ಲೇಖಕ: admin

ಮಡಿಕೇರಿ ಫೆ.27 NEWS DESK : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ 2022 ಮತ್ತು 2023ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಸಂಶೋಧನಾ ಪ್ರಬಂಧ ಮತ್ತು ಕೃತಿಗಳ ಬಿಡುಗಡೆ ಸಮಾರಂಭವು ಫೆಬ್ರವರಿ, 28 ರಂದು ಬೆಳಗ್ಗೆ 10 ಗಂಟೆಗೆ ಕೊಡಗು ಗೌಡ ಸಮಾಜದಲ್ಲಿ ನಡೆಯಲಿದೆ. ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು, ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ, ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ, ಬೆಂಗಳೂರು ಶಿಕ್ಷಣ ತಜ್ಞರು ಮತ್ತು ಚಿಂತಕರಾದ ಪ್ರೊ.ಕೆ.ಇ.ರಾಧಾಕೃಷ್ಣ, ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ, ಎಸ್.ಎಲ್.ಭೋಜೇಗೌಡ, ಡಾ.ಧನಂಜಯ ಸರ್ಜಿ, ಕರ್ನಾಟಕ ವಿಧಾನಸಭೆ…

Read More

ಮಡಿಕೇರಿ ಫೆ.27 NEWS DESK : ಡಾ.ಬಿ.ಆರ್.ಅಂಬೇಡ್ಕರ್ ಪ್ರೀಮಿಯರ್ ಲೀಗ್ ವತಿಯಿಂದ ಕೊಡ್ಲಿಪೇಟೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗಾಗಿ ನಡೆದ ಮಹಾ ನಾಯಕ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜ್ಯೋತಿ ಬಾಪುಲೆ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಜೈ ಭೀಮ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಪಂದ್ಯಾವಳಿಯಲ್ಲಿ ಪರಿಶಿಷ್ಟ ನಾಯಕರುಗಳ ಹೆಸರನ್ನು ಹೊಂದಿದ್ದ ಹೋಬಳಿ ಮಟ್ಟದ 10 ತಂಡಗಳು ಪಾಲ್ಗೊಂಡಿದ್ದವು. ದಲಿತ ಮುಖಂಡ ಹಾಗೂ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಜೆ.ಎಲ್.ಜನಾರ್ಧನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು. ಈ ಸಂದರ್ಭ ಮಾತನಾಡಿದ ಜೆ.ಎಲ್.ಜನಾರ್ಧನ್ ಅವರು ಸಮಾಜದ ಒಗ್ಗಟ್ಟಿಗೆ ಕ್ರೀಡೆ ಸಹಕಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಪಾಲ್ಗೊಳ್ಳಬೇಕೆಂದು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಪ್ರಥಮ ದರ್ಜೆ ಸಹಾಯಕ ಶಾಂತಕುಮಾರ್, ಮಾಜಿ ಸೈನಿಕ ವಿಶ್ವನಾಥ್, ಗ್ರಾ.ಪಂ ಸದಸ್ಯ ಪ್ರಸನ್ನ, ದಲಿತ ಮುಖಂಡರಾದ ಜಗದೀಶ್, ವಸಂತ, ವೀರೇಂದ್ರ, ವೀರಭದ್ರ, ಚಂದ್ರು, ವಸಂತ ಯುವ…

Read More

ಮಡಿಕೇರಿ ಫೆ.27 NEWS DESK : ಮಡಿಕೇರಿಯ ಮಲ್ಲಿಕಾರ್ಜುನ ನಗರದಲ್ಲಿರುವ ಶ್ರೀ ರಾಮೋತ್ಸವ ಆಡಳಿತ ಮಂಡಳಿ ವತಿಯಿಂದ ಫೆ.28 ರಂದು 35ನೇ ಶ್ರೀ ರಾಮೋತ್ಸವ ಅಂಗವಾಗಿ ಸಭೆ ನಡೆಯಲಿದೆ. ಶ್ರೀ ಕೋದಂಡ ರಾಮ ದೇವಾಲಯದಲ್ಲಿ ಸಂಜೆ 5 ಗಂಟೆಗೆ ಶ್ರೀ ಕೋದಂಡರಾಮ ದೇವಾಲಯ ಸಮಿತಿ ವತಿಯಿಂದ ಪೂಜೆ ಸಲ್ಲಿಸಿ, ನಂತರ ದೇವಾಲಯದ ಆವರಣದಲ್ಲಿ ಕೆ.ಎಂ.ಗಣೇಶ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಸರ್ವ ಸದಸ್ಯರು ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡುವಂತೆ ಪ್ರಧಾನ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ ಮನವಿ ಮಾಡಿದ್ದಾರೆ.

Read More

ಮಡಿಕೇರಿ ಫೆ.27 NEWS DESK : ಕೂಡುಮಂಗಳೂರು ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆಯು ಪಂಚಾಯತಿ ಅಧ್ಯಕ್ಷ ಬಾಸ್ಕರ್ ನಾಯಕ್  ಅವರ ಅಧ್ಯಕ್ಷತೆಯಲ್ಲಿ ನಡೆಯಿತು.  ಸಭೆಯಲ್ಲಿ ಮುಂದಿನ ತಿಂಗಳಲ್ಲಿ ಆನೆ ಕೆರೆ ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಇರುವ ಕೋಳಿ, ಮತ್ತು ಆಡು ಮಾಂಸದ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ ಮಾಡುವ ಮೂಲಕ ಗ್ರಾಮ ಪಂಚಾಯತಿಗೆ ಆದಾಯ ಕ್ರೋಡೀಕರಿಸುವ ವಿವಿಧ ಯೋಜನೆಯಗಳ ಬಗ್ಗೆ ಹಾಜರಿದ್ದ ಸದಸ್ಯರು ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.  ಅಲ್ಲದೆ ಈಗಾಗಲೇ 15 ನೇ ಹಣಕಾಸು ಯೋಜನೆಯ ಅಡಿಯಲ್ಲಿ ಕ್ರಿಯಾ ಯೋಜನೆ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸುವ ಬಗ್ಗೆ ಚರ್ಚೆಗಳು, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುವ ವಿಷಯ ಹಾಗೂ ವಸತಿ ರಹಿತರಿಗೆ ನಿವೇಶನದ ಜಾಗವನ್ನು ಒದಗಿಸುವ ಬಗ್ಗೆ ಚರ್ಚೆಗಳು ನಡೆದವು. ಸಭೆಯಲ್ಲಿ ಹಾಜರಿದ್ದ ಸದಸ್ಯರು ಮುಂದಿನ ದಿನಗಳಲ್ಲಿ ಬೇಸಿಗೆ ಕಾಲವು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ…

Read More

ಮಡಿಕೇರಿ ಫೆ.27 NEWS DESK : ಮಡಿಕೇರಿ ಸಂಚಾರಿ ಪೊಲೀಸ್ ಠಾಣೆಯ ವತಿಯಿಂದ ಮಡಿಕೇರಿ ನಗರದ ರಾಜರಾಜೇಶ್ವರಿ ಶಾಲಾ ಮಕ್ಕಳಿಗೆ “ತೆರೆದ ಮನೆ” ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಡಿಕೇರಿ ಸಂಚಾರ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಸಂಚಾರ ಸುರಕ್ಷತೆ, ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಿದರು.

Read More

ಮಡಿಕೇರಿ ಫೆ.27 NEWS DESK : ಪ್ರತಿಷ್ಠಿತ ಸಿಐಐ – ಎಫ್‍ಪಿಒ ಎಕ್ಸಲೆನ್ಸಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಾಪೋಕ್ಲುವಿನ ಪೊನ್ನಾಡ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ನ ಪ್ರಮುಖರನ್ನು ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ ನಲ್ಲಿ ನಡೆದ ಮಹಾಶಿವರಾತ್ರಿ ಆಚರಣೆ ಸಂದರ್ಭ ಇಶಾ ಫೌಂಡೇಶನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈಶಾ ಫೌಂಡೇಶನ್ ನ 25 ಎಫ್‍ಪಿಒಗಳಲ್ಲಿ ಒಂದಾದ ನಾಪೋಕ್ಲುವಿನ ಪೊನ್ನಾಡ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಖರೀದಿ ಮತ್ತು ಮಾರಾಟ ವ್ಯವಹಾರದಲ್ಲಿ ರೂ.10 ಕೋಟಿಗೂ ಮೀರಿ ವ್ಯವಹಾರ ನಡೆಸಿದ ಯಶಸ್ವೀ ಸಂಸ್ಥೆ ಎಂಬ ಸಾಧನೆಗಾಗಿ 2023-24 ನೇ ಸಾಲಿನ ಸಿಐಐ – ಎಫ್‍ಪಿಒ ಎಕ್ಸಲೆನ್ಸಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸಮಸ್ತ ರೈತರ ಪರವಾಗಿ ನಾಪೋಕ್ಲುವಿನ ಪೊನ್ನಾಡ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ನ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ನಿರ್ದೇಶಕರುಗಳಾದ ಕೇಟೋಳಿರ ರತ್ನ ಚರ್ಮಣ ಹಾಗೂ ಕೋಡಿರ ಪ್ರಸನ್ನ ಅವರುಗಳನ್ನು ಇಶಾ ಫೌಂಡೇಶನ್…

Read More

ಮಡಿಕೇರಿ ಫೆ.27 NEWS DESK :  ಲೇಖಕಿ ಕೆ.ಟಿ.ವಾತ್ಸಲ್ಯ  ವಿರಚಿತ “ಮೂರನೇ ಮಹಾಯುದ್ಧ ಮತ್ತು ಶಾಂತಿ” ಪುಸ್ತಕವು ಖ್ಯಾತ ಸಾಹಿತಿ ದಿ.ಕೆ.ಎ.ತಂಗವೇಲು ಮತ್ತು ದಿ.ಗೌರಮ್ಮ ಅವರ ಜ್ಞಾಪಕಾರ್ಥವಾಗಿ  ವಿರಾಜಪೇಟೆಯಲ್ಲಿ ಲೋಕಾರ್ಪಣೆಗೊಂಡಿತು.  ದಕ್ಷಿಣ ಕೊಡಗು ಲೇಖಕಿಯರ ಮತ್ತು ಕಲಾವಿದರ ಬಳಗ ವಿರಾಜಪೇಟೆ ಹಾಗೂ ಶ್ರೀಜಿತ್ ಸಂಸ್ಥೆ ಕೊಡಗು ಸಹಯೋಗದಲ್ಲಿ ವಿರಾಜಪೇಟೆಯ ಪುರಭವನ(ಟೌನ್‍ಹಾಲ್)ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಹಾಗೂ ಗೋಣಿಕೊಪ್ಪ ಕಾವೇರಿ ಕಾಲೇಜಿನ ಸಹಪ್ರಾಧ್ಯಾಪಕರಾದ ಡಾ.ಮುಲ್ಲೇಂಗಡ ರೇವತಿ ಪೂವಯ್ಯ  ಬಿಡುಗಡೆ ಮಾಡಿದರು. ದಕ್ಷಿಣ ಕೊಡಗು ಲೇಖಕಿಯರ ಮತ್ತು ಕಲಾವಿದರ ವೇದಿಕೆಯ ಅಧ್ಯಕ್ಷರಾದ ಎಂ.ಪಿ.ಪುಷ್ಪಲತ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಮುಲ್ಲೇoಗಡ ಮಧುಶ್ ಪೂವಯ್ಯ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲರಾದ ಲತೀಶ್, ಸಾಹಿತಿ ಅಪರ್ಣ ಹುಲಿತಾಳ, ಕೊಡಗು ಹಿಂದೂ ಮಲಯಾಳಿ ಮಹಿಳಾ ಅಸೋಸಿಯೇಷನ್‍ನ ಶೀಬಾ ಪೃಥ್ವಿನಾಥ್, ಹಿರಿಯ ಸಾಹಿತಿ ಗಿರೀಶ್ ಕಿಗ್ಗಾಲು  ಹಾಜರಿದ್ದರು. ಜರ್ಮನ್ ನಿಂದ ವಿಶ್ವ ಮಕ್ಕಳಿಗೆ ಕಳುಹಿಸಿದ ಸಂದೇಶ ವನ್ನು ಕೆ.ಟಿ.ಕೌಶಲ್ಯ…

Read More

ಮಡಿಕೇರಿ ಫೆ.27 NEWS DESK : ಚುನಾವಣಾ ಸಂದರ್ಭದಲ್ಲಿ ರಾಜಕೀಯ ಮಾಡೋಣ, ಇನ್ನುಳಿದ ಅವಧಿಯಲ್ಲಿ ಪಕ್ಷಾತೀತವಾಗಿ, ಜಾತ್ಯತೀತವಾಗಿ, ಅಭಿವೃದ್ಧಿಗಾಗಿ ಶ್ರಮಿಸೋಣ. ಪ್ರತಿಯೊಂದು ಗ್ರಾಮ ಅಭಿವೃದ್ಧಿಯಾದರೆ ಇಡೀ ಜಿಲ್ಲೆ ಅಭಿವೃದ್ಧಿಯಾಗಲಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅಭಿಪ್ರಾಯಪಟ್ಟರು. ಮಡಿಕೇರಿ ತಾಲ್ಲೂಕಿನ ಹೊದ್ದೂರು ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಅಭಿವೃದ್ಧಿ ವಿಷಯದಲ್ಲಿ ನಾನು ಯಾರೊಂದಿಗೂ ಕೂಡ ರಾಜಕೀಯ ಮಾಡಲು ಹೋಗುವುದಿಲ್ಲ. ಗ್ರಾಮ ಪಂಚಾಯಿತಿ ಸದಸ್ಯರು ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದರೆ ಗ್ರಾಮದ ಅಭಿವೃದ್ಧಿ ಸಾಧ್ಯ. ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಈಗಾಗಲೇ ಹೊದ್ದೂರು ಗ್ರಾ.ಪಂ ಮಾದರಿ ಗ್ರಾಮ ಪಂಚಾಯಿತಿಯಾಗಿ ಕಾರ್ಯನಿರ್ವಹಿಸುತ್ತಿದೆ.  ಚುನಾವಣಾ ಪೂರ್ವದಲ್ಲಿ ಪಾಲೆಮಾಡು ನಿವಾಸಿಗಳಿಗೆ ನೀಡಿದ್ದ ಭರವಸೆಯಂತೆ ಇದೀಗ 201 ಕುಟುಂಬಗಳಿಗೆ ಹಕ್ಕು ಪತ್ರವನ್ನು ನೀಡಿದ್ದೇವೆ. ನ್ಯಾಯುತವಾದ ಹೋರಾಟಕ್ಕೆ ಸದಾ ನಾನು ನಿಮ್ಮೊಂದಿಗೆ ಕೈ ಜೋಡಿಸುತ್ತೇನೆ ಎಂದರು.  ಕಳೆದ ಎರಡು ದಶಕಗಳಿಂದ ಪಾಲೆಮಾಡು ನಿವಾಸಿಗಳಿಗೆ ಸಿಗದ ಹಕ್ಕು ಪತ್ರವನ್ನು ನಾನು…

Read More

https://youtu.be/FoVpgvJXH5U?si=gGCXaWQiWnoVsIMF ಮಡಿಕೇರಿ ಫೆ.27 NEWS DESK : ಕೊಡಗಿನ ಚಿತ್ರಶಿಲ್ಪ ಕಲಾವಿದ ಬಿ.ಕೆ.ಗಣೇಶ್ ರೈ ಅವರು ಡಿಜಿಟಲ್ ಕಂಪ್ಯೂಟರ್ ಗ್ರಾಫಿಕ್ಸ್ ಮೂಲಕ ರಚಿಸಿರುವ ಜೀವನದಿ ಮಾತೆ ಕಾವೇರಿಯ ನೂತನ ಚಿತ್ರಪಟವನ್ನು ಶಿವರಾತ್ರಿಯಂದು ಕಾವೇರಿಯ ಉಗಮಸ್ಥಾನ ತಲಕಾವೇರಿಯಲ್ಲಿ ಬಿಡುಗಡೆಗೊಳಿಸಲಾಯಿತು. ಶಿವರಾತ್ರಿಯ ಶುಭದಿನದಂದು ತಲಕಾವೇರಿಯ ಕಾವೇರಿ ಕುಂಡಿಕೆಯ ಬಳಿ ವಿಶೇಷ ಪೂಜೆ ಹಾಗೂ ಅರ್ಚನೆ ಸಲ್ಲಿಸಿದ ಬಿ.ಕೆ.ಗಣೇಶ್ ರೈ ಅವರು ತಮ್ಮ ಹಲವು ವರ್ಷಗಳ ಕನಸಾಗಿದ್ದ ಮಾತೆ ಕಾವೇರಿಯ ವರ್ಣರಂಜಿತ ಚಿತ್ರಪಟವನ್ನು ಅನಾವರಣಗೊಳಿಸಿದರು. ಶ್ವೇತವರ್ಣದ ಸೀರೆಯುಟ್ಟ ಮಾತೆ ಕಾವೇರಿಯು ಕಳಸವನ್ನು ಹಿಡಿದು ಪದ್ಮಾಸನ ರೂಪದಲ್ಲಿ ದರ್ಶನ ನೀಡಿ ಭಕ್ತರನ್ನು ಹರಸುತ್ತಿರುವ ಈ ಚಿತ್ರಪಟ ಅತ್ಯಂತ ಆಕರ್ಷಕ ಮತ್ತು ಅಪರೂಪದ್ದಾಗಿದೆ. ಇದು ಅಫ್ ಸೆಟ್ ವರ್ಣರಂಜಿತ ಮುದ್ರಣವಾಗಿದ್ದು, ಎ3, ಎ4, ಪೋಸ್ಟ್ ಕಾರ್ಡ್ ಮತ್ತು ಐಡಿ ಕಾರ್ಡ್ ಅಳತೆಯಲ್ಲಿ ಲಭ್ಯವಿದೆ. ಕಾವೇರಿ ಮಾತೆಯ ಪದ್ಮಾಸನ ರೂಪದ ಶ್ಲೋಕದಿಂದ ಸ್ಫೂರ್ತಿಗೊಂಡು ಈ ಚಿತ್ರ ರಚಿಸಿರುವುದಾಗಿ ಅವರು ತಿಳಿಸಿದರು. 1980ರಲ್ಲಿ ಪ್ರಥಮ ಬಾರಿಗೆ ಮಾತೆ ಕಾವೇರಿಯ ವರ್ಣಚಿತ್ರವನ್ನು ಶಿವಕಾಶಿಯಲ್ಲಿ…

Read More

ನಾಪೋಕ್ಲು ಫೆ.27 NEWS DESK : ಕಕ್ಕಬೆಯ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ಮಾ.13 ರಂದು ಕುಂಬ್ಯಾರ್ ಕಲಾಡ್ಚ ವಾರ್ಷಿಕೋತ್ಸವ ನಡೆಯಲಿದೆ. ಫೆ.28 ರಂದು ಅಪರಾಹ್ನ ಆದಿಸ್ಥಾನ ಮಲ್ಮದಲ್ಲಿ ದೇವಕಟ್ಟು ಜಾರಿಯಾಗಲಿದೆ. ಪಾಡಿ ನಾಲ್ಕುನಾಡಿಗೆ ಸೀಮಿತವಾಗಲಿರುವ ದೇವಕಟ್ಟು ಮಾ.13ರ ಉತ್ಸವದ ದಿನ ಅಪರಾಹ್ನ ಮಲ್ಮ ಕ್ಷೇತ್ರದಲ್ಲಿ ಸಂಪನ್ನಗೊಳ್ಳಲಿದೆ. ಪರಂಪರೆಯಂತೆ ಕುಂಬ್ಯಾರು ಕಲಾಡ್ಚ ಹಬ್ಬದ ದಿನ ಬೆಳಿಗ್ಗೆ 9.30 ಗಂಟೆಗೆ ದೇವತಕ್ಕರಾದ ಪರದಂಡ, ಪೆರಿಯಂಡ ಮನೆಯಿಂದ ಜೋಡೆತ್ತುಗಳ ಎತ್ತು ಪೋರಾಟ ಇದರೊಂದಿಗೆ ಮಾದಂಡ, ಕೋಡಿಮಣಿಯಂಡ, ಚೌರಿರ, ಅಲ್ಲಾರಂಡ ಮನೆತನದವರ ಎತ್ತು ಪೋರಾಟ ಆಗಮಿಸಲಿದೆ. ದೇವಾಲಯದಲ್ಲಿ ತುಲಾಭಾರ ಸೇವೆ, ಮಹಾಪೂಜೆಗಳು ನೆರವೇರಲಿದ್ದು, ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ. ಬಳಿಕ ದೇವರ ಉತ್ಸವ ಮೂರ್ತಿಯೊಂದಿಗೆ ಮಲ್ಮ ಬೆಟ್ಟಕ್ಕೆ ತೆರಳಿ, ನೆಲಜಿ ಪೇರೂರು ಭಾಗಗಳಿಂದ ಬರುವ ತಕ್ಕ ಮುಖ್ಯಸ್ಥರ ಜೋಡೆತ್ತು ಪೋರಾಟಗಳು ಪಾಡಿಯಿಂದ ಬಂದ ಜೋಡೆತ್ತುಪೋರಾಟ ಸೇರಿ ದೇವ ಕಟ್ಟನ್ನು ಕೊನೆಗೊಳಿಸಲಾಗುವುದು. ಪಾಡಿ ದೇವಸ್ಥಾನದಲ್ಲಿ ದೇವರ ನೃತ್ಯ ನಡೆಯಲಿದೆ. ಆ ಮೂಲಕ ಉತ್ಸವ ಸಂಪನ್ನಗೊಳ್ಳಲಿದೆ ಎಂದು…

Read More