ನಾಪೋಕ್ಲು ಮಾ.3 NEWS DESK : ಸಂಪಾಜೆ ಗ್ರಾ.ಪಂ ವ್ಯಾಪ್ತಿಯ ಗಡಿಕಲ್ಲು ಅಲಡ್ಕ-ಮುಂಡಡ್ಕ 14,36000 ರೂಪಾಯಿ ವೆಚ್ಚದಲ್ಲಿ ಗ್ರಾ.ಪಂ ನಿಧಿ 15ನೇ ಹಣಕಾಸು ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣಗೊಂಡ ನೂತನ ಕಾಂಕ್ರಿಟ್ ರಸ್ತೆಯನ್ನು ಕೇಂದ್ರ ನಾರು ಮಂಡಳಿ ಮಾಜಿ ಸದಸ್ಯ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಾಹಿದ್ ತೆಕ್ಕಿಲ್ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಸಂಪಾಜೆ ಗ್ರಾಮದ ಜನರ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ಮೂಲಕ 2 ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪಡೆದಿದೆ. ಈ ಭಾಗದ ಜನ ಪ್ರತಿನಿಧಿಗಳು ಕ್ರಿಯಾಶೀಲಾರಾಗಿ ಕೆಲಸ ಮಾಡುವ ಮೂಲಕ ಅನುದಾನ ತರಿಸುವಲ್ಲಿ ಪ್ರಯತ್ನ ಮಾಡಿದ್ದಾರೆ ಎಂದರು. ಗಡಿಕಲ್ಲು ಅಂಗನವಾಡಿ ಕಟ್ಟಡ, ರಸ್ತೆ ಕಾಂಕ್ರಿಟ್ ಕಾಮಗಾರಿಗೆ ಅನುದಾನ ದೊರಕಿಸಿ ಕೊಟ್ಟಿದ್ದೇನೆ. ಪೇರಡ್ಕ ದರ್ಕಾಸ್ ಭಾಗದಲ್ಲಿ ರಸ್ತೆ ಕಾಂಕ್ರಿಟ್ ಕಾಮಗಾರಿ, ಅಂಗನವಾಡಿ ಕೇಂದ್ರದ ಆವರಣ ಗೋಡೆ, ಪೇರಡ್ಕ ಸೇತುವೆ ಕಾಮಗಾರಿ, ಗೂನಡ್ಕ ದರ್ಕಾಸ್ ಪೇರಡ್ಕ ರಸ್ತೆ, ಪೆರುಂಗೋಡಿ ರಸ್ತೆ ಡಾಮರು ಕಾಮಗಾರಿ ನಡೆಸಲಾಗಿದೆ ಎಂದು ಹೇಳಿದರು. ರಾಜ್ಯ ಸರಕಾರದ ವಿವಿಧ…
ಲೇಖಕ: admin
ನಾಪೋಕ್ಲು ಮಾ.3 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮಡಿಕೇರಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಬೆಳ್ತಂಗಡಿ, ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ ಕೊಡಗು, ನವಜೀವನ ಸಮಿತಿಗಳ ಸಹಯೋಗದಲ್ಲಿ 1855ನೇ ಮದ್ಯವರ್ಜನ ಶಿಬಿರದ ನವಜೀವನ ಸಮಿತಿ ಸದಸ್ಯರುಗಳ ವಿಶೇಷ ಸಭೆಯು ಮಡಿಕೇರಿಯಲ್ಲಿ ನಡೆಯಿತು. ನಗರದ ಯೋಜನಾ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯನ್ನು ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಟಿ.ಎಂ.ಅಯ್ಯಪ್ಪ ಉದ್ಘಾಟಿಸಿ ಮಾತನಾಡಿ, ಬೆಟ್ಟಗೇರಿ ವಲಯದ ಕಾರುಗುಂದ ಗೌಡ ಸಮಾಜದಲ್ಲಿ ಮದ್ಯವರ್ಜನ ಶಿಬಿರವು ಬಹಳ ಯಶಸ್ವಿಯಾಗಿ ನಡೆಯಿತು. ಈ ಶಿಬಿರದಿಂದ ಪಾನಮುಕ್ತರಾದ ತಾವುಗಳೆಲ್ಲರು ಧನ್ಯರು ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮಡಿಕೇರಿ ಯೋಜನಾಧಿಕಾರಿ ಪುರುಷೋತ್ತಮ ಮಾತನಾಡಿ, ನವಜೀವನ ಸಮಿತಿಗಳನ್ನು ಅನುಪಾಲನೆ ಮಾಡುವಲ್ಲಿ ನವಜೀವನ ಪೋಷಕರು ಪ್ರಮುಖ ಪಾತ್ರ ವಹಿಸಬೇಕು ಎಂದರು. ಬೆಳ್ತಂಗಡಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಶಿಬಿರಾಧಿಕಾರಿ ಪಿ.ಪಿ.ನಂದಕುಮಾರ್ ನವಜೀವನ ಸಮಿತಿ ಸದಸ್ಯರುಗಳ ಯೋಗಕ್ಷೇಮ ವಿಚಾರಿಸಿ…
ನಾಪೋಕ್ಲು ಮಾ.3 NEWS DESK : ಡಾಕ್ಟರೇಟ್ ಪದವಿ ಪಡೆದ ಡಾ.ರೇಷ್ಮಾ ಕೆ.ಜೆ ಅವರನ್ನು ಕ್ರೈಸ್ತ ಸಮುದಾಯದ ವತಿಯಿಂದ ಸನ್ಮಾನಿಸಲಾಯಿತು. ಮೇರಿ ಮಾತೆಯ ದೇವಾಲಯದ ವತಿಯಿಂದ ನಾಪೋಕ್ಲು ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಧರ್ಮ ಕೇಂದ್ರದ ಜ್ಞಾನ ಪ್ರಕಾಶ್, ಪಾಲನಾ ಸಮಿತಿಯ ಸದಸ್ಯರು, ಯುವಕ ಸಂಘದ ಸದಸ್ಯರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ಪಾಲನಾ ಸಮಿತಿಯ ಸದಸ್ಯರು, ಯುವಕ ಸಂಘದ ಸದಸ್ಯರು, ಬಂಧು ಮಿತ್ರರು ಹಾಜರಿದ್ದರು. ಡಾ. ಕೆ.ಜೆ.ರೇಷ್ಮಾ ಬೆಂಗಳೂರಿನ ಎಂ.ಎಸ್ ರಾಮಯ್ಯ ವಿಶ್ವವಿದ್ಯಾನಿಲಯದಲ್ಲಿ ಉನ್ನತ ವ್ಯಾಸಂಗಮಾಡಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಮೂರು ವರ್ಷದ ಹಣಕಾಸು ವಿಶ್ಲೇಷಕರ ನಡವಳಿಕೆಯ ಮೇಲೆ ಮನೋವಿಜ್ಞಾನದ ಪ್ರಭಾವದ ಅಧ್ಯಯನ ಪಿ.ಹೆಚ್.ಡಿ ಪದವಿಯನ್ನು ಮುಗಿಸಿ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಸ್ಥಳೀಯ ನಿವಾಸಿ ಜಾಯ್ ಕೆ.ಜೆ.ಲೀನಾ ಜಾಯ್ ದಂಪತಿಗಳ ಪುತ್ರಿ. ಜಾರ್ಜ್ ಮಸ್ಕರೇನಸ್ ಕಾರ್ಯಕ್ರಮ ನಿರೂಪಿಸಿದರು, ಜೋಶಿ ಸಿರಿಯಕ್ ಸ್ವಾಗತಿಸಿದರು, ಡೇರಿನ ಲೂವಿಸ್ ವಂದಿಸಿದರು. ವರದಿ : ದುಗ್ಗಳ ಸದಾನಂದ.
ಮಡಿಕೇರಿ ಮಾ.3 NEWS DESK : ಕ್ರೀಡಾಕೂಟಗಳಿಂದ ಸೌಹಾರ್ದತೆಯ ಸಮಾಜ ಸೃಷ್ಟಿಸಲು ಸಾಧ್ಯ ಎಂದು ಗೋಣಿಕೊಪ್ಪ ಗ್ರಾ.ಪಂ ಅಧ್ಯಕ್ಷ ಹಾಗೂ ಆಲ್ ಸ್ಟಾರ್ ಯೂತ್ ಕ್ಲಬ್ ಗೌರವಾಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅಭಿಪ್ರಾಯಪಟ್ಟರು. ಗೋಣಿಕೊಪ್ಪಲಿನ ದುರ್ಗಬೋಜಿ ಸಭಾಂಗಣದಲ್ಲಿ ಆಲ್ ಸ್ಟಾರ್ ಯೂತ್ ಕ್ಲಬ್ ಕೊಡಗು ವರ್ಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿಯ ಅಂಗವಾಗಿ ಆಲ್ ಸ್ಟಾರ್ ತಂಡದ ನೂತನ ಜೆರ್ಸಿ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಫುಟ್ಬಾಲ್ ಕ್ರೀಡೆಗೆ ಯಥೇಚ್ಛವಾಗಿ ಆಯೋಜನೆಗೊಳುತ್ತಿದೆ. ವಿಶೇಷವಾಗಿ ಗೋಣಿಕೊಪ್ಪಲಿನಲ್ಲಿ ಫುಟ್ಬಾಲ್, ಕ್ರಿಕೆಟ್ ಹಾಗೂ ಕಬಡ್ಡಿ ಪಂದ್ಯಾಟಗಳು ನಡೆಯುತ್ತಿದೆ. ಇದೀಗ ಜಿಲ್ಲೆಯ ಫುಟ್ಬಾಲ್ ಇತಿಹಾಸದಲ್ಲಿ ಎರಡು ಲಕ್ಷ ರೂ ನಗದು ಬಹುಮಾನ ನೀಡಿ ಆಲ್ ಸ್ಟಾರ್ ಯೂತ್ ಕ್ಲಬ್ ಮೇ ತಿಂಗಳ 1 ರಿಂದ 4 ರವರೆಗೆ ಗೋಣಿಕೊಪ್ಪಲಿನ ಜಿ.ಎಂ.ಪಿ ಶಾಲಾ ಮೈದಾನದಲ್ಲಿ ಆಯೋಜಿಸಿದೆ. ಕ್ರೀಡೆಗಳು ಎಲ್ಲಾ, ಜಾತಿ ಧರ್ಮಗಳನ್ನು ಒಂದುಗೂಡಿಸಿ ಒಂದೇ ವೇದಿಕೆಗೆ ಕರೆತರುತ್ತದೆ. ಇತ್ತೀಚಿನ ದಿನಗಳಲ್ಲಿ ಯುವಕರು…
ಮಡಿಕೇರಿ ಮಾ.3 NEWS DESK : ಕೃತಕ ಬುದ್ಧಿ ಮತ್ತೆ ಅಥವಾ (ಎಐ) ತಂತ್ರಜ್ಞಾನದ ಬಗ್ಗೆ ಸೂಕ್ತ ಅರಿವು ಬೆಳೆಸಿಕೊಳ್ಳುವುದು ಅತೀ ಅವಶ್ಯಕ ಎಂದು ಸಿಐಟಿ ಕಾಲೇಜಿನ ಸಹ ಪ್ರಾಧ್ಯಾಪಕ ರಾಮಕೃಷ್ಣ ತಿಳಿಸಿದರು. ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಹಾಗೂ ಕೊಡಗು ಜಿಲ್ಲಾ ಪಂಚಾಯತ್ ಇವರ ಸಹಯೋಗದೊಂದಿಗೆ ಗೋಣಿಕೊಪ್ಪ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಫೆಬ್ರವರಿ 28 ರಂದು ಪ್ರತಿ ವರ್ಷ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ಭಾರತದ ಶ್ರೇಷ್ಠ ವಿಜ್ಞಾನಿ ಡಾ. ಸಿ.ವಿ.ರಾಮನ್ ಅವರು ರಾಮನ್ ಪರಿಣಾಮದ ಆವಿಷ್ಕಾರದ ಸ್ಮರಣಾರ್ಥ ಮತ್ತು ಸಾರ್ವಜನಿಕರಲ್ಲಿ ವಿಜ್ಞಾನದ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು. ಪ್ರಸ್ತುತ ನಾವು ಕೃತಕ ಬುದ್ಧಿ ಮತ್ತೆ ಅಥವಾ (ಎಐ) ತಂತ್ರಜ್ಞಾನದ ಕಾಲಘಟ್ಟದಲ್ಲಿದ್ದು, ಈ ಆವಿಷ್ಕಾರಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು. ಬಾಲ್ಯದಿಂದಲೇ ವಿಜ್ಞಾನದ ಅರಿವು ನಮ್ಮಲ್ಲಿ ಜಾಗೃತವಾಗಿರಬೇಕು. ಎಐ ತಂತ್ರಜ್ಞಾನವನ್ನು…
ಸೋಮವಾರಪೇಟೆ ಮಾ.3 NEWS DESK : ಮಹಾಶಿವರಾತ್ರಿ ಅಂಗವಾಗಿ ತಾಲ್ಲೂಕು ಕದಳಿ ವೇದಿಕೆ ವತಿಯಿಂದ ವಚನ ಗಾಯನ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮಾತನಾಡಿದ ಕದಳಿ ಅಧ್ಯಕ್ಷೆ ಉಷಾರಾಣಿ, ವಚನಗಾಯನದಿಂದಾಗಿ ಮನತೃಪ್ತಿ ಹಾಗೂ ಆತ್ಮ ತೃಪ್ತಿ ಸಿಗುತ್ತದೆ. ಪ್ರತಿಯೊಬ್ಬರು ಪ್ರತಿದಿನವೂ ತಪ್ಪದೇ ದಿನಕ್ಕೊಂದು ವಚನಗಳನ್ನು ಹೇಳುವ ಮೂಲಕ ವಚನ ಜಾಗೃತಿ ಮೂಡಿಸಬೇಕೆಂದು ಕರೆಕೊಟ್ಟರು. ವಿವಿಧ ಮಹಿಳಾ ತಂಡಗಳಿಂದ ವಚನ ಗಾಯನ ಹಾಗೂ ಶಿವಸ್ತ್ರೋತ್ರಗಳು ನೆರವೇರಿದವು. ಸೋಮವಾರಪೇಟೆ ತಾಲ್ಲೂಕು ಕದಳಿ ವೇದಿಕೆ ಅಧ್ಯಕ್ಷೆ ಉಷಾರಾಣಿ ಗುರುಪ್ರಸಾದ್, ಪ್ರಮುಖರಾದ ಗೀತಾರಾಜು, ಜಲಜಾ ವಿಜಯಕುಮಾರ್, ನಾಗಮಣಿ ಯುವರಾಜ್, ಕವಿತಾ ಸಂಜಯ್, ಸರಿತಾ ಮಲ್ಲಿಕಾರ್ಜುನ್, ದಿವ್ಯ ದಿವಾಕರ್, ಜಗದಾಂಬ ಗುರುಪ್ರಸಾದ್, ಯಶೋಧ ನಾಗೇಶ್, ದೀಪ್ತಿ ಹಾಗೂ ತೃಪ್ತಿ ಇದ್ದರು.
ಮೈಸೂರು, ಮಾ.3 NEWS DESK : ಪ್ರಸಕ್ತ ತಿಂಗಳಿನಲ್ಲಿ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯು ಪರೀಕ್ಷೆಗಳು ನಡೆಯುತ್ತಿರುವುದರಿಂದ ಬಸ್ ಸಂಚಾರ ವ್ಯವಸ್ಥೆಯನ್ನು ಸಮರ್ಪಕವಾಗಿ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಮೈಸೂರು-ಕೊಡಗು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೂಚನೆ ನೀಡಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಸದ ಯದುವೀರ್, ಸಾರಿಗೆ ಸಂಸ್ಥೆಯು ವಿದ್ಯಾರ್ಥಿಗಳಿಗೆ ಪೂರಕವಾಗಿ ಸೇವೆಯನ್ನು ಕಲ್ಪಿಸಬೇಕಾಗಿದೆ. ವಿದ್ಯಾರ್ಥಿಗಳು ಸುಸೂತ್ರವಾಗಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ. ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ ದ್ವಿತೀಯ ಪಿಯು ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ. ಪರೀಕ್ಷಾ ಕೇಂದ್ರಗಳಿಗೆ ತೆರಳಲು ವಿದ್ಯಾರ್ಥಿಗಳು ಸಾರಿಗೆ ಸಂಸ್ಥೆಯ ಬಸ್‌ಗಳ ಮೇಲೆ ಹೆಚ್ಚು ಅವಲಂಬಿತವಾಗಿದ್ದಾರೆ. ವಿದ್ಯಾರ್ಥಿಗಳಿಗೆ ಉತ್ತಮ ಸೇವೆ ನೀಡಬೇಕಾಗಿದೆ ಎಂದು ಸಂಸದರು ತಿಳಿಸಿದ್ದಾರೆ. ಪರೀಕ್ಷೆ ಸಮಯದಲ್ಲಿ ಬಸ್‌ಗಳು ಸರಿಯಾದ ಸಮಯಕ್ಕೆ ನಿಲ್ದಾಣಕ್ಕೆ ಬರುತ್ತಿಲ್ಲ. ಒಂದು ವೇಳೆ ಬಂದರೂ ನಿಲ್ದಾಣದಲ್ಲಿ ನಿಲ್ಲಿಸದೇ ತೆರಳುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಕೆಲವು ವಿದ್ಯಾರ್ಥಿಗಳು ನನಗೂ ದೂರು…
ಶನಿವಾರಸಂತೆ ಮಾ.3 NEWS DESK : ಜಗತ್ತಿನ ಮೊದಲ ಸಮಾಜವಾದಿ ಬಸವಣ್ಣನವರು ಸಮಾಜಕ್ಕೆ ಕೊಟ್ಟ ಕೊಡುಗೆ ಅಪಾರವಾಗಿದ್ದು, ಶರಣ ಸಾಹಿತ್ಯದ ತಿರುಳನ್ನು ಪ್ರಸ್ತುತ ಸಮಾಜಕ್ಕೆ ಅಳವಡಿಸಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು. ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ತು, ಸೋಮವಾರಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಶನಿವಾರಸಂತೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸುಪ್ರಜ ಗುರುಕುಲದ ಸಂಯುಕ್ತಾಶ್ರಯದಲ್ಲಿ ದಾವಣಗೆರೆಯ ಸುನಂದಾದೇವಿ-ಸಂಗಮೇಶ್ವರ ಗೌಡ ದಂಪತಿಯ ಪ್ರಾಯೋಜಕತ್ವದಲ್ಲಿ ಆರೋಡ ದಾಸೋಹಿ ಧರ್ಮ ಚಿಂತಾಮಣಿ ಮಹಾಶರಣ ಲಿಂಗೈಕ ಮಾಗನೂರು ಬಸಪ್ಪ ದತ್ತಿ ಶರಣ ಸಂಸ್ಕೃತಿ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯದ ಅಭಿವೃದ್ಧಿಗೆ ಶರಣರ ಕೊಡುಗೆ ಅಪಾರ.ಶರಣ ಎಂದರೆ ಸಜ್ಜನ, ಸದ್ಭಕ್ತಿ, ಅನುಭಾವಿ ಎಂಬ ವ್ಯಕ್ತಿತ್ವ.ದತ್ತಿನಿದಿಯ ಶರಣ ಮಾಗನೂರು ಬಸಪ್ಪನವರು ಹುಟ್ಟಿನಿಂದ ದೊಡ್ಡವರಾಗಿ ಹುಟ್ಟಿದವರಲ್ಲ; ಹುಟ್ಟಿ ದೊಡ್ಡವರಾಗಿ ಬದುಕಿ, ಬಾಳಿ ಶಿಸ್ತನ್ನು ರೂಢಿಸಿಕೊಂವರು.ಶಿಕ್ಷಣ, ಸಂಸ್ಕೃತಿ, ದಾಸೋಹದಂತಹ ಸಮಾಜಮುಖಿ ಕೆಲಸ ಮಾಡಿದವರು. ಕೊಡಗಿನಲ್ಲಿ ಶರಣ ಸಾಹಿತ್ಯಕ್ಕೆ…
ಚೆಟ್ಟಳ್ಳಿ NEWS DESK ಮಾ.2 : ಚೆಟ್ಟಳ್ಳಿಯ ಚೇರಳ ಶ್ರೀಭಗವತಿ ದೇವರ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ‘ಪಟ್ಟಣಿ ಹಬ್ಬ’ ದಂದು ಕಲ್ಡಚ ಹೋಗುವ ಸಂಪ್ರದಾಯದಂತೆ ಹೆಣ್ಣು ಮಕ್ಕಳು ದೇವಾಲಯದಿಂದ ಕಳಶದೊಂದಿಗೆ ತೆರಳಿ ಚೌಂಡಿ ಬನದಲ್ಲಿ ಪೂಜೆ ಮಾಡಿದರು. ಒಡ್ಡೋಲಗ ದುಡಿಕೊಟ್ಟ್ ನೊಂದಿಗೆ ದೇವತಕ್ಕರ ಮನೆಯಿಂದ ದೇವರ ಭಂಡಾರವನ್ನು ದೇವಾಲಯಕ್ಕೆ ತಂದು ಮಾಹಾಪೂಜೆ, ಕೊಂಬಾಟ್ ಸೇವೆ ಸಲ್ಲಿಸಲಾಯಿತು. ನಂತರ ದೇವರ ಭಂಡಾರವನ್ನು ದೇವತಕ್ಕರ ಮನೆಯಲ್ಲಿ ಇಡಲಾಯಿತು. ಮಾರನೇ ದಿನ ಊರಿನವರು ಅಯ್ಯಪ್ಪ ದೇವರಬನಕ್ಕೆ ತೆರಳಿ ದೇವರಿಗೆ ಬಲಿಪೂಜೆ ಮಾಡಿ ದೇವರ ಪ್ರಸಾದವನ್ನು ಸ್ವೀಕರಿಸಿದರು. ದೇವಾಲಯಕ್ಕೆ ಬಂದ ಭಕ್ತರು ತೆಂಗಿನಕಾಯಿಗೆ ಗುಂಡುಹೊಡೆಯುವ ಮೂಲಕ ದೇವರಕಟ್ಟು ಮುರಿಯಲಾಯಿತು. ಭಾನುವಾರ ಚೇರಳ ಶ್ರೀಭಗವತಿ ದೇವರ ದೊಡ್ಡಹಬ್ಬ ನಡೆಯಿತು. ಬಿಳಿಕುಪ್ಪಸ ದಟ್ಟಿಯನ್ನು ತೊಟ್ಟ ಊರಿನ ಕೊಡವ ಮತ್ತು ಗೌಡ ಜನಾಂಗದವರು ಕೊಂಗೇಟಿರ ಐನ್ ಮನೆಯಿಂದ ಊರುತಕ್ಕರಾದ ಕೊಂಗೇಟಿರ ಹರೀಶ್ ಅಪ್ಪಣ್ಣ ಹಾಗೂ ಕೊಂಗೇಟಿರ ಕುಟುಂಬಸ್ಥರನ್ನು ಒಡ್ಡೋಲಗ ದುಡಿಕೊಟ್ಟ್ನೊಂದಿಗೆ ದೇವಾಲಯಕ್ಕೆ ಕರೆ ತಂದರು. ನಂತರ ದೇವತಕ್ಕ ಚೇರಳ ತಮ್ಮಂಡ…
ಕುಶಾಲನಗರ NEWS DESK ಮಾ.2 : ಭಾಷೆಗಳು ನಾಶವಾದಲ್ಲಿ ಸಮುದಾಯಗಳ ಏಳಿಗೆ ಅಸಾಧ್ಯ ಎಂದು ಕರ್ನಾಟಕ ಸರಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇದರ ಆಶ್ರಯದಲ್ಲಿ ಕುಶಾಲನಗರ ಗೌಡ ಸಮಾಜ ಮತ್ತು ಅಂಗಸಂಸ್ಥೆಗಳ ಹಾಗೂ ವಿವಿಧ ಗೌಡ ಸಮಾಜಗಳ ಸಂಯುಕ್ತ ಆಶ್ರಯದಲ್ಲಿ ಕುಶಾಲನಗರದಲ್ಲಿ ನಡೆದ ಅರೆಭಾಷೆ ಗಡಿನಾಡ ಉತ್ಸವ -2025 ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ತಾಯಿನುಡಿಗಳನ್ನು ಬಳಕೆ ಮಾಡುವ ಮೂಲಕ ಉಳಿಸುವುದರೊಂದಿಗೆ ಅಕಾಡೆಮಿ ಮೂಲಕ ಭಾಷೆಯ ಅಭಿವೃದ್ಧಿಗೆ ಕಾರ್ಯಸೂಚಿ ನೀಡುವ ಕೆಲಸವಾಗಬೇಕಾಗಿದೆ ಎಂದರು. ಪ್ರಸಕ್ತ ಭಾಷೆ ಸಂಸ್ಕೃತಿ ದಿಕ್ಕಾಪಾಲಾಗಿ ಹೋಗುತ್ತಿದ್ದು, ಜನಗಣತಿ ಮೂಲಕ ತಮ್ಮ ಸಮುದಾಯದ ಜನಸಂಖ್ಯೆ ಮಾಹಿತಿಯನ್ನು ಸರಕಾರಕ್ಕೆ ಲಭಿಸುವಂತೆ ಮಾಡುವುದು, ಮುಖ್ಯ ಭಾಷೆ -ಉಪಭಾಷೆಗಳ ನಡುವೆ ಸಾಧಕ ಬಾಧಕಗಳ ಬಗ್ಗೆ ಚರ್ಚಿಸುವುದು ಈ ಮೂಲಕ ಭಾಷೆಗಳ ಬೆಳವಣಿಗೆ ಸಾಧ್ಯ ಎಂದ ಅವರು ಅಧಿಕಾರದ ಮೂಲಕ ಭಾಷೆಗಳನ್ನು ನಿರ್ಧಾರ ಮಾಡುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು. ಚರಿತ್ರೆಗಳು…






