ಸಿದ್ದಾಪುರ ಫೆ.25 NEWS DESK : ನೆಲ್ಲಿಹುದಿಕೇರಿ ಶ್ರೀ ಮಹಾದೇವ ಮತ್ತು ಶ್ರೀ ಮಾರಿಯಮ್ಮ ದೇವಾಲಯದಲ್ಲಿ ಮಾ.1 ರಿಂದ 5ರ ವರೆಗೆ ಶ್ರೀ ಮಹಾದೇವ, ಶ್ರೀ ಮಹಾಗಣಪತಿ ಮತ್ತು ಶ್ರೀ ದುರ್ಗಾದೇವಿ ದೇವರ ಪ್ರತಿಷ್ಠಾ ಅಷ್ಠಬಂಧ, ಬ್ರಹ್ಮಕಳಶೋತ್ಸವ ಹಾಗೂ ವಾರ್ಷಿಕೋತ್ಸವ ನಡೆಯಲಿದೆ. ದೇವಾಲಯದಲ್ಲಿ ಐದು ದಿನಗಳ ಕಾಲ ಪುತ್ತೂರಿನ ಬ್ರಹ್ಮಶ್ರೀ ವೇದಮೂರ್ತಿ ಗಿರೀಶ್‍ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಲಿದೆ. ಮಾ.1 ರಂದು ಸಂಜೆ 5 ಗಂಟೆಗೆ ತಂತ್ರಿಗಳ ಆಗಮನ, 7 ಗಂಟೆಯಿಂದ ಸಾಮೂಹಿಕ ಪ್ರಾರ್ಥನೆ, ಪಂಚಗವ್ಯ, ಪುಣ್ಯಾಹ ವಾಚನ, ಆಚಾರ್ಯವರ್ಣ, ಪ್ರಸಾದ ಪರಿಗ್ರಹ, ಪಶುದಾನ ಶುದ್ಧಿ, ಅಂಕುರ ಆರೋಹಣ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ದಿಕ್ಪಾಲಕ ಬಲಿ, ದುರ್ಗಾದೇವರ ಆದಿವಾಸ ಪೂಜೆ, ಶಯನಾದಿವಾಸ ಜರುಗಲಿದೆ. ಮಾ.2 ರಂದು ಬೆಳಿಗ್ಗೆ ಅಂಕುರ ಪೂಜೆ, ಗಣಪತಿ ಹೋಮ, ದುರ್ಗಾದೇವಿ ಪ್ರತಿಷ್ಠಾ ಹೋಮ, ಪ್ರತಿಷ್ಠಾ ಕಳಸ ಪೂಜೆ, 8.30ರ ಮೀನ ಲಗ್ನದ ಶುಭಮೂರ್ತದಲ್ಲಿ ಗಣಪತಿ ಪ್ರತಿಷ್ಠೆ, 11.25ರ…
ಲೇಖಕ: admin
ಮಡಿಕೇರಿ ಫೆ.25 NEWS DESK : ಜ್ಞಾನವನ್ನು ಕದಿಯಲು ಯಾರಿಗೂ ಸಾಧ್ಯವಿಲ್ಲ. ಅದು ಶಿಕ್ಷಣದಿಂದ ಬರುತ್ತದೆ. ಪ್ರೌಢಶಾಲಾ ಹಂತದಲ್ಲಿ ಉತ್ತಮ ಶಿಕ್ಷಣ ಸಿಕ್ಕಿ ಅಭ್ಯರ್ಥಿಗಳು ಮನಸ್ಸು ಮಾಡಿದರೆ ಯಾವ ಸಾಧನೆ ಬೇಕಾದರೂ ಮಾಡಬಹುದು ಎಂದು ಸಾಹಿತಿ, ಶ್ರೀಮಂಗಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಉಳುವಂಗಡ ಕಾವೇರಿ ಉದಯ ನುಡಿದರು. ಬಿರುನಾಣಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಹುದಿಕೇರಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸರಕಾರಿ ಪ್ರಾಥಮಿಕ ಶಾಲೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಕೈಬುಲಿರ ಪಾರ್ವತಿ ಬೋಪಯ್ಯ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. 2023-24ನೇ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ನಡೆದ ಹತ್ತನೇ ತರಗತಿಯ ಕನ್ನಡ ಮಾಧ್ಯಮ ಪರಿಕ್ಷೆಯಲ್ಲಿ ಮೊದಲಿಗಳಾಗಿ ಬಂದ ಯು.ಅದವಿಯಾ ಸಾಕ್ಷಿ ಎಂದರು. ಮಾದಾಪುರದಂತಹ ಗ್ರಾಮೀಣ ಪ್ರದೇಶದ ಶ್ರೀಮತಿ ಚೆನ್ನಮ್ಮ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ಜಿಲ್ಲೆಗೆ ಪ್ರಥಮ ಬಂದದ್ದು ನಿಜಕ್ಕೂ ಸಾಧನೆಯೇ ಸರಿ, ಇದು…
ಮಡಿಕೇರಿ ಫೆ.25 NEWS DESK : ಮಹಾಶಿವರಾತ್ರಿಯ ಪ್ರಯುಕ್ತ ಮೈಸೂರಿನ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಮೈಸೂರಿನಲ್ಲಿ ವಿಶ್ವನಾಥನ ದಿವ್ಯ ದರ್ಶನ ಮತ್ತು 12 ದಿನಗಳ ಜ್ಞಾನ-ವಿಜ್ಞಾನ ಮೇಳ ಕಾರ್ಯಕ್ರಮ ನಡೆಯುತ್ತಿದೆ. ಮೈಸೂರು ನಗರದ ಹುಣಸೂರು ರಸ್ತೆಯಲ್ಲಿರುವ ಐಶ್ವರ್ಯ ಪೆಟ್ರೋಲ್ ಬಂಕ್ ಬಳಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಕಾಶಿ ವಿಶ್ವನಾಥನ ಮಾದರಿಯ ಮಂದಿರ ನಿರ್ಮಾಣ ಮಾಡಿ ಅನೇಕರಿಗೆ ಈಶ್ವರೀಯ ಸಂದೇಶವನ್ನು ನೀಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಮಡಿಕೇರಿ ಬ್ರಹ್ಮಾಕುಮಾರಿ ಶಾಖೆಯ ಸಂಚಾಲಕರಾದ ಬ್ರಹ್ಮಾಕುಮಾರಿ ಧನಲಕ್ಷ್ಮಿ ಅಕ್ಕನವರು ಭಾಗವಹಿಸಿ ಏಕಾಗ್ರತೆ ಕುರಿತಾದ ಚಿಂತನಾ ಕಾರ್ಯಕ್ರಮ ನಡೆಸಿಕೊಟ್ಟರು. ಮಡಿಕೇರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭ ನಿವೃತ್ತ ಉಪನ್ಯಾಸಕರು ಹಾಗೂ ಬರಹಗಾರರಾದ ಕಸ್ತೂರಿ ಗೋವಿಂದಮಯ್ಯ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಚೈತನ್ಯ ದೇವಿ, ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ ಹಾಗೂ ಮಾನಸಿಕ ನೆಮ್ಮದಿಗಾಗಿ “ಮೈಂಡ್ ಸ್ಪಾ” ವಿಶೇಷ ಉಪನ್ಯಾಸ ಕಾರ್ಯಕ್ರಮ, ರಾಜಯೋಗ ಶಿಬಿರ, ಪ್ರತಿನಿತ್ಯ ವಿಶೇಷ ಗಣ್ಯರಿಂದ ಪ್ರವಚನ ಹಾಗೂ ಆಧ್ಯಾತ್ಮಿಕ ಚಿಂತನಾ ಕಾರ್ಯಕ್ರಮ…
ಮಡಿಕೇರಿ ಫೆ.25 NEWS DESK : ಮಹಾಶಿವರಾತ್ರಿಯ ಪ್ರಯುಕ್ತ ಮಡಿಕೇರಿಯ ಬ್ರಹ್ಮಾಕುಮಾರೀಸ್ ಲೈಟ್ ಹೌಸ್ ನಲ್ಲಿ ಫೆ.26 ರಂದು 89ನೇ ತ್ರಿಮೂರ್ತಿ ಶಿವ ಜಯಂತಿ ಮಹೋತ್ಸವ ನಡೆಯಲಿದೆ.
ಮಡಿಕೇರಿ ಫೆ.25 NEWS DESK : ಕುಶಾಲನಗರ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕೊಡಗು-ಮೈಸೂರು ಕ್ಷೇತ್ರದ ಸಂಸದ ಯದುವೀರ್ ಒಡೆಯಲ್ ಸ್ವೆಟರ್ ವಿತರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು ವಿದ್ಯಾರ್ಥಿಗಳಿಗೆ ಸೌಲಭ್ಯಗಳನ್ನು ತಲುಪಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ವಿಕಸಿತ ಭಾರತದ ಕನಸನ್ನು ನನಸು ಮಾಡುವಲ್ಲಿ ಮಕ್ಕಳ ಪಾತ್ರ ಮುಖ್ಯವಾಗಿದೆ ಎಂದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸಮಾಜ ವಿರೋಧಿಗಳಿಗೆ ಅವಕಾಶಗಳು ಹೆಚ್ಚಾಗುತ್ತಿದೆ ಎಂದರು. ಸಾಮಾನ್ಯ ಜನರು ಭಯದ ವಾತಾವರಣದಲ್ಲಿ ಬದುಕುವ ಪರಿಸ್ಥತಿ ಮೈಸೂರಿನಲ್ಲಿದೆ. ಗೋಣಿಕೊಪ್ಪದಲ್ಲಿ ಪೊಲೀಸರ ಮೇಲೆ ನಡೆದ ದಾಳಿ ಗಮನಿಸಿದ್ದೇನೆ. ಪೊಲೀಸರನ್ನುಗೌರವದಿಂದ ಕಾಣಬೇಕು. ಪೊಲೀಸರ ಸಮವಸ್ತ್ರಕ್ಕೆ ಗೌರವಿಸಬೇಕು. ಪೊಲೀಸ್ ಇಲಾಖೆಯ ರಕ್ಷಣೆಯ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ. ಇಲ್ಲವಾದಲ್ಲಿ ಭವಿಷ್ಯದಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಯಲ್ಲಿ ತೊಂದರೆಯಾಗಲಿದೆ. ರಾಜ್ಯ ಸರ್ಕಾರ ಪೊಲೀಸರ ರಕ್ಷಣೆಯಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು. ಈ ಸಂದರ್ಭ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಪಕ್ಷದ ಕಾರ್ಯಕರ್ತರು, ಶಿಕ್ಷಕರು, ಶಾಲಾ ಅಭಿವೃದ್ದಿ ಸಮಿತಿ ಸದಸ್ಯರು ಕಾರ್ಯಕ್ರಮದಲ್ಲಿ…
ಮೈಸೂರು ಫೆ.25 NEWS DESK : ರಾಜಕೀಯ ಇಚ್ಛಾಶಕ್ತಿ ಇದ್ದರೆ ಜನರಿಗಾಗಿ ಜನಪ್ರತಿನಿಧಿಗಳು ಎಂಥೆಂಥ ಕೆಲಸ ಮಾಡಬಹುದು ಎಂಬುದಕ್ಕೆ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರಯತ್ನಕ್ಕೆ ಫಲವೇ ಸಾಕ್ಷಿಯಾಗಿದೆ. ತಮ್ಮ ಕ್ಷೇತ್ರ ವ್ಯಾಪ್ತಿಗೆ ಬರುವ ಕೊಡುಗ ಕರಿ ಮೆಣಸು ಬೆಳಗಾರರ ಸಂಕಷ್ಟವನ್ನು ನಿವಾರಿಸಲು ಸಂಸದ ಯದುವೀರ್ ಯಶಸ್ವಿಯಾಗಿದ್ದಾರೆ. ಕೊಡಗಿನಲ್ಲಿ ಅತಿ ಹೆಚ್ಚಾಗಿ ಕರಿ ಮೆಣಸು ಬೆಳೆಯಲಾಗುತ್ತದೆ. ಆದರೆ ಕೇಂದ್ರ ಸರ್ಕಾರ ಇದರ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ ) ವಿಧಿಸಿತ್ತು. ಇದರಿಂದ ಇಲ್ಲಿನ ಬೆಳೆಗಾರರಿಗೆ ಭಾರಿ ತೊಂದರೆಯಾಗಿತ್ತು. ಕೊಡಗಿನ ಗೋಣಿಕೊಪ್ಪದ ಬೆಳೆಗಾರರೊಬ್ಬರಿಗೆ ಒಂದು ಕೋಟಿ ರೂಪಾಯಿ ಜಿಎಸ್‌ಟಿ ಕಟ್ಟುವಂತೆಯೂ ನೋಟಿಸ್ ನೀಡಲಾಗಿತ್ತು. ಆದರೆ ಇವರು ಕರ್ನಾಟಕ ಕಾಫಿ ಬೆಳೆಗಾರರ ಸಂಘ, ಕರ್ನಾಟಕ ಬೆಳೆಗಾರರ ಸಂಘ, ಕೊಡಗು ಪ್ಲಾಂಟರ್ಸ್ ಅಸೋಸಿಯೇಶನ್ ನಿಯೋಗದೊಂದಿಗೆ ಸಂಸದ ಯದುವೀರ್ ಭೇಟಿ ಮಾಡಿ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು ಮನವಿ ಸಲ್ಲಿಸಿದ್ದರು. ಇದಕ್ಕೆ ಕೂಡಲೇ ಸ್ಪಂದಿಸಿದ ಸಂಸದ ಯದುವೀರ್ ಅವರು ವಿತ್ತ ಸಚಿವರಾದ ನಿರ್ಮಲಾ…
ಮಡಿಕೇರಿ ಫೆ.25 NEWS DESK : ಭಾಗಮಂಡಲದಲ್ಲಿರುವ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಫೆ.26 ರಂದು “ಮಹಾಶಿವರಾತ್ರಿ” ಕಾರ್ಯಕ್ರಮ ನಡೆಯಲಿದ್ದು, ಈ ಪ್ರಯುಕ್ತ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ರಂಗೋಲಿ ಸ್ಪರ್ಧೆಯನ್ನು (ರಂಗೋಲಿ ಪುಡಿಯನ್ನು ತಾವೆ ತರುವುದು) ಏರ್ಪಡಿಸಲಾಗಿದೆ. ಆಸಕ್ತ ಸ್ಪರ್ಧಾಳುಗಳು ಫೆ.26 ರಂದು ಬೆಳಿಗ್ಗೆ 9.30ಕ್ಕೆ ದೇವಾಲಯದಲ್ಲಿ ಹಾಜರಾಗುವಂತೆ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.
ನಾಪೋಕ್ಲು ಫೆ.25 NEWS DESK : ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ಆರ್ಥಿಕ ಅಭಿವೃದ್ಧಿಯನ್ನೂ ಸಾಧಿಸಲಾಗುತ್ತಿವೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ಬಲ್ಲಮಾವಟ್ಟಿ ಗ್ರಾಮ ಪಂಚಾಯತಿಯ ಸಭಾಂಗಣದಲ್ಲಿ ಬಲ್ಲಮಾವಟ್ಟಿ ವಲಯ ಕಾಂಗ್ರೆಸ್ ವತಿಯಿಂದ ಆಯೋಜಿಸಿದ ಅಭಿನಂದನಾ ಸಭೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಹಿಂದಿನ ಸರ್ಕಾರದ ಅವಧಿಯಲ್ಲಿ ಬಹಳಷ್ಟು ಕಾರ್ಯಗಳು ಸ್ಥಗಿತಗೊಂಡಿದ್ದವು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕಿದೆ ಎಂದರು. ಬಲ್ಲಮಾವಟಿ ಗ್ರಾ.ಪಂ ವ್ಯಾಪ್ತಿಯಲ್ಲಿ ಎರಡು ಕೋಟಿ 20 ಲಕ್ಷ ರೂ.ಗಳ ಕೆಲಸ ಆಗಿದೆ. ಲೋಕೋಪಯೋಗಿ ಇಲಾಖೆ ವತಿಯಿಂದ 35 ಕೋಟಿ ರೂ.ಗಳ ಅನುದಾನ ನೀಡಲಾಗಿದೆ ವಿಶೇಷ ಅನುದಾನ 20 ಕೋಟಿ ರೂ.,ವಿರಾಜಪೇಟೆ ಕ್ಷೇತ್ರದಲ್ಲಿ ಆರು ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಗಳನ್ನು…
ನಾಪೋಕ್ಲು ಫೆ.25 NEWS DESK : ಚೆರಿಯಪರಂಬು, ಕಲ್ಲುಮೊಟ್ಟೆ ವ್ಯಾಪ್ತಿಯ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ಚೆರಿಯಪರಂಬುವಿನಲ್ಲಿ 5ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿ, 1.86 ಕೋಟಿ ವೆಚ್ಚದ ಚೆರಿಯಪರಂಬು – ಕಲ್ಲು ಮೊಟ್ಟೆ ಸಂಪರ್ಕ ರಸ್ತೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಚೆರಿಯಪರಂಬು ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಜನರು ಬಹಳ ಸಮಸ್ಯೆಯನ್ನು ಎದುರಿಸುತ್ತಿದ್ದು, ರಸ್ತೆ ಮುಳುಗಡೆಯಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಬಾರಿ ಮಳೆಗಾಲಕ್ಕಿಂತ ಮೊದಲು ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ. ರಸ್ತೆ ಕಾಮಗಾರಿಗಾಗಿ ಅಲ್ಪಸಂಖ್ಯಾತ ಇಲಾಖೆಯಿಂದ ವಿಶೇಷ ಅನುದಾನವನ್ನು ಪಡೆದುಕೊಳ್ಳಲಾಗಿದೆ ಎಂದರು. ಈ ಭಾಗದಲ್ಲಿ ಅಲ್ಪಸಂಖ್ಯಾತರೆ ಹೆಚ್ಚಿರುವುದರಿಂದ ಜಿಲ್ಲಾಧಿಕಾರಿಗಳ ಮೂಲಕ ಪ್ರಸ್ತಾವನೆಯನ್ನು ಅಲ್ಪಸಂಖ್ಯಾತರ ಇಲಾಖೆಯ ಮಂತ್ರಿಗಳಾದ ಜಮೀರ್ ಅಹ್ಮದ್ ಅವರಿಗೆ ಸಲ್ಲಿಸಿ ಭೇಟಿ ಮಾಡಿದ ಕೂಡಲೇ ಅನುದಾನವನ್ನು ಬಿಡುಗಡೆಗೊಳಿಸಿದ್ದಾರೆ. ಇದಕ್ಕಾಗಿ ಅವರಿಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿಕೆಶಿ ಕುಮಾರ್ ಅವರಿಗೆ ಕೃತಜ್ಞತೆ…
ಮಡಿಕೇರಿ ಫೆ.27 NEWS DESK : ಕಾಫಿ ಮಂಡಳಿ ಮತ್ತು ಸುಕ್ಡೇನ್ ಕಾಫಿ ಪ್ರವೇಟ್ ಲಿಮಿಟೆಡ್ ಸಹಯೋಗದೊಂದಿಗೆ ನಿಟ್ಟೂರು ಗ್ರಾಮ ಪಂಚಾಯತ್ ಮತ್ತು ಕಾರ್ಮಾಡು ಇಗ್ಗುತ್ತಪ್ಪ ಸಂಘದ ಸಹಯೋಗದಲ್ಲಿ ನಿಟ್ಟೂರು ಗ್ರಾ.ಪಂ ಸಭಾಂಗಣದಲ್ಲಿ “ಸುಸ್ಥಿರ ಕಾಫಿ ಕೃಷಿಗೆ ಅನುಸರಿಸಬೇಕಾದ ಉತ್ತಮ ಕೃಷಿ ಪದ್ದತಿಗಳ ಕುರಿತು ಕಾರ್ಯಾಗಾರ ನಡೆಯಿತು. ಗೊಣಿಕೊಪ್ಪಲು ಕಾಫಿಮಂಡಳಿಯ ಉಪನಿರ್ದೆಶಕ ಡಾ.ಕೆ.ಶ್ರೀದೇವಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸುಸ್ಥಿರ ಕಾಫಿ ಉತ್ಪಾದನೆಯ ಮಹತ್ವದ ಬಗ್ಗೆ ವಿವರಿಸಿದರು. ಸಾಂಬರು ಸಂಶೋಧನಾ ಉಪಕೇಂದ್ರ ಅಪ್ಪಂಗಳದ ಹಿರಿಯ ವಿಜ್ಞಾನಿ ಡಾ.ಅಂಕೇಗೌಡ ಮಾತನಾಡಿ, ಕರಿಮೆಣಸು ಮತ್ತು ಏಲಕ್ಕಿ ಕೃಷಿ ಬೇಸಾಯ ಕ್ರಮಗಳ ಬಗ್ಗೆ ಮತ್ತು ಇತ್ತೀಚಿನ ಹವಮಾನ ಬದಲಾವಣೆಗೆ ತಕ್ಕಂತೆ ಕರಿ ಮೆಣಸು ಮತ್ತು ಏಲಕ್ಕಿ ಕೃಷಿಕರು ಅನುಸರಿಸಬೇಕಾದ ಕೃಷಿ ಪದ್ದತಿಗಳ ವಿಚಾರವಾಗಿ ಮಾಹಿತಿ ನೀಡಿದರು. ಕಾಫಿ ಸಂಸೋಧನಾ ಉಪಕೇಂದ್ರ ಚೆಟ್ಟಳ್ಳಿಯ ಮಣ್ಣು ವಿಜ್ಜನಿಗಳಾದ ಡಾ. ನಧಾಪ್ ಮಣ್ಣಿನ ಆರೋಗ್ಯ ಮತ್ತು ಸಮಗ್ರ ಪೋಷಕಾಂಶಗಳ ನಿರ್ವಹಣೆ ಬಗ್ಗೆ ಸಲಹೆಗಳನ್ನು ನೀಡಿದರು. ಗೊಣಿಕೊಪ್ಪಲು ಕಾಫಿ ಮಂಡಳಿಯ ತಳಿ ಅಭಿವೃದ್ಧಿ…






