*ಮೈದಾನ 1* ಬೆಳಿಗ್ಗೆ 9 ಗಂಟೆಗೆ – ನಾಳಿಯಂಡ ಮತ್ತು ಕೊಂಗೇಟಿರ 10 ಗಂಟೆಗೆ – ಕೋಟೇರ ಮತ್ತು ಪುದಿಯೊಕ್ಕಡ 11 ಗಂಟೆಗೆ – ಚೆಪ್ಪುಡಿರ ಮತ್ತು ಅಟ್ರಂಗಡ ಮಧ್ಯಾಹ್ನ 1 ಗಂಟೆಗೆ – ಮೇಕೇರಿರ ಮತ್ತು ಅಂಜಪರವಂಡ 2 ಗಂಟೆಗೆ- ಚಂಗುಲಂಡ ಮತ್ತು ಮೇಚಿಯಂಡ 3 ಗಂಟೆಗೆ – ಬೊಟ್ಟೋಳಂಡ ಮತ್ತು ಚೇಂದಂಡ
ಲೇಖಕ: admin
*ಮೈದಾನ 2* ಬೆಳಿಗ್ಗೆ 9:30 ಗಂಟೆಗೆ – ತಾತಂಡ ಮತ್ತು ಪಾಂಡಿರ (ಹೆಬ್ಬೆಟ್ಟಗೇರಿ) 10 ಗಂಟೆಗೆ – ಕಾಂಡಂಡ ಮತ್ತು ಬೋವೇರಿಯಂಡ 10:30 ಚೆಪ್ಪುಡಿರ ಮತ್ತು ಪಾಳೆಯಂಡ 11 ಗಂಟೆಗೆ ಮಾಳೇಟಿರ (ಕೆದಮುಳ್ಳೂರು) ಮತ್ತು ಅಮ್ಮಾಟಂಡ 11:30 – ಮುಕ್ಕಾಟಿರ (ಹರಿಹರ) ಮತ್ತು ಕೇಚೇಟಿರ ಮಧ್ಯಾಹ್ನ 12 ಗಂಟೆಗೆ – ಬಿದ್ದಾಟಂಡ ಮತ್ತು ಚೋಯಮಾಡಂಡ 12:30 – ಕೊಟ್ಟಂಗಡ ಮತ್ತು ನಾಪಂಡ 1:30 – ಚಂದಂಗಡ ಮತ್ತು ಕುಪ್ಪಂಡ (ಕೈಕೆರ) 2 ಗಂಟೆಗೆ – ಮಾಚಿಮಂಡ ಮತ್ತು ಚೇಂದಿರ 2:30 – ಚೌರಿರ (ಹೊದವಾಡ) ಮತ್ತು ಮನೆಯಪಂಡ 3 ಗಂಟೆಗೆ – ಮೇವಡ ಮತ್ತು ಕಾಯಪಂಡ 3:30 – ಮುರುವಂಡ ಮತ್ತು ಅಚ್ಚಪಂಡ 4 ಗಂಟೆಗೆ – ತೆಕ್ಕಡ ಮತ್ತು ಕುಟ್ಟಂಡ (ಕಾರ್ಮಾಡ್) 4:30 – ಬಲ್ಲಂಡ ಮತ್ತು ಚೇನಂಡ 5 ಗಂಟೆಗೆ ಕುಟ್ಟಂಡ (ಮಾದಾಪುರ) ಮತ್ತು ಬೈರಾಜಂಡ 5:30 – ಪರದಂಡ ಮತ್ತು ಪಾಲಂದಿರ
ಮೈದಾನ 1 : ಕೂತಂಡ ಮತ್ತು ಪೆಮ್ಮಂಡ ತಂಡಗಳ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕೂತಂಡ ತಂಡ ಜಯ ಸಾಧಿಸಿತು. ಕೂತಂಡ ಪರ ಸಂತೋಷ್ ಮೇದಪ್ಪ 1 ಗೋಲು ದಾಖಲಿಸಿದರು. ಪೆಮ್ಮಂಡ ಸುಹಾನ್ ಮಂದಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಅಮ್ಮಣಿಚಂಡ ಮತ್ತು ಬೊವ್ವೇರಿಯಂಡ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಅಮ್ಮಣಿಚಂಡ ಜಯ ಸಾಧಿಸಿತು. ಅಮ್ಮಣಿಚಂಡ ಪರ ವಿಘ್ನೇಶ್ ಬೋಪಣ್ಣ 1 ಗೋಲು ದಾಖಲಿಸಿದರು. ಬೊವ್ವೇರಿಯಂಡ ಗ್ಯಾನ್ ಉತ್ತಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ನೆರವಂಡ ಮತ್ತು ಮಂಡೇಪಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‍ನಲ್ಲಿ 4-3 ಗೋಲುಗಳ ಅಂತರದಲ್ಲಿ ಮಂಡೇಪಂಡ ಗೆಲುವು ದಾಖಲಿಸಿತು. ನೆರವಂಡ ಬೋಪಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಸಣ್ಣುವಂಡ ಮತ್ತು ಸೋಮೆಯಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ತಲಾ 1 ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ…
ಮಡಿಕೇರಿ ಏ.20 NEWS DESK : ವಿರಾಜಪೇಟೆ ಪುರಸಭೆಯ ಕಾಂಗ್ರೆಸ್ ಸದಸ್ಯರೊಂದಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ವಿಶೇಷ ಸಭೆ ನಡೆಸಿದರು. ಸಭೆಯಲ್ಲಿ ಪುರಸಭೆಯ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರುಗಳನ್ನು ಆಯ್ಕೆ ಮಾಡುವ ಕುರಿತು ಚರ್ಚಿಸಿ, ಒಮ್ಮತದ ಇಬ್ಬರನ್ನು ಸ್ಥಾಯಿ ಸಮಿತಿಗಳಿಗೆ ಆಯ್ಕೆ ಮಾಡಲು ತೀರ್ಮಾನಿಸಲಾಯಿತು. ವಿರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಈಗಾಗಲೇ ಕೈಗೊಂಡಿರುವ ಕಾಮಗಾರಿಗಳ ಪ್ರಗತಿಯ ಬಗ್ಗೆ ಮಾಹಿತಿ ಪಡೆದ ಶಾಸಕರು ಸದಸ್ಯರುಗಳೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ವಿರಾಜಪೇಟೆ ನಗರದ ಜನತೆಗೆ ಅನುಕೂಲ ಆಗುವ ನಿಟ್ಟಿನಲ್ಲಿ, ಪುರಸಭೆ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಕೆಲಸ ಕಾರ್ಯಗಳ ಬಗ್ಗೆ ಸದಸ್ಯರುಗಳೊಂದಿಗೆ ಚರ್ಚಿಸಿದರು. ಸಭೆಯಲ್ಲಿ ಪುರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಕಾಂಗ್ರೆಸ್ ಸದಸ್ಯರುಗಳು ಉಪಸ್ಥಿತರಿದ್ದರು.
ಮಡಿಕೇರಿ ಏ.20 NEWS DESK : ಮಡಿಕೇರಿಯ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಗೌಳಿಬೀದಿಯ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಕೇರಳದ ಶ್ರೀ ಈಶ್ವರ ನಂಬೂದರಿ ಅವರ ನೇತೃತ್ವದಲ್ಲಿ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿತು. ಏ.18ರಂದು ಸಂಜೆ ಆಚಾರ್ಯರ ಆಗಮನ ಪುಣ್ಯಾಹ ಶುದ್ಧಿ, ದೇವಿ ಪೂಜೆ, ಸುದರ್ಶನ ಹೋಮ ಮತ್ತು ಪ್ರಸಾದ ವಿತರಣೆ ನಡೆಯಿತು. ಮರುದಿನ ಶ್ರೀ ಮಹಾ ಗಣಪತಿ ಹೋಮ, ಐಕ್ಯಮತ್ಯ ಸುಕ್ರದ ಹೋಮ, ಕಳಸ ಪೂಜೆ, ದೇವಿಗೆ ಅಭಿಷೇಕ, ಅಲಂಕಾರ ಪೂಜೆ ಮತ್ತು ಮಹಾ ಮಂಗಳಾರತಿ ನೆರವೇರಿತು. ಬಳಿಕ ಭಕ್ತರಿಗೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ನಗರದ ವಿವಿಧೆಡೆಯಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ವಾರ್ಷಿಕೋತ್ಸವದ ಅಂಗವಾಗಿ ದೇವಾಲಯ ಸಮಿತಿ ವತಿಯಿಂದ ಶ್ರೀ ಕಂಚಿ ಕಾಮಾಕ್ಷಿಯಮ್ಮ ಹಾಗೂ ಶ್ರೀ ಮುತ್ತು ಮಾರಿಯಮ್ಮ ದೇವಿಯ ಮೂಲ ವಿಗ್ರಹಗಳಿಗೆ ಸ್ವರ್ಣ…
ಮಡಿಕೇರಿ ಏ.20 NEWS DESK : ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ಕಾರ್ಯಕರ್ತ ಉಮ್ಮಣ ಕುಟ್ಟಡ ಸುರೇಶ್ ಮನೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣ್ಣಚ್ಚ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಕಣಿವೆ ಏ.20 NEWS DESK : ಉದ್ಘಾಟನೆಗೊಳ್ಳದೇ ಕಳೆದ ಎರಡು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಕುಶಾಲನಗರ ಪುರಸಭಾ ವ್ಯಾಪ್ತಿಯ ಗುಮ್ಮನಕೊಲ್ಲಿಯಲ್ಲಿರುವ ಒಳಚರಂಡಿ ಕಾಮಗಾರಿಯ ಮಲಿನ ನೀರು ಶುದ್ಧೀಕರಣ ಘಟಕಕ್ಕೆ ಕೊಡಗು ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಇತ್ತೀಚಿಗಷ್ಟೇ ಕುಶಾಲನಗರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಯುಜಿಡಿ ಕಾಮಗಾರಿ ಪೂರ್ಣಗೊಳ್ಳದೇ ಇರುವ ಬಗ್ಗೆ ಹಾಗೂ ಪೂರ್ಣಗೊಂಡಿರುವ ಪ್ರದೇಶದ ಯುಜಿಡಿ ಜನರ ಬಳಕೆಗೆ ಲಭ್ಯವಾಗುವಂತೆ ಪುರಸಭೆ ಸದಸ್ಯರು ಜಲಮಂಡಳಿ ಅಧಿಕಾರಿಗಳಿಗೆ ಒತ್ತಾಯಿಸಿದ್ದರು. ಪುರಸಭೆ ಅಧಿಕಾರಿಗಳು ಹಾಗೂ ಜಲಮಂಡಳಿ ಅಧಿಕಾರಿಗಳ ಒತ್ತಾಸೆಗೆ ಒಗೊಟ್ಟ ಜಿಲ್ಲಾಧಿಕಾರಿ ವೆಂಕಟರಾಜ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ ಪ್ರಕಾಶ್ ಮೀನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಅಲ್ಲದೆ ಸ್ಥಳದಲ್ಲಿದ್ದ ಜಲಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಸನ್ನಕುಮಾರ್ ಅವರಲ್ಲಿ ಯುಜಿಡಿ ಕಾಮಗಾರಿ ಬಗ್ಗೆ ಸಂಪೂರ್ಣ ಸಾಧಕ ಬಾಧಕಗಳ ಮಾಹಿತಿ ಪಡೆದುಕೊಂಡರು. ಕುಶಾಲನಗರ ಪುರಸಭಾ ವ್ಯಾಪ್ತಿಯಲ್ಲಿ 71 ಕಿಮೀ ಯುಜಿಡಿ ಕಾಮಗಾರಿ ಪೂರ್ಣಗೊಂಡಿದ್ದು, 6000 ಮನೆಗಳಿಗೆ…
ನಾಪೋಕ್ಲು ಏ.20 NEWS DESK : ಕಾಂತೂರು ಗ್ರಾಮದ ಬೊಳ್ತಜೀರ ನೂತನ ಐನ್ ಮನೆಯಲ್ಲಿ ಶ್ರೀ ವೆಂಕಟರಮಣ ದೇವರ ಹರಿಸೇವೆ ಹಾಗೂ ದೈವಗಳ ಕೋಲ ಶ್ರದ್ಧಾ ಭಕ್ತಿಯಿಂದ ಜರುಗಿತು. ಐದು ವರ್ಷಕ್ಕೆ ಒಮ್ಮೆ ಜರುಗುವ ಹರಿಸೇವೆಯಲ್ಲಿ ಭಕ್ತಾದಿಗಳು ಹರಕೆ ಸೇವೆ ಸಲ್ಲಿಸಿದರು. ಬಳಿಕ ವಂಶಪರಂಪರೆಯಿಂದ ನಡೆಸಿಕೊಂಡು ಬರುತ್ತಿರುವ ಕೊರತ್ತಿ, ಪೊಟ್ಟ ದೈವ, ಗುಳಿಗ, ಅಂಗರೆ, ಚೌಂಡಿ ದೈವ ಕೋಲಗಳು ಸಾಂಪ್ರದಾಯಿಕವಾಗಿ ನೆರವೇರಿತು. ಈ ಸಂದರ್ಭ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ಕಾರ್ಯಕ್ರಮ ಮುಖ್ಯಸ್ಥರಾದ ಸಿದ್ದಾರ್ಥ (ನಂದ) ಅವರ ಮಂದಾರತ್ವದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿತು. ವರದಿ : ದುಗ್ಗಳ ಸದಾನಂದ
ಮಡಿಕೇರಿ ಏ.20 NEWS DESK : ಕೊಡಗಿನ ಸಾಹಿತಿ ಟಿ.ಶೆಟ್ಟಿಗೇರಿಯ ಉಳುವಂಗಡ ಕಾವೇರಿ ಉದಯ ಅವರಿಗೆ ದಾವಣಗೆರೆಯಲ್ಲಿ ಕನ್ನಡ ಬಹುಭಾಷಾ ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿದ್ಯಾಧರ ಕನ್ನಡ ಪ್ರತಿಷ್ಠಾನ, ದಾವಣಗೆರೆ ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಸ್ಫೂರ್ತಿ ಪ್ರಕಾಶನ ತೆಲಿಗಿ, ಜ್ಞಾನ ಪ್ರಕಾಶನ ಮತ್ತು ಜ್ಞಾನ ಪ್ರಕಾಶನ ಸಂಸ್ಥೆಯ ವತಿಯಿಂದ ಮಾತೋಶ್ರೀ ಜಾನಕಿಬಾಯಿ ರಂಗರಾವ ಮುತಾಲಿಕ ದೇಸಾಯಿ ಸಂಸ್ಮರಣೆಯ ಅಂಗವಾಗಿ ದಾವಣಗೆರೆಯ ವಿದ್ಯಾನಗರದ ಕುವೆಂಪು ಕನ್ನಡ ಭವನದಲ್ಲಿ ನಡೆದ ಕನ್ನಡ ನುಡಿತೇರು ಕಾರ್ಯಕ್ರಮದಲ್ಲಿ ವಿದ್ಯಾಧರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ವಿದ್ಯಾಧರ ಮುತಾಲಿಕ ದೇಸಾಯಿ ಅವರು ಉಳುವಂಗಡ ಕಾವೇರಿ ಉದಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ದಾವಣಗೆರೆಯ ಸ್ಫೂರ್ತಿ ಪ್ರಕಾಶನದ ಅಧ್ಯಕ್ಷ ಎಂ.ಬಸವರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ ಉದ್ಘಾಟಿಸಿದರು. *ಉಳುವಂಗಡ ಕಾವೇರಿ ಉದಯ* *ಕಿರುಪರಿಚಯ* ಟಿ.ಶೆಟ್ಟಿಗೇರಿ ನಿವಾಸಿ ಚಂಗುಲಂಡ ಸಿ ಮಾದಪ್ಪ ಸರಸ್ವತಿ ದಂಪತಿಗಳ…
ನಾಪೋಕ್ಲು ಏ.20 NEWS DESK : ಮೇರಿಮಾತೆಯ ದೇವಾಲಯದ ಕ್ರೈಸ್ತ ಬಾಂಧವರು ಶುಭ ಶುಕ್ರವಾರವನ್ನು ಪ್ರಾರ್ಥನೆ ಮತ್ತು ಉಪವಾಸದ ಮೂಲಕ ಗುಡ್ ಆಚರಿಸಿದರು. ಧರ್ಮಗಳಾದ ಜ್ಞಾನ ಪ್ರಕಾಶ್ ಮಾತಾಡಿ, ಈ ಶುಭ ಶುಕ್ರವಾರದಂದು ನಾವು ಪರರನ್ನು ಪ್ರೀತಿಸಿ, ಏಸುಕ್ರಿಸ್ತರ ಆದರ್ಶವನ್ನು ಅನುಸರಿಸಿ ಅವರ ಹಂಗಿನಲ್ಲಿ ಬದುಕಬೇಕು. ಕತ್ತಲೆಯಿಂದ ಬೆಳಕಿನೆಡೆಗೆ ನಡೆಯುವ ಕಾರ್ಯಕ್ಕೆ ನಾಂದಿ ಆಗಬೇಕೆಂದು ಹೇಳಿದರು. ಈ ಸಂದರ್ಭ ಪಾಲನಾ ಸಮಿತಿಯ ಸದಸ್ಯರು, ಯುವಕ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವರದಿ : ವರದಿ ದುಗ್ಗಳ ಸದಾನಂದ.






