ಮಡಿಕೇರಿ ಮಾ.18 NEWS DESK : ಮಡಿಕೇರಿ ತಾಲ್ಲೂಕಿನ ಬಿಳಿಗೇರಿ ಗ್ರಾಮದ ಶ್ರೀ ಭಗವತಿ ದೇವಾಲಯದ ವಾರ್ಷಿಕೋತ್ಸವವು ಮಾ.22 ರಿಂದ ಮಾ.26ರವರೆಗೆ ನಡೆಯಲಿದೆ. ಆರಂಭಿಕ ದಿನವಾದ ಮಾ.22ರಂದು ಬೆಳಗ್ಗೆ 10ಕ್ಕೆ ಗಣಪತಿ ಹೋಮ, ಮಹಾಪೂಜೆ, ಸಂಜೆ 6.30ಗಂಟೆಗೆ ಪ್ರಾರ್ಥನೆ, ತಕ್ಕರ ಮನೆಯಿಂದ ಭಂಡಾರ ತರುವುದು, ಅಂದಿ ಬೆಳಕು, ಪ್ರಸಾದ ವಿತರಣೆ, ಮಾ.23 ರಂದು ಬೆಳಗ್ಗೆ 6.30 ಗಂಟೆಗೆ ದೇವರು ಬಲಿ ಬರುವುದು, ಮಹಾಪೂಜೆ, ಅನ್ನಸಂತರ್ಪಣೆ. ಸಂಜೆ 6.30 ಗಂಟೆಗೆ ಬೆಳಕು, ದೇವರು ಬಲಿ ಬರುವುದು, ಅಂದಿಬೆಳಕು, ಪ್ರಸಾದ ವಿತರಣೆ ನಂತರ ಶ್ರೀ ಪರದೇವರ ಕೋಟದಲ್ಲಿ ಕೊಟ್ಟಿ ಪಾಡುವುದು ಸಾಂಪ್ರದಾಯಿಕ ಆಚರಣೆ ನಡೆಯಲಿದೆ. ಮಾ.24ರಂದು ಬೆಳಗ್ಗೆ 6.30ಕ್ಕೆ ದೇವರ ನೃತ್ಯ ಬಲಿ, ಶ್ರೀ ಎಡೆಕೊಲ್ಲಿ ಅಯ್ಯಪ್ಪ ದೇವರಿಗೆ ಶುದ್ಧ ಕಲಶ, ಮಹಾಪೂಜೆ, ಅನ್ನಸಂತರ್ಪಣೆ. ಸಂಜೆ 6.30 ಗಂಟೆಗೆ ಬೆಳಕು, ದೇವರು ಬಲಿ ಬರುವುದು, ಅಂದಿಬೆಳಕು ಪ್ರಸಾದ ವಿತರಣೆ ನಡೆಯಲಿದೆ. ಮಾ.25 ರಂದು ಬೆಳಗ್ಗೆ 6.30ಕ್ಕೆ ದೇವರ ನೃತ್ಯ ಬಲಿ, ಶ್ರೀ ಪರದೇವರ ಕೋಟದಿಂದ…
ಲೇಖಕ: admin
ಸುಂಟಿಕೊಪ್ಪ ಮಾ.18 NEWS DESK : ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ 56ನೇ ವರ್ಷದ ತೆರೆ ಮಹೋತ್ಸವವು ಮಾ.22, 23 ಮತ್ತು 24 ರಂದು ನಡೆಯಲಿದೆ ಎಂದು ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಸ್ಥಾನ ಸಮಿತಿಯ ಅಧ್ಯಕ್ಷ ಪಟ್ಟೆಮನೆ ಉದಯಕುಮಾರ್ ತಿಳಿಸಿದ್ದಾರೆ. ದೇವಾಲಯದಲ್ಲಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಲಿದೆ. ಮಾ.22 ರಂದು ಬೆಳಿಗ್ಗೆ 6.45 ಗಂಟೆಗೆ ಗಣಪತಿ ಹವನ, 7.15 ಗಂಟೆಗೆ ಶುದ್ಧಿ ಪುಣ್ಯಾಹ, 7.30 ಗಂಟೆಗೆ ಬಾವುಟವನ್ನು ಏರಿಸುವುದು, ಸಂಜೆ 4 ಗಂಟೆಗೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವಿಕೆ, ರಾತ್ರಿ 6 ಗಂಟೆಗೆ ಚಂಡೆಮೇಳ, 7 ಗಂಟೆಗೆ ಶ್ರೀಮುತ್ತಪ್ಪ ವೆಳ್ಳಾಟಂ ನಡೆಯಲಿದೆ. ಮಾ.23 ರಂದು ಬೆಳಿಗ್ಗೆ 7 ಗಂಟೆಗೆ ವಾದ್ಯಮೇಳ, 11 ಗಂಟೆಗೆ ಶ್ರೀಶಾಸ್ತಪ್ಪನ ವೆಳಾಳಟಂ,ಮಧ್ಯಾಹ್ನ 1 ಗಂಟೆಗೆ ಶ್ರೀ ಗುಳಿಗವೆಳ್ಳಾಟಂ, ಸಂಜೆ 4 ಗಂಟೆಗೆ ಅಡಿಯರ ಮೆರವಣಿಗೆ, ರಾತ್ರಿ 7 ಗಂಟೆಗೆ ಶ್ರೀ ಮುತ್ತಪ್ಪ ವೆಳ್ಳಾಟಂ,…
ನಾಪೋಕ್ಲು ಮಾ.18 NEWS DESK : ಇತಿಹಾಸ ಪ್ರಸಿದ್ಧಿ ಕರಡ ಪಾಲಂಗಾಲ ಗ್ರಾಮದ ಮಲೆತಿರಿಕೆ ಸನ್ನಿಧಿಯ ಶ್ರೀ ಮಲೆ ತಂಮ್ರಾನ್ ಈಶ್ವರ ದೇವಾಲಯದ ವಾರ್ಷಿಕ ಉತ್ಸವ ಸಾಂಪ್ರದಾಯಿಕವಾಗಿ ಸಂಪನ್ನಗೊಂಡಿತು. ಉತ್ಸವದ ಅಂಗವಾಗಿ ಪುರಾತನ ಪದ್ಧತಿಯಂತೆ ಪಟ್ರಪಂಡ ಕುಟುಂಬದ ಜೋಡೆತ್ತಿನ ಎತ್ತುಪೋರಾಟ ಹಾಗೂ ಇತರರಿಂದ ಎತ್ತು ಪೋರಾಟ ಕರಡ ಶ್ರೀ ಭಗವತಿ ದೇವಾಲಯದಿಂದ ದೇವರ ಬಂಡಾರವನ್ನು ಸನ್ನಿಧಿಯಲ್ಲಿ ಒಪ್ಪಿಸಿ ಬಳಿಕ ಆಗಮಿಸಿದ ಭಕ್ತಾದಿಗಳಿಗೆ ಕುಯ್ಯಕೂಳ್ ವಿತರಿಸಲಾಯಿತು. ಬಳಿಕ ಮಹಾಪೂಜೆ, ಮಂಗಳಾರತಿ ನೆರವೇರಿತು. ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ ಹಾಗೂ ಪಾಯಸ ಸಂತರ್ಪಣೆ ನಡೆಯಿತು. ಸನ್ನಿಧಿಯ ಮುಖ್ಯ ಅರ್ಚಕ ಪ್ರದೀಪ್ ಹಾಗೂ ತಂಡ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ನಡಿಕೇರಿಯಂಡ ಸೋಮಯ್ಯ, ಉಪ ಅಧ್ಯಕ್ಷ ಪಟ್ರಪಂಡ ಜಗದೀಶ್ ಅಪ್ಪಯ್ಯ, ನಿರ್ದೇಶಕರು, ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿಯ ಹಾಲಿ, ಮಾಜಿ ಪದಾಧಿಕಾರಿಗಳು, ಊರಿನ ಹಿರಿಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗ, ಊರ ಪರ ಊರ ಭಕ್ತಾದಿಗಳು ಅಧಿಕ…
ಮಡಿಕೇರಿ ಮಾ.18 NEWS DESK : ಮಡಿಕೇರಿ ನಗರದ ಶ್ರೀಕೋದಂಡ ರಾಮ ದೇವಾಲಯದಲ್ಲಿ ಶ್ರದ್ಧಾಭಕ್ತಿ ಮತ್ತು ವಿಜೃಂಭಣೆಯ ರಾಮೋತ್ಸವವನ್ನು ಆಚರಿಸಲು ಸಿದ್ಧತೆ ನಡೆದಿದೆ. ಏ.5 ಮತ್ತು 6ರಂದು ಅದ್ಧೂರಿಯಾಗಿ ರಾಮೋತ್ಸವ ನಡೆಯಲಿದ್ದು, ಸಾವಿರಾರು ಭಕ್ತರಿಗೆ ಅನ್ನದಾನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅನ್ನದಾನಕ್ಕೆ ಆರ್ಥಿಕ ಅಥವಾ ಸಾಮಾಗ್ರಿ ನೆರವು ನೀಡುವವರು ಶ್ರೀ ಕೋದಂಡ ರಾಮೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ (9880778047) ಹಾಗೂ ಆಹಾರ ಸಮಿತಿಯ ಅಧ್ಯಕ್ಷ ಹೆಚ್.ವಿ.ಸುಧಾಕರ್ (9916393382) ಅವರನ್ನು ಸಂಪರ್ಕಿಸುವಂತೆ ರಾಮೋತ್ಸವ ಸಮಿತಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ನಾಪೋಕ್ಲು ಮಾ.18 NEWS DESK : ಪಡಿಯಾಣಿ ಸ.ಹಿ.ಪ್ರಾ.ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಶಾಲೆಗೆ ಟಿವಿಯನ್ನು ಕೊಡುಗೆಯಾಗಿ ನೀಡಿದರು. ಶಾಲೆಯ ಪರವಾಗಿ ಮುಖ್ಯ ಶಿಕ್ಷಕರಾದ ಕೆ.ಸಿ.ದಮೇಂದ್ರ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭ ಸಹ ಶಿಕ್ಷಕಿಯರಾದ ಎಂ.ಬಿ.ಭಾರತಿ, ಕೆ.ಎ ಹೇಮಾಮಾಲಿನಿ, ಕೆ.ಜೆ.ರಾಧ ಹಾಗೂ ಶಾಲೆಯ ಹಳೆ ವಿದ್ಯಾರ್ಥಿ ಪಿ.ಎ.ಅಬ್ದುಲ್ ಅಜೀದ್, ಬಿ.ಎ.ಮೊಯಿದು, ಕೆ.ಎಂ.ಹನೀಫ್, ಎ.ಎಂ ಜುಬೇರ್ ಹಾಜರಿದ್ದರು. ವರದಿ : ದುಗ್ಗಳ ಸದಾನಂದ.
ಮಡಿಕೇರಿ NEWS DESK ಮಾ.18 : ಮಡಿಕೇರಿ ನಗರದ ಶ್ರೀಕೋದಂಡ ರಾಮೋತ್ಸವ ಸಮಿತಿಯ ಸ್ವಾಗತ ಸಮಿತಿಯ ಮಹಿಳಾ ಅಧ್ಯಕ್ಷರಾಗಿ ಪೂರ್ಣಿಮ ಜಗದೀಶ್ ನೇಮಕಗೊಂಡಿದ್ದಾರೆ. ಮಲ್ಲಿಕಾರ್ಜುನ ನಗರ ಬಡಾವಣೆಯ ಶ್ರೀಕೋದಂಡ ರಾಮ ದೇವಾಲಯದಲ್ಲಿ ಏ.5 ಮತ್ತು 6ರಂದು ರಾಮೋತ್ಸವ ಅದ್ದೂರಿಯಾಗಿ ಜರುಗಲಿದ್ದು, ವಿಜೃಂಭಣೆಯ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮಡಿಕೇರಿ NEWS DESK ಮಾ.18 : ವಿಧಾನಸಭೆಯ ಕಲಾಪಗಳ ಮಧ್ಯೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಮತ್ತು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದರು. ವಿವಿಧ ಇಲಾಖೆಗಳ ಸಚಿವರೊಂದಿಗೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಿದರು. ಕೊಡಗು ಜಿಲ್ಲೆಗೆ ಬೇಕಾದ ವಿವಿಧ ಇಲಾಖೆಗಳ ಅನುದಾನವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಸೋಮವಾರಪೇಟೆ ಮಾ.18 NEWS DESK : ಜಾತ್ರೆ, ಉತ್ಸವಗಳು ನಮ್ಮ ಸಂಸ್ಕೃತಿಯ ಪ್ರತೀಕವೆಂದು ಮನೆ ಹಳ್ಳಿ ಮಠಾದೀಶ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಹೇಳಿದರು. ತಪೋಕ್ಷೇತ್ರ ಮನೆಹಳ್ಳಿ ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಕ್ಷೇತ್ರದ 13ನೆ ವರ್ಷದ ಜಾತ್ರೆ ಹಾಗೂ ರಥೋತ್ಸವದ ಕಾರ್ಯಗಳು ಮತ್ತು ಪತ್ರಿಕೆ ಬಿಡುಗಡೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಆಧುನಿಕತೆ ಬೆಳೆದಂತೆ ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳು ಬದಲಾಗುತ್ತಿರುವುದು ವಿಷಾದನೀಯ ಎಂದರು. ಜಾತ್ರೆ, ಉತ್ಸವಗಳು ನಡೆಯುವುದರಿಂದ, ಅದರಲ್ಲಿ ಭಾಗವಹಿಸುವುದರಿಂದ ಸಂಬಂಧಗಳು ವೃದ್ಧಿಯಾಗುತ್ತದೆ ಎಂದ ಅವರು ಇದರಿಂದ ಶಾಂತಿ, ಸಹಬಾಳ್ವೆ ನಡೆಸಲು ಸಹಕಾರಿ ಯಾಗುತ್ತದೆ ಎಂದರು. ಏ.12, 13 ಹಾಗೂ 14 ರಂದು ಕ್ಷೇತ್ರದ 13ನೆ ವರ್ಷದ ಜಾತ್ರೆ, ರಥೋತ್ಸವ ನಡೆಯಲಿದ್ದು, ಎಲ್ಲಾ ಭಕ್ತಾದಿಗಳು ಪಾಲ್ಗೊಳ್ಳಬೇಕೆಂದರು. ಈ ಸಂದರ್ಭ ಕೆ.ಆರ್.ಐ.ಡಿ.ಎಲ್ ನ ಕೊಡಗು ಜಿಲ್ಲಾ ಸಹಾಯಕ ಕಾರ್ಯಪಾಲ ಅಭಿಯಂತರ ಪ್ರಮೋದ್ ಪತ್ರಿಕೆ ಬಿಡುಗಡೆ ಮಾಡಿದರು. ತೊರೆನೂರು ಮಠದ ಶ್ರೀ.ಮಲ್ಲೇಶ ಸ್ವಾಮೀಜಿ,ಶಿಡಿಗಳಲೇ ಮಠದ ಶ್ರೀ.ಇಮ್ಮಡಿ ಶಿವಲಿಂಗ ಸ್ವಾಮೀಜಿ,ವಿರಾಜಪೇಟೆ ವೀರಶೈವ ಸಮಾಜದ ಅಧ್ಯಕ್ಷ…
ವಿದೇಶ ಪ್ರಯಾಣಕ್ಕೆ ಶುಭ ಹಾರೈಕೆಗಳು : ಕೃತ್ತಿಕಾ ಅಂಚೆಮನೆ ಸುಧಿ ಕುಮಾರ್ : Msc in international business management course University of Europ, Hamburg, Germany : ಎರಡು ವರ್ಷಗಳ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳುತ್ತಿರುವ ಪ್ರೀತಿಯ ಕೃತ್ತಿಕಾಳಿಗೆ ಹೃದಯ ತುಂಬಿದ ಶುಭಾಶಯಗಳು : ಶುಭ ಕೋರುವವರು ಅಪ್ಪ : ಅಂಚೆಮನೆ ಸುಧಿ ಕುಮಾರ್, ಅಮ್ಮ : ಅಂಚೆಮನೆ ನಮಿತ, ಅಣ್ಣ : ಅಂಚೆಮನೆ ಸ್ವಸ್ತಿಕ್
ಕುಶಾಲನಗರ ಮಾ.18 NEWS DESK : ವೇಗವಾಗಿ ಬೆಳೆಯುತ್ತಿರುವ ಔದ್ಯೋಗಿಕ ಮಾರುಕಟ್ಟೆಯ ಬೇಡಿಕೆಗಳನ್ನು ಪೂರೈಸಲು ನಮ್ಮ ಯುವ ಪೀಳಿಗೆಯನ್ನು ಅಗತ್ಯ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸಿದರೆ, ಮಾನವ ಬಂಡವಾಳದ ದೊಡ್ಡ ಶಕ್ತಿಯಾಗಿ ದೇಶ ಹೊರಹೊಮ್ಮಲಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯೆ ವಿಜಯ ಭಾರತಿ ಸಯಾನಿ ಅಭಿಪ್ರಾಯಪಟ್ಟರು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪ್ರಾಯೋಜಕತ್ವದಲ್ಲಿ ಕೊಡಗು ವಿಶ್ವವಿದ್ಯಾಲಯ ಸಹಯೋಗದೊಂದಿಗೆ ಮೈಸೂರು ವಿಭಾಗದ ಲಘು ಉದ್ಯೋಗ ಭಾರತಿ ಆಶ್ರಯದಲ್ಲಿ ಕೊಡಗು ವಿವಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಭಾರತ ಸೇರಿದಂತೆ ಪ್ರಪಂಚದಾದ್ಯಂತ ಲಕ್ಷಾಂತರ ಜನರು ನಿರುದ್ಯೋಗ ಮತ್ತು ಅವಕಾಶಗಳ ಕೊರತೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ವೃತ್ತಿ ಕೌಶಲ್ಯ ಇಲ್ಲದಿರುವುದೇ ಕಾರಣವಾಗಿದೆ. ಭಾರತ ಸಾವಿರಾರು ವರ್ಷಗಳ ಹಿಂದಿನ ಕೌಶಲ್ಯ ಆಧಾರಿತ ಕಲಿಕೆಯ ಶ್ರೀಮಂತ ಸಂಪ್ರದಾಯ ಹೊಂದಿದ್ದು, ಇಲ್ಲಿಯ ಪ್ರಾಚೀನ ಗುರುಕುಲ ವ್ಯವಸ್ಥೆ ಕೇವಲ ಶೈಕ್ಷಣಿಕ ಜ್ಞಾನದ ಬಗ್ಗೆ ಮಾತ್ರವಲ್ಲದೆ ಜೀವನ ಕೌಶಲ್ಯಗಳ ಜತೆಗೆ ಕರಕುಶಲತೆ ಮತ್ತು ವೃತ್ತಿಪರತೆಯೊಂದಿಗೆ ವೃತ್ತಿ ಕೌಶಲ್ಯದ ತರಬೇತಿಯನ್ನೂ ನೀಡುತ್ತಿದ್ದವು. ನಂತರದ ಬೆಳವಣಿಗೆಗಳಲ್ಲಿ…






