ಲೇಖಕ: admin

ಮಡಿಕೇರಿ ಮಾ.19 NEWS DESK : ಬಾತೂರು ಶ್ರೀ ಭಗವತಿ ಕ್ಷೇತ್ರದ ಕಯಗಂ ಪನತ್ತಡಿ ತಾನತ್ತಿಂಗಾಲ್ ಶ್ರೀ ವಯನಾಟ್ ಕುಲವನ್ ದೇವಾಲಯದ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವವು ಮಾ.21, 22 ಹಾಗೂ 23 ರಂದು ಜರುಗಲಿದೆ.  120 ವರ್ಷಗಳ ನಂತರ ದೇವಾಲಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಮಹೋತ್ಸವದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಯಲಿದೆ.  ಮಾ.21 ರಂದು ಪೂರ್ವಾಹ್ನ 10.15 ರಿಂದ ಉಗ್ರಾಣ ತುಂಬುವುದು, 11 ಗಂಟೆಯಿಂದ ಸಾಂಸ್ಕೃತಿಕ ಸಮ್ಮೇಳನ ನಡೆಯಲಿದ್ದು, ಕಾರ್ಯಕ್ರಮವನ್ನು ಕೇರಳದ ರೆವನ್ಯೂ ಸಚಿವ ಕೆ.ರಾಜನ್ ಉದ್ಘಾಟಿಸಲಿದ್ದಾರೆ. ಆಚರಣಾ ಸಮಿತಿ ಅಧ್ಯಕ್ಷ ಎನ್.ಬಾಲಚಂದ್ರನ್ ನಾಯರ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಪಾಲ್ಗೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ಕಾಸರಗೋಡು ಲೋಕಸಭಾ ಸದಸ್ಯ ರಾಜ್ ಮೋಹನ್ ಉಣ್ಣಿತ್ತಾನ್, ಕಾಞಂಗಾಡ್ ಶಾಸಕ ಇ.ಚಂದ್ರಶೇಖರನ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕಾಸರಗೋಡು ಜಿ.ಪಂ ಅಧ್ಯಕ್ಷರಾದ ಬೇಬಿ ಬಾಲಕೃಷ್ಣನ್, ಪನತ್ತಡಿ ಗ್ರಾ.ಪಂ ಅಧ್ಯಕ್ಷ ಪ್ರಸನ್ನ…

Read More

ಮಡಿಕೇರಿ NEWS DESK ಮಾ.19 : ಮಡಿಕೇರಿ ನಗರದ ಶ್ರೀ ಮಲ್ಲಿಕಾರ್ಜುನ ಬಡಾವಣೆಯಲ್ಲಿರುವ ಶ್ರೀ ಕೋದಂಡರಾಮ ದೇವಾಲಯದ ರಾಮೋತ್ಸವ ಸಮಿತಿಯ ವತಿಯಿಂದ ಈ ಬಾರಿ ವಿವಿಧತೆಯಲ್ಲಿ ಏಕತೆ ಎಂಬ ಘೋಷವಾಕ್ಯದೊಂದಿಗೆ 35ನೇ ವರ್ಷದ ರಾಮನವಮಿಯ ರಾಮೋತ್ಸವ ಹಾಗೂ ದೇವಾಲಯದ ದ್ವಿತೀಯ ವರ್ಷದ ಪ್ರತಿಷ್ಠಾಪನಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಶ್ರೀ ಕೋದಂಡ ರಾಮೋತ್ಸವ ಮಹಿಳಾ ಸಮಿತಿ ತಿಳಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ ಸಮಿತಿಯ ಅಧ್ಯಕ್ಷರಾದ ಭಾರತಿ ರಮೇಶ್, ಏ.5 ಮತ್ತು 6 ರಂದು ನಡೆಯುವ ರಾಮೋತ್ಸವ ಹಾಗೂ ಮಹಿಳಾ ಸಮಿತಿಯ ಪಾತ್ರದ ಕುರಿತು ಮಾಹಿತಿ ನೀಡಿದರು. ಎಲ್ಲಾ ದೇವಾಲಯಗಳ ಮತ್ತು ಸಂಘ ಸಂಸ್ಥೆಗಳ ಪ್ರಮುಖರು, ಕಾರ್ಯಕರ್ತರು, ಹಾಗೂ ಸುತ್ತಮುತ್ತಲಿನ ಎಲ್ಲಾ ಸಮುದಾಯಗಳ ಜನರು, ಭಕ್ತರನ್ನು ಒಗ್ಗೂಡಿಸಿಕೊಂಡು ರಾಮೋತ್ಸವವನ್ನು ಆಚರಿಸಲಾಗುತ್ತಿದ್ದು, ಉಪಸಮಿತಿಗಳನ್ನು ರಚಿಸಲಾಗಿದೆ. ಮಹಿಳಾ ಸಮಿತಿಯು ಬಹಳ ಮುಖ್ಯವಾದ ಜವಾಬ್ದಾರಿಯನ್ನು ನಿಭಾಯಿಸಲಿದೆ. ಮಹಿಳಾ ಸಮಿತಿಯಲ್ಲಿರುವವರು ವಿವಿಧ ದೇವಾಲಯ, ಸಂಘ ಸಂಸ್ಥೆಗಳಲ್ಲಿ ಸೇವೆಸಲ್ಲಿಸಿದವರಾಗಿದ್ದು, ರಾಮೋತ್ಸವದ ಮೂಲಕ ಶ್ರೀ ರಾಮನ ಸೇವೆ ಮಾಡಲು ಉತ್ತಮ…

Read More

ಮಡಿಕೇರಿ ಮಾ.19 NEWS DESK : ಗೌಡ ಮಹಿಳೆಯರು ಮತ್ತು ಯುವತಿಯರನ್ನು ಒಗ್ಗೂಡಿಸುವ ಹಾಗೂ ಗೌಡ ಜನಾಂಗದ ಸಂಸ್ಕೃತಿ, ಸಂಪ್ರದಾಯವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಮಹಿಳಾ ಒಕ್ಕೂಟವನ್ನು ನೂತನವಾಗಿ ರಚಿಸಲಾಗಿದೆ. ಒಕ್ಕೂಟದ ಸಂಸ್ಥಾಪಕ ಸಂಚಾಲಕಿಯಾಗಿ ರೇವತಿ ರಮೇಶ್, ಅಧ್ಯಕ್ಷರಾಗಿ ಮೂಟೇರ ಪುಷ್ಪಾವತಿ ರಮೇಶ್, ಉಪಾಧ್ಯಕ್ಷರುಗಳಾಗಿ ಸುಳ್ಯ ತಾಲ್ಲೂಕು ಮಹಿಳಾ ಅಧ್ಯಕ್ಷರಾದ ವಿನುತ ಪೌತಿಕಲ್ಲು, ಸೋಮವಾರಪೇಟೆಯ ಅಶ್ವಿನಿ ಕೃಷ್ಣಕಾಂತ್, ಗೌರವ ಕಾರ್ಯದರ್ಶಿ ಮರಗೋಡಿನ ಮಂದ್ರೀರ ಸುಗೀತಾ ಜಯಪ್ರಕಾಶ್, ಕೋಶಾಧಿಕಾರಿ ಚೊಕ್ಕಾಡಿ ಪ್ರೇಮಾ ರಾಘವಯ್ಯ, ಸಹ ಕಾರ್ಯದರ್ಶಿಗಳಾಗಿ ಕುಟ್ಟನ ಶ್ವೇತ ಪ್ರಶಾಂತ್ ಹಾಗೂ ದುಗ್ಗಳ ಕಾವ್ಯ ಕಪಿಲ್ ಆಯ್ಕೆಯಾಗಿದ್ದಾರೆ. ನೂತನವಾಗಿ ಒಕ್ಕೂಟವನ್ನು ರಚಿಸಿರುವ ಕುರಿತು ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಸ್ಥಾಪಕ ಸಂಚಾಲಕಿ ರೇವತಿ ರಮೇಶ್ ಅವರು ಗೌಡರೆಂದರೆ ಒಕ್ಕಲಿಗರು, ಒಕ್ಕಲಿಗರೆಂದರೆ ಗೌಡರು ಎಂಬ ಮಾತಿನಂತೆ ಕೊಡಗು ಜಿಲ್ಲೆಯ ಅರೆಭಾಷಿಕ, ಒಕ್ಕಲಿಗ ಮಹಿಳೆಯರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗೌಡ ಮಹಿಳೆಯರನ್ನು ಒಗ್ಗೂಡಿಸಲಾಗಿದೆ. ಕೊಡಗು ಅರೆಭಾಷೆ, ಒಕ್ಕಲಿಗ…

Read More

ಮಡಿಕೇರಿ ಮಾ.19 NEWS DESK : ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಅನುದಾನದಲ್ಲಿ ರೆಂಕಿಲ್ ಮೊಟ್ಟೆ ಹಾಗೂ ಚಾಂಬಾಡು ದೈವಸ್ಥಾನ ಬಳಿ ಕೈಗೊಂಡಿರುವ ಡಾಂಬರೀಕರಣ ಕಾಮಗಾರಿಯನ್ನು ವಲಯ ಕಾಂಗ್ರೆಸ್ ಅಧ್ಯಕ್ಷ ರವಿರಾಜ್ ಹೊಸೂರು ಅವರ ನೇತೃತ್ವದಲ್ಲಿ ಪರಿಶೀಲಿಸಲಾಯಿತು.  ರಸ್ತೆಯ ಗುಣಮಟ್ಟ ಹಾಗೂ ಉದ್ದಗಲವನ್ನು ಪರಿಶೀಲಿಸಿದ ಸದಸ್ಯರು, ಗುತ್ತಿಗೆದಾರರಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಮನವಿ ಮಾಡಿದರು. ಅಲ್ಲದೇ ಜನರಿಗೆ ಅನುಕೂಲ ಆಗುವ ರೀತಿಯಲ್ಲಿ ಹಲವು ಬದಲಾವಣೆ ಮಾಡುವಂತೆ ಸಲಹೆ ನೀಡಿದರು. ಇದೇ ಸಂದರ್ಭ ಕಾಮಗಾರಿ ನಡೆಸಲು ಅನುದಾನ ಬಿಡುಗಡೆ ಮಾಡಿದ ಶಾಸಕರು, ಸಹಕರಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಹಾಗೂ ಕೊಡಗು ಜಿಲ್ಲಾ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಜ್ ಹೊಸೂರು ಅವರಿಗೆ ಗ್ರಾಮಸ್ಥರು ಗ್ರಾಮಸ್ಥರು ಧನ್ಯವಾದಗಳು ಅರ್ಪಿಸಿದರು.

Read More

ಪುತ್ತೂರು ಮಾ.19 NEWS DESK : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ರಾಜ್ಯಮಟ್ಟದ 26ನೇ ಅಂತರ್ ಕಾಲೇಜು ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಮಹಿಳೆಯರ ವಿಭಾಗದ ಚಾಂಪಿಯನ್‍ಶಿಪ್‍ನಲ್ಲಿ ರನ್ನರ್ ಅಪ್ ಟ್ರೋಫಿಯನ್ನು ಗೆದ್ದುಕೊಂಡಿದ್ದಾರೆ. ಶಿವಮೊಗ್ಗದ ಜವಾಹರ್‍ಲಾಲ್ ನೆಹರೂ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ಮಾರ್ಚ್ 15 ರಿಂದ 18ರ ವರೆಗೆ ನಡೆದ ಈ ಕ್ರೀಡಾಕೂಟದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟ 126 ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳ 1434 ಕ್ರೀಡಾಪಟುಗಳು ಭಾಗವಹಿಸಿದ್ದರು. ಕ್ರಿಡಾಕೂಟದ ಉದ್ಘಾಟನಾ ಸಮಾರಂಭದದಲ್ಲಿ ನಡೆದ ಆಕರ್ಷಕ ಪಥ ಸಂಚಲನದಲ್ಲಿ ವಿದ್ಯಾರ್ಥಿಗಳು ತೃತೀಯ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಪ್ರಥಮ ವರ್ಷದ ಮೆಕ್ಯಾನಿಕಲ್ ವಿಭಾಗದ ಅನಘಾ.ಕೆ.ಎನ್ 200ಮೀ ಹಾಗೂ 400 ಮೀ ಓಟದಲ್ಲಿ ಚಿನ್ನ, 4×100ಮೀ ರಿಲೇಯಲ್ಲಿ ಬೆಳ್ಳಿ, 4×400ಮೀ ಮಿಕ್ಸೆಡ್ ರಿಲೇಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ಅರ್ಪಿತಾ ಬಾಲಚಂದ್ರ ನಾಯ್ಕ್ 400ಮೀ ಹರ್ಡಲ್ಸ್‍ನಲ್ಲಿ ಬೆಳ್ಳಿ, 4×400ಮೀ…

Read More

ಕೂಡಿಗೆ ಮಾ.19 NEWS DESK : ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ಸಮೀಪದಲ್ಲಿರುವ ಕುಂಬಾರ ಹಡ್ಲು ಗ್ರಾಮಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಭೇಟಿ ನೀಡಿ ಗ್ರಾಮಸ್ಥರ ಅಹವಾಲನ್ನು ಸ್ವೀಕರಿಸಿ, ಗ್ರಾಮಸ್ಥರೊಂದಿಗೆ ಸಮಾಲೋಚನಾ ಸಭೆ ನಡೆಸಿದರು. ಗ್ರಾ.ಪಂ ಸದಸ್ಯ ಅನಂತ  ಅಧ್ಯಕ್ಷತೆಯಲ್ಲಿ ನಡೆಯಿತು. ಕುಂಬಾರ ಹಡ್ಲು ಗ್ರಾಮಸ್ಥರು ಗ್ರಾಮದ ಗುಳಿಗ ದೇವರ ಪೂಜೆಗೆ ಆಗಮಿಸಿ ಶಾಸಕರೊಂದಿಗೆ ಸಂವಾದ ನಡೆಸಿದರು. ಕುಂಬಾರ ಹಡ್ಲು ಗ್ರಾಮವು ಜೇನುಕಲ್ಲು ಮೀಸಲು ಅರಣ್ಯ ಪ್ರದೇಶದ ಸಮೀಪದಲ್ಲಿರುವ ಗ್ರಾಮವಾಗಿದ್ದು, ಕಾಡಾನೆಗಳಿಂದ ಅಪಾರ ಪ್ರಮಾಣದ ಬೆಳೆ ಹಾನಿ ಮತ್ತು ಸೀಗೆಹೊಸೂರು, ಕೂಡಿಗೆಯತ್ತಾ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ತಿರುಗಾಡಲು ಕಾಡಾನೆಗಳ ಹಾವಾಳಿಯಿಂದಾಗಿ ತೊಂದರೆಗಳು, ಭೂಮಿಯ ಹಕ್ಕುಪತ್ರ, ರಸ್ತೆ, ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ಗಮನ ಸೆಳೆದರು. ಗ್ರಾಮಸ್ಥರು ಸಭೆಯಲ್ಲಿ ಶಾಸಕರಿಗೆ ಮನವಿ ಪತ್ರವನ್ನು ನೀಡಿದರು.  ಸಭೆಯಲ್ಲಿ ಶಾಸಕ ಡಾ. ಮಂತರ್ ಗೌಡ ನವರು ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಹಂತ ಹಂತವಾಗಿ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು. ಪ್ರಮುಖವಾಗಿ ಕಾಡಾನೆಗಳ…

Read More

ನಾಪೋಕ್ಲು ಮಾ.19 NEWS DESK : ಸಂಘ ಸಂಸ್ಥೆಯಲ್ಲಿ ಪ್ರತಿಯೊಬ್ಬ ಸದಸ್ಯರು ಸದೃಢ ಕಟ್ಟಡದ ಒಂದೊಂದು ಕಂಬಗಳಿದಂತೆ ಆದುದರಿಂದ ಪ್ರತಿಯೊಬ್ಬ ಸದಸ್ಯರ ಸಹಭಾಗಿತ್ವ ಮುಖ್ಯ ಎಂದು ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ  ಆಮೆ ದಮಯಂತಿ ಹೇಳಿದರು. ಚೇರಂಬಾಣೆ ಗೌಡ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ  ಚೇರಂಬಾಣೆ ಗೌಡ ಮಹಿಳಾ ನೂತನ ಒಕ್ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ಮಹಿಳೆಯಲ್ಲಿ ವಿವಿಧ ಕಲಾ ಪ್ರತಿಭೆಗಳಿರುತ್ತವೆ. ಒಂದು ಕಡ್ಡಿಯಿಂದ ಕಸ ಗುಡಿಸಲಾಗದು ಒಗ್ಗಟ್ಟಿನಲ್ಲಿ ಬಲವಿದೆ ಸದಸ್ಯರ ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದರು. ಒಕ್ಕೂಟದ ಸದಸ್ಯತ್ವ ನೋಂದಣಿ ಪುಸ್ತಕವನ್ನು ಚೇರಂಬಾಣೆ ಗೌಡ ಸಮಾಜದ ನಿರ್ದೇಶಕರಾದ ನೆಯ್ಯಣಿ ಹೇಮಲತಾ ತಾರೆಂದ್ರ ಅನಾವರಣಗೊಳಿಸಿ ಮಾತನಾಡಿ, ಬಹಳ ವರ್ಷಗಳ ಮನವಿಯ ಫಲಶೃತಿಯಾಗಿ ನೂತನ ಒಕ್ಕೂಟ ರಚನೆಯಾಗಿದೆ. 16 ಗಾಮಗಳ ಸಮ್ಮಿಲನ ಈ ಒಕ್ಕೂಟವಾಗಿದ್ದು, ಉತ್ತಮ ಕಾರ್ಯ ಚಟುವಟಿಕೆಗಳ ಮೂಲಕ ಪ್ರಗತಿ ಕಾಣಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮವನ್ನು ಬೈಮನ ಅನುಜಾ ಹರೀಶ್ ಉದ್ಘಾಟಿಸಿ ನೂತನ ಒಕ್ಕೂಟಕ್ಕೆ ಶುಭ ಹಾರೈಸಿದರು. …

Read More

ವಿರಾಜಪೇಟೆ ಮಾ.19 NEWS DESK : ವಿರಾಜಪೇಟೆ ಕೊಡಗು ಮಹಿಳಾ ಸಹಕಾರ ಸಂಘ ವತಿಯಿಂದ ಮಹಿಳಾ ಸಮಾಜದ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಮಾ.22 ರಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ ಎಂದು ಸಮಾಜದ ಅಧ್ಯಕ್ಷೆ ಪಟ್ರಪಂಡ ಗೀತಾ ಬೆಳ್ಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿರಾಜಪೇಟೆ ಮಾ.19 NEWS DESK : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕೊಡವ ಕೂಟಾಳಿಯಡ ಕೂಟದಿಂದ ಬಾಸ್ಕೆಟ್ ಬಾಲ್ ಆಟಗಾರ್ತಿ ಚೋವಂಡ ಜಮುನಾ ಸುರೇಶ್ ಅವರನ್ನು ಸನ್ಮಾನಿಸಲಾಯಿತು. ಗೃಹಿಣಿಯಾಗಿ, ಹಾಡುಗಾರ್ತಿಯಾಗಿ, ಕರಕುಶಲತೆಯ ಜೊತೆಗೆ, ಹೊರ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬಾಸ್ಕೆಟ್ ಬಾಲ್ ಆಟಗಾರ್ತಿಯಾಗಿ ಗುರುತಿಸಿ ಕೊಂಡಿರುವ ಜಮುನಾ ಸುರೇಶ್ ಅವರನ್ನು ಕೂಟದ ಪ್ರಮುಖರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ಮಾತನಾಡಿದ ಜಮುನಾ, ಇದು ನನಗೆ ವಿಶೇಷ ಸನ್ಮಾನವಾಗಿದ್ದು, ಕೊಡವಾಮೆಯನ್ನು ಉಳಿಸುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿರುವ ಕೊಡವ ಕೂಟಾಳಿಯಡ ಕೂಟ ನನ್ನನ್ನು ಗುರುತಿಸಿ ಮನೆಗೆ ಬಂದು ಗೌರವಿಸಿ ಸನ್ಮಾನ ಮಾಡಿರುವುದು ನನಗೆ ತುಂಬಾ ಸಂತೋಷವನ್ನು ತಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕೂಟದ ಅಧ್ಯಕ್ಷ ಚೆಟ್ಟೋಳಿರ ಶರತ್ ಸೋಮಣ್ಣ, ಕಾರ್ಯದರ್ಶಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಸಂಸ್ಥಾಪಕಿ ಚಿಮ್ಮಚ್ಚಿರ ಪವಿತ ರಜನ್, ಖಜಾಂಚಿ ಬೊಜ್ಪಂಗಡ ಭವ್ಯ ದೇವಯ್ಯ ಮತ್ತು ಸದಸ್ಯೆ ಇಟ್ಟಿರ ಭವ್ಯ ಈಶ್ವರ್ ಪಾಲ್ಗೊಂಡಿದ್ದರು.

Read More

ಮಡಿಕೇರಿ ಮಾ.19 NEWS DESK : ಕೊಡಗು ಜಮ್ಮಾಮಲೆ ಅಸೋಸಿಯೇಷನ್‍ನ ನಿಯೋಗವು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿ ಮಾಡಿ ಮೀಸಲು ಅರಣ್ಯದಲ್ಲಿರುವ ಮಲೆ ಹಿಡುವಳಿದಾರರ ಕುರಿತು ವಿಶೇಷ ಮನವಿ ಸಲ್ಲಿದರು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ನೇತೃತ್ವದಲ್ಲಿ ವಿಧಾನಸೌಧದ ಕಚೇರಿಯಲ್ಲಿ ಭೇಟಿಯಾದ ಅಸೋಸಿಯೇಷನ್‍ನ ಪ್ರಮುಖರು, ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸಿದರು. ದಶಕಗಳಿಂದ ಈ ಭಾಗದ ಜನರನ್ನು ಕಾಡುತ್ತಿರುವ ಮಾನವ-ಪ್ರಾಣಿ ಸಂಘರ್ಷಕ್ಕೆ ಅಂತ್ಯ ಹಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದೇ ಸಂದರ್ಭ ಜಮ್ಮಾಮಲೆ ಹಿಡುವಳಿದಾರರು ಅರಣ್ಯ ಇಲಾಖೆಯಿಂದ ನೀಡುವ ಪ್ರಮಾಣ ಪತ್ರದಲ್ಲಿ ಆಂತರಿಕ ಸೂಚನೆ ಅಳವಡಿಸದಂತೆ ಈ ಹಿಂದೆ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ವಿರಾಜಪೇಟೆ ಡಿಸಿಎಫ್ ಜಗನಾಥ್ ಅವರಿಗೆ ಸೂಚನೆ ನೀಡಿದರೂ ಕೂಡ ಶಾಸಕರ ಸೂಚನೆಯನ್ನು ಕಡೆಗಣಿಸಿ ಕೊಡಗು ಜಮ್ಮಾಮಲೆ ಹಿಡುದಾರರಿಗೆ ಪ್ರಮಾಣ ಪತ್ರದಲ್ಲಿ ಆಂತರಿಕ ಸೂಚನೆ ಅಂಶಗಳನ್ನು ಸೇರಿಸಿ ನೀಡುತ್ತೀದ್ದ ಹಿನ್ನಲೆ ಸಚಿವರಿಗೆ ಕೊಡಗು ಜಮ್ಮಾಮಲೆ…

Read More