ಲೇಖಕ: admin

ಮಡಿಕೇರಿ ಏ.29 NEWS DESK : ಕೊಡಗು ಜಿಲ್ಲಾ ಪೊಲೀಸ್ ಘಟಕದ ಶ್ವಾನದಳ ವಿಭಾಗದಲ್ಲಿ 8 ವರ್ಷ 2 ತಿಂಗಳು ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ ಶ್ವಾನ ಪೃಥ್ವಿ ಹೃದಯಾಘಾತದಿಂದ ನಿಧನ ಹೊಂದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇಂದು ನಗರದ ಪೊಲೀಸ್ ಮೈದಾನದಲ್ಲಿ ಮೃತ ಪೃಥ್ವಿಗೆ ಅಂತಿಮ ಗೌರವ ಸಲ್ಲಿಸಿ ಅಮೋಘ ಸೇವೆಯನ್ನು ಸ್ಮರಿಸಿದರು. ನಂತರ ಸಕಲ ಪೊಲೀಸ್ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಪೊಲೀಸ್ ಸಿಬ್ಬಂದಿ ಶಿವ ಎಂ.ಆರ್ ಅವರು ಪೃಥ್ವಿಯ ಹ್ಯಾಂಡ್ಲರ್ ಆಗಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. *ಪೃಥ್ವಿಯ ಸಾಧನೆ* 2017 ಅಕ್ಟೋಬರ್ ನಿಂದ ಸ್ಫೋಟಕ ವಸ್ತುಗಳ ಪತ್ತೆ ಕರ್ತವ್ಯ ನಿರ್ವಹಿಸಿದೆ. ರಾಜ್ಯ ಮಟ್ಟದ ಪೊಲೀಸ್ ಕ್ರೀಡಾ ಸ್ಪರ್ಧೆಯಲ್ಲಿ 3 ಬಾರಿ ಹಾಗೂ ವಲಯ ಮಟ್ಟದ ಪೊಲೀಸ್ ಕ್ರೀಡಾ ಸ್ಪರ್ಧೆಯಲ್ಲಿ 5 ಬಹುಮಾನವನ್ನು ಪಡೆದಿದೆ. ಚೆಕ್ ಪೋಸ್ಟ್‌ಗಳಲ್ಲಿ  ಸ್ಫೋಟಕ ವಸ್ತುಗಳ ಸಾಗಾಟ ಪತ್ತೆ ಕಾರ್ಯ ನಿರ್ವಹಿಸಿದೆ. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ…

Read More

ಮಡಿಕೇರಿ ಏ.29 NEWS DESK : ಸುಮಾರು ಐದು ದಶಕಗಳ ಕಾಲ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಿಟ್ಟು ಚಂಗಪ್ಪ ಅವರ ನಿಧನಕ್ಕೆ ಕೊಡಗು ಜಿಲ್ಲಾ ಕಾಂಗ್ರೆಸ್‍ನ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ. ಕೊಡಗು ಜಿಲ್ಲಾ ಮಾಜಿ ಮೂಡಾ ಅಧ್ಯಕ್ಷ ಬಿ.ಕೆ.ಕೃಷ್ಣ, ಕೊಡವ ಅಕಾಡೆಮಿಯ ಮಾಜಿ ಅಧ್ಯಕ್ಷ ಪಿ.ಕೆ.ಪೊನ್ನಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಮಾಜಿ ಶಾಸಕರುಗಳಾದ ಅರುಣ್ ಮಾಚಯ್ಯ, ಕೆ.ಎಂ.ಇಬ್ರಾಹಿಂ, ಡಿಸಿಸಿ ಉಪಾಧ್ಯಕ್ಷರುಗಳಾದ ಸುಜು ತಿಮ್ಮಯ್ಯ, ಕೆ.ಎಂ.ಲೋಕೇಶ್, ಅಬ್ದುಲ್ ರೆಹಮಾನ್, ಅರವಿಂದ್ ಕುಟ್ಟಪ್ಪ, ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮ್ಮದ್, ಕೊಲ್ಯದ ಗಿರೀಶ್, ವಿ.ಪಿ.ಸುರೇಶ್, ಹೊಸೂರು ಸೂರಜ್, ನಗರಸಭಾ ಸದಸ್ಯರುಗಳಾದ ಎಂ.ಬಿ.ಸದಾ ಮುದ್ದಪ್ಪ, ಮೂಡ ಅಧ್ಯಕ್ಷ ಬಿ.ವೈ.ರಾಜೇಶ್, ಸದಸ್ಯರಾದ ಆರ್.ಪಿ.ಚಂದ್ರಶೇಖರ್, ಕಾನಿಹಿತ್ತಲು ಮೊಣ್ಣಪ್ಪ, ಎಂ.ಎ.ಉಸ್ಮಾನ್, ಸಭಾಸ್ಟಿನ್, ಕರೀಂ, ಶ್ರೀಧರ್ ನಾಯರ್, ಎರ್ಮು ಹಾಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಕೆಪಿಸಿಸಿ ಸದಸ್ಯರುಗಳು ಅಲ್ಲದೇ ಬೆಲ್ಲು ಬೋಪಯ್ಯ, ಕೆ.ಜಿ.ಪೀಟರ್, ನೆರವಂಡ ಉಮೇಶ್, ಚುಮ್ಮಿದೇವಯ್ಯ, ಉದಯ ಕುಮಾರ್, ಖಲೀಲ್ ಬಾಷಾ, ಕುಶಾಲಪ್ಪ,…

Read More

ಮಡಿಕೇರಿ ಏ.29 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ಮಹಾನ್ ಮಾನವತಾವಾದಿ, ಸಮಾಜ ಸುಧಾರಕ, ವಿಶ್ವಗುರು ಹಾಗೂ ಸಾಂಸ್ಕೃತಿಕ ನಾಯಕ ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮವು ಏಪ್ರಿಲ್, 30 ರಂದು ಬೆಳಗ್ಗೆ 11 ಗಂಟೆಗೆ ನಗರದ ಗಾಂಧಿ ಭವನದಲ್ಲಿ ನಡೆಯಲಿದೆ. ಗಣ್ಯರು ಪಾಲ್ಗೊಳ್ಳಲಿದ್ದಾರೆ.

Read More

ಬೆಂಗಳೂರು ಏ.29 NEWS DESK : ಬೆಂಗಳೂರಿನ ಕಮಾಂಡ್ ಆಸ್ಪತ್ರೆ ವಾಯುಪಡೆ (CHAF)ಯಲ್ಲಿ ನೂತನ ಸಂಕೀರ್ಣಕ್ಕೆ ಶಿಲಾನ್ಯಾಸ  ನಡೆಯಿತು. ತರಬೇತಿ ಕಮಾಂಡ್‌ನ ವಾಯು ಅಧಿಕಾರಿ ಕಮಾಂಡಿಂಗ್-ಇನ್-ಚೀಫ್ (AOC-in-C) ಏರ್ ಮಾರ್ಷಲ್ ನಾಗೇಶ್ ಕಪೂರ್,  ವಾಯುಪಡೆಯ ಪ್ರಧಾನ ವೈದ್ಯಕೀಯ ಸೇವೆಗಳ (ವಾಯು) ಮಹಾನಿರ್ದೇಶಕ ಏರ್ ಮಾರ್ಷಲ್ ಸಂದೀಪ್ ಥರೇಜಾ ಅವರ ಸಮ್ಮುಖದಲ್ಲಿ ಹೊಸ ಆಧುನಿಕ ಬಹುಮಹಡಿ ಆಸ್ಪತ್ರೆ ಸಂಕೀರ್ಣದ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು.  CHAFB ಯ ಪ್ರಸ್ತುತ ರಚನೆಯು 157 ವರ್ಷ ಹಳೆಯದ್ದಾಗಿದೆ. ಇದು ಸುಮಾರು 3 ಲಕ್ಷ ರೋಗಿಗಳ OPD ಅನ್ನು ನಿರ್ವಹಿಸುತ್ತದೆ, ಇಲ್ಲಿ ವಾರ್ಷಿಕವಾಗಿ 21 ಸಾವಿರ ರೋಗಿಗಳು ದಾಖಲಾಗುತ್ತಾರೆ. ಹೆಚ್ಚುತ್ತಿರುವ ಕೆಲಸದ ಹೊರೆ, ಆರೋಗ್ಯ ತಂತ್ರಜ್ಞಾನದಲ್ಲಿ ತ್ವರಿತ ಪ್ರಗತಿಯನ್ನು ಅಳವಡಿಸಿಕೊಳ್ಳುವ ಅಗತ್ಯತೆ ಇರುವ ಹಿನ್ನೆಲೆಯಲ್ಲಿ,  ಭವಿಷ್ಯದಲ್ಲಿ ವಿಸ್ತರಣೆಗೆ ಸಾಕಷ್ಟು ಅವಕಾಶವಿರುವ ಆಧುನಿಕ ಮೂಲಸೌಕರ್ಯವನ್ನು ಇದು ಒಳಗೊಂಡಿದೆ. ಈ ಯೋಜನೆಯು ಪೂರ್ಣಗೊಂಡ ನಂತರ ಅತ್ಯಾಧುನಿಕ 800 ಹಾಸಿಗೆಗಳ ಸೌಲಭ್ಯಗಳು ಲಭ್ಯವಾಗಲಿವೆ.  ಇದು 16 ಮಾಡ್ಯುಲರ್ ಆಪರೇಷನ್ ಥಿಯೇಟರ್‌ಗಳು, ಆಧುನಿಕ ಐಸಿಯುಗಳು,…

Read More

ಮಡಿಕೇರಿ ಏ.29 NEWS DESK : ಸೇವೆ ಅಂದರೆ ನಿಸ್ವಾರ್ಥವೇ, ತ್ಯಾಗವೇ, ಸ್ವಾರ್ಥದ ಮುಖವಾಡವೇ, ವೃತ್ತಿಯೊ, ಹಣ ಹಾಗೂ ಅಧಿಕಾರದ ಪ್ರಚಾರದ ಮೋಹವೊ, ನಾಯಕತ್ವದ ಪ್ರದರ್ಶನವೊ? ಬದುಕಿನ ಸಾರ್ಥಕತೆಯೊ? ಎಂಬ ನನ್ನ ಮನದಲ್ಲಿ ಮೂಡಿದ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಒಂದು ಸಣ್ಣ ಪ್ರಯತ್ನ ಈ ಬರವಣಿಗೆ ಮೂಲಕ. ಸೇವೆ ಅಂದರೆ ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಮಾಡುವ ಕೆಲಸ ಒಂದು ರೀತಿಯ ಸೇವೆ. ಇನ್ನೊಂದು ರೀತಿಯ ಸೇವೆ ಪ್ರತಿಫಲ ಪಡೆದು ಕೆಲಸ ಮಾಡುವುದು. ಅವುಗಳು ಸರ್ಕಾರಿ ಸೇವೆ, ವಿದ್ಯಾ ಕ್ಷೇತ್ರ, ನಾಗರೀಕ ಸೇವೆ, ವ್ಯದ್ಯಕೀಯ ಸೇವೆ, ಸೇನೆ, ಪೊಲೀಸ್ ಸೇರಿ ದೇಶದ ಸೇವೆ, ರೈತರದು, ವ್ಯಾಪಾರ ಸಾರಿಗೆ ಹೀಗೆ ನಾವು ಅಥವಾ ಸರಕಾರ ಸಂಘ ಸಂಸ್ಥೆಗಳು ಈ ವಿಭಾಗದ ಪಟ್ಟಿ ಮಾಡುತ್ತಾ ಹೋದರೆ ಪುಟಗಟ್ಟಲೆ ಇದೆ. ಇಲ್ಲಿ ಮಾಡುವ ಕೆಲಸಕ್ಕೆ ಪ್ರತಿಫಲ ಪಡೆದರೂ ಸೇವಾ ಮನೋಭಾವ ಇರುತಿತ್ತು. ಹಿಂದೆ ಇದ್ದ ಸೇವಾ ಮನೋಭಾವನೆ ಈಗ ಯಾವ ಕ್ಷೇತ್ರದಲ್ಲೂ ಇಲ್ಲ. ಇಂದು ಸೇವೆ…

Read More

ಮಡಿಕೇರಿ NEWS DESK ಏ.29 : ಮ್ಯಾನ್ಸ್ ಕಾಂಪೌAಡ್ ಕ್ಲಬ್ ವತಿಯಿಂದ ಮೇ 1ರಿಂದ 20ರ ವರೆಗೆ ಫುಟ್ಬಾಲ್ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಕ್ಲಬ್ ನ ಅಧ್ಯಕ್ಷ ಎ.ಎಂ.ಕ್ರಿಷ್ಟೋಫರ್ ತಿಳಿಸಿದ್ದಾರೆ. ಕೊಡಗಿನ ಪ್ರಸಿದ್ಧ ಫುಟ್ಬಾಲ್ ಕ್ಲಬ್ ಎಂ.ಸಿ.ಸಿ ವತಿಯಿಂದ 2024 ರ ಕರ್ನಾಟಕ ಮಿನಿ ಒಲಂಪಿಕ್ಸ್ ನ 14 ರ ವಯೋಮಿತಿಯ ಬಾಲಕರ ಕೊಡಗು ತಂಡವನ್ನು ತರಬೇತುಗೊಳಿಸಿದ ನುರಿತ ತರಬೇತುದಾರರಾದ ಎ.ಎಂ.ಕ್ರಿಷ್ಟೋಫರ್ ಅವರು ತರಬೇತಿ ನೀಡಲಿದ್ದಾರೆ. ಭಾರತ ದೇಶ ಹಾಗೂ ಕರ್ನಾಟಕ ರಾಜ್ಯಕ್ಕೆ ಉತ್ತಮ ಆಟಗಾರರನ್ನು ಕೊಡುಗೆಯಾಗಿ ನೀಡಿದ ಹೆಗ್ಗಳಿಕೆ ಎಂ.ಸಿ.ಸಿಯದ್ದಾಗಿದೆ. 16 ವಯೋಮಿತಿಯೊಳಗಿನ ಬಾಲಕ ಹಾಗೂ ಬಾಲಕಿಯರಿಗೆ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದ (ಮ್ಯಾನ್ಸ್ ಕಾಂಪೌಂಡ್) ಫುಟ್ಬಾಲ್ ಮೈದಾನದಲ್ಲಿ ಪ್ರತಿದಿನ ಬೆಳಿಗ್ಗೆ 6.30 ಗಂಟೆಯಿಂದ 8:30 ರವರೆಗೆ ಫುಟ್ಬಾಲ್ ತರಬೇತಿ ನೀಡಲಾಗುವುದು ಎಂದು ಎ.ಎಂ.ಕ್ರಿಷ್ಟೋಫರ್ ತಿಳಿಸಿದ್ದಾರೆ. ಪ್ರವೇಶ ಶುಲ್ಕ ಓರ್ವ ಶಿಬಿರಾರ್ಥಿಗೆ ರೂ.2 ಸಾವಿರ ಆಗಿದ್ದು, ಆಸಕ್ತರು 7019909495, 9448976406 ಕ್ಕೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳ ಬಹುದಾಗಿದೆ.

Read More

ಮಡಿಕೇರಿ ಏ.29 NEWS DESK : ಐರಿ ಕುಟುಂಬಗಳ ನಡುವೆ ಆಯೋಜಿಸಲಾಗಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ವಿಕೆಎಫ್ ಕ್ರಿಕೆಟರ್ಸ್ ತಂಡ ಅಮ್ಮಣಂಡ ಕಪ್-2025 ನ್ನು ಮುಡಿಗೇರಿಸಿಕೊಂಡಿತು. ಮೂರ್ನಾಡಿನ ಬಾಚಿಟ್ಟಿರ ದಿ.ಲಾಲುಮುದ್ದಯ್ಯ ಕ್ರೀಡಾಂಗಣದಲ್ಲಿ ಹೊದ್ದೂರು ಅಮ್ಮಣಂಡ ಕುಟುಂಬದ ವತಿಯಿಂದ ಆಯೋಜಿಸಲಾಗಿದ್ದ ಮೂರು ದಿನಗಳ ಐರಿ ಕೌಟುಂಬಿಕ ಉತ್ಸವ-2025 ರ ಅಂತಿಮ ಪಂದ್ಯದಲ್ಲಿ ವಿಕೆಎಫ್ ಕ್ರಿಕೆಟರ್ಸ್ ತಂಡ ಇಬ್ನಿವಳವಾಡಿಯ ಮಾಲೇರ ಸ್ಟ್ರೈಕರ್ಸ್ ತಂಡದ ವಿರುದ್ಧ ಗೆಲುವು ಸಾಧಿಸಿತು. ಮಾಲೇರ ಸ್ಟ್ರೈಕರ್ಸ್ ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು. ಮೂರು ದಿನಗಳ ಕಾಲ ನಡೆದ ಐರಿ ಜನಾಂಗದವರ ಕ್ರಿಕೆಟ್ ಟೂರ್ನಿಯಲ್ಲಿ ವಿವಿಧ ಭಾಗಗಳ 10 ತಂಡಗಳು ಪಾಲ್ಗೊಂಡಿದ್ದವು. ಅಂತಿಮ ಪಂದ್ಯವನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಉದ್ಘಾಟಿಸಿ ಮಾತನಾಡಿ ಜಿಲ್ಲೆಯಲ್ಲಿ ವಿವಿಧ ಜನಾಂಗಗಳು ಕ್ರೀಡಾಕೂಟವನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಯಾವುದೇ ಜಾತಿ, ಧರ್ಮದ ಸಂಸ್ಸ್ಕೃತಿ, ಸಾಹಿತ್ಯ, ಕ್ರೀಡೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. ಕೊಡವ ಭಾಷಿಕ ಸಮುದಾಯಗಳ ಒಕ್ಕೂಟದ ಅಧ್ಯಕ್ಷ…

Read More

ಮಡಿಕೇರಿ ಏ.29 NEWS DESK : ಕೊಡಗು ಜಿಲ್ಲೆಯಾದ್ಯಂತ ಆಗಾಗ ಮಳೆ ಬೀಳುತ್ತಿದ್ದು, ಗಾಳಿಯೂ ಸಹ ಇದೆ. ಹೆಚ್ಚಿನ ಬಿರುಗಾಳಿಯಿಂದ ವಿದ್ಯುತ್ ಸರಬರಾಜಿನಲ್ಲಿ ಅಡಚಣೆಗಳು ಉಂಟಾಗುತ್ತಿದ್ದು, ವಿದ್ಯುತ್ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಸಾರ್ವಜನಿಕರು ಯಾವುದೇ ರೀತಿಯ ವಿದ್ಯುತ್ ಜಾಲದ ವ್ಯತ್ಯಯಗಳನ್ನು (ವಿದ್ಯುತ್ ಮಾರ್ಗದ ತಂತಿ ಹಾಗೂ ಕಂಬಗಳು ತುಂಡಾಗುವುದು) ಗಮನಿಸಿದಲ್ಲಿ, ಸ್ವತಃ ಕ್ರಮಕೈಗೊಳ್ಳದೇ (ವಿದ್ಯುತ್ ತಂತಿ ಸ್ಪರ್ಶಿಸದೇ) ತಕ್ಷಣ ಚಾ.ವಿ.ಸ.ನಿನಿ.ಯ ದೂರವಾಣಿ ಸಂಖ್ಯೆಗಳಲ್ಲಿ ತಮ್ಮ ದೂರುಗಳನ್ನು ದಾಖಲಿಸುವಂತೆ ಕೋರಿದೆ. ಗ್ರಾಹಕರು ಸಂಪರ್ಕಿಸಲು ಸಾಧ್ಯವಾಗದಿದ್ದಲ್ಲಿ ಪರ್ಯಾಯವಾಗಿ ವಾಟ್ಸ್‍ಅಪ್ ಮೂಲಕ ಪೋಟೋ ಸಂದೇಶ ನೀಡಬಹುದಾಗಿದೆ. ಕೊಡಗು ಜಿಲ್ಲೆಯ (24*7) ಸಹಾಯವಾಣಿ ಸಂಖ್ಯೆ ಸರ್ವೀಸ್ ಸೆಂಟರ್‍ನ ದೂರವಾಣಿ ಸಂಖ್ಯೆ 1912, ಗ್ರಾಹಕರ ಸೇವಾ ಕೇಂದ್ರ ಸಂಖ್ಯೆ 9449598665. ಮಡಿಕೇರಿ ತಾಲ್ಲೂಕಿನ ಮಡಿಕೇರಿ ತಾಳತ್‍ಮನೆ, ಮೂರ್ನಾಡು, ಸಂಪಾಜೆ, ಭಾಗಮಂಡಲ, ನಾಪೋಕ್ಲು ಹಾಗೂ ಗ್ರಾಹಕರ ಸೇವಾ ಕೇಂದ್ರಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿನಯ ಕುಮಾರ್ 9449598602, ಸಹಾಯಕ/ ಜೂನಿಯರ್ ಎಂಜಿನಿಯರ್‍ಗಳು ಮಡಿಕೇರಿಗೆ ಚೈತ್ರ 9449598603, ತಾಳತ್‍ಮನೆ ಹೇಮಂತ್…

Read More

ಮಡಿಕೇರಿ NEWS DESK ಏ.29 : ಮಡಿಕೇರಿ ನಗರ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಪ್ರಭು ರೈ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಡಿಕೇರಿ ತಾಲ್ಲೂಕು ಬಂಟರ ಸಂಘದ ನಿರ್ಗಮಿತ ಅಧ್ಯಕ್ಷ ರಮೇಶ್ ರೈ ಅವರ ಅಧ್ಯಕ್ಷತೆಯಲ್ಲಿ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಪ್ರಭು ರೈ ಅವರನ್ನು ಆಯ್ಕೆ ಮಾಡಲಾಯಿತು.

Read More

ಬೆಂಗಳೂರು ಏ.29 NEWS DESK : “2025 ನೇ ಸಾಲಿನ ಹಜ್ ಯಾತ್ರಿಕರ ವಿಮಾನಯಾನಕ್ಕೆ” ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ಕರ್ನಾಟಕ ರಾಜ್ಯ ಹಜ್ ಸಮಿತಿ ಆಯೋಜಿಸಿದ್ದ ಸಮಾರಂಭದಲ್ಲಿ 2025 ನೇ ಸಾಲಿನ ಹಜ್ ಯಾತ್ರಿಕರ ವಿಮಾನಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು  ದೇಶದ ಒಳಿತಿಗೆ ಕನ್ನಡಿಗರ ಪರವಾಗಿ ಪ್ರಾರ್ಥಿಸಿ ಎಂದು ಹಜ್ ಯಾತ್ರಿಕರಲ್ಲಿ ಮನವಿ ಮಾಡುತ್ತೇನೆ. ಎಲ್ಲ ಧರ್ಮದವರೂ ಒಂದೇ ತಾಯಿಯ ಮಕ್ಕಳಂತೆ ಬದುಕುವುದೇ ಸಮಾಜಕ್ಕೆ ನೀಡುವ ಉತ್ತಮ ಕೊಡುಗೆ ಎಂದರು. ಈ ವರ್ಷ ಸುಮಾರು 8,635 ಜನ ಯಾತ್ರಿಕರು ಹಜ್ ಯಾತ್ರೆಗೆ ಹೊರಟಿದ್ದು, ಮುಂದಿನ ತಿಂಗಳ 15ರವರೆಗೆ ಸುಮಾರು 27 ವಿಮಾನಗಳಲ್ಲಿ ಪ್ರಯಾಣ ಕೈಗೊಳ್ಳಲಿದ್ದಾರೆ. ಪ್ರತಿಯೊಬ್ಬ ಮುಸಲ್ಮಾನ ತಮ್ಮ ಜೀವತಾವಧಿಯಲ್ಲಿ ಒಮ್ಮೆಯಾದರೂ ಹಜ್ ಯಾತ್ರೆ ಕೈಗೊಳ್ಳಬೇಕೆಂಬುದು ಅವರ ಪವಿತ್ರ ಆಚರಣೆಗಳಲ್ಲಿ ಒಂದಾಗಿದೆ. ಹಜ್ ಯಾತ್ರಿಕರೆಲ್ಲರಿಗೂ ಅವರ ಪ್ರಯಾಣ ಸುಖಕರವಾಗಿಲಿ ಎಂದು ಹಾರೈಸುತ್ತೇನೆ. ಪವಿತ್ರ ಮೆಕ್ಕಾದಲ್ಲಿ ದೇಶದ ಒಳಿತಿಗೆ, ಭಾರತೀಯರ ಅದರಲ್ಲಿಯೂ ಕನ್ನಡಿಗರ ಪರವಾಗಿ ಪ್ರಾರ್ಥನೆ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ. ನಮ್ಮ…

Read More