ಲೇಖಕ: admin

ಮಡಿಕೇರಿ ಮೇ 13 NEWS DESK : ಮದೆನಾಡು ಬಳಿ ಕೊಡಗು ಗೌಡ ಸಮಾಜದ ಅಭಿವೃದ್ಧಿಗೆ ಸರ್ಕಾರದಿಂದ 6 ಎಕರೆ ಭೂಮಿ ಕಾಯ್ದಿರಿಸಿದೆ. ಹಾಗೆಯೇ ಭಾಗಮಂಡಲ ಗೌಡ ಸಮಾಜ ನೂತನ ಕಟ್ಟಡ ನಿರ್ಮಾಣಕ್ಕೆ ಒಂದು ಕೋಟಿ ರೂ. ನಿಗದಿ ಮಾಡಿದೆ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ತಿಳಿಸಿದ್ದಾರೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾಮದ ಅರೆಭಾಷೆ, ಸಂಸ್ಕøತಿ ಮತ್ತು ಅಭಿವೃದ್ಧಿ ಸಂಘ ಇವರ ಸಹಕಾರದಲ್ಲಿ ತೋರ ಸಮುದಾಯ ಭವನದ ಆವರಣದಲ್ಲಿ ನಡೆದ ಅರೆಭಾಷೆ ಗಡಿನಾಡ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಬೆಂಗಳೂರಿನಲ್ಲಿ ನವೆಂಬರ್ ತಿಂಗಳಲ್ಲಿ ನಡೆದ ಗೌರವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದಂತೆ 6 ಎಕರೆ ಭೂಮಿ ನೀಡಿದ್ದಾರೆ. ಹಾಗೆಯೇ ಭಾಗಮಂಡಲ ಗೌಡ ಸಮಾಜ…

Read More

ಮಡಿಕೇರಿ ಮೇ 13 NEWS DESK : ಜಿಲ್ಲೆಯಲ್ಲಿ ಅಕ್ರಮ ಮತ್ತು ಅನಧಿಕೃತ ಹೋಂಸ್ಟೇಗಳ ಪತ್ತೆ ಹಾಗೂ ಪ್ರವಾಸಿಗರ ಸುರಕ್ಷತೆಗಾಗಿ ಪ್ರವಾಸೋದ್ಯಮ, ಪೊಲೀಸ್ ಮತ್ತು ಕಂದಾಯ ಇಲಾಖೆಯ ಜಂಟಿ ಆಶ್ರಯದಲ್ಲಿ ಸರ್ವೆ ಕಾರ್ಯ ಆರಂಭಗೊಂಡಿದ್ದು, ನೋಂದಣಿ ಆಗದೆ ಇರುವ ಹೋಂಸ್ಟೇ ಮಾಲೀಕರು ಕಾಲಮಿತಿಯಲ್ಲಿ ಸ್ಥಳೀಯ ಪೊಲೀಸ್ ಠಾಣೆ, ನಗರಸಭೆ, ಪುರಸಭೆ ಅಥವಾ ಗ್ರಾಮ ಪಂಚಾಯಿತಿಯಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ (ಎನ್‍ಒಸಿ) ಪಡೆದು ಪ್ರವಾಸೋದ್ಯಮ ಇಲಾಖೆಯಲ್ಲಿ ಕಡ್ಡಾಯವಾಗಿ ನೋಂದಯಿಸಿಕೊಳ್ಳಬೇಕು, ತಪ್ಪಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ವಿಭಾಗಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ನಿತಿನ್ ಚಕ್ಕಿ ಅವರು ಎಚ್ಚರಿಸಿದ್ದಾರೆ. ನಗರದ ಉಪ ವಿಭಾಗಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಹೋಂಸ್ಟೇ/ ಬೆಡ್ ಮತ್ತು ಬ್ರೇಕ್ ಪಾಸ್ಟ್/ ಹೋಟೆಲ್‍ಗಳ ಸುರಕ್ಷತೆ ಕುರಿತು ಭಿತ್ತಿಪತ್ರ ಬಿಡುಗಡೆ ಮಾಡಿ ಹೋಂಸ್ಟೇಗಳ ಮಾಲೀಕರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಅಧಿಕಾರಿಗಳು ಹೋಂ-ಸ್ಟೇಗಳ ಸರ್ವೇ ನಡೆಸುವ ಸಂದರ್ಭದಲ್ಲಿ ಮಾಲೀಕರು ಸರಿಯಾದ ಮಾಹಿತಿ ನೀಡಬೇಕು. ಈ ಹಿಂದೆ…

Read More

ಮೈಸೂರು ಮೇ 13 NEWS DESK : ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿ ಯಾದವಗಿರಿ ಗೂಡ್ಸ್‌ ಟರ್ಮಿನಲ್‌ ರಸ್ತೆಯನ್ನು ಲಾರಿಗೆಳಿಗೆ ಸಂಚಾರ ಮುಕ್ತ ಮಾಡಿಸುವಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಯಶಸ್ವಿಯಾಗಿದ್ದಾರೆ. ಯಾದವಗಿರಿ ಬಳಿಯ ಗೂಡ್ಸ್‌ ಟರ್ಮಿನಲ್‌ ರಸ್ತೆಯನ್ನು ಬಂದ್‌ ಮಾಡಿದ್ದರಿಂದ ಲಾರಿಗಳು ಐದಾರು ಕಿಲೋ ಮೀಟರ್‌ ಬಳಸಿ ಬರಬೇಕಾಗಿತ್ತು. ಇದರಿಂದ ಲಾರಿ ಮಾಲೀಕರಿಗೆ ಸಾವಿರಾರು ರೂಪಾಯಿ ನಷ್ಟವಾಗುತ್ತಿತ್ತು. ಈ ಕುರಿತು ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ಹತ್ತು ದಿನಗಳ ಹಿಂದೆ ಸಂಸದ ಯದುವೀರ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಯದುವೀರ್‌ ಒಡೆಯರ್‌ ರೈಲ್ವೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ರೈಲ್ವೆ ಗೂಡ್ಸ್‌ ಟರ್ಮಿನಲ್‌ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದರು. ನಂತರ ಮಾತನಾಡಿದ ಸಂಸದ ಯದುವೀರ್‌ ಒಡೆಯರ್‌, ಈ ಸಮಸ್ಯೆ ಕುರಿತು ನನ್ನ ಗಮನಕ್ಕೆ ಬಂದ ಕೂಡಲೇ ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿದೆ. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಅಧಿಕಾರಿಗಳು ಬೈಪಾಸ್‌…

Read More

ಮಡಿಕೇರಿ ಮೇ 13 NEWS DESK : ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಬಾರಿಕಾಡು ಗ್ರಾಮದಲ್ಲಿ  ರೂ.30 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ನೂತನ ರಸ್ತೆಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಶಾಸಕರು, ಸಾರ್ವಜನಿಕರು ಇದರ ಸದ್ಬಳಕೆಯನ್ನು ಮಾಡುತ್ತ ನಾಡಿದ ಒಳಿತಿಗಾಗಿ ಪ್ರತಿಯೊಬ್ಬರು ಶ್ರಮಿಸಬೇಕೆಂದು ಕರೆ ನೀಡಿದರು. ಈ ಸಂದರ್ಭ ಬ್ಲಾಕ್ ಅಧ್ಯಕ್ಷರು ಪಟ್ಟಡ ರಂಜಿ ಪೂಣಚ್ಚ, ಕೆಡಿಪಿ ಸದಸ್ಯರು ಪ್ರಶಾಂತ್, ಪ್ರಚಾರ ಸಮಿತಿಯ ಅಧ್ಯಕ್ಷರು ಮತೀನ್, ತಾಲೂಕು ಅಲ್ಪಸಂಖ್ಯಾತರ ಅಧ್ಯಕ್ಷರು ರಫೀಕ್, ಮಾಜಿ ಪುರಸಭೆ ಅಧ್ಯಕ್ಷರು ದೇಚಮ್ಮ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರು ಅಧ್ಯಕ್ಷರು ಶಬೀರ್, ಬೂತ್ ಅಧ್ಯಕ್ಷರು ವಿಜಯ್ ಕುಮಾರ್, ಮಾಜಿ ಅಧ್ಯಕ್ಷರು ಜೆಫ್ರೀ ಉತ್ತಪ್ಪ, ಇಸ್ಮಾಯಿಲ್, ಆಲಿ, ಮಳೇಟೀರ ಶುಭ ಸುಬ್ಬಯ್ಯ, ಸೂರಜ್ ಹೊಸೂರು, ಕುಂಡಚ್ಚಿರ ಮಂಜು ದೇವಯ್ಯ, ಜಿತನ್, ಧ್ಯಾನಿ, ಪಾಲಂಗಾಲ ಬೂತ್ ಅಧ್ಯಕ್ಷರು ಜಾಲು ಚೆಂಗಪ್ಪ,ಮಿಟ್ಟು ಅಯ್ಯಪ್ಪ, ಹರಿದಾಸ್,ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Read More

ಮಡಿಕೇರಿ ಮೇ 13 NEWS DESK :  ಕ್ಷೇತ್ರದ ಜನತೆಯನ್ನು ದಶಕಗಳಿಂದ ಕಾಡುತ್ತಿರುವ ಆನೆ-ಮಾನವ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ, ಈಗಾಗಲೇ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ಹಲವಾರು ಪ್ರಮುಖ ನಿರ್ಣಯಗಳನ್ನು ಕೈಗೊಂಡು, ಕ್ಷೇತ್ರಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ. ಅದರ ಭಾಗವಾಗಿ ವಿರಾಜಪೇಟೆ ತಾಲೂಕು ಪಾಲಂಗಾಲ ಗ್ರಾಮಕ್ಕೆ ಆಗಮಿಸಿದ ಶಾಸಕರು, ಈ ಭಾಗದಲ್ಲಿ ಅರಣ್ಯ ಇಲಾಖೆ ವತಿಯಿಂದ ಆನೆ ಹಾವಳಿ ತಡೆಗಟ್ಟಲು ರೂ.28 ಲಕ್ಷ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಹ್ಯಾಂಗಿಂಗ್ ಸೋಲಾರ್ ಪೆನ್ಸಿಂಗ್ ಕಾಮಗಾರಿಗೆ ಚಾಲನೆ ನೀಡಿದರಲ್ಲದೆ, ಈಗಾಗಲೇ ಈ ಸಂಬಂಧ ನಡೆಯುತ್ತಿರುವ ಕಾಮಗಾರಿಯ ವೀಕ್ಷಣೆ ಹಾಗೂ ಅಧಿಕಾರಿಗಳಿಂದ ಇದರ ಬಗ್ಗೆ ಸಂಪೂರ್ಣ ವಿವರಣೆಗಳನ್ನು ಪಡೆದರು. ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆ ವತಿಯಿಂದ ಅರಣ್ಯ ಗಂಚಿನಲ್ಲಿ ವಾಸಿಸುತ್ತಿರುವ ಮಹಿಳೆಯರು ಸ್ವಾವಲಂಬಿ ಆಗಲು ನೀಡುವ ಹೊಲಿಗೆ ಯಂತ್ರ ಹಾಗೂ ಇತರ ಸೌಲತ್ತುಗಳನ್ನು ಶಾಸಕರು ವಿತರಿಸಿದರು.  ಬಳಿಕ ಮಾತನಾಡಿದ ಶಾಸಕರು, ತನ್ನ ಕೋರಿಕೆ ಹಾಗೂ ಪ್ರಯತ್ನದ ಮೇರೆಗೆ, ಕರ್ನಾಟಕ…

Read More

ಮಡಿಕೇರಿ ಮೇ 13 NEWS DESK : ಮೈಸೂರಿನ ನಾರಾಯಣ ಆಸ್ಪತ್ರೆಯ ಸಹಯೋಗದಲ್ಲಿ ನಗರದ ಮೈತ್ರಿ ಪೊಲೀಸ್ ಸಮುದಾಯ ಭವನದಲ್ಲಿ  ಕೊಡಗು ಜಿಲ್ಲೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಹಾಗೂ ಅವರ ಕುಟುಂಬ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

Read More

ಮಡಿಕೇರಿ ಮೇ 13 NEWS DESK : ಮಂಗಳೂರಿನ ಎಂಪೀರಿಯಾ ಎಂಟರ್‍ಟೈನ್‍ಮೆಂಟ್ ವತಿಯಿಂದ ನಿರ್ಮಾಣವಾಗಲಿರುವ “ಕೋವಿ ಮತ್ತು ಕೊಳಲು” ಸಿನಿಮಾದ ಮುಹೂರ್ತ ಇದೇ ಮೇ 15 ರಂದು ನಗರದ ರಾಜಾಸೀಟಿನಲ್ಲಿ ನಡೆಯಲಿದೆಯೆಂದು ಚಿತ್ರ ನಿರ್ದೇಶಕ ಬಾಸುಮ ಕೊಡಗು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಗುರುರಾಜ ಮಾರ್ಪಳ್ಳಿಯವರ “ಗರ್ಭ” ಕಾದಂಬರಿ ಆಧಾರಿತ ಕೋವಿ ಮತ್ತು ಕೊಳಲು ಸಿನೆಮಾವು ಕಲಾತ್ಮಕ ಹಾಗೂ ವಾಣಿಜ್ಯಕ ಚಲನಚಿತ್ರವಾಗಿದೆ. ಇದರ ಚಿತ್ರೀಕರಣ ಮಡಿಕೇರಿ, ಸಂಪಾಜೆ ಮತ್ತು ಸುಳ್ಯ ವಿಭಾಗಗಳಲ್ಲಿ ನಡೆಯಲಿದೆಯೆಂದು ಮಾಹಿತಿಯನ್ನಿತ್ತರು. ಕಲೆ ಮತ್ತು ಹಣದ ನಡುವಿನ ಸಂಘರ್ಷಗಳ ಕುರಿತ ಕಥೆಯನ್ನು ಇಲ್ಲಿ ಚಲನಚಿತ್ರವಾಗಿ ನಿರ್ಮಿಸಲಾಗುತ್ತಿದೆ. ಚಿತ್ರಕಥೆ ಮತ್ತು ಸಂಭಾಷಣೆಯನ್ನು ಶೌರ್ಯತೇಜ ಅವರು ಬರೆದಿದ್ದಾರೆ. ಛಾಯಾಗ್ರಾಹಕರಾಗಿ ದೃಶಾ ಕೊಡಗು, ಕಲಾ ನಿರ್ದೇಶನವನ್ನು ಲೋಕೇಶ್ ಊರುಬೈಲು ನಿರ್ವಹಿಸಲಿದ್ದಾರೆ. ಚಿತ್ರವನ್ನು ಪ್ರಸಕ್ತ ಸಾಲಿನ ಸೆಪ್ಟಂಬರ್‍ನಲ್ಲಿ ತೆರೆಗೆ ತರಲು ಉದ್ದೇಶಿಸಲಾಗಿದೆಯೆಂದು ತಿಳಿಸಿದರು. ಚಿತ್ರದಲ್ಲಿ ಅಕ್ಷತಾ ಪಾಂಡವಪುರ, ನವೀನ್ ಡಿ.ಪಡೀಲ್, ಮೋಹನ್ ಶೇಣಿ, ಮುರಳಿ ಶೃಂಗೇರಿ, ಆನಂದ…

Read More

ಮಡಿಕೇರಿ ಮೇ 13 NEWS DESK : ಮಾದಾಪುರದ ಕುಂಬೂರಿನಲ್ಲಿ ಕಳೆದ ಹನ್ನೆರಡು ದಿನಗಳಿಂದ ನಡೆಯುತ್ತಿರುವ ಬಡ ನಿವೇಶನ ರಹಿತರ ಹೋರಾಟವನ್ನು ದಾರಿ ತಪ್ಪಿಸುವ ಕೆಲಸವನ್ನು ಯಾರೂ ಮಾಡಬಾರದೆಂದು ಕರ್ನಾಟಕ ರಾಜ್ಯ ಬಹುಜನ ಕಾರ್ಮಿಕರ ಸಂಘ ಹಾಗೂ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಜೆ.ಶಿವಪ್ಪ ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂಬೂರು ಲಕ್ಕೇರಿಯಲ್ಲಿ ಆರು ನೂರು ಕುಟುಬಗಳು ನಿವೇಶನಕ್ಕಾಗಿ ಹೋರಾಟ ನಡೆಸುತ್ತಿವೆ. ಈ ಹಂತದಲ್ಲಿ ಎಐಟಿಯುಸಿ ಸಂಘ0ಟನೆಯ ಹೆಚ್.ಎಂ. ಸೋಮಪ್ಪ ಅವರು, ನಿವೇಶನ ರಹಿತರ ಹೋರಾಟ ಅರ್ಥಹೀನವೆಂದು ಹೇಳಿಕೆಗಳನ್ನು ನೀಡುವ ಮೂಲಕ ಸರ್ಕಾರದ ದಿಕ್ಕು ತಪ್ಪಿಸುವ ಪ್ರಯತ್ನ ನಡೆಸಿರುವುದನ್ನು ತೀವ್ರವಾಗಿ ವಿರೋಧಿಸುವುದಾಗಿ ಹೇಳಿದರು. ಇಂದಿಗೂ ಬಡ ನಿವೇಶನ ರಹಿತ ಕಟುಂಬಗಳು ತೋಟಗಳ ಲೈನ್ ಮನೆಗಳಲ್ಲಿ ಸಂಕಷ್ಟದ ಬದುಕನ್ನು ನಡೆಸಿಕೊಂಡು ಬರುತ್ತಿವೆ. ಇಂತಹ ಕುಟುಂಬಗಳಿಗೆ ಗುಲಾಮಗಿರಿಯಿಂದ ಮುಕ್ತಿ ಕೊಡಿಸುವಂತೆ ಆಗ್ರಹಿಸಿದ ಶಿವಪ್ಪ ಅವರು, ಪ್ರತಿಭಟನೆಯಲ್ಲಿ ಇತರೆ ಪಂಚಾಯ್ತಿಗಳ ನಿವೇಶನ ರಹಿತರು ಪಾಲ್ಗೊಂಡಿರುವುದನ್ನು ಸೋಮಪ್ಪ…

Read More

ಮಡಿಕೇರಿ ಮೇ 13 NEWS DESK : ನವೀನ್ ಆಚಾರಿ ಬಿಳಿಗೇರಿ ಸ್ಮರಣಾರ್ಥ ನಡೆದ ಹಾಕತ್ತೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಸೀಜನ್ 12 ರಲ್ಲಿ ಪ್ರಸಾದ್ ಪೂಜಾರಿ ಮಾಲೀಕತ್ವದ ತುಶಾಂತ್ ಫ್ರೆಂಡ್ಸ್ ಬಿಳಿಗೇರಿ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ವಿಜಯ ಮಾಲೀಕತ್ವದ ರಾಯಲ್ ಸ್ಟಾರ್ ಹಾಕತ್ತೂರು ತಂಡ ದ್ವಿತೀಯ, ರಫ ಫೈಟರ್ಸ್ ತೃತೀಯ ಹಾಗೂ ಟೀಮ್ 77 ಹಾಕತ್ತೂರು ತಂಡ 4ನೇ ಸ್ಥಾನ ಪಡೆದುಕೊಂಡಿತು. ಐಪಿಎಲ್ ಮಾದರಿಯಲ್ಲಿ ಮೂರು ದಿನ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ 10 ತಂಡಗಳು ಭಾಗವಹಿಸಿದ್ದವು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪ್ರವೀಣ್ ಆಚಾರಿ, ಬಿಳಿಗೇರಿ. ಪ್ರಸಾದ್ ಪೂಜಾರಿ ಬಿಳಿಗೇರಿ, ಬಿ.ಸಿ.ನಾಣಯ್ಯ, ಪ್ರಶಾಂತ್ ಪೂಜಾರಿ ಹೊದ್ದೂರು, ಮಹಮ್ಮದ್ ಅಲಿ ಹಾಕತ್ತೂರು ಮತ್ತಿತರ ಪ್ರಮುಖರು ಹಾಜರಿದ್ದರು.

Read More

ಮಡಿಕೇರಿ ಮೇ 13 NEWS DESK : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಜಾಗತಿಕ ತೈಲ ಮಾರುಕಟ್ಟೆಯ ಅಸ್ಥಿರತೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂಧನ ಉಳಿತಾಯ ಹಾಗೂ ಆರ್ಥಿಕ ಶಿಸ್ತಿನ ಬಗ್ಗೆ ದೇಶದ ಜನತೆಗೆ ನೀಡಿರುವ ಸಲಹೆಯನ್ನು ಕಾಂಗ್ರೆಸ್ ಪಕ್ಷ ಕ್ಷುಲ್ಲಕ ರಾಜಕಾರಣಕ್ಕಾಗಿ ಬಳಸುತ್ತಿರುವುದು ಖಂಡನೀಯವೆಂದು ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಧ್ಯಪ್ರಾಚ್ಯದಲ್ಲಿ ಉದ್ಭವಿಸಿರುವ ಸಂದಿಗ್ಧತೆ ಇಡೀ ವಿಶ್ವದ ಮೇಲೆ ಪರಿಣಾಮ ಬೀರಿದೆ. ಮುಂದಿನ ದಿನಗಳಲ್ಲಿ ದೇಶದ ಜನರಿಗೆ ಸಮಸ್ಯೆಯಾಗಬಾರದು ಎನ್ನುವ ದೂರದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕ ಶಿಸ್ತಿನ ಕುರಿತು ಅಗತ್ಯ ಸಲಹೆ, ಸೂಚನೆಗಳನ್ನು ನೀಡಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳದ ಕಾಂಗ್ರೆಸ್ಸಿಗರು ದೇಶದ ಆಂತರಿಕ ಸಮಸ್ಯೆ ಎಂಬಂತೆ ಪ್ರತಿಬಿಂಬಿಸಿ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿಗಳಾಗಿದ್ದಾಗ ಚಿನ್ನದ ಮೇಲಿನ ಅವಲಂಬನೆ ಕಡಿಮೆ ಮಾಡಲು ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು…

Read More