ಲೇಖಕ: admin

ಮಡಿಕೇರಿ ಮಾ.1 NEWS DESK : ಮಡಿಕೇರಿ ನಗರದ ವಾರ್ಡ್ ನಂ.10 ರ ಮಾರುಕಟ್ಟೆ ವ್ಯಾಪ್ತಿಯಲ್ಲಿರುವ ಕೋಳಿ ಮಾಂಸದ ಅಂಗಡಿ ಹಾಗೂ ಕಸಾಯಿ ಖಾನೆ ಹಿಂಭಾಗದಲ್ಲಿ ಚರಂಡಿ ವ್ಯವಸ್ಥೆಯಿಲ್ಲದೆ ಕಲುಷಿತ ನೀರು ನಿಲುಗಡೆಯಿಂದ ಗ್ರಾಹಕರು, ಸಾರ್ವಜನಿಕರು ಹಾಗೂ ಸುತ್ತಮುತ್ತಲಿನ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದು ಉತ್ತಮ ಚರಂಡಿ ಹಾಗೂ ಸಾರ್ವಜನಿಕರಿಗಾಗಿ ಶೌಚಾಲಯವನ್ನು ನಿರ್ಮಿಸಿಕೊಡುವಂತೆ ನಗರಸಭಾ ಸದಸ್ಯ ಎಂ.ಎ.ಮುಸ್ತಫಾ ಮನವಿ ಮಾಡಿದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರನ್ನು ಶಾಸಕ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ ಅವರು, ಸಮಸ್ಯೆಗಳ ಬಗ್ಗೆ ಶಾಸಕರ ಗಮನ ಸೆಳೆದರು. ಮಾರುಕಟ್ಟೆ ವ್ಯಾಪ್ತಿಯಲ್ಲಿರುವ ಕೋಳಿ ಮಾಂಸದ ಅಂಗಡಿ ಹಾಗೂ ಕಸಾಯಿ ಖಾನೆ ಹಿಂಭಾಗದಲ್ಲಿ ಸೂಕ್ತ ಚರಂಡಿ ಹಾಗೂ ಶೌಚಾಲಯದ ವ್ಯವಸ್ಥೆ ಇಲ್ಲದೆ ಗ್ರಾಹಕರು, ಸಾರ್ವಜನಿಕರು ಹಾಗೂ ಸುತ್ತಮುತ್ತಲಿನ ನಿವಾಸಿಗಳು ದುರ್ವಾಸನೆಯಿಂದ ತೊಂದರೆ ಅನುಭವಿಸುತ್ತಿದ್ದು, ಸಾಂಕ್ರಮಿಕ ರೋಗಗಳು ಹರಡುವ ಆತಂಕ ಎದುರಾಗಿದೆ. ಆದ್ದರಿಂದ  ಉತ್ತಮ ಚರಂಡಿ ಹಾಗೂ ಸಾರ್ವಜನಿಕರಿಗಾಗಿ ಶೌಚಾಲಯವನ್ನು ಒದಗಿಸಿ ಕೊಡಬೇಕೆಂದು ಮನವಿ ಮಾಡಿದರು.

Read More

ಮಡಿಕೇರಿ ಮಾ.1 NEWS DESK : ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಮಾಯಮುಡಿ ಗ್ರಾ.ಪಂ ಅಧ್ಯಕ್ಷ ಎ.ಎಸ್.ಟಾಟು ಮೊಣ್ಣಪ್ಪ ಅಭಿಪ್ರಾಯಪಟ್ಟಿದ್ದಾರೆ. ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಾಯಮುಡಿ ಕ್ಲಸ್ಟರ್ ನ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅದರಲ್ಲಿ ಕಲಿಕಾ ಹಬ್ಬವು ಒಂದು. ಇದು ವಿದ್ಯಾರ್ಥಿಗಳ ಕಲಿಕೆಯನ್ನು ಉತ್ತಮಪಡಿಸಲು ಸಹಕಾರಿಯಾಗಿದೆ ಎಂದು ಹೇಳಿದರು. ಕಲಿಕಾ ಹಬ್ಬ, ಗಣಿತ ಆಂದೋಲನ, ಪ್ರತಿಭಾ ಕಾರಂಜಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಸಹಾಯಕವಾಗಿದೆ. ಬಿಸಿಯೂಟದೊಂದಿಗೆ ಆರು ದಿನವೂ ಮೊಟ್ಟೆ, ಹಾಲು, ರಾಗಿ, ಸಿರಿಧಾನ್ಯವನ್ನು ಸರ್ಕಾರ ಉಚಿತವಾಗಿ ನೀಡುತ್ತಿದೆ. ವಿದ್ಯಾರ್ಥಿ ವೇತನ, ಪಠ್ಯಪುಸ್ತಕ, ಸಮವಸ್ತ್ರ, ಶೂ ಮತ್ತು ಸಾಕ್ಸ್ ಸೌಲಭ್ಯವನ್ನು ಕೂಡ ಕಲ್ಪಿಸುತ್ತಿದೆ. ಇದೆಲ್ಲವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಶೈಕ್ಷಣಿಕ ಗುರಿ ಸಾಧಿಸಬೇಕೆಂದು ಎ.ಎಸ್.ಟಾಟು ಮೊಣ್ಣಪ್ಪ ಕರೆ ನೀಡಿದರು. ಕಲಿಕಾ ಹಬ್ಬದ ವಸ್ತು ಪ್ರದರ್ಶನ ಅತ್ಯುತ್ತಮವಾಗಿ…

Read More

ಮಡಿಕೇರಿ ಮಾ.1 NEWS DESK : ಮಡಿಕೇರಿಯ ಇತಿಹಾಸ ಪ್ರಸಿದ್ಧ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ರಚಿಸಲಾಗಿದ್ದು, ದೇವಾಲಯದ ಪ್ರಧಾನ ಅರ್ಚಕರು ಒಳಗೊಂಡಂತೆ ಒಂಭತ್ತು ಮಂದಿ ಸದಸ್ಯರುಗಳನ್ನು ಸರ್ಕಾರ ನೇಮಕಗೊಳಿಸಿ ಆದೇಶ ಹೊರಡಿಸಿದೆ. ದೇವಾಲಯದ ಪ್ರಧಾನ ಅರ್ಚಕರಾದ ಸಂತೋಷ್ ಭಟ್, ವಿಶಾಲ್ ನಂದಕುಮಾರ್, ಎ.ಸಿ.ದೇವಯ್ಯ, ಕನ್ನಂಡ ಕವಿತಾ ಕಾವೇರಮ್ಮ, ಕೆ.ವೀಣಾಕ್ಷಿ, ಎಂ.ಎ.ನಿರಂಜನ್, ಜಿ.ರಾಜೇಂದ್ರ, ಅಂಬೆಕಲ್ ಕುಶಾಲಪ್ಪ, ಎ.ಎಸ್.ಪ್ರಕಾಶ್ ಅವರುಗಳನ್ನು ಸಮಿತಿ ಸದಸ್ಯರಾಗಿ ನೇಮಕ ಮಾಡಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಾರ್ಯದರ್ಶಿ ಡಾ.ಎಂ.ವಿ.ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.

Read More

ವಿರಾಜಪೇಟೆ ಮಾ.1 NEWS DESK : ವಿರಾಜಪೇಟೆ ಚಿಕ್ಕಪೇಟೆಯ ಯೂನಿಯನ್ ಬ್ಯಾಂಕ್ ಶಾಖೆಯಲ್ಲಿ ಶಾಖಾ ಸಹಾಯಕರಾಗಿ ಕರ್ತವ್ಯ  ನಿರ್ವಹಿಸಿ ನಿವೃತ್ತಿ ಹೊಂದಿದ ಹೆಚ್.ಎಂ.ಗೌರಿ ಅವರನ್ನು ಬ್ಯಾಂಕ್ ನ ಸಿಬ್ಬಂದಿಗಳು ಆತ್ಮೀಯವಾಗಿ ಬೀಳ್ಕೊಟ್ಟರು. ಬ್ಯಾಂಕ್ ಶಾಖೆ ಸಭಾಂಗಣದಲ್ಲಿ ಗೌರಿ ಅವರನ್ನು ಸನ್ಮಾನಿಸಿ, ಗೌರವಿಸಿದರು. ಈ ಸಂದರ್ಭ ಶಾಖಾ ವ್ಯವಸ್ಥಾಪಕರು, ಸಿಬ್ಬಂದಿಗಳು ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಹಾಸನ ವಿಭಾಗದ ಹಾಗೂ ಕೊಡಗು ವಲಯದ ಸಹ ಕಾರ್ಯದರ್ಶಿ ಜೇಮ್ಸ್ ಮೆನೆಜಸ್ ಹಾಜರಿದ್ದರು.

Read More

ಕುಶಾಲನಗರ ಮಾ.1 NEWS DESK : ಸಂಸ್ಕೃತ ಭಾಷೆ ದೇವರ ಭಾಷೆ, ಜನರ ಭಾಷೆ ಹಾಗೂ ಶ್ರೀಮಂತರ ಭಾಷೆಯಾಗಿತ್ತು. ಜನಸಾಮಾನ್ಯರಿಗೆ ಸಂಸ್ಕೃತ ಭಾಷೆ ಕಬ್ಬಿಣದ ಕಡಲೆಯಾಗಿತ್ತು. ಇಂತಹ ಸಂದರ್ಭದಲ್ಲಿ ಕನ್ನಡ ಭಾಷೆಯನ್ನು ಉಳಿಸಲು ಹಾಗೂ ಬೆಳೆಸಲು ವಿಕ್ರಮಾರ್ಜುನ ವಿಜಯ ಹಾಗೂ ಆದಿ ಪುರಾಣ ಗ್ರಂಥಗಳನ್ನು ಬರೆದ ಪಂಪ ಮಹಾಕವಿ ಕನ್ನಡ ಭಾಷೆಗೆ ಶ್ರೇಷ್ಠತೆಯನ್ನು ತಂದು ಕೊಟ್ಟ ಮೇರು ಕವಿ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಕುಂದ ರಾಜ್ ಬಣ್ಣಿಸಿದರು. ಕೊಡಗು ಜಿಲ್ಲಾ ಸಾಹಿತ್ಯಾಸಕ್ತರ ವೇದಿಕೆ ವತಿಯಿಂದ ಕುಶಾಲನಗರದ ಮಹಾತ್ಮ ಗಾಂಧಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ” ಸಾಹಿತ್ಯ ಮಂಥನ ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಕನ್ನಡ ಮಾತನಾಡಿದರೆ ಕೀಳರಿಮೆ. ಇಂಗ್ಲೀಷ್ ಮಾತನಾಡಿದರೆ ಹಿರಿಮೆ ಎಂದು ಬೀಗುತ್ತಿರುವ ಪರಿಸ್ಥಿತಿ ಅಂದು ಪಂಪನ ಕಾಲಘಟ್ಟದಲ್ಲಿ ಇದ್ದುದರಿಂದ ಮೇಲ್ವರ್ಗದ ಮಂದಿ ಅಂದು ಸಂಸ್ಕೃತ ಭಾಷೆಯನ್ನು ವೈಭವೀಕರಿಸಿ ಕನ್ನಡ ಭಾಷೆಯನ್ನು ಕಡೆಗಣಿಸಿದ್ದರಿಂದಾಗಿ ಪಂಪ ಮಹಾಕವಿ ಮೈಕೊಡವಿ ನಿಂತು ಕನ್ನಡ ಸಾಹಿತ್ಯಕ್ಕೆ ಅಪಾರ ಶ್ರೀಮಂತಿಕೆ…

Read More

ವಿರಾಜಪೇಟೆ ಮಾ.1 NEWS DESK : ವಿರಾಜಪೇಟೆ ನಗರದ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್.ಎಸ್.ಎಸ್.ಘಟಕದ ವಾರ್ಷಿಕ ಶಿಬಿರವು ಮಾ.4 ರಿಂದ ಮಾ.10ರ ವರೆಗೆ ಹೆಗ್ಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಮಾ.4 ರಂದು ಬೆಳಿಗ್ಗೆ 11 ಗಂಟೆಗೆ ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ  ಶಿಬಿರವನ್ನು ಉದ್ಘಾಟಿಸಲಿದ್ದು, ಬೇಟೋಳಿ ಗ್ರಾ.ಪಂ ಅಧ್ಯಕ್ಷ ಅಚ್ಚಪಂಡ ಬೋಪಣ್ಣ  ಧ್ವಜಾರೋಹಣ ನೆರವೇರಿಸಲಿದ್ದಾರೆ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಆರ್.ರಾಜೇಶ್, ಜಿ.ಪಂ ಮಾಜಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ಸೆಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕ ರೆ.ಫಾ. ಮದಲೈ ಮುತ್ತು, ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಉದ್ಯಮಿಗಳಾದ ಸಜೇಶ್ ಭರತನ್ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಕೆ.ಟಿ.ಹೇಮಲತಾ  ಹಾಗೂ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಶಿಬಿರದ ದಿನಗಳಂದು ವಿದ್ಯಾರ್ಥಿಗಳಿಂದ ಶ್ರಮದಾನ, ಸ್ವಚ್ಛತಾ ಅಭಿಯಾನ ಕಾರ್ಯಕ್ರಮ, ಆರೋಗ್ಯ ಜಾಗೃತಿ ಕಾರ್ಯಕ್ರಮ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳು ನಡೆಯಲಿವೆ. ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ನಿವೃತ್ತ ಡಿ.ಡಿ.ಪಿ.ಐ ಪೆರಿಗ್ರೀನ್ ಎಸ್ ಮಚಡೋ, ವಿರಾಜಪೇಟೆ…

Read More

ಕುಶಾಲನಗರ ಮಾ.1 NEWS DESK : ಕುಶಾಲನಗರ ಬೈಚನಹಳ್ಳಿ ಶ್ರೀ ಮಾರಿಯಮ್ಮ ದೇವಾಲಯದ 16ನೇ ವಾರ್ಷಿಕೋತ್ಸವ ಪ್ರಯುಕ್ತ ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರತಿನಿಧಿಗಳು ಫಲ ತಾಂಬೂಲಗಳೊಂದಿಗೆ ಆಗಮಿಸಿ ಸಾಮೂಹಿಕ ಪೂಜೆ ಸಲ್ಲಿಸಿದರು.

Read More

ಮಡಿಕೇರಿ ಮಾ.1 NEWS DESK : ಕೆಂಬಟ್ಟಿ ಸ್ಪೋರ್ಟ್ ಫೆಸ್ಟ್ ಆಯೋಜಿರುವ ಟೆನ್ನಿಸ್ ಬಾಲ್ ಕ್ರಿಕೆಟ್ ಲೋಗೋವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಬಿಡುಗಡೆ ಮಾಡಿದರು. ಈ ಸಂದರ್ಭ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪುರಸಭೆ ಉಪಾಧ್ಯಕ್ಷರು, ಪುರಸಭೆ ಸದಸ್ಯರು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕ್ರಮ ಆಯೋಜಕರು ಹಾಜರಿದ್ದರು.

Read More

ಮಡಿಕೇರಿ ಮಾ.1 NEWS DESK : ವಿರಾಜಪೇಟೆ ತಾಲೂಕಿನ ಅರಮೇರಿಯಲ್ಲಿ, ಜೇನು ಹುಳ ಕಡಿತಕ್ಕೆ ಬಲಿಯಾಗಿ ಸಾವಿಗಿಡದ ಲೋಹಿತ್ ಮನೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ ನೀಡಿ ಕುಟುಂಬಸ್ಥರಿಗೆ ಸಾoತ್ವನ ಹೇಳಿ ಸಹಾಯ ಹಸ್ತ ನೀಡಿದರು. ಈ ಸಂದರ್ಭ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣ್ಣಚ್ಚ, ಪುರಸಭೆ ಸದಸ್ಯರಾದ ರಾಫಿ, ಮತೀನ್, ಉದಯ್ ಮಾದಪ್ಪ ಹಾಗೂ ಪ್ರಮುಖರು ಹಾಜರಿದ್ದರು.

Read More

ಮಡಿಕೇರಿ ಮಾ.1 NEWSDESK : ಅಖಿಲ ಭಾರತ ಪೊಲೀಸ್ ಕರ್ತವ್ಯ ಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಬೆಳ್ಳಿಯ ಪದಕ ವಿಜೇತ ಶ್ವಾನ “ಕಾಪರ್” ಹಾಗೂ ತರಬೇತುದಾರ ಹೆಡ್‌ ಕಾನ್ಸ್‌ಟೇಬಲ್ ಮನಮೋಹನ್ ಅವರನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಸನ್ಮಾನಿಸಿ, ಗೌರವಿಸಿದರು. ನಂತರ ಮಾತನಾಡಿ, ಕೊಡಗಿಗೆ ಹೆಮ್ಮೆ ತರುವಂತ ಪೊಲೀಸ್ ಸಿಬ್ಬಂದಿಗಳ ಕಾರ್ಯಕ್ಷಮತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಪುರಸಭೆ ಸದಸ್ಯರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂಪೊಲೀಸ್ ಪ್ರಮುಖರು, ಸಿಬ್ಬಂದಿಗಳು ಹಾಜರಿದ್ದರು.

Read More