲಾಯಿತು. ಇದೇ ಸಂದರ್ಭ ನೆರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.

Read More

ಮಡಿಕೇರಿ ಮೇ 1 NEWS DESK : ಕೊಡಗು ಜಿಲ್ಲಾ ಎಐಟಿಯುಸಿ ಕಾರ್ಮಿಕ ಸಂಘಟನೆ ವತಿಯಿಂದ ಬಿಳಿಗೇರಿ ಗ್ರಾಮದಲ್ಲಿ ವಿಶ್ವ ಕಾರ್ಮಿಕರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಟಾಟಾ ಸಂಸ್ಥೆಯ ಜಂಬೂರು ತೋಟದ ಕಾರ್ಮಿಕರ ಸಮ್ಮುಖದಲ್ಲಿ ಎಐಟಿಯುಸಿ ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್.ಎಂ.ಸೋಮಪ್ಪ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಅವರು ಕಾರ್ಮಿಕ ವರ್ಗದಿಂದ ದೇಶದ ಪ್ರಗತಿ ಸಾಧ್ಯವಾಗಿದೆ. ಶ್ರಮಿಕ ವರ್ಗದ ಬೇಡಿಕೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಡೇರಿಸಬೇಕು ಎಂದರು. ನೆರೆದಿದ್ದ ಕಾರ್ಮಿಕರು ಶ್ರಮಿಕ ವರ್ಗ ಕಾರ್ಮಿಕರ ಪರ ಘೋಷಣೆಗಳನ್ನು ಕೂಗಿದರು. ಎಐಟಿಯುಸಿಯ ಕಾರ್ಮಿಕ ನಾಯಕರಾದ ಸಂಜೀವ, ಸೂರಜ್, ಪ್ರಕಾಶ್, ರಾಚಯ್ಯ, ಶಾರದ, ಗಿರಿಜಾ ಮತ್ತಿತರರು ಹಾಜರಿದ್ದರು.

Read More

ಮಡಿಕೇರಿ ಮೇ 1 NEWS DESK : ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿಯ ಯೋಜನೆ ಇದೇ ಏಪ್ರಿಲ್ ನಲ್ಲಿ ಆರಂಭವಾಗಿದ್ದು, ಕಾಮಗಾರಿ ಭರದಿಂದ ಸಾಗಿದೆ. ಒಟ್ಟು 92 ಕಿಮೀ ಹೆದ್ದಾರಿ ನಿರ್ಮಾಣ ಕಾಮಗಾರಿಯಲ್ಲಿ 4 ಪ್ಯಾಕೇಜ್ ಗಳಿದ್ದು, ಪ್ಯಾಕೇಜ್ -5 ಅಂದರೆ ಬಿ ಅಗ್ರಹಾರ( ಶ್ರೀರಂಗಪಟ್ಟಣ) ದಿಂದ ಯಲಚನಹಳ್ಳಿ (ಮೈಸೂರು ತಾಲೂಕು) 19 ಕಿಮೀ ಮತ್ತು ಪ್ಯಾಕೇಜ್-3 (ಹುಣಸೂರು ತಾಲೂಕಿನ ಬೆಳತ್ತೂರುನಿಂದ ಪಿರಿಯಾಪಟ್ಟಣ ತಾಲೂಕಿನ ಹರವೆಮಲ್ಲಿರಾಜಪಟ್ಟಣ ವರೆಗಿನ 24.10 ಕಿಮೀ) ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಪ್ಯಾಕೇಜ್-4 ಸದ್ಯದಲ್ಲೇ ಆರಂಭವಾಗಲಿದ್ದು, ಪ್ಯಾಕೇಜ್-2 ಅರಣ್ಯ ಇಲಾಖೆಯ ಕೃಪೆಗಾಗಿ ಕಾದಿದೆ. ಕುಶಾಲನಗರದಿಂದ ಮಡಿಕೇರಿ ಕಡೆಗೆ ಆರಂಭವಾಗಬೇಕಿರುವ 22 ಕಿಮೀ ಉದ್ಧದ ಪ್ಯಾಕೇಜ್-1 ಅನ್ನು ಪರಿಸರವಾದಿಗಳ ತಕರಾರು ಮತ್ತು ಹೈಕೋರ್ಟ್ ಕೇಸಿನಿಂದಾಗಿ ಕೈಬಿಟ್ಟು ಕುಶಾಲನಗರದವರೆಗೂ ಮಾತ್ರ ಯೋಜನೆ ಕೈಗೆತ್ತಿಕೊಂಡಿದ್ದೆವು. ನೀವೆಲ್ಲ ಯೆಸ್ ಎಂದರೆ ಪ್ಯಾಕೇಜ್-1 ಗೆ ಅನುಮೋದನೆ ಪಡೆಯುವ ಪ್ರಯತ್ನ ಆರಂಭಿಸುತ್ತೇನೆ. ಕೆಲವು ಕೆಲಸ ಮಾಡಲು ಅಧಿಕಾರವೇ ಬೇಕೆಂದಿಲ್ಲ, ನಿಮ್ಮ ಆಶೀರ್ವಾದವೂ ಸಾಕಾಗುತ್ತದೆ ಎಂದು ಮಾಜಿ ಸಂಸದ ಪ್ರತಾಪ್…

Read More

ಮಡಿಕೇರಿ ಮೇ 1 NEWS DESK : ಕೊಡಗು ಜಿಲ್ಲಾ ಬುಡಕಟ್ಟು ಕಾರ್ಮಿಕರ ಸಂಘ  ಹಾಗೂ ಗೋಣಿಕೊಪ್ಪ ಕಾಫಿ ತೋಟಗಳ ಕಾರ್ಮಿಕರ ಯೂನಿಯನ್ ಸಹಯೋಗದಲ್ಲಿ ಗೋಣಿಕೊಪ್ಪಲಿನಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು. ಗೋಣಿಕೊಪ್ಪಲುವಿನ ಹೋಟೆಲ್ ಪ್ರಕಾಶ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಾರ್ಮಿಕರೇ ದೇಶದ ಶಕ್ತಿ. ಒಂದು ದೇಶವು ಯಶಸ್ಸು ಸಾಧಿಸಬೇಕೆಂದರೆ ಅದರಲ್ಲಿ ಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ. ನಮ್ಮ ಸರಕಾರ ಕಾರ್ಮಿಕರ ಏಳಿಗೆಗೆ ಹಲವಾರು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರ ಸದುಪಯೋಗವನ್ನು ಎಲ್ಲಾ ಕಾರ್ಮಿಕರು ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಕಾರ್ಮಿಕರ ಯಾವುದೇ ಸಮಸ್ಯೆ ಇದ್ದರೂ ತನ್ನ ಬಳಿಗೆ ಬಂದು ತಿಳಿಸಬೇಕೆಂದು ಹೇಳಿದರು.

Read More

ಮಡಿಕೇರಿ ಮೇ 1 NEWS DESK : ಕೊಡಗಿನಾದ್ಯಂತ ಕ್ರೀಡಾ ಪರ್ವವಾಗಿದ್ದು, ಕ್ರೀಡಾಕೂಟ ಒಗ್ಗಟ್ಟು ಮತ್ತು  ಏಳಿಗೆಗೆ ಸಹಕಾರಿಯಾಗಲಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ವಿರಾಜಪೇಟೆ ತಾಲ್ಲೂಕು ಅರಮೇರಿಯಲ್ಲಿ, ಬಾಳೆಕುಟ್ಟಿರ ಕುಟುಂಬಸ್ಥರು ಆಯೋಜಿಸಿರುವ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಕೊಡಗು ಜಿಲ್ಲೆ ಹಲವಾರು ವಿಶೇಷತೆಗಳಿಗೆ ಹೆಸರುವಾಸಿಯಾಗಿದ್ದು, ಅದರಲ್ಲಿ ಕ್ರೀಡೆಯೂ ಪ್ರಮುಖವಾಗಿದೆ. ಕ್ರೀಡೆ  ಕೇವಲ ದೈಹಿಕವಾಗಿ ಮಾತ್ರ ಅಲ್ಲ ಮಾನಸಿಕವಾಗಿಯೂ ಸದೃಢವಾಗಲು ಸಹಕಾರಿಯಾಗಿದ್ದು, ಎಲ್ಲರೂ ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ನಾಡಿನ ಒಗ್ಗಟ್ಟಿಗಾಗಿ ಶ್ರಮಿಸಬೇಕೆಂದು ಕರೆ ನೀಡಿದರು.  ಬಳಿಕ ಆಯೋಜಕರು ನೀಡಿದ ಸನ್ಮಾನವನ್ನು ಸ್ವೀಕರಿಸಿ ಎಲ್ಲರಿಗೂ ಶುಭ ಕೋರಿದರು. ಈ ಸಂದರ್ಭ ಕಾರ್ಯಕ್ರಮ ಆಯೋಜಕರು ಹಾಗೂ ಪ್ರಮುಖರು ಇದ್ದರು.

Read More

ಮಡಿಕೇರಿ NEWS DESK ಮೇ 1 : ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಸಂದರ್ಭ ಮಲಯಾಳಿ ಸಮಾಜಕ್ಕೆ ಸೇರಿದ ಸದಸ್ಯರಾದ ಕೆ.ಎಸ್.ರಮೇಶ್ ಹಾಗೂ ಉಷಾ ಕಾವೇರಪ್ಪ ಅವರನ್ನು ಬಿಜೆಪಿ ಕಡೆಗಣಿಸಿದೆ, ಇದು ಮಲಯಾಳಿ ಸಮುದಾಯಕ್ಕೆ ಅತೀವ ನೋವನ್ನುಂಟು ಮಾಡಿದೆ ಎಂದು ಮಡಿಕೇರಿ ತಾಲ್ಲೂಕು ಹಿಂದೂ ಮಲಯಾಳಿ ಸಂಘ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಹಿಂದೂ ಮಲಯಾಳಿ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ವಿ.ಧರ್ಮೇಂದ್ರ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ಪಕ್ಷದ ಕೆಲವು ನಾಯಕರ ಉದ್ಧಟತನದಿಂದ ಬಿಜೆಪಿ ಅಸ್ತಿತ್ವ ಕಳೆದುಕೊಳ್ಳುವ ಸ್ಥಿತಿಯಲ್ಲಿದೆ ಎಂದು ಆರೋಪಿಸಿದ್ದಾರೆ. ಹಿಂದೂ ಮಲಯಾಳಿ ಸಂಘದ ಮಡಿಕೇರಿಯ ಹಾಗೂ ಜಿಲ್ಲಾ ಘಟಕದ ಸ್ಥಾಪಕ ಅಧ್ಯಕ್ಷರಾಗಿರುವ ಕೆ.ಎಸ್.ರಮೇಶ್ ಅವರು ಕಳೆದ 25 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತರಾಗಿ ತಮ್ಮನ್ನು ತೊಡಗಿಸಿಕೊಂಡು, ನಗರಸಭೆ ಸದಸ್ಯರಾಗಿ ಸತತ 4 ಬಾರಿ ಆಯ್ಕೆಯಾಗಿದ್ದಾರೆ. ಇಷ್ಟು ಜನಮನ್ನಣೆ ಹೊಂದಿರುವ ನಾಯಕನ ವಿರುದ್ಧ ಈ ರೀತಿಯ ಕುತಂತ್ರ ನಡೆಯುತ್ತಿರುವುದು ಖಂಡನೀಯ. ಯಾರಾದರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ…

Read More

ಬೆಂಗಳೂರು ಮೇ 1 NEWS DESK : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಹಾಗೂ ಪೌರ ಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡು, ಪೌರ ಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಿಸಿದರು.

Read More