ಲೇಖಕ: admin

ಕುಶಾಲನಗರ ಜ.8 NEWS DESK : ಮೈಸೂರಿನ ಕುವೆಂಪು ನಗರದ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ತೋಳು ಕುಸ್ತಿ ಪಂದ್ಯಾವಳಿಯಲ್ಲಿ ಸಿದ್ದಾಪುರದ ಇಕ್ರಾ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಆದಿಲ್ ಅರಫಾ ಸಾಧನೆ ತೋರಿದ್ದಾನೆ. 60 ಹಾಗೂ 65 ಕೆಜಿ ತೂಕದ ಪಂದ್ಯಾವಳಿಯಲ್ಲಿ  ಮೊದಲ ಸ್ಥಾನಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಆದಿಲ್ ಅರಫಾ ಕುಶಾಲನಗರದ ಪ್ರವಾಸೋದ್ಯಮಿ ಕಿಂಗ್ಸ್ ವಿ ಡ್ರೀಮ್ ಮಾಲೀಕ ಎಂ.ಎಂ.ದಾವುದ್ ಹಾಗೂ ಎಂ.ಬಿ.ಸೌಧ ದಂಪತಿಯ ಪುತ್ರ.  ವಿದ್ಯಾರ್ಥಿಯ ಸಾಧನೆಗೆ ಇಕ್ರಾ ಶಾಲೆಯ ಆಡಳಿತ ಮಂಡಳಿ ಪ್ರಶಂಸೆ ವ್ಯಕ್ತ ಪಡಿಸಿದೆ.

Read More

ಕುಶಾಲನಗರ ಜ.8 NEWS DESK : ಯುವ ಸಮುದಾಯ ದುಶ್ಚಟಗಳಿಂದ ದೂರವಿರಸಲು ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕಿದೆ. ಅದರ ಅಗತ್ಯತೆ ಇತ್ತೀಚಿಗೆ ತೀರ ಹೆಚ್ಚಾಗಿದೆ ಎಂದು ಇನ್ನರ್ ವೀಲ್ ಕ್ಲಬ್ ನ ಜಿಲ್ಲಾ ಚೇರಮನ್ ವೈಶಾಲಿ ಕುಡ್ವಾ ಕರೆ ನೀಡಿದರು. ಕುಶಾಲನಗರದ ಇನ್ನರ್ ವೀಲ್ ಕ್ಲಬ್ ಗೆ ಅಧಿಕೃತ ಭೇಟಿ ನೀಡಿ ಮಾತನಾಡಿದ ಅವರು, ಸಮಾಜದಲ್ಲಿ ಜನರ ಮನಸ್ಸಿಗೆ ಹತ್ತಿರವಾಗುವ ಮತ್ತು ಒಳ್ಳೆಯ ಸೇವೆ ಮಾಡುತ್ತಾ ಬಂದಿರುವ ಕಾರಣ ಇನ್ನರ್ ವೀಲ್ ಕ್ಲಬ್ ವಿಶೇಷವಾದ ಸ್ಥಾನದಲ್ಲಿ ನಿಲ್ಲುತ್ತದೆ. ಇನ್ನರ್ ವೀಲ್ ಕ್ಲಬ್ ಸದಸ್ಯರು ಸಮಾಜದಲ್ಲಿ ಅದ್ಭುತ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ಶ್ಲಾಘೀಸಿದರು. ಯಾವುದೇ ಸೇವೆ ಮಾಡಿದರು ಕನಿಷ್ಠ 20 ವರ್ಷಗಳು ನೆನಪಿನಲ್ಲಿ ಇರುವ ಹಾಗೆ ಇರಬೇಕು. ಆ ಸೇವೆಯಿಂದ ನಮಗೆ ಮೊದಲು ಸಂತೃಪ್ತಿ ಸಿಗಬೇಕು. ನಂತರ ಬೇರೆಯರಿಗೂ ಸ್ಫೂರ್ತಿಯಾಗುವುದರಲ್ಲಿ ಅನುಮಾನವಿಲ್ಲ. ಕೇವಲ ಮನುಷ್ಯರಿಗೆ ಅಷ್ಟೇ ಅಲ್ಲದೆ ಪ್ರಾಣಿ ಪಕ್ಷಿಗಳಿಗೂ ನಮ್ಮ ಅವಶ್ಯವಿರುತ್ತೆ. ಅವುಗಳಿಗೆ ತಮ್ಮ ಕಷ್ಟ ಹೇಳಿಕೊಳ್ಳಲು ಆಗುವುದಿಲ್ಲ. ಅವುಗಳ…

Read More

ಮೈಸೂರು ಜ.8 NEWS DESK : ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ವಿಶ್ವ ದರ್ಜೆಯ ಉತ್ಕೃಷ್ಟಮಟ್ಟದ ತಾರಾಲಯ ಕಟ್ಟಡ ಕಾಮಗಾರಿಯನ್ನು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪರಿಶೀಲಿಸಿದರು. ಈ ಸಂದರ್ಭ ಭಾರತಿಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ  ಬಿ.ಎಮ್. ರಾಘು ಸೇರಿದಂತೆ ಪಕ್ಷದ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.  

Read More

ಮಡಿಕೇರಿ ಜ.8 NEWS DESK : ಇಶಾ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರ ಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ವಿಜೇತರಾದ ಮರಗೋಡುವಿನ ಮಹಿಳಾ ತಂಡದ ಸದಸ್ಯರನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ತಮ್ಮ ಕಚೇರಿಯಲ್ಲಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.

Read More

ಬೆಂಗಳೂರು ಜ.8 NEWS DESK : ಅಪರಾಧಿಗಳಿಗೆ ಭಯದ ವಾತಾವರಣ, ಜನ ಸಾಮಾನ್ಯರಿಗೆ ಭಯ ಮುಕ್ತ ವಾತಾವರಣ ನಿರ್ಮಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಕರೆ ನೀಡಿದರು. ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಚಾಮರಾಜಪೇಟೆ, ಕಬ್ಬನ್ ಪಾರ್ಕ್ ಮತ್ತು ಹೈಗ್ರೌಂಡ್ಸ್ ಪೊಲೀಸ್ ಠಾಣೆ, ಕಚೇರಿಗಳನ್ನು ಉದ್ಘಾಟಿಸಿದ ಬಳಿಕ ಪುಲಕೇಶಿ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಪೊಲೀಸ್ ವಸತಿ ಸಮುಚ್ಛಯಗಳನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದ ಜನಸಂಖ್ಯೆ 7 ಕೋಟಿ ದಾಟಿ ಹೋಗುತ್ತಿದೆ. ಇವರೆಲ್ಲರ ರಕ್ಷಣೆ, ಆಸ್ತಿ ಪಾಸ್ತಿ ಮಾನ ಪ್ರಾಣ ರಕ್ಷಿಸಿ ನೆಮ್ಮದಿಯ ಬದುಕಿಗೆ ಸುರಕ್ಷಿತ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿದೆ. ಇದಕ್ಕಾಗಿ ಇಲಾಖೆಗೆ ಅಗತ್ಯವಾದ ಸವಲತ್ತು ಮತ್ತು ನೂತನ ಠಾಣೆಗಳನ್ನು ಒದಗಿಸಲು ಸರ್ಕಾರ ಸದಾ ಸಿದ್ದವಿದೆ ಎಂದರು. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಇದ್ದಾಗ ಅಭಿವೃದ್ಧಿಯ ವೇಗ ಹೆಚ್ಚುತ್ತದೆ. ಹೀಗಾಗಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ರೂಪಿಸಿ ಠಾಣೆಗೆ ಬರುವವರನ್ನು ಆರೋಗ್ಯಕರವಾಗಿ ನಡೆಸಿಕೊಳ್ಳಿ ಎಂದು ಸೂಚಿಸಿದರು. ರಾಜ್ಯದಲ್ಲಿ ಅಪರಾಧಗಳ ಪ್ರಮಾಣ…

Read More

ಮಡಿಕೇರಿ ಜ.8 NEWS DESK : ಕೊಡಗು ಜಿಲ್ಲೆಯ ಸರಕಾರಿ ಕಚೇರಿಗಳನ್ನು ಭ್ರಷ್ಟಾಚಾರ ಮತ್ತು ದಲ್ಲಾಳಿ ಮುಕ್ತಗೊಳಿಸಬೇಕೆಂದು ಕೊಡಗು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಒತ್ತಾಯಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಎ.ಎಸ್.ಕಟ್ಟಿ ಮಂದಯ್ಯ ಅವರು ಜಿಲ್ಲೆಯ ಕಂದಾಯ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಅರ್ಜಿದಾರರಿಗೆ ಹೆಚ್ಚಾಗಿ ಸಮಸ್ಯೆ ಎದುರಾಗುತ್ತಿದೆ. ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಹಾಗೂ ಐದು ತಾಲ್ಲೂಕುಗಳ ತಹಶೀಲ್ದಾರರಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು. ಭ್ರಷ್ಟಾಚಾರ ಎನ್ನುವುದು ಭಯೋತ್ಪಾದನೆಗಿಂತ ಅಪಾಯಕಾರಿಯಾಗಿದೆ, ಇಂದು ಜಿಲ್ಲೆಯ ಸರಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಮೂಲಕ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದೆ. ಅರ್ಜಿದಾರರು ನೀಡುವ ಹಣದಲ್ಲಿ ಅರ್ಧಭಾಗ ದಲ್ಲಾಳಿಗಳಿಗೆ, ಉಳಿದ ಅರ್ಧಭಾಗ ಅಧಿಕಾರಿಗಳಿಗೆ ಎಂದು ಹಂಚಿಕೆಯಾಗುತ್ತಿದೆ. ಈ ಹಿಂದೆ ಭಾರತೀಯ ಪ್ರಜೆಗಳು ಬ್ರಿಟಿಷರ ಗುಲಾಮರಾಗಿ ಸಂಕಷ್ಟದ ಜೀವನ ನಡೆಸಬೇಕಾಗಿತ್ತು. ಆದರೆ ಇಂದು ಅಧಿಕಾರಿಗಳ ಗುಲಾಮರಾಗುವ ದುಸ್ಥಿತಿ ಬಂದೊದಗಿದೆ ಎಂದು ಆರೋಪಿಸಿದರು. ::: ಸಕಾಲ ಮರು ಜಾರಿಯಾಗಲಿ ::: ಸಾರ್ವಜನಿಕರ ಅರ್ಜಿಗಳು…

Read More

ನಾಪೋಕ್ಲು ಜ.8 NEWS DESK : ಸಮೀಪದ ಕಕ್ಕುಂದಕಾಡು ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಜ.10 ರಂದು ವೈಕುಂಠ ಏಕಾದಶಿಯ ಪ್ರಯುಕ್ತ ವಿಶೇಷ ದರ್ಶನ ಹಾಗೂ ಪೂಜೆ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವರದಿ : ದುಗ್ಗಳ ಸದಾನಂದ.

Read More

ನಾಪೋಕ್ಲು ಜ.8 NEWS DESK : ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರಿಗೂ ಶಿಕ್ಷಕರಷ್ಟೇ ಜವಾಬ್ದಾರಿ ಇರುತ್ತದೆ. ಪೋಷಕರು ತಮ್ಮ ಮಕ್ಕಳ ಮೇಲೆ ಸದಾ ಕಾಳಜಿಯ ಕಣ್ಣಿಟ್ಟಿರಬೇಕು ಎಂದು ಮಡಿಕೇರಿಯ ಜಿಲ್ಲಾ ನ್ಯಾಯಾಲಯದ ವಕೀಲರು ಹಾಗೂ ಬಾರ್ ಕೌನ್ಸಿಲ್ ಅಧ್ಯಕ್ಷ ಎಂ.ಎ.ನಿರಂಜನ್ ಹೇಳಿದರು. ಮೂರ್ನಾಡಿನ ಮಾರುತಿ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಕ್ರೀಡೋತ್ಸವದ ಅಂಗವಾಗಿ ವಿದ್ಯಾರ್ಥಿ ನಾಯಕರಿಂದ ಗೌರವ ವಂದನೆ ಹಾಗೂ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮೊಬೈಲ್, ಸಾಮಾಜಿಕ ಜಾಲತಾಣಗಳಿಂದ ಸಂಪೂರ್ಣ ದೂರವಿರಬೇಕು. ದುಶ್ಚಟಗಳಿಗೆ ಬಲಿಯಾಗದಂತೆ ಉತ್ತಮ ಗೆಳೆಯರ ಒಡನಾಟವನ್ನು ಹೊಂದಿರಬೇಕು. ಶೈಕ್ಷಣಿಕವಾಗಿ ದೊರೆಯುವ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಮಾನವೀಯತೆಯೊಂದಿಗೆ ಬದುಕು ಮತ್ತು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮಾರುತಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಮುಂಡಂಡ ಕೆ.ಅಪ್ಪಚ್ಚು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ, ಪೋಷಕರ ನಿರಂತರ ಸಹಕಾರದಿಂದ ಶಾಲೆ ಪ್ರಗತಿಯನ್ನು ಹೊಂದುತ್ತಿದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಅವಧಿಯಲ್ಲಿ ಉತ್ತಮ ಹವ್ಯಾಸದ ಜೊತೆಗೆ ತಮ್ಮಲ್ಲಿರುವ ಪ್ರತಿಭೆಯನ್ನು…

Read More

ನಾಪೋಕ್ಲು ಜ.8 NEWS DESK : ಪಾಡಿ ಶ್ರೀ ಇಗ್ಗುತ್ತಪ್ಪ ದೇವರ ಆದಿಸ್ಥಾನ ಮಲ್ಮದಲ್ಲಿ ಸಂಪ್ರದಾಯದಂತೆ ಪುದಿಯಕ್ಕಿ ನೈವೇದ್ಯ (ಹೊಸ ಅಕ್ಕಿ ನೈವೇದ್ಯ)ವನ್ನು ಶ್ರದ್ಧಾಭಕ್ತಿಯಿಂದ ದೇವರಿಗೆ ಅರ್ಪಿಸಲಾಯಿತು. ಈ ಸಂದರ್ಭ ಪಾಡಿ, ನೆಲಜಿ, ಪೇರೂರು ಗ್ರಾಮಗಳಿಂದ ತಕ್ಕ ಮುಖ್ಯಸ್ಥರು ಪಾಲ್ ಬೈವಾಡ್ ಸಮೇತ ಆಗಮಿಸಿದ್ದರು. ದೇವತಕ್ಕ ಪರದಂಡ ಪ್ರಿನ್ಸ್ ತಮ್ಮಪ್ಪ ಹೊಸ ಅಕ್ಕಿಯ ನೈವೇದ್ಯ ಅರ್ಪಣೆ ಮಾಡಿ ಸರ್ವ ಜನಾಂಗದ ಶ್ರೇಯೋಭಿವೃದ್ಧಿಗೆ, ನಾಡಿನ ಸುಭಿಕ್ಷೆಗೆ ಪ್ರಾರ್ಥನೆ ಸಲ್ಲಿಸಿದರು. ವರದಿ : ದುಗ್ಗಳ ಸದಾನಂದ.

Read More

ಮಡಿಕೇರಿ ಜ.8 NEWS DESK : ದೊಡ್ಡಬಳ್ಳಾಪುರದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಕಬಡ್ಡಿ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲೆಯ ನೈಜ ಪ್ರತಿಭಾನ್ವಿತ ಕಬಡ್ಡಿ ಆಟಗಾರರಿಗೆ ಆಟವಾಡಲು ಅವಕಾಶ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಕುಶಾಲನಗರ ಫ್ರೆಂಡ್ಸ್ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಎಸ್.ಆದಂ ಹಾಗೂ ಕಬಡ್ಡಿ ಆಟಗಾರರು ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ಆದಂ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವತಿಯಿಂದ ಜನವರಿ 6ರಿಂದ 8 ರವರೆಗೆ ದೊಡ್ಡಬಳ್ಳಾಪುರದಲ್ಲಿ ರಾಜ್ಯ ಮಟ್ಟದ ಕಬಡ್ಡಿ ಚಾಂಪಿಯನ್ ಶಿಪ್ ಪಂದ್ಯಾವಳಿ ನಡೆದಿದೆ. ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಕೊಡಗಿನ ಪ್ರತಿಭಾವಂತ ಕಬಡ್ಡಿ ಆಟಗಾರರು ಉತ್ಸುಕರಾಗಿದ್ದರು. ಆದರೆ ಆಟಗಾರರ ಆಯ್ಕೆಯು ನಿಯಮಬಾಹಿರವಾಗಿ ನಡೆದಿರುವುದರಿಂದ ಸ್ಥಳೀಯ ಆಟಗಾರರಿಗೆ ಅನ್ಯಾಯವಾಗಿದೆ. ಕೊಡಗಿನ ಆಸಕ್ತ ಆಟಗಾರರು ಕುಶಾಲನಗರದ ಜ್ಞಾನ ಭಾರತಿ ಶಾಲಾ ಮೈದಾನಕ್ಕೆ ತೆರಳಿ ಕೊಡಗು ಜಿಲ್ಲೆಯ ಕಬಡ್ಡಿ ಅಸೋಸಿಯೇಷನ್ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಉತ್ತಮವಾಗಿ ಆಟವಾಡುವ ಆಟಗಾರರನ್ನು ಆಯ್ಕೆ ಮಾಡದೆ ಮತ್ತು ಆಯ್ಕೆ ಪ್ರಕ್ರಿಯೆಯಲ್ಲಿ…

Read More