ಮಡಿಕೇರಿ ಫೆ.25 NEWS DESK : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪೊನ್ನಮ್ಮ ಕುಶಾಲಪ್ಪ ಸ್ಕೌಟ್ ಮತ್ತು ಗೈಡ್ ಭವನದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮೊದಲಿಗೆ ದೀಪ ಬೆಳಗಿಸುವುದರೊಂದಿಗೆ ಸರ್ವಧರ್ಮ ಪ್ರಾರ್ಥನೆ ಮಾಡಲಾಯಿತು. ಭಗವದ್ಗೀತೆ, ಬೈಬಲ್, ಕುರಾನ್ ಪಠಣ ಮಾಡಲಾಯಿತು. ಜಿಲ್ಲಾ ಸ್ಕೌಟ್ ಆಯುಕ್ತರಾದ ಜಿಮ್ಮಿ ಸ್ವಿಕೇರಾ ದಿನದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್ ಪ್ರಸನ್ನ ಮಾತನಾಡಿ ಸ್ಕೌಟ್ ಮತ್ತು ಗೈಡ್ ಸಂಸ್ಥೆಯು ಮಕ್ಕಳಲ್ಲಿ ಮನಸ್ಥೈರ್ಯ ಮತ್ತು ಸೇವಾ ಮನೋಭಾವ ಹೆಚ್ಚಿಸಲು ಸಹಕಾರಿಯಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯೂ ಮಾತನಾಡಿ ಶತಮಾನಗಳ ಹಿಂದೆಯೇ ಬೇಡನ್ ಪೂವೆಲ್ ಅವರು ಮಕ್ಕಳ ಹಿತದೃಷ್ಟಿ ಇಟ್ಟುಕೊಂಡು ಇಂತಹ ಒಂದು ಸಂಸ್ಥೆಯನ್ನು ಹುಟ್ಟು ಹಾಕಿದ್ದು ಈ ಸಂಸ್ಥೆಯು ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ ಎಂದರೆ ತಪ್ಪಾಗಲಾರದು. ಯಾರೇ ಆದರೂ ಒಳ್ಳೆಯ ಕೆಲಸ…
ಲೇಖಕ: admin
ಮಡಿಕೇರಿ ಫೆ.25 NEWS DESK : ವಿರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಿಜಯನಗರದಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಾಣಗೊಂಡಿರುವ ನೂತನ ರಸ್ತೆಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. ನಂತರ ಮಾತನಾಡಿದ ಶಾಸಕರು ಇಂದಿನ ವೇಗದ ಯುಗಕ್ಕೆ ಅತ್ಯುತ್ತಮ ರಸ್ತೆಯ ಅವಶ್ಯಕತೆ ತುಂಬಾ ಇದ್ದು, ಈ ನಿಟ್ಟಿನಲ್ಲಿ ತಾನು ತನ್ನ ಕ್ಷೇತ್ರಾದ್ಯಂತ ಉತ್ತಮ ರಸ್ತೆ ನಿರ್ಮಿಸಲು ಅನುದಾನ ಒದಗಿಸುತ್ತಿರುವುದಾಗಿ ಹೇಳಿದರು. ಅಲ್ಪಸಂಖ್ಯಾತ ಇಲಾಖೆಯ ರೂ.10 ಲಕ್ಷ ಹಾಗೂ ಶಾಸಕರ ಅನುದಾನದ ರೂ.5 ಲಕ್ಷದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದೆ. ಬಳಿಕ ಪುರಸಭಾಧ್ಯಕ್ಷರು ಸದಸ್ಯರುಗಳು ಹಾಗೂ ಪ್ರಮುಖರೊಂದಿಗೆ ಸಭೆ ನಡೆಸಿದ ಶಾಸಕರು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಿದರು ಹಾಗೂ ಮಾಹಿತಿಯನ್ನು ಪಡೆದರು. ಬಳಿಕ ವಿಶೇಷ ಆಹ್ವಾನದ ಮೇರೆಗೆ ಇತ್ತೀಚಿಗೆ ಶುಭಾರಂಭಗೊಂಡಿದ್ದ ಕಾಸ್ಕೋಫಾಬ್ ಬೂಟಿಕ್ ಮಳಿಗೆಗೆ ಭೇಟಿ ನೀಡಿ ಶುಭ ಕೋರಿದರು. ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಟೌನ್ ಕಾಂಗ್ರೆಸ್ ಅಧ್ಯಕ್ಷರು,…
ಸುಂಟಿಕೊಪ್ಪ ಫೆ.25 NEWS DESK : ಕಲೆ ಮತ್ತು ಕ್ರೀಡೆಗೆ ಪರಸ್ಪರ ಬಾಂಧವ್ಯ ಮತ್ತು ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುವ ಅದ್ಬುತ ಶಕ್ತಿಯಿದೆ ಎಂದು ಸೋಮವಾರಪೇಟೆ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಅಭಿಪ್ರಾಯ ವ್ಯಕ್ತಪಡಿಸಿದರು. ಬೆಳ್ಳಿ ಹಬ್ಬದ ಅಂಗವಾಗಿ ನಾಕೂರು ಶಿರಂಗಾಲದ ಕಾನ್‍ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್ ವತಿಯಿಂದ ಕಾನ್‍ಬೈಲ್ ಶಾಲಾ ಆವರಣದಲ್ಲಿ ನಡೆದ ಬೆಳ್ಳಿಹಬ್ಬ ಮತ್ತು ಕ್ರೀಡೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಯುವ ಸಂಘಕ್ಕೆ 25 ವರ್ಷಗಳ ಇತಿಹಾಸವಿದ್ದು ಅದರ ಪರಿಣಾಮವೇ ಜಾತಿ, ಜನಾಂಗ, ರಾಜಕೀಯ ಮೀರಿದ ಈ ಕ್ರೀಡೋತ್ಸವ ಎಂದು ಬಣ್ಣಿಸಿದರು. ಕ್ರೀಡೋತ್ಸೋವ ಮತ್ತು ಯುವ ಸಂಘದ ಇತಿಹಾಸದಲ್ಲಿ 2 ತಲೆಮಾರುಗಳ ಕ್ಷಮವನ್ನು ಕಾಣಬಹುದಾಗಿದೆ. ಪ್ರೆಂಡ್ಸ್ ಯೂತ್ ಕ್ಲಬ್ ಮುಂದೆ ಸುವರ್ಣಮಹೋತ್ಸವ ವಜ್ರಮಹೋತ್ಸವ ಮತ್ತು ಅಮೃತಮಹೋತ್ಸವಗಳನ್ನು ದಾಟಿ ಶತಮನೋತ್ಸವ ಆಚರಿಸಲೆಂದು ಹಾರೈಸಿದರು. ನಾಕೂರಿನ ಪ್ರೆಂಡ್ಸ್ ಯೂತ್‍ಕ್ಲಬ್ ಕ್ರೀಡಾಕೂಟದ ಮೂಲಕ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುತ್ತಿದ್ದು, ಎಲ್ಲಾರನ್ನು ಒಳಗೊಳ್ಳುವ ಮನುಷ್ಯ ಪ್ರೀತಿಯ ಸಮಾಜವನ್ನು ನಿರ್ಮಿಸುತ್ತಿರುವ…
ಮಡಿಕೇರಿ ಫೆ.25 NEWS DESK : ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ನಡೆಯುವ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಫೆಬ್ರವರಿ, 26 ರಂದು ಬೆಳಗ್ಗೆ 9.30 ಗಂಟೆಯಿಂದ 12 ಗಂಟೆವರೆಗೆ ಸಾರ್ವಜನಿಕ ಭಕ್ತಾಧಿಗಳಿಗೆ ವಿಶೇಷ ಸೇವೆ ರುದ್ರಹೋಮ ಮತ್ತು ಏಕಾದಶ ರುದ್ರಾಭಿಷೇಕ ಹಾಗೂ ಅಲಂಕಾರ ಪೂಜೆ ನಡೆಯಲಿದೆ. ನಂತರ ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ ನಡೆಯಲಿದೆ. ಬಳಿಕ ವಿವಿಧ ಪೂಜೆ-ಅರ್ಚನೆಗಳು ನಡೆಯಲಿದೆ. ಈ ದಿನದಂದು ದೇವಾಲಯವು ರಾತ್ರಿಪೂರ್ತಿ ತೆರೆದಿರುತ್ತದೆ. ಭಕ್ತಾದಿಗಳು ದೇವಾಲಯದಲ್ಲಿ ನಡೆಯುವ ಪೂಜೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಬಾಜನರಾಗುವಂತೆ ಕೋರಿದೆ. ಹೆಚ್ಚಿನ ಮಾಹಿತಿಗೆ ದೂ.ಸಂ.9902290302, 9845821566 ನ್ನು ಸಂಪರ್ಕಿಸಬಹುದು ಎಂದು ಶ್ರೀ ಓಂಕಾರೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ದೇವರಾಜು ತಿಳಿಸಿದ್ದಾರೆ.
ಸುಂಟಿಕೊಪ್ಪ ಫೆ.25 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಲಾಕಾವೇರಿ ಜ್ಞಾನ ವಿಕಾಸ ಹಾಗೂ ಕಾನ್‍ಬೈಲ್ ಜನನಿ ಸ್ವಸಹಾಯ ಸಂಘದ ಸಂಯುಕ್ತಾಶ್ರಯದಲ್ಲಿ ಸಂಘದ ಸದಸ್ಯರುಗಳಿಗೆ ಇಡುವಳಿ ಯೋಜನೆ, ಸಂಪೂರ್ಣ ಸುರಕ್ಷಾ ಆರ್‍ಬಿಐ ವಿಚಾರದ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು. ಕಾನ್‍ಬೈಲ್ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಾಗಾರವನ್ನು ಸೇವಾ ಪ್ರತಿನಿಧಿ ಯಶೋಧ ಉದ್ಘಾಟಿಸಿ ಮಾತನಾಡಿ, ಇಡುವಳಿ ಯೋಜನೆಯನ್ನು ತಮ್ಮ ಅಭ್ಯುದಯಕ್ಕೆ ಕಾಲಕಾಲಕ್ಕೆ ಸದಸ್ಯರು ಸರಿಯಾಗಿ ತಮ್ಮ ಅಭ್ಯುದಯವನ್ನು ಬಳಸಿಕೊಳ್ಳಬಹುದಾಗಿದೆ. ಅಲ್ಲದೇ ಕುಟುಂಬದ ಬೆಳವಣಿಗೆಗೆ ಇದು ಸಹಕಾರಿಯಾಗಲಿದೆ ಎಂದರು. ಸಂಪೂರ್ಣ ಸುರಕ್ಷಾ ಯೋಜನೆಯು ಬಡವರಿಗಾಗಿ ಇದರಿಂದ ನೀವು ನಿಮ್ಮ ಕುಟುಂಬದ ಸದಸ್ಯರು ಯಾವುದೇ ರೀತಿಯ ಅನಾರೋಗ್ಯಗಳಿಗೆ ತುತ್ತಾದಲ್ಲಿ ನಿರ್ಭಿತಿ ಚಿಕಿತ್ಸೆ ಪಡೆದು ಗುಣಮುಖ ಹೊಂದಿಕೊಳ್ಳಲು ಜಾರಿಗೆ ತಂದಿದ್ದು ಪ್ರತಿಯೊಬ್ಬ ಸದಸ್ಯರು ಇದರ ಫಲಾನುಭವಿಗಳಾಗುವ ಮೂಲಕ ಸದುಪಯೋಗ ಹೊಂದಿಕೊಳ್ಳುವಂತೆ ಕರೆ ನೀಡಿದರು. ಹಣಕಾಸು ಹೂಡಿಕೆ ಮತ್ತು ಸಾಲಗಳನ್ನು ಪಡೆಯುವಾಗ ಆರ್‍ಬಿಐ ನಿಯಮಗಳ ಕುರಿತು ಮಾಹಿತಿಯನ್ನು ಸಂಘದ ಸದಸ್ಯರಿಗೆ…
ಮಡಿಕೇರಿ NEWS DESK ಫೆ.24 : ಲೀಡ್ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ವತಿಯಿಂದ ಸೋಮವಾರಪೇಟೆ ತಾಲ್ಲೂಕಿನ ಗರಗಂದೂರು ಗ್ರಾಮದಲ್ಲಿ ಮಹಿಳೆಯರಿಗಾಗಿ ಹಣಕಾಸು ಸಾಕ್ಷರತಾ ಸಪ್ತಾಹ ನಡೆಯಿತು. ಮಹಿಳೆಯರಿಗಾಗಿ ಇರುವ ಮಾಸಿಕ ಯೋಜನೆ ಹಾಗೂ ಉಳಿತಾಯದ ಕುರಿತು ವಿವರಿಸಲಾಯಿತು. ಬ್ಯಾಂಕ್ ಗಳಿಂದ ಸಾಲ ಪಡೆದವರು ನಿಗಧಿತ ದಿನಾಂಕದೊಳಗೆ ಕಂತನ್ನು ಪಾವತಿಸಿ ಕ್ರೆಡಿಟ್ ಸ್ಕೋರ್ ನ್ನು ಕಾಪಾಡಿಕೊಳ್ಳುವಂತೆ ಸಂಪನ್ಮೂಲ ವ್ಯಕ್ತಿಗಳು ಸಲಹೆ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗ್ರಾಮದ ಮುಖ್ಯಸ್ಥ ಶ್ರೀನಿವಾಸ್ ಅವರು ಬ್ಯಾಂಕ್ ನಲ್ಲಿ ಉತ್ತಮ ಕ್ರೆಡಿಟ್ ಸ್ಕೋರ್ ಇದ್ದರೆ ಸಾಲದ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬಹುದು. ಪ್ರತಿ ತಿಂಗಳು ಸಾಲದ ಇಎಂಐನ್ನು ಸರಿಯಾದ ದಿನಾಂಕದೊಳಗೆ ಮರುಪಾವತಿ ಮಾಡುವುದರಿಂದ ಬ್ಯಾಂಕ್ ವ್ಯವಹಾರ ಸುಲಭವಾಗಲಿದೆ ಎಂದರು. ಆರ್ಥಿಕ ಸಾಕ್ಷರತಾ ಸಮಾಲೋಚಕÀ ಹರೀಶ್ ಸಿ.ಜಿ ಮಾತನಾಡಿ ಭವಿಷ್ಯದ ಭದ್ರತೆಗೆ ಮಾಸಿಕ ಕನಿಷ್ಠ ರೂ.500ನ್ನಾದರೂ ಉಳಿತಾಯ ಮಾಡಿದರೆ ಮುಂದೆ ಅದು ದೊಡ್ಡದಾಗಿ ಬೆಳೆದು ನಿಮ್ಮ ಅಪತ್ಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ ಎಂದು ಸಲಹೆ ನೀಡಿದರು. ಮಾಸಿಕ ಬಜೆಟ್ ಕೂಡ ನಿಮ್ಮ…
ಮಡಿಕೇರಿ ಫೆ.24 : ಅಂತರರಾಷ್ಟ್ರೀಯ ಮಾತೃಭಾಷಾ ದಿನದ ಹಿನ್ನೆಲೆಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕೊಡವರ ಹತ್ಯಾಕಾಂಡ ನಡೆದ ವಿವಿಧ ದುರಂತ ಸ್ಥಳಗಳಲ್ಲಿ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಿತು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಮಾತನಾಡಿ ರಾಜಸೀಟ್ ನಲ್ಲಿ ಸಾವಿರಾರು ಕೊಡವರನ್ನು ಬರ್ಬರವಾಗಿ ಹತ್ಯೆಗೈದು ತಾಳತ್ತ್ಮನೆ ಕಡಿದಾದ ಕಂದಕಕ್ಕೆ ಕೆಳದಿ ರಾಜರು ತಳ್ಳಿದರು. ನಾಲ್ನಾಡ್ ಅರಮನೆ ಮತ್ತು ಮಡಿಕೇರಿ ಕೋಟೆಯಲ್ಲಿ ಅರಮನೆಯ ಪಿತೂರಿಯಲ್ಲಿ ಕೊಡವ ನಾಯಕರ ದಾರುಣ ಹತ್ಯೆಗಳು ನಡೆದವು. ದೇವಟ್‌ಪರಂಬ್ ನಲ್ಲಿ ಟಿಪ್ಪು ಸುಲ್ತಾನ್ ನ ಪಡೆಗಳು ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯ ಸೈನ್ಯದಳದೊಂದಿಗೆ ಸೇರಿಸಿಕೊಂಡು ಸಾವಿರಾರು ಕೊಡವರನ್ನು ಕಗ್ಗೊಲೆ ನಡೆಸಿದವು. ಈ ಸಂತ್ರಸ್ತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಸಿಎನ್‌ಸಿ ಪ್ರಾರ್ಥಿಸಿದೆ ಮತ್ತು ಗುರಿಗಳ ಸಾಧನೆಗೆ ದಿವ್ಯ ಆತ್ಮಗಳಿಂದ ಆಶೀರ್ವಾದವನ್ನು ಕೋರಲಾಗಿದೆ ಎಂದರು. ಡಾ.ಐ.ಎಂ.ಮುತ್ತಣ್ಣ ವಿರಚಿತ “ಟಿಪ್ಪು ಎಕ್ಸ್ ರೇಡ್”, ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ವಿರಚಿತ “ಚಿಕ್ಕವೀರರಾಜೇಂದ್ರ.”, ಡಾ.ವಿಕ್ರಮ್ ಸಂಪತ್ ವಿರಚಿತ “ಟಿಪ್ಪು ಸುಲ್ತಾನ್ ದಿ…
ಮಡಿಕೇರಿ ಫೆ.24 NEWS DESK : ನಾಡಿನ ಮೂಲ ಜನಪದ ಸಂಸ್ಕೃತಿ, ಆಚಾರ ವಿಚಾರ, ಪರಂಪರೆಗಳು ಸಮಾಜವನ್ನು ಕಟ್ಟುವುದರಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಇಂತಹ ಜಾನಪದ ಕಲೆಯ ಸತ್ಯವನ್ನು ಯುವ ಪೀಳಿಗೆ ಒಳಗಣ್ಣಿನ ಮೂಲಕ ಅರಿತುಕೊಂಡು ಮುಂದಿನ ಭವಿಷ್ಯವನ್ನು ರೂಪಿಸಬೇಕು ಎಂದು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವಪ್ರಸಾದ್ ಕರೆ ನೀಡಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿ, ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಕನ್ನಡ ವಿಭಾಗದ ಸಂಯುಕ್ತಾಶ್ರಯದಲ್ಲಿ ನಡೆದ ‘ಕೊಡಗು ಜಾನಪದ ಬೆಡಗು’ ಜಾನಪದ ನಡೆ ವಿದ್ಯಾರ್ಥಿಗಳ ಕಡೆ ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಕಾಲೇಜು ಸಭಾಂಗಣದಲ್ಲಿ ದುಡಿಯನ್ನು ನುಡಿಸಿ ಉದ್ಘಾಟಿಸಿ ಅವರು ಮಾತನಾಡಿದರು. ದಕ್ಷತೆ, ಪ್ರಾಮಾಣಿಕತೆ ಮತ್ತು ಸಮರ್ಪಣಾ ಭಾವಗಳಿಂದ ಪುಟ್ಟ ‘ಕೊಡಗು’ ಅತ್ಯಂತ ವಿಶೇಷವಾಗಿ ಕಾಣುತ್ತದೆ. ಅನುಮಾನಗಳೇ ತುಂಬಿರುವ ಸಮಾಜದಲ್ಲಿ ನೆಲ, ಜಲ, ಗಾಳಿ ವಿಷಯುಕ್ತವಾಗುತ್ತಿದೆ. ಅಭಿವೃದ್ಧಿ ಎನ್ನುವುದು ಎಂದಿಗೂ ಅವಸಾನಕ್ಕೆ ಕಾರಣವಾಗಬಾರದು. ಕಟ್ಟಲು ಸಾವಿರ ಕೈ…ಮುರಿಯಲು ಒಂದು ಕೈ ಸಾಕು’ ಎನ್ನುವ ನಾಣ್ನುಡಿಯಂತೆ ವಿದ್ಯಾರ್ಥಿಗಳು ಸಮಾಜವನ್ನು…
ಮಡಿಕೇರಿ ಫೆ.24 NEWS DESK : ಎನ್ಐಎಂಎ ಕೊಡಗು (ನೀಮಾ) ಇದರ 25ನೇ ವರ್ಷದ ಆಚರಣೆಯ ಸಲುವಾಗಿ ಮೇಕೇರಿ ಗ್ರಾಮದ ಶ್ರೀ ಸತ್ಯಸಾಯಿ ಮಂದಿರದಲ್ಲಿ ಉಚಿತ ಆಯುರ್ವೇದ ಹಾಗೂ ದಂತ ತಪಾಸಣಾ ಶಿಬಿರ ನಡೆಯಿತು. ಕೊಡಗು ಮಹಿಳಾ ಎನ್ಐಎಮ್ಎ ಘಟಕದ ಅಧ್ಯಕ್ಷೆ ಡಾ. ಶೈಲಜಾ ರಾಜೇಂದ್ರ, ಕಾರ್ಯದರ್ಶಿ ಡಾ.ಸೌಮ್ಯ ಗಣರಾಜ್, ಮಡಿಕೇರಿ ತಾಲೂಕು ಮುಖ್ಯಸ್ಥರಾದ ಡಾ.ಸಾವಿತ್ರಿ ರಾಜಗೋಪಾಲ್ ತಪಾಸಣೆಯನ್ನು ಉಚಿತವಾಗಿ ನಡೆಸಿಕೊಟ್ಟರು. ದಂತವೈದ್ಯೆ ಶಾಂಭವಿ ದಂತ ಚಿಕಿತ್ಸಾಲಯದ ವೈದ್ಯರಾದ ಡಾ.ಶ್ರೇಯಾ ರಾಜಗೋಪಾಲ್ ಭಾಗವಹಿಸಿದ್ದರು. ಶ್ರೀ ಸತ್ಯಸಾಯಿ ಮಂದಿರದ ಮುಖ್ಯಸ್ಥ ಗಜರಾಜ ನಾಯ್ಡು, ನೀಮಾ ಕೊಡಗು ಅಧ್ಯಕ್ಷ ಡಾ. ರಾಜಾರಾಮ್ ಉಪಸ್ಥಿತರಿದ್ದರು. ಮೇಕೇರಿ ಗ್ರಾಮಸ್ಥರು, ವಿದ್ಯಾರ್ಥಿಗಳು, ವತ೯ಕರು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
https://www.youtube.com/watch?v=14sM4vdK_tY&authuser=0 ಮಡಿಕೇರಿ ಫೆ.24 NEWS DESK : ಕರ್ನಾಟಕ ಸರಕಾರದ ಅಬಕಾರಿ ಇಲಾಖೆಯ ಉಪ ಆಯುಕ್ತರು ಹೊರಡಿಸಿರುವ ಸುತ್ತೊಲೆಯನ್ನು ಹಿಂಪಡೆದು ರಕ್ಷಣಾ ಮದ್ಯವನ್ನು ಶುಭ ಸಮಾರಂಭಗಳಲ್ಲಿ ಉಪಯೋಗಿಸಲು ಅನುವು ಮಾಡಿಕೊಡಬೇಕೆಂದು ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘ ಒತ್ತಾಯಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸೈನಿಕರ ಸಂಘದ ಕೊಡಗು ಜಿಲ್ಲಾ ಕಾರ್ಯದರ್ಶಿ ಓಡಿಯಂಡ ಚಿಂಗಪ್ಪ, ಜಿಲ್ಲೆಯಲ್ಲಿ ರಕ್ಷಣಾ ಮದ್ಯ, ಹೊರ ರಾಜ್ಯದ ಮದ್ಯ, ನಕಲಿ ಮತ್ತು ಅಕ್ರಮ ಸರಬರಾಜು ಆಗುತ್ತಿದೆ ಎಂಬ ಕಾರಣಕ್ಕೆ ಶುಭ ಸಮಾರಂಭಗಳಿಗೆ ಮದ್ಯ ಸರಬರಾಜು ಮಾಡಲು ಸನ್ನದು ಪಡೆಯುವುದು ಕಡ್ಡಾಯ ಎಂದು ಇಲಾಖೆ ಸುತ್ತೋಲೆ ಹೊರಡಿಸಿರುವುದು ಖಂಡನೀಯ ಎಂದರು. ಜಿಲ್ಲೆಯಲ್ಲಿ 8-10 ಸಾವಿರ ಮಾಜಿ ಸೈನಿಕರಿದ್ದಾರೆ, ಅವರಿಗೂ ಕುಟುಂಬಗಳಿವೆ. ತಮ್ಮ ಮಕ್ಕಳ ಶುಭ ಕಾರ್ಯಕ್ರಮಕ್ಕೆ ಮದ್ಯ ಸಂಗ್ರಹ ಮಾಡಿಕೊಳ್ಳುತ್ತಾರೆ. ಇದನ್ನು ಅಕ್ರಮ ಮದ್ಯ ಎಂದು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಜಿಲ್ಲೆಯ ವಿವಿಧೆಡೆ ಕಳ್ಳಭಟ್ಟಿ, ಅಕ್ರಮ ಮದ್ಯ ಸರಬರಾಜಾಗುತ್ತಿದೆ ಅದನ್ನು ಮೊದಲು ತಡೆಹಿಡಿಯುವ ಕೆಲಸ ಮಾಡಲಿ…






